Showing posts with label tender bamboo. Show all posts
Showing posts with label tender bamboo. Show all posts
August 3, 2023
ನಮ್ಮ ತೋಟದ ಕಣಿಲೆ
ನನ್ನ ಜೀವಮಾನದಲ್ಲಿ ಮೊದಲ ಬಾರಿ ಕಣಿಲೆ ಕಟ್ ಮಾಡಿದ್ದು. ನನಗೆ ಬಂಗಾರದ ಪಾರಿತೋಷಕ ಬೇಕೆಂದು ಹೇಳಿದ್ದೇನೆ
ನಮ್ಮ ತೋಟದಲ್ಲಿ ಬೆಳೆದ ಕಣಿಲೆ. ನಮ್ಮ ತೋಟದ ಉಸ್ತುವಾರಿ ನೋಡಿಕೊಳ್ಳುವ ಮಂಜಣ್ಣ ಚಿತ್ರದುರ್ಗದ ಕಡೆಯವರು. ಅವರಿಗೆ ಕಣಿಲೆ ಎಲ್ಲ ಗೊತ್ತಿಲ್ಲ. ಹಿಂದಿನ ವರ್ಷ ಹೆಂಗೆoಗೊ ಕೊಯ್ದು ಕೊಟ್ಟಿದ್ದ. 🙂. ಶ್ರೀಕಾಂತ್ ಕಣಿಲೆ ಹೇಗೆ ಕೊಯ್ಯುವುದು ಅಂತ ಹೇಳಿಕೊಟ್ಟ ಮೇಲೆ ಈ ವರ್ಷ ಒಳ್ಳೆಯ ಕೆಲಸ ಮಾಡಿದ್ದಾನೆ .
ನಮ್ಮ ಮನೆಯಲ್ಲಿ ಕಣಿಲೆ ಕಟ್ ಮಾಡುವುದು ಶ್ರೀಕಾಂತ್ ಕೆಲಸ. ಈ ಸಲ ಅವರು, ಬೆಂಗಳೂರಿಗೆ ಬರುವ , ಆಫಿಸಿನ ಕೆಲಸದ ಮೇಲೆ ಅಲ್ಲಿ ಹೋಗಿದ್ದ ಗಾಡಿಯಲ್ಲಿ ಬೆಂಗಳೂರಿಗೆ ಕಣಿಲೆ ಮತ್ತು ಹಲಸಿನ ಹಣ್ಣು ಹಾಕಿ ಕಳುಹಿಸಿದ್ದಾರೆ. ಅವರು ತೀರ್ಥಹಳ್ಳಿಯಿಂದ ಬರಲು ವಿಳಂಬವಾಗುವುದೆಂದು.
ನಾನು ನನ್ನ ಮದುವೆಯಾಗಿ 36 ವರ್ಷದಲ್ಲಿ ಮೊದಲ ಬಾರಿ ಇದನ್ನು prep ಮಾಡಿದ್ದೇನೆ.
ನಮಗೋಸ್ಕರ ಸ್ವಲ್ಪ ಇಟ್ಟುಕೊಂಡು ಉಳಿದದ್ದನ್ನು ಆಪ್ಟೆಷ್ಟರಿಗೆ ಕಳುಹಿಸಲು ರೆಡಿಯಾಗಿ ಕೂತಿವೆ ಕಾಣಿಲೆಗಳು.
ಕೈ ಬೆರಳಿಗೆ ಸಾಕಷ್ಟು ಗಾಯ ಆಗಿದೆ ಅನ್ನವುದು ಬಿಟ್ಟರೆ i enjoyed this work.. surprisingly ❤️❤️👍
ಮೂರು ದಿನ ನೀರಲ್ಲಿ ಹಾಕಿಟ್ಟು... (ದಿನ ನೀರು change ಮಾಡಿ fresh ನೀರಲ್ಲಿ ಹಾಕಬೇಕು) ಮನೆಯಲ್ಲಿ ತರಹಾವರಿ ಕಣಿಲೆ ಅಡಿಗೆ 🙂
https://malathisanchiyinda.blogspot.com/2013/09/blog-post_6.html?m=1
i am maha proud of myself
Subscribe to:
Posts (Atom)


