ದೇವರ ಹುಚ್ಚು ಕಾದಂಬರಿ ಓದಿದ ಮೇಲೆ ಹಳೆಯ ಪೋಸ್ಟ್ ಗೆ ಇನ್ನಷ್ಟು ಮಸಾಲೆ ಸೇರಿಸಿ:
ದೇವರನ್ನು ಜನರು ಯಾಕೆ ನಂಬುತ್ತಾರೆ? ದೇವರೆಂದರೆ ಯಾರು? ನಿಜಕ್ಕೂ ಇದ್ದಾನಾ? ಇವೆಲ್ಲ ನನ್ನನೂ ಕಾಡುತ್ತವೆ. ಹೋಮ ಹವನ ಪೂಜೆ ಎಲ್ಲ ಮಾಡಿಸುತ್ತಾರಲ್ಲವೆ? ಇದೆಲ್ಲ ಯಾಕಾಗಿ? ಮತ್ತು ನಾನ್ಯಾಕೆ ಹೀಗೆ?? ಯಾರು ಅಸ್ತಿಕರು?
niha's art
ನಮ್ಮ ಮನೆ ಎರಡು ಮನೆಗಳ ಮಧ್ಯ sandwich ನಂತಿದೆ.ಇವತ್ತು ಪಕ್ಕದ ಮನೆಯಲ್ಲಿ ಪೂಜೆ ಇತ್ತು. ಹೋಮ ಹವನದ ಹೊಗೆ, especially ಅಗ್ನಿಗೆ ತುಪ್ಪದ ಹವಿಸ್ಸು ಬಿದ್ದ ಪರಿಮಳ ಭರಿತ ಹೊಗೆ, ಪೂರ್ತಿ ನಮ್ಮನೆಯೊಳಗೆ. ಒಂದು ತರಹದ nice nice feeling!!ಅದನ್ನು ಅಘ್ರಾಣಿಸುತ್ತ ಸುಮಾರು ಹೊತ್ತು ಸಮಯ ಕಳೆದೆ. ಅಮ್ಮನ ಫೋನ್ ಬಂದಾಗ ಅಮ್ಮನಿಗೂ ಹೇಳಿದೆ. ಮತ್ತು ಇವತ್ತು ಗ್ಯಾರಂಟಿ ಸೊಳ್ಳೆ ಇರಲ್ಲ ಅಂತಲೂ ಸೇರಿಸಿದೆ.ಅದಕ್ಕೆ ಅಮ್ಮ’ ಇರಲಿ, ನಿನಗೆ ದೇವರು, ಪೂಜೆ ಅಂತಹುದಲ್ಲೆಲ್ಲ ನಂಬಿಕೆ ಇಲ್ಲದಿದ್ದರೂ ನೋಡು, ದೇವರು ಮಾತ್ರ ನಿನ್ನನ್ನ ಬಿಡಲ್ಲ. ದೇವರ ಮನೆ, ದೀಪಗಳನ್ನು ಕ್ಲೀನ್ ಮಾಡುವುದು ಇಂತಹುದೆಲ್ಲ ಮಾಡುತ್ತೇನೆ. ದೇವರ ದೀಪ ಹಚ್ಚುವ, ಪೂಜೆ ಮಾಡುವ ಕೆಲಸ ಮಾತ್ರ ಶ್ರೀಕಾಂತ್ ದ್ದು.
ಆಶ್ಚರ್ಯ ಅಂದರೆ ನನ್ನ ತಂದೆ ತಾಯಿ ಮನೆಯಲ್ಲಿ, ಅಥವಾ ನಾನು ಬೆಳೆದ ಅಜ್ಜನ ಮನೆಯಲ್ಲಿ ದೇವರಲ್ಲಿ ಭಕ್ತಿ ತುಂಬ. ಆದರೂ ನಾನ್ಯಾಕೆ ಹಾಗಾದೆ ಎಂಬುದೇ ಅವರಿಗೆಲ್ಲ ಅಚ್ಚರಿ. ಮದುವೆಯಾದ ಮೇಲೆ ನೋಡಿದ್ರೆ ಶ್ರೀಕಾಂತ್ ಮನೆಯಲ್ಲಂತೂ ದೈವ ಭಕ್ತಿ ಒಂದಳತೆ ಸ್ವಲ್ಪ ಹೆಚ್ಚೆ ಅನ್ನಬಹುದು.
ನಾವು ಬೆಂಗಳೂರಿಗೆ 2001 ನಲ್ಲಿ ಬಂದಾಗ ನಮ್ಮ ಮೊದಲ ಬಾಡಿಗೆ ಮನೆ (ಇದು ಮೂರನೆದು ಮತ್ತು hopefully last )ಇದ್ದದ್ದು ಮಹಾಲಕ್ಷ್ಮಿ ಲೇ ಔಟ್ ನಲ್ಲಿ. ಸ್ವಲ್ಪ ಎತ್ತರದ ಪ್ರದೇಶದಲ್ಲಿತ್ತು. ಎರಡನೇ ಮಹಡಿ. ಮನೆಗಿಂತ ಮನೆಯ ಎದುರಿಗಿದ್ದ ಬಿಸಿಲು ಮಚ್ಚು(terrace) ದೊಡ್ದದಾಗಿತ್ತು. ನನಗಂತು ಮಹಾ ಅನುಕೂಲ. ಯಾಕಂದ್ರೆ ನನ್ನ ಹತ್ತು ಹಲವು ಹೂವಿನ ಕುಂಡಗಳನ್ನಿಡಲು ಜಾಗ ಮಾತ್ರವಲ್ಲದೇ ಇನ್ನಷ್ಟು ಹೊಸ ಹೂ ಗಿಡ ಗಳನ್ನು ನಾನು ತಂದು ಸೇರಿಸಿದೆ.
ನನ್ನ ಝೂಲಾ ಗೂ ಒಳ್ಳೆ ಜಾಗ ಸಿಗ್ತು. ಬೆಳಿಗ್ಗೆ ನಾಲ್ಕು ಗಂಟೆ ನನ್ನ ಮೊದಲ ಚಹಾ ಸೇವನೆಗೆ ಪ್ರಶಸ್ತವಾಗಿತ್ತು. ನಾನು ಕೂತಲ್ಲಿಂದ ISKCON ದೇವಳದ ಗೋಪುರದ ತನಕ clear view ಸಿಗುತ್ತಿತ್ತು. ಮಳೆ ಚಳಿಗಾಲದಲ್ಲೆಲ್ಲ ಸಖತ್ enjoyment. ದೂರದ ಗಿಡಮರದೆಡೆಯಲ್ಲಿ ಕಣ್ಣು ಮುಚ್ಚಾಲೆಯಾಡುವ ಬೀದಿ ದೀಪಗಳು, ಮಳೆ ನೀರಿನ ತರಹಾವರಿ direction ಗಳು, ಡಿಸೆಂಬರ್ ನಿಂದ ಮಾರ್ಚ್ ವರೆಗಿನ ಕುಳಿರ್ಗಾಳಿ ಮತ್ತು ಮಂಜು. ನಿಧಾನವಾಗಿ ಬೆಳಗು ಮೂಡುವುದನ್ನು ನೋಡುವುದು ಅತ್ಯಂತ ಸಂತಸದ ಸಂಗತಿ. ಮುಂಬೈನಲ್ಲಿದ್ದಾಗ ನಮ್ಮ ಐದನೆ ಮಹಡಿ ಕಿಟಕಿಯಿಂದ ನನಗೆ ಸಮುದ್ರ ಕಾಣುತಿತ್ತು. ಸಂಜೆ ನಾನು ಮತ್ತು ನನ್ನ ಫ್ರೆಂಡ್ ನಿಲಿಮಾ terrace ಮೇಲಿಂದ ಸೂರ್ಯಾಸ್ತವನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಈಗ ಅವಳೂ ಬೆಂಗಳೂರಿನಲ್ಲಿದ್ದಾಳೆ.
ಬೆಂಗಳೂರಿಗೆ ಬಂದಾಗಲೆಲ ಅಮ್ಮನಿಗಂತೂ ತುಂಬ ಖುಶಿ..ಒಂದೊಂದು ದಿನ ಒಂದೊಂದು ದೇವಸ್ಥಾನ. ಮನೆಯ ಎದುರುಗಡೆ ರಾಘವೇಂದ್ರ ಸ್ವಾಮಿ ದೇವಸ್ಥಾನ, ಮನೆಯ ಹಿಂಭಾಗದಲ್ಲಿ ಸುಬ್ರಮಣ್ಯ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನ. (ಬಾತ್ ರೂಮ್ ನಿಂದ ಕಾಣುತಿತ್ತು). :-) ನಾವಿರುವ ಬೀದಿಯ entrance ನಲ್ಲಿ ,ಪಂಚಮುಖಿ ಗಣಪ, ವಾಸವಿ,ಬಸ್ ಸ್ಟಾಪ್ ಹತ್ತಿರ ಬಾಲಾಜಿ(ವೆಂಕಟರಮಣ),ಮಂಗಳಕುರುಮಾರಿಯಮ್ಮ ...ಇನ್ನು ಸ್ವಲ್ಪ ಮುಂದಕ್ಕೆ ಹೋದರೆ famous ಮಹಾಲಕ್ಷ್ಮಿ ಮತ್ತು ದೊಡ್ಡ ಹನುಮ....ಅಲ್ಲಿಂದ ಹತ್ತು ಹೆಜ್ಜೆ ನಡೆದರೆ ISKCON. ನಮ್ಮ ಮನೆಗೆ ಬಂದಾಗ, ಅಮ್ಮ ಯಾರೋಂದಿಗೋ ಫೋನ್ ನಲ್ಲಿ ಮಾತಾಡ್ತಾ ’ನಮ್ಮ ಮಾಲತಿಗೆ ದೇವರಲ್ಲಿ ನಂಬಿಕೆ ಇಲ್ಲದಿದ್ದರೆ ಏನಾಯ್ತು. ಅವಳ ಸುತ್ತ ಮುತ್ತ ಮಾತ್ರ ತುಂಬಾ ದೇವರುಗಳು ಇದ್ದಾರೆ’ ಅಂತ
ಇನ್ನೊಂದು ವಿಚಿತ್ರ ಸಂಗತಿಯೆಂದರೆ ನಮ್ಮ ಮನೆಯ ಔನರ್ ಹೆಂಡತಿ, ಪ್ರತಿ ವರ್ಷ ವರಮಹಾಲಕ್ಷ್ಮೀ ವೃತ ಹಾಗೂ ನವರಾತ್ರಿಯಲ್ಲಿನ ಶುಕ್ರವಾರದಂದು ನನಗೆ ಬೆಳಿಗ್ಗೆ 5 ಗಂಟೆಯ ಪೂಜೆಗೆ ಕರೆಯುತ್ತಿದ್ದರು. ನಾನು ಹೇಗೂ ಬೇಗ ಏಳುವುದು ಅವರಿಗೆ ಗೊತ್ತು. breakfast ಮಾಡದೇ ಬನ್ನಿ ಅಂತ ಒಂದು request ಇರುತ್ತಿತ್ತು. ಅವರು first time ಪೂಜೆಗೆ ಕರೆದಾಗಲೇ ನನಗೆ ದೇವರಲ್ಲಿ ನಂಬಿಕೆ ಇರದಿದ್ದು ಹೇಳಿದ್ದೆ. ಆದರೂ ಅವರು ಪೂಜೆಯ ದಿನ ನನ್ನ ಕಾಲು ತೊಳೆದು,ಕೆನ್ನೆಗೆ ಒಂದು 25 ಗ್ರಾ ಅರಿಶಿನ ಬಳಿದು. ಕುಂಕುಮ ಹಚ್ಚಿ, ಕೈಗೆ ಹಸಿರು ಕೆಂಪು ಗಾಜಿನ ಬಳೆ ತೊಡಿಸುತ್ತಿದ್ದರು. ಹಣ್ಣು ಹಂಪಲು ಕೊಟ್ಟು ಕಳಿಸುತ್ತಿದ್ದರು. ನನಗಂತೂ ಸಿಕ್ಕಾ ಪಟ್ಟೆ ಮುಜುಗರ. ನಾವಲ್ಲಿರುವ 5 ವರ್ಷವೂ ಈ ಪ್ರಸಂಗ ಹೀಗೆ ಮುಂದುವರೆಯಿತು.
ಮತ್ತೆ, ನಾವು ಈಗಿರುವ ಮನೆಗೆ ತುಂಬ ಹತ್ತಿರದಲ್ಲಿ ದೊಡ್ಡ ಶನಿ ದೇವಸ್ಥಾನ. ಈಗ ಇಲ್ಲಿ ಬಂದಾಗ ಅಮ್ಮ ಕುಣಿದಾಡುವುದೊಂದೇ ಬಾಕಿ..ಯಾಕೆಂದ್ರೆ ಮನೆಯ ಹಿಂಬಾಗಿಲು ತೆಗೆದ್ರೆ, ಎದುರಿಗಿರುವ ಗೋಡೆ ನೆ ಶ್ರೀ ರಾಮ ಮಂದಿರದ್ದು. ನಾನು ಬಟ್ಟೆ ಒಣಗಿಸಲಿಕ್ಕೆ ಹಾಕುವಾಗಲೆಲ್ಲ ನನ್ನ ಕೈ ಹಲವಾರು ಸಲ ಅಂತು ಗೋಡೆಗೆ ತಾಗುತ್ತೆ.
ಇತ್ತೀಚಿಗೆ ಅಮ್ಮ ನನ್ನ ಜಾತಕ ಯಾರಿಗೋ ತೋರಿಸಿದ್ದರು. ನನಗೀಗ ಏಳುವರೆ ಶನಿ ಕಾಟವಂತೆ. ಪ್ರತೀ ಶನಿವಾರ ಶನಿದೇವರಿಗೆ ಮೂರು ಪ್ರದಕ್ಷಿಣೆ ಹಾಕಬೇಕಂತೆ..........
ಜನವರಿ ೩೦, ೨೦೧೩...continued....
niha's art
ಅಮ್ಮ ಜಾತಕ ತೋರಿಸಿದ ಜ್ಯೋತಿಷ್ಯರು, ಪ್ರತೀ ಶನಿವಾರ ಎಳ್ಳೆಣ್ಣೆಯಲ್ಲಿ ನಾನು ನನ್ನ ಮುಖ ನೋಡಿ ಅದನ್ನು ಶನಿ ದೇವಸ್ಥಾನದ ದೀಪದಲ್ಲಿ ಸುರಿಯಲು ಹೇಳಿದ್ದರು. ನಾನಂತು ಹಾಗೆ ಮಾಡಲಿಲ್ಲ.
ಹೀಗೆ ಎರಡು ವರ್ಷಗಳ ಹಿಂದೆ ಶ್ರೀಕಾಂತ ಗೆ ಡೆಂಗೆ (Dengue) ಆಗಿ ಪರಿಸ್ಥಿತಿ ಸೀರಿಯಸ್ ಆಗಿತ್ತು. ನೀಹಾ ಗೂ ಜ್ವರ ತಲೆಗೆ ಏರಿ ಶ್ರೀಕಾಂತ ನ ವಾರ್ಡ್ ಲ್ಲೆ ಇನ್ನೊಂದು ಬೆಡ್ ನಲ್ಲಿ ಅವಳಿಗೂ ಎಡ್ ಮಿಟ್ ಮಾದಿಸಿದ್ದರು. ಆ ವಾರ ಪೂರ್ತಿ ಆಸ್ಪತ್ರೆ ಮನೆ ಆಸ್ಪ್ತತ್ರೆ ಅಂತ ಅಲೆದಾಡುವುದೇ ಆಗಿತ್ತು. ಎಲ್ಲ ಸರಿ ಹೋಗಿ ಅವರನ್ನು ಮನೆಗೆ ತಂದ ನಂತರ, ಸುಮಾರು ಒಂದು ತಿಂಗಳ ನಂತರ ಅಮ್ಮ ಫೋನ್ ನಲ್ಲಿ ಹೀಗೆ ಕೇಳಿದ್ದರು 'ಅಲ್ಲವೇ ಶ್ರೀಕಾಂತ ಗೆ ಸೀರಿಯಸ್ ಆದಗಲೂ ಕೂಡ ನಿನಗೆ ದೇವರ ನೆನಪು ಬರಲಿಲ್ಲವೇ ಅಂತ. ನನಗೆ ಆಶ್ಚರ್ಯ . ಅಮ್ಮ ನನಗೆ ಡಾಕ್ತರ್, ಔಷಧಿ, blood platelet, transfusion..ಇಷ್ಟರಲ್ಲೆ ತಲೆ ಓಡ್ತಾಯಿತ್ತು ದೇವರನ್ನ ಯಾಕೆ ನೆನೆಸಲಿ ಅಂದೆ? ಅಷ್ಟಲ್ಲದೆ ಒಂದು ದಿನ ಇಡೀ ನಾನು ಉಲ್ಟಾ ಚೂರಿದಾರ್ ಹಾಕಿಕೊಂಡು, ಶ್ರೀಕಾಂತ ರ ರಕ್ತದ ಗುಂಪಿಗೆ ಮ್ಯಾಚ್ ಆಗೋವರನ್ನು ಹುಡುಕುತ್ತ ಇಡೀ ಬೆಂಗಳೂರು ತಿರುಗಿ ಬಂದಿದ್ದೇನೆ. ಅದೂ ನನಗೆ ರಾತ್ರಿ ಬಟ್ಟೆ ಚೆಂಜ್ ಮಾಡುವಾಗ ಗೊತ್ತಾಗಿದ್ದು. ಯಾರನ್ನೂ ನೆನಸುವಷ್ಟು ಪುರುಸೊತ್ತಿರಲಿಲ್ಲ ಅಂತ ಹೇಳಿದ್ದೆ. ಅಮ್ಮ ನನಗೆ 'ವಿಚಿತ್ರ ಪ್ರಾಣಿ' ಅಂತ ಹೇಳಿ ಫೋನ್ ಕಟ್ ಮಾಡಿದ್ದರು.
ಹೀಗೆ ಗಿರೀಶ್ ರಾವ್ ಹತ್ವಾರ್ ಅವರು ಬರೆದ ಕಾದಂಬರಿ 'ದೇವರ ಹುಚ್ಚು' ಓದ್ತಾ ನನ್ನ ಹಳೆ ಪೋಸ್ಟ್ ಗಳಿಗೆ ಇನ್ನಷ್ಟು ಸರಕು ಸಿಕ್ಕಿದೆ.
ಉಡುಪಿಯಲ್ಲಿದ್ದಾಗ ನಡೆದದ್ದು. ನಾನು ಸೂಸಿ (Susie) ಕೃಷ್ಣ ಮಠಕ್ಕೆ ಹೋಗಿದ್ದೆವು. ಸೂಸಿ ಗೆ ಕೃಷ್ಣನೆಂದರೆ ಇಷ್ಟ. ನನಗೂ ನನ್ನ ಅಜ್ಜ ಚಿಕ್ಕಂದಿನಲ್ಲಿ ಬಾಲಕೃಷ್ಣನ ಕತೆಗಳನ್ನು ಹೇಳಿ ಅವನು ಒಂದುತರಹ ನನಗೆ playmate ಆಗಿದ್ದ. ನನ್ನದು ಅವನ ಜತೆ imaginary ಆಟ. ಪುಸ್ತಕ ಒದುವ ಹುಚ್ಚು ಬೆಳೆದ ಮೇಲೆ ಬಾಲಕೃಷ್ಣ ನನ್ನ ಜೀವನದಿಂದ ಕ್ರಮೇಣ ಕಣ್ಮರೆಯಾದ.
ಸೂಸಿಯನ್ನು ಕರೆದುಕೊಂಡೆ ಹೋದೆ. ರಶ್ ಇರಲಿಲ್ಲ. ಕೇವಲ ಬೆರಳಣಿಕೆಯಷ್ಟು ಜನ. ನಾನು ಸೂಸಿಯೊಂದಿಗೆ ಗರ್ಭಗುಡಿಯ ಸುತ್ತು ಹೊಡೆದು ಕಿಂಡಿಯಿಂದ ಕೃಷ್ಣನನ್ನು ತೋರಿಸಿ ಅಲ್ಲೆ ಗೋಡೆಗೆ ಬೆನ್ನಾನಿಸಿ ಕೂತಿದ್ದೆ. ಸೂಸಿ ದೇವರಿಗೆ ಮೂರು ಪ್ರದಕ್ಷಿಣೆ ಹಾಕಿ, ಧ್ಯಾನಕ್ಕೆ ಕೂತರು. ಆಗಲೇ ನಾನು ಆ ಅಮ್ಮ ಮಕ್ಕಳನ್ನು ನೋಡಿದ್ದು. ಇಬ್ಬರು ಹೆಣ್ಣು ಮಕ್ಕಳು. ದೊಡ್ಡವಳು ಕೂತ ಭಂಗಿಯಲ್ಲೆ ನಡೆದಾಡಲು ಬರುವುದಿಲ್ಲ ಎಂದು ಸೂಚಿಸುವಂತಿದ್ದಳು. ಎರಡನೆಯವಳು ತುಂಬ ಚಿಕ್ಕವಳು. ದೊಡ್ಡ ಹುಡುಗಿಯನ್ನು ನೋಡನೋಡುತ್ತಿದ್ದ ಹಾಗೆ ಅವಳ ಒಂದೊಂದೆ ಅಂಗಾಗ ಸೆಟೆದುಕೊಳ್ಳುವುದು ಆ ಹುಡುಗಿ ಸಣ್ಣಕ್ಕೆ ಚೀರಾಡಲು ಆರಂಭಿಸಿದಳು. ಆಗ ಆ ಅಮ್ಮ ಕೃಷ್ಣ ಭಜನೆ ಹಾಡಿದಳು, ಎರಡು ಕೈಯನ್ನು ಬೇಡುವ ಮಾದರಿಯಲ್ಲಿ ಹಿಡಿದು, ಮಧ್ಯ ಮಧ್ಯ ದೇವರಿಗೆ ತನ್ನ ಮಗಳ ಕಡೆ ಬಟ್ಟು ಮಾಡಿ ತೋರಿಸುವುದು ನಡೆಸಿದಳು. ಆ ಹಾಡಲ್ಲಿನ ದೈನ್ಯತೆ, ನೋವು, ಅಸಹಾಯಕತೆ, ಆರ್ದ್ರತೆ, ಆಸೆ ನನ್ನನ್ನು ಎಷ್ಟು ಕಾಡಿಸಿ ಸಿಟ್ಟಿಗೇಳಿಸಿತ್ತೆಂದರೆ, ನಾನೇನಾದರು ದೇವರಿದ್ದಲ್ಲಿ ಪ್ರತ್ಯಕ್ಷಳಾಗಿ ಅವಳ ನೋವನ್ನು ನಿವಾರಿಸುತ್ತಿದೆ ಅನ್ನುವಷ್ಟು. ನಾನು ಸೂಸಿ ಗೋಳಿಬಜೆ ತಿಂದು, ಐಸ್ ಕ್ರೀಮ್ ತಿಂದು ಮನೆಗೆ ಮರಳುವ ಯೋಜನೆ ಹಾಕಿಕೊಂಡಿದ್ವಿ. ಆ ಅಮ್ಮ ಮಕ್ಕಳ ದೃಷ್ಯ ನನ್ನನ್ನು ಎಷ್ಟು ಕದಡಿತೆಂದರೆ, ನಾನು,ಸೂಸಿ' am not feeling good all of a sudden, please let us go home' ಅಂದೆ. ಮನೆಗೆ ಬಂದರೂ ನನಗೆ ಕಣ್ಣ ಮುಂದೆ ಅದೇ ಸೀನ್. ಸೂಸಿ , ಅಲ್ಲಿದ್ದ ಕೆಲವು ಜನರು, ಪುರೋಹಿತರು ಎಲ್ಲರೂ ಇದ್ದು ಆ ಅಮ್ಮ ಮಕ್ಕಳನ್ನು ignore ಮಾಡಿದ್ದರು. ಸುಮಾರು ದಿನಗಳ ನಂತರ ಯಾಕೋ ನನಗೇ ಮಾತ್ರ ಅವರು ಕಾಣಿಸಿದ್ದರಾ ಅಂತ ಅನ್ನಿಸಿದಿದೆ. ಹಾಗೆ ಆ ರಾತ್ರಿ ನನಗೊಂದು ಕನಸು ಬಿದ್ದಿತ್ತು. ಯಾವುದೋ ದನಿ 'ನಿನಗೆ ಅವರ ಬಗ್ಗೆ ಕರುಣೆ ಉಕ್ಕಿತಲ್ಲ' ಅದೇ ಅವರಿಗೆ ಒಳಿತನ್ನು ಮಾಡಿದೆ ಅಂದಾಗ ಆಶ್ಚರ್ಯ ಜತೆ ನಿರಾಳತೆ ತುಂಬಿದ ಸಮಾಧಾನ.
ಹಾಗೆ ಒಂದು ದಿನ ದೇವರ ತಲೆಗೆ ವಜ್ರದ ಕಿರೀಟಕ್ಕೆಂದು ದೇವಸ್ಥಾನದ ಕಮಿಟಿಯವರು ದೇಣಿಗೆ ಕೇಳಲು ಬಂದಿದ್ದರು. ಅಷ್ಟಲ್ಲದೆ ಕೆಲವು ದೇವರ ಪುಸ್ತಕಗಳನ್ನೂ ತಂದಿದ್ದರು ಸೇಲ್ ಗೆ. ನಾನು ಇಲ್ಲ ನಾ ದುಡ್ಡು ಕೊಡಲು ನಿರಾಕರಿಸಿದೆ. ಅದಕ್ಕೆ ಪುಸ್ತ್ಕಗಳನ್ನಾದರೂ ಖರೀದಿಸಿ ಅಂದರು. ನನಗೆ ಅಂತರಲ್ಲೆಲ್ಲ ನಂಬಿಕೆಯಿಲ್ಲ ನಾ ಓದೋದು ಇಲ್ಲ ಅಂದ. ಅದಕ್ಕೆ ಅವರು 'ಯಾಕೆ ನಿಮಗೆ ದೇವರಲ್ಲಿ ನಂಬಿಕೆಯಿಲ್ಲವೆ' ಅಂತ ಕೇಳಿದಾಗ 'ಇಲ್ಲ್' pls ಹ್ಗೊರಡಿ ಅನನಗೆ ಆಫಿಸ್ ಗೆ ಲೇಟ್ ಆಗುತ್ತೆ ಅಂದೆ. ಅವರು ಹೋದರು. 10 ನಿಮಿಷಗಳ ನಂತರ ಪುನ: ಬಾಗಿಲ ಸದ್ದಾಯಿತು. ನೋಡಿದರೆ ಆಗ ಬಂದ ಹೆಂಗಸು 10 -12 ಜನರನ್ನು ಅವಳೊಂದಿಗೆ ಕರೆತಂದಿದ್ದಳು. ಅವರಲ್ಲಿ ಒಬ್ಬ ಹಿರಿಯರು ನನ್ನ ಹೆಸರು, ಮನೆಯವರ ಹೆಸರು ಮುಂತಾದನ್ನು ಕೇಳಿದರು ನಾನು ಹೇಳಿದೆ. ಮತ್ತೆ ದೇವರಲ್ಲಿ ನಂಬಿಕೆಯಿಲ್ಲ ಅಂತಂದ್ರಂತೆ'? ನಾನು ಹೌದು ಅಂದೆ. ಪುನ: ದುಡ್ಡು ಕೊಡಲಿಕ್ಕೆ ಪೀಡಿಸಿದರು. ನನಗೂ ಕಿರಿಕಿರಿ ಅನ್ನಿಸಲಿಕ್ಕೆ ಶುರು ಆಯ್ತು. 'ಪ್ಲೀಸ್ ಇಲ್ಲಿಂದ ಹೊರಡಿ ನಾನು ಹೊರಗಡೆ ಹೋಗಬೇಕು ಅಂದ' ಅದಕ್ಕೆ ಅವರು 'ನಿನಗೆ ಒಳ್ಳೆಯದಾಗುವುದಿಲ್ಲ. ಬೇಗ ನೀನು ದೇವರನ್ನು ನಂಬುವಂತವಳಾಗುತ್ತಿಯಾ' ಅಂತೆಲ್ಲ ಅಂದರು. ಅದಕ್ಕೆ ನಾ ಅಂದೆ, 'ದೇವರೇನು ನಿಮ್ಮ ಬಳಿ ಖುದ್ದಾಗಿ ಹೇಳಿದನಾ' ನನಗೆ ವಜ್ರದ ಕಿರೀಟ ಮಾಡಿಸಿ ಕೊಡಿ ಅಂತ. ಅದೇ ದುಡ್ಡಿನಿಂದ ಇಂದಿನ ಯುವಕರಿಗೆ ಸ್ವ ಉದ್ಯೋಗ ಮುಂತಾದನ್ನು ಕಲ್ಪಿಸಿಕೊಡಬಹುದಲ್ಲ್ವಾ?ದೇವರು ನಿಮಗೆ ಥ್ಯಾಂಕ್ಸ್ ಹೇಳಲ್ಲ, ಈ ಯುವಕರಾದರೂ ಅವರ ಜೀವನಕ್ಕೆ ದಾರಿ ತೋರಿಸಿದ್ದಿರೆಂದು ನಿಮ್ಮೊಂದಿಗೆ ಧನ್ಯತಾಭಾವ ಹೊಂದಬಹುದು ಮತ್ತೆ ನಿಮ್ಮ ಧಮಕಿಗೆಲ್ಲ ನಾನು ಹೆದರುವವಳಲ್ಲ'. ನಮ್ಮ ಮನೆಯವರಿಗೆಲ್ಲ ನನ್ನ ಬಗ್ಗೆ ಗೊತ್ತು. ದಯವಿಟ್ಟು ನೀವು ಈಗ ಜಾಗ ಖಾಲಿ ಮಾಡಿ' ಅಂದೆ. ಆಮೇಲೇನೂ ಗೊಣಗ್ತಾ ಹೋದ್ರು.
ಅಮ್ಮ ಇನ್ನೊಬ್ಬ ಯಾರೋ ಹೆಸರಾಂತ್ ಜ್ಯೋತಿಷಿಗೆ 'ಇವಳಿಗೆ ಶನಿ ಕಾಟ. ಉಪಶಮನಕ್ಕೆಂದು ಹೇಳಿದ್ದ ಒಂದು ಉಪಾಯವನ್ನೂ ಮಾಡಲ್ಲ' ಅಂತ ಹೇಳಿದಾಗ ,'ತಾಯಿ ಅವಳ ಸುದ್ದಿಗೆ ಹೋಗಬೇಡಿ. ಅವಳ ಹೇಗಿದ್ದಾಳೋ, ಹಾಗೆ ಇರಲಿ' ಅಂತ ಸುಮ್ಮನಾಗಿಸಿದರಂತೆ..:-) ಇವನ್ನೆಲ್ಲ ನಾನು ತುಂಬ ಎಂಜಾಯ ಮಾಡ್ತೇನೆ ವಿನ: ನಾನೇನೂ 'ದೇವರು ಅಂತ ತಿಳಿದಿಕೊಂಡಿಲ್ಲ. ನನ್ನನ್ನು ನಂಬಿ 'ಪ್ಲೀಸ್ ಪ್ಲೀಸ್'
ರಸ್ತೆ ಮೇಲೆ ಹೋಗ್ತ ಜನರು ನನ್ನನ್ನು ನೋಡಿ ನಗುವುದು, ತಬ್ಬಿ ಕೊಳ್ಳುವುದು, ಸುಮ್ಮನೆ ಮಾತನಾಡಿಸುವುದು, ಕೆಲವು ಮಿತ್ರರಿಗೆ ನನ್ನ ಜತೆ ಮಾತನಾಡಿದರೆ ಅವರಿಗೆ ಒಳ್ಳೆಯದಾಗುತ್ತೆ ಅಂತ ಅನ್ನಿಸುವುದು, ನನ್ನ ತಮ್ಮ 'ನೀನು ನನ್ನ ಪ್ಯಾಕ್ಟರಿ' ಗೆ ಲಕ್ಕಿ' ಅಂತ ನಾನು ಅವರಲ್ಲಿ ಹೋದಾಗ ನನಗೆ ಫ್ಯಾಕ್ಟರಿ ಕರೆದುಕೊಂಡು ಹೋಗಿ ನನ್ನ ಕಾಲಿಗೆ ಎರಗುವುದು, (ಅವನಂತು ಒಂದು ಹೆಜ್ಜೆ ಮುಂದೆನೆ ಅಲೋಚಿಸುತ್ತಾನೆ. ನಾನು ಮಾಲತೀಆನಂದಮಯೀ ಆಶ್ರಮ ಪ್ರಾರಂಭಿಸಿ ಎಲ್ಲರನ್ನು ತಬ್ಬಿ ಮುತ್ತು ಕೊಡಬೇಕಂತೆ, ಅವನು ಮ್ಯಾನೇಜರ್ ಆಗಿ ದುಡ್ಡು ಮ್ನ್ಯಾನೇಜ್ ಮಾಡ್ತಾನಂತೆ') ಶ್ರೀಕಾಂತ ಪ್ರೋಜೆಕ್ಟ್ ಪ್ರೋಪೋಸಲ್ ಕಳಿಸುವ ಮುನ್ನ ನನ್ನ ಕೈ ನಿಂದ ಆ ಪೇಪರ್ ಅನ್ನು ಮುಟ್ಟಿಸುವುದು, ಮೈಲ್ ನಲ್ಲಿ ಕಳಿಸಬೇಕಾದ್ರೆ ಫೈನಲ್ 'ಎಂಟರ್' /ಸೆಂಡ್ ಬಟನ್ ನನ್ನಿಂದ ಮಾಡಿಸುವುದು, ಅಪಾರ ರಘು ನ ಯಾವ ಕವರ್ ಪೇಜ್ ಗೆ ಪ್ರಶಸ್ತಿ ಬರುತ್ತೆ (ಪ್ರೂಫ್ ಇದೆ ಇದಕ್ಕೆ ನಮ್ಮಿಬ್ಬರ ಬಳಿಯೂ) ಇತ್ಯಾದಿ ಇತ್ಯಾದಿ..ಎಲ್ಲ ನೋಡಿ ನಾ ನಿಹಾಗೆ ಹೇಳಿದ್ದೆ, ನಿಹಾ ನಾನು ಶಾಪಗ್ರಸ್ತ ದೇವತೆ' ಇರಬೇಕು ಕಣೆ ಅಂತ. ಅವಳು ಇರಲಿಕ್ಕಿಲ್ಲ ಅಮ್ಮ. 'ಬೆಳಿಗ್ಗೆ ಎದ್ದಾಗ ನಿನ್ನ ಬಾಯಿಗೆ ವಾಸನೆ ಹೊಡೆಯುತ್ತೆ' ಅಂತ ಹೇಳಿ 'ನಾನು-ದೇವರು' ಎಂಬ ಹುಚ್ಚನ್ನು ನನ್ನ ತಲೆಯಿಂದ ಜರ್ರ್ ನೆ ಇಳಿಸಿದಳು. ಹೌದಲ್ಲವೇ ನಾನು ತಿನ್ನುತ್ತಿನಿ, ಟಾಯಲೆಟ್ ಗೆ ಹೋಗ್ತೀನಿ..."ದೇವರು-ಮಲಮೂತ್ರ ಇಲ್ಲದವರು" ಅಂತೆಲ್ಲೋ ಓದಿದ್ದನ್ನು ನೆನಪಿಸುತ್ತಾಳೆ ಮಾಲವಿಕ...:-)
ಹೀಗೆಲ್ಲ ನಡೆಯುತ್ತೆ ಅಂತ ನಾನು 'ನನ್ನನ್ನು ದೇವರು ಅಂದುಕೊಂಡಿದ್ದೀನಾ? ಖಂಡಿತ ಇಲ್ಲ. ಕೆಲವರು ನನ್ನನ್ನು ತಮ್ಮ ಜೀವಕ್ಕಿಂತ ಹೆಚ್ಚಿಗೆ ಹಚ್ಚಿಕೊಂಡಿದ್ದವರಿದ್ದಾರೆ, ನಾನು ಅವರನ್ನು ಹಚ್ಚ್ ಕೊಂಡಿಲ್ಲ. ಅವರು ನನ್ನ ಜತೆ ಸಂಪರ್ಕದಲ್ಲಿರುವಷ್ಟು ಸಮಯ ನಾನು ಅವರ ಜತೆ ಇರ್ತೀನಿ, ಅಮೇಲೆ ಮರೆತು ಬಿಡ್ತೀನಿ. ಈ ಕಾರಣಕ್ಕೆ ಜಗಳ ಮಾಡುವವರೂ ಇದ್ದಾರೆ.
ದೇವರನ್ನು ನಂಬುವವರು ನಿಜವಾಗಿ ಹೇಳಿ: ಸಂತೋಷದಿಂದ್ದಾಗ ದೇವರಿಗೆ 'ಧನ್ಯವಾದ' ದೇವರೆ ಅಂದಿದ್ದೀರಾ? ಇಡಿ ದಿನ ಖುಶಿಯಾಗಿದ್ದು ರಾತ್ರಿ ಮಲಗುವಾಗ 'ಇವತ್ತಿನ ದಿನ ಚೆನ್ನಾಗಿತ್ತು, ಇವತ್ತು ನಾನು ಮಾಡಿದ ಅಡಿಗೆ ರುಚಿಯಾಗಿತ್ತು ಎಲ್ಲರೂ ಅದನ್ನು ಎಂಜಾಯಿಸಿದರು, ನಾನು ಬರೆದ ಕತೆ ಚೆನ್ನಾಗಿದೆ ಅಂದ್ರು, ಇವತ್ತೂ ಯಾವುದೇ ಟೆನ್ಷನ್ ಇರಲಿಲ್ಲ, ಇವತ್ತು ಟಾಯ್ಲೆಟ್ ಸಲೀಸಾಗಿ ಆಯ್ತು ಇಂತಹ ಚಿಕ್ಕ ಪುಟ್ಟ ವಿಷಯಗಳು- ನಿನಗೆ ಥ್ಯಾಂಕ್ಸ್ ದೇವರೆ ಅಂದಿದ್ದೀರಾ?? ಹೃದಯದ ಮೇಲೆ ಕೈಯಿಟ್ಟು ಹೇಳಿ..ದೇವರನ್ನು ಕೇವಲ scapegoat ತರಹ ಯೂಸ್ ಮಾಡ್ತೀವಾ??
ದೇವರನ್ನು ಜನರು ಯಾಕೆ ನಂಬುತ್ತಾರೆ? ದೇವರೆಂದರೆ ಯಾರು? ನಿಜಕ್ಕೂ ಇದ್ದಾನಾ? ಇವೆಲ್ಲ ನನ್ನನೂ ಕಾಡುತ್ತವೆ. ಹೋಮ ಹವನ ಪೂಜೆ ಎಲ್ಲ ಮಾಡಿಸುತ್ತಾರಲ್ಲವೆ? ಇದೆಲ್ಲ ಯಾಕಾಗಿ? ಮತ್ತು ನಾನ್ಯಾಕೆ ಹೀಗೆ?? ಯಾರು ಅಸ್ತಿಕರು?
ಹೊರಗೆ ಸಭೆ ಸಮಾರಂಭದಲ್ಲಿ / ಪಂಡಿತ್ ಜಸರಾಜರು, ನಮ್ಮ ಎಮ್ ಎಸ್ ಸುಬ್ಬುಲಕ್ಷ್ಮಿ, ಪಂಡಿತ್ ವೆಂಕಟೇಶಕುಮಾರ, ಭೀಮಸೇನ ಜೋಶಿಯವರು, ಪ್ರವೀಣ ಘೋಡಕಿಂಡಿ ಕೊಳಲು, ಪಂಡಿತ್ ಶಿವಕುಮಾರ ಶರ್ಮ ರ ಸಂತೂರ ಇವೆಲ್ಲ ಕೇಳುವಾಗ, ದೇವರ ನಾಮ ಸುಶ್ರಾವ್ಯವಾಗಿ ಹಾಡುತ್ತ, ಕೃಷ್ಣಾsssss' ಅಂತ ಹಾಡು ವಾಗ ನನಗ್ಯಾಕೆ ತನ್ಮಯತೆ??ಅದ್ಯಾಕೆ ನನ್ನ ಎದೆಯಾಳಕ್ಕೆ ಹೋಗಿ ನನ್ನ ಕಣ್ಣು ತನ್ನಷ್ಟಕ್ಕೆ ಮುಚ್ಚಿಕೊಳ್ಳುತ್ತವೆ?? .......ಕೆಲವು ವಿಷಯಗಳನ್ನು ವಿಶ್ಲೇಷಿಸದೆ (spelling wrongaa) ಸುಮ್ನೆ ಅನುಭವಿಸಬೇಕು ಅಂತ ನನ್ನ ಅನಿಸಿಕೆ.
parting punch: ಅಮ್ಮ ಇಷ್ಟಕ್ಕೆ ಸುಮ್ಮನಾಗಿದ್ದಾರಾ? ಇಲ್ಲ. ಅವರದ್ದು ಒಂದು ಪಾರ್ಟಿಂಗ್ ಶಾಟ್( parting shot)' 'ನನಗೆ ದೇವರಲ್ಲಿ ನಂಬಿಕೆಯಿದೆ. ಆ ನಂಬಿಕೆನೇ ನಿನ್ನನ್ನು ಕಾಯ್ತಾ, ಕಾಪಾಡ್ತಾ ಇದೆ' ಅಂತ..ಹಾಗಾದ್ರೆ ಹಾಗೆ...ನನ್ನ ನಗುವೇ ಇದಕ್ಕೂ ಕೂಡ ಉತ್ತರ.
ಸುಮ್ನೆ ಈ ಪೋಸ್ಟ್ ಅನ್ನ ಎಂಜಾಯ್ ಮಾಡಿ. iam like that only neither ಆಸ್ತಿಕ not ನಾಸ್ತಿಕ.
ಹೊಯ್ ಮಾರಾಯ್ರೆ ಇದನ್ನೆಲ್ಲ ಓದಿ ಹೆದರಬೇಡಿ. ಐ ಯಾಮ್ ನಾರ್ಮಲ್ . ನನ್ನ ಅಡಿಗೆಯಲ್ಲೂ ಕೆಲವೊಮ್ಮೆ ಉಪ್ಪು ಜಾಸ್ತಿ ಯಾಗುತ್ತೆ, ಮನೆ ಗಲೀಜು ಇಟ್ಟುಕೊಂಡಾಗ ಶ್ರೀಕಾಂತ ಹತ್ತಿರ ಬೈಯಿಸಿಕೊಳ್ಳುತ್ತೀನಿ, ನಾನು ಬೀಳ್ತೀನಿ, ಏಳ್ತೀನಿ.
ನಾನು ಸಿರ್ಫ್ ಮಾಲತಿ/ ಮಾಲ್ತಿ/ಮಾಲsssತಿsss/ಮಲ್ಲು/ಮಲ್ಲಿ/ ಮಾಂಚು/ಮಮಾನ್/ಮೊಮ್ಮೀ/ನಂದೀತಾ/ನಂದೀಪಾ/ ಮಲ್ಲಿಕಾಕಾ/ಸುಬ್ಬಿ/ಜೀಜಾಬಾಯಿ/ಜಮದಗ್ನಿ/ದುರ್ವಾಸಮುನಿ/ 'ಮಾಲ್ದೀ-ಗಾರೀಬಾಲ್ಡ್ದೀ' etc..not god ever!!
ಕೆಲವೊಮ್ಮೆ ನಾನು ನುಡಿದದ್ದು ನಿಜವಾಗದಿದ್ದರೆ ನಾನು ಮಹಾ ನಾಟಕೀಯವಾಗಿ ಛೆ! I am losing my divine power' ಅಂತಲೂ ಹೇಳ್ತೀನಿ. ನಗ್ತೀನಿ. ನಗಿಸ್ತೀನಿ. ಜೀವನವನ್ನು ಕಾಂಪ್ಲೆಕ್ಸ್ ಮಾಡಕ್ಕೆ ಹೋಗಲ್ಲ.
ಲವ್ ಯು ಅಕ್ಕ, ನಿಂಪು, ಶ್ರೀಕಾಂತ & ಪಾಂಡು, ಶ್ರೇಯ,ಸ್ಯಾಮಿ for making my life so interesting and enjoyable. and love u all blog reading guys...
ಇಷ್ಟೆಲ್ಲ ಓದಿ ಬೋರ್ ಅನ್ನಿಸದಿದ್ರೆ dessert ತರಹ ಈ ಹಳೆಯ ಪೋಸ್ಟ್ ಕೂಡ ಓದಿ:
:-)

5 comments:
ನಿಮ್ಮ ಎರಡು ಲೇಖನಗಳನ್ನು ಓದಿದಾಗ ಮನದಲ್ಲಿ ಮೂಡಿದ ಪದಗಳು ಇವು...
ಯುಗು ಯುಗ ದಾಟಿ ಮಾನವ ಬಂದಿದ್ದರೂ ಅವನ ನಂಬಿಕೆಯಾ ಮೇಲಿನ ನಂಬಿಕೆ ಎಳ್ಳಷ್ಟು ಕಡಿಮೆಯಾಗಿಲ್ಲ...ಕೆಲವರಿಗೆ ದೇವರಲ್ಲಿ ನಂಬಿಕೆ..ಕೆಲವರಿಗೆ ನಂಬಿಕೆಯೇ ದೇವರು..ಇಬ್ಬರ ವಾದವೂ ಸರಿ...
ಬೆಚ್ಚಿ ಬೀಳಿಸುವಂತಹ ಮೂರು ಅನುಭವಗಳು, ಉಡುಪಿ ಮಠದ ದೃಶ್ಯ, ಎಲ್ಲವು ನಮ್ಮೆದುರಲ್ಲಿ ಯಾರೋ ಕೂತು ಹೇಳುತ್ತಿದ್ದಾರೆ ಅನ್ನುವ ಅನುಭೂತಿ ಕೊಡುತ್ತದೆ.....ಹಲವಾರು ಬಾರಿ ಯಾವುದೇ ಪೂರ್ವಗ್ರಹವಿಲ್ಲದೆ ನಿಚ್ಚಳ ಮನದಿಂದ ನುಡಿಯುವ ಮಾತುಗಳೇ ಅಮೃತಮಯ ವಾಗುತ್ತವೆ..
ಲೇಖನ ಓದುತ್ತ ಹೋದ ಒಂದು ತರಹ ಟ್ರಾನ್ಸ್ ಗೆ ಹೋದ ಅನುಭವ...ಸುಂದರ ಅನುಭವ ಕಥಾನಕಗಳ ಮಾಲೆ ನಿಮ್ಮ ಲೇಖನ...ದೇವನೊಬ್ಬ ನಾಮ ಹಲವು..ಎನ್ನುವ ಹಾಗೆ...ನಿಮ್ಮ ಸಹಸ್ರ ನಾಮಾವಳಿ ಸುಂದರವಾಗಿದೆ
devara huchchu pustaka hEgide anta baredE illa?
ಮಾಲತಿ,ಬರಹದ ಶೈಲಿ ಇಷ್ಟವಾಯ್ತು.ನೀವೇ ಎದುರಿಗೆ ಕುಳಿತು ಮಾತಾಡಿದಂತಾಯ್ತು.ಚಿತ್ರಗಳೂ ಚೆನ್ನಾಗಿವೆ.ಅಮ್ಮ,ಮಗಳು ಇಬ್ಬರಿಗೂ ಅಭಿನಂದನೆಗಳು.
ellarigoo thank you
:-)
malathi S
:D :D..!!!!!! Devre... !!!!!!!!!!!!!
Post a Comment