ಬೆಂಗಳೂರಿಗೆ ಬಂದ ಹೊಸತರಲ್ಲಿ ಸುಚಿತ್ರ ಫಿಲ್ಮ್ ಸೊಸೈಟಿ ಗೆ ಒಂದು ಸಿನಿಮಾ ಪ್ರದರ್ಶನಕ್ಕೆ ಹೋಗಿದ್ದೆವು. ಅಲ್ಲಿ ಪ್ರಶಾಂತ್ ಪಂಡಿತ ನಮಗೆ ಸುಚಿತ್ರ ಫಿಲ್ಮ್ ಸೊಸೈಟಿಯ ಮೆಂಬರ್ ಆಗಲು ತಿಳಿಸಿದರು. ಫಾರ್ಮ್ ನಲ್ಲಿ ಮನೆಯ ವಿಳಾಸ ಇ-ಮೈಲ್ ಇತ್ಯಾದಿ ನಮೂದಿಸಿದ್ದೆ. ಹಾಗಾಗಿ ಸುಚಿತ್ರಾದಲ್ಲಿ ಏನಾದರೂ ಸಭೆ-ಸಮಾರಂಭಗಳಿದ್ದರೆ ನನಗೆ ಇ-ಮೈಲ್ ಬರುತ್ತಿತ್ತು. ಒಂದೊಮ್ಮೆ ಯಾವುದೋ query ಗೆ ನಾನು reply all ಕೊಟ್ಟಿದ್ದು, ಆಗ ಪರಿಚಯ ಆಗಿದವರು ಸಲೀಲ್. ಆಮೇಲೆ ನಾವು ಯಾಹೂ ಚಾಟ್ ನಲ್ಲಿ on-off ಸಿಕ್ಕುಮಾತು-ನಗು ವಿನಲ್ಲಿ ಪರಿವರ್ತನೆಯಾಯಿತು. ಆಮೇಲೆ ಫೋನ್ ನಂ ವಿನಿಮಯ ಮಾಡಿಕೊಂಡ ಮೇಲೆ ಆಗಾಗ ಮತಾಡುತ್ತಿದ್ದೆವು. ಅವರು ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೂಲ ತ: ಕೇರಳದವರು. ಕೆಲ ವರುಷ ಹೊರದೇಶದಲ್ಲೂ ಇದ್ದು ಬಂದವರು. ಅವರ ಹಾಬಿ ಶಾರ್ಟ್ ಫಿಲ್ಮ್ ಮಾಡುವುದಿತ್ತು.
ಹಾಗೆ ಒಂದು ಸಲ ಮಾತನಾಡುವಾಗ ಇವತ್ತು 'ನನ್ನ ಅಡಿಗೆಯವನು ಬಂದಿಲ್ಲ' ಹೊರಗೆ ಊಟಕ್ಕೆ ಹೋಗ್ತಾ ನಿಮ್ಮ ಜತೆ ಮಾತಾಡ್ತಿದ್ದೀನಿ ಅಂದ್ರು. ಮಾತಿಗೆ ನಿಮ್ಮನೇಲಿ ಏನು ತಿಂಡಿ ಅಂತ ಕೇಳಿದರು. ನಾನು 'ಕೇರಳ ಕೊಕೋನಟ್ ರೈಸ್' ಅಂದೆ.
"ಅದನ್ನು ಹೇಗೆ ಮಾಡುವುದು"?
ನಾನು ಹೇಳಿದೆ. ಇಂಟರೆಸ್ಟಿಂಗ್ ಅಂದರು. ಆಮೇಲೆ ನಮ್ಮ ಟಾಪಿಕ್ ಬೇರೆ ವಿಷಯಗಳಗೆ ಹೊರಳಿತು.
ಮರುದಿನ ಪುನ: ಫೋನ್ ಮಾಡಿದರು' more than 3/4 of my life i spent in Kerala da. but i had not heard nor tasted Kerala coconut rice. So i asked my mommee. and she said such a thing as Kerala Coconut rice does not exist' ಅಂತ. ಹೊರದೇಶದಲ್ಲಿ ಹಲವಾರು ವರ್ಷ ಇದ್ದುದರಿಂದ ಅಪರೂಪಕ್ಕೊಮ್ಮೆ ಕೆಲವು ಪದಗಳಿಗೆ ಅವರ ಮಾತಲ್ಲಿ ಮಲಯಾಳಿ accent ಹೊಮ್ಮುತ್ತಿತ್ತು. ಅದಲ್ಲಿ 'ಕೋಕನಡ್', ಓಟೋ (auto) ಅಂತದಕ್ಕೆಲ್ಲ ನಾನು ಮುಕ್ತವಾಗಿ ನಗುತ್ತಿದ್ದೆ. why da you are teasing me ಅಂತಿದ್ದರು ಕೂಡ.
ಆ ಮೇಲೆ ಕೆಲಸ ಬಿಡುವ ಅಂದಾಜಲ್ಲಿ ನನ್ನ ಬಳಿ ಕೌಂನ್ಸೆಲ್ಲಿಂಗ್ ಅಂತ ಹಲವಾರು ಬಾರಿ ಮಾತನಾಡಿದ್ದಲ್ಲದೇ, ಮನೆಗೆ ಬಂದು ನಮ್ಮ ಜತೆ ಊಟ ಮಾಡಿ, ಒಂದು ಜಮೀನು ಖರೀದಿಸಲು ಅದರ ಬಗ್ಗೆ ಶ್ರೀಕಾಂತ ಹತ್ತಿರ ಸಮಾಲೋಚನೆ ನಡೆಸಿದರು. ನನ್ನ ತರಹ ಅವರಿಗೂ ಓದಿನ ಹುಚ್ಚು. ಮಲಯಾಳಿ/ಆಂಗ್ಲ್ ಪುಸ್ತಕ, ಮಲಯಾಳಿ ಸಿನಿಮಾ ಬಗ್ಗೆ ಎಲ್ಲ ನಮ್ಮ ಮಾತು ಇರುತ್ತಿತ್ತು.
ನನಗೆ, ಹೇಳಿದಂತೆ ಮಾಡುವ, ಧೈರ್ಯದಿಂದ ಮುನ್ನುಗ್ಗುವ ಈಗಿನ ಯುವಕ ಯುವತಿಯರನ್ನು ಕಂಡರೆ ಏನೋ ಒಂದು ತರಹ ಖುಶಿ.ಸಲೀಲ್ ನನಗಿಂತ ತುಂಬ ಚಿಕ್ಕವರು. malathi i have enough savings to last me for another year. Will i be able to make it? I am so used to drawing a fixed salary every month its a bit scary what do you suggest anta? ನಾ ಅವರಿಗೆ go ahead, everything is going to be fine' ಅಂದಿದೆ. ಏನಾದ್ರು ಟೆನ್ಷನ್ ಆದಾಗ ಫೋನ್ ಮಾಡೋವ್ರು.
ಈಗ ಅವರು ಕೇರಳದಲ್ಲಿ ಜಮೀನು ಖರೀದಿಸಿ ಅಲ್ಲಿ ಕೃಷಿ ಮಾಡ್ತಾ, ರಾಷ್ಟ್ರೀಯ/ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ short film/Documentary film maker. ಅವರ 7 ವರ್ಷದ ಮಗಳು ಪಾರೋ ಸಣ್ಣ ಪುಟ್ಟ advertisement ನಲ್ಲಿ ಕಾಣಿಸಿಕೊಳ್ಳುತ್ತಾಳೆ. ಅವರ ಪತ್ನಿ ಸಿಂಧು ನ ಸಾಥ್ ಅವರಿಗಿದೆ.
ಹೀಗೆ kerala coconut rice ಅನ್ನುವ ಹೆಸರಿಟ್ಟು ನನ್ನದೇ ಆದ ಹೊಸರುಚಿ ಮಾಡಿದಾಗಲೆಲ್ಲ ನನಗೆ ಸಲೀಲ್ ಜತೆ ಮಾತಾಡಿದ್ದು ನೆನಪಾಗುತ್ತೆ. ಈಗಲೂ ಫೋನ್ ಮಾಡಿದಾಗಲೆಲ್ಲ ನಮ್ಮ ಕೋಕೊನಟ್ ರೈಸ್ ಬಗ್ಗೆ ಮಾತು ಹೊರಳೇ ಹೊರಳುತ್ತೆ.
ಅದನ್ನು ತಯಾರಿಸಲು:
1. ಅನ್ನ ಮಾಡಿಟ್ಟುಕೊಂಡು ಅದು ತಣ್ಣಗಾಗಲು ಬಿಡಿ. ಅನ್ನ ಬಿಡಿ ಬಿಡಿಯಾಗಿರಲಿ
2. ಜೀರಿಗೆ, ಮೆಂತೆ, ಹಿಂಗು ಇವುಗಳನ್ನು ಎಣ್ಣೆ ಹಾಕದೇ ಹುರಿದು, ಅದು ತಣ್ಣಗಾದ ನಂತರ ಪುಡಿಮಾಡಿಟ್ಟುಕೊಳ್ಳಿ.
3. ಒಗ್ಗರಣೆಗೆ ಉದ್ದಿನ ಬೇಳೆ, ಸಾಸಿವೆ, ಸ್ವ್ಲಲ್ಪ ಹೆಚ್ಚೆ ಕರಿಬೇವು ಹಾಕಿ, ನಾಲ್ಕೈದು ಉದ್ದಕ್ಕೆ ಸೀಳಿದ ಹಸಿಮೆಣಸಿನಕಾಯಿ ಹಾಕಿ.
ಇದಕ್ಕೆ ಮಾಡಿಟ್ಟುಕೊಂಡ ಪುಡಿ ಬೆರೆಸಿ. ಅನ್ನ ಬೆರೆಸಿ ಉಪ್ಪು ಸಕ್ಕರೆ ಹಾಕಿ. ೫ ನಿಮಿಷ ಮುಚ್ಚಿಡಿ. ಆಮೇಲೆ ಅದರ ಮೇಲೆ ತಾಜಾ ಹೆರೆದ ಕಾಯಿ ತುರಿ ಸಿಂಪಡಿಸಿ.
kerala coconut rice ರೆಡ್ಡಿ ಟು ಈಟ್..
:-)
6 comments:
Malathi, your way of introducing friends is nice. It's as if you're in front of me talking about it :-)
Check this out: http://basavanagudda.blogspot.in/
Prof. Pradeep was working in IISc and now settled in his native place near Gubbi, doing agriculture, teaching village students etc. Would like to meet him sometime. Would love it if we can go together :-)
Recipe seems simple. Will try it out :-)
thanks Radhika. We can make the visit on some weekend in Feb 13. we will work it out. will chk link in a few minutes
:-)
malathi S
ನಿಮ್ಮ ಬ್ಲಾಗನ್ನು ತಿಂಡಿಯ ಮುಂಚೆ ಇಲ್ಲವೇ ಊಟದ ಸಮಯದಲ್ಲಿ ನೋಡಲೇ ಬಾರದು..ತಂದಿರುವ ಡಬ್ಬಿ ಕೂಡ ಬಾಯಲ್ಲಿ ನೀರು ಸೂಸುತ್ತದೆ...ಏನೇ ಲೇಖನವಿದ್ದರು ಅದನ್ನು ಬರೆಯುವ ಶೈಲಿ ಒಗ್ಗರಣೆ ಹಾಕಿ ಘಮಗುಟ್ಟಿಸಿ ಬಿಡುತ್ತೀರಿ....ಸುಂದರ ಲೇಖನ ಮೇಡಂ..
I was thinging that this rice was made from coconud from Kerala that's why that name came alle!
Dear Anonymous ji
cokanad rice is a figmend of my imaginasion..
thank u
:-)
maladhi ess
thank you Srikanth Manjunath!!
:-)
malathi S
Post a Comment