April 19, 2010

ರಾಮಚಂದ್ರಾಪುರ ಮಠದ ಗೋ ಶಾಲೆ

ಇತ್ತೀಚೆಗೆ ತೀರ್ಥಹಳ್ಳಿಗೆ ಹೋದಾಗ ಹೊಸನಗರ ದಲ್ಲಿರುವ ರಾಮಚಂದ್ರಾಪುರ ಮಠಕ್ಕೆ ಹೋಗಿದ್ದೆವು. ಈ ಮಠದಲ್ಲಿ ಭಾರತೀಯ ಗೋ ತಳಿಗಳ ಸಂರಕ್ಷಣಾ ಕಾರ್ಯ ನಡೆಯುತ್ತಿದೆ. ಮಠದ ಆವರಣ ಉತ್ತಮ ನೀರಾಶ್ರಯ ಭೂಮಿಯನ್ನು ಒಳಗೊಂಡಿದ್ದು ಗೋವುಗಳಿಗೆ ಬೇಕಾದ ಹಸಿರು ಹುಲ್ಲು ಇಲ್ಲೇ ಬೆಳೆಯುತ್ತದೆ. ಕೊಟ್ಟಿಗೆ, ಹಟ್ಟಿಯನ್ನು clean ಆಗಿ ಇಡಲಾಗಿದ್ದು, ಅವುಗಳ ಗೋಡೆಗಳ ಮೇಲೆ ಮುದ್ದಾದ ಚಿತ್ತರಗಳನ್ನೂ ಬರೆದಿದ್ದಾರೆ. ಉತ್ತಮ ಹಾಗೂ ವಿಶಿಷ್ಟ ಗುಣದ ದೇಶಿಯ ತಳಿಗಳ ಗೋವುಗಳ ಸಂಗ್ರಹವನ್ನು ಇಲ್ಲಿ ನೋಡಬಹುದು. ಶ್ರೀ ರಾಘವೇಶ್ವರ ಸ್ವಾಮಿಗಳು ಕೈಗೊಂಡ ಕಾಯಕವು ಅತ್ಯಂತ ಶ್ಲಾಘನೀಯ. ದೇಶ ವಿದೇಶಗಳಿಂದ ಜನರು ಇಲ್ಲಿಗೆ ಭೇಟಿ ನೀಡಿ ತಮಗಾಗುವಷ್ಟು ಧನ ಸಹಾಯ ಕೂಡ ಮಾಡುತ್ತಾರೆ. ಹಿಂದಿ-ಇಂಗ್ಲೀಷ ಮಾತಾನಾಡುವ ಯುವಕರು ಅತ್ಯಂತ ಖುಶಿಯಿಂದ ಮಠದ ವಿವರವನ್ನು ಒದಗಿಸುತ್ತಾರೆ. ಸಾವಯವ ಪದ್ದತಿಯಲ್ಲಿ ಬೆಳೆಸಿದ ಅರಿಶಿನ ಪುಡಿ, ಕಶಾಯದ ಪುಡಿ, ಔಷಧೀಯ ಪುಡಿಗಳು, ಗೋಮೂತ್ರ, ಜೇನುತುಪ್ಪ , ಗಂಧದ ಕಡ್ಡಿ ಇಲ್ಲಿ ಲಭ್ಯ.
 ರೋಗ ಪೀಡಿತ / stray ಹಸುಗಳನ್ನೂ (ಕೆಲವಕ್ಕೆ ಬೆನ್ನಿನಿಂದ ಮೂರನೆ ಕಾಲು ಬಂದಿತ್ತು, ಕೆಲವಕ್ಕೆ ಕಾಲಿನ ಬುಡಕ್ಕೆ(foot)ಗೆ ಏನೋ ರೋಗ ಬಂದಿತ್ತು, ಕೆಲವು ಹಸುಗಳ ಕಣ್ಣಿನಿಂದ ಕೀವು ಒಸರುತ್ತಿತ್ತು, ಸುಮಾರು ಕಣ್ಣು ಕಾಣದೇ ಇರುವ ಹಸು ಕರುಗಳೂ ಇದ್ವು)ಇಲ್ಲಿ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ.
ಮಠದ ಆವರಣ ತುಂಬ ಸ್ವಚ್ಛವಾಗಿಡಲಾಗಿದೆ. ಭೇಟಿ ನೀಡಿದವರಿಗೆಲ್ಲ ಬಿಸಿ ಬಿಸಿ ಕಶಾಯ ನೀಡುತ್ತಾರೆ. ಅಲ್ಲಿ ತಂಗುವ ವ್ಯವಸ್ಥೆ ಕೂಡ ಇದೆ.
ಮಠದ / ಗೋ ಶಾಲೆಯ ಹೆಚ್ಚಿನ ಭಾಗವನ್ನು ಶ್ರೀಕಾಂತ್ video ದಲ್ಲಿ ಸೆರೆ ಹಿಡಿದಿದ್ದರಿಂದ, ಇಲ್ಲಿ ಕೆಲವೇ ಫೋಟೊಗಳನ್ನು ಹಾಕಿದ್ದೇನೆ.


Entrance

ಆಕಳು ಕರು.


ಹಿಂಬಾಗಿಲಿನಲ್ಲಿರುವ ಕಟ್ಟೆ. ಅದರಲ್ಲಿ ಪುಟ್ಟ ನಂದಿ .ನೆಲದ ಮೇಲೆ ಸುತ್ತಲೂ ತುಲಸಿ ಗಿಡಗಳು



gigantic
ಎಲ್ಲರೂ ತುಂಬಾ ಸಾಧುಸ್ವಭಾವದವರು, ನಮ್ಮೆಲ್ಲರಿಂದ ನೇವರಿಸಿಕೊಳ್ಳುವ ಆಸಕ್ತಿ. ನಾವೂ enjoy ಮಾಡಿದ್ವಿ. :-) ಗೋಡೆ ಮೇಲಿನ ಚಿತ್ತಾರ ಸ್ವಲ್ಪ ಕಾಣಿಸುತ್ತಿದೆ.

ಬರಗೂರು...ತಮಿಳುನಾಡಿನಿಂದ ಬಂದ ತಳಿ

ಇದರ ಕೊಂಬು ನನಗೆ ತುಂಬಾssssss ಇಷ್ಟ

ಕಾಂಗಯಂ ಜಾತಿಯ ತಳಿ. ಮಾಲು ನಿಹಾ ಏನಾದರು ತಂದಿದ್ದಾರಾ ಅಂತ ಕುತೂಹಲದಿಂದ ಅವರೆಲ್ಲ ಆ ಕಡೆ ತಿರುಗಿದಾಗ

ಇದರ coat ನ sheen ನನಗೆ ತುಂಬಾ ಇಷ್ಟವಾಯ್ತು. ಒಳ್ಳೆ ವೆಲ್ವೆಟ್ ತರಹ ಮೈ. ಕೊಂಬು ನೋಡಿ!!!!

ಮುದ್ದು ಮುದ್ದು.



Oh!! just look at him. Magnificant ಅಲ್ವಾ?

ಪತಿ - ಪತ್ನಿ ಔರ್ wow


ನನ್ನ ಶ್ರೀಕಾಂತ್ and ಗೋವು (ಸಿರಸಿ-ಸಿದ್ದಾಪುರದ (north kanara)ಕೊಂಕಣಿಯಲ್ಲಿ ಗಂಡನಿಗೆ ಗೋವ್ ಅಂತಲೂ ಸಂಭೋಧಿಸುತ್ತಾರೆ.)hehehe



ಸಮ್ರಾಟ್ another pose. ನಮಗೆ ಸೊಪ್ಪ್ ಹಾಕಲಿಲ್ಲ :-) 


ತಲೆಯ shape ನೋಡಿ!! unique ಆಗಿದೆಯಲ್ವಾ?


ಇದು ಸಮ್ರಾಟ್ ನನ್ನ favorite of the lot. ಮುಟ್ಟಲಿಕ್ಕೆ ಬಿಡುವುದಿಲ್ಲ. ಸಿಟ್ಟಿನ ಎತ್ತು.
(hey!! ಇದು ನನ್ನ 50 ನೇ ಪೋಸ್ಟ್. did not think i would manage it. ಥ್ಯಾಂಕ್ಸ್ to ’ಶ್ರೀಕಾಂತ್ &'ರಘು ಅಪಾರ' for their confidence in my ability to write in kannada)


:-)

April 12, 2010

ಮೀರ್ ಮುಖ್ತಿಯಾರ್ ಅಲಿ


ನಿನ್ನೆ ಸಂಜೆ ಎರಡು ಗಂಟೆಗಳ ಕಾಲ , ತಮ್ಮ ವಿಶಿಷ್ಟ ಸೂಫಿ ಸಂಗೀತದಿಂದ ನಮ್ಮನೆಲ್ಲ ರಂಜಿಸಿದರು,ಬಿಕಾನೇರ್ (ರಾಜಸ್ಥಾನ್) ಬಳಿಯ ಪುಟ್ಟ ಹಳ್ಳಿ ಪೂಗಲ್ ನಿಂದ ದೇಶ ವಿದೇಶಗಳಲ್ಲಿಯೂ ಅವರ ಹಾಡುಗಳಿಂದ ಪ್ರಖ್ಯಾತರಾದ ಮೀರ್ ಮುಖ್ತೀಯಾರ್ ಅಲಿ.
ಹರೀ..ಮೌಲಾ....ರಾಮ್...ರಹೀಮ್, ಅಲೀ...ಬಜರಂಗ್ ಬಲೀ....ಹೀಗೆ ಸಾಗಿತ್ತು ಅವರ ಹಾಡಿನ ಪ್ರಯಾಣ. ಸಂಗೀತಕ್ಕೆ ಯಾವುದೇ ಅಡೆತಡೆಗಳಿಲ್ಲ ಅಲ್ಲವೇ? music is so divine

ಚಿತ್ರಕಲಾ ಪರಿಷದ್ ನ ಬಯಲು ಉದ್ಯಾನದಲ್ಲಿ ನಡೆದ ಈ ಸಂಗೀತ ಮಂಜರಿ ಕಾರ್ಯಕ್ರಮದಲ್ಲಿ, ಕೇಳುಗರು ಅಲಿಯವರ ಹಾಡು, ಸಾರಂಗಿ, ತಬಲಾ, ಢೋಲಕ್, ಹಾರ್ಮೋನಿಯಮ್ ನ ಸಾಥ್ ಗೆ ತಲೆ ದೂಗಿಸುತ್ತ ಇದ್ದರೆ, ಅಲ್ಲಿನ ಮರಗಿಡಗಳು ಇನಿತೂ ಅಲ್ಲಾಡದೇ ಸಂಗೀತವನ್ನು ಕೇಳುತ್ತಿದ್ದವು. ವೆಂಡರ್ ಕಣ್ಣು ಪುಸ್ತಕದ ಬರಹಗಾರರು-ವಿಶ್ವ ವಿಖ್ಯಾತ ಛಾಯಾಗ್ರಾಹಕರು ಕೆ. ಶಿವು ಬಂಡೆಯ ಮೇಲೆ ಕೆಳಗೆ ಚುರುಕಾಗಿ ಓಡಾಡುತ್ತ ’perfect moment' ನ ಫೋಟೋ ಕ್ಲಿಕ್ಕಿಸುವುದನ್ನು ನೋಡುವುದೂ ಕೂಡ ಒಂದು ವಿಶೇಷವಾಗಿತ್ತು.

ಸಂತ ಕಬೀರ್ ದಾಸರ ’ಜಬ್ ಮೈ ಥಾ ತಬ್ ಹರಿ ನಹಿ ,ಅಬ್ ಹರೀ ಹೈ ಮೈ ನಹೀಂ...ಸಬ್ ಅಂಧಿಯಾರಾ ಮಿಠ ಗಯಾ ಜಬ್ ದೀಪಕ್ ದೇಖಿಯಾ ಮಹೀಂ(here mein- me, refers to our ego)ಅದರ ಅರ್ಥವನ್ನು ಹಾಡಿನ ಮಧ್ಯ ವಿವರಿಸುತ್ತ ಅವರ ವಿಶಿಷ್ಟ ಶೈಲಿಯಲ್ಲಿ ಹಾಡುತ್ತಲಿದ್ದರೆ, ನಮಗೆ ಸಮಯದ ಪರಿವೇ ಆಗಲಿಲ್ಲ. ಮೇರೆ ಪಿಯಾ ಘರ್ ಆಯೆ ಓ ಲಾಲನಿ ಹಾಡುವಾಗ ಕೇಳುಗರೂ ಅವರೊಂದಿಗೆ ಚಪ್ಪಾಳೆ ತಟ್ಟುತ್ತ ದನಿ ಮೇಳೈಸಿದರು.
ಚದರಿಯಾ ಝಿನಿ ರೆ ಝಿನಿ, ಹೈ ರಾಮ ರಸ ಭಿನಿ....ಮನುಷ್ಯ ಜೀವನವನ್ನು ಬಟ್ಟೆಗೆ ಹೋಲಿಸುತ್ತ,ಹತ್ತಿಯು, ಬೀಜ ದಿಂದ ದರ್ಜಿಯವರೆಗಿನ ತನಕ ಕೈಗೊಂಡ ಪ್ರವಾಸದ ಕತೆ ಹೇಳುತ್ತ ಹಾಡಿದ ಜೈಪುರಿ ಭಾಷೆಯ ಹಾಡು ನನಗೆ ತುಂಬಾ ಇಷ್ಟ ಆಯ್ತು. ಒಂದು ತುಂಬಾ ಚೆನ್ನಾದ ಪಂಜಾಬಿ ಹಾಡಿತ್ತು. ಅದರ lyrics ಮರೆತು ಹೋಗಿದೆ. ಅದರ ಅರ್ಥ ಹೀಗಿದೆ. ಒಂದು ಸಲ ವೃಕ್ಷಕ್ಕೆ  ಬೆಂಕಿ ಬೀಳುತ್ತೆ. ಆದರೆ ಆ ವೃಕ್ಷದಲ್ಲಿ ಗೂಡು ಕಟ್ಟಿ ವಾಸಿಸುವ ಪಕ್ಷಿಗಳು ಹಾರಿ ಹೋಗದೇ ಮರದಲ್ಲೆ ಉಳಿಯುತ್ತವೆ. ಮರ ಕೇಳುತ್ತೆ..ನನಗಾದರೆ ನನ್ನ ಬೇರುಗಳು ನೆಲದಲ್ಲಿ ಸೇರಿಕೊಂಡಿವೆ, ಆದರೆ ನೀನು ರೆಕ್ಕೆಗಳ ಸಹಾಯದಿಂದ ಹಾರಿ, safe ಜಾಗಕ್ಕೆ ಹೋಗಬಹುದಲ್ಲವಾ?? ಅದಕ್ಕೆ ಪಕ್ಷಿ ಹೇಳುತ್ತೆ, ’ಮೊಟ್ಟೆಯಿಂದ ಮರಿಯಾಗುವ ತನಕ ನನಗೆ ರಕ್ಷಣೆ ಕೊಟ್ಟಿದ್ದಿಯಾ, ನಿನ್ನ ಫಲ ಪುಷ್ಪಗಳಿಂದ ನನಗೆ ಆಹಾರ ಒದಗಿಸಿದ್ದೀಯಾ, ಈಗ ಆಪತ್ಕಾಲದಲ್ಲಿ ನಿನ್ನನ್ನು ಬಿಟ್ಟು ಹೋಗುವುದು ನನ್ನ ಧರ್ಮವಲ್ಲ’...ಈ ಹಾಡು ತುಂಬ racyಯಾಗಿತ್ತು.
ಹಿಂದಿನ ಸಲ ಅವರ ಕಾರ್ಯಕ್ರಮ miss ಮಾಡಿದ್ದೆ. ಈ ಸಲ iam glad i could attend. ಈ ಅನುಭವ ವರ್ಣಿಸಲಸಾಧ್ಯ. ಕೇಳೆತೀರಬೇಕು.
ವಾರ್ತಾ ಇಲಾಖೆ ಹಾಗೂ ಚಿತ್ರಕಲಾ ಪರಿಷದ್ ಜಂಟಿ ಯಾಗಿ ಈ ಕಾರ್ಯಕ್ರಮವನ್ನು, ನಿನ್ನೆ ದಿನಾಂಕ 10.04.2010 ರಂದು ಆಯೋಜಿಸಿತ್ತು
:-)

April 6, 2010

ಛಂದ ಪುಸ್ತಕ ಮುಖಪುಟ ಸ್ಪರ್ಧೆ

Chandha Pusthaka had organised a cover page contest (December 2009)for Radhesh Tolpadi's book of Childrens Poem titled 'Hello Hello Chandamama'. among 130 entries 30 were shortlisted. Niharika's was one of them. Thought will add it to my blog. of course i have her permission to do so.
:-)
http://raghuapara.blogspot.com/2010/01/blog-post_10.html

Below are two other attempts she made. Did not send them though, for at the time we were travelling and it was in home PC. first  one i scanned, other was an unfinished attempt in the netbook. The shortlisted coverpage was done in 10 minutes flat  :-)

March 19, 2010

Bangalore is HOT

Bangalore is HOT.

Not hot as in 'hot and happening' what with the cricket season going on,  but hot as in summer, ಬಿಸಿಲು, ಸೆಕೆ, ಬೆವರು, whatever.
this is how i keep my cool.

drinking / eating loads of watermelon, ಸೌತೆಕಾಯಿ, muskmelon (ಮೇಲಿನ ಮನೆ ಪಾಪು ಅದನ್ನು ಕರ್ಬೂಜ ಅಂತ ಹೇಳಿ ಕೊಟ್ಟ.) thanks to him. and last but not the least. Kokum/cocum (ಪುನರ್ಪುಳಿ).-If you know it by any other name please share with me.Cocum is always on my menu both lunch and dinner.
 here is a glass of watermelon juice for you
Water melon sliced- seeds removed, squeeze a lemon, add some sugar, run in a blender and juice is ತಯ್ಯಾರ್. if needed refrigerate. i dont.



Cocum Juice
just add dried rind (ಸಿಪ್ಪೆ) of cocum fruits about 5 to a big glass of water. the water turns pink. after half an hour strain the juice add sugar/jaggery (ಬೆಲ್ಲ) and cocum juice is ರೆಡ್ಡಿ. Dont forget to add a pinch of salt for that superb tangy taste.



Musk melon juice ಕೂಡ ಮಾಡಬಹುದು. ಹಾಲು ಸೇರಿಸಿ milk shake ಮಾಡಬಹುದು. add cardamom if needed. sorry no Photo available. ಯಾಕಂದ್ರೆ ನಾನು ಇಲ್ಲಿ (post)ಬರೆಯುವಷ್ಟರಲ್ಲಿ ಮಸ್ಕ್ ಮೆಲೊನ್ ಮಿಲ್ಕ್ ಶೇಕ್ ಖಾಲಿ.
but ಬೇಜಾರು ಮಾಡ್ಕೊಳ್ಳೋದು ಬೇಡ ಅಂತ ಈ ಚಿತ್ರವನ್ನು wikipedia ದಿಂದ ಹಾರಿಸಿದ್ದೇನೆ.

:-) enjoy

March 12, 2010

ಚಿತ್ರಸಂತೆ- ಲೇಟ್ ಆಗಿ ನಂದೂ ಒಂದು

ಕಳೆದ ಏಳು ವರ್ಷದಂತೆಯೇ ಈ ವರ್ಷವೂ, ಜನವರಿ 31, 2010 ರಂದು ಚಿತ್ರಸಂತೆ ನಡೆಯಿತು. ಸ್ಥಳ:ಕರ್ನಾಟಕ ಚಿತ್ರಕಲಾ ಪರಿಷತ್ತು , ಸಮಯ ಬೆಳಿಗ್ಗೆ 9.00 ರಿಂದ ಸಂಜೆ 7.00 ಗಂಟೆತನಕ. ರಾಜ್ಯದ ವಿವಿಧೆಡೆಯಿಂದ ಸುಮಾರು 1500 ಕ್ಕಿಂತ (this info i got from newspaper :-))ಹೆಚ್ಚು ಕಲಾವಿದರು ತಮ್ಮ ಚಿತ್ರಕಲೆಯ ಪ್ರದರ್ಶನ ಹಾಗೂ ಮಾರಾಟ ನಡಿಸಿದರು. ಚಿತ್ರಸಂತೆಯಂದ್ರೆ ಥೇಟ್ ಸಂತೆನೇ. ನಾವು 10.30 ಗೆ ತಲುಪಿದಾಗ ಆಗಲೇ ಗಿಜಿಗುಡುವ ಜನ.

spot ನಲ್ಲೇ ಚಿತ್ರ ಬರೆಯುವವರು, ವ್ಯಂಗ್ಯಚಿತ್ರ ಕಲಾವಿದರ ಬಳಿಯಂತು ನೂಕುನುಗ್ಗಲು. ಯಾವುದೋ ಫೈಲ್ ಹುಡುಕ್ತಾ ಇದ್ದಾಗ , ನನಗೆ ಇಷ್ಟವಾದ ಕೆಲವು ಫೊಟೊ ನಾನು cell phone ನಲ್ಲಿ ತಗೆದಿದ್ದು ಸಿಕ್ಕಿದೆ... ಇಲ್ಲಿ ಹಾಕಿದ್ದೇನೆ. ಗೊತ್ತು, ಹಲವಾರು ಜನರು ಇದರ ಬಗ್ಗೆ ಬ್ಲಾಗಿಸಿದ್ದಾರೆ. ಆದರು ನನ್ನದೂ ಒಂದು ಇರಲಿಯಲ್ಲವಾ?

ಕುಮಾರಕೃಪಾ ರಸ್ತೆಯುದ್ದಕ್ಕೂ-ಸಿಗ್ನಲ್ ನಿಂದ ಪ್ರಾರಂಭವಾಗಿ ಆಚೆ -ಹೊಟಲ್ ಲಲಿತ್ ಅಶೋಕ್ ದಾಟಿ ಇನ್ನೂ ಮುಂದೆ... ಕಲಾಕೃತಿಗಳ ಪ್ರದರ್ಶನ.ಎತ್ತ ನೋಡಿದ್ರೂ ಬಣ್ಣವೇ ಬಣ್ಣ. ಒಂದಕ್ಕಿಂತ್ ಒಂದು ಚಂದ. ಅಂದ ಚಂದದ ಈ ಕಲಾಕೃತಿಗಳನ್ನು ನೋಡಿ ಮೇರೆ ತೊ ಹೋಶ್ ಉಡ್ ಗಯೆ. ಮಧ್ಯಾನ್ಹ್ ಬಿಸಿಲಿಗೆ ಸ್ವಲ್ಪ ಕಿರಿಕಿರಿಯಾಯ್ತು. ಅದಲ್ಲದೇ camlin ನವರು stationery item/art/painting ಮಾಡಲು ಬೇಕಾದ ಬ್ರಶ್, ಕಲರ್ಸ್, ಪೇಪರ್/handmade paper /ಬೇರೆ ಬೇರೆಗ್ರೇಡ್ ನ ಪೆನ್ಸಿಲ್ ಮುಂತಾದವುಗಳನ್ನು ಕಡಿಮೆ ಬೆಲೆಗೆ ಮಾರುತ್ತಾ ಇದ್ದರು. ನಮ್ಮ ಮನೆಯಲ್ಲೆ ಮೂರು ಕಲಾವಿದರಿದ್ದಾರೆ, ನನ್ನೊಬ್ಬಳನ್ನು ಬಿಟ್ಟು. ಸುಮಾರು art paraphernelia ತಗೊಂಡ್ರಪ್ಪ. ಈ ವರ್ಷ handicrafts ನ stall ಗಳೂ ಇದ್ದವು.

ಚಿತ್ರಕಲಾ ಪರಿಷದ್ ನ entrance ನಲ್ಲಿದ್ದ ದೊಡ್ಡದಾದ, ಧೂಳೆಬ್ಬಿಸುವ ಆನೆಯ ಚಿತ್ರವಂತು ಸಖತ್ ಆಗಿತ್ತು. ಚಿತ್ರ ತೆಗೆಯಲು ಮೊಬೈಲ್ ತೆಗೆದದ್ದೆ, ಯಾರೋ ನೂಕಿದಂತಾಗಿ, ಮೊಬೈಲ್ ಬಿದ್ದು , ಅದರ parts- ಗಳನ್ನು ಮಕ್ಕಳು ಹುಡುಕಿ ಅದನ್ನು ಪುನ: assemble ಮಾಡುವಷ್ಟರಲ್ಲಿ, ಆ ಫೋಟೊ ತೆಗೆಯುವ ಮೂಡ್ ಹೋಗೇ ಬೆಡ್ತು. :-) ಅದು ಒಂದು ಲಕ್ಷಕ್ಕೆ ಆಗಲೇ ಯಾರೋ ಕೊಂಡು ಆಗಿತ್ತು. ಹಾಗಾಗಿ cell phone ಬೀಳುವ ತನಕ ತೆಗೆದ ಚಿತ್ರಗಳು ಇಲ್ಲಿವೆ.

ವ್ಯಂಗ್ಯಚಿತ್ರ ಕಲಾವಿದರಿಂದ ಮಾಲವಿಕ, ನಿಹಾರಿಕ ಹಾಗು ಥಾನಿಶ್ (ಫೋಟೊದಲ್ಲಿರುವ ಪುಟ್ಟ) ರ ಚಿತ್ರಗಳನ್ನು ಸ್ಥಳದಲ್ಲೇ ಬರೆಸಿ ಕೊಂಡೆವು. ಎರಡು ಐಸ್ ಕ್ರೀಮ್ ತಿಂದು ಊಟಕ್ಕೆ ಹೊರಡುವಾಗ ಆಗಲೇ ನಾಲ್ಕು ಗಂಟೆ, ಎಲ್ಲ ಕಡೆ ಊಟ ಕ್ಲೋಸ್....ಅಲ್ಲೇ ಯವುದೋ ಹೋಟಲ್ (ಹೆಸರು ಮರೆತು ಹೋಯ್ತು)ನಲ್ಲಿ ರಾಗಿ ದೋಸೆ ತಿಂದ್ವಿ. :-)

ಈಗ ಚಿತ್ರಗಳನ್ನು ನೋಡಿ....ನಂತರ ಸುಶ್ರುತರ ಬ್ಲಾಗ್ http://hisushrutha.blogspot.com/2010/02/blog-post.html
 ಗೆ ಭೇಟಿ ನೀಡಿ ಚಿತ್ರಸಂತೆ ಪದ್ಯ ಓದಿ. ಚೆನ್ನಾಗಿದೆ.
:-)



March 5, 2010

ನಮ್ಮೂರು part -2

ಅಡಿಕೆ ಕೊಯ್ಲಿನ ಕೆಲವೇ ದೃಶ್ಯ

ಗೊನೆ ಕೊಯ್ಯಲು ಮೇಲೆ ಹತ್ತುತ್ತಿರುವುದು :-)



ಅಡಿಕೆ ಸುಲಿಯುವುದು



ಕತ್ತರಿಸಿ ಹಾಕಿದ ಅಡಿಕೆ ಗೊನೆ



ಗೋಣಿಚೀಲಕ್ಕೆ ತುಂಬಿಸುತ್ತಿರುವುದು




ಮುಗಿಲೆತ್ತರ. ಕತ್ತು ಮೇಲೆತ್ತಿ ನೋಡಿ



so majestic


ಕೊಳ

 ನನ್ನ ತೋಟದ ಸಿಂಹಾಸನದ ಮೇಲೆ ನಾನೇ ರಾಣಿ (cell phone pic) :-)


another pond


ಹೇಗಿದೆ ಈ ಮನೆ?



ನಾಗಬನ



ನಮ್ಮ ತೋಟ, ನಾನು flanked by ನಿಹಾರಿಕಾ , ಮಾಲವಿಕ




ಬತ್ತದ ಗದ್ದೆ



ಕೆಂಪು ಹರಿವೆ ಸೊಪ್ಪು. ಸಾಸಿವೆ ಎಷ್ಟು ರುಚಿಯಾಗಿರುತ್ತೆ ಗೊತ್ತಾ?

Posted by Picasaa view of our ತೋಟ. bamboo - ಬಿದಿರು ಮೇಳ