Showing posts with label ಮರೆಗುಳಿ. Show all posts
Showing posts with label ಮರೆಗುಳಿ. Show all posts

August 9, 2011

ಸಂಚಿಯಿಂದ ತೆಗೆದೆ ನೆನಪು - 7 : ಬೀಗದ ಕೈ ಕತೆ

ಬೆಂಗಳೂರಿಗೆ ಬಂದು 15 ದಿನಗಳಾಗಿತ್ತು. ಮಕ್ಕಳಿಗೆಲ್ಲ ಸ್ಕೂಲ ಆಗಷ್ಟೆ ಶುರುವಾಗಿದ್ದವು.  ಬೆಳಗಾವಿಯಲ್ಲಿ ಅಮ್ಮನ ಹಾಗು ತಂಗಿಯ ಮನೆ ಗ್ರಹ ಪ್ರವೇಶ ಕಾರ್ಯಕ್ರಮವಿತ್ತು. ಹೋಗುವುದೋ ಬೇಡವೋ ಅಂತಿದ್ದೆ. ನಮ್ಮ ಸಂಸ್ಥೆಗಳನ್ನು ಪ್ರಾರಂಭಿಸುವ ಹಂತದಲ್ಲಿದ್ದೆವು. ಅಷ್ಟರಲ್ಲೇ ಹತ್ತನೆ ತರಗತಿಯಲ್ಲಿ ಅನುತ್ತೀರ್ಣರಾದ ಮಕ್ಕಳಿಗೆಲ್ಲ ಮರು ಪರೀಕ್ಷೆ ಇದ್ದು ನನ್ನ ಮಕ್ಕಳ ಶಾಲೆಯಲ್ಲಿ exam centre ಇದ್ದರಿಂದ ಅವರಿಗೆ ಮೂರು ದಿನದ ರಜೆ ಕೊಟ್ಟರು. ಶ್ರೀಕಾಂತ ಕೂಡ ’ಹೋಗಿ ಬಾ’ ಅಂದರಿಂದ ನಾನು ಮಕ್ಕಳು ಹೊರೆಟೆವು. ನವರಂಗ ಹತ್ತಿರ ಬಸ್ ಪಿಕ್ ಅಪ್ ಪಾಯಿಂಟ್. ನಾನು ಮನೆ ಬಾಗಿಲಿಗೆ ಬೀಗ ಹಾಕುವಷ್ಟರಲ್ಲಿ ಶ್ರೀಕಾಂತ ರಿಕ್ಷಾ ತಂದಿದ್ದರು. ಮನೆಯ ಬೀಗದ ಕೈ ಅವರಿಗೆ ನಂತರ ಕೊಡುವ ಎಂದು ಪರ್ಸ್ ನಲ್ಲಿ ಹಾಕಿದೆ. ನಮ್ಮ ಬಸ್ ನಿಲುತಾಣದ ಬಳಿ ಶ್ರೀಕಾಂತ್ ಕಾಲೇಜ್ ಸಹಪಾಠಿ ಹಾಗೂ ಬ್ಯಾಂಕ್ ಕಲೀಗ್  ಸಿಕ್ಕಿ ಅವರು ನಮ್ಮ ಜತೆ ಬಸ್ ಬರುವ ತನಕ ನಿಂತುಕೊಂಡರು. ಅವರ ಕಾಲೇಜಿನ ದಿನಗಳು, ಆಫಿಸ್ ವಿಷಯ, ನಾವು ಕೆಲ ಮಿತ್ರರು ಬ್ಯಾಂಕ್ ನಿಂತ ಸ್ವಯಂ ನಿವೃತ್ತಿ ಪಡೆದು, ನಮ್ಮ ಇತ್ತೀಚಿನ ಯೋಜನೆಗಳಾವುವು , ಮಾತು ನಗು .... ಹಾಗೆ ಬಸ್ ಬಂತು. ನಾನು ಮಕ್ಕಳು ಹತ್ತಿಕೊಂಡು, ಶ್ರೀಕಾಂತ್ ಗೆ ಅವರ ಮಿತ್ರರಿಗೆ bye ಹೇಳುತ್ತಾ ಏನನ್ನೋ ಮರೆತಿದ್ದ ಹಾಗೆ ಅನ್ನಿಸುತ್ತ ಇತ್ತು. ಅದೇನಂತ ಮಾತ್ರ ಗೊತ್ತಾಗಲಿಲ್ಲ. ಸುಮಾರು ಅರ್ಧ ಗಂಟೆ ಪ್ರಯಾಣಿಸಿದ ಮೇಲೆ ನೆನಪಾಯಿತು ಶ್ರೀಕಾಂತ್ ಗೆ ಮನೆಯ ಬೀಗದ ಕೈ ಕೊಟ್ಟಿಲ್ಲ ಅಂತ. ಬೆಂಗಳೂರಿಗೆ ಬಂದಿದಷ್ಟೆ ಆದ್ದರಿಂದ duplicate ಬೀಗದ ಕೈ ಇನ್ನೂ ಮಾಡಿಸಿರಲಿಲ್ಲ. ಮನೆ owner ಹತ್ತಿರ ಇದ್ದದ್ದೆ ಒಂದೆ ಬೀಗದ ಕೈ. ಅದನ್ನೆ  ನಮಗೆ ಕೊಟ್ಟಿದ್ದರು. ಸರೀ ಈಗ ಮನಸ್ಸು ಬೀಗ ಕೈ ತಲುಪಿಸುವುದರ ಬಗ್ಗೆ ಉಪಾಯಗಳನ್ನು ಹುಡುಕಲು ಶುರು ಮಾಡಿತು. ಬೆಳಗಾವಿಗೆ ನಾನು ತಲುಪಿ, ಅಲ್ಲಿ ಕುರಿಯರ್ ನವರನ್ನು ಹುಡುಕಿ ಆ ಮೇಲೆ ಬೀಗದ ಕೈ ತಲುಪಿಸಲು ಮೂರು ದಿನಗಳೆ ತಗುಲುತ್ತಿತ್ತು.ಅಷ್ಟೆ ಅಲ್ಲದೆ ತಂದೆ ತಾಯಿ ಆಗಷ್ಟೆ (ತಂದೆಯ ಆರೋಗ್ಯದ ದೃಷ್ಟಿಯಿಂದ ಅವರು ಮುಂಬಯಿ ನಿಂದ ಬೆಳಗಾವಿಗೆ shift ಆಗಿದ್ದರು) ಬೆಳಗಾವಿಗೆ ಬಂದಿದ್ದರಿಂದ, ಅವರಿಗೂ ಕುರಿಯರ್ ಮುಂತಾದ ಸೇವೆ ಎಲ್ಲಿ ದೊರಕುತ್ತದೆ ಅನ್ನುವ idea ಇದ್ದ ಹಾಗೆ ಇರಲಿಲ್ಲ.
 ಶ್ರೀಕಾಂತ ಮತ್ತು ಸ್ನೇಹಿತರಿಗೆ ಒಂದು ಮಹತ್ವದ project ಬಗ್ಗೆ ಒಬ್ಬರ ಬಳಿ  appointment ಇತ್ತು. ಸಾಲೀಮಠರ ಮನೆ ನಮ್ಮ ಮನೆಯಿಂದ ನಾಲ್ಕನೇ ಮನೆ. ಶ್ರೀಕಾಂತ್ ಅವರ ಮನೆಯಲ್ಲಿ ಉಳಿದುಕೊಂಡರೂ, ಬನಿಯನ್, ಟಾವೆಲ್ ಎಲ್ಲ ಮನೆ ಹೊರಗಡೆ ಟೆರೆಸ್ ಮೇಲೆ ಒಣಗಲಿಕ್ಕೆ ಹಾಕಿದ್ದು ಅವರು ಬಳಸ ಬಹುದಿತ್ತು. ಆದರೆ ಪ್ಯಾಂಟ್ ಶರ್ಟ್ ಸಾಲಿಮಠ ರ ಬಳಿ borrow ಮಾಡಲು ಸಾಲಿಮಠರು ತುಂಬ ಉದ್ದದ ವ್ಯಕ್ತಿ, ಮತ್ತು ಇನ್ನೊಬ್ಬ ಸ್ನೇಹಿತರು ಕುಳ್ಳ. ರಾತ್ರಿ ಹಾಕಿದ ಬಟ್ಟೆ ಹಾಕಿಕೊಳ್ಳಬಹುದಾಗಿತ್ತರೂ, ಮಹತ್ವದ documents/ ಮೀಟಿಂಗ್ ಗೆ ಬೇಕಾಗಿರುವ ಫೈಲ್ ಎಲ್ಲ ನಮ್ಮ ಮನೆಯಲ್ಲೇ ಉಳಿದಿತ್ತು. (ಬೆಳಿಗ್ಗೆ ಬೇಗನೆ appointment ಇದ್ದರಿಂದ ಬೀಗ ಒಡೆಸುವವರನ್ನು ಹುಡುಕಲೂ ಪುರುಸೊತ್ತು ಇರಲಿಲ್ಲ.) ಶ್ರೀಕಾಂತ ನಮ್ಮನ್ನು ಕಳುಹಿಸಿಕೊಟ್ಟು ಸೀದ ಸಾಲಿಮಠರ ಮನೆಗೆ ಹೋಗಿ ಹೀಗೆ ಹೀಗೆ ಆಗಿದೆ ಅಂದರಂತೆ. ಅದಕ್ಕೆ ಶೋಭ, ಸಾಲಿಮಠರ ಹೆಂಡತಿ ’ಚಿಂತೆ ಮಾಡಬೇಡಿ, ಮಾಲತಿ ಖಂಡಿತ ಏನಾದರೂ ಉಪಾಯ ಮಾಡುತ್ತಾರೆ.’ಅಂದರಂತೆ. :-)
ನಾನು ಏನು ಮಾಡುವುದಪ್ಪ ಅಂತ ಆಲೋಚಿಸಬೇಕಾದರೆ, ಬಸ್ ನ ಒಬ್ಬ ಪ್ರಯಾಣಿಕರ ಬಳಿ ಮೊಬೈಲ್ ನೋಡ್ದೆ. ಆಗ ಸೆಲ್ ಫೋನ್ ಕೆಲವೇ ಕೆಲವು ಜನರ  ಬಳಿ ಮಾತ್ರ ನೋಡಲು ಸಿಗುತ್ತಿತ್ತು.ಅವರ ಬಳಿ request ಮಾಡಿ ಏನಿಲ್ಲದಿದ್ದರೆ ಸಾಲಿಮಠರ ಮನೆಗೆ ಫೋನ್ ಆದ್ರೂ ಮಾಡುವ ಅಂತ ಅನ್ನುಕೊಳ್ಳುವಷ್ಟರಲ್ಲಿ ಬಸ್ಸ್ ತಿರುವುತೆಗೆದುಕೊಂಡು ’ಕಾಮತ್ ಉಪಚಾರ್’ ಬಳಿ ನಿಂತಿತು. ಊಟಕ್ಕೆ 20 ನಿಮಿಷ ಟೈಮ್ ಇದೆ ಅಂತ ಕ್ಲೀನರ್ ಕೂಗಿಕೊಂಡ. ನಾನು ಇಳಿದೆ. ಒಂದು ಐಡಿಯಾ ಆಗಲೇ ನನ್ನ ಮನಸಿನಲ್ಲಿ ರೂಪು ಗೊಂಡಿತ್ತು. ಹೋಟೆಲ್ ಒಳಗಡೆ ಹೋಗಿ ಮ್ಯಾನೆಜರ್ ಬಳಿ ಮಾತಾಡಬೇಕು ಅಂದೆ. ವೈಟರ್ ಒಬ್ಬ ಅವರ ಕಡೆ ಬೆರಳು ಮಾಡಿ ತೋರಿಸಿದ. ಅವರ ಬಳಿ ಹೋಗಿ ಕೊಂಕಣಿ ಬರುತ್ತ ಅಂತ ಕೇಳಿದೆ. ಅವರು ಹೌದು ಅಂದರು. ನನಗೆ ಸ್ವಲ್ಪ ಹೆಲ್ಪ್ ಬೇಕಿತ್ತು ಮಾಮ.(ಕೊಂಕಣಿ ಅಂದಮೇಲೆ ಮಾಮ-ಮಾಯಿ ಸಂಭೋದನೆ automatic ಆಗಿ ಬಂದುಬಿಡತ್ತೆ. ಮಾಮ ಅಂದರೆ uncle, ಮಾಯಿ means aunty. ಏನು ಹೇಳಿ ಮಾಯಿ ಅಂದರು
ನಾನು ಬೆಂಗಳೂರಿನಿಂದ  ಬೆಳಗಾವಿಗೆ ಹೊರಟಿದ್ದೇನೆ. ಎರಡೂ ನನಗೆ ಹೊಸ ಊರು.ಇದು ಯಾವ ಊರು ಮತ್ತು ಬೆಂಗಳೂರಿನಿಂದ ಹೆಚ್ಚು ದೂರ ಕ್ರಮಿಸಿಲ್ಲ ಎಂದು ನನ್ನ ಭಾವನೆ ಎಂದೆ. ಅದಕ್ಕೆ ಅವರು ಇದು ಡೊಬ್ಸ್ ಪೇಟ್, ಬೆಂಗಳೂರಿನಿಂದ 50 ಕಿ. ಮಿ ಅಂತ ಹೇಳಿದರು. ಏನಾಯ್ತು ಹೇಳಿ ಅಂತಲೂ ವಿಚಾರಿಸಿದರು. ನಾನು ಹೀಗೆ ಆಗಿದೆ ಮಾಮ...ಕೀ ನನ್ನ ಜತೆ ಇಟ್ಕೊಂಡು ಬಂದಿದ್ದೇನೆ.ಜರೂರಿಯಾಗಿ ಇದನ್ನು ನನ್ನ husband ಗೆ ತಲುಪಿಸಲೇಬೇಕು ಅಂದೆ. ನಾನು envelope ನಲ್ಲಿ ಬೀಗದ ಕೈ ಹಾಕಿ ಎಡ್ರೆಸ್ ಬರೆದು ಕೊಟ್ರೆ ಅವರಿಗೆ ಇವತ್ತು ಅಥವ ನಾಳೆ ಬೆಳಿಗ್ಗೆ ಇಲ್ಲಿ ಬಂದು ಬೀಗದ ಕೈ ತೆಗೆದುಕೊಂಡು ಹೋಗಲು ಹೇಳಲಾ please ಅಂದೆ. ಅಷ್ಟೆ ತಾನೆ ಏನಡ್ಡಿಯಿಲ್ಲ ರಾತ್ರಿಯಿಡಿ ನಮ್ಮ ಹೋಟಲ್ ತೆರೆದಿರುತ್ತೆ. ಅವರು ನಾಳೆ ಬೆಳಿಗ್ಗೆ ನೆ ಬರಲಿ ಆದರೆ ಒಂದು ಕಂಡಿಷನ್ ಅಂದರು. ನಾನು ಏನು ಅಂತ ಅವರ ಮುಖ ನೋಡಿದೆ. ಬೆಳಗ್ಗಿನ breakfast ಅವರು ನಮ್ಮ ಹೋಟಲ್ ನಲ್ಲೇ ಮಾಡಬೇಕು ಅಂತಂದು ನಕ್ಕರು. ಆ ಮೇಲೆ ನನ್ನ ಬಳಿ ಇದ್ದ ಸಾಲಿಮಠರ ನಂಬರ್ ಗೆ ಫೋನ್ ಮಾಡಲು ಹೇಳಿ ಅವರೇ ಶ್ರೀಕಾಂತ್ ಬಳಿ ಮಾತನಾಡಿ, ಏನೂ ವರಿ ಮಾಡ್ಕೋಬೇಡಿ, ಕೀ ಇಲ್ಲಿ ಸೇಫ್ ಆಗಿರತ್ತೆ, ಅಂತ ಬರುವ directions ನೀಡಿದರು. ನಾನು ಅವರೇ ಕೊಟ್ಟ envelope ನಲ್ಲಿ ಶ್ರೀಕಾಂತ ಹೆಸರು ಬರೆದು, ಎಡ್ರಸ್ ಕೂಡ ಬರೆದೆ. ಅವರಿಗೆ ತುಂಬ ತುಂಬ ಥ್ಯಾಂಕ್ಸ್ ಅಂದೆ. ಬಸ್ಸ್ ಹತ್ತಿ ನಿಶ್ಚಿಂತೆಯಿಂದ ಬೆಳಗಾವಿಗೆ ಹೊರಟೆ. ಮರುದಿನ ನಾನು ಬೆಳಗಾವಿ ತಲುಪುವ ಮುಂಚೆನೆ, ಶ್ರೀಕಾಂತ್ ಮತ್ತು ಸಾಲಿಮಠರು- ಅವರ ಬಳಿ ಕಾರ್ ಇದೆ- ಡೊಬಸ್ ಪೇಟ್ ಗೆ ಬಂದು ಕಾಮತ್ ಉಪಚಾರ್ ನಲ್ಲಿ breakfast ಮಾಡಿ ಬೀಗದ ಕೈ ತೆಗೆದುಕೊಂಡು ಬೆಂಗಳೂರಿಗೆ ಹೋಗಿದ್ದರು
ಹೌದು!! ಆ ಪ್ರಾಜೆಕ್ಟ್-ನಮ್ಮ  ಮೊಟ್ಟ ಮೊದಲ ಪ್ರಾಜೆಕ್ಟ್- ನಮಗೇ ಸಿಕ್ಕಿತು ಅಂತ ಬೇರೆ ಹೇಳಬೇಕಾಗಿಲ್ಲವಲ್ಲ? ಈಗಂತೂ ಪುರುಸೊತ್ತಿಲ್ಲದಷ್ಟು ಕೆಲಸಗಳು.
ಈಗ ನಮ್ಮ ಮನೆಯಲ್ಲಿ ಎಲ್ಲರ ಬಳಿ ಒಂದು ಬೀಗದ ಕೈ ಇರುತ್ತೆ. ಮತ್ತೊಂದು ಡುಪ್ಲಿಕೇಟ್ ಬೀಗದ ಕೈ ಒಂದು secret ಜಾಗದಲ್ಲಿರುತ್ತೆ. ಅಕ್ಕ ಪಕ್ಕದವರಿಗೆಲ್ಲ ತೊಂದರೆ ಕೊಡಲು ಇಷ್ಟ ಆಗಲ್ಲ ನಂಗೆ.
ಎರಡು ವರ್ಷಗಳ ಹಿಂದೆ ನಾವೆಲ್ಲ ಮುಂಬಯಿಗೆ ಹೊರಟಿದ್ವಿ. ಬೆಳಿಗ್ಗೆ ನಮ್ಮನ್ನು ರೈಲ್ವೆ station ಗೆ ಕರೆದುಕೊಂಡು ಹೋಗುವ ಟಾಕ್ಸಿ ಬರುವ ತನಕ ಶ್ರೀಕಾಂತ್ ಯಾವುದೋ proposal ರೆಡಿ ಮಾಡ್ತಾ ಇದ್ದರು-ಅಂದರೆ ರಾತ್ರಿ ಇಡಿ ಕೆಲಸ ಮಾಡ್ತಾ ಇದ್ದರು’ ಡೆಡ್ಲೈನ್ ಇತ್ತು ಅದನ್ನು ಕಳುಹಿಸಲು.ಅದನ್ನು ಮೈಲ್ ಮಾಡಲಿಕ್ಕಿತ್ತು. ಅಲ್ಲಿ ಟ್ಯಾಕ್ಸಿ ಯವನು ಮನೆ ಬೆಲ್ ಮಾಡಬೇಕಾದ್ರೆ ಶ್ರೀಕಾಂತ್ ಇಲ್ಲಿ ಇಮೈಲ್ ನ ಸೆಂಡ್ ಬಟನ್ ಒತ್ತಿಅದರು :-)ಮತ್ತೆ ಗಡಿಬಿಡಿ ಮಾಡಿಕೊಂಡು, ಅವರು ಸ್ನಾನ ಗೀನ ಮಾಡ್ದೆ, ರೈಲ್ವೆ ಸ್ಟೇಶನ್ ತಲುಪಿದ್ವಿ. ಟ್ರೈನ್ ಹೊರಟ ಕೂಡಲೆ ಶ್ರೀಕಾಂತ್ ಮಲಗಿಬಿಟ್ಟರು. ಮಧ್ಯಾಹ್ನ ಅವರನ್ನು ಊಟಕ್ಕೆ ಎಬ್ಬಿಸಿದೆ. ನಾನು ಆಲು ಪರಾಠ ಮತ್ತು ಮೊಸರನ್ನ ತಯಾರಿಸಿದ್ದೆ. ಆಗ ಮಿರ್ಚಿ ಬಜ್ಜಿ ಮಾರುವವನು ಬಂದ. ನನಗೆ ಮಿರ್ಚಿ ಬಜ್ಜಿ ತುಂಬ ಇಷ್ಟ. ಶ್ರೀಕಾಂತ ನನಗೆ   ಮಿರ್ಚಿ ಬಜ್ಜಿ ಕೊಡಿಸಲು ಕಿಸೆಯಲ್ಲಿ ಕೈ ಹಾಕಿದ್ರೆ ಪರ್ಸ್  ಇರಲಿಲ್ಲ. ದುಡ್ಡು  ಹೆಚ್ಚೇನು ಇಟ್ಟುಕೊಂಡಿರಲ್ಲ ವಾದರೂ ಅದರಲ್ಲಿ ಎರಡು ಕ್ರೆಡಿಟ್ ಕಾರ್ಡ್, ಒಂದು ಡೆಬಿಟ್ ಕಾರ್ಡ್ ಮತ್ತು ಒಂದು ಮೆಟ್ರೊ ಕಾರ್ಡ್ ಇದ್ದವು. ಅವರು - ನಾನು ಪರ್ಸ್ ತಂದಿದ್ದೆ, ಎಲ್ಲೋ ಬಿದ್ದಿರಬೇಕು ಅಂತ ಹಡಬಡಾಯಿಸಿದರು. ನಾನು ಇರಲಿಕ್ಕಿಲ್ಲ, ಗಡಿಬಿಡಿಯಲ್ಲಿ ಮನೆಯಲ್ಲೇ ಉಳಿದುಕೊಂಡಿರಬೇಕೆಂದು ಹೇಳಿದೆ. ಟ್ಯಾಕ್ಸಿ ಬಾಡಿಗೆ ನಾನೇ ಕೊಟ್ಟಿದ್ದೆ. ಆಫಿಸಿ ನ ಕಲೀಗ್ ಸತ್ಯಮಾಧವ್ ಅವರಿಗೆ ಫೋನ್ ಮಾಡಿ, ನಾನು ನಮ್ಮ ಬೀಗದ ಕೈ ನ secret location ಹೇಳಿ, ಅವರು ಮನೆಗೆ ಬಂದು ಶ್ರೀಕಾಂತ ಒಳಕೋಣೆಯ ಗೋಡೆಗೆ ನೇತು ಹಾಕಿದ್ದ ಪ್ಯಾಂಟ್ ಪಾಕಿಟ್ ನಲ್ಲಿ ಹುಡುಕಿದಾಗ ಪರ್ಸ್ ಅದರಲ್ಲೆ ಇತ್ತು. . ಹೀಗಿದ್ದಾರೆ ನಮ್ಮ ಮರೆಗುಳಿ ಶ್ರೀಕಾಂತ ರಾಯರು.
ಮರೆಗುಳಿ ಅನ್ನುವಾಗ ನೆನಪು ಬಂತು
ಒಂದು ಸಲ ಸ್ಕೂಟರ್ ಪಾರ್ಕ್ ಮಾಡಿ ಶಾಪಿಂಗ್ ಹೋಗಿದ್ದೆವು. ವಾಪಸ್ ಬರಬೇಕಾದರೆ ನಾನು - ಅಂಗಡಿಯ ಎಂಟ್ರೆನ್ಸ್ ಕಡೆ ನಿಲ್ಲುತ್ತೇನೆ ನೀವು ಸ್ಕೂಟರ್ ಇಲ್ಲೆ ತೆಗೆದುಕೊಂಡು ಬನ್ನಿ ಅಂತ ಕಾಯುತ್ತ ಇದ್ದರೆ, 5-10 ನಿಮಿಷವಾದರೂ ರಾಯರ ಪತ್ತೆನೆ ಇಲ್ಲ. ನಾನೆ ಬ್ಯಾಗ್ ಎಲ್ಲ ಹಿಡಿದುಕೊಂಡು ಪಾರ್ಕಿಂಗ್ ಜಾಗಕ್ಕೆ ಹೋದರೆ, ನಮ್ಮ ಸ್ಕೂಟರ್ ಪಾರ್ಕ್ ಮಾಡಿದ್ದ ಕಡೆನೆ ಇತ್ತು. ಶ್ರೀಕಾಂತ ದೂರದಲ್ಲಿರುವ ಬೇರೆ ಯಾರದೋ ಸ್ಕೂಟರ್ ಗೆ ಬೀಗದ ಕೈ ಹಾಗಿ ತಿರುಗಿಸುತ್ತ ಇದ್ದರು. ನಾನು ಬಳಿ ತಲುಪಿ ಏನು ನಡೆಸಿದ್ದೀರಾ ಅಂದ್ರೆ...ಬೀಗದ ಕೈ ಯಾಕೋ ಒಳ ಹೋಗ್ತಾ ಇಲ್ಲ ಅಂದರು. ನಾನು ಹಣೆ ಬಡಿದುಕೊಂಡು, ಅಯ್ಯೋ ಇದು ನಮ್ಮ ಗಾಡಿ ಅಲ್ಲ , ನಮ್ಮದು ನೋಡಿ ಓ ಆ ಕಡೆ ಇದೆ ಅಂದೆ. ಸಧ್ಯ ಅಲ್ಲೇ ಇದ್ದ ಪೋಲಿಸಪ್ಪ ಏನೂ ಅನ್ನದೆ ಸುಮ್ಮನೆ ನೋಡ್ತಾ ನಿಂತಿದ್ದ,
ಮತ್ತೊಂದು ಸಲ ಹುಬ್ಬಳ್ಳಿಗೆ ಆಫಿಸ್ ಕೆಲಸದ ಮೇಲೆ ಹೋದಾಗ laptop ಬಸ್ಸ್ ನಲ್ಲೆ ಬಿಟ್ಟು ಇಳಿದು ನನಗೆ ಫೋನ್ ಮಾಡಿದ್ದರು ’ಅಯ್ಯೋ ಲ್ಯಾಪ್ ಟಾಪ್ ಹೋಗೆ ಬಿಡ್ತು ಕಣೆ ಅಂತ. ಕೆ ಎಸ್ ಆರ್ ಟಿ ಸಿ lost and found ಸೆಕ್ಷನ್ ಹೋಗಿ ಕೇಳಿ, ನಿಮ್ಮ luck ಸರಿಯಿದ್ದರೆ ಸಿಕ್ಕೆ ಸಿಕ್ಕುತ್ತೆ ಅಂದಿದಕ್ಕೆ ನನಗೆ ಗೇಲಿ ಮಾಡಿದ್ದರು. ಆದರೂ ಅಲ್ಲಿ ಹೋಗಿ  ವಿಚಾರಿಸಿದಾಗ ಯಾರೋ ಪುಣ್ಯಾತ್ಮರು ಬಸ್ ನಿಂದ ಅದನ್ನು lost and found ಸೆಕ್ಷನ್ ಗೆ ತಂದು ಕೊಟ್ಟು ಹೋಗಿದ್ದರು.
ಇನ್ನು ಲೆಕ್ಕವಿಲ್ಲದಷ್ಟು ಕೊಡೆಗಳನ್ನು ಕಳೆದು ಬಂದಿದ್ದಾರೆ ............
ಬೆಳಗಾವಿಗೆ ಹೊರಡುವಾಗ ಬೀಗದ ಕೈ ಕೊಡದೆ ಹೋಗಿದ್ದು ಮಾತ್ರ ನನ್ನದೇ ಮರೆವು.
 :-)