ತಂಪು ಮತ್ತು ಹುಳಿ ಸೇರಿ ತಂಪುಳಿ. ಇದೇ ತಂಬುಳಿ, ತಂಬಳಿ, ತಂಬ್ಳಿ ಆಗಿರಬಹುದೇ? ಇದು ತಣ್ಣಗಿನ ಪದಾರ್ಥ. ಆರೋಗ್ಯಕರ ಸಹಜ ಆಹಾರ
ತಿಮರೆ ಒಂದು ಹಿಡಿ/ಮುಷ್ಠಿ, ಅರ್ಧ ಕಪ್ ಹೆರೆದ ತಾಜಾ ತೆಂಗಿನಕಾಯಿ ತುರಿ, 8-10 ಕಾಳು ಮೆಣಸು, 1/2 ಟೀ ಚಮಚೆ ಜೀರಿಗೆ, ಚಿಕ್ಕ ತುಂಡು ಹುಣಸೆ ಹುಳಿ, (ಬೇಕಾದರೆ ಹಸಿ ಶುಂಠಿಯನ್ನು ಕೂಡ ಬಳಸಬಹುದು) ರುಚಿಗೆ ಉಪ್ಪು
ಒಗ್ಗರಣೆಗೆ- ತುಪ್ಪ, ಸಾಸಿವೆ, ಒಣಮೆಣಸು
ಎಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಿ,ಉಪ್ಪು ಬೆರೆಸಿ 4 ಕಪ್ ಮಜ್ಜಿಗೆ ಬೆರೆಸಿ ಮತ್ತು ತುಪ್ಪದಲ್ಲಿ ಒಗ್ಗರಣೆ ಹಾಕಿ ಈ ತಂಬ್ಳಿ ಗೆ ಬೆರೆಸಿ.
ತಿಮರೆಯ ಔಷಧೀಯ ಗುಣಗಳು: ನೆನಪಿನ ಶಕ್ತಿಯನ್ನು ಚುರುಕುಗೊಳಿಸುತ್ತದೆ. ಮುಂಜಾನೆ (ಭ್ರಾಹ್ಮಿ ಮುಹೂರ್ತದಲ್ಲಿ) ಎದ್ದು ಖಾಲಿಹೊಟ್ಟೆಯಲ್ಲಿ ಒಂದೆಲಗವನ್ನು ತಿನ್ನಬೇಕಂತ ನಮ್ಮ ಅಜ್ಜ ಹೇಳುತ್ತಿದ್ದರು..
ಮೇಲೆ ಹೇಳಿಕೊಟ್ಟ ತಂಬ್ಳಿಗೆ ಒಂದೆಲಗದ ಬದಲಾಗಿ ಸೀಬೆಮರದ ಕುಡಿ, ಸಾಂಬಾರ್ ಬಳ್ಳಿ ಎಲೆ ಕೂಡ ಬಳಸಿ ತಂಬ್ಳಿ ಮಾಡಿ ಬಾಯಿರುಚಿ ಹೆಚ್ಚಿಸಿ ಕೊಳ್ಳಬಹುದು
ನಾವೆಲ್ಲ ಸಾಧರಣವಾಗಿ ಏಕಾದಶಿಯ ಉಪವಾಸದ ನಂತರ ಉದ್ದಿನ ದೋಸೆಗೆ ಒಂದೆಲಗದ ಚಟ್ನಿ ಮಾಡುತ್ತಿದ್ದ ನೆನಪು.
ಯಶವಂತಪುರ ಭಾನುವಾರದ ಸಂತೆಯಲ್ಲಿ ಎಲ್ಲ ತರದ ಸೊಪ್ಪು ಧಾರಾಳವಾಗಿ ಲಭ್ಯ.
ಒಂದು ಪೋಸ್ಟ್ ಸ್ಕ್ರಿಪ್ಟ್: ನಿಹಾ ಕಾಲೆಜ್ ನಲ್ಲಿ 'ಫೈಯರ್ ಲೆಸ್ ಕುಂಕಿಂಗ್' ಅಂತ ಎಕ್ಸಿಭಿಷನ್ ಹಮ್ಮಿಕೊಂಡಿದ್ರು. ಆಗ ನಿಹಾ ಸಾಲ್ಟ್ ಬಿಸ್ಕಿಟ್ಸ್ ಮೇಲೆ ಹಾಲಿನ ಕ್ರೀಮ್, ಬೊಯ್ಲಡ್ -ಮ್ಯಾಶ್ಡ್ ಆಲೂಗಡ್ಡೆ, ತುರಿದ ಕ್ಯಾರೆಟ್, ಸೌತೆಕಾಯಿ ಮತ್ತು ಕರಿಮೆಣಸಿನ ಪುಡಿ ಉದುರಿಸಿ ಕೊಟ್ಟಿದ್ದಳು. ಆಗ ನಾನು ಅವಳಿಗೆ ನಮ್ಮ ತಂಬಳಿಗಳು ಪರ್ಫೆಕ್ಟ್ ಎಕ್ಸಾಂಪಲ್ಸ್ ಫಾರ್ ಬೆಂಕಿರಹಿತ ಅಡುಗೆ ಅಂತ ಹೇಳಿದ್ದೆ. ಒಗ್ಗರಣೆ ಹಾಕದಿದ್ರೆ ಅದೇ ಬೆಂಕಿರಹಿತ ಆಯ್ತಲ್ಲವಾ?? ರುಬ್ಬುವ ಕೆಲಸಕ್ಕೆ ಮಿಕ್ಸಿ ಬಳಸದೇ ರುಬ್ಬುವ ಕಲ್ಲು ಬಳಸಿದರೆ ರೆ???
ಒಂದು ಪೋಸ್ಟ್ ಸ್ಕ್ರಿಪ್ಟ್: ನಿಹಾ ಕಾಲೆಜ್ ನಲ್ಲಿ 'ಫೈಯರ್ ಲೆಸ್ ಕುಂಕಿಂಗ್' ಅಂತ ಎಕ್ಸಿಭಿಷನ್ ಹಮ್ಮಿಕೊಂಡಿದ್ರು. ಆಗ ನಿಹಾ ಸಾಲ್ಟ್ ಬಿಸ್ಕಿಟ್ಸ್ ಮೇಲೆ ಹಾಲಿನ ಕ್ರೀಮ್, ಬೊಯ್ಲಡ್ -ಮ್ಯಾಶ್ಡ್ ಆಲೂಗಡ್ಡೆ, ತುರಿದ ಕ್ಯಾರೆಟ್, ಸೌತೆಕಾಯಿ ಮತ್ತು ಕರಿಮೆಣಸಿನ ಪುಡಿ ಉದುರಿಸಿ ಕೊಟ್ಟಿದ್ದಳು. ಆಗ ನಾನು ಅವಳಿಗೆ ನಮ್ಮ ತಂಬಳಿಗಳು ಪರ್ಫೆಕ್ಟ್ ಎಕ್ಸಾಂಪಲ್ಸ್ ಫಾರ್ ಬೆಂಕಿರಹಿತ ಅಡುಗೆ ಅಂತ ಹೇಳಿದ್ದೆ. ಒಗ್ಗರಣೆ ಹಾಕದಿದ್ರೆ ಅದೇ ಬೆಂಕಿರಹಿತ ಆಯ್ತಲ್ಲವಾ?? ರುಬ್ಬುವ ಕೆಲಸಕ್ಕೆ ಮಿಕ್ಸಿ ಬಳಸದೇ ರುಬ್ಬುವ ಕಲ್ಲು ಬಳಸಿದರೆ ರೆ???
:-)
sಶ್ರೀವತ್ಸ್ ಜೋಶಿಯವರಿಂದ ಈ ಪೋಸ್ಟ್ ಗೆ ಇನ್ನಷ್ಟು ಹೂರಣ ಅವರ ಪರ್ಮಿಶನ್ ಇನ್ನೂ ಪಡೆದುಕೊಂಡಿಲ್ಲ :-)
sಶ್ರೀವತ್ಸ್ ಜೋಶಿಯವರಿಂದ ಈ ಪೋಸ್ಟ್ ಗೆ ಇನ್ನಷ್ಟು ಹೂರಣ ಅವರ ಪರ್ಮಿಶನ್ ಇನ್ನೂ ಪಡೆದುಕೊಂಡಿಲ್ಲ :-)
ಪೂರಕ
ಓದಿಗೆ
(ಆಸಕ್ತಿ
ಇದ್ದವರಿಗೆ):
[’ವಿಚಿತ್ರಾನ್ನ’
ಹಳೇಸಂಚಿಕೆಯಿಂದ...]
ಕನ್ನಡದಲ್ಲಿ
‘ಒಂದೆಲಗ’,
ತುಳುಭಾಷೆಯಲ್ಲಿ
‘ತಿಮಾರೆ’,
ಕೊಂಕಣಿ-ಮರಾಠಿಗಳಲ್ಲಿ
‘ಕರಾನ್ನೊ’,
ಸಂಸ್ಕೃತ/ಹಿಂದಿಯಲ್ಲಿ
‘ಬ್ರಾಹ್ಮಿ’,
ಸಸ್ಯಶಾಸ್ತ್ರೀಯವಾಗಿ
Centella asiatica ಎಂದು ಹೆಸರಿರುವ
ಈ
ಸಸ್ಯ
ಪ್ರಾಚೀನ
ಕಾಲದಿಂದಲೂ,
ಔಷಧೀಯ ಗುಣವಿರುವುದೆಂದು
ಗುರ್ತಿಸಿಕೊಂಡಿರುವ
ಸಸ್ಯ.
ಒಂದೆಲಗ
ಎಂದರೆ
ಗೊತ್ತಾಗದಿದ್ದವರಿಗೆ
ಕನ್ನಡದಲ್ಲಿ
ಅದಕ್ಕೆ
ಇಲಿಕಿವಿ
ಸೊಪ್ಪು,
ಗದ್ದೆ
ಬರಗ,
ತಂಬುಳಿ
ಗಿಡ,
ಸರಸ್ವತಿ
ಸೊಪ್ಪು
(ಬ್ರಹ್ಮ
- ಬ್ರಾಹ್ಮಿ
- ಸರಸ್ವತಿ?)
ಇತ್ಯಾದಿ
ಹೆಸರುಗಳೂ
ಇವೆಯೆಂದರೆ
ಗುರುತಿಸುವುದು
ಸುಲಭವಾದೀತು.
ನಮ್ಮ
ಕರಾವಳಿಯಲ್ಲಿ
ಒಂದೆಲಗ
(ಹೆಚ್ಚು
ಜನರಿಗೆ
‘ತಿಮಾರೆ’
ಅಥವಾ
‘ಕರಾನ್ನೊ’
ಎಂದೇ
ಗೊತ್ತು)
ವ್ಯಾಪಕವಾಗಿ
ಬಳಕೆಯಾಗುತ್ತದೆ.
ಕರಾವಳಿ
ಪರಿಸರದಲ್ಲಿ
ಬತ್ತದಗದ್ದೆಗಳ
ಬದಿಯ
ಜೌಗುಪ್ರದೇಶದಲ್ಲಿ,
ಅಡಿಕೆತೋಟಗಳಲ್ಲೂ
ಹೇರಳವಾಗಿ
ಬೆಳೆಯುವ
ಒಂದೆಲಗವನ್ನು
ಅಡುಗೆಪದಾರ್ಥವಾಗಿಯೂ
ಉಪಯೋಗಿಸುತ್ತೇವೆ.
ಒಂದೆಲಗದ
ಚಟ್ನಿ
ಅಥವಾ
ತಂಬುಳಿ
ಕರಾವಳಿ-ಮಲೆನಾಡಿನ
ಅಡುಗೆಯಲ್ಲಿ
ಒಂದು
ಸ್ವಾದಿಷ್ಟ
ಸ್ಪೆಷಾಲಿಟಿ.
ಬೇಸಗೆಯ
ದಿನಗಳಲ್ಲಂತೂ
ದಿನಕ್ಕೊಂದು
ನಮೂನೆಯ
‘ಹಶಿ’
ಅಥವಾ
ತಂಬುಳಿ
ಮಾಡುವ
ಮನೆಗಳಲ್ಲಿ
ಶುಂಠಿ,
ಸಂಭಾರಸೊಪ್ಪು,
ಮೆಂತ್ಯ,
ಸೌತೆ,
ದಾಸವಾಳ,
ದಾಳಿಂಬೆಸಿಪ್ಪೆ,
ಒಂದೆಲಗ
- ಹೀಗೆ
ಒಂದಲ್ಲ
ಒಂದು
ತಂಬುಳಿ
ಇದ್ದೇ
ಇರುತ್ತದೆ.
ಒಂದೆಲಗ
ಸೇವನೆ
ದೇಹಕ್ಕೆ,
ಮನಸ್ಸಿಗೆ
ತಂಪು
ತರುವುದು
ಮಾತ್ರವಲ್ಲದೆ
ಸ್ಮರಣಶಕ್ತಿಯನ್ನೂ
ವರ್ಧಿಸುತ್ತದೆ
ಎಂಬ
ನಂಬಿಕೆಯಿದೆ.
ಒಂದೆಲಗದಿಂದ
ಸ್ಮರಣಶಕ್ತಿಯ
ವೃದ್ಧಿಯಾಗುತ್ತದೆಯೆಂಬ
ವಿಚಾರವನ್ನು
ಸಿಂಹಳೀಯರು
ಶತಶತಮಾನಗಳ
ಹಿಂದೆಯೇ
ಕಂಡುಕೊಂಡರು
ಎನ್ನುತ್ತಾರೆ.
ಶ್ರೀಲಂಕಾ
ದೇಶದಲ್ಲಿ
ಹಿಂದಿನ
ಕಾಲದಿಂದಲೂ
ಬ್ರಾಹ್ಮಿ
ಹೇರಳವಾಗಿ
ಬೆಳೆಯುತ್ತಿತ್ತಂತೆ.
ಅಲ್ಲಿ
ಆನೆಗಳು
ಈ
ಸೊಪ್ಪನ್ನು
ತುಂಬಾ
ಇಷ್ಟಪಟ್ಟು
ತಿನ್ನುವುದನ್ನು
ಗಮನಿಸಿದ
ಜನ,
ಆನೆಗಳ
ತಥಾಕಥಿತ
ಅದ್ಭುತ
ಸ್ಮರಣಶಕ್ತಿಗೆ
ಒಂದೆಲಗ
ಸೊಪ್ಪಿನ
ಸೇವನೆಯೇ
ಕಾರಣವೆಂದು
ಸುಲಭವಾಗಿ
ಊಹಿಸಿದರು.
ಸಿಂಹಳೀಯರು
ಬ್ರಾಹ್ಮಿಸೊಪ್ಪನ್ನು
ವಿಪುಲವಾಗಿ
ಸೇವಿಸುತ್ತಾರೆ,
ಅದನ್ನೊಂದು
ವಾಣಿಜ್ಯಬೆಳೆಯನ್ನಾಗಿ
ಬೆಳೆದು
ಹೊರದೇಶಗಳಿಗೂ
ರಫ್ತು
ಮಾಡುತ್ತಾರೆ.
ಬ್ರಾಹ್ಮಿ
ಸೊಪ್ಪಿನ
ಮಹಿಮೆಯನ್ನು
ಪ್ರಾಚೀನ
ಭಾರತದ
ಮಹರ್ಷಿಗಳು,
ಆಚಾರ್ಯರುಗಳೂ
ಅರಿತಿದ್ದಿರಬೇಕು.
ಗುರುಕುಲ
ಪದ್ಧತಿಯಲ್ಲಿ
ವಿದ್ಯಾರ್ಥಿಗಳಿಗೆ
ಸ್ಮರಣಶಕ್ತಿ,
ಕಲಿಕೆಯ
ಸಾಮರ್ಥ್ಯ
ಮತ್ತು
ಮನಸ್ಸಿನ
ಕೇಂದ್ರೀಕರಣಗಳಿಗೆ
ಅನುಕೂಲವಾಗಲೆಂದು
ಅವರ
ಆಹಾರದಲ್ಲಿ
ಬ್ರಾಹ್ಮಿ
ಸೊಪ್ಪು,
ಅಂದರೆ
ಒಂದೆಲಗ
ಸಹ
ಇರುತ್ತಿತ್ತೆಂದು
ಗ್ರಂಥಗಳಲ್ಲಿ
ಉಲ್ಲೇಖವಿದೆ.
ಸೌಂದರ್ಯವರ್ಧಕವಾಗಿ
ತ್ವಚೆಯ
ಹೊಳಪನ್ನು
ಹೆಚ್ಚಿಸಲು
ಮತ್ತು
ಚರ್ಮದ
ಮೇಲಿನ
ಗಾಯಗಳನ್ನು
ಗುಣಪಡಿಸಲು
ಒಂದೆಲಗ
ಸೊಪ್ಪನ್ನು
ಅರೆದು
ಹಚ್ಚಿಕೊಳ್ಳುವ
ಚಿಕಿತ್ಸಾಕ್ರಮ
ಆಯುರ್ವೇದದಲ್ಲಿದೆ.
ಒಂದೆಲಗದಲ್ಲಿರುವ
ವಿಶಿಷ್ಠ
ರಾಸಾಯನಿಕ
ಅಂಶಗಳಾದ
ಬೆಕೊಸೈಡ್
ಎ
ಮತ್ತು
ಬಿ
ಅದಕ್ಕೆ
ವಿಶೇಷ
ಗುಣವನ್ನು
ತರುವಂಥವು
ಎಂದು
ಸೆಂಟ್ರಲ್
ಡ್ರಗ್
ಇನ್ಸ್ಟಿಟ್ಯೂಟ್ನ
ವಿಜ್ಞಾನಿಗಳು
ಅಭಿಪ್ರಾಯಪಟ್ಟಿದ್ದಾರೆ.
ಈ
ಎರಡು
ರಾಸಾಯನಿಕಗಳು
ಮೆದುಳಿನಲ್ಲಿ,
ಪ್ರಮುಖವಾಗಿ
ಜ್ಞಾಪಕಶಕ್ತಿಗೆ
ಸಂಬಂಧಿಸಿದ
ಜೀವಕೋಶಗಳಿಗೆ,
ಪ್ರೊಟಿನ್
ಸಂಶ್ಲೇಷಣೆಗೆ
ನೆರವಾಗುತ್ತವಂತೆ.
ತನ್ಮೂಲಕ
ಮೆದುಳಿನಲ್ಲಿನ
‘ಮೆಮೊರಿ
ಸೆಲ್’ಗಳು
ದಷ್ಟಪುಷ್ಟವಾಗಿ
ಅಧಿಕ
ಪ್ರಮಾಣದಲ್ಲಿ
ಮತ್ತು
ದೀರ್ಘಾವಧಿಗೆ
ಮಾಹಿತಿಯನ್ನು
ಸಂಗ್ರಹಿಸಿಡುವ
ಸಾಮರ್ಥ್ಯವನ್ನು
ಹೊಂದುತ್ತವೆ.
ಮತ್ತೆ
ಕರಾವಳಿ
ಜಿಲ್ಲೆಗಳ
ವಿಷಯಕ್ಕೆ
ಬಂದರೆ,
ಅಲ್ಲಿ
ಅಧಿಕಪ್ರಮಾಣದಲ್ಲಿ
ಒಂದೆಲಗ
ಸೇವನೆಗೂ,
ಕರಾವಳಿ
ಜಿಲ್ಲೆಗಳಲ್ಲಿನ
ಅತ್ಯಧಿಕ
ಸಾಕ್ಷರತಾ
ಪ್ರಮಾಣಕ್ಕೂ,
ಪರೀಕ್ಷಾ
ಫಲಿತಾಂಶಗಳಲ್ಲಿ
ಉಡುಪಿ/ದ.ಕ
ಜಿಲ್ಲೆಗಳ
ವಿದ್ಯಾರ್ಥಿಗಳೇ
ಅಗ್ರಶ್ರೇಣಿಯಲ್ಲಿರುವುದಕ್ಕೂ
ಏನಾದರೂ
ಹೊಂದಾಣಿಕೆಯಿದೆಯೇ
ಎಂಬ
ಕುತೂಹಲ
ಬಂದರೆ
ಆಶ್ಚರ್ಯವಿಲ್ಲ.
--
:-)
malathi S
:-)
malathi S
