Showing posts with label story corona ಕೊರೊನಾ. Show all posts
Showing posts with label story corona ಕೊರೊನಾ. Show all posts

December 14, 2020

ಕೊರೊನ ಕತೆ.- ಮೀಸೆ

 ಆಕೆ ತುಂಬಾ ಸುಂದರಿ. ಕಣ್ಣು ಮೂಗು ತುಟಿ ಎಲ್ಲಾ. ಆದರೆ ತುಟಿ ಮೇಲಿನ ಮೀಸೆಯಿಂದ ಈ ಸೌಂದರ್ಯವೆಲ್ಲ ಮಣ್ಣು ಪಾಲು. ಅತ್ಯಂತ ಬುದ್ಧಿವಂತೆ. ಹಲವು ದೊಡ್ಡ ಸಂಸ್ಥೆಗಳು ಅವಳಿಗೆ ಕೆಲಸ ನೀಡಲು ತುದಿ ಗಾಲಲ್ಲಿ ನಿಂತಿದ್ದವು. ಆದರೆ interview ಮುಗಿದ ಮೇಲೆ ಯಾರೂ ಅವಳನ್ನು ಪುನಃ ಸಂಪರ್ಕಿಸುತ್ತಿರಲಿಲ್ಲ. ಕೆಲವು ಕಡೆಯಂತೂ ಮಹಿಳಾ H R ಅಧಿಕಾರಿಗಳು ಸೂಕ್ಷ್ಮವಾಗಿ ಮೀಸೆ ತೆಗೆಸುವ ವಿಧಾನಗಳನ್ನು ಹೇಳಿದ್ದೂ ಇದೆ. ಅವಳಿಗೆ ಅಂತದ್ದರೆಲ್ಲಾ ಆಸಕ್ತಿನೆ ಇರಲಿಲ್ಲ.

ಅಂಥದ್ದರಲ್ಲಿ ಕೊರೊನಾ ಕಾಲ ಅವಳಿಗೆ ವರದಾನವಾಗಿ ಒದಗಿ ಬಂತು. Interview ಇಲ್ಲದೆ ದೊಡ್ಡ ಕೆಲಸ ಸಿಕ್ಕಿತು. ಏನಾದರೂ online con call ಇದ್ದಲ್ಲಿ ಅವಳು ಮಾಸ್ಕ್ ಕೂಡ ಧರಿಸುತ್ತಿರಲಿಲ್ಲ. ಆದರೆ ಅವಳ ಅಸಾಧ್ಯ ಬುದ್ಧಿಮತ್ತೆಯಿಂದಾಗಿ ಯಾರಿಗೂ ಅವಳ ಮೀಸೆ ಕಿರಿಕಿರಿ ಅಂತಲೂ ಅನಿಸುತ್ತಿರಲಿಲ್ಲ ಈಗ

ಅವಳ favorite ಹಾಡು : ಮೀಸೆ ಹೊತ್ತ ಹೆಂಗಸಿಗೆ ಡಿಮ್ಯಾಂಡ್ ಆಪ್ಪೋ ಡಿಮ್ಯಾಂಡ್ ಉ

😃😃



November 15, 2020

ಕೊರೊನ ಕಥೆ

 ಮನೆಯಲ್ಲಿ 8 ಜನ. ಕೊರೊನ ಪಿಡಿಗಿನ ನಿಮಿತ್ತ ಲಾಕ್ ದೌನ್ ಘೋಷಿಸಲಾಗಿದ್ದು, ಆ ಮನೆಯಲ್ಲಿ ಇರೋದು ಮೂರು ಜನ ಆದರೂ ಅವರ ಸಂಭಂಧದವರು, ಆಪ್ತ ಮಿತ್ರರು ಎಲ್ಲ ಅಲ್ಲೇ ಸಿಲುಕಿ, ಆ ಪುಟ್ಟ ಕೋಣೆಯಂತಹ ಮನೆಯಲ್ಲಿ 8 ಜನ. ಆರಾಮಾಗಿ ಮೈ ಚಾಚಿ ಮಲಗಲು ಆಗದಷ್ಟು ಪುಟ್ಟ ಮನೆ ಅದು. ಕೆಳಗಡೆ ಮನೆ ಮಾಲೀಕರ ವಾಸ. .

ಲಾಕ್ ಡೌನ್ ಆಗಿ ತಿಂಗಳ ಮೇಲಾಗಿತ್ತು. 8 ಜನರು ಇರುವ ಮನೆಯವರಲ್ಲಿ ಇಬ್ಬರಿಗೆ ಕೆಲಸ ಇರಲಿಲ್ಲ. ಸಂಪಾದನೆಯೂ ಇಲ್ಲ. ಕಷ್ಟಪಟ್ಟು ಜೀವನ ನಡೆಸುತ್ತಿದ್ದರು.

ಇಂತದ್ದರಲ್ಲಿ ಒಂದು ದಿನ ಮನೆಯ ಮಾಲೀಕರು ಚಪ್ಪಲಿಯ ಸದ್ದು ಮಾಡುತ್ತ ಬರಬೇಕಾದರೆ ಆ ಮನೆಯವರ ಎದೆ ಬಡಿತ ಡಬ್ ಡಬ್ ಅಂತಿತ್ತು. ನೀರಿನ ಬಿಲ್, ಕರೆಂಟ್ ಬಿಲ್ ಜಾಸ್ತಿಯಾಗಿದ್ಫು ಅದರ ಬಗ್ಗೆ ಆಕ್ಷೇಪ ಎತ್ತ ಬಹುದು ಅಂತ ಹೆದರಿ ಕೊಂಡಿದ್ದರು

ಅವರು ಮನೆಯೊಳಗೆ ಬಂದವರೇ 'ಅಲ್ರೀ 8 ಜನ ಇದ್ದೀರಾ, ಹೇಗ್ರಿ ಮ್ಯಾನೇಜ್ ಮಾಡ್ತೀರಿ? ಒಂದು ಮಾತು ಹೇಳೋದಲ್ವಾ? ಮೆಟ್ಟಿಲ ಕೆಳಗಿನ ಟೋಯ್ ಲೆಟ್ ಕಿ ಇಟ್ಟುಕೊಳ್ಳಿ. ಹಾಗೆ ಕೆಳಗಿನ ದೊಡ್ಡ ಮನೆಯಲ್ಲಿ ನಾವಿಬ್ಬರೇ. ಒಂದು ಕೊಠಡಿ ನಿಮಗೋಸ್ಕರ ಬಿಟ್ಟಿರುತ್ತೀನಿ. ಹಾಗೆ ಬಾಡಿಗೆ, ಬಿಲ್ ಬಗ್ಗೆ ಅನಗತ್ಯವಾಗಿ ತಲೆ ಕೆಡಿಸಕೊಳ್ಳಬೇಡಿ. 

ಈ ಮನೆಯವರಿಗೆ ಆಶ್ಚಯ ಭರಿತ ಖುಷಿ

(ಮಳೆ ನೋಡ್ತಾ ಟಿ ಕುಡೀತಾ ಈ ಕತೆ ಹೊಳೆದಿದ್ದು) ಗ್ರಾಮರ್, spelling mistake ಇನ್ನೊಮ್ಮೆ ತಿದ್ದುವೆ)

😊😊