April 27, 2012

ಹಮೆ ಜೀನೆ ದೋ ನಮಗೂ ಹಕ್ಕಿದೆ

ಚಿಕ್ಕಂದಿನಲ್ಲಿ ಮುಂಬೈನಲ್ಲಿದ್ದಾಗ, ಇವರನ್ನು ನೋಡಿ ಹೆದರುತ್ತಿದ್ದೆ. ಮನೆಯಲ್ಲೂ, ನಾವು ದೊಡ್ಡವರ ಮಾತು ಕೇಳಿಸಕೊಳ್ಳದಿದ್ದರೆ, ನೋಡು ನಿಮಗೆ ’ಹಿಜಡಾ’ ಗಳಿಗೆ ಕೊಟ್ಟು ಬಿಡುತ್ತೇವೆ ಅಂತ ಹೆದರಿಸುತ್ತಿದ್ದರು. ಹಿಜಡಾ ಗಳು ಗುಂಪಿನಲ್ಲಿ ಬರುತ್ತಿದ್ದರು. ಬಿಲ್ಡಿಂಗ್ ನ ಫ್ಲ್ಯಾಟ್ ನ ಬಾಲ್ಕನಿಯಿಂದ ಪುಟ್ಟ ಮಕ್ಕಳ ಲಂಗೋಟಿ ಒಣಗುವುದು ಕಂಡರೆ ಸಾಕು ಎಲ್ಲರೂ ಗಟ್ಟಿ ಚಪ್ಪಾಳೆ ಸದ್ದು ಮಾಡುತ್ತ ಆ ಮನೆಯವರಿಗೆ ಬೆದರಿಸುತ್ತಿದ್ದರು. ದುಡ್ಡು ಕೊಡಿ ಅಥವಾ ನಾವು ನೀವಿಲ್ಲದಿದ್ದಾಗ ಬಂದು ನಿಮ್ಮ ಮಗುವನ್ನು ಎತ್ತಿಕೊಂಡು ಹೋಗುತ್ತೇವೆ ಎಂದು. ಹಣ ಕೊಟ್ಟಿದ್ದು ಕಡಿಮೆಯಾದರೆ ಬೈಗಳನ್ನು ಹಾಕುತ್ತ ಹೊರಟುಬಿಡುತ್ತಿದ್ದರು.
ಆದರೆ ಕೆಲವು ಸಮುದಾಯದವರು ಗಂಡು ಮಗು ಹುಟ್ಟಿದ ಸಂದರ್ಭ, ಅಥವ ಮದುವೆ ಯಲ್ಲಿ ಅವರನ್ನು ಕರೆಯಿಸಿ ಅವರಿಂದ ಹಾಡು ನೃತ್ಯಗಳನ್ನು ಮಾಡಿಸಿ, ದುಡ್ಡು ಕೊಟ್ಟು ಕಳುಹಿಸ್ತ್ತಾರೆ. ಇದರಿಂದ ಆ ಸಮುದಾಯದವರಿಗೆ ಶುಭವಾಗುತ್ತದೆ ಎಂಬ ನಂಬಿಕೆ.
ತಿಳುವಳಿಕೆ ಬಂದ ಮೇಲೆ ಅವರ ಬಗ್ಗೆ ಅಷ್ಟು ಭೀತಿಯಿರಲಿಲ್ಲ. ರಿಕ್ಷಾದಲ್ಲಿ ಹೋಗುವಾಗ ಸಿಗ್ನಲ್ ನಲ್ಲಿ ನಿಂತು ಹಣಕ್ಕಾಗಿ ಪೀಡಿಸುವುದನ್ನು ನೋಡುತ್ತಿದೆ. ಹೆಂಗಸರಿಗೆ ಅಷ್ಟು ತೊಂದರೆ ಕೊಡುತ್ತಿರಲಿಲ್ಲ. ಗಂಡಸರು ಇದ್ದರೆ ’ಅರೇ, ದೇ ನಾ..ಅಂತ ಕಿಚಾಯಿಸಿ ಶರ್ಟ್ ನ ಜೇಬಿಗೆ ಕೈ ಹಾಕುವುದೋ, ತಲೆ ಮುಟ್ಟುವುದೋ ಇಂತಹುದ್ದನ್ನೆಲ್ಲ ಮಾಡುತ್ತಿದ್ದರು. ಗಂಡಸರು ಹೆದರಿಕೊಂದು ದುಡ್ಡು ಕೊಟ್ಟು ಬಿಡುತ್ತಿದ್ದರು.
ನಮ್ಮ ಸಂಸ್ಥೆಯಿಂದ ಇತ್ತೀಚಿಗೆ ನಾವು 'ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ ಸೇರ್ಪಡೆ-ಸವಾಲುಗಳು ಅವಕಾಶಗಳು ’ ಎನ್ನುವ ಒಂದು ದಿನದ ಕಮ್ಮಟ ಹಮ್ಮಿಕೊಂಡಿದ್ವಿ.  ಅನ್ಯಲಿಂಗಿ/ದ್ವಿಲಿಂಗಿ ಅಂತ ಕರೆಯಲ್ಪಡುವ ಇವರಿಗೆ ಸಾಮಾಜಿಕ ಸ್ಥಾನಮಾನ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡಿಸುವ ಬಗ್ಗೆ ಒಂದು ಕಮ್ಮಟ (workshop). ನಮ್ಮ ಸಂಸ್ಥೆಯ ಬಗ್ಗೆ ನನಗೆ ತುಂಬ ಹೆಮ್ಮೆಯಿತ್ತು. ಆದರೆ ಈ ಒಂದು ಕಾರ್ಯಕ್ರಮ ಆದಮೇಲೆ ಅದು ನೂರ್ಮಡಿ ಜಾಸ್ತಿಯಾಗಿದೆ.
ಅವರಿಗೆ ಒಂದು ಅಸ್ತಿತ್ವವೇ ಇಲ್ಲ. ಖೇದದ ವಿಷಯವೆಂದರೆ ಜನ ಗಣತಿ ನಡೆಸುವಾಗ ಇವರನ್ನು ಗಣನೆಗೆ ತೆಗೆದುಕೊಳ್ಳದೆ ಇದ್ದು ಅವರ ಅಸ್ತಿತ್ವದ ಅಂಕಿ ಸಂಖ್ಯೆ ಭಾರತ ದೇಶದಲ್ಲಿ ಲಭ್ಯವಿಲ್ಲವೆಂದು, ಅಂದು ನಮ್ಮೋಡನೆ ಇದ್ದ ಬಿ.ಟಿ ವೆಂಕಟೇಶ,- ಇವರು ಹನ್ನೆರಡು ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾಗಿ ನ್ಯಾಯಕ್ಕಾಗಿ  ಹೋರಾಡುತ್ತಿದ್ದಾರೆ,- ಹೇಳಿದರು . ಅನ್ಯ ಲಿಂಗಿಯರ ವಿರುದ್ಧ ಹಲವಾರು  ಕೇಸ್ ಗಳನ್ನು ಶ್ರೀ ವೆಂಕಟೇಶ ಅವರು  ಗೆಲ್ಲಿಸಿಕೊಟ್ಟಿದ್ದಾರೆ.
ಅವರೂ ನಮ್ಮ ನಿಮ್ಮ ತರಹನೇ. ಪ್ರಕೃತಿಯ ಕ್ರೂರ ವಿಕೋಪಕ್ಕೆ ಹಾಗಾಗಿದ್ದಾರೆ ಅಷ್ಟೆ. ನಮ್ಮ ತರಹನೇ ನೋವು ನಲಿವು ಅನುಭವಿಸುತ್ತಾರೆ. ಅವರಿಗೂ ನಮ್ಮ ಹಾಗೆ ಜೀವಿಸುವ ಹಕ್ಕು ಇದೆ ಯಲ್ಲವೇ?
ಕಮ್ಮಟದಲ್ಲಿ ಭಾಗವಹಿಸಲು ಬಂದವರ ಹೇಳಿದಂತಹ ಮಾತುಗಳು:
"ಮ್ಯಾಡಂ ಮೂರು ಹೆಣ್ಣುಗಳ ನಂತರ, ತಂದೆ ತಾಯಿಯವರ ಪ್ರಾರ್ಥನೆ, ದೇವರ ವರಪ್ರಸಾದವೆಂಬಂತೆ ನಾನು ಹುಟ್ಟಿದೆ. ಹೆಸರು ’ಕುಮಾರ’ . ಆದರೆ ಯೌವನಾವಸ್ಥೆಗೆ ಬರುವ ಹೊತ್ತಿಗೆ ನನಗ್ಯಾಕೋ ನಾನು ಹೆಂಗಸು ಅನ್ನಿಸುವುದಕ್ಕೆ ಶುರು ಆಯ್ತು. ನನ್ನ ಹಾವ ಭಾವಗಳು, ನನ್ನ ಮನಸ್ಸಿನ ಭಾವನೆಗಳೆಲ್ಲ ಹೆಣ್ಣನ್ನೆ ಹೋಲುತ್ತಿದ್ದವು. ಪ್ಯಾಂಟ್ ಶರ್ಟ್ ಹಾಕಲು ಮುಜುಗರ ಅನ್ನಿಸುತ್ತಿತ್ತು. ಮನೆಯಲ್ಲೂ ಬೈ ಗಳು. ಗಂಡಾಗಿ ಹುಟ್ಟಿದಿಯ ಗಂಡಸಿನ ತರಹ behave ಮಾಡು ಅಂತ’. ಶಾಲೆಯಲ್ಲೂ ನಾನು ಕಲಿಯುವುದರಲ್ಲಿ ಮುಂದೆ. ಆದರೆ ಟೀಚರ್ ಗೆ ನನ್ನ ಜಾಣತನಕಿಂತ ’ಅದೇನು ಹೆಣ್ಣುಮಕ್ಕಳ ತರ ಮಾಡೋದು’ ಅಂತ ಬೈಯುವುದರಲ್ಲಿ ಹೆಚ್ಚು ಆಸಕ್ತಿ. ಇದನ್ನೆಲ್ಲ ನೋಡಿ ಕೊಂಡು ಮನಸ್ಸು ರೋಸಿ ಹೋಯ್ತು. ದೇಹ ಮನಸ್ಸಿನಲ್ಲಿ ಒಂದು ತರಹ ಒದ್ದಾಟ ಶುರು ಆಗಿ ತಡೆಯಕ್ಕಾಗದೇ ಹೆಣ್ಣುಮಕ್ಕಳ ಬಟ್ಟೇ ತೊಡಲು ಶುರು ಮಾಡಿದ ಮೇಲೆ ಮನೆಯಲ್ಲಿ ಹಿಂಸೆ ಜಾಸ್ತಿಯಾತು. ನಿನ್ನಿಂದ ನಿನ್ನ ಅಕ್ಕಂದಿರ ಭವಿಷ್ಯ ಹಾಳಗುತ್ತೆ, ಅದು , ಇದು ಅಂತ. ಕಾಟ ತಾಳಲಾರದೆ ನಾನು ಮನೆ ಬಿಟ್ಟು ಶಹರಕ್ಕೆ ಬಂದೆ. ಇಲ್ಲಿ ಸಮರ ಎನ್ನುವ ಗುಂಪಿನ ಬಗ್ಗೆ ತಿಳಿಯುವ ಮುನ್ನ ನಾನು sex worker ಆಗಿ ಮತ್ತು ಬೇಡಿಕೊಂಡು ಜೀವನ ನಡೆಸಿದೆ. ಸಮರ ಸೇರಿದ ಮೇಲೆ ನನಗೆ ಗೊತ್ತಾಗಿದ್ದು ನನ್ನ ತರಹ ಇನ್ನೂ ಸುಮಾರು ಜನರು ಇದ್ದಾರೆ ಅಂತ. ನಾನೀಗ sex change ಒಪರೇಶನ್ ಮತ್ತು ಹರ್ಮೋನ್ ರಿಪ್ಲೇಸಮೆಂಟ್ ಥೆರಪಿಯಿಂದ ಈ ತರಹ ಕಾಣುತ್ತೇನೆ.
ಇನ್ನೊಬ್ಬರು: ನಗುತ್ತ ನಗುತ್ತ ಹೇಳಿದರು "ನಮ್ಮ ಮನೆಯ ನಾಯಿಯನ್ನು ನನಗಿಂತ ಚೆನ್ನಾಗಿ ನೋಡಿಕೊಳ್ಳುತ್ತಾರೆ’ ಎಂದಾಗ ನಾನಂತು ಎಲ್ಲರ ಎದುರಿಗೆ ಅತ್ತುಬಿಟ್ಟೆ. ಕಣ್ಣೀರೊರೆಸಲು ಹೋಗಲಿಲ್ಲ.
ಇನ್ನೊಬ್ಬರ ಕತೆ: ನಾನು ಹೆಣ್ಣಾಗಿ ಹುಟ್ಟಿದೆ. ಎಂಟನೆ ತರಗತಿ ತನಕ ಸರಿಯಾಗೆ ಇದ್ದೆ. ಆ ಮೇಲೆ ಕೆಲವು ದೈಹಿಕ ಬದಲಾವಣೆಗಳು ಶುರುವಾದವು. ಆದರೂ ನನ್ನ ಓದನ್ನು ಮುಂದುವರೆಸಿ , ಟೀಚರ್ಸ್ ಟ್ರೈನಿಂಗ್ ಕೋರ್ಸ್ ಮಾಡಿದೆ. ಆದರೆ ಇಂಟರ್ವ್ಯೂ ನಡೆಯುವ ದಿನ, ಅಲ್ಲಿ ಕೇಳಿದರು, ಇದೇನು bio data ದಲ್ಲಿ ಹೆಣ್ಣಂತ ನಮೂದಿಸಿದೆ, ನಿಮಗೆ ನೋಡಿದರೆ ಗಡ್ಡ ಮೀಸೆ ಬಂದು ಬಿಟ್ಟಿದೆ. ಮಕ್ಕಳು ಹೆದರಿಕೊಂಡು ಬಿಟ್ಟಾವು ಅಂತ
ಇನ್ನೊಬ್ಬರಂತು ಮಾತಿಗಿಂತ ಮೊದಲೆ ಅಳಲು ಶುರು ಮಾಡಿದರು
ಬಸ್ ನಲ್ಲಿ ಮುಂದಿನಿಂದ ಹತ್ತಿದರೆ, ಕಂಡಕ್ಟರ್ ಇದ್ಯಾಕೆ ಇಲ್ಲಿ ಹತ್ತಿದಿರಿ ಹಿಂದಗಡೆ ಹೋಗಿ ಅನ್ನುತ್ತಾರೆ, ಹಿಂದೆ ಹೋದರೆ ಮುಂದೆ ಕಳುಹಿಸುತ್ತಾರೆ, ನಾವೆಲ್ಲಿ ಹೋಗುವುದು? ಮಕ್ಕಳು ಕೂಡ ನನ್ನನ್ನು ವಿಚಿತ್ರವಾಗಿ ನೋಡಿದಾಗಲೆಲ್ಲ ಹಿಂಸೆ ಯಾಗುತ್ತೆ. ಪೋಲಿಸರಿಂದ ನಾನು ತುಂಬ ದೌರ್ಜನ್ಯಕ್ಕೆ ಒಳಗಾಗಿದ್ದೇನೆ. ಮೂರು ಸಲ ಆತ್ಮಹತ್ಯೆಗೆ ಪ್ರಯತ್ನಿಸಿದ್ದೇನೆ’. ಈಗ ಸಮರ ಸಂಸ್ಥೆಯಿಂದಾಗಿ ಸ್ವ್ಲಲ್ಪನಾದರೂ ಜೀವನಕ್ಕೆ ನೆಮ್ಮದಿ ಸಿಕ್ಕಿದೆ.
ಇವರಲ್ಲಿ ಉಳ್ಳವರು ಅಂದರೆ ದುಡ್ಡಿದವರು sex change operation (ಅಂದರೆ ಗಂಡಸಾಗಿದ್ದವರು ಹೆಣ್ಣಿನ ಭಾವನೆಗಳಿದ್ದಾಗ   ಪುರುಷ ಲಿಂಗವನ್ನು ಶಸ್ತ್ರಕ್ರಿಯೆ ಮೂಲಕ ತೆಗೆಸಿಬಿಡುವುದು) ಮಾಡಿಸಿಕೊಂಡು ನೋಡಲು normal ತರಹ ಇರುತ್ತಾರೆ.
ಅವರೆಲ್ಲರ ಅಹವಾಲು: "ನಮ್ಮನ್ನು ಗಣನೆಗೆ ತೆಗೆದುಕೊಳ್ಳಿ, ವೋಟರ್ಸ್ ಐ ಡಿ ಕೊಡಲಿ, ನಮಗೂ ಗ್ಯಾಸ್, ರಾಶನ್ ಮುಂತಾದ basic ಸೌಲಭ್ಯಗಳು ಒದಗಿಸಿದರೆ ನಾವು ಸಹ ಸಮ್ಮಾನ್ವಿತ ಜೀವನ ನಡೆಸಬಹುದು.ಜನರನ್ನು ಕಾಡಿ ಬೇಡಿ, ಹೆದರಿಸಿ ದುಡ್ಡು ತೆಗೆದುಕೊಳ್ಳುವುದು, sex work ಮಾಡದೆ ಜೀವನ ನಡೆಸಬಹುದು ಎಂಬ ಖಾತ್ರಿಯಿದೆ.ನಮ್ಮಲ್ಲೂ talented ಮಂದಿ ಇದ್ದಾರೆ. ಅವರಿಗೆ ಅವಕಾಶ ಕೊಡಿ" ಹೌದು ಕಾನೂನು ಓದಿದವರು, ಸುಂದರವಾದ ಕಸೂತಿ ಹಾಕುವವರ ಜತೆ ನಾನು ಕೆಲ ಹೊತ್ತು ಮಾತನಾಡಿದ್ದೇನೆ.
ನನ್ನ ಪ್ರಕಾರ ಇಲ್ಲಿ ಆಗಬೇಕಾಗಿರುವುದು awareness. ಸಾಮಾನ್ಯ ಜನತೆಗೆ ಇವರ ಬಗ್ಗೆ ತಿಳುವಳಿಕೆ. ಅವರ ಜತೆ ಬೆರೆದರೆ ಯಾವುದೇ ಕಾಯಿಲೆ ಬರಲ್ಲ. ಅವರು ಹಾಗಾಗಿದ್ದು ಅವರ ತಪ್ಪಲ್ಲ. ಮೊದಲಿಗೆ ಕುಟುಂಬದಿಂದ ಅವರಿಗೆ support ಸಿಗಬೇಕು. ಹಾಗಿದ್ದಲ್ಲ್ಲಿ ಅವರಿಗೂ ಸ್ವಲ್ಪ ನೆಮ್ಮದಿ. ಕುಟುಂಬದವರಿಗೆ ಸಮಾಜ ಏನೆನ್ನುತ್ತೇ ಅನ್ನುವ ಭೀತಿಯಿಂದ ಹಾಗೆ ವರ್ತಿಸುತ್ತಾರೆ. ಅವರಿಗೇನು  ಮನೆಗೆ ಕರೆದು ಮಣೆ ಹಾಕಿ ರಾಜೋಪಚಾರ ಮಾಡಬೇಕಾಗಿಲ್ಲ, ಅವರು ನಮ್ಮ ಹಾಗೆ ಅಂದು ಅವರ ಬಗ್ಗೆ ಸ್ವ್ಲಲ್ಪ ಕಾಳಜಿ ತೋರಿಸಬಹುದಲ್ಲವಾ?
ಇವರನ್ನು  ಹಿಜಡಾ, ಖೋಜಾ, ಛಕ್ಕಾ, ಸಿಕ್ಸರ್, ಕೆಲವರು ದೇವದಾಸಿ/ಜೋಗಪ್ಪ, ಕೊತಿ,ತಮಿಳ್ ನಾಡಿನಲ್ಲಿ ಅರವಣಿ, ಆಂಗ್ಲದಲ್ಲಿ hermaphrodites, Eunuchs, bisexual, transsexuals,transgenders, transvestite,doubledecker, crossdressers ಅಂತೆಲ್ಲ ಕರೆಯಲ್ಪಡುತ್ತಾರೆ. ಆದರೆ ಎಲ್ಲ ಪದಗಳು ಬೇರೆ ಬೇರೆ ಅರ್ಥ ಕೊಡುತ್ತವೆ. ಇಂಟರ್ ನೆಟ್ ನಲ್ಲಿ ಈ ಪದಗಳನ್ನು ಹುಡುಕಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಕೆಳಗಿವೆ  ಕಮ್ಮಟದ ಚಿತ್ರಗಳು:
ಕಾರ್ಯಕ್ರಮ ಪ್ರಾರಂಭವಾಗುವ ಮುನ್ನ
ಮುಖ್ಯ ಅತಿಥಿಗಳ ಆಗಮನದ ಕ್ಷಣ
ಐಡಿಎಫ್ ನ ಮ್ಯಾನೆಜಿಂಗ್ ಟ್ರಸ್ಟಿ ಶ್ರೀ ವಿ ಎನ್ ಸಾಲಿಮಠ, ಮಂಜುಳಾ ಸಿ.- ಅಧ್ಯಕ್ಷರು, ಮಹಿಳಾ ಮತ್ತು ಮಕ್ಕಳ ಆಯೋಗ, ಶ್ರೀಮತಿ ಜಯಂತಿ ಖ್ಯಾತ ಸಿನಿಮಾ ತಾರೆ ಹಾಗೂ ಸಾಮಾಜಿಕ ಕಾರ್ಯಕರ್ತೆ,  hon. chief justice of Karnataka high court ಶ್ರೀಮತಿ ಮಂಜುಳಾ ಚೆಲ್ಲೂರ
ಅಕ್ಕಯ್ಯ /akai- ಸಂಗಮ ಸಂಸ್ಥೆಯ spokesperson

ಎ. ರೇವತಿ  - ಅಂತರ್ ರಾಷ್ಟೀಯ ಖ್ಯಾತಿಯ ಪುಸ್ತಕ ಬರೆದವರು. A. Revathi is a writer, actor and activist based in Bangalore. She works with Sangama, a sexuality minorities human rights organization for individuals oppressed due to their sexual preference. She is the author of Unarvum Uruvamum (Feelings of the Entire Body); and her autobiography, The Truth about Me, is the first of its kind in English from a member of the hijra community. ಈ ಪುಸ್ತಕದ ಪ್ರಕಾಶಕರು penguin India
radioActiv ನಲ್ಲಿ RJ ಯಾಗಿ ಕೆಲಸ ನಿರ್ವಹಿಸುತ್ತಿರುವ ಪ್ರಿಯಾಂಕ. ಅವರು male to female transgender. ಅವರ ಬಲಕ್ಕೆ ಇರುವವರು ಚಾರ್ಲೀ( female to male transgender) documentaries ಮಾಡುತ್ತಾರೆ.
ಗ್ರಾಮ್ಯಾದ ಉತ್ಪನ್ನಗಳನ್ನು ವೀಕ್ಷಿಸುತ್ತಿರುವ ಗಣ್ಯರು
ನನ್ನ ಮೆಚ್ಚಿನ ತಾರೆಯೊಂದಿಗೆ (ಅವರ ಗುಳಿ ಬೀಳುವ ಕೆನ್ನೆಯ ಸಲುವಾಗಿ ನಾನು ಅವರ ಎರಡು ಮೂರು ಸಿನಿಮಾ ನೋಡಿದ್ದೇನೆ ಅಷ್ಟೆ.) ನಾನು ಮತ್ತು ಐಡಿಎಫ್ ಬಳಗ. ಅವರು ಈ ಕಾರ್ಯಕ್ರಮ ಕ್ಕೆ ಬಂದು  ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ  ಮನಸ್ಸಿಗೆ ತಟ್ಟುವಂತೆ ಮಾತನಾಡಿದರು. ನನಗೆ ಈಗ ಅವರ ಬಗ್ಗೆ ಇನ್ನೂ ಹೆಚ್ಚು respect. ಗುಂಪಿನಲ್ಲಿರುವ ಹಲವಾರು ಜನರ ಪರಿಚಯ ಇವರಿಗಿದ್ದು, ಅವರಲ್ಲಿ ಒಬ್ಬರು ತುಂಬ ರುಚಿಯಾದ ಬಿರಿಯಾನಿ ಮಾಡುತ್ತಾರೆಂದು, ತಮಿಳುನಾಡಿನಲ್ಲಿ ಸಿನಿಮಾ ಶೂಟಿಂಗ್ ಇದ್ದಾಗ ದಿನಾ ಅವರಿಗೋಸ್ಕರ ಬಿರಿಯಾನಿ ಮಾಡಿ ತರುತ್ತಿದ್ದರೆಂದು  ಪರಿಚಯಿಸಿದರು.
team IDF
ನವಜೀವನ ಕಾರ್ಯಕ್ರಮದ ನಿಜವಾದ force - ಗೋವಿಂದರಾಜನ್, ದೇಶಪಾಂಡೆ ಮತ್ತು ಸುಕನ್ಯ, ಕವಿತಾ,ಅರ್ಚನಾ, ಸುಜೀಂದ್ರ
Hivos: ನವಜೀವನ ಪ್ರಾಜೆಕ್ಟ್  -  IDF ಗೆ ಬೆಂಬಲಿಗ ಸಂಸ್ಥೆ
Sangama- NGO
Samara - community Based Organisation
ಇದನ್ನು rough ಆಗಿ as is ಮನಸ್ಸಿನಲ್ಲಿ fresh ಇದ್ದಾಗಲೇ ಬರೆದಿದ್ದೇನೆ. ಸರಿಯಾಗಿ ಮುಂದೆ ಬರೆಯುತ್ತೇನೆ.
* ಜಯಂತಿಯವರಿಗೆ ’ನಾನು ನಿಮ್ಮನ್ನು, ನಿಮ್ಮ ನಗು  ನೋಡಲು ಮಾತ್ರ ಸಿನಿಮಾ ನೋಡಿದ್ದೇನೆ, ಕತೆಯೆಲ್ಲ ಕೇಳಬೇಡಿ ಅಂತ ಹೇಳಿದಾಗ ಚಂದವಾಗಿ ನಕ್ಕು ನನಗೆ ಒಂದು huggy huggy ಕೊಟ್ಟರು. :-)))))))))))


11 comments:

Swarna said...

ತುಂಬಾ ಚೆನ್ನಾಗಿ ಬರೆದಿದ್ದೀರಿ ಮೇಡಂ.
ಜಯನ್ಥಿಯವರೊಂದಿಗಿನ ಫೋಟೋ ಬಹುಶಃ ಎಫ್ಬಿಯಲ್ಲಿ ಹಾಕಿದ್ದೀರಿ ಅನ್ಸತ್ತೆ.
ಚೆನ್ನಾಗಿವೆ ಫೋಟೋ ಮತ್ತು ನಿಮ್ಮ ಬರಹ.

ಸಮಾಜ(ನಾವು) ಅವರನ್ನ ಒಪ್ಪಿಕೊಳ್ಳೋ ತನಕ ಅವರ ಬವಣೆ ತೀರಲ್ಲ.
ಆ ದಿನ ಬೇಗ ಬರಲಿ

Shree Kar said...

The work done by your NGO in this regard is highly commendable.

Appreciate your efforts at bringing them into the mainstream and thereby enabling them to contribute something to the society.

Many members of this community had once enjoyed immense power during the moghul raj. See:

http://en.wikipedia....

Uma Bhat said...

ಮನಸ್ಸನ್ನ ಮುಟ್ಟಿದ ಲೇಖನ.

Anonymous said...

Avaradallada tappige avaru suffer maadthare.. kettadu annisiddu.. inthavarige "elli.. "adu" torisu.. ninge duddu kodtheeni" anthella peedistarante..

Nimma samstheya efforts nijakkoo commendable.


Heegeye bareyuttiri Malathi.

JK

nenapina sanchy inda said...

Swarna, Shree Kar, Uma and JK if we all put some efforts we can help in their betterment.
thank you very much
malathi S

neelesh said...

first of all nivu kooda prarambhadalli hijada yendu sambhodisidira avarannu mangalamukhiyaru yennutharallave.nanna manasinnalli ee lekhana oduva modalinavaregu iddaddu ivaru hedarisi specially gandasarige hedarisi hana keluvudu aadare samara samsthe chatuvatike keli khushi aayithu. motta modalaneyadagi ivarige basic needs ration card voter id ivella sigabeku haagu ivara kelasakke swayamseva samsthe gale ivarannu jothegoodisi kondu chatuvatike madidare ivarigu jeevanopayakke hana siguthe kela dinagala hinde cnnibn channel nalli obbaru mangalamukhiya interview ithu avaru 2 makkalannu adopt madikondiddare i was very nice to hear nannindaguva sahayakke nanidene.next time kannada baraha hakisuthene kshamein irali

nenapina sanchy inda said...

Dear Neelesh!
thank u for the comment.
Hijada or chakka is the word commonly used in Mumbai....mangalamukhi is a term used here in Karnataka adoo itteechige. When i referred to them as such i did not mean any disrespect. I have always been awed by them..but got to know more about them once we started interacting with them...enjoyed/cried/laughed with them!
they are human beings like us!!
ms

Sudeepa ಸುದೀಪ said...

nice toppic pachi...these people also same like us... but v dont understand that ....thats d tragedy

nenapina sanchy inda said...

Thanks Munna!!
Keep reading and commenting
love u:-)
Pachchi

Anonymous said...

naanu mangalamukhiyara bagge ondu katheyannu bareyabekendu yochisi search madide. neevu bareda avara kathe manamuttide. kathe baredu enadeetu.. avara novu janamaanasavannu talupi avara dukhkha hariyabeku.. avaru nammante baalali emba sahanubhooti ellara manadalli moodabekallave?

nenapina sanchy inda said...

Dear Anonymous Ji
We are working with them...
thanks for coming here
ms