ಮೊನ್ನೆ ಬ್ಯಾಂಕ್ ಗೆ ಹೋಗಿದ್ದೆ. ವಾಪಸ್ ಬರ್ತಾ ಚೆಂದದ ಚಿಟ್ಟೆಯೊಂದು ನನ್ನ ಕೈ ಮೇಲೆ ಕುಳಿತುಕೊಂಡಿತು. ಫೂ ಅಂದೆ, ಫಾ ಅಂದೆ, ಊಹೂಂ ಅದು ನನ್ನ ಕೈ ಬಿಡಲೊಲ್ಲದು. ನಿಧಾನಕ್ಕೆ ಅದರ ಪಕ್ಕ ಎತ್ತಿ ಗಾಳಿಯಲ್ಲಿ ಬಿಟ್ಟೆ, ಆದರೆ ಪುನ್: ಕೈ ಹಿಡಿಯಿತು ಚಿಟ್ಟೆ. ಹೊರಗಿನಿಂದ ಕಪ್ಪು , ಕಿತ್ತಳೆ ಬಣ್ಣವಾದರೆ ಅದರ ಒಳ ಪದರು ಗಾಢ ನೀಲಿ ಬಣ್ಣ. ಅಷ್ಟು ಚೆಂದದ ಚಿಟ್ಟೆ ನಾನು ನೋಡಿರಲಿಲ್ಲ. ಅದನ್ನು ಹಾರಿಸಲು ನಾನು ಪಟ್ಟ ಕಸರತ್ತು ನೋಡಿ ದಾರಿಹೋಕರಿಗೆ ಮೋಜಿನ ದೃಷ್ಯ. ನಾನು ಕುಸ್ತಿ ಮಾಡಿ ಸೆಲ್ ಫೋನ್ ಅನ್ನು ಬ್ಯಾಗ್ ನಿಂದ ಹೊರ ತೆಗೆದು ಅದರ ಫೋಟೊ ತೆಗೆದೆ. ಕೊನೆಗೆ ರಸ್ತೆ ಬದಿಯ ಮನೆಯೊಂದರ ಗಿಡದಲ್ಲಿ ಬಿಟ್ಟ ನಂದಿಬಟ್ಟಲು ಹೂ ನೋಡಿ, ಚಿಟ್ಟೆಯ ಪಂಖವನ್ನು ನಾಜೂಕಾಗಿ ಎತ್ತಿ ಆ ಹೂವಿನ ಸುಪರ್ದಿಯಲ್ಲಿಟ್ಟೆ.
ಮನೆಗೆ ಬಂದು ವಾಟ್ಸಪ್ ನಲ್ಲಿ ಫೋಟೊ ತಮ್ಮ ತಂಗಿಯಂದಿರಿಗೆ ರವಾನಿಸಿದೆ
ತಂಗಿ: it's a sign of good luck ಅಕ್ಕ , ಅಂದ್ಲು
ತಮ್ಮ: ನಿನ್ನ ಪೌಡರ್ ಅಥವಾ perfume ಪರಿಮಳಕ್ಕೆ ನಿನ್ನ ಕೈ ಮೇಲೆ ಕೂತಿರಬಹುದು.
ರಾಯರು: ಹ್ಮ್ಮ್ಮ್ಮ್ಮ್ಮ್ಮ್ಮ್ಮ್
ಮಾಲವಿಕಾ: ನೀನು ತೊಟ್ಟ ಬಟ್ಟೆಯ ತೋಳಿನ ಮೇಲೆ ಹೂವಿನ ಕಸೂತಿ ಕಂಡು ಅದನ್ನು ನಿಜವಾದ ಹೂ ಎಂದು ನಂಬಿ ನಿನ್ನ ಬಳಿ ಬಂದಿರಬೇಕು ಅಂದ್ಲು.
ಹಾಗೇ ಮನೆಗೆ ಬಂದ ಮೇಲೆ ಸ್ನೇಹಿತೆ ಡಾಕ್ಟರ್ ನಾಗಮಣಿ ಕಳುಹಿಸಿದ ಚೆಂದದ ಹಳದಿ ಹೂ ಗಳ ಫೋಟೊ ನೋಡಿ ನನ್ನ ಚಿಟ್ಟೆಯನ್ನು ಇ ಮೈಲ್ ನಲ್ಲಿ ಮಧ್ಯಪ್ರದೇಶಕ್ಕೆ ಮಾತ್ರವಲ್ಲದೆ ಬೆಂಗಳೂರಿನ ಜ್ಯೋತಿ, ವೇದ , ಹೈದರಾಬಾದಿನ ಸಂಧ್ಯ ಹಾಗೂ ಯು ಎಸ್ ನಲ್ಲಿರುವ ಶ್ರೀವತ್ಸ ಜೋಶಿಯವರಿಗೆ ಕಳುಹಿಸಿಕೊಟ್ಟೆ. ಡಾ. ನಾಗಮಣಿ ಅವರ ಕೆಲಸದ ಮಧ್ಯ ಒಂದು ಚೆಂದದ ಕವನ ಪೋಣಿಸಿ ಕೊಟ್ಟಿದ್ದಾರೆ.
ಇಲ್ಲಿದೆ ಕವನ. ಅದನ್ನು ಓದಿ ಈ ಕವನ ಯಾವ ಕವನದ ಧಾಟಿಯನ್ನು ಹೋಲುತ್ತೆ ಅಂತ ಹೇಳಿ ಬಹುಮಾನ ಪಡೆಯಿರಿ. ಬಹುಮಾನ ಡಾ. ನಾಗಮಣಿ ಕೊಡುತ್ತಾರೆ. :-) :-)
ಚಿಟ್ಟೆಯೊಂದು ಹಾರಿಬಂದು
ಕೈಯ ಮೇಲೆ ಕುಳಿತುಕೊಂಡು
ಒಡತಿಯಂದ ಚಂದವನ್ನು ಹೊಗಳತೊಡಗಿತು
ನಿನ್ನ ಮುಖವು ಎಷ್ಟು ಅಂದ
ನಿನ್ನ ದನಿಯದೆಷ್ಟು ಚಂದ
ನಿನ್ನ ಪೌಡರ್ ಪರ್ಫ್ಯೂಮ್ ಗಂಧ ಎಂದು ಹೇಳಿತು
ನಾನು ಹೊರಗೆ ಹಾರಲೊಲ್ಲೆ
ನಿನ್ನ ಬಿಟ್ಟು ಹೋಗಲೊಲ್ಲೆ
ನಿನ್ನ ದಿರಿಸ ನಕಲಿ ಹೂವೆ ಅಸಲಿ ಎನಗೆ ಎಂದಿತು
ನಾಚಿ ಕೆಂಪಗಾಗಿಬಿಟ್ಟೆ
ಹೃದಯವದಕೆ ಕೊಟ್ಟುಬಿಟ್ಟೆ
ಕಪ್ಪು ಕೆಂಪು ಚೆಲುವೆಯನ್ನು ಪಟದಿ ಹಿಡಿದು ಅಡಗಿಸಿಟ್ಟೆ
ಮೂಕಳಾಗಿ ನೋಡುತಿದ್ದೆ
ಅನುಬಂಧವ ಸವಿಯುತಿದ್ದೆ
ಮೃದುಲ ಕೋಮಲ ಜೀವವಿದು ನನ್ನಂತೆ; ಬೇಗ ಎಚ್ಚೆತ್ತೆ
ಗಿಡದಿ ಅದನು ಬಿಟ್ಟುಬಿಟ್ಟೆ
ಚಿಟ್ಟೆ ಚಿಟ್ಟೆ, ಏಕೆ ಸಿಟ್ಟೆ?
ಎನ್ನ ಹೃದಯದಾಳದಲ್ಲಿ ಕಳ್ಳಿ ನೀನು ನಿಂತುಬಿಟ್ಟೆ!
ನಂತರ ಮಿತ್ರ ಶ್ರೀವತ್ಸ ಜೋಶಿಯವರು ಕವಿತೆಯನ್ನು ಅಲ್ಲಲ್ಲಿ ಬದಲಾಯಿಸಿದ್ದಾರೆ ಹೀಗೆ
ಚಿಟ್ಟೆಯೊಂದು ಹಾರಿಬಂದು
ಕೈಯ ಮೇಲೆ ಕುಳಿತುಕೊಂಡು
ಒಡತಿಯಂದ ಚಂದವನ್ನು ಹೊಗಳತೊಡಗಿತು
ನಿನ್ನ ಮುಖವು ಎಷ್ಟು ಅಂದ
ನಿನ್ನ ದನಿಯದೆಷ್ಟು ಚಂದ
ನಿನ್ನ ಪೌಡರ್ ಪರ್ಫ್ಯೂಮ್ ಗಂಧ ಎಂದು ಹೇಳಿತು
ನಾನು ಹೊರಗೆ ಹಾರಲೊಲ್ಲೆ
ನಿನ್ನ ಬಿಟ್ಟು ಹೋಗಲೊಲ್ಲೆ
ನಿನ್ನ ದಿರಿಸ ನಕಲಿ ಹೂವೆ ಸಾಕು ಎಂದಿತು [have removed two words and put one replacement word.]
ನಾಚಿ ಕೆಂಪಗಾಗಿಬಿಟ್ಟೆ
ಹೃದಯವದಕೆ ಕೊಟ್ಟುಬಿಟ್ಟೆ
ಕಪ್ಪು ಕೆಂಪು ಚೆಲುವೆಯನ್ನು ಕ್ಲಿಕ್ಕತೊಡಗಿದೆ [have repaired as you can see]
ಮೂಕಳಾಗಿ ನೋಡುತಿದ್ದೆ
ಭಾವಬಂಧ ಸವಿಯುತಿದ್ದೆ [have slightly changed the first word]
ನನ್ನ ಹಾಗೆ ಇದುವು ಕೂಡ ಎಂದುಕೊಂಡೆನು [drastically changed]
ಗಿಡದಿ ಅದನು ಬಿಟ್ಟುಬಿಟ್ಟೆ
ಚಿಟ್ಟೆ ಚಿಟ್ಟೆ, ಏಕೆ ಸಿಟ್ಟೆ?
ನನ್ನ ಹೃದಯದದಲ್ಲಿ ನೀನು ನಿಂತುಬಿಟ್ಟಿಹೆ [have changed as you can see]
ಇದನ್ನು ನೋಡಿ ನಾಗಮಣಿ (ರಾತ್ರಿ ಡ್ಯೂಟಿ ಮುಗಿಸಿಕೊಂಡು ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳುವುದನ್ನು ಬಿಟ್ಟು ಆ ಪದ್ಯವನ್ನು ಇನ್ನಷ್ಟು ಸೊಗಸಾಗಿಸಿದ್ದಾರೆ ...
ಚಿಟ್ಟೆಯೊಂದು ಹಾರಿಬಂದು
ಕೈಯ ಮೇಲೆ ಕುಳಿತುಕೊಂಡು
ಒಡತಿಯಂದ ಚಂದವನ್ನು ಹೊಗಳತೊಡಗಿತು
ನಿನ್ನ ಮುಖವು ಎಷ್ಟು ಅಂದ
ನಿನ್ನ ದನಿಯದೆಷ್ಟು ಚಂದ
ನಿನ್ನ ಪೌಡರ್ ಪರ್ಫ್ಯೂಮ್ ಗಂಧ ಎಂದು ಹೇಳಿತು
ನಾನು ಹೊರಗೆ ಹಾರಲೊಲ್ಲೆ
ನಿನ್ನ ಬಿಟ್ಟು ಹೋಗಲೊಲ್ಲೆ
ನಿನ್ನ ದಿರಿಸ ನಕಲಿ ಹೂವೆ ಸಾಕು ಎಂದಿತು
ನಾಚಿ ಕೆಂಪಗಾಗಿಬಿಟ್ಟೆ
ಹೃದಯವದಕೆ ಕೊಟ್ಟುಬಿಟ್ಟೆ
ಕಪ್ಪು ಕೆಂಪು ಚೆಲುವೆಯನ್ನು ಪಟದಿ ಹಿಡಿದೆನು
ಮೂಕಳಾಗಿ ನೋಡುತಿದ್ದೆ
ಭಾವಬಂಧ ಸವಿಯುತಿದ್ದೆ
ಮೆದುವು ಇದುವು ನನ್ನ ಹಾಗೆ ಎಂದುಕೊಂಡೆನು
ಗಿಡದಿ ಅದನು ಬಿಟ್ಟುಬಿಟ್ಟೆ
ಚಿಟ್ಟೆ ಚಿಟ್ಟೆ, ಏಕೆ ಸಿಟ್ಟೆ?
ಕಳ್ಳಿ ನೀನು ಎನ್ನ ಮನದಿ ನಿಂತುಬಿಟ್ಟಿಹೆ!
Proud of my talented friends. ನಾನಂತೂ ಖುಶಿಯಿಂದ ಆ ಚಿಟ್ಟೆಗಿಂತ ಜಾಸ್ತಿನೇ ಹಾರಾಡ್ತಾ ಇದ್ದೀನಿ. ನಿಮಗೆ ಇಷ್ಟವಾಯ್ತಾ?? :-)



10 comments:
Just lovely! Chitteyashte chandada Malathi+chitte bagge ashte chandada kavana ponisida Nagamaniyavarige HATS OFF! adannu correct maadida Head Master Srivathsa Joshiyavarige kooda!
ಮಾಲತಿ, ನಾನು ಸುಮ್ಮನೆ ಖುಷಿಗಾಗಿ ಬರೆದಿದ್ದಕ್ಕೆ ನೀವು ದೊಡ್ಡ ಪಟ್ಟ ಕಟ್ಟಿದ್ದೀರಿ ! ಕಷ್ಟಪಟ್ಟು ಆ ಚಿಟ್ಟೆಯ ಸುಂದರ ಫೊಟೋ ತೆಗೆದಿದ್ದಕ್ಕೆ ನಿಮ್ಮನ್ನು ಮೊದಲು ಅಭಿನಂದಿಸಬೇಕು.
ಬ್ಲಾಗಲ್ಲಿ ಪ್ರಕಟಿಸಿದ ನಿಮಗೂ, ಸೂಕ್ತ ಸಲಹೆಗಳನ್ನು ಕೊಟ್ಟ ಜೋಶಿಯವರಿಗೂ, ತಾಳ್ಮೆಯಿಂದ ಓದಿದವರೆಲ್ಲರಿಗೂ ಮತ್ತು ಇಷ್ಟೆಲ್ಲಕ್ಕೂ ಕಾರಣವಾದ ಆ ಚಿಟ್ಟೆಗೂ ವಂದನೆಗಳು.
ಮಾಲತಿ ಅಕ್ಕ ಚಿಟ್ಟೆ ಅದರ ಮೇಲಿನ ಕವನಗಳು ಅದರ ಬಗ್ಗೆ ನಿಮಗಿರುವ ಕಾಳಜಿ ಎಲ್ಲಾ ಸೂಪರ್ ...ಇಷ್ಟ ಆಯ್ತು .
ನಿಮ್ಮೆಲ್ಲರ ಪಾಲುದಾರಿಕೆಯಲ್ಲಿ ಈ ಒಂದು ಪೋಸ್ಟ್ ಹುಟ್ಟಿತು ನಾಗಮಣಿ & SJ. ಥ್ಯಾಂಕ್ಯೂ ಜ್ಯೋತಿ. ಮೈಲ್ ಮೂಲಕ ಬೆನ್ನು ತಟ್ಟಿದ ಸಂಧ್ಯಾ, ವೇದಾ ಗೂ ದೊಡ್ಡ ಥ್ಯಾಂಕ್ಸ್.
:-)
ಎಮ್ ಎಸ್
thank you Suma. Seeing u here after a long time. hEgiddeeri?
ಮಾಲತಿ ಅಕ್ಕ
fine akka :) nAnu illige barta idde comment madodikke svalpa somaritana ashte :)
Prasavannu 1911 ralle bittidheve eiga mathe yake balasabeku. Prasave ei kavanda vixexa.
Ha ha Malthi konegu chitte Ben hatti blogige Hari bande. Odi kushiyaytu veda
Thank you Antony tamma!!
tummi blog update karni. swalpa vajjle hanhve :-)
the purpose of putting this poem is just to share that my friend Nagamani who is a busy doctor in Madhyapradesh, wrote this poem in the shortest possible time matching it with 'kaageyondu haaribandu' by si.pha kaTTimani. ene hELi prasa idre nenapallidodu sulabha anta nanage annisutte. tummi kitte mhaNtaati??:-) once again thank you
Thanks Veda.Love you :-)
malathi S
Chennaagide chiTTe kathe Malathi. By the way, the poem similar to chiTTe poem is about crow and Fox?
ಹೌದು ರಾಧಿಕ. ಸರಿಯಾಗಿ ಊಹಿಸಿದಿರಿ. ಮರುಳ ಕಾಗೆ ಬರೆದವರು ಸಿ.ಫ. ಕಟ್ಟಿಮನಿ.
:-)
ಮಾಲತಿ ಎಸ್.
Post a Comment