Showing posts with label A recipe for summer. Show all posts
Showing posts with label A recipe for summer. Show all posts

March 29, 2025

ಮೆಂತ್ಯದ ಗಂಜಿ

 ಮೊನ್ನೆ ತೀರ್ಥಹಳ್ಳಿಗೆ  ಹೋಗಿ  ಬಂದೆ ಅಂತ ಹೇಳಿ ದ್ದೇನಲ್ಲಾ? ಏನು ಸೆಖೆ. ತುಂಗಾ ನದಿ almost ಬತ್ತಿದೆ. ನೋಡಿ ಬೇಜಾರಾಯಿತು. ನಾನು ಮದುವೆಯಾಗಿ ತೀರ್ಥಹಳ್ಳಿಗೆ ಸೇರಿದ್ದು 38 ವರ್ಷಗಳಾದವು. ಆಗ ಹೇಗಿತ್ತು , ಒಳ್ಳೆ ಹಿಲ್ station ತರಾ. ಈಗ ಬೆಂಗಳೂರೇ ವಾಸಿ. ನಾಲ್ಕು ಮಳೆ ಹನಿ ಬಿದ್ದು ಬೆಳಿಗ್ಗೆ ಸಂಜೆ ಸ್ವಲ್ಪ ತಣ್ಣಗಿದೆ ವಾತಾವರಣ.

ಈ ಮೆಂತ್ಯದ ಗಂಜಿ recipe ಅಕ್ಕನಿಗೆ instagram ನಲ್ಲಿ ಸಿಕ್ಕಿದ್ದು. ಹೊಟ್ಟೆಗೆ ತುಂಬಾ ಆರಾಮ್ ಎನ್ನಿಸುತ್ತೆ ಇದನ್ನು ಬೆಳಗ್ಗಿನ ಉಪಹಾರಕ್ಕಾಗಿ ಮಾಡಿಡ್ರೆ.

ರಾತ್ರಿ ಅರ್ಧ table spoon ಮೆಂತೆ ಕಾಳು ಗಳನ್ನು ನೀರಲ್ಲಿ ನೆನೆಸಿಡಿ.  ಮುಂಜಾನೆ ಅಕ್ಕಿ ಜತೆಗೆ ಚೆನ್ನಾಗಿ ತೊಳೆದು, ನೀರು ಹಾಕಿ ಮೆತ್ತಗೆ ಆಗುವಂತೆ ಬೇಯಿಸಿ.  ತಾಜಾ ಕಾಯಿ, ಎರಡು ಹಸಿ ಮೆಣಸು, ಅರ್ಧ ಟಿ ಸ್ಪೂನ್ ಅರಿಸಿನ ಪುಡಿ, ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಇದನ್ನು ಬೇಯಿಸಿದ ಅನ್ನಕ್ಕೆ ಬೆರೆಸಿ. ಮೇಲೆ ತುಪ್ಪ ಹಾಕಿ ಬಿಸಿ ಬಿಸಿ ತಿನ್ನಿ. ಅದಕ್ಕೆ ನಂಚಿಕೊಳ್ಳಲಿಕ್ಕೆ ಜೀರಿಗೆ ಮಿಡಿ ಉಪ್ಪಿನಕಾಯಿ. ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ 😀❤️👍🙏.

ನನ್ನ ಹಾಡು ಕೇಳುವ ಸೌಭಾಗ್ಯ ನಿಮಗೆ. ನಾನು ಅಡಿಗೆ ಮನೆಯಲ್ಲಿ ಹಾಡ್ತಾ ಅಡಿಗೆ ಮಾಡೋದು. ಮೊನ್ನೆ ಕೆಳಿಸಿಕೊಂಡ ಶ್ರೀಕಾಂತ್..'ಯಾಕೆ ಹಾಡಲ್ಲ ನೀನು ಚೆನ್ನಾಗಿದೆ ನಿನ್ನ ದನಿ' ಅಂದ್ರು...ಹೌದಾ? ನೀವು ಹೇಳಿ ನನಗೆ....ಹಾಡಿಗೂ, ತಿಂಡಿಗೂ  ಎನೂ ಸಂಬಂಧ ಇಲ್ಲ 😀