December 21, 2022

Christmas/ ಕ್ರಿಸ್ಮಸ್ ಹಬ್ಬ

 


ನಾನು ಹೆಚ್ಚಾಗಿ ಓದಿದ್ಫು ಕಾನ್ವೆಂಟ್ ಗಳಲ್ಲಿ. ಹಾಗಾಗಿ ಕ್ರಿಸ್ಮಸ್ ಗೆ ನಮಗೆ 10 ದಿನಗಳ ರಜೆ. ಹಾಗಾಗಿ ಖುಷಿ ಆಗ್ತಿತ್ತು. 8 ವರ್ಷಗಳ ಹಿಂದೆ ಅಕ್ಕ ಅರ್ಥಾತ್ ಮಾಲವಿಕ  ತನ್ನದೇ ಸಣ್ಣದಾದ ಗೃಹ ಉದ್ದಿಮೆ ಬಿಸ್ಕೂಟ್ ಫ್ಯಾಕ್ಟರಿ ಪ್ರಾರಂಭಿಸಿದಾಗ ಇನ್ನೂ ಖುಷಿ. ಮೊಟ್ಟೆ ಹಾಕದ products. ಇದಕ್ಕೆ ಅದರದ್ದೆ ಆದ ಮಾರುಕಟ್ಟೆ ಇದೆ. 

ಕ್ರಿಸ್ಮಸ್ ಗೆ ಹದಿನೈದು ದಿನ ಇರುವಾಗಲೇ ಆರ್ಡರ್ ಬರಲು ಶುರು ಆಗುತ್ತೆ. ಮನೆಯಲ್ಲೆಲ್ಲ ಅಮೋಘವಾದ ಪರಿಮಳ. rum ಮತ್ತು ರಮ್ ರಹಿತ ಕೇಕ್ಗಳು ಮಾತ್ರವಲ್ಲದೆ ಕುಕ್ಕೀಸ್, ಚಾಕಲೇಟು ಗಳು ಹೋಗುತ್ತವೆ. 

ನಾನು ಆಗ ಮನೆ ಬಿಟ್ಟು ಎಲ್ಲೂ ಹೋಗುವುದಿಲ್ಲ. ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. box assemble ಮಾಡುವುದು, ಟ್ಯಾಗ್ ಕಟ್ಟುವುದು ವಗೈರೆ....

ಈಗೀಗ ವೇಗನ್ ಕೇಕ್ ಗಳಿಗೆ ಹೆಚ್ಚು ಬೇಡಿಕೆ ಇವೆ. ಅಕ್ಕ ಅದನ್ನೂ ಮಾಡುತ್ತಾಳೆ. ವೇಗನ್ ಅಂದ್ರೆ ಯಾವುದೇ ಪ್ರಾಣಿಗಳಿಂದ ಬಂದಂತಹ ಉತ್ಪನ್ನ...ಉದಾಹರಣೆಗೆ ಆಕಳ/ಗೋ ಉತ್ಪತ್ತಿ...ಹಾಲು ಮೊಸರು, ತುಪ್ಪ , ಬೆಣ್ಣೆ , / ಜೇನು ಮುಂತಾದವುಗಳು.


ಕೆಲವು ಚಿತ್ರಗಳು 👆👆







No comments: