July 5, 2020

ಕಾಕ ಕಥಾನಕ

ನಿನ್ನೆ ಬೆಳಿಗ್ಗೆ ಟೀ ಕುಡೀತಾ ನನ್ನ ಕಣ್ಣು ನಿಂತಲ್ಲೇ ಹಾರುತ್ತಿರುವ ಕಾಗೆಯನ್ನು ಕಂಡಿತು. ಇದೇನಪ್ಪಾ ಕಾಗೆ trancendental meditation ಮಾಡ್ತಿದೆ ಅಂದು ಸೋಜಿಗ ಪಟ್ಟೆ. ಇನ್ನಷ್ಟು ಸೂಕ್ಷ್ಮವಾಗಿ ನೋಡಿದ್ರೆ ಅದರ ಒಂದು ರೆಕ್ಕೆ ತಂತಿಗೆ ಸಿಕ್ಕಿಕೊಂಡ ದಾರಕ್ಕೆ ಸಿಕ್ಕಾಕಿಕೊಂಡಿತ್ತು. ಅದರಿಂದ ಹೊರಗೆ ಬರಲು ಕಾಗೆ ತುಂಬಾ ಪ್ರಯತ್ನ ಪಡ್ತಾ ಇತ್ತು. ಇತರ ಕಾಗೆಗಳು ಸೇರಿಕೊಂಡು ಅದಕ್ಕೆ ಸಹಾಯ ಮಾಡಲು ಪ್ರಯತ್ನಿಸಿದವು
ಅಕ್ಕ ಪ್ರಾಣಿ ಸಹಾಯವಾಣಿಗೆ ಮೈಲ್ ಹಾಕಿದಳು
ಕೆಲವು ಗಂಟೆಗಳ ನಂತರ ಒಂದು ಉದ್ದ ಗಳು ಮೇಲೇರುವುದು ಕಾಣಿಸಿ ಖುಷಿಯಾಯ್ತು.
10 - 15 ನಿಮಿಷ ಪ್ರಯತ್ನಿಸಿದ ನಂತರ ಕತ್ತಿಯಿಂದ ನೀಟಾಗಿ ಆ ದಾರವನ್ನು ಕತ್ತರಿಸಲಾಗಿ , ಕಾಗೆ ನಿರಾತಂಕವಾಗಿ ಹಾರಿ ಹೋಯಿತು. ನಿಹಾ ಮಾಲು ಖುಷಿ ಪಟ್ಟರು.
ಅದನ್ನು ಬಿಡುಗಡೆ ಮಾಡಿದವರು WAPC.








1 comment:

Srikanth Manjunath said...

Nice...good thing is the crow again became free...nice efforts