April 1, 2012

ಉಪ್ಪಿಗೆ ಹಾಕಿಟ್ಟ ಹಲಸಿನ ತೊಳೆ / ಸೊಳೆ ಪಲ್ಯ, ರಾಮನವಮಿ

Raw jackfruit in Brine.
ಬಲಿತ ಹಲಸಿನಕಾಯಿಯನ್ನು ಬಿಡಿಸಿ, ಅದರ ತೊಳೆಗಳಿಂದ ಬೀಜ ಬೇರ್ಪಡಿಸಿ ತೊಳೆಗಳನ್ನು ಉಪ್ಪಿಗೆ ಹಾಕಿಡುವದರಿಂದ ಅದು ಸುಮಾರು 5-6 ವರ್ಷ ಕೆಡದೆ ಇರಿಸಬಹುದು. ಅದರಿಂದ ಪಲ್ಯ, ದೋಸೆ, ಆಂಬೋಡೆ ಮುಂತಾದವುಗಳನ್ನು ಮಾಡಬಹುದು. ಇವೆಲ್ಲ ಮಳೆಗಾಲದ ವಿಶೇಷ ತಿನಿಸಿಗಳು. ಗಂಜಿ ಜತೆಗೆ sooper!!
ಉಪ್ಪಿನಲಿ ಹಾಕಿಡುವ ವಿಧಾನ:
ಮೊದಲಿಗೆ ಒಂದು layer (ಲೇಯರ್) ಹರಳುಪ್ಪು, ಅದರ ಮೇಲೆ ಬಿಡಿಸಿದ ತೊಳೆ..ಪುನ: ಅದರ ಮೇಲೆ ಹರಳುಪ್ಪು. ಕೊನೆಯಲ್ಲಿ ಎರಡು ಮೂರು ಲೇಯರ್ ಹರಳುಪ್ಪು ಹಾಕಿ, ಕೈ ನಿಂದ ಸ್ವಲ್ಪ ಒತ್ತಿ ಗಾಳಿ ಸೋಕದಂತೆ ಬರಣಿ ಅಥವಾ ಗಾಜಿನ ಬಾಟಲಿಯಲ್ಲಿ ಹಾಕಿಡಿ. ಕೆಲ ದಿನಗಳ ನಂತರ ಉಪ್ಪೆಲ್ಲ ಕರಗಿ ನೀರಾಗುತ್ತದೆ. Salt is the best preservative.



ಹಲಸಿನ ಕಾಯಿ ತಂದ ದಿನ ನಮ್ಮ ಅಡಿಗೆ ಮನೆ ಹೀಗೆ. ಪಾತ್ರೆ ಯಲ್ಲಿರುವುದು ಇಡೀ ತೊಳೆ. ಆಮೇಲೆ ಅದರಿಂದ ಬೀಜ ಹಾಗೂ  fibre ಬೇರ್ಪಡಿಸಬೇಕು. ಅಂದಹಾಗೆ ಬೀಜಗಳನ್ನೂ ನಾವು ಅಡಿಗೆಯಲ್ಲಿ ಬಳಸುತ್ತೇವೆ..especially with tender bamboo shoots (:-) ಏನೆಲ್ಲ ತಿನ್ತಾರಪ್ಪ ಕೊಂಕಣಿಗಳು ಅಂದುಕೊಳ್ಳತಾ ಇದ್ದೀರಾ???)

ಪಲ್ಯ ಮಾಡುವ ದಿನ ಕೆಲವು ತೊಳೆಗಳನ್ನು ಸ್ವಚ್ಛವಾದ ನೀರಿನಲ್ಲಿ ಹಾಕಿಡಿ. ಇದರಿಂದ ತೊಳೆಗಳಲ್ಲಿ ಇದ್ದಂತಹ ಹೆಚ್ಚಿನ ಉಪ್ಪಿನಂಶ ತೆಗೆದ ಹಾಗಾಗುತ್ತದೆ.
ಉಪ್ಪು ನೀರಿನಿಂದ ತೆಗೆದಿಟ್ಟ ತೊಳೆಗಳು

ಆ ಮೇಲೆ ಹೀಗೆ ಚಿಕ್ಕ ಚಿಕ್ಕದಾಗಿ ಕತ್ತರಿಸಿ ಪುನಃ ನೀರಿನಲ್ಲಿ ಹಾಕಿಡಿ.ನಾನು ಮೂರು ನಾಲ್ಕು ಗಂಟೆ ನೀರಿನಲ್ಲಿ ಹಾಕಿಡುತ್ತೇನೆ.

ಒಗ್ಗರಣೆಗೆ : ಎಣ್ಣೆ, ಸಾಸಿವೆ, ಹಿಂಗು ನೀರು, ಕೆಂಪು ಒಣ ಮೆಣಸಿನಕಾಯಿ...ಉಪ್ಪು ಹಾಕಬೇಡಿ.ಒಗ್ಗರಣೆ ರೆಡಿಯಾದ ಮೇಲೆ ನೀರಿನಲ್ಲಿ ಹಾಕಿಟ್ಟ ಕತ್ತರಿಸಿದ ತೊಳೆಗಳನ್ನು ಗಟ್ಟಿಯಾಗಿ ಹಿಂಡಿ ಒಗ್ಗರಣೆಯಲ್ಲಿ ಹಾಕಿ.  ಸ್ವಲ್ಪ ನೀರು ಹಾಕಿ ಬೇಯಿಸಿ. ಕೊನೆಯಲ್ಲಿ ಬೇಕಿದ್ದಲ್ಲಿ ಕಾಯಿ ತುರಿ ಬೆರೆಸಬಹುದು. ಕೊಂಕಣಿಗಳ fav dish. ದಾಳಿತೊವ್ವೆ ಜತೆ terrific ಕೊಂಬಿನೇಶನ್ ಮಾಲವಿಕ ಳ ಪ್ರಕಾರ.

ಪಲ್ಯ ಇನ್ನೊಂದು ರೀತಿ:
ಎಣ್ಣೆ, ನಾಲ್ಕೈದು ಜಜ್ಜಿದ ಬೆಳ್ಳುಳ್ಳಿ ಎಸಳು, ಕೆಂಪು ಮೆಣಸಿನಕಾಯಿ..ಉಳಿದ method ಮೇಲಿನ ಹಾಗೆ. ಕಾಯಿ ಹಾಕಬೇಕಾಗಿಲ್ಲ. ಹೊರಗೆ ಧೋ ಅಂತ ಮಳೆ ಸುರೀತಿದ್ರೆ, ಕೆಂಪಕ್ಕಿ (ಕುಚ್ಚಲಕ್ಕಿ) ಅನ್ನದ ಗಂಜಿ + ತುಪ್ಪ + ಹಲಸಿನ ತೊಳೆ ಪಲ್ಯ...ಯಾರಿಗುಂಟು ಯಾರಿಗಿಲ್ಲ??

ಅಂದ ಹಾಗೆ ಪಲ್ಯದ ಚಿತ್ರ ಎಲ್ಲಿ ಅಂದ್ರಾ?? ಅದು ತಿಂದು ಖಾಲಿಯಾದ ಮೇಲೆ ಫೋಟೊ ತೆಗಿಲಿಲ್ಲ ಅಂತ ನೆನಪಾಯ್ತು. ಇಲ್ಲಿ ಹಾಕಿದ ಚಿತ್ರ ನನ್ನಲ್ಲಿದ್ದ ಕೊನೆಯ stock!! ನಾವು ಈ ಪಲ್ಯ ಮಾಲವಿಕ/ನಿಹಾ ಗೆ ತಿನ್ನುವ ಮೂಡ್ ಬಂದಾಗಲೆಲ್ಲ ಮಾಡುತ್ತಿರುತ್ತೇವೆ...ಮಳೆಗಾಲಕ್ಕೆ ಕಾಯಲ್ಲ...ಮುಂದಿನ ಸಲ ನೆನಪಿನಿಂದ ಫೋಟೊ ಹಾಕುತ್ತೇನೆ.
(this photo added here on August 09, 2012) :-)


ಇಲ್ಲಿದೆ ಉಪ್ಪಿಗೆ ಹಾಕಿಟ್ಟ ಮಾವಿನಕಾಯಿ..ಇದರ recipe ಮುಂದಿನ ಸಲ .ಈ ಗಾಜಿನ ಭರಣಿಯಲ್ಲಿ ಮೊದಲಿದ್ದುದ್ದು ಹಲಸಿನ ತೊಳೆಗಳು. ಅದಕ್ಕೆ ಈ ಚಿತ್ರ ಹಾಕಿದ್ದೇನೆ

ಈಗ ಸ್ವಲ್ಪ ಸೀರಿಯಸ್ ವಿಷಯಕ್ಕೆ ತೆರಳುವಾ?? ನಮ್ಮ ಹಲಸಿನ ಪ್ರೀತಿ ಅದನ್ನು ಮಾಡಿ ತಿನ್ನುವದಕ್ಕಷ್ಟೆ ಸೀಮಿತ. ಆದರೆ ನಮ್ಮ ಆಪ್ತ ಮಿತ್ರ ’ ಶ್ರೀ ಪಡ್ರೆ”ಯವರು ಹಲಸಿನ ಬಗ್ಗೆ ವಿಶೇಷವಾದ ಪ್ರೀತಿ ಮತ್ತು ಕಾಳಜಿ ಹೊಂದಿದ್ದಾರೆ. ದೇಶ ವಿದೇಶದಲ್ಲೆಲ್ಲ ಸಂಚರಿಸಿ , ಹಲಸು, ಅದರ ವಿವಿಧ ತಳಿಗಳು, ಅದರ propagation, ಸಂಸ್ಕರಣೆ, ಮೌಲ್ಯವರ್ಧನೆ, ಅದನ್ನು ಅಡುಗೆಯಲ್ಲಿ ಬಳಸುವ ರೀತಿ ಎಲ್ಲವನ್ನೂ war footing ನಲ್ಲಿ ನಿರ್ವಹಿಸುತ್ತಾ...ಕಲೆ ಹಾಕಿರುವ ಮಾಹಿತಿಯನ್ನು ಅಡಿಕೆ ಪತ್ರಿಕೆ ಮತ್ತು civil Society magazine ಮುಖಾಂತರ ಜನಸಾಮಾನ್ಯರಿಗೂ ಒದಗಿಸುತ್ತಿದ್ದಾರೆ. ರೈತರಿಗೆ ಜೀವನಾಧಾರ. ಭಾರತದಲ್ಲಿರುವ ಹಸಿವೆಯ - ಪೌಸ್ಟಿಕಾಂಶದ(hunger/malnutrition)ಕೊರತೆಯನ್ನು ಹಲಸು ನೀಗಿಸಬಹುದೇ? ಇದರ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿಯ ಕೊರತೆಯಿದೆ. ಭಾರತದಲ್ಲಿ ಸುಲಭವಾಗಿ ಬೆಳೆಸಬಹುದಾದ ಒಂದು crop ಇದು. ತರಕಾರಿ ಹಾಗೂ ಹಣ್ಣುಗಳ ರೂಪದಲ್ಲಿ ಇದರ ಸೇವನೆ.  carbohydrate, ಪ್ರೋಟೀನ್, ಪೊಟ್ಯಾಶಿಯಮ್ ಮತ್ತು ವಿಟಾಮಿನ್ ಹೆಚ್ಚಿನ ಪ್ರಮಾಣದಲ್ಲಿ ಹಲಸಲ್ಲಿ ಸಿಗುತ್ತದೆ. Nutritional facts in Jackfruit ಅಂತ ಗೂಗಲಿಸಿದರೆ ಹಲವಾರು ಜಾಲತಾಣಗಳು ತೆರೆದುಕೊಳ್ಳುತ್ತವೆ.

ಕಳೆದ ಮೂರು ನಾಲ್ಕು ವರ್ಷ ರಾಜ್ಯದ ನಾನಾ ಭಾಗಗಳಲ್ಲಿ ಹಲಸು ಮೇಳ ನಡೆಯುತ್ತಿವೆ.

ಈಗಂತು RTC ,ರೆಡಿ ಟು ಈsಟ ಹಲಸಿನ ಖಾದ್ಯಗಳೂ ಮಾರುಕಟ್ಟೆಯಲ್ಲಿ ದಾಳಿ ಯಿಟ್ಟಿವೆ . (ಆರ್ ಟಿ ಸಿ (RTC) = Ready to Cook)

ಶ್ರೀಕಾಂತ ಹಿಂದಿನ ತಿಂಗಳು ಕುವಾಲಾಲಂಪುರ್- ಇಂಡೋನೇಶಿಯ- ಬಾಂಡುಂಗ್ ಗೆ ಹೋಗಿದ್ದರು.ಅವರು ಹೊರಡುವ ಹಿಂದಿನ ದಿನ ನನಗೆ ಶ್ರೀ ಪಡ್ರೆಯವರು skype ನಲ್ಲಿ ಚ್ಯಾಟ್ ಗೆ ಸಿಕ್ಕಿದ್ದರು.ಶ್ರೀಕಾಂತ ರಾಯರು ಪರ ಊರಿಗೆ ಹೊರಟಿದ್ದರಿಂದ ಬಿಸಿ ಅಂದಾಕ್ಷಣ..ಯಾವ ಊರು, ಏನು ಕತೆ ಎಲ್ಲ ತಿಳಿದುಕೊಂಡು ಹತ್ತೆ ನಿಮಿಷದಲ್ಲಿ  e-ಮೈಲ್ ಗಳ ಸರಮಾಲೆ. ಅದರಲ್ಲಿ ಇಂಡೋನೇಶಿಯದಲ್ಲಿ ಅವರಿಗೆ ಪರಿಚಯ ಆಗಿದ್ದವರ ಹೆಸರು, ವಿಳಾಸ ಹಾಗೂ ಫೋನ್ ನಂ ಮತ್ತು ಹಲಸಿನ ಬಗ್ಗೆ ಹೊಸ ಮಾಹಿತಿ ಏನಾದರೂ ಸಿಗಬಹುದೇ...ಸಿಕ್ಕಿದ್ದರೆ ಫೋಟೊ ಸಮೇತ ಅದರ ಬಗ್ಗೆ ವರದಿ ಕೊಡಬಹುದೆ..ಮುಂತಾದವು..
ಬಾಂಡುಂಗ್ ನಲ್ಲಿ ಶ್ರೀಕಾಂತ ಮತ್ತು ಟೀಮ್ ತಂಗಿದ್ದ ಹೋಟಲ್ ನಲ್ಲಿ ಹಲಸಿನ ಹಣ್ಣಿನ ಕ್ರೊಯ್ಸೋ (croissant) ತಿನ್ನಲ್ಲಿಕ್ಕೆ ಸಿಕ್ಕಿದು ವಿಶೇಷ...

ಕುವಾಲಾಲಂಪುರ್ ನಿಂದ ತಂದ ಒಂದು ವಿಶೇಷ ತಳಿಯ ಹಲಸಿನ (ತುಳುವೆ) ಬೀಜಗಳಿಗೆ ಮೊಳಕೆ ಬಂದಿದೆ.ಕೇಸರಿ ಮತ್ತು ತೆಳು ಹಳದಿ ಬಣ್ಣದ ತೊಳೆ, ಉರುಟಾದ ಬೀಜ. ಮೂರು ದಿನ suitcase ನಲ್ಲಿದ್ದಿದ್ದಕೋ ಏನೋ ಅದರ ರುಚಿ ಸರಿಯಾಗಿ ಗೊತ್ತಾಗಲಿಲ್ಲ. :-) ಮುಂದಿನ ವಾರ ಅದನ್ನು ತೀರ್ಥಹಳ್ಳಿಯ ತೋಟದಲ್ಲಿ ನೆಡಬೇಕಾಗಿದೆ.




ಇವತ್ತು ರಾಮನವಮಿ. ಇದು ತೀರ್ಥಹಳ್ಳಿಯ ಕೋದಂಡರಾಮ ದೇವುಳ. ಚಿತ್ರದಲ್ಲಿರುವವರು ಶ್ರೀ ನಾಗೇಶ ಭಟ್ಟ ಮಾಮ. ಒಳ್ಳೆ ಫೋಟೊಗ್ರಾಫರ್, ಚಿತ್ರಕಾರರು, ಪ್ರಗತೀಪರ ಕೃಷಿಕರು ಮತ್ತೀಗ ಅವರು ಔಷಧೀಯ ಸಸ್ಯಗಳನ್ನು ಬೆಳೆಸುತ್ತಿದ್ದಾರೆ

ಈ ದಿನ ಅಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಮುಂಚೆ ನಮ್ಮ ಅಂಗಡಿಯಲ್ಲಿ ರಾಮನವಮಿ ದಿನ ದೊಡ್ಡ ದೊಡ್ಡ ಪಾತ್ರೆಯಲ್ಲಿ ಪಾನಕ ಕೋಸಂಬರಿ ಮಾಡಿಟ್ಟು ಅದನ್ನು ಅಂಗಡಿಯಲ್ಲಿ ಇಡುತ್ತಿದ್ದರಂತೆ, ಅಂಗಡಿಗೆ ಬಂದವರಿಗೆಲ್ಲ ಪ್ರಸಾದದ ರೂಪದಲ್ಲಿ ಇವನ್ನು ವಿತರಿಸಲಾಗುತ್ತಿತ್ತು.  ನಾನು ಮದುವೆಯಾಗಿ ಅಲ್ಲಿಗೆ ಹೋದಾಗ ಕೇವಲ ಪಾನಕ ಮಾತ್ರ ಮಾಡಿಡುತ್ತಿದ್ದರು. ಏಕಾದಶಿಯ ದಿನ ಒಮ್ಮೆ ನನ್ನ ಅಕ್ಕ ನನ್ನನ್ನು ಸಂಜೆಯ ಫಲಾಹಾರಕ್ಕೆ ಶ್ರೀ ಕೋದಂಡರಾಮ ದೇವಸ್ಥಾನಕ್ಕೆ ಕರೆದೊಯ್ದಿದ್ದರು, ಅಲ್ಲಿ ಬಡಿಸಿದ ಕಲಿಸಿದ ಅವಲಕ್ಕಿ, ಚಣಾ ಉಸ್ಲಿ ಮತ್ತು ಪಾನಕದ ರುಚಿ ಇನ್ನೂ ಮರೆಯಲಾಗಿಲ್ಲ.


ಎಲ್ಲರಿಗೂ ರಾಮನವಮಿಯ ಶುಭಾಶಯಗಳು. ಎಲ್ಲರೂ ಕೋಸಂಬರಿ ಪಾನಕದ ಜತೆ sunday enjoy ಮಾಡಿ. ನಮ್ಮ ಮನೆಯಲ್ಲಿ ಶ್ರೀಕಾಂತ ಆಫಿಸ್ ಕೆಲಸ ಮೇಲೆ ಹಳ್ಳಿಗೆ, ಮಾಲವಿಕ ಕೆಲಸಕ್ಕೆ ...so ನಮ್ಮ ಮನೆಯಲ್ಲಿ ಮಾವಿನಕಾಯಿ ಕೋಸಂಬರಿ, ಪಾನಕ ಸಮಾರಾಧನೆ ರಾತ್ರಿ ಅವರಿಬ್ಬರೂ ಬಂದ ಮೇಲೆ. ಅಡಿಗೆ ಮನೆಯ ಪಕ್ಕದಲ್ಲಿರುವ ರಾಮ ಮಂದಿರದಿಂದ ಅಗರ ಬತ್ತಿ, ಹೋಮ ಹವನದ ಪರಿಮಳ, ಗಳಿಗೆಗೊಂದಾವರ್ತಿ ಗಂಟೆಯ ನಾದ, ಸಣ್ಣಕ್ಕೆ ಹಾಕಿದ ಪ್ರವೀಣ ಗೋಡಖಿಂಡಿ ಅವರ ಕೊಳಲ  ಸಂಗೀತ..ಅಲ್ಲಿ ಹೋದರೂ  ಕೋಸಂಬರಿ ಸಿಕ್ಕೇ ಸಿಕ್ಕುತ್ತೆ....

Photo of panaka + kosambri and Jackfruit saplings by niha
:-)

11 comments:

Anomalyka said...

Ramanavami special blog from the queen of Kannada blogs!

You did not disappoint!

>>> "ಅಂದ ಹಾಗೆ ಪಲ್ಯದ ಚಿತ್ರ ಎಲ್ಲಿ ಅಂದ್ರಾ?? ಅದು ತಿಂದು ಖಾಲಿಯಾದ ಮೇಲೆ ಫೋಟೊ ತೆಗಿಲಿಲ್ಲ ಅಂತ ನೆನಪಾಯ್ತು..." :-)

nenapina sanchy inda said...

Dear Shree Kar maam!!
queen of kannada blogs indeed!! thank you this comment made me, sri and Niha laugh out loud...have yet to share with akka....
:-)
ms

Badarinath Palavalli said...

ಮಾಲತಿಯವರೇ,

ನಿಜವಾಗಲೂ ನೀವು ಬ್ಲಾಗುಗಳ ರಾಣಿಯೇ...

ರಾಮನವಮಿ ವಿಶೇಷ ಲೇಖನ ಮನಗೆದ್ದಿತು. ಒಳ್ಳೆಯ ಚಿತ್ರಗಳ ಸಮೇತ.

ನನ್ನ ಬ್ಲಾಗಿಗೂ ಸ್ವಾಗತ.

nenapina sanchy inda said...

Badari Bhaiyya!!
thanks...ಸುಮ್ನೆ ತೋಚಿದ್ದನ್ನ ಗೀಚತೀನಿ ಅಷ್ಟೆ..ಬ್ಲಾಗಗಳ ರಾಣಿ ಗೀಣಿ ಅಂದ್ರೆ ಮುಜುಗರ ಆಗುತ್ತಪ್ಪ...
ನಿಮ್ಮ ಕವನ ಸಖತ್ ಇಷ್ಟ ಆಯ್ತು. FB ನಲ್ಲಿ ಓದಿದೆ. ನಿಮ್ಮ ಬ್ಲಾಗ್ open ಆಗಲಿಲ್ಲ...ಅದಕ್ಕೆ comment kooDa FB ನಲ್ಲೇ...
:-)
ಮಾಲತಿ ಎಸ್.

N said...

ಪಾಕ ಪ್ರವೀಣರು ನೀವು ಮೇಡಂ :))

Anitha Naresh Manchi said...

ಸುಂದರ ಲೇಖನ . ನಾನೀಗ ಭರಣಿ ಗಟ್ಟಲೆ ಮಾವಿನ ಕಾಯಿಗಳನ್ನು ಉಪ್ಪಲ್ಲಿ ಅದ್ದಿಟ್ಟಿದ್ದೇನೆ.. ಎಳೆ ಹಲಸಿಕಾಯಿ ಉಪ್ಪಿನಕಾಯಿ ಸಿದ್ಧವಾಗಿದೆ.ಕಳೆದ ವರ್ಷದ ಬೆಳೆದ ಹಲಸಿನಕಾಯಿಯ ಉಪ್ಪಲ್ಲಿ ಹಾಕಿಟ್ಟ ಸೊಳೆಗಳು ಉಂಡ್ಲ ಕಾಲು, ಪಲ್ಯಗಳಾಗಿ ಮಾರ್ಪಡುತ್ತಾ ಭರಣಿ ಕಾಲಿಯಾಗಿ ಈ ವರ್ಷದ ಹೊಸತನ್ನು ತುಂಬಿಕೊಳ್ಳುವ ತಯಾರಿಯಲ್ಲಿದೆ. ನಿಮ್ಮ ಲೇಖನ ಇಷ್ಟ ಆಯ್ತು .

nenapina sanchy inda said...

thank you Nataraju and Anitha
:-)
malathi S

ಮನಸು said...

ಓಹ್ ಅಕ್ಕ.. ಹಲಸಿನ ಹಣ್ಣು ನನ್ನ ಫೇವರೆಟ್ ಹೀಗೆಲ್ಲಾ ಮಾಡಬಹುದಾ ಅಂತಾ ಗೊತ್ತಿರಲಿಲ್ಲ..ಎಳೆ ಹಲಸಿನಾಕಾಯಲ್ಲಿ ಸಾರು ಮಾಡುತ್ತೇವೆ ... ಥಾಂಕ್ಯೂ ಸೋ ಮಚ್

ಜಲನಯನ said...

ಸಮಯಕ್ಕೆ ತಕ್ಕ ಲೇಖನ ಹಾಕ್ತೀರ,.,,,ನಾವೂ ಇದ್ದೀವಿ..ದಂಡಕ್ಕೆ.... ಹಹಹ ಚನ್ನಾಗಿದೆ ಮಾಲ್ತಕ್ಕಾ...

nenapina sanchy inda said...

Suguna: nimma recipe Sunday try maaDteeni...sri has got avarekaaLu

@ Dr Azad: enree nim taraha creativity illappa namage...
:-)
malathi S

ವಿಕ್ರಮ ಹತ್ವಾರ said...

chennaagide nimma blog :)....and I have a special attachemnet with Teerthahalli..