September 20, 2024

ಮುಂಜಾನೆ ಪ್ರಲಾಪ

 ನಿನ್ನೆ ರಾತ್ರಿ ಮಲಗುವ ಮುಂಚೆ 'ನಾಳೆ breakfast ಗೆ ಏನೂ ಐಡಿಯ ಇಲ್ಲ...ಏನು ಮಾಡಲಿ ಅಂದಾಗ ಇವರು style ಆಗಿ, ನಾನು ಮಠಕ್ಕೆ volunteer ಆಗಿ ಹೋಗ್ತಿದ್ದೀನಿ, ಅಲ್ಲೇ bf ಎಂದಾಗ ಖುಷಿಯಿಂದ ಒಳ್ಳೆ ನಿದ್ದೆ ಮಾಡಿದೆ.

ಬೆಳ್ಳ ಬೆಳಿಗ್ಗೆ ತಮ್ಮನ bf ಫೋಟೋ ಬಂದಾಗ ಖುಷಿಯಿಂದ ಹೀಗೆ ಮೆಸೇಜ್ ಮಾಡಿದೆ 👇


ಶ್ರೀಕ್ಕಾಂತ್  ಎದ್ದು ಬಿಟ್ಟು..ಹೇ ಲೇಟ್ ಆಯ್ತು ಬ್ರೆಕ್ಫ್ಹಾಸ್ಟ್ ಗೆ ಏನಾದ್ರೂ ರೆಡಿ ಮಾಡಿದೆಯ ಅಂದ್ರೆ 'ಇಲ್ಲ' ಅಂದೆ.
ಮಠ ದ ಕೆಲಸ ಅಂದ್ರೆ ಅಕ್ಕಿಯಿಂದ ಮಾಡಿದ ಐಟಂ ತಿಂನಂಗಿಲ್ಲ. ಚಪಾತಿ ಹಿಟ್ಟು ಇದೆ. ಚಟ್ನಿ ಮಾಡಲಾ ಅಂದ್ರೆ 'ಓ' ಅಂದ್ರು. ನನಗೆ ವಿಪತೀತ ಉರಿದು ಹೋಯ್ತು... 'ಇಲ್ಲ ಹೊರಗಡೆ ತಿಂತೇನೆ' ಅಂತಾರೆನೋ ಅಂದುಕೊಂಡು. ನನಗೆ ಇತ್ತೀಚಿಗೆ ಬೆಳಗಿನ ತಿಂಡಿ ಮಾಡೋದಂದ್ರೆ ಕಿರಿಕಿರಿ....
ಸಿಟ್ಟಿನಿಂದಲೇ ಚಪಾತಿ ಚಟ್ನಿ, ಸಿಹಿ ಸುರನೋಳಿ ಮಾಡಿದೆ. 


ಅಕ್ಕ ಚಿತ್ರಾನ್ನ ಮಾಡಿ,  ಹೊರಗಿನಿಂದ ವಡೆ ತೆಗೆದುಕೊಂಡು ಬಂದ್ಲು 



ಎಂಬಲ್ಲಿ ಇವತ್ತಿನ ಬೆಳಗಿನ ತಿಂಡಿಯ ವಿಲಾಪ...😧😧😞
ವಿ.ಸೂ : ನಾವು ಹೊರಗಿನಿಂದ ವಡೆ, ಇಡ್ಲಿ ಮುಂತಾದು ತಂದ್ರೆ ಚಟ್ನಿ ಮನೆಯಲ್ಲೇ ಮಾಡೋದು...ಚಪಾತಿ(not in pic) ಗೆ ಮಾಡಿದ ಚಟ್ನಿ ಸೂಪರ್ ಟೇಸ್ಟಿ ಯಾಗಿತ್ತು..ಆದ್ದರಿಂದ ವಡೆ ಬಂತು....😁👍

No comments: