ಆ ಪುಟ್ಟ ಹುಡುಗಿಯ ಹೆಸರು 'ಮಾಹಿ'. 'ಆಂಟಿ ಹೋಮ್ ಕೇರ್ ನರ್ಸ್ ಇಟ್ಟಿದ್ದೆ ಕೆಲವೊಂದು ದಿನ ಆದರೆ ನಾನು ಮನೆಯಿಂದ ಹೋದ ಕೂಡಲೆ ಅವರು ಟಿವಿ ನೋಡುತ್ತಿದ್ದರು.ಸರಿಯಾದ ಸಮಯಕ್ಕೆ ಔಷಧಿ ನೀಡದೆ ತಂದೆಯ ಆರೋಗ್ಯ ಒಂದೊಮ್ಮೆ ತುಂಬ ಕೆಟ್ಟಿತ್ತು. ನನಗೆ ಗಿಲ್ಟ್ ಕಾಡಲಿಕ್ಕೆ ಶುರು ಆಯಿತು. ನಾನು ತಕರಾರು ಮಾಡಿದ್ದಕ್ಕೆ ಬಿಟ್ಟು ಹೋದರು' ಅಂದಳು.
ಮನೆಗೆ ಬರ್ತಾ ಉಜ್ವಲಳ ಮುಖದ ತುಂಬ ಮಂದಹಾಸ. ಅವಳ ಮನಸ್ಸಿನಲ್ಲಿ ಆಗಲೆ ಒಂದು ಉಪಾಯ ರೂಪುಗೊಳ್ಳುತ್ತಾ ಇತ್ತು. ಅವಳಿಗೆ ಗೊತ್ತು ತನ್ನ ಗಂಡ ತಾನು ಹೇಳಿದ್ದನ್ನು ಪೂರ್ತಿ ಕೇಳಿಸಿಕೊಳ್ಳದೆ ಹೂಂ ಅನ್ನುತ್ತಾನೆಂದು. ಉಜ್ವಲಳ ಗಂಡ ಓರ್ವ ಹೆಸರಾಂತ ಉದ್ಯಮಿ. ಹೆಂಡತಿಗೆ ಬೈ, ಸಿ ಯು ಅನ್ನುತ್ತ ಮನೆಯ ಹೊಸ್ತಿಲು ದಾಟುತ್ತಲೆ ಅವನ ತಲೆಯಲ್ಲಿ ಹರೀಶ ಭಾಯ್, ಜಿತೇನ್ ಬಾಯ್, ಪರೇಶ ಭಾಯ್ ಗಳು, ಕಲೆಕ್ಷನ್ ವಿಷಯ, ಗೋಡೌನ್ ನಲ್ಲಿ ಸ್ಟಾಕ್ ಎಷ್ಟಿದೆ, ಕುರಿಯರ್ ನಲ್ಲಿ ಮಾಲು ಹೋಯಿತೆ? ಬ್ಯಾಂಕ್ ನಿಂದ ಕ್ಯಾಶ್ ಡ್ರಾ ಇಂತವೇ ತುಂಬುಕೊಳ್ಳುತ್ತದೆ. ಅದರಲ್ಲಿ ಉಜ್ವಲಳ ಬಗ್ಗೆ ಆಲೋಚಿಸುವಷ್ಟು ವ್ಯವಧಾನವಿಲ್ಲ. ಮದುವೆಯಾದ ಬಳಿಕ ಹನಿಮೂನ್ ಗೆ ಒಟ್ಟಿಗೆ ಇಬ್ಬರೆ ಹೋಗಿದ್ದು ಬಿಟ್ಟರೆ, ವರ್ಷಕ್ಕೊಂದಾವರ್ತಿ ವೈಷ್ನೋದೇವಿಗೆ 10 ಕುಟುಂಬಗಳು ಟ್ರೈನ್ ನಲ್ಲಿ ಒಟ್ಟಾಗಿ ಹೋಗುವ ವಾಡಿಕೆ. ಅದರಲ್ಲಿ ಗಂಡಸರದ್ದೆ ಒಂದು ಪ್ರತ್ಯೇಕ ರೈಲು ಬೋಗಿ.ಹಾಗಾಗಿ ಅವರ ಮಧ್ಯೆ ಪ್ರೀತಿಯಿಂದ ಲಲ್ಲೆಗರೆಯುವಿಕೆ ವಗೈರ ಇಲ್ಲವೆ ಇಲ್ಲ. ಉಜ್ವಲಳಲಿಗೆ ಇದರಿಂದ ಬೇಜಾರಾ? ಖಂಡಿತ ಇಲ್ಲ. ಅವಳು ಕೂಡ ಬಿಸಿನೆಸ್ ಫ್ಯಾಮಿಲಿಯಿಂದಲೇ ಬಂದವಳು. ಅವಳ ಅಪ್ಪ ಕೂಡ ಸಾಕಷ್ಟು ಧನವಂತರೆ.
ಉಜ್ವಲಳನ್ನು ಅವಳ ಗಂಡ ನೋಡಿದ್ದು ಒಂದು ಕುಟುಂಬದವರ ಮದುವೆ ರಿಸೆಪ್ಷನ್ ನಲ್ಲಿ. ತುಂಬ ಚೆಂದದ ಚಟುವಟಿಕೆಯ ಉಜ್ವಲ ಅವನ ಬಿಸಿನೆಸ್ ಡಿನ್ನರ್ ಮೀಟ್ ಗಳಿಗೆ ಸರಿಹೊಂದುವಂತೆ ಇದ್ದಳು. ಮದುವೆ ಗೊತ್ತಾಗುವ ಮುಂಚೆ ಉಜ್ವಲ ಅವಳ ತಂದೆಗೆ ಅವರ ಬಟ್ಟೆಯ ಉದ್ಯಮದಲ್ಲಿ ನೆರವು ನೀಡುತ್ತಿದ್ದಳು. ಈಗ ಅವಳ ಗಂಡನಿಗೆ ಅವಳು ಪಾರ್ಟಿ ಗೀರ್ಟಿಗೆ ಬಂದು , ಚೆಂದದ ಬಟ್ಟೆ ಹಾಕಿಕೊಂಡು ಮುಗುಳ್ನಗುತ್ತ ನಾಲ್ಕು ಕುಶಲೋಪರಿ ಮಾತಾಡಿದರೆ ಮುಗೀತು. ತಿಂಗಳಲ್ಲಿ ಇಂತಹ ಮೂರು ಪಾರ್ಟಿಗಳಾದರೂ ಇರುತ್ತಿತ್ತು. ಉಳಿದ ಸಮಯ ಉಜ್ವಲ ಖಾಲಿಯಾಗೆ ಇರುತ್ತಿದ್ದಳು. ಟಿ.ವಿ ನೋಡಿಕೊಂಡು, ಹಳೆ- ಹೊಸ ಫ್ರೆಂಡ್ಸ್ ಜತೆ ಕಿಟ್ಟಿ ಪಾರ್ಟಿ, ಶಾಪಿಂಗ್ ವಗೈರೆ. ತಿಂಗಳಿಗೊಮ್ಮೆ ಅವಳ ಗಂಡ ಅವಳ ಖಾತೆಯಲ್ಲಿ ಒಂದಿಷ್ಟು ದುಡ್ಡು ಹಾಕುತ್ತಿದ್ದ. ಅವನಲ್ಲ, ಅವನ ಸೆಕ್ರೆಟರಿಗೆ standing instruction ಅದು.
ಉಜ್ವಲಳ ಮಗನಿಗೆ ಒಂದು ಕಂಪೆನಿಯಲ್ಲಿ ಇತ್ತೀಚಿಗೆ ನೌಕರಿ ಸಿಕ್ಕಿದೆ. ಒಂದು ವರ್ಷದ ಮಟ್ಟಿಗೆ ಅವನಿಗೆ ತರಬೇತಿಗೆ ಅಂತ ಹೊರದೇಶಕ್ಕೆ ಕಳುಹಿಸಲಾಗಿದೆ. ಈಗಲೇ ಆರು ತಿಂಗಳು ಮುಗಿದಿದೆ. ಮೊನ್ನೆ ಫೋನ್ ಮಾಡಿದಾಗ 'ಮಮ್ಮಿ ನಾ ನೌಕರಿ ಮಾಡೋದಿಲ್ಲ ಸ್ವಂತದ್ದು ಏನಾದರೂ ಮಾಡ್ತೇನೆ' ಅಂತ ತುಂಬ ಉತ್ಸಾಹದಿಂದ ಹೇಳುತ್ತಿದ್ದ. ಮತ್ತೆ ಮಗಳು ಡೆಂಟಿಸ್ಟ್ ಆಗುವ ತಯಾರಿ ನಡಿಸಿದ್ದಾಳೆ. ದೂರದ ಊರಿನ ಹೊಸ್ಟೆಲ್ಲನಲ್ಲಿ ಅವಳ ವಾಸ-ವ್ಯಾಸಂಗ.
ಹೇಳಿಕೊಳ್ಳುವಂತಹ ಜಾವಾಬ್ದಾರಿ ಅಂತೂ ಏನೂ ಇಲ್ಲ.ಮುಂದೆ ಗಂಡ ಏನಾದರೂ ತಕರಾರು ತೆಗೆದರೆ Corporate Social Responsibility ಪಟ್ಟ ಕಟ್ಟಿದರಾಯಿತು. ಗಂಡ ಅವಳ ಖಾತೆಯಲ್ಲಿ ಜಮಾಮಾಡಿದ ಹಣವನ್ನೆಲ್ಲ ಆಕೆ invest ಮಾಡಿ ಅವಳದ್ದೆ ಆದ ಸ್ವಲ್ಪ ಅಪದ್ದನ್ ಕೂಡಿದೆ.
ಹೇಗೂ ಪಕ್ಕದಲ್ಲೇ ಮಾಹಿ ಮನೆ. ಮಧ್ಯೆ ಇರುವ ಗೋಡೆ ತೆಗೆದು ಒಂದೆ ಮನೆ ಮಾಡಿದರಾಗುತ್ತದೆ. ಒಬ್ಬ ಹೋಮ್ ಕೇರ್ ನರ್ಸ್ ಇಟ್ಟು ಆ ನರ್ಸ್ ನ ಮೆಲೆ ನಿಗಾ ಇಡುವ ಕೆಲಸ ಒಂದು ಮಾಡಿದ್ರಾಯ್ತು. ಹಾಗೂ ಸಹಾಯಕ್ಕೆ ವಾಚ್ ಮನ್ ಹೇಗೂ ಇದ್ದಾನೆ. ಆ ಹುಡುಗಿ ಜತೆ ಹಂಚಿಕೊಂಡಾಗ ಆಕೆಗೆ ಮೊದಲು ನಂಬಿಕೆ ಬರಲಿಲ್ಲ. ಆಮೇಲೆ ಖುಶಿಯಿಂದಲೇ ಒಪ್ಪಿದಳು.
ಐದ್ದು ವರ್ಷಗಳ ನಂತರ:
ಉಜ್ವಲಳ ಗಂಡನಿಗೆ ಮೈಲ್ಡ್ ಹಾರ್ಟ್ ಅಟಾಕ್ ಆಗಿ ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಅವರ ಉದ್ಯಮದ ಜವಾಬ್ದಾರಿ ಮಗನ ಮೇಲೆ. ಅವನು ಖುಶಿಯಿಂದ ಅದನ್ನು ನಿಭಾಯಿಸುತ್ತಿದ್ದಾನೆ. ಮೂರು ವರ್ಷದ ಕೆಳಗೆ ಮಾಹಿಯ ಅಮ್ಮ ತೀರಿಕೊಂಡರು. ಉಜ್ವಲಳ ಮಗನಿಗೆ ಮಾಹಿ ಜತೆ ಲಗ್ನ ಮಾಡಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದಾನೆ. ಉಜ್ವಲ ಹಾಗೂ ಅವಳ ಗಂಡನಿಗೆ ತಕರಾರಿಲ್ಲ. ಆದರೆ ಮಾಹಿ ಅವಳ ವ್ಯಾಸಂಗ ಮುಗಿಸಿದ ನಂತರ ಮದುವೆ ಅಂತ ಗಟ್ಟಿ ನಿರ್ಧಾರ ಮಾಡಿದ್ದಾಳೆ. ಅವಳು ಮಾಸ್ತರ್ ಆಫ್ ಸೋಶಲ್ ವರ್ಕ್ ಆಯ್ಕೆ ಮಾಡಿಕೊಂಡಿದ್ದಾಳೆ.
(thanks for all the comments for the previous post)
(thanks for all the comments for the previous post)
:-)
6 comments:
ತುಸು ನಾನು ಯೋಚಿಸಿದಂತೆಯೇ ಇಲ್ಲ್ಲಿ ನಡೆದಿದೆ. ಮಾಹಿಯನ್ನು ದತ್ತು ತೆಗೆದುಕೊಳ್ಳುವುದರ ಬದಲು, ಸೊಸೆಯಾಗಿಸುವ ನಿರ್ಧಾರಕ್ಕೆ ಉಜ್ವಲ ಬಂದದ್ದು ಬಹಳ ನೆಮ್ಮದಿ ತಂದಿತು.
ಸರಳ ಸುಂದರ ಶೈಲಿ.
ಹೀಗೂ ಉಂಟಾ? ಎಷ್ಟೊಂದು ಚಿತ್ರ-ವಿಚಿತ್ರ ಕತೆಗಳಿವೆ ನಿಮ್ಮ ಸಂಚಿಯಲ್ಲಿ ಮಾಲತಿ! ಇಷ್ಟ ಆಯಿತು :-)
Good ending..Positive attitude brings positive results...nicely narrated :-)
Thank you all. all ur comments had an humbling effect on me..
ms
One nice thing about your blogs are happy endings
Dear Anonymous!
thanks for all the comments. there are a few not-so-happy posts, if u provide ur mail id i can link them to you..(that way i get to know u..)
:-)
thanks
malathi S
Post a Comment