September 21, 2023

ಹೀಗೊಂದು family - role reversal

ಅವರಿಬ್ಬರೂ ಒಂದೇ ಕಡೆ ಕೆಲಸಕ್ಕಿದ್ದರು. ಇಬ್ಬರಿಗೂ ಸಣ್ಣ ಪ್ರಾಯಕ್ಕೆ ಒಳ್ಳೆ ಹುದ್ದೆಗೆ ಎರಿದ್ದರು. ಪ್ರೀತಿಸಿ ಮದುವೆಯಾದ್ರು. ಬೇಗ ಬೇಗ ಒಂದಾದ ಮೇಲೆ ಎರಡು ಮಕ್ಕಳು ಹುಟ್ಟಿದರು.

ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಮಕ್ಕಳನ್ನು ನ್ಯಾನಿ/ ಕೆಲಸದವರ ಸುಪರ್ದಿಗೆ ಬಿಟ್ಟು ಹೋಗುತ್ತಿದ್ದರು. ಮಕ್ಕಳಿಗೆ ಯಾವಾಗಲೂ ಕಾಯಿಲೆ ಕಸಾಲೆ.

ಒಂದು ದಿನ ಗಂಡ ಹೆಂಡತಿ ಇಬ್ಬರೂ ಊಟದ ಮೇಜಿನ ಎದುರು ಬದುರು ಕೂತು ಮಾತನಾಡಲು ತೊಡಗಿದರು. ಒಬ್ಬರಾದರೂ ಕೆಲಸ ಬಿಟ್ಟು ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿರಬೇಕೆಂದು. ಹೆಂಡತಿ ತುಂಬಾ ಯೋಚನೆಗೀಡಾದಳು. ಸುಮಾರು ಹೊತ್ತು ಮಾತನಾಡಲಿಲ್ಲ. ಅವಳಿಗೆ ಕೆಲಸ ಬಿಡಲು ಮನಸ್ಸಿಲ್ಲ ಎಂದು ಗಂಡ ಗ್ರಹಿಸಿದ. ಹಾಗಾಗಿ ಗಂಡ ಕೆಲಸ ಬಿಟ್ಟು ಮನೆಯಲ್ಲಿರಲು ಮುಂದಾದ.

ಮನೆ clean ಆಗಿಡುವುದು, ಅಡುಗೆ ಮಾಡುವುದು, ಚೆಂದದ ಕೈತೋಟ, ಹಬ್ಬ ಹರಿದಿನಗಳಲ್ಲಿ ಪೂಜೆ ,ಒಳ್ಳೆ ಅಡುಗೆ ಮಾಡುವುದು, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವುದು ಇತ್ಯಾದಿ.

ಹೆಂಡತಿ ಈಗ ಇನ್ನಷ್ಟು  ದೊಡ್ಡ ಹುದ್ದೆಗೆ ಏರಿದ್ದಾರೆ. ದೊಡ್ಡ ಮನೆ ಕಟ್ಟಿಸಿದ್ದಾರೆ

ಕೆಲವರು ಅವನನ್ನು househusband ಎನ್ನುವ ಬಿರುದನ್ನು ಕೊಟ್ಟರು. ಅವರಿಬ್ಬರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ

ಮಗಳು ಈಗ ಡಾಕ್ಟರ್.  ಮಗ ಹೊರದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇವನ ಕೈತೋಟ ಎಷ್ಟು ಪ್ರಸಿದ್ದಿ ಎಂದರೆ ಜನರು ಅವರ  ಸಾವಯವ ಕೈತೋಟ ನೋಡಲು ದುಡ್ಡು ಕೊಟ್ಟು ಬರುತ್ತಾರೆ, ಇವರನ್ನ7 ಸಭೆ ಸಮಾರಂಭಕ್ಕೆ ಆಹ್ವಾನಿಸಿ ಮಾತನಾಡಲು ಹುರಿದುಂಬಿಸುತ್ತಾರೆ.

ನಮಗೆ  ಮಗಳ ಮದುವೆಯ ಕರೆಯೋಲೆ ಬಂದಿದೆ. ಹಾಗಾಗಿ ಇದು ನೆನಪಾಯಿತು. ಶೇರ್ ಮಾಡಿದೆ ಅಷ್ಟೇ 😀❤️

No comments: