("ಇವತ್ತು ಅಡುಗೆ ಯಾವುದರದು?" ಕೇಳಿದರು ಬಾಟನಿ ಪ್ರೊಫೆಸರರು.
"ಆರ್ಟೊಕಾರ್ಪಸ್ ಆಲ್ಟಿಲಿಸ್‌ನ ಹುಳಿ ಮಾಡಿದ್ದೇನೆ. ಜೊತೆಗೆ ನಂಚಿಕೊಳ್ಳಲಿಕ್ಕೇಂತ ಆರ್ಟೊಕಾರ್ಪಸ್ ಆಲ್ಟಿಲಿಸ್‌ದೇ ಪೋಡಿ(ಬಜ್ಜಿ) ಸಹ ಮಾಡಿದ್ದೇನೆ" ಎಂದರು ಬಾಟನಿ ಪ್ರೊಫೆಸರರ ಪತ್ನಿ, ತನ್ನ ಎಂದಿನ ಸ್ಟೈಲ್‌ನಲ್ಲಿ!
ಅವರ ಮನೆಯಲ್ಲಿ ದೈನಂದಿನ ಮಾತುಕತೆಯಲ್ಲಿ ಸಸ್ಯ/ಪ್ರಾಣಿಗಳ ಪ್ರಸ್ತಾಪ ಬಂದಾಗಲೆಲ್ಲ ಅದನ್ನು ಸಸ್ಯಶಾಸ್ತ್ರೀಯ/ಪ್ರಾಣಿಶಾಸ್ತ್ರೀಯ ಹೆಸರುಗಳನ್ನು ಬಳಸಿಯೇ ಹೇಳುವ ರೂಢಿ. ಹಾಗಾಗಿ ಪ್ರೊಫೆಸರರ ಪತ್ನಿ ಹೇಳಿದ "ಆರ್ಟೊಕಾರ್ಪಸ್ ಆಲ್ಟಿಲಿಸ್ (Artocarpus Altilis) ಬೇರೇನಲ್ಲ, ಬೇರುಹಲಸು ಅಂತಲೂ ಕರ್ನಾಟಕದ ಕೆಲವೆಡೆ ಕರೆಯಲ್ಪಡುವ "ದಿವಿ ಹಲಸು"!
ಕರಾವಳಿ ಮತ್ತು ಮಲೆನಾಡಿನ ಜನರಿಗೆ ಅತ್ಯಂತ ಪರಿಚಿತವೂ ಪ್ರಿಯವೂ ಆದ ತರಕಾರಿ. ಹಿಂದೆಲ್ಲ ಮದುವೆ-ಮುಂಜಿ ಮುಂತಾದ ಸಮಾರಂಭಗಳು ಮನೆಗಳಲ್ಲೇ ನಡೆಯುತ್ತಿದ್ದ ಕಾಲದಲ್ಲಿ ಔತಣಕ್ಕೆ ದಿವಿಹಲಸಿನ ಹುಳಿ ಮಾಡಿದರೆ ಮದುವೆಯೂಟದ ಘನತೆ ಒಂದು ಲೆವೆಲ್ ಹೆಚ್ಚು ಎನ್ನುವಷ್ಟರ ಮಟ್ಟಿಗೆ ದಿವಿಹಲಸಿಗೆ ವಿಶೇಷ ಮಾನ್ಯತೆ ಇರುತ್ತಿತ್ತು. ಅಷ್ಟಾಗಿ ಆ ದಿವಿಹಲಸು ಮದುವೆಮನೆಯದೇ ಅಥವಾ ನೆರೆಕೆರೆಯವರ ಹಿತ್ತಿಲಲ್ಲಿ ಬೆಳೆದದ್ದೇ ಆಗಿರುತ್ತಿತ್ತು. ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಹುಟ್ಟಿಬೆಳೆದವರು ಈಗ ಪ್ರಪಂಚದ ಯಾವ ಮೂಲೆಯಲ್ಲಿದ್ದರೂ [ಭೂಮಿ ಗೋಲಾಕಾರವಾಗಿದ್ದರೆ ’ಮೂಲೆ’ ಎಲ್ಲಿಂದ ಎನ್ನುವುದೊಂದು ಜಿಜ್ಞಾಸೆ. ಆ ತರ್ಕ ಸದ್ಯಕ್ಕೆ ಇಲ್ಲಿ ಬೇಡಾ :-)] ತಂತಮ್ಮ ಬೇರುಗಳನ್ನು ನೆನಪಿಸಿಕೊಳ್ಳುವಾಗ ಬೇರುಹಲಸು (ದಿವಿಹಲಸು) ತನ್ನ ಮಾನ್ಯತೆಯನ್ನು ಒಂಚೂರೂ ಕಳಕೊಂಡಿರುವುದಿಲ್ಲ.
ನಿನ್ನೆ ಇಲ್ಲಿ ವಾಷಿಂಗ್ಟನ್‌ನ ಉಪನಗರದಲ್ಲಿರುವ "ಗ್ರ್ಯಾಂಡ್ ಮಾರ್ಟ್" ಕೊರಿಯನ್ ಗ್ರೋಸರಿ ಸ್ಟೋರ್‌ನಲ್ಲಿ "Bread fruit. Special sale. $1.49 per pound" ಬೋರ್ಡ್‌ನ ಪಕ್ಕದಲ್ಲಿ ಹಚ್ಚಹಸುರು ಬಣ್ಣದ ದಿವಿಹಲಸನ್ನು ನೋಡಿದಾಗ ಅದಕ್ಕೆ ಮಾನ್ಯತೆ ಕೊಟ್ಟು ಒಂದು ದಿವಿಹಲಸನ್ನು ನಾನು ಕೊಂಡುತಂದದ್ದಾದರೂ ಮೇಲೆ ವಿವರಿಸಿದ ಮಾನ್ಯತೆಯಿಂದಲೇ. ಕರ್ನಾಟಕದ ಕರಾವಳಿಯಲ್ಲಿ ಹುಟ್ಟಿಬೆಳೆದ ನನಗೂ ದಿವಿಹಲಸು ಎಂದರೆ ದಿವ್ಯವಾದ ತರಕಾರಿ. ಇಲ್ಲಿ ಅಮೆರಿಕದಲ್ಲಿ ಅದರ ಹೆಸರು Bread fruit ಎಂದು. ಇದೇ ಮೊದಲೇನಲ್ಲ ಬ್ರೆಡ್ ಫ್ರುಟ್‌ಅನ್ನು ಇಲ್ಲಿನ ಕೋರಿಯನ್ ಗ್ರೋಸರಿಯಂಗಡಿಯಲ್ಲಿ ನಾನು ಗಮನಿಸಿದ್ದು. ಆದರೆ ಪ್ರತಿಸಲವೂ ಅದು ಬಾಡಿಹೋಗಿ ಕಂದುಬಣ್ಣಕ್ಕೆ ತಿರುಗಿ ಕೊಳೆತುಹೋಗಿದೆಯೋ ಎಂಬಂಥ ರೂಪದಲ್ಲೇ ಇರುತ್ತಿತ್ತಾದ್ದರಿಂದ ಮತ್ತು ತುಂಬಾಹಿಂದೆ ಒಮ್ಮೆ ತಕ್ಕೊಂಡುತಂದಿದ್ದು ಕಡಿದುನೋಡುವಾಗ ಒಳಗೆ ಮೆದುಮೆದು ಪಿಷ್ಟದಂತಾದ್ದು ವಾಕರಿಕೆ ತರುವಂತಿದ್ದದ್ದರಿಂದ ಆಮೇಲೆ ಯಾವತ್ತೂ ಬ್ರೆಡ್‌ಫ್ರುಟ್‌ನ ಉಸಾಬರಿಗೆ ಹೋಗಿರಲಿಲ್ಲ. ಹಾಗಿರಲು ನಿನ್ನೆ "ನಿತ್ಯಹರಿದ್ವರ್ಣವನದ ತೇಗಗಂಧತರುಗಳಲ್ಲಿ" ಎಂಬಂತೆ ಹಚ್ಚಹಸುರು ಬಣ್ಣದಿಂದ ನಳನಳಿಸುತ್ತಿದ್ದ ಬ್ರೆಡ್‌ಫ್ರುಟ್ ಮನಸೆಳೆಯಿತು. "ಇದು ನಿಜವಾಗಿಯೂ ನಮ್ಮೂರಿನ ದಿವಿಹಲಸಿನಂತೆಯೇ ಇದೆ!" ಎಂಬ ಸ್ವ-ಶಿಫಾರಸಿನಲ್ಲಿ ತೇರ್ಗಡೆಯಾಯ್ತು. ಶಾಪಿಂಗ್‌ಕಾರ್ಟ್‌ನಲ್ಲಿ ಸೇರಿಕೊಂಡಿತು. ಅಡುಗೆಯೂ ಆಯ್ತು. ವಿಶೇಷ ಅಡುಗೆ ಎಂದಮೇಲೆ ಫೇಸ್‌ಬುಕ್ ಗೋಡೆಗೂ ರುಚಿ ಗೊತ್ತಾಗಲೇಬೇಕಲ್ವಾ, ಅದಕ್ಕೋಸ್ಕರ ಫೇಸ್‌ಬುಕ್ ಗೋಡೆಗೂ ಹೋಯಿತು!
)
ಕಂಸದಲ್ಲಿರುವ ಪೋಸ್ಟ್ ಶ್ರೀವತ್ಸ ಜೋಶಿಯವರದ್ದು
ಮೇಲಿನ ಪ್ರೊಫೆಸರ್ ರ ರಂತೆ ನಮ್ಮ ರಾಯರಿಗೆ ತರಕಾರಿ, ಗಿಡ ಮರಗಳ scientific ಹೆಸರು ಉದುರಿಸುವ ಚಟ ಇದೆ(after all MSc Agri ನೋಡಿ). ಆದ್ದರಿಂದ ಆರ್ಟ್ ಸ್ ಓದಿರುವ ನನಗೂ ಕೆಲವು ಅಂದ್ರೆ ಮನೆಯಲ್ಲಿ ಬಳಕೆ ಮಾಡುವ ಹೆಚ್ಚಿನ ತರಕಾರಿ, ಹಣ್ಣು ಗಳ ವೈಜ್ಞಾನಿಕ ಹೆಸರುಗಳು ಗೊತ್ತು.
ದೀವಿ ಹಲಸು/ ಜೀ ಗುಜ್ಜೆ/ bread Fruit, (ಕೋಂಕಣಿಯಲ್ಲಿ ಜೀವೆ ಕಡ್ಗಿ) ನಾವು ಮುಂಬೈನಲ್ಲಿದ್ದಾಗ ಬಳಸಿಯೇ ಇರಲಿಲ್ಲ. ಮದುವೆಯಾದ ಬಳಿಕ ತೀರ್ಥಹಳ್ಳಿಯಲ್ಲ್ಲಿ, ಮಂಗಳೂರಿನಲ್ಲಿ, ಕೆಲವು ಸಮಾರಂಭಗಳಲ್ಲಿ ತಿಂದು ಇಷ್ಟ ಪಟ್ಟಿದ್ದಿದ್ದೆ. ಆಮೇಲೆ ನನ್ನ ಬ್ರೆಡ್ ಫ್ರುಟ್ ಪ್ರೀತಿ ಬೆಳ್ತಂಗಡಿಗೆ ಹೋದ ಮೇಲೆ. ಅಲ್ಲಿ ತರಕಾರಿ ಅಂಗಡಿಯಲ್ಲಿ ಯಾವಾಗಲೂ ಸಿಗುತ್ತಿತ್ತು. ಒಂದು ಸಲ ನಾನು ಹೀಗೆ ದೊಡ್ಡದೊಂದು ಜೀ ಗುಜ್ಜೆ ಕೈ ನಲ್ಲಿ ಹಿಡಿದುಕೊಂಡು ಬರಬೇಕಾದ್ರೆ, ನಮ್ಮ ಮನೆಯ ಮಾಲೀಕಳಾದ ಸಿಂಥಿಯಾ, 'ಮಾಲ್ತಿ ಕಿತ್ಯಾಕ್ ಮಾರ್ಕೆಟ್ ತೂನ ಹಾಡಿಲೇ? (ಯಾಕೆ ಮಾರುಕಟ್ಟೆಯಿಂದ ತಂದಿದ್ದು?) ನಮ್ಮ ಮನೆಯ ಹಿಂದುಗಡೆ ಎಷ್ಟು ದೊಡ್ಡ ಮರ ಇದೆ? ಸುಮ್ಮನೆ ಬಿದ್ದು ಹಾಳಾಗಿ ಹೋಗ್ತಾ ಇವೆ ಜೀ ಗ್ಗುಜ್ಜೆ. ನನಗೆ ಅದನ್ನು ತಿಂದರೆ ಕಾಲು ಗಂಟು ನೋವು ಶುರು ಆಗುತ್ತೆ ಅದಕ್ಕೆ ನಾವು ಅದನ್ನು ಬಳಸುವುದಿಲ್ಲ' ಅಂತ ಹೇಳಿದರು. ಈ ಮೊದಲೇ ನಾನು ಆ ಮರ ನೋಡಿದ್ದೆನಾದರು ನನಗೆ ಅವರನ್ನು ಕೇಳಿ ಅದನ್ನು ತೆಗೆದುಕೊಳ್ಳಲು ಮುಜುಗರ. ಅವರೇ ಒತ್ತಾಯ ಮಾಡಿ ಹೇಳಿದ ಮೇಲೆ ವಾರಕ್ಕೆ ಮೂರು ನಾಲ್ಕು ಸಲ, ಅಲ್ಲದೇ ಮನೆಗೆ ಬರುವ ಶ್ರೀಕಾಂತ ಕಲ್ಲೀಗ್ಸ್ ಗೆಲ್ಲ ಜೀ ಗುಜ್ಜೆ ವೈವಿಧ್ಯಮಯ ಪ್ರಿಪರೇಶನ್ ಮಾಡಿ ಬಡಿಸಿದ್ದಿದೆ. :-) ಡೀಪ್ ಫ್ರ್ರೈ, ತವಾ ಫ್ರೈ, ರವಾ ಫ್ರೈ ಅಲ್ಲದೆ ನಾವು ಬಳಸುವ ಕಾಳಿನ ಜತೆ ಘಶಿ, ಹಿಂಗು ನೀರಿನ ಘಶಿ ಸಕತ್ತ್ ಆಗುತ್ತೆ.
ಬೆಳ್ತಂಗಡಿ ನಂತರ ಉಜಿರೆಯ ಕೆ.ಟಿ ಗಟ್ಟಿ ಮಾಮನ ಮನೆಯ ಮೇಲೆ ಬಾಡಿಗೆಗೆ ಇದ್ದೆವು. ಅವರ ತೋಟದಲ್ಲೂ ದೊಡ್ಡ ಜೀ ಗುಜ್ಜೆ ಮರ. ಅವರಂತೂ ನಾನ್ ವೆಜ್ ಬದಲಿಗೆ ನಾಜ್ ವೆಜ್ ನ ಮಸಾಲೆ ಬಳಸಿ (ಬೇರೆ ಬೇರೆ ಕಡೆ ಓದುವ ಮಕ್ಕಳು ಮನೆಗೆ ರಜೆಯಲ್ಲಿ ಬಂದಾಗ ಮಾತ್ರ ಅವರ ಮನೆಯಲ್ಲಿ ನಾನ್ ವೆಜ್ ಅಡಿಗೆ ಮಾಡುತ್ತಿದ್ದರು), ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ಗಮ್ಮೆನುವ ಪರಿಮಳದೊಂದಿಗೆ ಅವರ ಜೀ ಗುಜ್ಜೆ ಪದಾರ್ಥ ರೆಡಿಯಾಗಿ, 12.30 ಗೆ ಅವರ ಊಟ. ಗಟ್ಟಿ ಮಾಮ ಬೆಳಿಗ್ಗೆ ಬೇಗ ಎದ್ದು ಸ್ವಲ್ಪ ಬರವಣಿಗೆ ಮಾಡಿ, ಆಮೇಲೆ ಬ್ರೆಕ್ ಫಾಸ್ಟ್ ನಂತರ ಅವರ ತೋಟದಲ್ಲಿರುವ ಅನಾನಸು, ತೆಂಗು, ಹಲಸು ಅದಲ್ಲದೇ ವಿವಿಧ ಹೂಗಿಡಗಳನ್ನು tend ಮಾಡುತ್ತಿದ್ದರು. (ಕೆಲದಿನಗಳ ಹಿಂದೆ ಫೋನ್ ಮಾಡಿದ್ದರು: 'ಮಾಲತಿ ಹೇಗಿದ್ದೀರಿ ಎಲ್ಲರೂ? ಯಾಕೋ ಇವತ್ತು ನಿಮ್ಮನ್ನು ತುಂಬಾ ನೆನೆಸಿಕೊಂಡೆ' ಅಂತ ಆಮೇಲೆ ಸುಮಾರು ಹೊತ್ತು ಶ್ರೀಕಾಂತ ಬಳಿ ಮಾತಾಡಿದ್ರು. ಶ್ರೀಕಾಂತ ಸ್ಪೀಕರ್ ಫೋನ್ ನಲ್ಲಿ ನನಗೂ ಅವರು ಮಾತು ಕೇಳಿಸಿವಂತೆ ಮಾಡಿದ್ರು; ಅವರ ಸ್ಟ್ರೋಕ್ ನಿಂದಾಗಿ ಈಗ ಕಂಟಿನ್ಯುಅಸ್ ಆಗಿ ಬರೆಯಾಲಾಗದಿರುವುದು, ಅವರು ಮಗಳ ಬಳಿ ಯು ಎಸ್ ಗೆ ಹೋಗಿ ಹಲವು ದಿನ ಹುಷಾರಿಲ್ಲದೆ ಇದ್ದದ್ದು, ಈ ವರ್ಷ ಕಾಳು ಮೆಣಸಿಗೆ ಬಂಪರ್ ರೇಟ್ ಬಂದಿದ್ದು, ಹಲವು ಮರಗಳನ್ನು ಅದರ ದೇಖಿ ರೇಖಿ ಮಾಡಲಾಗದೆ ಅವನ್ನು ಕತ್ತರಿಸಿ ಮಾರಿದ್ದು..ಇತ್ಯಾದಿ...miss you K T Gatti mama) ಮಧ್ಯಾಹ್ನದ ಊಟದ ನಂತರ ಮೂರು ಗಂಟೆಯ ತನಕ ವಿಶ್ರಾಂತಿ. ಸಂಜೆ ನಮ್ಮ ಮನೆಯೆದುರಿನ ಬಿಸಿಲು ಮಚ್ಚಿನ ಮೇಲೆ ಪಟ್ಟಾಂಗ. ನಾನು ಆಲೂ ಬೋಂಡ, ಜೀ ಗುಜ್ಜೆ ಬೋಂಡ, ನೇಂದ್ರ ಬಾಳೆಹಣ್ಣಿನ ಬೋಂಡಾ, ಮುಂಬೈ ನ ಸ್ಪೆಷಲ್ ಪಾವ್ ಭಾಜಿ ಮುಂತಾದ್ದನ್ನು ಮಾಡಿ, ಮಸಾಲೆ ಟೀಯೊಂದಿಗೆ ಅವರ ಜತೆ ನಾವು ಎಂಜಾಯಿಸುತ್ತಿದ್ದೆವು. ಅವರು ಇಥಿಯೋಪಿಯದಲ್ಲಿದ್ದಾಗಿನ ಕತೆ, ಅಲ್ಲಿನ ಬುಡಕಟ್ಟು ಜನಾಂಗದವರ ಆಹಾರ-ವಿಹಾರ, ಆಚಾರ-ವಿಚಾರ-ಬಗ್ಗೆ ಹಂಚಿಕೊಂಡು, ಅವರ ಉಚ್ಚಾರಗಳನ್ನು ಮಾಡಿ ತೋರಿಸುತ್ತಿದ್ದರು. ಅವರು ಚಿಕ್ಕಂದಿನಲ್ಲಿ ಬಡತನದಿಂದಾಗಿ ಪಟ್ಟ ಪಾಡು, ಅವರು ಜೀವನದಲ್ಲಿ ರೂಢಿಸಿಕೊಂಡ ತತ್ವಗಳು ಇದರ ಬಗ್ಗೆಯೆಲ್ಲ ಹೇಳುವವರು. ನಾನು ಅತೀ ಹೆಚ್ಚು ಆಂಗ್ಲ ಪುಸ್ತಕಗಳನ್ನು ಅವರ ಮನೆಯಿಂದ ಪಡೆದುಕೊಂಡು ಓದಿದರೆ,(ಅವರು ಬರೆದ ಪುಸ್ತಕ ಆಗ ಒಂದೂ ಓದಿರಲಿಲ್ಲ) :-) ಅವರು ನಮ್ಮ ಮನೆಯಲ್ಲಿನ ಪುಸ್ತಕದ ರಾಶಿ ಕಂಡು ದಂಗು ಬಡಿದಿದ್ದರು. ನಾವು ಅಲ್ಲಿಂದ ಟ್ರಾನ್ಸ್ಫರ್ ಆಗಿ ಬರುವಾಗ ನಮ್ಮಲ್ಲಿನ ಹಲವು ಪುಸ್ತಕ ಅವರಿಗೆ ಕೊಟ್ಟು ಬಂದಿದ್ದೇವೆ. ಎರಡುವರೆ ವರ್ಷ ಅಲ್ಲಿ ಕಳೆದಿದ್ದೇ ಗೊತ್ತಾಗಲಿಲ್ಲ. ಯಶೋದಾ ಆಂಟಿ- ಗಟ್ಟಿ ಮಾಮನ ಹೆಂಡತಿ(ಅವರ ಪುಸ್ತಕದ ಕರಡು ಪ್ರತಿ ಅಚ್ಚುಕಟ್ಟಾಗಿ ಟೈಪಿಸಿ, ಸ್ಪೆಲ್ ಚೆಕ್ ಎಲ್ಲ ಅವರದ್ದೆ) ಮಾಡುವ ಜೀ ಗುಜ್ಜೆ ಮಸಾಲೆ ತುಂಬಾ ರುಚಿಯಾಗಿರುತ್ತಿತ್ತು. ಒಂದೇ ಟೇಸ್ಟ್ ಯಾವಾಗಲೂ. ನಾನೂ ಟ್ರೈ ಮಾಡಿದೆ, ಆದರೆ ಆ ರುಚಿ ನನ್ನ ಪದಾರ್ಥಕ್ಕೆ ಬರಲೇ ಇಲ್ಲ.

ಬೆಳಗಾವಿಯಲ್ಲಿ ಅಮ್ಮ ಮೊದಲಿಗಿದ್ದ ಬಾಡಿಗೆ ಮನೆಯ ಮೇಲೆ ಮೀರಾ ಆಂತಿ ಇದ್ದರು. ಅವರು ಕೆ.ಟಿ ಗಟ್ಟಿಯವರ ಬರಹದ ಕಟ್ಟಾ ಅಭಿಮಾನಿ. ಅವರು ಬರೆದ ಎಲ್ಲ ಪುಸ್ತಕಗಳೂ ಅವರಲ್ಲಿದೆ. ನಾನು ಉಜಿರೆಯಲ್ಲಿ ಕೆ.ಟಿ ಗಟ್ಟಿ ಮಾಮನ ಮನೆಯಲ್ಲಿ ಬಾಡಿಗೆಗಿದ್ದೆನೆಂದು ನನ್ನ ಮೇಲೆ ಸ್ಪೆಷಲ್ ಅಭಿಮಾನ. ಪ್ರತಿ ಸಲ ಅಮ್ಮನ ಮನೆಗೆ ಹೋದಾಗ ಅವರು "ಗಟ್ಟಿಯವರು ಹೊಸ ಪುಸ್ತಕ ಬರೆದಿದ್ದಾರಾ' ಅಂತ ಕೇಳುತ್ತಿದ್ದರು. :-)
ಅಪ್ಪ ಅಮ್ಮ ತಮ್ಮ ತಂಗಿ ನಮ್ಮಲ್ಲಿಗೆ ಬಂದಾಗಲೆಲ್ಲ ಅವರಿಗೂ ಜೀ ಗುಜ್ಜೆಯ ರುಚಿ ಹತ್ತಿಸಿದ್ದೆ. ತಂಗಿ ಈಗ ಯು ಎಸ್ ನಲ್ಲಿರೋದು ಅವಳಿಗೆ Indian Store ನಲ್ಲಿ ಜೀ ಗುಜ್ಜೆ ಸಿಗುತ್ತಂತೆ. ಇತ್ತೀಚಿಗೆ ಅವಳು ಜಮೈಕಾ ಗೆ ಹೋಗಿದ್ದಳು ಸಮ್ಮರ್ ವೆಕೇಶನ್ ಗೆ. ಅಲ್ಲಿ ಅವಳು ಹಣ್ಣಾದ್ದ ಜೀ ಗುಜ್ಜೆ ನೋಡಿ, ಅಲ್ಲಿನ ಜನರರಿಗೆ ಅದನ್ನು ಬಳಸುವ ರೀತಿ ಕೇಳಿದ್ದಳಂತೆ. ಅವರು ಹಣ್ಣಾದ ಜೀ ಗುಜ್ಜೆಯನ್ನು ಕೆಂಡದಲ್ಲಿ ಬಾಡಿಸಿ, ಅದರ ಸಿಪ್ಪೆ ತೆಗೆದು ಅದನ್ನು ಮ್ಯಾಶ್ (mash) ಮಾಡಿ ಜೇನು ತುಪ್ಪದೊಂದಿಗೆ ತಿನ್ನುವುದಂತೆ.
ನಮ್ಮ ತೀರ್ಥಹಳ್ಳಿಯ ತೋಟದಲ್ಲಿ ಎರಡು ವರ್ಷದ ಹಿಂದೆ ಜೀ ಗುಜ್ಜೆಯ ಗಿಡಗಳನ್ನು ನೆಟ್ಟಿದ್ದೇವೆ.
ಶ್ರೀಕಾಂತ ಹಿಂದಿನ ವರ್ಷ ಇಂಡೋನೇಶಿಯಾ ಗೆ ಹೋದಾಗ ಅಲ್ಲಿಂದ ಜೀ ಗುಜ್ಜೆಯ ಚಿಪ್ಸ್ ತಂದಿದ್ದರು. ತುಂಬಾ ರುಚಿಯಾಗಿತ್ತು. ನಾನೂ ಒಂದು ಸಲ ಟ್ರೈ ಮಾಡಬೇಕು.
ಮಿತ್ರ ಶ್ರೀವತ್ಸ ಜೋಶಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ಮೇಲಿನ ಪೋಸ್ಟ್ ಮೈಲ್ ನಲ್ಲಿ ಕಳುಹಿಸಿದ್ದರು. ಅದನ್ನು ಓದಿ ನನಗೆ ಇದು ಬರೆಯಬೇಕು ಅನ್ನಿಸಿತು.
:-)

3 comments:
Malathi, recipe nE haakilla!
Radhika,
photo and recipe will go into my food blog...soooon :-)
ms
ಹಲಸಿನ ಪುರಾಣ ಚೆನ್ನಾಗಿದೆ. ನಮ್ಮ ಮನೆಗಳಲ್ಲಿ ಹಲಸಿನಿಂದ ತರಾವರಿ ಅಡುಗೆ ಮಾಡ್ತಾರೆ. ಹಲಸಿನ ಹಣ್ಣು ನನಗೆ ಬಹಳ ಅಚ್ಚುಮೆಚ್ಚು
Post a Comment