February 10, 2014

ಬಹುಮಾನ ಬಂತು

ಅಂಕಿತಾ pustaka-ಚುಕ್ಕುಬುಕ್ಕು ಜಾಲತಾಣ ಇವರ ಸಹಭಾಗಿತ್ವದಲ್ಲಿ ನಡೆದ ಮುಖಪುಟ ಶಿಖಾರಿ ಸ್ಪರ್ಧೆಯಲ್ಲಿ ನಿಹಾರಿಕಾಳಿಗೆ ಎರಡನೆ ಬಹುಮಾನ ಬಂದಿದ್ದು ಈ ಮೊದಲೆ ನಿಮ್ಮೊಂದಿಗೆ ಶೇರ್ ಮಾಡಿದ್ದೆ. ಈ ಸ್ಪರ್ಧೆ ನವೆಂಬರ್ ನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಅದೇ ದಿನ ಚುಕ್ಕುಬುಕ್ಕು ತಾಣದ ಮೊದಲನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ನಡೆದಿತ್ತು. ಯಶವಂತ ಚಿತ್ತಾಲರ 'ಶಿಕಾರಿ' ಕಾದಂಬರಿಯನ್ನು ಓದಿ ಅದರಿಂದ ಸ್ಪೂರ್ತಿ ಪಡೆದು ಆ ಪುಸ್ತಕಕ್ಕೆ ಮುಖಪುಟ ರಚಿಸುವ ಸ್ಪರ್ಧೆ ಅದಾಗಿತ್ತು. ಓದದೆ ಇರುವವರಿಗೆ ಓದುವ ಇನ್ಸ್ಪಿರೇಶನ್ ಹಾಗೂ ಓದಿರುವವರಿಗೆ ಮರು ಓದಿನ ಒಂದು ನೆವ, ಅಥವಾ ಸದಾವಕಾಶ ಎನ್ನಬಹುದೇನೋ. ನಾನು ನಿಹಾರಿಕಾ ಅಂತು 100% involve ಆಗಿ ಇದರಲ್ಲಿ ಭಾಗವಹಿಸಿದ್ವಿ.
ಕಾರ್ಯಕ್ರಮಕ್ಕೆ ಆಗಮಿಸಿದ ಎಮ್ ಎಸ್ ಶ್ರೀರಾಮ, ಶ್ರೀಕಾಂತ ಜತೆ ಮಾತಿನ ಮಧ್ಯೆ ಅವರು ಮುಂಬೈ ಗೆ ಹೋಗಿದ್ದು, ಶ್ರೀ ಯಶವಂತ ಚಿತ್ತಾಲರನ್ನು  ಭೇಟಿಯಾಗಿದ್ದು. ಅವರಿಗೆ ಕವರ್ ಪೇಜ್ ಗಳನ್ನು ತೋರಿಸಿದ್ದು ಎಲ್ಲ ಹಂಚಿಕೊಂಡಾಗ ನಾನಂತು, ನಾನೇ ಚಿತ್ತಾಲರನ್ನು ಭೇಟಿಯಾದಷ್ಟು thrill ಆಗಿಬಿಟ್ಟೆ. ಅವರು ನಿಹಾಳನ್ನು 'ಶಿಕಾರಿ' ಪುಸ್ತಕ ಓದಿ ಕವರ್ ಪೇಜ್ ಡಿಸೈನ್ ಮಾಡಿದ್ದಾ ಅಂತ ಕೇಳಿದಾಗ 'ಹೌದು' ಅಂತ ಹೇಳಲು ಅವಳಿಗೆ ಎಷ್ಟು ಖುಶಿ ಆಯ್ತು ಗೊತ್ತಾ??!
ನಿನ್ನೆ ಅಂಕಿತದ star studded ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮೊದಲೆರಡು ಸ್ಥಾನ ಪಡೆದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಬಹುಮಾನ ಕ್ಯಾಶ್ ಪ್ರೈಜ್ ರೂಪದಲ್ಲಿ. ಅದಕ್ಕೆ ಡಿಸೈನ್ ಮಾಡಿದ ಎನ್ವಲೋಪ್ ಮತ್ತು ಜತೆ ಕೊಟ್ಟಿರುವ ಕಾರ್ಡ್ ನನಗೆ ತುಂಬಾ ಆಪ್ತ ಎನಿಸಿತು. ಅದಕ್ಕಾಗಿ ಮನೆ ಯ ಸಾಮಾನಿನ ಪ್ಯಾಕಿಂಗ್ ಗಡಿಬಿಡಿಯ ಮಧ್ಯೆ ಈ ಪೋಸ್ಟ್.


ಕಾರ್ಡ್ ಒಳಗಿನ ಒಕ್ಕಣೆ

ಪುನ: ನಾವು ಶಿಕಾರಿ ಓದಿದ್ದನ್ನು, ಕವರ್ ಪೇಜ್ ಮಾಡಿದ್ದನ್ನು ಅದನ್ನು ಎಂಜಾಯ್ ಮಾಡಿದ್ದನ್ನು ನೆನಪಿಸಿದಕ್ಕೆ ಚುಕ್ಕು ಬುಕ್ಕು ಮತ್ತು ಅಂಕಿತಾ ಗೆ ಥ್ಯಾಂಕ್ಸ್ ಹೇಳುತ್ತ

:-)

2 comments:

ವಿ.ರಾ.ಹೆ. said...

CONGRATULATIONS :)

ಮನಸು said...

naa nodide avatte chukubuku webnalli, nihage congrats heLi :)