March 11, 2013

ತಿರುವಣ್ಣಾಮಲಾಯ್- ರಮಣಮಹರ್ಷಿ ಆಶ್ರಮ

ಹಿಂದಿನ ಪೋಸ್ಟ್ ನಲ್ಲಿ ನಿಹಾರಿಕಾಳ ನಾಟಕ ಪ್ರದರ್ಶನ ದ ನಂತರ ನನ್ನ ಟೂರ್ ಅಂತ ಬರೆದಿದ್ದೆ. ಹೌದು ನಾನು ಅಕ್ಕ ಒಂದು ಚಿಕ್ಕ ಬ್ರೇಕ್ ತೆಗೆದುಕೊಂಡ್ವಿ. ನಾವು ಊರಲ್ಲಿದ್ದಾಗಲೇ ನಿಹಾ ನ ಫೋನ್ ಬಂತು, ಅವರ ನಾಟಕಕ್ಕೆ ಮೊದಲನೇಯ ಬಹುಮಾನ ಬಂದಿದ್ದು. ಸ್ಕ್ರಿಪ್ಟ್. ಮ್ಯೂಸಿಕ್, ಸೆಟ್ಟಿಂಗ್ ಮತ್ತು ರಾಶೋಮೊನ್ ನ woodcutter ನ ಪಾತ್ರ ನಿಹಾರಿಕಾ ವಹಿಸಿದ್ಲು. ಅವರೆಲ್ಲರಿಗೂ ಮೇಕ್ ಅಪ್ ಮಾಡಲು ಒಬ್ಬರು ಬಂದಿದ್ದರಂತೆ. ತುಂಬಾ ಚೆನ್ನಾಗಿ ಮಾಡಿದ್ದರು. ಒಂದು ಬೇಸರದ ಸಂಗತಿಯೆಂದರೆ ನನ್ನಿಂದ ಒಂದು ಫೋಟೊ ಕೂಡ ನೆಟ್ಟಗೆ ತೆಗೆಯಲಾಗಲಿಲ್ಲ. :-(. ನಿಹಾ ಮತ್ತು ಟೀಮ್ ಗೆ ಒಂದು congrats ಹೇಳುವಾ?? ಹಿಂದಿನ ಪೋಸ್ಟ್ ನಲ್ಲಿ ಶುಭ ಹಾರೈಸಿದ ಶ್ರೀಕಾಂತ ಮಂಜುನಾಥ ಹಾಗೂ ರಾಧಿಕ ಇವರಿಗೆ ಧನ್ಯವಾದಗಳು. ಹಾಗೂ ನನ್ನ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿಸುವ ಜ್ಯೋತಿ, ವೇದಾ, ಸಂಧ್ಯಾ ಹಾಗೂ ನಾಗಮಣಿ ಇವರಿಗೂ ತುಂಬು ಹೃದಯದ ಧನ್ಯವಾದಗಳು
ರಾಶೊಮೋನ್ ನಾಟಕದ ಕೆಲ ದೃಶ್ಯಗಳು



ಕಾರ್ಡ್ ಬೋರ್ಡ್ ಬೆಂಕಿ ಮತ್ತು Rashomon baraha ಸಕತ್ ಇಷ್ಟ ಆಯ್ತು


the team:  ಈ ಫೋಟೊ ತೆಗೀ ಬೇಕಾದ್ರೆ ನಿಹಾ ನ ಮಿಸ್ ಬಂದು 'everybody is talking about your play' ಅಂತ ಹೇಳಿ ನನ್ನನ್ನು ನೋಡಿ, 'Are you Niharika's mother? She resembles you a lot ಅಂದ್ರು

ಈ ಸಂತೋಷದ ಸುದ್ದಿಯ ಬೆನ್ನಿಗೇ ಬಂದ ಇನ್ನೊಂದು ಸಂತಸದ ಸಂಗತಿಯೆಂದರೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪುಸ್ತಕ ಸೊಗಸು ಬಹುಮಾನದಡಿ ಬಹುಮಾನ ಗೆದ್ದ ಮೂರು ಪುಸ್ತಕಗಳಲ್ಲಿ ಎರಡರ ಮುಖಪುಟ ಮಿತ್ರ ರಘು ಅಪಾರ ಮಾಡಿದ್ದು. ಮುಂದಿನ ವರ್ಷ ಮೂರು ಪುಸ್ತಕದ ಕವರ್ ಪೇಜ್ ನಿಮ್ಮದೇ ಆಗಿರುತ್ತೆ ಅಂತ ಅವರಿಗೆ ಕಣಿ ಹೇಳಿದ್ದೀನಿ. ರಘು ಮತ್ತು ನನ್ನ ಪರಿಚಯ ಆಗಿದ್ದು ಅವರು ವಿನ್ಯಾಸ ಮಾಡಿದ ಸುರೇಂದ್ರನಾಥರ 'ಎನ್ನ ಭವದ ಕೇಡು' ಪುಸ್ತಕದ ಮುಖಪುಟದ ಮೂಲಕ. ಈ ಪುಸ್ತಕ ಹೊರತಂದಿದ್ದು ಛಂದ ಪ್ರಕಾಶನ. ಹೀಗೆ ವಸುಧೇಂದ್ರ ಹಾಗು ಅವರ ಮೂಲಕ ರಘು ಅವರ ಪರಿಚಯ. ಈಗ ಅವರು ನನ್ನ ಕುಟುಂಬದ ಸದಸ್ಯರು ಎನ್ನುವಷ್ಟು ಆತ್ಮೀಯರು. ಅವರಿಗೊಂದು congrats.
ಪೊಂಡಿ ಟೂರ್ ನ ಹಿಂದಿನ ಭಾಗ
ಕೃಷ್ಣಾಗಿರಿಯಲ್ಲಿ ಎಳನೀರು ಕುಡಿದು ನಮ್ಮ ಮುಂದಿನ ಸ್ಟಾಪ್ ತಿರುವಣ್ಣಾಮಲಾಯ್ ನ ರಮಣಮಹರ್ಷಿ ಆಶ್ರಮಕ್ಕೆ.  ಆಶ್ರಮ ಅಲ್ಲಿರುವುದು ನಾವು ನೋಡಿದ್ದು ಆಕಸ್ಮಿಕ. ನಮ್ಮ ಕಾರ್ ಮುಂದೆ ಹೋಗುತ್ತಿದ ಬೈಕ್ ನಲ್ಲಿ ಹೊರದೇಶದ ಇಬ್ಬರು ಸಡನ್ ತಿರುವು ತೆಗೆದುಕೊಂಡು ಗೇಟ್ ಒಳಗಡೆ ಹೋದಾಗ ನನ್ನ ಕಣ್ಣು ಗೇಟ್ ಮೇಲಿನ ಬರಹವನ್ನು ಓದಿ, ಪೆರುಮಾಳ್ ಗೆ  ಅಲ್ಲಿ ನಿಲ್ಲಿಸುವಂತೆ ಕೇಳಿಕೊಂಡೆವು.
ಅರುಣಾಚಲ ಬೆಟ್ಟದ ಬುಡದಲ್ಲಿ ಬೆಚ್ಚಗೆ ಕುಳಿತಿದೆ ಈ ಆಶ್ರಮ. ವಿದೇಶಿಯರೂ ತುಂಬ ಹೆಚ್ಚಿನ ಸಂಖ್ಯೆಯಲ್ಲಿದ್ದರು. ರಮಣ ಮಹರ್ಷಿಯ ಬಗ್ಗೆ ಗೂಗಲಿಸಿದರೆ ಎಲ್ಲ ಡೀಟೈಲ್ಸ್ ಲಭ್ಯ. ಹಾಗಾಗಿ ನಾನು ನಾವು ತೆಗೆದ ಫೋಟೊಗಳನ್ನು ಹಾಕುತ್ತೇನೆ.
ಯಾವ ತರಹ ಹಸಿರಿದೆ ನೋಡಿ. ದಾರಿಯಲ್ಲಿ ಕಂಡುಬಂದ ಒಂದು ಹೊಲ

ಇದು ನಾನು ತೆಗೆದ ಚಿತ್ರ

ಸುಮ್ನೆ ಒಂದು
random shot

ಅಂತೂ ಚಲಿಸುವ ಗಾಡಿಯಿಂದ ತೆಗೆದ ಚಿತ್ರ ಒಂಚೂರು ಶೇಕ್ ಆಗದೆ ತೆಗೆದದ್ದು ನನ್ನ ಪ್ರಕಾರ ಸಾಹಸವೇ ಸೈ. :-)
ಆಹ್ ಎಷ್ಟು ಚೆನ್ನಾಗಿದೆಯಲ್ಲವೇ? ನಿಹಾ ತೆಗೆದಿದ್ದು
ಸಾಪಾಟ್ ರೆಡ್ಡೀssss..:-)
tree lined roads

ಇವೆಲ್ಲ ಆಶ್ರಮ ತಲುಪುವ ಮುಂಚಿನ ಚಿತ್ರಗಳು. ಇಲ್ಲಿಂದ ಆಶ್ರಮದ ಚಿತ್ರಗಳು:
ರಾಯರು ತೆಗೆದ ಚಿತ್ರ. ಆ ಮರ ನೋಡಿ ಗಂಟುಗಂಟಾಗಿ ಒಂತರಹ ಚೆನ್ನಾಗಿದೆ
ವೇದಾಧ್ಯಯನ ಶಾಲೆ
ರಮಣಮಹರ್ಷಿಯವರ ಸಮಾಧಿ ಸ್ಥಳ. ಇಲ್ಲಿ ಹಲವಾರು ಭಕ್ತರು ಧ್ಯಾನಕ್ಕೆ ಕುಳಿತಿದ್ದರು. ತುಂಬ ಪ್ರಶಾಂತ ವಾತಾವರಣ

ಬಾಲಕ ರಮಣನಿಗೆ ದಿವ್ಯಾನುಭೂತಿಯಾಗಿ ಉಟ್ಟ ಬಟ್ಟೆಯಲ್ಲಿ ತಿರುವಣ್ಣಾಮಲಾಯ್ ಗೆ ಹೊರಟು ಬಂದು ಆಶ್ರಮ ಸ್ಥಾಪಿಸಿದ್ದರ ಬಗ್ಗೆ

ಯಾವುದೇ ಅಡ್ಡಿ ಆತಂಕಗಳಿಲ್ಲದೇ ನಲಿದಾಡುವ ನವಿಲುಗಳು. ಅನತಿ ದೂರದಲ್ಲಿ ಕಾಣುತ್ತಿರುವ ಬೆಟ್ಟ
ಕಾಳು ಕುಕ್ಕುತ್ತಿರುವ ನವಿಲುಗಳು
family time

peahen/peafowl
ಆಶ್ರಮದ ಗೋಬರ್ ಗ್ಯಾಸ್ ಘಟಕ

ಗುಡ್ಡ ಹಾಗೂ ಗೋಶಾಲೆಯ ಒಂದು ಚಿತ್ರ. ಹಲವಾರು ಗೋ ತಳಿಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ






ದನದ ಕೊಂಬನ್ನು admire ಮಾಡುತ್ತಿರುವ ಶ್ರೀಕಾಂತ

ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಇತ್ತು. ಆದರೆ ನಾವು ಪಟ್ಟಾಗಿ ಬ್ರೇಕ್ ಫಾಸ್ಟ್ ಮಾಡಿದ್ದು ಮಾತ್ರವಲ್ಲ, ನಾನು ಕಟ್ಟಿಕೊಂಡು ಬಂದ ಮೈಕ್ರೋವೇವಿಸಿದ ಶೆಂಗಾ, orange ಆಪ್ಪಲ್ ಅಂತ ಬಾಯಿ ಆಡಿಸ್ತಾ ಬಂದಿದ್ದಲ್ಲದೇ ಊಟಕ್ಕೆ ಇನ್ನೂ ಒಂದು ಗಂಟೆ ಇದ್ದುದ್ದರಿಂದ ನಾವು ಆಶ್ರಮದಿಂದ ಗಿಂಗಿ ಫೋರ್ಟ್ ಕಡೆ ಹೊರಟ್ವಿ. ಮೇಲಿರುವ ನವಿಲಿನ ಚಿತ್ರಗಳೆಲ್ಲ ಮಾಲವಿಕ ತೆಗೆದದ್ದು. ಯಾಕೋ ನಿಹಾ ಗೆ ಫೋಟೊ ತೆಗೆಯುವ ಮೂಡ್ ಇರಲಿಲ್ಲ. ಎಲ್ಲ ನವಿಲುಗಳನ್ನು ನೋಡ್ತ ನಾನು ಮಾಲು-ನಿಹಾ ಗೆ have u seen the dance of a peacock ಅನ್ನುತ್ತಿದ್ದಹಾಗೆ ಅಲ್ಲೇ ಆವರಣದಲ್ಲಿರುವ ಗೆಸ್ಟ್ ಹೌಸ್ ಮೇಲಿನ ಟೆರೆಸ್ ಮೇಲೆ ಒಂದು  ನವಿಲು ಕುಣಿದಾಡೇ ತೋರಿಸಿತು ಎಂದು ಫೋಟೊ ನೋಡಿ ನೀವೂ ನಂಬಲೇಬೇಕು. :-)

ನಾವು ಹೊರಡುವ ಮುಂಚಿನ ಒಂದು ದೃಷ್ಯ
ಗಣಪ ಮತ್ತು ನವಿಲು. malu clicks

ನಾವು ಪಾಂಡಿಚೆರ್ರಿಯಿಂದ ವಾಪಸ್ ಬರ್ತಾ ತಿರುವಣ್ಣಮಲಾಯ್ ನಲ್ಲಿ ಜಾತ್ರೆ. ಜಾತ್ರೆಯ ದಿನ ಏಳು ಗೋಪುರಗಳಲ್ಲಿ ಮೂರನ್ನಾದರೂ ನೋಡಿದರೆ ಅದು ಪುಣ್ಯ ಅಂತ ಪೆರುಮಾಳ್ ಹೇಳುತ್ತಿದ್ದ. ಉಳಿದ ಭಾಗ ಮುಂದೆ
:-)

11 comments:

swapnageleya said...

ಫೋಟೋಸ್ ಸೂಪರ್....

nenapina sanchy inda said...

thank you Ravindra...
:-)
malathi S

Srikanth Manjunath said...

ಒಂದು ವಾಕ್ಯ ಹೇಳುವ ಕಥೆಯನ್ನ ದೃಶ್ಯ ಮಾಡಬಹುದು. ನೂರು ಪುಟಗಳು ಹೇಳುವ ಕಥೆಯನ್ನ ಒಂದು ಚಿತ್ರ ನೀಡಬಹುದು. ಎರಡು ಸಾಧ್ಯತೆಗಳು ಈ ಬರಹದಲ್ಲಿ ಮೂಡಿಬಂದಿದೆ. ಸುಂದರ ಪ್ರವಾಸ ಕಥಾನಕ ಒಳ್ಳೆಯ ತಿರುವಿನಲ್ಲಿ ಬಂದು ನಿಂತಿದೆ. ಚಿತ್ರಗಳಿಗೆ ಮಸಾಲೆ ಟಿಪ್ಪಣಿಗಳು ಚೆನ್ನಾಗಿ ಮೂಡಿ ಬಂದಿದೆ... ನಿಮ್ಮ ಶೈಲಿಯಲ್ಲಿ ಇನ್ನಷ್ಟು ಒಗ್ಗರಣೆ ಪದಗಳನ್ನು ಹಾಕಿದ್ದರೆ ಇನ್ನಷ್ಟು ಸೂಪರ್ ಅಗಿರುತಿತ್ತು. ಸುಂದರ ಲೇಖನ

nenapina sanchy inda said...
This comment has been removed by the author.
nenapina sanchy inda said...

Srikanth manjunath!
ಧನ್ಯವಾದಗಳು.
ಒಗ್ಗರಣೆ ಪದ, ಮಸಾಲೆ ಟಿಪ್ಪಣಿ- ಇದಕ್ಕೆ ಒಂದು ಉದಾಹರಣೆ ಕೊಡುವಂತವರಾಗಿ. ಮುಂದಿನ ಪೋಸ್ಟ್ ಗೆ ಬಳಸಲು ಸಹಾಯವಾಗುತ್ತೆ..:-)
ಮಾಲತಿ ಎಸ್.

Badarinath Palavalli said...

1. ಕು. ನೀಹಾರಿಕಾ ಬಹುಮುಖ ಪ್ರತಿಭೆಯಾಗಿ ರೂಪಗೊಳ್ಳುತ್ತಿರುವುದು ಖುಷಿ ತಂದಿತು.
2. ನನಗೆ ಸದಾ ಸ್ಪೂರ್ತಿ ತುಂಬುವ ತುಂಬು ವ್ಯಕ್ತಿತ್ವಗಳಲ್ಲಿ ರಮಣ ಮಹರ್ಷಿ ಒಬ್ಬರು. ನಿಮ್ಮ ಯಾತ್ರೆ ಮತ್ತು ಚಿತ್ರಗಳು ಮೆಚ್ಚಿಗೆಯಾದವು.

Swarna said...

ನಿಹಾರಿಕಾಗೆ ಕಾಂಗ್ರಟ್ಸ್ ... ಇದೆ ಖುಷಿಯಲ್ಲಿ ಒಂದು ಒಳ್ಳೆ ತಿಂಡಿ ಹಾಕ್ಬಹದು ನೀವು ಮುಂದಿನ ಪೋಸ್ಟ್ನಲ್ಲಿ
ಚೆನ್ನಾಗಿದೆ

nenapina sanchy inda said...

thanks Badari!!
Swarna: NIha paravaagi thanks. mattu your guess is right. next is a food post: maavinkaay+haagalkaay meNsagaay
:-)
malathi S

Srikanth Manjunath said...

ಏನೋ ಮರೆತು ಬಿಟ್ಟಿದ್ದೆ ಅನ್ನಿಸಿತ್ತು. ರಾಶೋಮೊನ್ ಚಿತ್ರಗಳು ರಂಗದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಮಾನವನ ಗುಣ ಸ್ವಭಾವ, ನೋಡುವ ಪರಿ ಎಷ್ಟು ಭಿನ್ನವಾಗಿರುತ್ತೆ ಎನ್ನುವುದನ್ನು ಆರೇಳು ದಶಕಗಳ ಹಿಂದೆಯೇ ತೋರಿಸಿದ್ದ ಪುಣ್ಯಾತ್ಮ ಆಖಿರ ಕುರಸಾವೋ. ನಿಹಾರಿಕಾಗೆ ಅಭಿನಂದನೆಗಳು. ಕಲೆ ಬೆಳೆಯಲಿ.

Radhika said...

Want to watch the movie. Nice pics.

Anonymous said...

Malthi nidanvagi indu mattomme odide tumba kushiyaythu. Photos ellavu chennagide hage nimma kannadavu tumba sudariside.

Preetiyinda

Veda