ಪ್ರತೀ ದಿನ, ಕಸ ಗುಡಿಸುವಾಗ, ನೆಲ ಒರೆಸುವಾಗ, ಬಾಗಿಲು ತೆರೆಯಲು ಹೋದಾಗ, ಈ desk top ಕೆಲೆಂಡರ್ ನೋಡುತ್ತಿರುವಾಗಲೆಲ್ಲ ಇದನ್ನು ಕನ್ನಡೀಕರಿಸಬೇಕೆಂದು ಆಲೋಚಿಸುತ್ತಿದ್ದೆ. ಇವತ್ತು ಮಾಡಿದೆ. ಬಹುಶಃ ಸಾವಿರಾರು ಜನರು ಇದನ್ನು ತರ್ಜುಮೇ ಮಾಡಿರಬಹುದು. ಅದರಲ್ಲಿ ನನ್ನದೊಂದು... ನಮ್ಮ ಗೃಹಪ್ರವೇಶ ದ ಆಮಂತ್ರಣ ಪತ್ರಿಯೊಂದಿಗೆ ಶ್ರೀಕಾಂತ ಇದನ್ನು ಎಲ್ಲರಿಗೂ ಕಳುಹಿಸಿದ್ದರು. ಹಲವಾರು ಜನರು ತಮ್ಮ ಮನೆಯಲ್ಲಿ ಇದನ್ನು ನೀಟಾಗಿ ಕಣ್ಣಿಗೆ ಕಾಣುವಂತೆ ಇಟ್ಟಿದ್ದಾರೆ. ನಾವು ಅವರಲ್ಲಿ ಹೋದಾಗಲೆಲ್ಲ ಅದನ್ನು ತೋರಿಸುತ್ತಾರೆ... :-)
ಎಲ್ಲಿ ಮನಸ್ಸಿನಲ್ಲಿ ಭಯವಿಲ್ಲವೋ, ತಲೆಯನ್ನು ಗರ್ವದಿಂದ ಎತ್ತಿ ಹಿಡಿದಿರುವರೋ
ಎಲ್ಲಿ ಜ್ಞಾನ ಉಚಿತವಾಗಿ ಲಭ್ಯವೋ
ಎಲ್ಲಿ ಜಗತ್ತನ್ನು ಸಂಕುಚಿತ ಮನೋಭಾವಗಳು ಚಿಕ್ಕ ಚಿಕ್ಕ ಹೋಳುಗಳಾಗಿ ತುಂಡರಿಸಿಲ್ಲವೋ
ಎಲಿ ಶಬ್ದಗಳು ಸತ್ಯದ ಆಳದಿಂದ ಹೊರಹೊಮ್ಮುವವೋ
ಎಲ್ಲಿ ನಿರಂತರ ದಣಿವಿಲ್ಲದ ತೊಡಗುವಿಕೆ ತನ್ನ ಬಾಹುಗಳನ್ನು ಪರಿಪೂರ್ಣತೆಯತ್ತ ಚಾಚಿರುವುದೋ
ಎಲ್ಲಿ ಸ್ವಚ್ಚಂದ ಆಲೋಚನೆಗಳು ಮರಳಿಗಾಡಿನ ನಿರ್ಜಿವ ಮರಳಲ್ಲಿ ದಾರಿ ತಪ್ಪಿಲ್ಲವೋ
ಎಲ್ಲಿ ಮನಸ್ಸುಗಳನ್ನು ನೀನು ವಿಸ್ತೃತ ಆಲೋಚನೆ ಹಾಗೂ ಕ್ರಿಯೆಗಳತ್ತ ಒಯ್ಯುವೆಯೋ
ಅಂತಹ ಒಂದು ಸ್ವಚ್ಚಂದ ಸ್ವರ್ಗದಲ್ಲಿ ಓ ತಂದೆಯೇ
ನನ್ನ ಜಗತ್ತು ಕಣ್ಣು ತೆರೆಯಲಿ
ಗುರುದೇವ ರವೀಂದ್ರನಾಥ ಟಾಗೋರ
4 comments:
ಮಾಲತಿ ಅಕ್ಕ, ಕಾರಣಾಂತರಗಳಿಂದ ಸುಮಾರು 3 ವರ್ಷದ ನಂತರ ನಾನು ನಿಮ್ಮ ಬ್ಲಾಗನ್ನು ಓದುತ್ತಿದ್ದೇನೆ. ನಿಮ್ಮ short filmನ್ನು ನೋಡಿ ತುಂಬಾ ಖುಷಿಯಾಯಿತು. ಒಳ್ಳೆಯ ಚಿತ್ರೀಕರಣ, ಸಂಗೀತ ಮತ್ತು ಸಂಕಲನ.ರೈಲಿನಲ್ಲಿ ಚಿತ್ರೀಕರಣ ಮಾಡಿದ ನಿಹಾಳ idea ಮೆಚ್ಚಬೇಕಾದದ್ದು.ನೀವು ಅನುವಾದ ಮಾಡಿದ ರವೀಂದ್ರನಾಥ ಟಾಗೋರರ ಸಾಲುಗಳು ಇಷ್ಟವಾಯಿತು. Watch my daughter's dance on google by searching Sahithya's nruthya lahari, shooted, directed and edited by me.
thank you Chandrashekar avare!! i thought u were finally bored of my blog. :-) will search for the link u mentioned.
thanks for the nice words on Niha's short film
:-)
malathi S
"ರಬೀಂದ್ರನಾಥ ಟಾಗೂರರ ಕವನವನ್ನು ಕನ್ನಡಕ್ಕೆ ಅನುವಾದ ಮಾಡಿದ ಬಿ. ಎಂ. ಶ್ರೀ "ಇಂಗ್ಲಿಷ್ ಗೀತೆಗಳು" ಎಂಬ ಪುಸ್ತಕದಲ್ಲಿ ಹೊರತಂದಿದ್ದರು.
ಕರುಣಾಳು ಬಾ ಬೆಳಕೆ....... ( ಶ್ರೀಮತಿ ಎಮ್. ಡಿ. ಪಲ್ಲವಿ ಹಾಡಿದ್ದು ಕೇಳಿ:- https://www.youtube.com/watch?v=2Ao6a9ZQVvE
<>
ಎರಡನೇ ಅನುವಾದ
ಶ್ರೀಮತಿ ಶೀಲಾ ನಾಯಕರು ಹೇಳಿದಂತೆ:-
http://teredamanasinaputagalu.blogspot.in/2013/02/where-mind-is-without-fear.html
ಹಾಗೆಯೇ, ದಕ್ಷಿಣ ಕನ್ನಡದ ಎಮ್. ಎನ್. ಕಾಮತರೂ ( ಮುಂಡ್ಕೂರು ನರಸಿಂಗ ಕಾಮತ್‌ರವರು ) ಅನುವಾದಿಸಿದ್ದಾರೆ. ಮಂಗಳೂರಿನ ಪ್ರಸಿದ್ದ ಕೆನರಾ ಹೈಸ್ಕೂಲಿನಲ್ಲಿ ಇದನ್ನು ಶಾಲಾ ಗೀತೆಯನ್ನಾಗಿ ಮಾಡಿದ್ದಾರೆ ಮತ್ತು ವಿದ್ಯಾರ್ಥಿಗಳು ದಿನವೂ ಇದನ್ನು ಹಾಡುವದನ್ನು ಕಡ್ಡಾಯ ಮಾಡಲಾಗಿದೆ.
ಕೆನರಾ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ೧೦ ವರ್ಷವೂ ನಿತ್ಯವೂ ಹಾಡಿದ ಗೀತೆಯಿದು. ಇಂದಿಗೂ ಆಗಾಗ ಹಾಡುತ್ತಲೇ ಇರುವ ಅತ್ಯಂತ ಪ್ರಿಯ ಹಾಡು ಎನ್ನುತ್ತಾರೆ ಶ್ರೀಮತಿ ಶೀಲಾ ನಾಯಕರು.
ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ
ಎಲ್ಲಿ ಮನೆಯೊಕ್ಕಟ್ಟು ಸಂಸಾರ ನೆಲೆಗಟ್ಟು
ಧೂಳೊಡೆಯದಿಹುದೊ ತಾನಾನಾಡಿನಲ್ಲಿ
ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿಮಾತು
ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ
ಎಲ್ಲಿ ದಣಿವಿರದ ಸಾಧನೆಯು ಸಫಲತೆಯ ಕಡೆಗೆ
ತೋಳ ನೀಡಿಹುದೊ ತಾನಾನಾಡಿನಲ್ಲಿ
ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು
ಕಾಳು ರೂಢಿಯ ಮರಳೊಳಿಂಗಿ ಕೆಡದಲ್ಲಿ
ಎಲ್ಲಿ ನೀನೆಮ್ಮ ಚಿಂತನವನನುದ್ಯಮವ ಸುವಿ
ಶಾಲತೆಯ ಪೂರ್ಣತೆಗೆ ಮುನ್ನಡೆಸುವಲ್ಲಿ
ಅಲ್ಲಿಯಾ ಬಂಧನರಹಿತ ಸುಖದ ಸ್ವರ್ಗದಲ್ಲಿ
ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ.
-ಎಮ್. ಎನ್. ಕಾಮತ್
<>
ಮೂರನೇ ಅನುವಾದ
ತ್ರಿವೇಣಿಯವರ (ಕಾದಂಬರಿಕಾರ್ತಿ ಅಲ್ಲ) ತುಳಸಿವನದಲ್ಲಿ, ಎಚ್.ಎಸ್.ವೆಂಕಟೇಶಮೂರ್ತಿ ಅವರ ಅನುವಾದ ನೋಡಬಹುದು:
ಎಲ್ಲಿ ಅರಿವಿಗೆ ಇರದೋ ಬೇಲಿ .... : http://www.tulasivana.com/?p=315
-- shree kar
thank you Shreekar!! both Triveni and Sheila are my friends. :-) yes all the translations are very good.
karunaLu baa beLake is 'lead kindly light, amidst encircling gloom'!!!
:-)
malathi S
Post a Comment