ಆಕೆಯ 100 ನೆ ಹುಟ್ಟು ಹಬ್ಬದ ಸಂದರ್ಭ. ಮಕ್ಕಳು, ಮರಿ ಮಕ್ಕಳು ಅವರ ಮಕ್ಕಳು ಎಲ್ಲ ಸೇರಿದ್ದರು
ಆಕೆ ಮಾಡುವ ಚಪಾತಿ ಹಲವು ಕಡೆ ಪ್ರಖ್ಯಾತ ಆಗಿತ್ತು. ಮಾತ್ರವಲ್ಲದೆ ನೆರೆ, ಅತಿ ಮಳೆ, ಕೊನೆಗೆ ಕೊರೊನ ಸಮಯದಲ್ಲೂ ಹಲವರಿಗೆ ಎಸ್ಕೆ ಚಪಾತಿ ಮಾಡಿ ಕಳುಹಿಸಿ ಬಹು ಜನರ ಹೊಗಳಿಕೆಗೆ ಪಾತ್ರರಾಗಿದ್ದರು.
ಹಲವಾರು ಜನರು ಆಕೆಯ ಮೆತ್ತಗಿನ ಚಪಾತಿ ಬಗ್ಗೆ ಕೇಳಿದರು. ಆಗ ಆಕೆ ನಗುತ್ತ..ಏನಿಲ್ಲ ಚಿಕ್ಕ ಪ್ರಾಯದಲ್ಲಿ ಸಿಟ್ಟು ಬಂದಾಗಲೆಲ್ಲ ಚಪಾತಿ ಹಿಟ್ಟು ಕಲಸಿ ಅದನ್ನು ಗುದ್ದಿ ಗುದ್ದಿ, ಹಿಟ್ಟು ಮೆತ್ತ ಗಾಗುತ್ತಿತ್ತು, ಸಿಟ್ಟು ಶಮನವಾಗುತ್ತಿತ್ತು. ಕೊನೆಗೆ ಅದನ್ನೇ ರೂಢಿ ಮಾಡಿಕೊಂಡೆ. ಇನ್ನೇನೂ ವಿಶೇಷವಿಲ್ಲ ಅದರಲ್ಲಿ. ಮೆತ್ತನೆಯ ಚಪಾತಿ ಜತೆಗೆ ನನ್ನ ಸ್ವಭಾವವೂ ಶಾಂತವಾಗಿದೆ ಅಂತ ನಕ್ಕರು
(ನಿನ್ನೆ ಚಪಾತಿ ಹಿಟ್ಟು ಕಲೆಸುವಾಗ ಹೊಳೆದಿದ್ದು)
No comments:
Post a Comment