ಮೊನ್ನೆ ಬೈ ಯಾಂಡ್ ಸೇವ್ (buy&save) ಗೆ ಹೋಗಿದ್ದೆ ಮನೆಯ Grocery ಸಾಮಾನಿನ ಲಿಸ್ಟ್ ಕೊಡಲು. ಅದರಲ್ಲಿ ಅಕ್ಕಿ ಯಾವುದು ಬೇಕು ಅಂತ ನಮೂದಿಸಿರಲಿಲ್ಲವಾದ್ದರಿಂದ ಅದನ್ನು ಹೇಳಲು ಕಾಯ್ತಾ ಇದ್ದೆ. ಆಗ ಅಂಗಡಿ ಮೇಲೆಯೇ ಇರುವ ಪೇಯಿಂಗ್ ಗೆಸ್ಟ್ ನಲ್ಲಿರುವ ಹುಡುಗಿ ಎರಡು ಪ್ಲ್ಯ್ಲಾಸ್ಟಿಕ್ ಕಟ್ಟು ಹಿಡಿದುಕೊಂಡು ಬಂದಳು. ಕೆಲಸಕ್ಕೆ ಹೋಗುತ್ತಾಳೆ ಆ ಹುಡುಗಿ. ವಾರ್ಯಾಂತಕ್ಕೆ ಫ್ರೆಂಡ್ಸ್ ಗೆ ಪಾರ್ಟಿ ಗೆ ಕರೆದಿದ್ದಳು. ಆದರೆ ತೊಗರಿ ಬೇಳೆ. ಕಡಲೆ ಬೇಳೆಯ confusion ಅಂತೆ ಆಕೆಗೆ. ಅಂಕಲ್ ಇದರಲ್ಲಿ ಕಡ್ಲೇ ಬೇಳೆ, ತೊಗರಿ ಬೇಳೆ ಯಾವುದೆಂದು ಕೇಳಿ ಮಾರ್ಕರ್ ಪೆನ್ ನಿಂದ ಒಂದು packet ಮೇಲೆ dal fry daal ಅಂತ ಬರೆದೊಕೊಂಡು ಹೋದಳು. ಅಷ್ಟರಲ್ಲೇ ಸುಮಾರೆಲ್ಲ ಮಾತನ್ನು ಹೇಳಿ ಹೋದಳು. ಅವಳು ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸವಂತೆ. ಅಮ್ಮ ನ ಜತೆ ಇದ್ದಾಗ ಅಮ್ಮ ಅವಳಿಗೆ ಅಡಿಗೆ ಕಲಿಸಲು ಮುಂದಾದಾಗ 'ನನಗೆ ಇಂಟರೆಸ್ಟ್ ಇಲ್ಲ ಅಡಿಗೆ ಮಾಡಲು, ಮತ್ತು ಹೇಗು ನೀ ಇದ್ದಿಯಾ, ನಾ ಯಾಕೆ ಕಲೀ ಬೇಕು ಅಂದಳಂತೆ, ಅಷ್ಟೆ ಅಲ್ಲ, 'ನಾನಂತು ಅಡಿಗೆ ಗಿಡಿಗೆ ಮಾಡಿ ನನ್ನ ಟೈಮ್ ವೇಸ್ಟ್ ಮಾಡಲ್ಲ, ಮಧ್ಯಾಹ್ನ ಹೇಗೂ ಕ್ಯಾಂಟೀನ್ ನಲ್ಲೇ ಒಳ್ಳೆಯ ಊಟ ಸಿಗ್ಗುತೆ, ಸಬ್ಸಿಡೈಸ್ಡ್ ರೇಟ್ ನಲ್ಲಿ, (ಅವರ ಸಂಬಳದಿಂದಲೇ ಕಟ್ ಆಗುತ್ತಂತೆ), ಮತ್ತೆ ರಾತ್ರಿಗೆ ಹಣ್ಣು ತಿನ್ನುತ್ತೇನೆ ಅಥವಾ ಹೋಟಲ್ ನಿಂದ ತರಿಸಿ ತಿನ್ನುತ್ತೇನೆ ಅಂತ ಅಮ್ಮನ ಬಾಯಿ ಮುಚ್ಚಿಸಿದಳಂತೆ. ಅದಕ್ಕೆ ಅಂಗಡಿಯವ 'ಹಾಗೇ ಮಾಡಬೇಕಿತ್ತು ಹೋಟಲ್ ನಿಂದ ತಂದು ಪಾರ್ಟಿ ಮಾಡಬಹುದಿತ್ತಲ್ಲಮ್ಮ' ಅಂದಿದ್ದಕ್ಕೆ ಇಲ್ಲ ಅಂಕಲ್ ಈಗೀಗ ಹೆಲ್ತ್ ತುಂಬ ಅಪ್ಸೆಟ್ ಆಗಿ, ಡಾಕ್ಟರ್ ಅವರು ಮನೆಯಲ್ಲೆ ಸಿಂಪಲ್ ಅಡಿಗೆ ಮಾಡಿ ತಿನ್ನಿ ಅಂದಿದ್ದಾರೆ' ಅಂತ ಒಂದು ಲೆಕ್ಚರ್ ಕೊಟ್ಟಳು. ನಾನು ನನಗೆ ಬೇಕಾಗಿರುವ ಅಕ್ಕಿ ಯಾವುದೆಂದು ಹೇಳಿ ಅಲ್ಲಿಂದ ಬ್ಯಾಂಕ್ ಕಡೆ ಹೊರಟೆ.
ಅಲ್ಲಿಗೆ ಹೋದಾಗ ಫ್ಲ್ಯಾಶ್ ಆಯ್ತು, 'ಅರೇ, ಮಕ್ಕಳಿಗೆ ಬ್ಯಾಂಕಿಂಗ್ ನ ವಿಷಯ ಏನೇನೂ ಗೊತ್ತಿಲ್ಲವಲ್ಲ' ಅಂತ. ಮಾಲವಿಕ ಕೆಲಸಕ್ಕೆ ಹೋಗುತ್ತಿದ್ದಾಗ, ಬ್ಯಾಂಕ್ ನವರು ಖುದ್ದು ಅವಳು ಕೆಲಸ ಮಾಡುವಲ್ಲಿ ಬಂದು ಅವಳ ಖಾತೆ ಎಲ್ಲ ಅವರೇ ಮಾಡಿ, ಪಾಸ್ ಬುಕ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅವಳ ಕೈಗೆ ತಂದು ಕೊಟ್ಟಿದ್ದರು ಆದ್ದರಿಂದ ಅವಳಿಗೆ ಖಾತೆ ತೆರೆಯುವ ಫಾರ್ಮ್ ಮೇಲೆ ಸೈನ್ ಹಾಕುವ ಕೆಲಸ ಮಾತ್ರ ಇತ್ತು.
ಆದರೆ ಈ ವರ್ಷ ನಿಹಾರಿಕಾಗೆ ಕಾಲೇಜ್ ನ ವಿವಿಧ competition ಮತ್ತು ಒಳ್ಳ್ಳೆಯ ಮಾರ್ಕ್ಸ್ ಪಡೆದಿದಕ್ಕಾಗಿ ಬಹಳಷ್ಟು ಕ್ಯಾಶ್ ಬಹುಮಾನ ಸಿಕ್ಕಿದೆ, . ಅದನ್ನು ಅವಳಿಗೆ ಬ್ಯಾಂಕ್ ಖಾತೆ ತೆರೆದು ಅದರಲ್ಲಿ ಹಾಕಲು ಹೇಳಿದ್ದೆ. ಅವಳೂ ಹೂಂ ಅಂದಿದ್ದಳು ಆದರೆ ಟೈಮ್ ಆಗಿರಲಿಲ್ಲ. ಒಂದು ದಿನ ಅವಳಿಗೆ ಕಾಲೇಜ್ ಲೇಟ್ ಇತ್ತು, ನಾನು ಫಾರ್ಮ್ ಮೊದಲೇ ತಂದು ಇಟ್ಟಿದ್ದೆ. ಅದನ್ನು ಅವಳು ತುಂಬಿ, ಅವಳಿಗೆ ಹೇಳಿದೆ, 'ನಾನು ಬರುತ್ತೇನೆ ನಿನ್ನ ಜತೆ, ಆದರೆ ನೀನೆ ಕೇಳಿ ಎಲ್ಲ ಮಾಡಬೇಕು' ಅಂತ. ಅರ್ಥ ಆಗದಿದ್ದಲ್ಲಿ ನಾನು ಹೆಲ್ಪ್ ಮಾಡುತ್ತೇನೆ'. ಅಲ್ಲಿ ಹೋದಾಗ ನನ್ನ ತರಹ ಇನ್ನೊಬ್ಬ ಅಮ್ಮ ತಮ್ಮ ದೊಡ್ಡ ಮಗನೊಂದಿಗೆ ಬಂದು ಅವನಿಗೆ ಕಲಿಸಿದ್ದು ಅರ್ಥಾ ಆಗದಿದ್ದಾಗ ಅವನ ಮೇಲೆ ಸಿಡುಕುತ್ತ ಇದ್ದದ್ದನ್ನು ನೋಡಿ ನಾನು ನಗುತ್ತ ಇದ್ದೆ. ನಿಹಾ ಅಲ್ಲೇ ಎಲ್ಲ ಕೇಳಿಕೊಂಡು ಅವಳ ಖಾತೆ ತೆರೆಸಿ ಪಾಸ್ ಬುಕ್ ಕೂಡ ಪಡೆದು ಕೊಂಡು, 'ಯೆಸ್ ಐ ಡಿಡ್ ಇಟ್' ಅಂತ ಅವಳ ಕಾಲೇಜ್ ಕಡೆ ಹೋದಳು ನಾನು ಮನೆಗೆ ವಾಪಸ್ ಆದೆ.
ಇವತ್ತು ಬೆಳಿಗ್ಗೆ ರಾಯರಿಗೆ ಅವರ ಫೇವ್ ಲಿನೆನ್ ಶರ್ಟ್ ಬೇಕಿತ್ತು. ಆದರೆ ಇಸ್ತ್ರಿಗೆ ಕೊಟ್ಟಗಲೋ ಏನೋ ಅದರ ಎರಡು ಗುಂಡಿ ಮಾಯ. ಆ ತರಹದ ಗುಂಡಿ ನನಗೆ ಸಿಕ್ಕಿರಲಿಲ್ಲ. ಅದಕ್ಕೆ ನಿನ್ನೆ ಸಂಜೆ ಅದಕ್ಕೆ ಮ್ಯಾಚ್ ಆಗುವ ಬೇರೆ ತರಹದ ಗುಂಡಿಗಳನ್ನು ತ್ತಂದ್ಗು, ಆ ಶರ್ಟ್ ಗಿರುವ ಹಳೆಯ ಗುಂಡಿಗಳನ್ನು ತೆಗೆದುಹಾಕಿ, ಹೊಸ ಗುಂಡಿ ಹಚ್ಚಿದೆ. ನಿಹಾ ನೋಡ್ತಾ, 'ಅರೇ ನನಗೆ ಬಟನ್ ಹೊಲೀಲಿಕ್ಕೆ ಬರಲ್ಲ' ಅಂತ ಹೇಳಿದಳು. ಹೌದಲ್ಲವಾ ಈಗೀನ ಮಕ್ಕಳಿಗೆ ಗುಂಡಿ, ಹುಕ್ಕ್ ಹೊಲೆಯುವುದು ಮುಂತಾದ್ದು ಬರುವುದೇ ಇಲ್ಲವಲ್ಲ? ಬಟ್ಟೆ ಹರಿದರೆ, ಹಳೆಯದಾದರೆ, ಗುಂಡಿ ಕಿತ್ತು ಹೋದರೆ ಅದನ್ನು ಬಿಸಾಕುವುದೆ. (ನಮ್ಮ ಮನೆಯಲ್ಲಿ ನನಗೆ ಮಾತ್ರವಲ್ಲ ನನ್ನ ತಮ್ಮಂದಿರಿಗೂ, ಶ್ರೀಕಾಂತ ಗೂ ಹೊಲಿಗೆ ಹಾಕುವುದು, ಅಡಿಗೆ ಮಾಡುವುದು ಎಲ್ಲ ಬರುತ್ತೆ.)
ಮನೆಯೆದುರಿಗೆ ರಂಗೋಲಿ ಕೂಡ ಅಮ್ಮಂದಿರೇ ಹಾಕುತ್ತಾರೆ ವಿನ: ಯಾವುದೇ ಕಾಲೇಜು ಹುಡುಗಿ ಬೆಳಿಗ್ಗೆ ಎದ್ದು ರಂಗೋಲಿ ಹಾಕುವುದನ್ನು ನಾನು ಇದುವರೆಗೆ ನೋಡಿಲ್ಲ at least ನಾವಿರುವ ಕಡೆ. ಮತ್ತೆ ನಮ್ಮ ಮನೆಯ ಬಳಿ ಹಲವಾರು ಮನೆಗಳಲ್ಲಿ ಮನೆ ಕೆಲಸಕ್ಕೆ ಬರುವವಳೆ ರಂಗೋಲಿ ಹಾಕುತ್ತಾರೆ. :-) ಹಾಗೆ ಹೂ ಮಾಲೆ ಕಟ್ಟುವುದು, ಹಳೇ ಕಾಲದ ತಿಂಡಿ, ಅಡುಗೆ ಮಾಡುವುದು ಮುಂತಾದ್ದು ಕೂಡ. ದುಡ್ಡು ಕೊಟ್ಟರೆ ಎಲ್ಲ ಹೊರಗಿನಿಂದಲೇ ಸಿಗುತ್ತದೆ. ಇತ್ತೀಚಿಗಂತು ಹಬ್ಬದ ಅಡುಗೆ ಕೂಡ ಮೊದಲೇ ಬುಕ್ ಮಾಡಿ , ಮನೆಗೆ ತರಿಸಿಕೊಳ್ಳುವವರೂ ಇದ್ದಾರೆ. ಸಮಯ ಹೇಗೆ ಬದಲಾಗ್ತಾ ಇದೆ ಅಲ್ಲವಾ??
ಓದಿನ ಜತೆ ದೈನಂದಿನ ಜೀವನಕ್ಕೆ ಬೇಕಾದ ಅಗತ್ಯ ಲೈಫ್ ಸ್ಕಿಲ್ಸ್ ಕೂಡ ಕಲಿಸಬೇಕೆಂದು/ತಿಳಿದಿರಬೇಕು ಅಂತ ನನ್ನ ಅನಿಸಿಕೆ...ಕಾರ್ಪೆಂಟರಿ, ಪ್ಲಂಬಿಂಗ್, ಎಲೆಕ್ಟಿಕಲ್ಸ್ ,pottery ವಗೈರೆ...
:-)
ಓದಿನ ಜತೆ ದೈನಂದಿನ ಜೀವನಕ್ಕೆ ಬೇಕಾದ ಅಗತ್ಯ ಲೈಫ್ ಸ್ಕಿಲ್ಸ್ ಕೂಡ ಕಲಿಸಬೇಕೆಂದು/ತಿಳಿದಿರಬೇಕು ಅಂತ ನನ್ನ ಅನಿಸಿಕೆ...ಕಾರ್ಪೆಂಟರಿ, ಪ್ಲಂಬಿಂಗ್, ಎಲೆಕ್ಟಿಕಲ್ಸ್ ,pottery ವಗೈರೆ...
:-)


3 comments:
Totally agree with you Malathi! I escape button stitching saying "it's not my job!". I wish someone teaches all these, like a small workshop for kids, especially changing bulbs and tubes, little bit of plumbing etc :-) It will be fun to learn!
ನಿಮ್ಮ ಮಾತು ನಿಜ ಓದಿನ ಜೊತೆಗೆ ದೈನಂದಿನ ಚಟುವಟಿಕೆಗಳ ಸೂಕ್ಷ್ಮತೆಯೂ ಮುಖ್ಯ.
- ಹೊಟೇಲ್ ತಿಂಡಿಗಿಂತ ಆರೋಗ್ಯ ಮನೆಯ ಹಬೆಯಾಡುವ ಉಪ್ಪಿಟ್ಟು.
- ನೀಹಾರಿಕಾ ಅವರಿಗೆ ನನ್ನ ಅಭಿನಂದನೆಗಳನ್ನು ತಿಳಿಸಿರಿ.
- ಈಗೀಗ ಬಳಸಿ ಬಿಸಾಡುವ ಜಮಾನ, ನೀವು ಹೇಳಿದಂತೆ ಬಟನ್ ಹೊಲಿಯಲು ಕಳಿಯಲೇಬೇಕು.
- ರಂಗವಲ್ಲಿಯ ಬಿಡಿಸಲು ಕಾಲೇಜು ಕನ್ನೆಯರು ಮನಸು ಮಾಡಲೇಬೇಕಷ್ಟೇ!
http://badari-poems.blogspot.in/2014/01/blog-post_31.html
Agree..We do car repair till home painting..and our little shreya enjoyed the wall painting:). Guru is the great youtube :)
Post a Comment