ನಾನಿ ನಾನು ಚಿಕ್ಕವಳಿದ್ದಾಗ ಹೇಳಿದ ಕತೆ: it runs like this:
ಒಬ್ಬ ಮನುಷ್ಯ ಸಡನ್ ಆಗಿ ಧನಿಕನಾಗ್ತಾನಂತೆ. ಅವನ ಹೆಂಡತಿಗೆ ಅವನು ನಗಗಳಿಂದ ಅಲಂಕರಿಸಿತ್ತಾನೆ. ಮೊದಲು ಅವರು ಕಷ್ಟಪಟ್ಟು ಹೊಲದ ಕೆಲಸ ಮಾಡಿಕೊಂಡಿದ್ದರು. ಅಷ್ಟು ದುಡ್ಡು ಬಂದರೂ ಹೆಂಡತಿ ಹೊಲದ ದುಡಿಮೆ ಕಡಿಮೆ ಮಾಡಿರಲಿಲ್ಲ. ಆದರೆ ಅವಳಿಗೀಗ ಅತೀ ಯಾದ ತಲೆ ನೋವು ಕಾಣಿಸತೊಡಗಿತು. ಎಷ್ಟೊಂದು ವೈದ್ಯ್ರರ ಬಳಿ ಅವಳನ್ನು ಕರೆದೊಯ್ಯಲಾಯಿತು. ಕಡೆಗೆ ಒಂದು ಹೆಸರುವಾಸಿ ಸಾಧು ಯಾವುದೇ ನೋವಿಗೆ ಔಷಧಿ ಕೊಟ್ಟು ಪೀಡೆಯನ್ನು ಉಪಶಮನಗೊಳಿಸುವನೆಂದು ಪ್ರಖ್ಯಾತಿ ಪಡೆದ ಸಾಧುವಿನ ಹೆಸರು ಯಾರೋ ಇವರಿಗೆ ತಿಳಿಸಿದರು. ಪರಿವಾರ ಸಮೇತ ಹೊರಟ ಆ ಧನಿಕ.
ಸಾಧು ಆ ಹೆಂಗಸನ್ನೆ ಕೆಲವು ಕ್ಷಣ ದಿಟ್ಟಿಸಿ ನೋಡಿದ. ಆ ಮೇಲೆ ಅವಳ ವಜ್ರದ ಮೂಗು ಬಟ್ಟನ್ನು ಕಳಚಿ ಅವನ ಕೈಗೆ ಕೊಡಲು ಹೇಳಿದ. "ಅತೀಯಾದ ದುಡ್ಡಿದ್ದರೆ ಹೀಗೇ ಆಗುವುದು, ಈಗ ಒಂದು ಸುತ್ತು ಊರೆಲ್ಲ ನೋಡಿ ಸಂಜೆ ಹೊತ್ತಿಗೆ ಬನ್ನಿ. ಆ ಮೇಲೆ ನಿಮ್ಮ ತಲೆನೋವಿನ ಬಗ್ಗೆ ವಿಚಾರಿಸಿಕೂಳ್ಳುತ್ತೇನೆ" ಅಂದ.
ಸಂಜೆ ಗಂಡ ಹೆಂಡತಿ ಆಶ್ರಮಕ್ಕೆ ಮರಳಿದಾಗ ಇಬ್ಬರೂ ಖುಶಿ ಖುಶಿಯಾಗಿದ್ದರು. ಹೆಂಡತಿ ಸ್ವಲ್ಪ ಹೆಚ್ಚಿಗೆ ಗೆಲುವಾಗಿದ್ದಳು. ಈಗ ಆ ಸಾಧು ವಿಚಾರಿಸಿದ 'ಈಗ ನಿಮ್ಮ ತಲೆ ನೋವಿನ ಬಗ್ಗೆ ಹೇಳಿ. ಅದಕ್ಕೆ ಆ ಹೆಂಗಸು : ಅರೇ, ಎಷ್ಟೋ ತಿಂಗಳುಗಳಿಂದ ಕಾಡುತ್ತಿದ ತಲೆನೋವು ಇವತ್ತು ಬೆಳಗ್ಗಿನಿಂದ ಕಾಣಿಸಿಕೊಳ್ಳಲೇ ಇಲ್ಲವಲ್ಲ ಅಂತ ಅಚ್ಚರಿ ವ್ಯಕ್ತ ಪಡಿಸಿದಳು. ಅದಕ್ಕೆ ಸಾಧು ಮಹಾಶಯರು ಅಂದರು'ದುಡ್ಡು ಬಂದಮೇಲೆ, ತಂಗಿ, ನೀನು ವಜ್ರದ ಮೂಗುತಿ ಹಾಕಿಕೊಂಡು ಬಿಸಿಲಿಗೆ ಓಡಾಡುವಾಗ ಸೂರ್ಯನ ಬೆಳಕು ಬಟ್ಟಿಗೆ ಪ್ರತಿಫಲಿಸಿ ನೀನು ಕಣ್ಣು ಕಿರಿದು ಗೊಳಿಸುವಾಗ ತಲೆ ನರ ಸಿಡಿಯುತ್ತಿತ್ತು, ಅದಕ್ಕಾಗೇ ಆ ತಲೆ ನೋವು' ಇವತ್ತು ಬಟ್ಟು ಕಳಚಿಟ್ಟು ಊರೆಲ್ಲ ಬಿಸಿಲಿಗೆ ತಿರುಗಿದ್ದರೂ ನಿನಗೆ ತಲೆನೋವು ಬಾಧಿಸಲಿಲ್ಲ, ಬೆಳಿಗ್ಗೆ ನೀನು ನನ್ನ ಜತೆ ಮಾತನಾಡುವಾಗ ಮೇಲಿನಿಂದ ಸೂರ್ಯನ ಕಿರಣ ನಿನ್ನ ಮುಖಕ್ಕೆ ಬಡಿಯುತ್ತಿದ್ದು ನೀನು ಕಣ್ಣು ಕಿರಿದುಗೊಳಿಸಿ ನನ್ನ ಮಾತನ್ನು ಆಲಿಸುತ್ತಿದ್ದಾಗ, ನಿನ್ನ ನೋವಿಗೆ ಕಾರಣ ನನಗೆ ತಿಳಿಯಿತು"'ಅಂತ...
ನನಗಿಷ್ಟೆ ನೆನಪಿರೋದು. ನಿಮಗೆ ಗೊತ್ತಿರುವ ಇತರೇ version ಏನಾದರೂ ಇದ್ದ್ದಲ್ಲಿ ದಯವಿಟ್ಟು ಶೇರ್ ಮಾಡಿ.
:-)
(ಮುಂಬೈ ನಲ್ಲಿ ಬೆಳೆದಿದ್ದರಿಂದ ನನ್ನ ಅಜ್ಜಿ (ಅಮ್ಮನ ಕಡೆ) ಯನ್ನು ನಾನಿ ಅಂತ, ಅಜ್ಜ ನನ್ನು ಆಜೋಬ ಅಂತ ಸಂಭೋಧಿಸುತ್ತಿದ್ದೆ. )
Nani = maternal grandmother
(ನಾಳೆ ಲಾಕರ್ ಗೆ ಹೋಗಲಿಕ್ಕಿದೆ, ಸಖಿ ತೇಜಸ್ವಿನಿ ಹೆಗಡೆ ಗೆ ನಾನು ವಜ್ರದ ಉಂಗುರದ ಚಿತ್ರ ಕಳಿಸುತ್ತೇನೆ ಅಂತ ಹೇಳಿದ್ದು ನೆನಪಿಗೆ ಬರುತ್ತಿದ್ದ ಹಾಗೆ ಈ ಕತೆ ನೆನಪಾಯಿತು)
(ನಾಳೆ ಲಾಕರ್ ಗೆ ಹೋಗಲಿಕ್ಕಿದೆ, ಸಖಿ ತೇಜಸ್ವಿನಿ ಹೆಗಡೆ ಗೆ ನಾನು ವಜ್ರದ ಉಂಗುರದ ಚಿತ್ರ ಕಳಿಸುತ್ತೇನೆ ಅಂತ ಹೇಳಿದ್ದು ನೆನಪಿಗೆ ಬರುತ್ತಿದ್ದ ಹಾಗೆ ಈ ಕತೆ ನೆನಪಾಯಿತು)
6 comments:
"ಮುತ್ತುಲಕ್ಷ್ಮಿಯ ಮೂಗುತಿ" ಎಂಬ ಹೆಸರಿನಲ್ಲಿ ಸೇಮ್ ಇದೇ ಕಥೆಯನ್ನ ಸುಮಾರು ಹತ್ತು ವರುಷಗಳ ತರಂಗ ಸುದಾ ಅಥವಾ ಇನ್ನಾವುದೋ ಅಂಥ ಪತ್ರಿಕೆಯಲ್ಲಿ ಹಿಂದೆ ಓದಿದ್ದು ನೆನಪಾಯಿತು.
ಇನ್ನೊಂದು ಆಸಕ್ತಿಕರ ವಿಷಯ ಅಂದ್ರೆ ನಂಗೆ 2008ರಲ್ಲಿ ಒಮ್ಮೆ ಸೈನಸ್ ಬಂದಿತ್ತು. ಯಾವ ಔಷಧಿಗೂ ಬಗ್ಗದೇ ವಾರ ಪೂರ್ತಿ ಕಾಡಿ ಕೊನೆಗೆ ಆಸ್ಪತ್ರೆಗೆ ಸೇರುವುದೇ ಗತಿ ಎಂಬಂತಾಯ್ತು. ಒಂದು ದಿನ ಮಧ್ಯಾಹ್ನ ಮಲಗಿದ್ದಾಗ ನಂಗೆ ಈ "ಮುತ್ತುಲಕ್ಷ್ಮಿಯ ಮೂಗುತಿ" ಕಥೆ ನೆನಪಾಗಿ ನನ್ನ ಮೂಗುತಿ ತೆಗೆದಿಟ್ಟೆ. ಒಂದೇ ಘಂಟೆಯಲ್ಲಿ ತಲೆನೋವು ಮಾಯ... . ಮಾರನೇ ದಿನವೇ ಕೆಲಸಕ್ಕೂ ಹೋಗಿದ್ದೆ. ಆದರೆ ಮೊಂಡು ಮನಸು ಬಲು ಪ್ರೀತಿಯ ನತ್ತು ತೆಗೆದಿಡಲು ಕೇಳಲಿಲ್ಲ; ಮತ್ತದನ್ನೇ ಹಾಕಿಕೊಂಡಿದ್ದೇನೆ.
ನಮ್ಮ ನೆಂಟರೆಲ್ಲ ಉಪವಾಸ ಕೂತು, ಸಾಲ ಸೋಲ ಮಾಡಿ, ಬೀಗರನ್ನು ಸುಲಿದು ಮಾಡಿಸಿದ ಒಡವೆಗಳು ಬ್ಯಾಂಕ್ ಲಾಕರಿನಲ್ಲಿ ಕೊಳೆಯುತ್ತಿವೆ ಮಾಲತಿಯವರೇ.
ಮನೋ ಚಿಕಿತ್ಸಕ ಬರಹವಿದು.
ವಜ್ರ ಖಚಿತ ಬರಹ!! ಮನಸ್ಸು ಬದಲಾಗಬಹುದೇ
interesting story.
-- shree kar
ನೀರಿನಲ್ಲಿ ಅಗ್ನಿ ಹುಟ್ಟುತ್ತದೆ..ಅಗ್ನಿಯನ್ನು ಆರಿಸುವುದಕ್ಕೆ ನೀರೆ ಬೇಕಾಗುತ್ತದೆ..ಹಾಗೆಯೇ ನಮ್ಮಲ್ಲಿರುವ ನೋವಿಗೆ ನಮ್ಮಲ್ಲೇ ಪರಿಹಾರ.ಸುಂದರ ಕಥಾನಕ..
ಎಲ್ಲರಿಗೂ ಧನ್ಯವಾದಗಳು
:-)
ಎಮ್ ಎಸ್
Post a Comment