January 8, 2013

ನೆಲ್ಲಿಕಾಯಿ ಅನ್ನ

ಬೇಕಾಗುವ ಪದಾರ್ಥ:
ಮೂರು ದೊಡ್ಡ ನೆಲ್ಲಿಕಾಯಿ. ಅದನ್ನು ತುರಿದು ಹೀಗೆ ಉಪ್ಪು ಸಕ್ಕರೆ ಬೆರೆಸಿಡಿ.

ಮೆಂತೆ+ಜೀರಿಗೆ+ಹಿಂಗು ಎಣ್ಣೆ ಹಾಕದೆ ಹುರಿಯಿರಿ. ತಣ್ಣಗಾದ ಮೇಲೆ ಕುಟ್ಟಿ ಪುಡಿ ಮಾಡಿ

ಒಗ್ಗರಣೆಗೆ:
ಉದ್ದಿನಬೇಳೆ, ಸಾಸಿವೆ, ಕರಿಬೇವು, ಶೆಂಗಾ, ಮೂರು ಹಸಿ ಮೇಣಸಿನಕಾಯಿ

ಮೊದಲಿಗೆ ಕಾದ ಎಣ್ಣೆಯಲ್ಲಿ ಒಗ್ಗರಣೆಗೆ ಹಾಕಿ. ಇದಕ್ಕೆ ಪುಡಿ ಮಾಡಿದ ಮಿಶ್ರಣ ಬೆರೆಸಿ. ಒಂದು ನಿಮಿಷ ಬಿಟ್ಟು ತುರಿದ ನೆಲ್ಲಿಕಾಯಿ ಸೇರಿಸಿ ಸರೀ ಕೈಯಾಡಿಸಿ. ಅರಶಿನ ಪುಡಿ ಬೆರೆಸಿ.



ತಣ್ಣಗಿನ ಅನ್ನವನ್ನು ಬೆರೆಸಿ . ಉಪ್ಪು ರುಚಿ ನೋಡಿ ಬೇಕಿದ್ದಲ್ಲಿ ಉಪ್ಪು ಬೆರೆಸಿ. 5 ನಿಮಿಷ ಮುಚ್ಚಿಡಿ.
ಒಂದು ಟೇಸ್ಟಿ ಟಿಫಿನ್ ಬಾಕ್ಸ್ ಐಟಮ್ ರೆಡಿ. ಈ ಒಂದು ತಿಂಗಳಲ್ಲಿ ಹಲವಾರು ರಜೆಗಳಿದ್ದಾವೆ. ಮಾಡಿಕೊಂಡು ಪಿಕ್ ನಿಕ್ ಹೋಗಿ ಬನ್ನಿ.

ನಿಹಾ ಳ ಕಾಲೇಜ್ ಮೇಟ್ಸ್ ಗೆ ಇದು ಇಷ್ಟ ಆಗಿದೆ...ನೀವು ಟ್ರೈ ಮಾಡಿ ನೋಡಿ ನನಗೆ ಹೇಳುವಿರಾ??
(ನಾನು ಶೆಂಗಾ ಹಾಕಕ್ಕೆ ಮರೆತಿದ್ದೆ. ಮತ್ತೆ ರಾಯರು ವ್ಹಾಟ್ ಇಸ್ ಎ ಚಿತ್ರಾನ್ನ ವಿಥೌಟ್ ಶೆಂಗಾ ಅನ್ನುತ್ತಾರಂತ, ಬೇಗ ಒಂದು ಹಿಡಿ ಶೆಂಗಾವನ್ನು ಮೈಕ್ರೋವೇವಿಸಿ ಒಗ್ಗರಣೆಗೆ ಬೆರೆಸಿದೆ .ಹೆಂಗೆ ನನ್ನ ಐಡಿಯಾ??)
ಎಂಜಾಯ್
:-)

9 comments:

Srikanth Manjunath said...

ಮೇಡಂ ಬೆಳಿಗ್ಗೆ ಬೆಳಿಗ್ಗೆ ನಿಮ್ಮ ಲೇಖನ ನೋಡುತ್ತಾ ..ಡಬ್ಬಿ ತೆರೆದರೆ ನಿಂಬೆ ಹಣ್ಣಿನ ಚಿತ್ರಾನ್ನ ಘಮ ಘಮ ಎನ್ನುತ್ತಿತ್ತು...ಬ್ಲಾಗಿನಲ್ಲಿ ನೋಡಿದರೆ ಮಸಾಲ ಭರಿತ ನೆಲ್ಲಿಕಾಯಿ ಚಿತ್ರಾನ್ನ...ಈ ಚಳಿಗೆ ಈ ಚಿತ್ರಾನ್ನ..ಆಹಾ ಸವಿದವರೇ ಬಲ್ಲರು...ಸೊಗಸಾಗಿದೆ..

Badarinath Palavalli said...

Nice recipe Malathi avare. I will try this healthy one :)

nenapina sanchy inda said...

Srikanth Manjunath..:-)
Badari Bhaiyya thank u
:-)
ms

Swarna said...

ನೆಲ್ಲಿಕಾಯಿ ತುರಿದು ಉಪ್ಪು, ಮೆಂತೆ, ಸಾಸಿವೆ, ಹಸಿ ಮೆಣಸಿನ ಕಾಯಿ ಪುಡಿ ಹಾಕಿ ವರ್ಷದ ವರೆಗೆ ಇಟ್ಟು ನಾವು
ಇದೇ ರೀತಿ ಚಿತ್ರಾನ್ನ ಮಾಡ್ತೇವೆ. ಇದೇ ಮಿಶ್ರಣಕ್ಕೆ ಮೊಸರು ಹಾಕಿ ಇಂಗು ವಗ್ಗರಣೆ ಕೊಟ್ಟರೆ ಮುದ್ದೆ ಮತ್ತು ಬಿಸಿ ಅನ್ನದ
ಜೊತೆ ತಿನ್ನಲು ರುಚಿ ರುಚಿ ಮೊಸರು ಬಜ್ಜಿ ರೆಡಿ :)

Radhika said...

Have some nellikaayi at home. Will try this :-)

prabhamani nagaraja said...

ಆಹಾ ಬಹಳ ರುಚಿಕರ ಮಾಲತಿಯವರೇ! ನನ್ನ ಬ್ಲಾಗ್ ಗೂ ಬನ್ನಿ.

Anonymous said...

Mal, nanu Nellikai chitranna madidde illa. Bhanuvarada brunchge madi hegittu antha tilistini. Howdu I agree with ur Rayru! what is a chitranna without Shengai!!

Veda

VENU VINOD said...

ಆಹಾ..ಫೋಟೊ ನೋಡಿಯೇ ಬಾಯಲ್ಲಿ ನೀರು. ಬಣ್ಣ ಕೂಡಾ ಚೆನ್ನಾಗಿದೆ. ನೆಲ್ಲಿಕಾಯಿ ಎಂದರೆ ಎಲ್ಲರಿಗೂ ಇಷ್ಟ. ಹಾಗಾಗಿ ಇದೂ ಇಷ್ಟವಾಗಬಹುದು.
-ವೇಣು

ವನಿತಾ / Vanitha said...

Same like swarna..
I too grate nellikaayi, dry it with little salt, then use whole year for tambuli :)..