June 10, 2025

ಜ್ಯೋತಿ enterprising lady ❤️

  


ಇವತ್ತು ಬೆಳಿಗ್ಗೆ ಜ್ಯೋತಿ ಹತ್ತಿರ ತರಕಾರಿ ತರಲು ಹೋಗಿದ್ದೆ. 'ಅಕ್ಕ, ಮಧ್ಯಾಹ್ನದ ಹೊತ್ತು ಫ್ರೀ ಇರ್ತೀನಿ. ಮನೆಯಿಂದಲೇ ಏನಾದ್ರು ಬಿಸಿನೆಸ್ ಮಾಡ್ಬೇಕಂತ ಇದ್ದೀನಿ. ಏನಾದ್ರೂ ಐಡಿಯಾ ಕೊಡಿ' ಅಂದ್ಲು. ಎಷ್ಟು ಖುಶಿ ಆಯ್ತು.

"ನೀವು ತಮಿಳ್ ನಾಡಿ ನವರಲ್ಲ? ಅಲ್ಲಿಂದ ಸೀರೆ ತಂದು ಮಾರಬಹುದು..'
"ಮೊಬೈಲ್ ನಿಂದ ಮಾಡಬಹುದಾ? "
"ಹೌದು."
"ಅದೆಲ್ಲ ಕಳಿಸೋದು ಹೇಗೆ? ನಾನೇ ಹೋಗಬೇಕಾ?
ಸೀರೆ ತರಲಿಕ್ಕೆ ನೀವು ಹೋಗಬಹುದು ಬೇಕಾದ್ರೆ. ಕಳಿಸಲಿಕ್ಕೆ ಡೆಲಿವರಿ ಇರುತ್ತೆ. ಮನೆಗೆ ಬಂದು ತೆಗೊಂಡು, ಅಡ್ರೆಸ್ ಗೆ ತಲುಪಿಸ್ತಾರೆ. ಸ್ವಲ್ಪ ಕಾಸು ಕೊಡಬೇಕಾಗುತ್ತೆ."
"ಹಾಂ ಅಕ್ಕ ನನ್ನ ಮಗನ ಪ್ರೆಂಡ್ app ಬಗ್ಗೆ ಹೇಳ್ತಾ ಇದ್ದ. ಅವನು ಮಾಡಿಕೊಡ್ತಾನಂತೆ..."
"ಒಳ್ಳೇದಾಯ್ತಲ್ಲವಾ?"
"ಆದ್ರೆ ನಾನು ತರಕಾರಿ ವ್ಯಾಪಾರನೆ ಮಾಡ್ಬೇಕಂತ ಇದ್ದೀನಿ."
"ಹೊ ,ಒಳ್ಳೆ ವಿಚಾರ. ಕಟ್ ತರಕಾರಿ/ ಮಿಕ್ಸ್ ತರಕಾರಿ , ಬಿಡಿಸಿದ ಬೆಳ್ಳುಳ್ಳಿ..ಇದೆಲ್ಲ  ಮಾಡಬಹುದು. ಕೆಲ building ನವರ ಜತೆ ಒಪ್ಪಂದ ಮಾಡಿಕೊಳ್ಳಿ...."
......
ನಾನಂತೂ ಫುಲ್ ಖುಶ್... ಬೆರೆಯವರಿಂದಲೂ ಐಡಿಯಾ ತೆಗೊಳ್ಳಿ...ನನಗೂ ಹೇಳಿ ಅಂದಿದ್ದೀನಿ..

No comments: