February 4, 2020

ಆಲೆಮನೆ

ಮೊನ್ನೆ ಕಾರ್ಕಳಕ್ಕೆ ನಮ್ಮ ಮೊಮ್ಮಗನ ಚೌಲ ಕ್ಕೆ ಹೋಗಿದ್ದೆವು. ದಾರಿಯಲ್ಲಿ ಶ್ರೀಕಾಂತ newspaper ತೆಗೊಂಡ್ರು. ಅದರಲ್ಲಿ ಕೇದೂರಿನ ಆಲೆಮನೆ ಬಗ್ಗೆ ಬರೆದಿತ್ತು. ಇಲ್ಲಿ ಹೇಗೂ ಬಂದಿದ್ದೇವಲ್ಲವ, ಒಂದು ಉಡುಪಿ ಕೈಮಗ್ಗ ಸೀರೆ ಹಾಗೂ ಆಲೆ ಮನೆ ನೋಡಿಬಿಡುವ ಅಂತ ಹೇಳಿದರು. ಹಾಗೆ ಆಲೆಮನೆಗೆ ಭೇಟಿ ಇತ್ತು, ಉಮೇಶ ಶೆಟ್ವರನ್ನು ಮಾತನಾಡಿಸಿ, ಬೆಲ್ಲ ಮಾಡುವ ಪ್ರಕ್ರಿಯೆಯ ಪ್ರಾತ್ಯಕ್ಷಿಕೆ ನೋಡಿ, ರಾಮಚಂದ್ರ ಭಟ್ಟರ ತೋಟಕ್ಕೂ ಭೇಟಿ ನೀಡಿದೆವು.
ಶ್ರೀಕಾಂತ್ ಎರಡೂ ಕಡೆ ಯ video ಮಾಡಿದ್ದಾರೆ. ಅದರ ಕೊಂಡಿ ನಂತರ ಹಾಕುವೆ. ಅಲ್ಲಿ ತನಕ ಚಿತ್ರ ನೋಡಿ. 😀😀
ಆಸಕ್ತರು ಸಂಪಾದಕೀಯ ಪುಟ 6 ತಾರೀಕು -ಶುಕ್ರವಾರ ಜನವರಿ 31, 2020 ನೋಡಿ

ಉಮೇಶ ಶೆಟ್ಟಿ, ರಾಮಚಂದ್ರ ಭಟ್ಟರ ಜೊತೆ ಶ್ರೀಕಾಂತ ಶೆಣೈ
ಕಬ್ಬಿನ ಹಾಲು ಸಂಗ್ರಹಣೆ
ಒಣಗಿದ ಕಬ್ಬಿನ ಜಲ್ಲೆಯೇ ಉರುವಲು


ಹತ್ತು ಹಲವು ಹಕ್ಕಿಗಳ ಕಲರವ
ತಾಜಾ ಕಬ್ಬಿನ ಹಾಲು

62ರ ಪ್ರಾಯದ ರಾಮಚಂದ್ರ ಭಟ್ಟರು ಚಕಚಕನೆ ಮರ ಏರಿ ನಾಲ್ಕು ಹಲಸಿನಕಾಯಿ ಉದುರಿಸಿದ ಪರಿ ಯೌವನಿಗರನ್ನು ನಾಚಿಸುವಂತಿತ್ತು 😊😊



ಚಿತ್ರದ ಮೇಲೆ ಕ್ಲಿಕ್ಕಿಸಿ ಓದಬಹುದು




No comments: