ನನ್ನ ತಂದೆಯವರು ಬೆಳಿಗ್ಗೆ ಜ್ಯೋತಿಷ್ಯ
ಕಾರ್ಯಕ್ರಮ ನೋಡುತ್ತಿದ್ದಾಗ ಹೊಳೆದಿದ್ದು:
ಅದೊಂದು ಫೋನ್ ಇನ್ ಕಾರ್ಯಕರಮ.
ತಾಯಿ: ಗುರೂಜಿ ನನ್ನ ಮಗನ ಭವಿಷ್ಯ
ಹೇಗಿದೆ?
ಗುರೂಜಿ: ಓದಲ್ಲಿ ಸ್ವಲ್ಪ ಹಿಂದಿದ್ದಾನೆ
ಆದರೂ ಏನಡ್ಡಿಯಿಲ್ಲ.
ಕೆಲದಿನಗಳ ನಂತರ
ಗುರೂಜಿ ನಿಮ್ಮನ್ನ ಕಾಣಲು ಒಬ್ಬ ಯುವಕ
ಬಂದಿದ್ದಾನೆ
ಗುರೂಜಿ: ಒಳಗೆ ಕಳಿಸಿ ಅವನ್ನನ್ನ
ಯುವಕ: ಗುರೂಜಿ ನೀವು ಟಿವಿ. ಕಾರ್ಯಕ್ರಮದಲ್ಲಿ
ಭವಿಷ್ಯ ಹೇಳಿ ಸಕತ್ತ್ ದುಡ್ಡು ಮಾಡ್ತಿರಬೇಕಲ್ಲವಾ??
ಗುರೂಜಿ: ಹಾಂ ಬರುತ್ತೆ ಆದಾಯ. ಯಾಕೇ?
ಯುವಕ್: ನೀವು ನಿಮಗೆ ಬರುವ ಆದಾಯದಲ್ಲಿ
ನನಗೆ 20% ಕೊಡಬೇಕು
ಗುರೂಜಿ: ಯಾಕೆ?
ಯುವಕ: ಇಷ್ಟರ ತನಕ ನಾನು ಚೆನ್ನಾಗಿ ಓದಿ
ಚೆನ್ನಾಗಿ ಅಂಕಗಳನ್ನು ಪಡೆಯುತ್ತ ಬಂದಿದ್ದೇನೆ. ಆದರೆ ನಿನ್ನೆ ಅಮ್ಮನ ನಿಮ್ಮ ಸಂಭಾಷಣೆ ಕೇಳಿಸ್ಕೊಂಡೆ..ಇನ್ಮುಂದೆ
ಓದದೆ ಇರಬೇಕೆಂದು ಕೊಂಡಿದ್ದೇನೆ.
ಗುರೂಜಿ; ಅದಕ್ಕೂ ಇದಕ್ಕೂ ಏನು ಸಂಬಂಧ?
ಯುವ್ಕ: ಅಮ್ಮನಿಗೆ ನನ್ನ ಮೇಲೆ ನಂಬಿಕೆಯಿಲ್ಲ.
ಈಗ ನಾನು ಅಂಕ ತೆಗೆದುಕೊಳ್ಳದೇ ಇದ್ದರೆ ಅಮ್ಮನಿಗೆ ನಿಮ್ಮ ಮೇಲೆ ನಂಬಿಕೆ ಇನ್ನೂ ಹೆಚ್ಚಾಗುತ್ತೆ. ಆದ್ದರಿಂದ
ನಿಮಗೆ ಇದರಿಂದ ಆದಾಯ ಹೆಚ್ಚುತ್ತದೆ.ಅಮ್ಮ ಅವರ ಸ್ನೇಹಿತೆಯರಿಗೆ ಆಪ್ತೇಷ್ಟರಿಗೆ ಈ ವಿಷಯ ಹೇಳುತ್ತಾರೆ. ನಿಮಗೆ free advertisement ಆಗುತ್ತೆ, ಹಾಗಾಗಿ.ನೀವು ನನ್ನ ಜತೆ 20% ಶೇರ್ ಮಾಡಲೇಬೇಕು..
(ಸುಮ್ನೆ, ನಾನು ಟೂರ್ ಮೇಲಿದ್ದೀನಿ. ಚಿಕ್ಕ ಲ್ಯಾಪ್ ಟಾಪ್ ನಲ್ಲಿ ಟೈಪ್ ಮಾಡೋದು ಕಿರಿಕಿರಿ..ಇದರಲ್ಲಿ ಕಾಗುಣಿತದ ತಪ್ಪಿದ್ದಲ್ಲಿ ಮುಂದಿನ ತಿಂಗಳು ಸರಿಮಾಡೋದು...ಅಲ್ಲಿ ತನಕ...Sayonara...)
2 comments:
ಜ್ಯೋತಿಷ್ಯ ಕಾರ್ಯಕ್ರಮಗಳ ಸತ್ಯಾ ಸತ್ಯತೆ ಝಾಡಿಸಿದ ಬರಹ.
Jyotishya karyakrama kinta karyaKarama chennagi suit aagatte correct madabedi plz ;)
Post a Comment