March 17, 2012

ನ್ಯಾನಿ- ಒಂದು ನ್ಯಾನೋ ಪ್ರಸಂಗ

(for new readers of this blog...Dishanth is the four year old grandson of our house owner)


ಆಫಿಸ್ ಕೆಲಸದ ಮೇಲೆ ದಿನವಿಡೀ ಕನಕಪುರದಲ್ಲಿದ್ವಿ. ಸಂಜೆ ಮನೆಗೆ ಬಂದಾಗ ಪುಟ್ಟು ಮೆಟ್ಟಿಲ ಬಳಿ ಕಾಯ್ತಾ ಇದ್ದ. "ಎಲ್ಲಿಗೆ ಹೋಗಿದ್ರಿ ಆಂಟಿ...ನನಗೆ ಹೇಳ್ಲೆ ಇಲ್ಲ ಅಂದ. ನನ್ನ ಜತೆ ಮನೆ ಒಳಗೆ ಬಂದು...ನಾನು ನನ್ನ ಬಾಕಿ ಉಳಿದ ಮನೆಕೆಲಸಗಳನ್ನೆಲ್ಲ ಬಿಟ್ಟು ಅವನ ಜತೆ ಆಟ ಆಡಿದೆ. 
ಇವತ್ತು ನಾನು ಪುಟ್ಟು bowling ಆಟ. ಚಿಕ್ಕ ಚಿಕ್ಕ ಬೌಲಿಂಗ್ ಪಿನ್ಸ್ ಮತ್ತು ಒಂದು ಪುಟ್ಟ ಗೋಲಿ.
ಆಡ್ತಾ ನಮ್ಮ ಮಾತು ಸಾಗ್ತಾ ಇತ್ತು
ನಾನು ಮನೆಯಿಂದ ಹೊರಗಡೆ ಹೋಗದೇನೆ ನನಗೆ ಎಲ್ಲರ ಬಗ್ಗೆ ಗೊತ್ತು ..ಒಂದು ಥ್ಯಾಂಕ್ಸ್ to my sandwich(ed) home..
ಉಳಿದ ವಿಷಯಗಳಿಗೆ ನನ್ನ ಪುಟ್ಟು ನೆ ಮೆಸೆಂಜರ್...ಇಲ್ಲಿ ಅಕ್ಕ ಪಕ್ಕದವರ ಬಗ್ಗೆ ಮಾತ್ರ ಅಲ್ಲ, ಅವನ ಕುಟುಂಬದ ಹಲವಾರು ಸದಸ್ಯರ ಪರಿಚಯ ಕೂಡ ಆಗಿದೆ without ever having met them!!
"ಪುಟ್ಟು, ಚಕಿತ್ ತಮ್ಮನಿಗೆ ಏನು ಹೆಸರಿಟ್ಟಿದ್ದಾರೆ?? (ಚಕಿತ್, ಹಾವೆರಿ ಯಲ್ಲಿರುವ ಅವನ ಮಾಮನ ಮಗ..ದಿಶಾಂತ್ ಗಿಂತ ಒಂದು ದಿನ ದೊಡ್ಡವನು...ಇದೂ ಅವನೇ ಹೇಳಿ ನನಗೆ ಗೊತ್ತಾಗಿದ್ದು)
"ಆಂಟಿ, ಅವನಿಗೆ ನ್ಯಾನಿ ಅಂತ ಹೆಸರು ಇಟ್ಟಿದ್ದಾರೆ"
"ನ್ಯಾನಿ ನಾ...ಹೋಗೋ....ಹುಡುಗರಿಗೆ ಆ ಥರ ಹೆಸರು ಇಡ್ತಾರಾ?"
"ಹೂಂ ಆಂಟಿ..ನ್ಯಾನಿ ನೇ"
:ಹೋ ನಾಣಿ ನಾ, ನಾರಾಯಣ ಅಂತ ಹೆಸರು ಇಟ್ಟಿದ್ದಾರೇನೋ?"
"ಅಯ್ಯೋ ಎಷ್ಟು ಸಲ ಹೇಳಬೇಕು ಆಂಟಿ, ನ್ಯಾನಿ, ನ್ಯಾನಿ ಅಂತ ಅವನ ಹೆಸರು"
ಸ್ವಲ್ಪ ಹೊತ್ತು ನಾನು ಅವನೂ ಒಬ್ಬರ ಮುಖ ಒಬ್ಬರು ಸುಮ್ಮನೆ ಮಿಕಿ ಮಿಕಿ ನೋಡ್ತಾ ಇದ್ವಿ...
ನನಗೆ sudden ಆಗಿ strike ಆಯ್ತು, ಹೋsss  ಜ್ಞ್ಯಾನಿ (jnyaani) ನಾ?
ಹೂಂ ಆವಗ್ಲಿಂದ ಅದೇ ಹೇಳ್ತಾ ಇರೋದು ನ್ಯಾನಿ ನ್ಯಾನಿ ಅಂತ
ಅದೇನಾಗಿದೆ ಅಂದ್ರೆ ಪುಟ್ಟು ಉಚ್ಚಾರ ಸ್ಪಷ್ಟ. ಅವನಿಗೆ ಕಂಡಾಪಟ್ಟೆ  ಶೀತ ಆಗಿ,ಮೂಗೆಲ್ಲ ಕಟ್ಟಿಕೊಂಡು ಬಿಟ್ಟಿದೆ ಹಾಗಾಗಿ ಜ್ಞ್ಯಾನಿ became ನ್ಯಾನಿ....
fresh ಆಗಿದ್ದಾಗ್ಲೇ  ಈ ವಿಷಯ ಬ್ಲಾಗಿಸುವ ಅಂತ....
really bye bye!!!

-- 
:-)

7 comments:

ಮನದಾಳದಿಂದ............ said...

ಪುಟ್ಟುವಿನ ಶೀತ ಫ್ರೆಶ್ಶಾಗಿ ಇರುವಾಗ್ಲೋ ಅಥವಾ ವಿಷಯ ಫ್ರೆಶ್ಶಾಗಿ ಇರುವಾಗ್ಲೋ?????

nenapina sanchy inda said...

:-)vishaya fresh iddaaga...
hEgiddeeri Praveen?? oorigenaadroo hOgtiddeera habbakke??
akka

Swarna said...

Nice :)
Njoy play time with Puttu
Swarna

Anomalyka said...

ಚೆನ್ನಾಗಿದೆ, ಪುಟ್ಟನ ಆಂಟಿ ಸಹಿತ ಪ್ರಪಂಚ!

ಹೊಸ ಹೊಸ ಹೆಸರುಗಳ ಪರಿಚಯವೂ ಆಯಿತು - ಚಕಿತ್, ದಿಗಂತ್, ಜ್ಞಾನಿ , ಇತ್ಯಾದಿ.

Anonymous said...

"ಬೂಗು ಬದ್ದಾಗಿದ್ದ ಬಗು ಬುದ್ದಾಗಿ" ಹೇಳಿದ್ದು!

[ ಮೂಗು ಬಂದ್ ಆಗಿದ್ದ ಮಗು ಮುದ್ದಾಗಿ ಹೇಳಿದ್ದು! ]

ಅದನ್ನು ಬಾತೆ ಬಾಲತಿ ಬ್ಲಾಗಿಸಿದ್ದು!

ಚೆನ್ನಾಗಿದೆ.

jottings from life ಅಂತ ಈ emailಗೆ subject ಕೊಟ್ಟಿರುವುದು ಮೊನ್ನೆ ನಾನು explainಇಸಿದ "autobiography as a haiku"ಗೆ ಹತ್ತಿರವಾಗಿದೆ.

keep writing.

Srivathsa Joshi
Be well, Do good work & Keep in touch!

nenapina sanchy inda said...

Swarna!!
thank you...i can write loads on him!! he is cho chweet!!

@ Shree Kar:
here are some more of Dishanth's freinds(its not diganth...)Arnav, Arya, AbhishTaa, Ajitesh, iStaa, Janani...
thank you...

@ SJ
thanks for letting me copy paste ;-)
ms

Anonymous said...

Oh Malthi, nidanvagi kootu odhi i was visualising the conversation between u n putta & enjoyed a lot.

Ved