ದಿನ ನಿತ್ಯ ಬೆಳಿಗ್ಗೆ 4 ಗಂಟೆಗೆದ್ದು, ಹಾಲು ತಂದು ದಿನದ ಮೊದಲ ಚಹಾ ಕುಡಿದು, ಬೆಳಗ್ಗಿನ ತಿಂಡಿ, ಮಕ್ಕಳ ಮಧ್ಯಾಹ್ನದ ಊಟ ವಗೈರೆ ಅಂತ 6.30 ತನಕ ನಾನು ಅಡಿಗೆ ಮನೆಯಲ್ಲಿರುತ್ತೇನೆ. ಆಮೇಲೆ ಇನ್ನೊಂದು ಕಪ್ ಚಹಾ ಮಾಡಿ, ಹೊರಗೆ ಹಾಕಿರುವ ನ್ಯೂಸ್ ಪೇಪರ್ (The Hindu, Business Line ಮತ್ತು ಪ್ರಜಾವಾಣಿ) ತಂದು ದೀವಾನ್ ಮೇಲೆ ಪೇಪರ್ ಎಲ್ಲ ಬಿಡಿಸಿ, ನಾನು ಒಂದೆ ಪೇಪರ್ ಬಿಡಿಸಲ್ಲ ಮೂರು ಒಟ್ಟಿಗೆ ಬಿಡಿಸಿ ಅದರಲ್ಲಿ ಯಾವುದಾದರೊಂದು ಪೇಪರ್ ಓದುವುದು. ಶ್ರೀಕಾಂತ ಮಕ್ಕಳು ಏಳುವ ತನಕ.
ಆ ದಿನ ದೋಸೆ. ದೋಸೆ ಮಾಡಿ ಕ್ಯಾಸರೋಲ್ ನಲಿ ಹಾಕಿಡುವ ಅಂತ ಅಡಿಗೆ ಮನೆಗೆ ಹೋದ ನನ್ನ ಕಣ್ಣು ಅಲ್ಲೇ ಬ್ಲಿಂಕ್ ಆಗ್ತಿದ್ದ ಸೆಲ್ ಫೋನ್ ಕಡೆ ಹೋಯ್ತು. ನೋಡಿದ್ರೆ ಒಂದು ಮಿಸ್ಡ್ ಕಾಲ್. ಜಿ.ಎನ್. ಮೋಹನ್ ಅವರದ್ದು. ಅರೇ ಇದೇನಿದು ಬೆಳಿಗ್ಗೆ ಬೆಳಿಗ್ಗೆ ಫೋನ್ ಅಂತ ಕೂಡಲೆ ಅವರಿಗೆ ಫೋನ್ ಮಾಡಿದೆ. ರಿಂಗ್ ಆಯ್ತು ವಿನ: ಯಾರೂ ಎತ್ತಲಿಲ್ಲ. ಒಂದರ್ಧ ಗಂಟೆ ಬಿಟ್ಟು ಅವರೇ ಪುನ: ಫೋನ್ ಮಾಡಿದ್ರು, 'ವಿ. ಎನ್. ವೆಂಕಟಲಕ್ಷ್ಮಿ ನಿಮ್ಮ ಜತೆ ಮಾತನಾಡಬೇಕಂತೆ ನಿಮ್ಮ ನಂಬರ್ ಕೊಟ್ಟಿದ್ದೀನಿ' ಇಷ್ಟೆ ವಿಷಯ ಅಂತ ಹೇಳಿ, ಶ್ರೀಕಾಂತ ಜತೆ ಒಂದೆರಡು ಮಾತಾಡಿ ಫೋನ್ ಇಟ್ಟರು ..
ಮಿತ್ರ ರಘು, ವಿ.ಎನ್. ವೆಂಕಟಲಕ್ಷ್ಮಿಯವರ ಪರಿಚಯ, -ನಾನು ವಸುಧೇಂದ್ರರ ನಾಟಕ ಯುಗಾದಿ ವೀಕ್ಷಿಸಲು ನ್ಯಾಶನಲ್ ಕಾಲೇಜ್ ಜಯನಗರ, ಶ್ರೀಕಾಂತ ಹಾಗೂ ಮಾಲವಿಕ ರ ಟಿಕೆಟ್ ನನ್ನ ಬಳಿಯಿದ್ದುದರಿಂದ ಹೊರಗೆ ಅವರಿಗೆ ಕಾಯುತ್ತಿದ್ದಾಗ -ಮಾಡಿದ್ದರು. ನಾನು ಅವರನ್ನು ಬಿ.ಎಸ್. ವೆಂಕಟಲಕ್ಷ್ಮಿ ಅಂತ confuse ಮಾಡಿಕೊಂಡು, ಅಷ್ಟು ಪ್ರಬುದ್ಧ ಪತ್ರಿಕೆ ಇಷ್ಟು ಚಿಕ್ಕವಯಸ್ಸಿನ ಹೆಣ್ಮಗಳು ನಡೆಸುತ್ತಾಳ ಅಂದು ಕೊಂಡು, 'ಚರ್ಚೆಗೊಂದು ಚಾವಡಿ; ನಿಮ್ಮದೇನಾ? ಅಂತ ಕೇಳಿದ್ದೆ. ಅವರು' ಇಲ್ಲ ಅವರು ಬೇರೆ ವೆಂಕಟಲಕ್ಷ್ಮಿ ಅಂತ ನಗುತ್ತ ಹೇಳಿದ್ದರು.....ಆ ಫೋನ್ ಕಾಲ್ ನಿಂದ ಇಷ್ಟೆಲ್ಲ ನೆನಪಾಯಿತು.
ಮಧ್ಯಾಹ್ನಾನಂತರ ವೆಂಕಟಲಕ್ಷ್ಮಿಯವರು ಫೋನ್ ಮಾಡಿದರು. ನಮ್ಮ ದೀಪಾವಳಿ ವಿಶೇಷಾಂಕಕ್ಕೆ(ಅಷ್ಟರತನಕ ನನಗೆ ವಿ.ಕ. ದೀಪಾವಳಿ ವಿಶೇಷಾಂಕ ಹೊರತರುತ್ತಿದೆ ಅಂತ ಸಹ ಗೊತ್ತಿರಲಿಲ್ಲ) ನಿಮ್ಮ ಬ್ಲಾಗ್ ನಿಂದ ರೆಸಿಪಿಗಳನ್ನು ಕಳಿಸಬಹುದಾ' ಅಂತ. ರೆಸಿಪಿಗಿಂತ ನೀವು ಅದಕ್ಕೆ ಹಾಕಿರುವ blurbs ಚೆನ್ನಾಗಿರುತ್ತದೆ' ಅಂದರು. ಆದರೆ ನನ್ನ ಕನ್ನಡ ಸರಿಯಿಲ್ಲವಲ್ಲ ಅಂತ ನಾನು ಅವರಿಗೆ ಹೇಳಿದೆ. ಅಡ್ಡಿಯಿಲ್ಲ ಅಂದ್ರು...ನಾನು ನನ್ನ ಬ್ಲಾಗ್ ನಲ್ಲಿ ಹಾಕಿದ ರೆಸಿಪಿಗಳನ್ನೆಲ್ಲ (ಒಟ್ಟು ಐದು) ಸೇರಿಸಿ ಕೆಲವು ಫೋಟೊಗಳ ಸಮೇತ ಅವರಿಗೆ ಮೈಲ್ ಮಾಡಿದೆ. ಮತ್ತು ಅದರ ಬಗ್ಗೆ ನನಗೆ ಮರೆತು ಹೋಯ್ತು. ಒಂದು ಚಿಕ್ಕ ಟೂರ್ ಎಲ್ಲ ಹೋಗಿ ಬಂದೆವು.

ದೀಪಾವಳಿ ಸಮಯದಲ್ಲಿ ನನಗೆ ಮೊದಲು ಎಸ್ ಎಮ್ ಎಸ್ ಕಳುಹಿಸಿದವರು ಸೃಜನ್(cartoonist)...'ನಿಮ್ಮ ಫೋಟೊ ಬರಹ ವಿಜಯಕರ್ನಾಟಕ ದೀಪಾವಳಿ ವಿಶೇಷಾಂಕದಲ್ಲಿ ನೋಡಿ ಖುಶಿಯಾಯ್ತು' ಅಂತ. ಅದರ ಬೆನ್ನಿಗೆ ಎರಡ್ಮೂರು ಎಸ್ ಎಮ್ ಎಸ್ ಬಂತು. ನನಗೆ ಅದರ ತಲೆ ಬುಡ ಅರ್ಥ ಆಗಲಿಲ್ಲ.
ನಾನು ಯಾವುದೇ ವಿಶೇಷಾಂಕವನ್ನು ತರಿಸಲ್ಲ. ಬೆಳಗಾವಿಗೆ ಹೋದಾಗ ನನ್ನ ತಮ್ಮನ ಹೆಂಡತಿ ತರಿಸುವ ಕರ್ಮವೀರ / ಸುಧಾ ವಿಶೇಷಾಂಕಗಳನ್ನು ಓದುವುದು. ಅದರ ಜತೆ ಅವಳು ತರಂಗ ಮತ್ತು ಗೃಹಶೋಭ ಕೂಡ ತರಸುತ್ತಾಳೆ.
ಮಧ್ಯಾಹ್ನ ನನ್ನ ತಮ್ಮನ ಹೆಂಡತಿಯ ಫೋನ್ ಬಂತು ತುಂಬ excite ಆಗಿದ್ದಳು (ಆ ವರ್ಷ ಅವಳು ವಿ.ಕ ದೀ ವೀ ತೆಗೆದುಕೊಂಡಿದ್ದಳು), 'ಮಾಲ್ತ್ಯಕ್ಕಾ ನಿನ್ನ ಅಡುಗೆ, ಫೋಟೊ ಎಲ್ಲ ಹಾಕಿದ್ದಾರೆ ಪುಸ್ತಕದಲ್ಲಿ, ನನ್ನ ಅಕ್ಕ ತಂಗಿಯರೆಲ್ಲ ರಜೆಗೆ ನಮ್ಮಲ್ಲಿ ಬಂದಿದ್ದಾರೆ ಅವರಿಗೆಲ್ಲ ತೋರಿಸಿ ಹೆಮ್ಮೆ ಪಟ್ಟುಕೊಂಡೆ' ಅಂದ್ಲು. ಇ-ಮೈಲ್ ಓಪನ್ ಮಾಡಿ ನೋಡಿದ್ರೆ ಶ್ರೀವತ್ಸ ಜೋಶಿ ನನ್ನ ಬರಹ ದ ಬಗ್ಗೆ ಚೆಂದದ ಎರಡು ಮಾತು ಬರೆದದ್ದಲ್ಲದೇ ಅದರ ಪಿಡಿಎಫ್ ಸಹ ಕಳುಹಿಸಿದ್ದರು. ತುಂಬ ಖುಶಿಯಾಯಿತು ನನಗೆ ಅವರ ಅಭಿಮಾನ ನೋಡಿ.
ಸರಿ ಒಂದುವಾರ ಆದಮೇಲೆ excitement ಎಲ್ಲ ತಣ್ಣಗಾಯಿತು ಹಾಗೆ ಮರೆತು ಕೂಡ ಹೋಯಿತು. ಸುಮಾರು 6 ತಿಂಗಳ ನಂತರ ನನಗೆ VRL Printers ನಿಂದ ಒಂದು ಕೊರಿಯರ್ ಬಂತು. ಅದರಲ್ಲಿ ಒಂದು ಚೆಕ್. ಅದಕ್ಕೆ ಅಪ್ಪ ಅಮ್ಮ ಅರ್ಥಾತ್ ಏನು ಡೀಟೈಲ್ಸ್ ಇರಲಿಲ್ಲ ನನ್ನ ಹೆಸರು ಮತ್ತು 750/- amount.ನ ಚೆಕ್. ಕೂಡಲೆ ನಾನು ವಿ ಎನ್ ವಿ ಗೊಂದು ಮೈಲ್ ಹಾಕಿದೆ ಹೀಗ್ ಹೀಗೆ ಅಂತ..ಅದಕ್ಕೆ ಅವರು ನಿಮ್ಮ ಬರಹಕ್ಕೆ ನಮ್ಮ ಪುಟ್ಟ ಕಾಣಿಕೆ ಅಂದ್ರು...
ನನಗಂತು ನಗು. ಏನೂ ಶ್ರಮ ವಹಿಸದೆ ನನ್ನ ಬ್ಲಾಗ್ ನ ರೆಸಿಪಿಗಳಿಗೆ 750/- ಕೊಡ್ತಾರಾ ಅಂತ? ಸರಿ ನಾಲ್ಕ್ಸೈದು ದಿನ ಚೆಕ್ ಅಲ್ಲೇ ಟಿಫಾಯ್ ಮೇಲೆ ಬಿದ್ದಿತ್ತು. ಇನ್ನು ಬ್ಯಾಂಕ್ ಗೆ ಹಾಕದಿದ್ದರೆ ಶ್ರೀಕಾಂತ ರಿಂದ ನನ್ನ ಸೋಂಬೇರಿತನಕ್ಕೆ ಬೈಗುಳು ಖಂಡಿತ ಅಂತ ಬ್ಯಾಂಕ್ ಕಡೆ ಹೊರಟೆ, ಹಾಗೆ ಬೋರ್ಡ್ ಗೆ ಸಿಕ್ಕಿಸಿದ್ದ ವಿದ್ಯುತ್ ಹಾಗೂ ನೀರಿನ ಬಿಲ್ಲ ಸಹ ಎತ್ತಿಕೊಂಡೆ. ಬಿಲ್ಲ ಪಾವತಿಸಿ, ಚೆಕ್ ಬ್ಯಾಂಕಿಗೆ ಹಾಕಿ, ATM ನಿಂದ ಸ್ವಲ್ಪ ದುಡ್ಡು ಡ್ರಾ ಮಾಡಿ ಮನೆಗೆ ಬಂದೆ. ಮನೆ ಹತ್ತಿರ ಹತ್ತಿರ ತಲುಪುವಾಗ ದಿನಾ ಬರುವ ಕ್ವಾಲಿಟಿ ವಾಲ್ಸ್ ಐಸ್ ಕ್ರೀಮ್ ಗಾಡಿಯವ ನಮ್ಮ ಮನೆಮುಂದೆ ಅವನ ಗಾಡಿ ನಿಲ್ಲಿಸಿದ್ದ. ಸುಮಾರು ದಿನಗಳೇ ಆಗಿ ಹೋಗಿದ್ದವು ಐಸ್ ಕ್ರೀಮ್ ತಿನ್ನದೆ, ಹಾಗೂ ಆ ದಿನ ಮಧ್ಯಾಹ್ನ್ ಊಟಕ್ಕೆ ಯಾರಿರುವುದಿಲ್ಲವೆಂದು, ರಾತ್ರಿಯೇ ಅಡಿಗೆ ಮಾಡಿದ್ರಾಯಿತೆಂದು ಸುಮ್ಮನಾಗಿದ್ದೆ. ಈಗ ಸ್ವಲ್ಪ ಹಸಿವೆಯೂ ಕಾಣಿಸಿಕೊಂಡಿತು.
ನಾನು ಯಾವ ಐಸ್ ಕ್ರೀಮ್ ಬೇಕೆಂದು ಸೆಲೆಕ್ಟ್ ಮಾಡುತ್ತಿದ್ದಾಗ ಪಕ್ಕದ ನಿವೇಶನದಲ್ಲಿ ಮನೆ ಕಟ್ಟುತ್ತಿದ ಗಾರೆಯ ಕೆಲಸಕ್ಕೆ ಬಂದವರು ಸುಮ್ಮನೆ ನಿಂತು ನನ್ನನ್ನು ನೋಡಲು ಶುರು ಮಾಡಿದರು. ಅದರಲ್ಲಿ ಒಬ್ಬಳನ್ನು ಕರೆದೆ. "ನಾನು ಐಸ್ ಕ್ರೀಮ್ ಕೊಡಿಸಿದರೆ ತಿನ್ನುತ್ತೀರಾ ಅಂತ' ಅವಳು ಹೂಂ ಅಂದಳು. ಎಷ್ಟು ಜನ ಇದ್ದೀರಾ ಅಂತ ಕೇಳಲು, ಅವರಲ್ಲಿನ ಒಬ್ಬ ಹುಡುಗ ಲೆಕ್ಕ ಹಾಕಿ 9 ಜನ ಇದ್ದೀವಿ ಅಂದ. ಐಸ್ ಕ್ರೀಮ್ ನವನ ಕಾರ್ಡ್ ಅವರ ಹತ್ತಿರ ಜರುಗಿಸಿ ನಿಮಗೆ ಯಾವುದು ಬೇಕೋ ಆರಿಸಿಕೊಳ್ಳಿ ಅಂದೆ. ಅವರು ನೀವು ತೆಗೊಂಡಿದ್ದಂತ್ದ್ದೆ ಬೇಕು ಅಂದ್ರು...ಸರೀ ಐಸ್ ಕ್ರೀಮ್ ನವನಿಗೆ ಕೇಳಿದೆ ಅಷ್ಟು ಇದೆಯಾ ಅಂತ...ಇತ್ತು. ಅವರಿಗೆಲ್ಲ ಐಸ್ ಕ್ರೀಮ್ ಕೊಡಿಸಿ ಅದಕ್ಕೆ ಸುತ್ತಿದ ಕಾಗದವನ್ನು ಅಲ್ಲಿ ಇಲ್ಲಿ ಬಿಸಾಕದೆ ಒಂದು ಪ್ಲಾಸ್ಟಿಕ್ ಕವರ್ ಗೆ ಹಾಕಲು ಹೇಳಿ ಅವರ ಜತೆಗೆ ನಾನು ಐಸ್ ಕ್ರೀಮ್ ತಿಂದು ಮುಗಿಸಿದೆ. ಅವರ ಖುಶಿ ನೋಡಿ ನಾನು ಹಾರಾಡ್ತಾ ಇದ್ದೆ. ಸಂಜೆ ಶ್ರೀಕಾಂತ ಮಕ್ಕಳು ಬಂದ ಮೇಲೆ ಮೂವರಿಗೂ ಹೇಳಿದೆ. ಶ್ರೀಕಾಂತ ಯಾವತ್ತಿನ ಹಾಗೆ ಹಮ್ಮ್ಮ್ಮ್ ಅಂದರು, ನಿಹಾ ತಬ್ಬಿ ಕೊಂಡು ಲವ್ ಯು ಮೋಮಿsssss ಆಂದ್ಲು, ಮಾಲು ಮಾತ್ರ ನಗುತ್ತ dont boast ಅಂದ್ಲು. ನನ್ನ ತಲೆಗೆ ಹೇಲೋ (Halo ) ಒಂದು ಬರೋದು ಬಾಕಿ.
ಸರಿ ಮರುದಿನ ಬೆಳಿಗ್ಗೆ ಮನೆಯ ಬೆಲ್ ಸದ್ದು ಆಯಿತು. ಬಾಗಿಲು ತೆರೆದ್ರೆ ಬಂದವರು ಯಾರು ಅಂತ ಗೊತ್ತಾಗಲಿಲ್ಲ. ಮ್ಯಾಡಂ ನಾನು ಪಕ್ಕದ ಮನೆಯ ಮಾಲೀಕ. ನೆನ್ನೆ ಐಸ್ ಕ್ರೀಮ್ ಕೊಡಿಸಿದರಂತೆ ನಮ್ಮ ಆಳುಗಳಿಗೆ. ನಾನು ನಿಧಾನಕ್ಕೆ ಹೂಂsss ಆಂದೆ
"ಅಲ್ಲ ಮ್ಯಾಡಂ ನೀವೆಲ್ಲಾ ಹೀಗೆ ಮಾಡಿದ್ರೆ, ಉಳಿದವರು ಹಾಗೆ ಮಾಡಬೇಕೆಂದು ಅವರು expect ಮಾಡಲ್ವಾ' ಅಂದ್ರು
ನಾನು , 'ಹೌದಲ್ವಾ , ನಾನು ಆ ತರಹ ಯೋಚಿಸಲೇ ಇಲ್ಲ, ಎನ್ಮಾಡಲಿ ಈಗ' ಅಂದೆ ಸೆಪ್ಪೆ ಮುಖ ಮಾಡಿ' ಪಾಪ ಅವರು ಮುಂದೆ ಏನೂ ಮಾತಾಡದೆ ಹೋದರು
ಎರಡು ದಿನ ಬಿಟ್ಟು ಅವರೇ ಪುನ: ಬಂದು' ಸೊರಿ ಮ್ಯಾಡಂ ನೀವು ಐಸ್ ಕ್ರೀಮ್ ಕೊಡಿಸಿದ್ದಕ್ಕಲ್ಲ ನನಗೆ ಇರುಸು ಮುರುಸಾಗಿದ್ದು, ನನಗೆ ಆ ತರಹದ ಆಲೋಚನೆ ಯಾವತ್ತೂ ಬರಲೇ ಇಲ್ಲವಲ್ಲ ಅಂತ'
ನನ್ನ neem toothpaste ಸ್ಮೈಲ್ ಪುನ: ಹತ್ತಿಕೊಂಡಿತು, ನಿಹಾ ಇನ್ನಷ್ಟು ಗಟ್ಟಿ ಯಾಗಿ ತಬ್ಬಿಕೊಂಡಳು, ಮಾಲವಿಕ 'ಮೊಮ್ಮೀ you are impossible' ಅಂದ್ಲು, ನಮ್ಮ ರಾಯರು as usual ಹ್ಮ್ಮ್ಮ್ಮ್ಮ್ ಅಂತ ಹಮ್ಮಿಂಗ್ ಬರ್ಡ್ ತರಹ ಸದ್ದು ಮಾಡಿದರು...
ಇದೆಲ್ಲ ಹೇಗೆ ನೆನಪಾಯ್ತು ಅಂದ್ರೆ, ಪಾಸ್ ಪೋರ್ಟ್ ಗೆ ಬೇಕಿದೆಯಂತ ಯಾವುದೂ ಡಾಕ್ಯೂಮೆಂಟ್ ಹುಡುಕ್ತಿರಬೇಕಾದ್ರೆ ನನಗೆ ಆ VRL Printers ನ ಚೆಕ್ ನ ಕೌಂಟರ್ ಫೋಯಿಲ್ ಸಿಕ್ತು..ಹಾಗೆ...ಇದೂ ಒಂದು ಸಂಚಿಯಿಂದ ತೆಗೆದ ನೆನಪೆ ಒಂದು ವರೆ ವರ್ಷ ಆಯ್ತು ಈ ಘಟನೆಗೆ...
(ಮರುವರ್ಷ ಕುರಿಯರ್ ನಲ್ಲಿ ಒಂದು ಯುಗಾದಿ ವಿಶೇಷಾಂಕ ಕೂಡ ಕಳುಹಿಸಿದರು) :-)
P.S: I HATE COOKING...
ಇಲ್ಲಿ ಒಂದು ಗಮ್ಮತ್ತಿನ ಘಟನೆ ನಿಮ್ಮೊಂದಿಗೆ ಶೇರ್ ಮಾಡ್ತೀನಿ:
ನಾನು ಅಕ್ಕ ಒಂದು ಸಲ ಬಸವೇಶ್ವರನಗರದ ಕಡೆ ಹೊರಟಿದ್ವಿ ನಡೆದುಕೊಂಡು..ಏನೋ ಮಾತಿಗೆ 'akka wish i had a cook, i so hate cooking' ಅಂದೆ. ಸ್ವಲ್ಪ ದೂರ ನಡೆದಿರಬಹುದು. ಆ ರಸ್ತೆಯಲ್ಲಿ ನಮ್ಮನ್ನು ಬಿಟ್ಟರೆ ಯಾರೂ ಇರಲಿಲ್ಲ. ತಿರುವು ತೆಗೆದುಕೊಂಡ ಮೇಲೆ ನಮ್ಮ ಮುಂದೆ ದೂರ, ಆ ರಸ್ತೆ ತುದೀಗೆ ಒಬ್ಬ ಹೆಂಗಸು ಹೋಗ್ತಾ ಇದ್ದರು. ನಾವು ಸ್ವಲ್ಪ ಬೇಗ ಬೇಗ ಹೆಜ್ಜೆ ಹಾಕ್ತಾ ಇದ್ವಿ. ಆ ಹೆಂಗಸಿನ್ ಬಳಿ ತಲುಪುವಷ್ಟರಲ್ಲಿ , ಆ ಹೆಂಗಸು sudden ಆಗಿ ತಿರುಗಿ 'ನಿಮಗೆ ಅಡುಗೆಯವಳು ಬೇಕೆ' ಅನ್ನುವುದೆ? ಅಕ್ಕ ಒಂದಿಂಚು ಜಂಪ್ ಹೊಡೆದಳು ಹೌಹಾರಿ. ನಾನೆ ಸುಧಾರಿಸಿಕೊಂಡು 'ಬೇಡಮ್ಮ' ಅಂದೆ...ಹೆಂಗೆ????
(ಅಂದಹಾಗೆ ಆ ದಿನ ನಾವೆಲ್ಲರೂ ತಿಂದಿದ್ದು ಕ್ವಾಲಿಟಿ ವಾಲ್ಸ್ ನ ಚಾಕೊಲೇಟ್ ಬಟರ್ ಸ್ಕಾಚ್ ಕೋನ್...)

:-)
7 comments:
Jai Ho Malthi .Sogasada lekhana
Veda
ಸರಾಗವಾಗಿ ಹಲವು ವಿಚಾರಗಳನ್ನು ಬರೆದುಕೊಂಡ ಬರಹದಲ್ಲಿ ಕಡೆಯ ಕ್ಲೈಮ್ಯಾಕ್ಸ್ ಹೌಹಾರುವಂತಿದೆ ನಮಗೂ.
ಚೆಂದದ ನೆನಪು.
ನನಗೂ ಇ-ಪೇಪರ್ನಲ್ಲಿ ನನ್ನ ಲೇಖನದ ನೆನಪಾಯಿತು
Was the article about wheat based recipes in VK? I've read that issue!
And the parting byte, wonder how such incidents come in search of you only! Love that. Someone else in your place would have thought they have got 'one extra flower' from God!
Looking forward to the book version of all your recipes.
-- Kar
Thank you Veda, Badari and SriGuru(vichalita)
Radhika:strange but true... it happens to me all the time and i dont like it...
Shree Kar: that is a remote possibility...
thanks all for coming here
:-)
ms
Hi....u out of FB? i was looking for bhindi fry...my wife wanted to try :) send me an email if possible. vhathwar@gmail.com
Post a Comment