Showing posts with label thesis. Show all posts
Showing posts with label thesis. Show all posts

June 21, 2010

ಹರಿವೆ ಸೊಪ್ಪಿನ ಸಾಸಿವೆ


ಮೊದಲಿಗೆ ಹೇಳಿ ಬಿಡ್ತೇನೆ. ಇದು recipe ನೂ ಅಲ್ಲ,ಹರಿವೆ ಸೊಪ್ಪಿನ ಮೇಲೆ ಬರೆದ ಥೀಸಿಸ್ ನೂ ಅಲ್ಲ

ಥೀಸಿಸ್ ಅಂದಾಗ ನೆನಪಾಯ್ತು. ಶ್ರೀಕಾಂತ್ MSc. ಆಗ್ರಿ ಯಲ್ಲಿದ್ದಾಗ ಕೆಂಪು ಹರಿವೆ ಸೊಪ್ಪಿನ (amaranthus)ಮೇಲೆ ಥೀಸಿಸ್ ಬರೆದಿದ್ರು. thesis submit ಮಾಡುವ ದಿನ ಪುಸ್ತಕ ಹುಡುಕಿದಾಗ, ಎಲ್ಲಿದೇ ಪುಸ್ತಕ? ಅವರ ಆತ್ಮೀಯ ಸ್ನೇಹಿತರ doberman ನಾಯಿ ’ಪೊಲ್ಲಿ”ಅದನ್ನು ಚಿಂದಿ ಚಿಂದಿ ಮಾಡಿ ಹಾಕಿತ್ತು. ಆದದ್ದು ಇಷ್ಟು. ಅವರ ಮನೆಗೆ ನೆಂಟರು ಬಂದಿದ್ದರು. ನೆಂಟರ ಪುಟ್ಟ ಮಗುವಿಗೆ ನಾಯಿ ಕಂಡರೆ ಹೆದರಿಕೆ. ಅದಕ್ಕೆ ಪೊಲ್ಲಿಯನ್ನು ರೂಮ ನಲ್ಲಿ ಕೂಡಿ ಹಾಕಿದ್ದರು. ಮನೆಯಿಡೀ freeಯಾಗಿ ಅಡ್ಡಾಡುವ ಪೊಲ್ಲಿ ಗೆ ಸಿಟ್ಟು ಬಂದು ಅದು ಶ್ರೀಕಾಂತ್ ಬರೆದ ಥೇಸಿಸ್ ಅನ್ನು ಹರಿದು ಹಾಕುವ ಮೂಲಕ ತೋರಿಸಿತ್ತು. ಶ್ರೀಕಾಂತ್ ಮಿತ್ರರ ಜತೆ ಒಂದೆರಡು ತಿಂಗಳು ಮಾತು ಆಡಲಿಲ್ಲವಂತೆ. :-) ಅದು ಇನ್ನೊಂದು episode.
***************
ಮಕ್ಕಳು ಊರಿಗೆ ಅವರ ಅಜ್ಜ-ಅಜ್ಜಿ-ಮಾಮನ ಜತೆ ಇರಲು ಒಂದು ವಾರದ ಮಟ್ಟಿಗೆ ಹೋಗಿದ್ದಾರೆ. ನೀಹಾ ಇದ್ದರೆ ಸಂಜೆ ನನಗೆ ಕಡ್ಡಾಯ walking. ನಿನ್ನೆ ಸಂಜೆ ಹೇಗೂ ನೀಹಾ ಇಲ್ಲ, ಮತ್ತು ಶ್ರೀಕಾಂತ್, ಕಂಪ್ಯೂಟರ್ ನಲ್ಲಿ ಯಾವುದೋ ಗಹನವಾದ ಕೆಲಸದಲ್ಲಿ ತೊಡಗಿದ್ರು. ನಾನು ಯಾರದೂ ತಂಟೆ ಇಲ್ಲದೇ ಒಂದು ಪ್ಲೇಟ್ ನಲ್ಲಿ ಹುರಿದ ಕಡ್ಲೇ ಬೀಜ ಇಟ್ಟುಕೊಂಡು, ಹೆಬ್ಬಾವಿನ ತರಹ ಮಲಕ್ಕೊಂಡು agatha Christie ಯ cards on the table ಓದ್ತಾ, ಕಡ್ಲೇ ಬೀಜ ಕಬಳಿಸುತ್ತ, hercule Poirot (the distinguishing feature of hercule poirot are his moustache and his egg shaped face)ಎಂಬ ಪತ್ತೆದಾರ ಇನ್ನೊಬ್ಬನ ಮೀಸೆ ಬಗ್ಗೆ ಹೊಟ್ಟೆಕಿಚ್ಚು ಪಡ್ತಿರಬೇಕಾದ್ರೆ...’ಮಾಲ್ತೀ’ ಅಂತ ಕರೆದ ಹಾಗೆ ಅನ್ನಿಸ್ತು. ಮತ್ತೆ ಛೆ ಇರಲಿಕಿಲ್ಲ ಅಂತ ಸುಮ್ಮನಾದೇ. ಅಷ್ಟರಲ್ಲೇ ಶ್ರೀಕಾಂತ್ ಸ್ವಲ್ಪ ಜೋರಾಗಿ ’ಮಾಲ್ತೀ, ’what happened to your walk?'ಅಂತ ಕೇಳಿದ್ರು. ಸ್ವಲ್ಪ ಹೊತ್ತು ನಾನು ಸುಮ್ಮನಿದ್ದೆ.ಇದೇನಪ್ಪ ಅಂತ??

ಕಿತಾಪತಿ ನೀಹಾ, ಅಪ್ಪನಿಗೆ sms ಮಾಡಿದ್ದಳು ’tell maman to go for her walk' ಅಂತ. ಅವಳನ್ನ ಮನಸ್ಸಲ್ಲೆ ಬೈದುಕೊಳ್ಳುತ್ತ:

’ಆಗಲೇ ವಾಕ್ ಹೋಗಿ ಬಂದೆ’ ಅಂದೆ.

ಎಲ್ಲಿ ಯಾವಾಗ?/

ಮನೆ ಹಿಂದಗಡೆ, ತೆಂಗಿನ ಕಾಯಿ ತರಲು. ಐದು ತೆಂಗಿನಕಾಯಿ

ಐದರ ಮೇಲೆ ಸ್ವಲ್ಪ ಹೆಚ್ಚೇ ಒತ್ತು ಹಾಕಿದೆ. ಐದಲ್ಲ , ಮಹಾ 50 ಕೆಜಿ ತರಹ.

ಹತ್ತು ಹೆಜ್ಜೆ ಹೋಗಿದ್ದು walkಆ? ಏಳೇ ಸೋಂಬೇರಿ. ಇಬ್ಬರೂ ದೊಡ್ಡ walk ಹೋಗಿ ಬರುವಾ ಅಂತ ಶ್ರೀಕಾಂತ್ ಕರೆದಾಗ ಏನೇನೆಲ್ಲ ಸಬೂಬು ಹೇಳ್ದೆ. ಜಿಲೇಬಿ ಕೊಡಿಸ್ತೇನೆ ಅಂದಾಗ ನನ್ನ ಕಿವಿ ನೆಟ್ಟಗಾಗಿ, ಪುನಃ confirm ಮಾಡ್ಕೊಂಡು...ರೆಡಿಯಾದೆ.

ಶಂಕರಮಠ cross ಬಳಿ, ಶಂಕರಮಠದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದ ಬಗ್ಗೆ ಪೋಸ್ಟರ್ ಒಂದನ್ನು ಅಂಟಿಸಿದ್ದರು. ಅದನ್ನು ಓದ್ತಾ ಶ್ರೀಕಾಂತ್ ಹತ್ತಿರ ಮಾತಾಡ್ತಾ ಇದ್ದೆ. ಎನೂ ಉತ್ತರ ಬಾರದಿದ್ದು ಪಕ್ಕದಲ್ಲಿ ತಿರುಗಿ ನೋಡಿದ್ರೆ..ಶ್ರೀಕಾಂತ್ ಎಲ್ಲಿ??ಗಾಯಬ್. ಆವಾಗಲೇ ಸಿಗ್ನಲ್ ದಾಟಿ ರಸ್ತೆ ಆಚೆ ಬದಿಗೆ ನಿಂತು ನನ್ನ ಬರುವಿಕೆಗೆ ಕಾಯ್ತಾ ಇದ್ದರು. ಸರಿ ಅಷ್ಟರಲ್ಲಿ ಪುನ: ಸಿಗ್ನಲ್ ಕೆಂಪಾಗಿದ್ದರಿಂದ, ನಾನು ಆ ಕಡೆ ಕ್ರಾಸ್ ಮಾಡಲು ಕಾಯ್ತಾ ಇದ್ದೆ. ಯಾರೋ ಗಟ್ಟಿಯಾಗಿ ಕೈ ಹಿಡಿದ್ರು. ನೋಡಿದ್ರೆ ಪುಟ್ಟ ಹೆಂಗಸು. ಪುಟ್ಟ ಹೆಂಗಸು ಯಾಕಂದ್ರೆ, ವಯಸ್ಸು 15-16 ದಾಟಿರಲಿಕ್ಕಿಲ್ಲ. ಮುಖ ಎಳಸಾಗಿತ್ತು, ಮದುವೆ ಯಾಗಿತ್ತು. ಕಾಲಿಗೆ ಸುತ್ತುಂಗುರ, ಎರಡು ಕೈಗಳಿಗೆ ಧಾರಾಳವಾದ ಹಸಿರು ಬಳೆ, ಎಡ ಕೈ ಬಳೆ ಎಡೆಯಿಂದ ಕಾಣಿಸಿದ ಹಚ್ಚೆ (tattoo), ಹಾಗೂ ಹಸಿರು ಸೀರೆಯುಟ್ಟು ಸೆರಗನ್ನು ತಲೆ ಮೇಲೆ ಎಳಕೊಂಡಿದ್ದಳು. ನಾನು ಅವಳನ್ನು study ಮಾಡ್ತಾ ಇದ್ರೆ, ಅವಳಿಗೆ ನನ್ನ ಕೈ ಹಿಡಿದಿದ್ದರ ಪರಿವೆಯೇ ಇರಲಿಲ್ಲ.pedestrian crossing ಸಿಗ್ನಲ್ ಆದ ನಂತರ ಇಬ್ಬರೂ ಆಚೆ ರಸ್ತೆ ತಲುಪಿದ್ವಿ. ’ಈಗ ನನ್ನ ಕೈ ಬಿಡಬಹುದು’ ಅಂದೆ, ಪಕ್ಕನೇ ನಾಚಿ ನನ್ನ ಕಡೇ ನೋಡಿದಾಗ, ಇಬ್ಬರೂ ವಿನಿಮಯ ಮಾಡಿಕೊಂಡ ಮುಗುಳ್ನಗು ಎಷ್ಟೊಂದು ಆತ್ಮೀಯತೆಯಿಂದ ಕೂಡಿತ್ತೆಂದರೆ ನನಗೆ ಆ ಕ್ಷಣ ಒಂದು ವಿಶೇಷವಾದ ದಿವ್ಯಾನುಭೂತಿಯಲ್ಲಿ ಮಿಂದಂತಾಯಿತು.

ಶ್ರೀಕಾಂತ್ ನ ಕೂಡಿ ನಗುತ್ತ ಮುಂದುವರೆಯುತ್ತಿದ್ದ ಹಾಗೆ ನಾನು ಗಕ್ಕಂತ್ ಪುನ: brake ಹಾಕಿ ನಿಲ್ಲ ಬೇಕಾಯಿತು, ಇಲ್ಲದಿದ್ದರೆ ನನ್ನ ಎದುರಿಗೆ ನಿಂತ ದಢೂತಿ ಮಹಿಳೆಗೆ ಡಿಕ್ಕಿ ಹೋಡಿತಿದ್ದೆ. ಪ್ರಶ್ನಾರ್ಥಕವಾಗಿ ಅವಳ ಕಡೆ ನೋಡಿದಾಗ, ’ಅಕ್ಕ, ಸೊಪ್ಪು ತಗಳ್ಳಿ’ ಅಂತ , ಅವಳ ಕೈಯಲ್ಲಿರೋ ಎರಡು ದೊಡ್ಡ ಚೀಲಗಳನ್ನು ನನ್ನ ಮುಂದೆ ಹಿಡಿದ್ಲು. ಇವಳಿಗೇನಪ್ಪ ನಾನು ಸೊಪ್ಪು ತಿನ್ನದೇ ನನ್ನಲ್ಲಿ ಏನಾದರೂ deficiency ಕಂಡಿತಾ?? ಅಂತ ಮನಸ್ಸಲ್ಲೆ ಅಂದು ಕೊಂಡು , ಬೇಡಮ್ಮ ಅಂದು ಬಿಟ್ಟು ಮುಂದೆ ನಮ್ಮ ವಾಕ್ ನ್ನು ಮುಂದುವರಿಸಿದೆವು. ರಾಜಾಜಿನಗರ ಒಂದನೇ ಬ್ಲಾಕ್ ನಲ್ಲಿ ಶ್ರೀ ಗಜಾನನ ಕಾಂಡಿಮೆಂಟ್ಸ್ ಹತ್ತಿರ ತಲುಪಿದಾಗ ಸಾರಿನ ಪುಡಿ ಖರ್ಚಾದುದರ ನೆನಪು ಬಂತು. ಅಲ್ಲಿ ಸಾರಿನ ಪುಡಿ ಖರೀದಿ ಮಾಡಿ,(ನನ್ನ famous ಸಾರಿನ secret) round about ದಾರಿಯಲ್ಲಿ ಪುನ:ಮನೆ ಕಡೆ ಹೊರಟ್ವಿ. aishwarya bakery ಬಳಿ ಬಂದಾಗ , ’ಬಾ, ಜಿಲೇಬಿ ತಗೊಳುವಾ’ ಅಂದ್ರು. ನನಗ್ಯಾಕೋ ಬೇಡ ಅನ್ನಿಸ್ತು.

ಇನ್ನೊಂದು ಕಡೆ ರಸ್ತೆ ಕ್ರಾಸ್ ಮಾಡಬೇಕಿತ್ತು. ಪುನ: ಯಾರೋ ನನ್ನ ಬಳಿ ಬಂದು ’ಅಕ್ಕ, ಸೊಪ್ಪು" ಅಂತ ಕೇಳಿಸ್ತು. ಅರೇ!! ನೋಡಿದ್ರೆ ಪುನ: ಅದೇ ಸೊಪ್ಪು ಮಾರುವ ಹೆಂಗಸು. ನಾನು ಗಟ್ಟಿಯಾಗಿ ನಕ್ಕಿದ್ದನ್ನು ನೋಡಿ, ’ಗೊತ್ತಾಗ್ ಲಿಲ್ಲ ಅಕ್ಕ, ಆವಾಗ್ಲೇ ನಿಮ್ಮನ್ನ ಒಂದು ಸಲ ಕೇಳಿದ್ದೆ ಅಲ್ಲವ?? ನಾನು ಹೌದೆಂದು ಗೋಣು ಅಲ್ಲಾಡಿಸಿದೆ.

ಅಕ್ಕ ತುಂಬ ಕಷ್ಟ ಆಗಿದೆ. ಬಸ್ ಚಾರ್ಜ್ ಗಾಗುವಷ್ಟೂ ಕಾಸಿಲ್ಲ. ಏನಾದ್ರು ಸೊಪ್ಪು ತಗಳ್ಳಿ ಅಂದಳು. ಶ್ರೀಕಾಂತ್ ಕಡೆ ಬೆರಳು ಮಾಡಿ, ನಮ್ಮ ಮನೆ ಸೊಪ್ಪಿನ department ಅವರದ್ದು ಅಂದೆ. "ಅಣ್ಣ ಎಲ್ಲ ತರದ್ದು ಸೊಪ್ಪಿದೆ, ತಗಳಣ್ಣ ಅಣ್ಣ ಅಂತ ಗೋಗರೆದಳು. ದಂಟಿನ ಸೊಪ್ಪು 10 ರೂ ಗೆ ಮೂರು ಕಟ್ಟು ಅಂತ ಕೊಟ್ಟಳು. ಶ್ರೀಕಾಂತ್ ನಾಲ್ಕು ಕೊಡಿ ಅಂತ ಚೌಕಾಸಿಗೆ ನಿಂತರು. ನಾನು ಬೇಗ 10 ರೂ ಅವಳ ಕೈಗೆ ತುರುಕಿ, ಸೊಪ್ಪನ್ನು ಚೀಲದಲ್ಲಿ ಹಾಕಿ, ರಸ್ತೆಯ ಎರಡು ಬದಿ  ವಾಹನಗಳಿಲ್ಲದೆ ಖಾಲಿಯಿದ್ದರಿಂದ, ಶ್ರೀಕಾಂತ್ ಕೈಯನ್ನು ದರದರನೆ ಎಳೆದು, ಕ್ರಾಸ್ ಮಾಡಿ ಬಿಟ್ಟೆ. ಅವಳು ಅಷ್ಟು ದೂರದಿಂದ ’ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಅಕ್ಕೋ’ ಅಂತ ಕೂಗು ಹಾಕಿದಳು.

ಶ್ರೀಕಾಂತ್ ನಗುತ್ತ ನೋಡು ನಿನಗೆ ಆಶೀರ್ವಾದ ಮಾಡಿದ್ಲಲ್ಲ. ಖುಶಿಯಾಯ್ತಾ ಅಂತ ಕೇಳಿದ್ರು. ನಿನಗೆ ಮರಳು ಮಾಡಿ 10 ರೂ ಸೊಪ್ಪು ನಿನಗೆ ಮಾರಿದ್ಲು ಅಂದರು. ಅದಕ್ಕೆ ನಾನಂದೆ, ಪಾಪ ಮನೆಯಲ್ಲಿ ಏನು ಕಷ್ಟವೋ ಏನೋ, ಭಿಕ್ಷೆ ಬೇಡುವುದಕ್ಕಿಂತ ಸೊಪ್ಪು ತಾನೆ ಮಾರಿದ್ದು, ಏನೀಗ?? ಹಾಗೇ ಜಿಲೇಬಿಗಿಂತ ಸೊಪ್ಪು ದೇಹಕ್ಕೆ ಒಳ್ಳೆಯದು ಅಂತ ಇವತ್ತು ನಮ್ಮ ಮನೆಯಲ್ಲಿ ಹರಿವೆ ಸೊಪ್ಪಿನ ಸಾಸಿವೆ.ಅಷ್ಟೆ ಕತೆ.

by the way ಹರಿವೆ ಸೊಪ್ಪಿನ ಸಾಸಿವೆ ತುಂಬ ರುಚಿಯಾಗಿತ್ತು.

:-)