November 7, 2012

ಹೀಗೂ ಉಂಟಂತೆ!!!

ಮೊನ್ನೆ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಾ ಬಸ್ ನಲ್ಲಿ ಕೇಳಿಸಿಕೊಂಡಿದ್ದು.
ನನ್ನ ಪಕ್ಕದ ಸೀಟನಲ್ಲಿಬ್ಬರು ಗಟ್ಟಿಯಾಗೇ ಮಾತಾಡ್ತಾ ಇದ್ದರು. ಆದ್ದರಿಂದ ಕದ್ದು ಕೇಳಿದ್ದು ಅಂತ ಹೇಳಲಿಕ್ಕೆ ಆಗಲ್ಲ.
ಪಕ್ಕದ ಸೀಟ್ ಅಂದ್ರೆ ನಾನು ಹೋಗಿದ್ದು 2 + 1 ಬಸ್ ನಲ್ಲಿ
ಸೋ ಅವರ ಸಂಭಾಷಣೆ ಹೀಗೆ ಸಾಗಿತ್ತು. ಕಿಟಕಿ ಬಳಿ ಕೂತವರು ಒಬ್ಬ ಇಕೊನೋಮಿಕ್ ಕನ್ಸಲ್ಟೆಂಟ್ ಅಂತೆ. ಇತ್ತೀಚಿಗೆ ಮಧ್ಯಪದ್ರೇಶದ ಒಂದು ಊರಿಗೆ ದೊಡ್ಡ ಕಂಪೆನಿ ಒಂದಕ್ಕೆ ಕನ್ಸಲ್ಟೆಂಟ್ ಆಗಿ ಹೋಗಿದ್ದರಂತೆ. ಆಗ ಸೆಕೆ ಸಮಯ. ಒಂದು ಸಂಜೆ ತುಂಬ ಸೆಕೆ ಎನಿಸಿ, ಅವರು ಉಳಿದುಕೊಂಡಿದ್ದ ಗೆಸ್ಟ್ ಹೌಸ್ ಮೇಲ್ವಿಚಾರಕನಿಗೆ, ಒಂದು ಬೀಯರ್ ಹೊಡೆಯುವ ಅಂದಾಜಲ್ಲಿ, ’ಇಲ್ಲಿ ಡ್ರಿಂಕ್ಸ್ ಎಲ್ಲಿ ಸಿಗತ್ತೆ’ ಅಂತ ಕೇಳಿದನಂತೆ. ಗೆಸ್ಟ್ ಹೌಸ್ ಪಕ್ಕದ ರೋಡ್ ತೋರಿಸಿ ’ಯಾಹಾಂ ಸೆ ಏಕ್ ಹೀ ರಾಸ್ತಾ, ದೊ ಕಿಲೋಮಿಟರ್ ಕಿ ದೂರಿ ಪರ್ ಹೈ, ಕಾರ್ ಮಂಗವಾವೂಂ ಸಾಬ್?’ ಅಂತ ಕೇಳಿದನಂತೆ. ನಮ್ಮ ನೆರೇಟರ್ (narrator) ಸಾಹಬರಿಗೆ ಒಂದು ಬ್ರೇಕ್ ಬೇಕಿತ್ತಂತೆ ಹಾಗೂ ಎಕ್ಸರ್ಸೈಝ್ ಆದ ಹಾಗಾಗುತ್ತೆ ಅಂತ ’ಪೈದಲ್ ಚಲೂಂಗಾ, ಗಾಡಿ ಕಿ ಜರೂರತ್ ನಹೀಂ’ ಅಂತ ಹೇಳಿ ಸವಾರಿ ಆ ಕಡೆ ಹೆಜ್ಜೆ ಹಾಕಿತಂತೆ..:-) 
ಒಂದು ಕಿ.ಮಿ ನಡೆದ ನಂತರ ಒಂದು ಸೈನ್ ಬೋರ್ಡ್ ಸಿಕ್ಕಿತಂತೆ...***** ಕ್ಲಬ್ -1 km ಅಂತ. ಇನ್ನಷ್ಟು ನಡೆದುಕೊಂಡ ಹೋದ ಮೇಲೆ ಕ್ಲಬ್ ನ ಗೇಟ್ ಸಿಕ್ಕಿತಂತೆ. ಗೇಟ್ ನಿಂದ ಕ್ಲಬ್ ಒಂದು ಫರ್ಲಾಂಗ್ ಇತ್ತಂತೆ. ಒಳಗೆ ನಡೆದು ರಿ ರಿಸೆಪ್ಷನ್ ಬಳಿ ಹೋಗುವಷ್ಟರಲ್ಲಿ ಅಲ್ಲಿನ ವಾಚ್ ಮನ್ ’ಆಪ್ ಅಂದರ್ ನಹೀಂ ಜಾ ಸಕ್ತೆ’ ಅಂತ ದಾರಿಗೆ ಅಡ್ಡ ನಿಂತನಂತೆ. ಯಾಕಪ್ಪ ಅಂತ ಕೇಳಿದ್ರೆ, ’ನೀವು ಶೂ ಹಾಕಿಕೊಂಡಿಲ್ಲ’ ಅಂತ ಹೇಳಿದ್ನಂತೆ. ದಿನ ಇಡೀ ಶೂ ಹಾಕಿದ್ದು, ಸಾಕ್ಸ್ ಗೆ ವಾಸನೆ ಹೊಡೆಯುತ್ತೆ ಅಂತ ಹಾವಾಯಿ ಚಪ್ಪಲ್ ಹಾಕಿಕೊಂಡು ಬಂದಿದ್ದರಿವರು. ’ದೂರದಿಂದ ನಡೆದುಕೊಂಡು ಬಂದಿದ್ದೇನೆ, ****** ಕಂಪೆನಿ ಕೆಲ್ಸದ ಮೇಲೆ ಬಂದಿದ್ದೆ ಅಂದರೂ ಅವನದ್ದು ಒಂದೇ ವರಾತ ವಂತೆ no shoe no entry..ಸರಿ ಇನ್ನು ಇವನ ಜತೆ ಏಗಿ ಪ್ರಯೋಜನವಿಲ್ಲ, ಬಂದ ದಾರಿಗೆ ಸುಂಕವಿಲ್ಲ ಅಂತ ನಮ್ಮ ನೆರೇಟರ್ ಮಹಾಶಯರು ಇನ್ನೇನು ಗೇಟ್ ಬಳಿ ತಲುಪುವಷ್ಟರಲ್ಲಿ, ಒಂದು ಕಾರ್ ಬಂದು ಅವರ ಬಳಿ ನಿಂತು, ಅವರ *****ಕಂಪಿನಿಯ ಹಿರಿಯ ಅಧಿಕಾರಿ ಇಳಿದು, ’ಇದೇನಿದು ಇಷ್ಟು ಬೇಗ ಹೊರಟಾಯಿತೆ? ಇವತ್ತು ಒಂದೊಳ್ಳೆ ಗಜಲ್ ಕಾರ್ಯಕ್ರಮ ಇದೆ, ಕೇಳಿಕೊಂಡು ಹೋಗಬಹುದಿತ್ತು’. ’ಇಲ್ಲ ಶೂ ಇಲ್ಲದ ಕಾರಣ ಒಳಗೆ ಬಿಡಲಿಲ್ಲ.’ ಅರೇ ಬನ್ನಿ ನನ್ನ ಜತೆ, ಅಂತ ರೆಸೆಪ್ಪ್ಷನ್ ಬಳಿ ಹೋಗಿ ಅಲ್ಲಿ ಸಹಿ ಹಾಕಿ (ಅವರು ಅಲ್ಲಿನ ಮೆಂಬರ್ ಅಂತೆ, ವರ್ಷಕ್ಕೆ ಒಂದು ಲಕ್ಷ ಮೆಂಬರ್ ಶಿಪ್ ಫೀ ಅಂತೆ). ರಿಸೆಪ್ಷನಿಷ್ಟ್ ಬಳಿ ಹಿರಿಯ ಅಧಿಕಾರಿ ಗುಸು ಪುಸು ಏನೋ ಮಾತಾಡಿದರಂತೆ. ನಮ್ಮ ನೆರೇಟರ್ ಮಹಾಶಯರು ’ಓ ಇವರ interference ಇಂದ ನನಗೆ ಒಳಬಿಡುತ್ತಿದ್ದಾರೆ ಅಂದುಕೊಳ್ಳುವಷ್ಟರಲ್ಲಿ , ರಿಸೆಪ್ಷನಿಷ್ಟ್, ’ಸಾಬ್ ಆಪ್ ಹಮಾರೆ ಸಾಥ್ ಚಲಿಯೆ’ ಅಂತ ಒಂದು ದೊಡ್ಡ ಕೋಣೆಗೆ ಕರೆದುಕೊಂಡು ಹೋದನಂತೆ. ಅಲ್ಲಿ ನೋಡಿದರೆ rack ಮೇಲೆ rack....ಅಲ್ಲಿ ಎಲ್ಲಾ ಸೈಜ್ ನ ಶೂ ಗಳು. ’ಆಪ್ ಕಾ ಸೈಜ್’ ಅಂತ ಕೇಳಿ ಇವರು ಹಾಕಿಕೊಂಡ ಬಟ್ಟೆಗೆ ಸ್ಯೂಟ್ ಆಗುವ ಒಂದು ಜತೆ ಶೂ ಕೊಟ್ಟನಂತೆ. ಶೂ ಕ್ಲೀನ್ ಆಗಿದ್ದು ಅದರಲ್ಲಿ ಸಿಲಿಕಾ ಜೆಲ್ ಪ್ಯಾಕೆಟ್ ಗಳನ್ನು ತುಂಬಿಟ್ಟಿದ್ದರಂತೆ. ಒಂದು ಜತೆ ಸಾಕ್ಸ್ ಗೆ ಇವರು ದುಪ್ಪಟ್ಟು ದುಡ್ಡು ಕೊಟ್ಟು ಕೊಳ್ಳಬೇಕಾಗಿ ಬಂದದ್ದು ಮಾತ್ರವಲ್ಲ ಶೂ ಬಾಡಿಗೆ ಮತ್ತು maintenance ಅಂತ ಸಣ್ಣ ಮೊತ್ತ ಕೊಡಬೇಕಾಯಿತಂತೆ. ಉಳಿದಂತೆ ಒಳಗಡೆ ಹೋದ ಮೇಲೆ ಅನ್ ಲಿಮಿಟಡ್ ಡ್ರಿಂಕ್ಸ್, ಸ್ನ್ಯಾಕ್ಸ್ ಊಟ ಇತ್ಯಾದಿ ಅಂತೆ, ಯಾಕೆಂದರೆ ಇವರು ಹಿರಿಯ ಅಧಿಕಾರಿ ಜತೆ ಇದ್ದರಲ್ಲವೇ?
ಈ ಪೋಸ್ಟ್ ನನ್ನ ಆತ್ಮೀಯ ಗೆಳತಿ/ಮಗಳು ದಿವ್ಯಾ ಮಲ್ಯಾಗೆ...:-) ಪ್ರೀತಿಯಿಂದ....

4 comments:

ದಿವ್ಯಾ ಮಲ್ಯ ಕಾಮತ್ said...

Thank you very much for the dedication my dear mS!! :-) :-*
When I started reading, I thought may be this is about what you sms'ed other day while traveling to Belgaum!! ;-)

Badarinath Palavalli said...

ಬೇರೆಯವರಿಗಾಗಿ ಬರೆದ ಪೋಸ್ಟ್ ಓದಿದ್ದಕ್ಕಾಗಿ ಕ್ಷಮೆ ಇರಲಿ. :(

ಶೂ ಪುರಾನ ರೋಚಕವಾಗಿತ್ತು. :-D

nenapina sanchy inda said...

Thank you Divya!!:-)
Badari bhaiyya blog irodu ellaroo odali antaane!
thank u odiddakke..:-)
ms

Anonymous said...

Was reminded of M.F. Husain's slippers and the Taj in Bombay.

"Wherever you go, the first thing they see is your footwear, then they will decide your status," he (had) told al Jazeera in an interview.... "I said ok, you recognise me as I am."

-- Shree