ವೈನಾಡು ಟ್ರಿಪ್ ಗಿಂತ ಮುಂಚೆ ಒಂದು ಸಣ್ಣ ಡೈವರ್ಶನ್ (diversion)
ನಿನ್ನೆ ಆಕೃತಿ ಪುಸ್ತಕ, ರಾಜಾಜಿನಗರ, ಇಲ್ಲಿ ಪತ್ರಕರ್ತ, ಪರಿಸರ ಪ್ರೇಮಿ ಶ್ರೀ ನಾಗೇಶ ಹೆಗ್ಡೆ ಯವರೊಂದಿಗೆ ಮಾತು-ಕತೆ ಸಂವಾದ ಏರ್ಪಡಿಸಲಾಗಿತ್ತು.
ನನಗೂ ನಗರ ಜೀವನಕ್ಕೂ ಕೂಡಿ ಬರುವುದಿಲ್ಲ ಇತ್ತೀಚಿಗೆ. ನಿಜಕ್ಕೂ ತೀರ್ಥಹಳ್ಳಿಗೆ ಓಡಿಬಿಡೋಣ ಅನ್ನಿಸುತೆ. ಕೆಲವೊಮ್ಮೆ ನಾನು ಇಲ್ಲಿ ಮಿಸ್-ಫಿಟ್ (misfit) ಏನೋ ಅಂತ ಅನ್ನಿಸುತ್ತೆ. ಹಳ್ಳಿಗಳಲ್ಲಿ ನೀರು ಪಂಪ್ ಮಾಡುವ ಮೋಟಾರ್ ಓಡಿಸಲು ಕರೆಂಟ್ ಇಲ್ಲ. ಆದರೆ ಇಲ್ಲಿ ಬೆಂಗಳೂರಿನಂತಹ ಪೇಟೆಗಳಲ್ಲಿ ಬೇಕಾದಕ್ಕೂ ಬೇಡದ್ದಕ್ಕೂ ಲೈಟಿಂಗ್ ಗಳು, ನೀರಿನ ವೇಸ್ಟೇಜ್ ಎಲ್ಲ ನೋಡುವಾಗ ಯಾಕೋ ಕಳವಳ. ಶಾಪಿಂಗ್ ಕಾಂಪ್ಲೆಕ್ಸ್, ಮಾಲ್ ಗಳಲ್ಲಿ ಪ್ಲ್ಯಾಸ್ಟಿಕ್ ಕವರ್ ಗೆ ಈಗ ಚಾರ್ಜ್ ಮಾಡುತ್ತಾರೆ. ಅದರಿಂದಲಾದಲೂ ಪ್ಲ್ಯಾಸ್ಟಿಕ್ ಬಳಕೆ ಕಮ್ಮಿಯಾಗಬಹುದೆಂದು ನಾನು ಅಂದುಕೊಂಡರೆ, 'ನನಗೆ ನಾಲ್ಕು ಪ್ಲಾಸ್ಟಿಕ್ ಬ್ಯಾಗ್ ಬೇಕು ಅಂತ ಅದನ್ನು ಕೊಳ್ಳುವಾಗ ಬೀಗುವ ಜನರನ್ನು ಕಂಡು ನಾನಂತು ಸುಸ್ತು.
ಪರಿಸರದ ಬಗ್ಗೆ ತುಂಬ ಕಾಳಜಿ ಹೊಂದಿದ್ದಾರೆ ಶ್ರೀ ನಾಗೇಶ ಹೆಗಡೆಯವರು. ಅವರು ಬೆಂಗಳೂರಿನ ಕೆಂಗೇರಿ ಬಳಿಯ ಒಂದು ಪುಟ್ಟ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರ ಪ್ರಕಾರ ನಾವು ಪೇಟೆ ಜನರಿಂದ ಅಲ್ಲಿನ ಜನರ ತುಂಬಾ ತೊಂದರೆಗೀಡಾಗಿದ್ದಾರೆ ಎಂದರು. ಅದು ಹೇಗೆಂದರೆ ನಾವೆಲ್ಲ ನಮಗೆ ಬೇಡವಾದ ತಾಜ್ಯವನ್ನೆಲ್ಲ ಹೊತ್ತು ಅವರ ಹಳ್ಳಿಗೆ ವರ್ಗಾಯಿಸಿಬಿಡುದುತ್ತೇವಂತೆ.
ಮಕ್ಕಳಿಗೆ ಪರಿಸರದ ಬಗ್ಗೆ ಹೇಳಿಕೊಟ್ಟರೆ ಅವರು ಮುಂದೆ ಪ್ರಜ್ಞ್ಯಾವಂತ ಪ್ರಜೆಗಳಾಗಿ ಬೆಳೆಯುತ್ತಾರೆಂದು ಅವರು ಅಭಿಪ್ರಾಯಪಟ್ಟರು ಅಲ್ಲದೆ ಮೀಡಿಯಾದವರು ಹಳ್ಳಿಗಳನ್ನು, ಗ್ರಾಮೀಣ ಜನರ ಹೇಳಿಕೆಯನ್ನು ಅಲಕ್ಷಿಸುತ್ತಾರೆಂದೂ ಹೇಳಿದರು.
ಬಹಳ ರಶ್ ಆಗಬಹುದೆಂದು ನಾನು ಮಕ್ಕಳು ಬೇಗ ಹೊರಟಿದ್ದೆವು. ಆದರೆ ನಾಗೇಶ ಹೆಗಡೆಯವರು ಆಗಲೇ ಅಲ್ಲಿ ತಲುಪಿ ಆಗಿತ್ತು. ಎಟೆಂಡ್ ಆಗಿದ್ದ ಜನರು ಕೇವಲ 20 ಮಂದಿ. ಮೊದಲಿಗೆ ಸಂಖ್ಯೆ ಕಂಡು ಬೇಜಾರಾದರೂ ಆಮೇಲೆ ಅದು ಇಂಟಿಮೇಟ್ ಹಾಗೂ ಅಷ್ಟೆ ಇದ್ದದ್ದು ಒಳ್ಳೆದಾಯ್ತು ಅನ್ನಿಸಿತು. ಯಾವುದೇ ಟಾಪಿಕ್ ಇಲ್ಲದಿದ್ದರಿಂದ ಲೋಕಾಭಿರಾಮದಿಂದ ಮಾತನ್ನು ಶುರು ಮಾಡಿದರು ಹೆಗಡೆಯವರು.
ಇಲ್ಲಿದೆ ಒಂದೆರಡು ಚಿತ್ರಗಳು, ಶ್ರೀಕಾಂತ ಫೇಸ್ ಬುಕ್ ಎಕೌಂಟ್ ನಿಂದ ನಾನು ಕದ್ದಿದ್ದು. :-)
ವಿಜಯವಾಣಿಯಲ್ಲಿ ರಿಪೋರ್ಟ್ ಬರೆದಿದ್ದವರು ನಯನಾ
ಈಗ ವಯ್ನಾಡು ಟ್ರಿಪ್ ಚಿತ್ರಗಳು.
ಆಫಿಸ್ ನ ಕೆಲವು ಜನ ಸೇರಿ ಬಸ್ ಮಾಡಿಕೊಂಡು ಮೂರು ದಿನ ಕೇರಳದ ವೈನಾಡಿಗೆ ಹೋಗಿ ಬಂದ್ವಿ
ವಯ್ನಾಡ್ ಅಂದ್ರೆ ಬತ್ತ ಬೆಳೆಯುವ ನಾಡು ಅಂತ ನಮ್ಮ ಗೈಡ್ ಹೇಳಿದರು.
ಕೇರಳದಲ್ಲಿ ಒಂದಂಶವನ್ನು ಮೆಚ್ಚಲೇ ಬೇಕು ಅವರ ಪರಿಸರ ಪ್ರೇಮ. ಅದಕ್ಕೆ ಆಕೃತಿಯಲ್ಲಿನ ಕಾಯ್ರಕ್ರಮ ಇಲ್ಲೇ ನಮೂದಿಸಿದೆ. ಕಾನೂನೂ ಮಾಡುವುದಲ್ಲದೇ ಅದರ ಪರಿಪಾಲನೇಯಲ್ಲೂ ತುಂಬಾ strict. ನಮ್ಮ ಕರ್ನಾಟಕದಲ್ಲಿ ಯಾಕೆ ಹಾಗೆ ಮಾಡಲಾಗುವುದಿಲ್ಲ? ಇಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಅನ್ನುವ ಬೋರ್ಡ್ ಕೆಳಗಡೆನೇ ಹಲವಾರು ಪ್ಲ್ಯಾಸ್ಟಿಕ್ ಬಾಟಲ್ ಗಳು, ತಿಂಡಿಯ ವ್ರ್ಯಾಪರ್ ಎಲ್ಲ ಬಿದ್ದಿರುತ್ತವೆ. :-(
ತುಂಬಾ ಎಂಜಾಯ್ ಮಾಡಿದೆವು ನಮ್ಮ ಟ್ರಿಪ್. ಆಫಿಸ್ ನವರಿರೂ ಒಂದು ಬ್ರೇಕ್ ಬೇಕಿತ್ತು.
ಜನವರಿ19 ರ ರಾತ್ರಿ ನಾವು ಹೊರಟಿದ್ದು. ರಾತ್ರಿ 11.30 ಗೆ ನಮ್ಮ ಸವಾರಿ ಹೊರಟಿತು. ಬಸ್ಸ್ ನವರೆಲ್ಲ ನಿದ್ರೆಗೆ ಜಾರಿದರೆ ನಾನು ಕಿಟಕಿ ಫುಲ್ ತೆರೆದು, ಚಂದ್ರನ ಬೆಳಕಿನಲ್ಲಿ ಹಾದು ಹೋಗುವ ದಾರಿ, ಗಿಡ ಗಂಟಿಗಳನ್ನು ನೋಡುತ್ತ ಸಮಯ ಕಳೆದೆ. ಸೆಲ್ಲ್ ಫೋನ್ ನಲ್ಲಿ ತಮ್ಮ ತಂಗಿಯರ ಜತೆ ಅವರು ಮಲಗುವ ತನಕ ವಾಟ್ಸಪ್ ನಲ್ಲಿ ಸಮಯ ಕಳೆದೆ, ಸ್ವಲ್ಪ ಚಿತ್ರಗಳನ್ನು ಬರೆದೆ. ಆನೆಗಳೇನಾದರೂ ನೋಡಲು ಸಿಗಬಹುದೆಂದುಕೊಂಡೆ. ಆದರೆ ಆನೆಯ ದರ್ಶನ ವಾಗಲಿಲ್ಲ. ಆದರೆ ಬೆಳಿಗ್ಗೆ ಬೆಳಿಗ್ಗೆ ಎಲ್ಲರೂ ಸಕ್ಕರೆ ನಿದ್ದೆಯಲ್ಲಿದ್ದಾಗ ನನಗೋಸ್ಕರ್ ಊದಯಿಸಿದಾನೆಂಬಂತೆ ಸೂರ್ಯ ತನ್ನ ಚಂದದ ಮುಖವನ್ನು ತೋರಿಸಿದಾಗ, ನಮ್ಮ ಬಸ್ ಅನ್ನು ಆಸಕ್ತಿಯಿಂದ ನೋಡುವ ಜಿಂಕೆ ಹಿಂಡು ನ್ನು ಕಂಡಾಗ ಎಗ್ಸೈಟ್ ಆಗಿ ಯಾರು ಎದ್ದಿದ್ದಾರೆ ಅಂತ ನೋಡಿದಾಗ, ಯಾರೂ ಎದ್ದಿರಲಿಲ್ಲವಾದ್ದರಿಂದ ನನ್ನಷ್ಟಕ್ಕೆ ನಾನೆ ಎಂಜಾಯಿಸಿದೆ. :-)
ದ್ರಾವಿಡ ಪ್ರಾಣಾಯಾಮ ಮಾಡಿ ತೆಗೆದ good morning ಮಾಲದಿ ಅನ್ನುತ್ತಿರುವ ಸೂರ್ಯನ ಚಿತ್ರ :-)
ರಸ್ತೆ ಮೇಲೆ ಹರಿದಾಡುವ ಹಾವುಗಳು ಸುಮಾರು ಸಿಕ್ಕಿ ನಮ್ಮ ಬಸ್ ನವ ಬ್ರೇಕ್ ಹಾಕಿದಾಗ ತಲೆಗೆ ಸ್ವಲ್ಪ ಏಟಾಯಿತು. :-)
ಮೊದಲಿಗೆ ನಾವು ತಲುಪಿದ್ದು ತಿರುನೆಲ್ಲಿಗೆ.
ಅಲ್ಲಿಯ ದೇವಸ್ಥಾನದ ಗೆಸ್ಟ್ ಹೌಸ್ ನಲ್ಲಿ ಸ್ನಾನ ಮಾಡಿ ವಿಷ್ಣು ದೇವರ ಗುಡಿ, ಪಾಪನಾಶಿನಿ ನೋಡಿಕೊಂಡು ಬ್ರೇಕ್ ಫಾಸ್ಟ್ ಮುಗಿಸಿ ಅಲ್ಲಿಂದ ಕುರುವಾ ಐಲೆಂಡ್ ಗೆ ಭೇಟಿ.
ದೇವಸ್ಥಾನದಲ್ಲಿ ಫೋಟೊ ತೆಗೆಯುವುದು ನಿಶಿದ್ದವಾಗಿತ್ತು. ಆದ್ದರಿಂದ ನಾನು ದೇವಸ್ಥಾನದ ಆವರಣದಲ್ಲಿರುವ ಪತ್ರೊಡೆ ಎಲೆಗಳೊಂದಿಗೆ ಫೋಟೊ ತೆಗೆಸಿಕೊಂಡೆ...konkanis Zindabad!! :-)
ಪಾಪನಾಶಿನಿಗೆ ಹೊರಡುವ ಮುನ್ನ ಒಂದು ಗ್ರೂಪ್ ಫೋಟೊ, ನಾಲ್ಕು ಜನ ಮಿಸ್ಸಿಂಗ್
ಚೆಂದದ ಬಣ್ಣ್ದ ತಾವರೆ
ಪಾಪನಾಶಿನಲ್ಲಿದ್ದದ್ದು ಸಣ್ಣ ನೀರಿನ ಒರತೆ ಅಷ್ಟೆ. ಆನೆಗಳು ಸತ್ತಾಗ ಅದರ ಅಂತ್ಯ ಕ್ರಿಯೆಯನ್ನು ಮುಗಿಸಿ ಅದರ ಎಲುಬು, ashes ಅನ್ನು ಈ ನೀರಿನಲ್ಲಿ ಬಿಡುವುದಂತೆ. ಹಾಗೆ ನಮ್ಮಂತಹ ಟೂರಿಸ್ಟ್ ಗಳು ನೀರಿನಲ್ಲಿ ಸಿಕ್ಕ ಆನೆಯ ಎಲುಬನ್ನು ತೆಗೆದುಕೊಂಡು ಅದನ್ನು ದೇವರ ಹುಂಡಿಗೆ ಹಾಕಿದ್ರೆ ಪಾಪ ಎಲ್ಲ ನಾಶ ಅಗುತ್ತಂತೆ ಅಂತ ಏನೋ ಕತೆ ಹೇಳಿದ್ರಪ್ಪ ನಮ್ಮ ಗೈಡ್ ಅವರ ಮಲಯಾಳಿ ಮಿಶ್ರಿತ ಕನ್ನಡದಲ್ಲಿ.
ಕೇರಳದ ಕ್ಯೂರಿಯೋ shop
ಅಲ್ಲಿಂದ ಕುರುವಾ ಐಲೆಂಡ್ . ಮೊದಲಿಗೆ bamboo raft ನಲ್ಲಿ ಪಯಣ
ಕುರುವಾ ಐಲ್ಯಾಂಡ್ ಗೆ ಹೋಗುವ ದಾರಿ
ಮಧ್ಯದಲ್ಲಿ ಒಂದು ಮೊಸಳೆ ಇದೆ. ಕ್ಲಿಯರ್ ಇಲ್ಲ ಚಿತ್ರ
ನಮ್ಮೆಲ್ಲರ ಚೆಂದದ ಚಿತ್ರ ತೆಗೆದವರು ಆಫಿಸ್ ನ ಕೃಷ್ಣಾನಂದ ಮಾಮಾ
ನನ್ನ ಕಾಲಿನ ಪೆಡಿಕ್ಯ್ರುರ್ ಮಾಡುತ್ತಿರುವ ಒಂದು ಕರಿ ಮೀನು (piscicure)
ತಂಪು ಕನ್ನಡ ಹಾಕಿಕೊಂಡಿರುವವರು ನಮ್ಮ ಟೂರ್ ಗೈಡ್ ಜಯಸಿಂಹನ್. 80 ರ ವಯಸ್ಸಿನ ಅವರ ಲವಲವಿಕೆ ಜೀವನ ಪ್ರೀತಿಗೆ ಒಂದು ದೊಡ್ಡ ಸಲಾಮ್ :-)
ಟೂರ್ ನ ಕಣ್ಮಣಿ: ಪ್ರಣತಿ ಪುಟ್ಟಿ, ಆಫಿಸ್ ನ ಶಶಿಧರಮೂರ್ತಿಯವರ ಮೊಮ್ಮಗಳು
ನಿಹಾ ಗೆ ಇಷ್ಟವಾದ ಮರ
ಕೇರಳ ಸಾದ್ c/o ಅನ್ನಪೂರ್ಣ ಮೆಸ್
ಪ್ರೀತಿಯಿಂದ ಊಟ ಬಡಿಸಿದ ಉಮೇಶ
ನಗುಮುಖದಿಂದ ಮೀನು ಹುರಿಯುತ್ತಿರುವ ಲಿಸ್ಸಿ
ಅಲ್ಲಿಂದ ಬಾಣಾಸುರ್ ಸಾಗರ್ ಡ್ಯಾಮ್
ರಾತ್ರಿಯ ಹಾಲ್ಟ್ ಡೌನ್ ಹಿಲ್ಲ್ ರೆಸಾರ್ಟ್ ನಲ್ಲಿ. ಅಲ್ಲಿ ಬಾನ್ ಫೈಯರ್ (Bonfire) ಬೆಳಕಿನಲ್ಲಿ ನಮ್ಮ ಆಟ ಊಟ.ಊಟಕ್ಕೆ ಕೇರಳ ಪರಾಠ, ಮಿಕ್ಸ್ ತರಕಾರಿ ಮಸಾಲ, ಪಪ್ಪಡಂ, ಅನ್ನ ಸಾರು, ಮೊಸರು ಉಪ್ಪಿನಕಾಯಿ.
ರೆಸಾರ್ಟ್ ಗೆ ಹೋಗುವ ದಾರಿಯಲ್ಲಿ ಕಂಡಿದ್ದು
ನಂತರ ನಿದ್ರೆ. ಒಳ್ಳೆ ಚಳಿ. ಮಳಿಯಾಳಿ ಯಲ್ಲಿ ಬರೆದದನ್ನೆಲ್ಲ ಓದಿ ನಮ್ಮ ಗುಂಪಿಗೆ ಇಂಪ್ರೆಸ್/ಶೋ ಆಫ್ ಮಾಡಿದೆ. ಓದಿ ತೋರಿಸುತ್ತೇನೆ, ಅರ್ಥ ಕೇಳಿಬೇಡಿ ಅಂತ ಹಾ ಹಾ.
ಹಲಸಿನ ಎಲೆ ಕಡುಬಿನ ಕನಸು ಕಾಣುತ್ತಿರುವ ಆಚಾರ್ ಮಾಮಿ :-) ನಾನು ಹಲಸಿನಕಾಯಿ , ಹಲಸಿನ ಎಲೆ ತಂದು ಕಡಬು, ಹುಳಿ ಎಲ್ಲ ಮಾಡಿ ಮುಗಿಸಿದ್ದಾಯ್ತು
ಬೆಂಕಿಗೆ ಚಳಿ ಕಾಯಿಸುತ್ತ ನಮ್ಮ ಆಟ.
ನಾವು ಉಳಿದುಕೊಂಡ ರೆಸಾರ್ಟ್ ನ ಚಿತ್ರ
ಮರುದಿನ ಪುಟ್ಟು ಕಡಲ ಕರಿ ಟೀ ಕಾಫಿ ಸಮಾರಾಧನೆ, ಗನ್ ಹಿಡಿದುಕೊಂಡು ಫೋಟೊ ಸೆಶನ್, ರಿಸೋರ್ಟ್ ನ ತೋಟದಲ್ಲಿ ವಾಕಿಂಗ್ ಎಲ್ಲ ಮುಗಿಸಿ ಸೂಚಿಪಾರಾ ಫಾಲ್ಸ್.
ಒಳ್ಳೆ gunನಂಧಾರಿ ಕೆಲಸ ಅಂದ್ರಾ??
ಅಲ್ಲಿ ಅಂತೂ ಎಲ್ಲರೂ ತುಂಬಾ ಎಂಜಾಯಿಸಿದೆವು. ಆಫಿಸ್ ಮಕ್ಕಳಿಗೆ ನೀರಿನಿಂದ ಈಚೆ ಬರುವ ಮನಸ್ಸೆ ಇರಲಿಲ್ಲ. ಆದುದರಿಂದ ನಾವು ನಮ್ಮ ಇತರೇ ಸೈಟ್ ಸೀಯಿಂಗ್ ಕಾರ್ಯಕ್ರಮಗಳನ್ನು ರದ್ದು ಪಡಿಸಿದೆವು
ಕೇರಳದ ಟಿ ಗಾರ್ಡನ್
ಸೂಚಿಪಾರಾ ಫಾಲ್ಸ್ ಗೆ ಹೋಗುವ ದಾರಿ. ತುಂಬಾ ಇಳಿಜಾರು. 200 ಫೀಟ್ downhill ಡಾಕ್ಟರ್ ಸಲಹೆ ಮೀರಿ ಇಳಿದದ್ದು ಆಯ್ತು, ಮೇಲೆ ಬಂದಿದ್ದು ಆಯ್ತು. ಸಧ್ಯ ದೇಹದ ಪಾರ್ಟ್ಸ್ ಎಲ್ಲ ಸರಿಯಾಗಿವೆ. :-) ಮುಖ್ಯ ಅಲ್ಲಿ ಕೆಳಗಡೆ ತನಕ ನೀಟಾದ ಮೆಟ್ಟಿಲಿನ ದಾರಿ ಮಾಡಿದ್ದಾರೆ. ನಮ್ಮ ಟ್ರಿಪ್ ನ highlight ಇದು. ಮಾಲು ನಿಹಾ ಕೂಡ ತುಂಬ ಎಂಜಾಯ್ ಮಾಡಿದರು.
ಈ ತರಹದ ಮೆಟ್ಟಿಲು ಕೆಳಗಿನ ತನಕ
ಸ್ವಲ್ಪ ಕತ್ತು ವಾಲಿಸಿ ನೋಡಿ :-)
ಸೂಚಿಪಾರಾ ನೀರಧಾರೆ ಕೆಳಗೆ ಆಫಿಸ್ ನ ನೀರೆಯರು
ಮುಂದಿನ ಪೋಸ್ಟ್ ಮುಂದಿನ ತಿಂಗಳು ನನ್ನ ಹೊಸ ಮನೆಯಿಂದ. ಅಲ್ಲಿ ತನಕ ಈ ಫೋಟೊಗಳನ್ನು ನೋಡಿ.
ಬರಲಾ??
ಬೈ ಬೈ :-)
ಚಿತ್ರಗಳು: ನಾನು, ನಿಹಾ, ಶ್ರೀಕಾಂತ ಹಾಗೂ ಕೃಷ್ಣಾನಂದ್ ಹಟ್ಟಂಗಡಿ











4 comments:
ನಾವು ಹೋದವರ್ಷ ಹೋಗಿದ್ವಿ ಇಲ್ಲೆಲ್ಲಾ...ಚೆನ್ನಾಗಿದೆ ನಿಮ್ಮ ಕಥನ :)
ನಿಮ್ಮ ಹೊಸಮನೆಗೆ ಶುಭಾಶಯಗಳು.
ಶ್ರೀಕಾಂತ ಫೇಸ್ ಬುಕ್ ಎಕೌಂಟ್ ನಿಂದ ನಾನು ಕದ್ದಿದ್ದು. :-
ಶ್ರೀ ಕಾಂತರೇ ನಿಮ್ಮವರಾಗಿರುವಾಗ ಅವರ ಸರ್ವಸ್ವವೂ ನಿಮ್ಮದೇ ಅಲ್ಲವೇ
:-)
-- ಶ್ರೀ ಕರ್
thanks Swarna!!
@ Shree Kar: :-) :-)
ಶ್ರೀಯುತ ನಾಗೇಶ್ ಹೆಗಡೆಯವರು ಆದರ್ಶಯುತ ಪರಿಸರ ಪ್ರೇಮಿ.
ತಮ್ಮ ವೈನಾಡಿನ ಪ್ರವಾಸ ಕಥನ ಮತ್ತು ಚಿತ್ರಗಳು ultimate.
Post a Comment