December 9, 2012

ಉಜ್ವಲಾ

ಲಿಫ್ಟ್ ಗಾಗಿ ಕಾಯುತ್ತಿದ್ದಳು ಉಜ್ಜಲಾ. ಗುಂಡಿ ಒತ್ತಿ ಒತ್ತಿ ಇಟ್ಟಳು. ಆಮೇಲೆ ನಾಲ್ಕನೆ ಮಹಡಿಯಿಂದಲೇ 'ಅರೇ ವಾಚಮನ್ ಭೈಯ್ಯ ಲಿಫ್ಟ್ ಕೊ ಕ್ಯಾ ಗೋಯಾ' ಅಂತ ಕಿರುಚಿದಳು. ವಾಚಮನ್ ನಿಂದ ಯಾವುದೇ ಪ್ರತ್ರಿಕ್ರಿಯೇ ಇಲ್ಲ. ಅದೊಂದೊ ಹೊಸದಾಗಿ ನಿರ್ಮಾಣಗೊಂಡ ಅಪಾರ್ಟಮೆಂಟ್ ಕಾಂಪ್ಲೆಕ್ಸ್. ಆದ್ದರಿಂದ ಹೊಸಬರು ಬರೋದು ಅವರ ಸಾಮಾನು ಅಂತ ದಿನ ಇಡಿ ದಿನ ಅಲ್ಲೆಲ್ಲ ಚಟುವಟಿಕೆಯಿಂದ ಕೂಡಿರುತ್ತಿತ್ತು. ಅಷ್ಟರೊಳಗೆ ಲಿಫ್ಟ್ ಉಜ್ವಲಳ ಮಹಡಿಗೆ ಬಂದು ನಿಂತಿತು. ಲಿಫ್ಟ್ ನ ಬಾಗಿಲು ತೆರೆದುಕೊಂಡಿತು, ಅದರಲ್ಲಿ ತೀರಾ ವಯಸ್ಸಾದ ಒಬ್ಬ ಮಹಿಳೆ, ಒಬ್ಬ ಗಂಡಸು ಮತ್ತು ಪುಟ್ಟ ಹುಡುಗಿ ಕಾಣಿಸಿದರು. ಗಂಡಸು ಅಂತು ಹೊರಗೆ ಬರಲ್ಲ ಅಂತ ಗಟ್ಟಿಯಾಗಿ ಲಿಫ್ಟ್ ಒಳಗೆ ನಿಂತು ಬಿಟ್ಟರು. ಆ ಹುಡುಗಿ ಮೊದಲಿಗೆ  ಹೆಂಗಸನ್ನು ಪುಸಲಾಯಿಸಿ ಹೊರಗೆ ತಂದ ನಿಲ್ಲಿಸಿದಳು. ಆ ಮೇಲೆ ಕಷ್ಟಪಟ್ಟು ದೂಡಿಕೊಂಡೆ ಗಂಡಸನ್ನು ಲಿಫ್ಟ್ ನಿಮ್ದ ಹೊರ ತಂದಳು. ಇದನ್ನು ನೋಡುತ್ತಿದ್ದ ಉಜ್ವಲಾ 'ಓ ಅಜ್ಜ-ಅಜ್ಜಿ-ಮೊಮ್ಮಗಳಿರಬೇಕೆಂದು ಕೊಂಡಳು. ಹುಡುಗಿ  ಉಜ್ವಲಾಳ ಮನೆಯ ಬದಿಯಲ್ಲಿರುವ ಫ್ಲಾಟ್ ನ ಬೀಗ ತೆರೆಯುವುದನ್ನು ನೋಡ ನೋಡುತ್ತಲೇ ಲಿಫ್ಟ್ನಿಂದ ಕೆಳಗಡೆ ಬಂದಳು.
ಹಲವಾರು ತಿಂಗಳ ಬಳಿಕ ಪಕ್ಕದ ಫ್ಲ್ಯಾಟ್ ನ ಒಂದು ಪತ್ರ ಇವರ ಪೊಸ್ಟ್ ಬಾಕ್ಸ್ ನಲ್ಲಿ ಬಂದಿತ್ತು. ಅದನ್ನು ಪಕ್ಕದ ಮನೆಯವರಿಗೆ ತಲುಪಿಸಲು, ಉಜ್ಜ್ವಲಾ ಆ ಮೆನಯ ಬೆಲ್ ಒತ್ತಿದಳು. ಆ ಹುಡುಗಿ, ಅವಳ ಪ್ರಾಯ 17-18 ಇರಬಹುದು ಕೆಂಪಾಗಿ ಊದಿದ ಕಣ್ಣುಗಳಿಂದ ಬಾಗಿಲು ತೆಗೆದಳು. ಅವರ ಮನೆಯಲ್ಲಿರುವ ವಯಸ್ಸಾದ ವ್ಯಕ್ತಿಗಳ ನೆನೆಪಾಗಿ ಉಜ್ಜ್ವಲಾ ಆ ಹುಡುಗಿಗೆ' ಎನೀ ಪ್ರಾಬ್ಲಮ್' ಅಂತ ಮೃದುವಾಗಿ ಕೇಳಿದಳು. ಅಷ್ಟಕ್ಕೆ ಆ ಹುಡುಗಿ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು. ಅವಳನ್ನು ನಿಧಾನವಾಗಿ ಅವಳ ಮನೆಯೊಳಗೇ ನಡೆಸಿಕೊಂಡು ಹೋದಳು ಉಜ್ಜ್ವಲಾ. ವ್ಹಾಟ್ ಹ್ಯಾಪನ್ಡ್? ವೈ ಆರ್ ಯು ಕ್ರೈಯಿಂಗ್' ಅಜ್ಜ ಅಜ್ಜಿಗೆ ಏನಾದರೂ ಆಯ್ತಾ? 'ಅಜ್ಜ ಅಜ್ಜಿ ಯಲ್ಲ' ದೇ ಆರ್ ಮೈ ಪೇರೆಂಟ್ಸ್. ಐ ಡಿಡ್ ನಾಟ್ ವಾಂಟ್ ಟು ಬಿ ಬೋರ್ನ್' ನಾನು ಇವರ ಮಗಳಾಗಿ ಹುಟ್ಟಿ ಬರಲು ಕೇಳಿಕೊಂಡಿದ್ನಾ'? ಅರೇ ಇದೇನಾಯಿತು ಈ ಹುಡುಗಿಗೆ. ಹಲವಾರು ಬಾರಿ ಆಕೆಯನ್ನು ಅವಳ ಜತೆಯಿರುವ ವಯಸ್ಸಾದವರನ್ನು ನೋಡಿ, ಹಾ ಮೊಮ್ಮಗಳು ಇವರನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಳು ಉಜ್ಜ್ವಲಾ ತನ್ನ ಮನೆಯವರೊಂದಿಗೆ
ಆ ಹುಡಿಗಿನೇ ಮಾತನ್ನು ಮುಂದುವರೆಸಿದಳು, 'ಆಂಟಿ ನನ್ನ ಅಪ್ಪ ಅಮ್ಮ ನಾಲವತ್ತು ವರ್ಷದವರಿದ್ದಾಗ ಭೇಟಿಯಾಗಿ ಮದುವೆ ಮಾಡಿಕೊಂಡರು. ಇಬ್ಬರಿಗೂ ಒಂದೇ ವಯಸ್ಸು. ನಾನು ಹುಟ್ಟುವಾಗ ಅಮ್ಮನಿಗೆ 50 ವಯಸ್ಸು. ಆದರೂ ಹೆತ್ತಳು. ನನ್ನನ್ನು ಹೆತ್ತ ದಿನದಿಂದ ಆಕೆಗೆ ಹುಷರಿಲ್ಲ. ಚಿಕ್ಕವಳಿದ್ದಾಗಳಿಂದಲೂ ನನಗೆ ಅಮ್ಮನ ಪ್ರೀತಿ ಸಿಗಲಿಲ್ಲ. ಈಗ ಅಪ್ಪನಿಗೂ ಹುಷಾರಿಲ್ಲ. ನನಗೀಗ ಕೇವಲ 17 ವರ್ಷ ವಯಸ್ಸು. ನಾನು ಇವರನ್ನು ನೋಡಿಕೊಳ್ಳೋದೆ ಆಗಿದೆ. ನಾನು ಓದಿ ಬರೆಯುವುದು ಮಾಡುವುದು ಯಾವಾಗ?? ಕಾಲೇಜಿನಿಂದ ಈಗಾಗಲೇ ನನ್ನ absenteeism ನಿಂದ ಹಲವಾರು ಕಂಪ್ಲೈಂಟ್ ಬಂದಿದೆ. ಕೆಲಸದವಳು ಬಂದು ಹೋಗ್ತಾಳೆ. ಉಳಿದ ಸಮಯ ನಾನೇ ಇವರನ್ನು ನೋಡಿಕೋ ಬೇಕು. ಒಂದೇ ಒಂದು ಪ್ಲಸ್ ಪಾಯಿಂಟ್ ಅಂದರೆ ದುಡ್ಡಿಗೇನೂ ಕೊರತೆಯಿಲ್ಲ. ಹತ್ತಿರ ಹೇಳಿಕೊಳ್ಳುವ ಸಂಬಂಧಿಕರಿಲ್ಲ. i did not ask to be born ಅಂತ ಪುನ: ಗೋಳೋ ಅಂತ ಅಳಲು ಶುರುಮಾಡಿದಳು.....
ಉಜ್ವಲಳ ಬಳಿ ಇದಕ್ಕೊಂದು solution/ಸಮಾಧಾನ ಇತ್ತು...any guesses?? (ಇಲ್ಲ ಆ ಹುಡುಗಿ ತನ್ನ ಅಪ್ಪ ಅಮ್ಮನನ್ನು ವೃದ್ಧಾಶ್ರಮಕ್ಕೆ ಹಾಕಲು ತಯಾರಿಲ್ಲ).....
:-)

5 comments:

Radhika said...

Quite practical issue. What's the solution? Employ someone to take care of parents?

Badarinath Palavalli said...

ಉಜ್ವಲ ಅವರೇ ಆ ಮಗುವನ್ನು ದತ್ತು ತೆಗೆದುಕೊಳ್ಳುತ್ತಾರೆ ಅಂತ ಕಾಣುತ್ತೆ ಅಲ್ಲವೇ ಮಾಲತಿಯವರೇ?

ಮನಸು said...

ಇದಕ್ಕೆ ಪರಿಹಾರ ಏನು ಮಾಡಿದಳು ಉಜ್ವಲ... ಅನಾಥಾಶ್ರಮಕ್ಕೆ ಸೇರಿಸಲು ಮನಸ್ಸಿಲ್ಲ ಎಂದರೆ ಬೇರೆಯವರು ಯಾರಾದರು ಅವಳನ್ನೇ ದತ್ತು ತೆಗೆದುಕೊಂಡರಾ..?

Sudeepa ಸುದೀಪ said...

can't guess...continue the story....

Srikanth Manjunath said...

ಲಿಫ್ಟ್ ಒಂದು ಕ್ಷಣ ಸಿಗಲಿಲ್ಲ ಎನ್ನುವುದಕ್ಕೆ ಜೋರಾಗಿ ಕಿರುಚಿದ ಉಜ್ವಲ..ತನ್ನ ಮನಸು ಉಜ್ವಲವಾಗಿಲ್ಲ, ಒಂಟಿತನ ಕಾಡುತ್ತಿರಬಹುದು ಎನ್ನುವ ಶಂಕೆ ಮೂಡಿಸುತ್ತದೆ.ಇಂತಹ ಸಮಯದಲ್ಲಿ ಆ ಹುಡುಗಿಯ ಅಪ್ಪ ಅಮ್ಮ ರೋಗ ಬಾಧೆಯಿಂದ ಬಳತ್ತಿರುವುದು ಮಾನಸಿಕವಾಗಿಯೇ ಹೊರತು ದೈಹಿಕವಾಗಿರಲಾರದು. ಆ ಹುಡುಗಿ ಕೂಡ ಋಣಾತ್ಮಕ ಯೋಚನೆಯಿಂದ ಬೇಸರದಿಂದ ಬಳಲಿ ತನ್ನ ಜೀವನದ ಆಶಯವನ್ನು ಕಳೆದುಕೊಳ್ಳುತ್ತಿರುವ ಅಪಾಯವನ್ನು ಮನಗಂಡ ಉಜ್ವಲ ಆ ಹುಡುಗಿಯ ತಂದೆ ತಾಯಿಯರನ್ನು ಕೆಲಕಾಲ ಆ ಹುಡುಗಿ (ಪ್ರಾಯಶಃ ಇನ್ನೊಂದು ಮೂರು ವರ್ಷ..ಓದನ್ನು ಮುಗಿಸುವ ಎಲ್ಲ ಲಕ್ಷಣಗಳು ಇರುವುದರಿಂದ) ತನ್ನ ಬದುಕಿನ ಹಳಿಗೆ ಮತ್ತೆ ಮರಳಿ ಬರುವ ತನಕ ನೋಡಿಕೊಳ್ಳುವ ಆಶಯ ವ್ಯಕ್ತಪಡಿಸುತ್ತಾಳೆ..ಇದರಿಂದ ಒಂದೇ ಕಲ್ಲಿಗೆ ಮೂರು (ಉಜ್ವಲಳ ಒಂಟಿತನ, ಆ ಹುಡುಗಿಯ ಅಪ್ಪ ಅಮ್ಮನಿಗೆ ಮಗಳ ಮೇಲೆ ಭಾರವಾಗಿರುವ, ಹಾಗು ಆ ಹುಡುಗಿಗೆ ಓದು ಮುಂದುವರೆಸಿ ತನ್ನ ಆಸೆಯನ್ನು ಕಂಡು ಕೊಳ್ಳುವ ತವಕ) ಸಮಸ್ಯೆ ಬಗೆ ಹರಿಸುತ್ತಾಳೆ.