March 9, 2012

ಹಾಳು ಹರಟೆ

ಬೆಳಿಗ್ಗೆ ಕಾಲೇಜಿನಿಂದ ನಿಹಾ ಎಸ್ ಎಮ್ ಎಸ್ ಮಾಡಿದ್ದಳು, ಸಂಜೆ 5.30 ಗೆ ರವೀಂದ್ರ ಕಲಾಕ್ಷೇತ್ರಕ್ಕೆ ಬಾ, ನನ್ನ ಫ್ರೆಂಡ್ ಅಕ್ಕನ ನಾಟಕ ಇದೆ ಅಂತ..ನಾನು ಹೆಚ್ಚಿಗೆ ಏನೂ ಕೇಳದೆ ಹೂಂ ಅಂತ ಕಳಿಸಿದೆ. ಸಂಜೆ 4.50 ರ ಸುಮಾರಿಗೆ ನಿಹಾ ಹಾಗು ಅವಳ ಸ್ನೇಹಿತೆಯರಿಗೆ ಬಿಸ್ಕತ್ ಕಟ್ಟಿಕೊಂಡು ಫ್ರಿಜ್ ನ ನೀರು (ಸಿಕ್ಕಾಪಟ್ಟೆ ಸೆಕೆ.. i almost cancelled going) ಹಿಡಿದುಕೊಂಡು ಹೊರಟೆ. ಒಬ್ಬ ರಿಕ್ಷಾದವ ಬರಲ್ಲ ಅಂದ, ಇನ್ನೊಬ್ಬ ಮೀಟರ್ ಮೇಲೆ ಹತ್ತು ರೂ ಎಕ್ಸ್ಟ್ರಾ ಕೊಡಿ ಅಂದ..ಅವನಿಗೆ ಮುಂದೆ ಹೋಗುವಂತೆ ಸನ್ನೆ ಮಾಡಿ, ಗಟ್ಟಿ ಹಾಡು ಹಾಕಿಕೊಂಡ ರಿಕ್ಷಾದವನಿಗೆ ’ರವೀಂದ್ರ ಕಲಾಕ್ಷೇತ್ರಕ್ಕೆ’ ಬರ್ತೀರಾ ಅಂತ ಎರಡು ಸಲ ಕೇಳಿದ ಮೇಲೆ, ಮೂರನೆ ಸಲ ಹಾಡಿನ ವಾಲ್ಯುಮ್ ಚಿಕ್ಕದು ಮಾಡಿ, ಎಲ್ಲಿಗೆ’ ಅಂತ ಕೇಳಿದ...ಪುನ: ನಾನು ಹೋಗಬೇಕಾಗಿದ್ದ ಸ್ಥಳದ ಹೆಸರು ಹೇಳಿದೆ. ಬನ್ನಿ ಅಂದ. ರಿಕ್ಷಾ ಚಾಲು ಆದ ಮೇಲೆ ಗಾಳಿ ಬಿಸಿ ಒಂದು ತರಹ ಮನಸ್ಸು ಉಲ್ಲಸಿತವಾಯ್ತು.

ನನ್ನ ಬ್ಲಾಗ್ ನ ಕಮೆಂಟ್ ಓದಿ,  ವಸುಧೇಂದ್ರ ಅದರ ಬಗ್ಗೆ ಮಾಡಿದ ಎಸ್ ಎಮ್ ಎಸ್ ನೆನಪಿಸಿಕೊಂಡು ಖುಶಿಯಲ್ಲಿ ತೇಲ್ತಾ..ಅದರ ಒಟ್ಟಿಗೆ ಹಿನ್ನೆಲೆಯಲ್ಲಿ ’ನಿನ್ನಿಂದಲೇ ನಿನ್ನಿಂದಲೆ ಕನಸೊಂದು ಶುರುವಾಗಿದೆ’ ಕೇಳ್ತಾ...ಹೂಂ ಒಂದುತರಹ ಚೆನ್ನಾಗಿದೆ ಲಿರಿಕ್ಸ್ ...ಬಹುಶ: ಜಯಂತ ಕಾಯ್ಕಿಣಿ ಬರೆದಿರಬಹುದಾ ಅಂದುಕೊಳ್ಳುತ್ತಾ...: ನನ್ನ ಮುಖದ ಮೇಲೆ ನಗು  (ಅಥವಾ may be i was grinning like a Cheshire cat) ಇದ್ದಿರಬಹುದೆಂದು ಅನ್ನಿಸುತ್ತೆ. ರಿಕ್ಷಾದವನು ,ಮ್ಯಾಡಂ ಖುಶಿಯಾಗಿದ್ದಾರೆ’ ಅಂದಾಗ ಅವನ ಮುಖ ನೋಡಿದೆ. ಘನ್ ಗಂಭೀರ ಮುಖ...ನನಗೆ extra ಕೇಳಿಸ್ತಿರಬಹುದು ಅಂದುಕೊಂಡೆ..ಮತ್ತು  ನಾನು ನನ್ನ ಪೋಸ್ಟ್ ಗಳಿಗೆ ಬರುವ  ಕಮೆಂಟ್ ಇ-ಮೈಲ್ ಬಗ್ಗೆ ಮೆಲುಕು ಹಾಕುತ್ತ ಒಂದು ತರಹ happy happy feelings ನಲ್ಲಿ ತೇಲುತ್ತಾ ಮಾತನಾಡುವ  ಮೂಡ್ ನಲ್ಲಿ ಇರಲಿಲ್ಲ. 
"ಮ್ಯಾಡಂ, ರಸ್ತೆ ನೋಡಿದ್ರಾ?? ಎಷ್ಟು ಫ್ರೀ ಆಗಿದೆ ಇವತ್ತು" ಹೋ ಹಾಗಾದ್ರೆ ಇವನ ಮಾತೆ ನನಗೆ ಆವಾಗ ಕೇಳಿಸಿದ್ದು ಅಂದುಕೊಂಡೆ...
"ಹೂಂ"
"ಮ್ಯಾಡಂ ಖುಶಿಯಾಗಿದ್ದಕ್ಕೆ, ರಸ್ತೆ ಖಾಲಿಯಾಗಿದೆ"
"ಹೂಂ"
"ನಿಮಗೂ ಖುಶಿ, ನನಗೂ ಖುಶಿ.. ಈ ತರಹ ರಸ್ತೆ ಫ್ರೀ ಆಗಿದ್ರೆ ನಾನು ರಾಜಾರೋಷವಾಗಿ (liked the usage of this word by him) ಗಾಡಿ ಬಿಡ್ತೀನಿ"
"ಹೂಂ"
ಅಷ್ಟರಲ್ಲಿ ಒಂದು ಸಿಗ್ನಲ್ ಹತ್ರ ನಮ್ಮ ರಿಕ್ಷಾ ನಿಂತಿತು, ಪಕ್ಕದಲ್ಲೆ ಇನ್ನೊಂದು ರಿಕ್ಷ ಬಂದು ನಿಂತಿತು. ಆ ರಿಕ್ಷಾ ಡ್ರೈವರ್ ದೊಡ್ಡದಾಗಿ ಆಆ ಅಂತ ಆಕಳಿಸತ್ತಿರಬೇಕಾದ್ರೆ, ನನ್ನ ರಿಕ್ಷಾದವ ’ಅಣ್ಣ ಯಾಕಿವತ್ತು ರಸ್ತೆ ಇಷ್ಟು ಫ್ರೀ ಆಗಿದೆ" ಅಂತ ಅವನಿಗೆ ಪ್ರಶ್ನಿಸಿದಾಗ ಅವನು ಆಕಳಿಸುವುದನ್ನು ಅಲ್ಲೇ ಕಟ್ ಮಾಡಿ ’ಆಆಆಆ ನಾನೂ ಅದೇ ಅಂದುಕೊಳ್ಳತಾ ಇದೆ ಇಷ್ಟು ಹೊತ್ತು’ ಅಂದ.
ಪುನ: ನಮ್ಮ ಗಾಡಿ ಮುಂದೋಡಿತು
"ಮ್ಯಾಡಂ ಯಾಕಿವತ್ತು ಫ್ರೀ ಆಗಿರಬಹುದು ರೋಡ್, ಆ ದಿನ ಗಲಾಟೆ ಆಯ್ತಲ್ವರಾ?? ಏನೋ ಸಮಾರಂಭ ಇದೆ ಮನೆಯಲ್ಲಿ ಅಂತ ಆರು ಗಂಟೆಗೆ ಮನೆಗೆ ಹೊರಟು ಒಂಬತ್ತು ಗಂಟೆಗೆ ಮನೆ ತಲಪ್ದೆ." ಸತ್ಯನಾರಾಯಣನಿಗೆ ತುಪ್ಪದ ಮಂಗಳಾರತಿ, ನನಗೆ ಮಾತಿನ ಮಂಗಳಾರತಿ ಎಂದಾಗ ಮಾತ್ರ ನಗು ತಡೆದುಕೊಳ್ಳಲಾಗಲಿಲ್ಲ...
"ನನ್ನ ಮಕ್ಕಳು ಆ ದಿನ ಮನೆ ತಲುಪುವಾಗ ಲೇಟ್ ಆಗಿ ನನಗೂ ಸ್ವಲ್ಪ tension ಆಯ್ತು" ನಾನಂದೆ!!
"ಅಲ್ಲ ಮ್ಯಾಡಂ, ಆದ್ರೂ..."
"ಅಯ್ಯೋ ರೋಡ್ ಫ್ರೀ ಆಗಿದ್ದರೆ ಒಳ್ಳೆದಲ್ಲವಾ, ನಿಮಗೂ ನನಗೂ’ ಬನ್ನಿ ಆರಾಮಾಗಿ ಹೋಗುವ ಅಂದೆ...ರೇಡಿಯೋ ಜಾಕಿ ಏನೋ ಐದು ಕನ್ನಡ ಫಿಲ್ಮ್ ಸ್ಟಾರ್ ಗಳ ಹೆಂಡತಿ ಹೆಸರು ನೆನಪಿಸಿಕೊಂಡು ಹೇಳಲು ಕೇಳುಗರಿಗೆ, ರಾಗವಾಗಿ ಹೇಳ್ತಾ ಇದ್ದ.

ಅಷ್ಟರೊಳಗೆ ಇನ್ನೊಂದು ಸಿಗ್ನಲ್ ಬಂತು. ನಮ್ಮರಿಕ್ಷಾ ಪಕ್ಕದಲ್ಲಿ ಒಂದು ಹೊಸ ಸ್ಕೂಟರ್ ನಿಂತಿತು. ಬಣ್ಣ ಮೇಕ್ ಎಲ್ಲ ಚೆನ್ನಾಗಿತ್ತು. ಅದರ ಪಕ್ಕ ಒಂದು ಬಸ್ ಬಂದು ನಿಂತಿತು. ಅದರಿಂದ ಹಿಂದೆ ಕೂತವರು ಯಾರೋ ಉಗುಳಿದ್ದು ನಮ್ಮ ಹೊಸ ಬೈಕ್ ಮಹಾಶಯರ ಸಿಟ್ ನ ಹಿಂದಗಡೆ ತಪಕ್ ಅಂತ ಬಿತ್ತು. ನಾನು reflex ನಲ್ಲಿ ಛೀ ಅಂದೆ...ನಾನು ರಿಕ್ಷಾ ಡ್ರೈವರ್ ಸೀಟ್ ಹಿಂಬದಿ ನೋಡ್ತಿರಬೇಕಾದ್ರೆ..ಸ್ಕೂಟರ್ ನವನೂ ನಮ್ಮ ದೃಷ್ಟಿಯ ಜಾಡನ್ನು ಅರಸಿ ಅವನು ತಿರುಗಿ ನೋಡಿದ. ಆಮೇಲೆ ಸ್ಕೂಟರ್ ಅನ್ನು , ನಿಂತುಕೊಂಡಿದ್ದ ಇತರೆ ವಾಹನಗಳೆಡೆಯಲ್ಲಿ ನುಸುಳಿಸಿಕೊಂಡು ಸೀದಾ ಆ ಬಸ್ ಮುಂದೆ ನಿಲ್ಲಿಸಿ, ಯಾರ್ರಿ ಅದು ಉಗುಳಿದ್ದು, ಬಂದು ವರೆಸಿ ಅಂದ ಕೂಗು ಹಾಕಿದ. ಅಷ್ಟರಲ್ಲಿ ಸಿಗ್ನಲ್ ಹಸಿರಾಯಿತು...ಬಸ್ ನವ ಹಾರ್ನ್ ಹಾಕಿದ್ರೂ ಕೇಳಿಸಿಕೊಳ್ಳದೆ, ಸ್ಕೂಟರ್ ನವ ಅಲ್ಲೆ ನಿಂತಿದ್ದ. ಬಸ್ ಡ್ರೈವರ್..ಯಾರ್ರಿ ಅದು ಉಗುಳಿದ್ದು ಅಂದಾಗ ಯಾರಾದ್ರೂ ಸೊಲ್ಲೆತ್ತಿದ್ದರೆ ಹೇಳಿ. ಕಡೆಗೆ ಒಬ್ಬ ಪುಟ್ಟ ಹುಡುಗ ಒಬ್ಬರ ಕಡೆ ಬೆರಳು ಮಾಡಿ..’ಈ ಅಂಕಲ್ ತುಪ್ಪಿದ್ದು’ ಅಂದಾಗ ಉಗುಳಿದವನ ಮುಖ ನೋಡಬೇಕಿತ್ತು. ಸರಿ ಶುರು ಆಯ್ತು ಉಳಿದ ಪ್ರಯಾಣಿಕರ ಸಹಸ್ರನಾಮಾರ್ಚನೆ...ನನಗೆ ಉಗುಳುವವರು, ರಸ್ತೆ ಬದಿ ನಿಂತು ಮೂತ್ರ ಹೊಯ್ಯುವವರನ್ನು ಕಂಡರೆ ಭಯಂಕರ ಅಸಹ್ಯ....ಉಗುಳಿದವನಿಗೆ ಎರಡು ಕೊಟ್ಟರು ಆಗುತ್ತಿತ್ತು ಅನ್ನಿಸಿದ್ದು ಹೌದು....:-( ನಮ್ಮ ರಿಕ್ಷಾದವ ನಾನು fully enjoying ನಮ್ಮ ರಿಕ್ಷಾ ದೆಸೆಯಿಂದ ಉಳಿದ ವಾಹನಗಳ ಓಡಾಟಕ್ಕೆ ಸಂಚಕಾರ. ಎಲ್ಲರೂ ಹಾರ್ನ್ ಮಾಡಿದ್ದೆ ಮಾಡಿದ್ದು...
ಸರಿ ಕೊನೆಗೆ ಹ್ಯಾಪು ಮೊರೆ ಹಾಕಿಕೊಂಡು ಉಗುಳಿದ ಆಸಾಮಿ ನಿಧಾನಕ್ಕೆ ಕೆಳಗಿಳಿದು ಬಂದ. ತನ್ನ ಪ್ಯಾಂಟ್ ಪಾಕೆಟ್, ಶರ್ಟ್ ನ ಪಾಕೆಟ್ ಎಲ್ಲ ಜಾಲಾಡಿದ. ಕರ್ಚೀಫ್ ಇರಲಿಲ್ಲ. ಹೋಗಲಿ ಅಂದ್ರೆ ರಸ್ತೆ ಬದಿಯಲ್ಲೂ ಒಂದು ಚಿಂದಿ ಬಟ್ಟೆ ,ಪೇಪರ್ ಕೂಡ ಇರಲಿಲ್ಲ ಅವನ ದುರದೃಷ್ಟಕ್ಕೆ...
ಬಸ್ ಡ್ರೈವರ್..’ಸಾರ್, ರಸ್ತೆ ಪಕ್ಕಕ್ಕೆ ನಿಲ್ಲಿಸಿ ನಿಮ್ಮ ಪ್ರಾಬ್ಲಂ ಸಾಲ್ವ್ ಮಾಡಿ ಸಾರ್...ಅಂತಾನೇ ಇದ್ದ.
ನನಗೆ ನನ್ನ ಬ್ಯಾಗ್ ನಲ್ಲಿ ಯಾವತ್ತೂ ಇಟ್ಟುಕೊಂಡಿರುವ ಟಿಶ್ಯು ಪೇಪರ್ ನೆನಪಾಗಿ, ನನ್ನ ರಿಕ್ಷಾದವನ ಕೈಯಲ್ಲಿ ಕಳಿಸಿ ಕೊಟ್ಟೆ...ಆ ಮೇಲೆ ನಾವು ಮುಂದೆ ಹೋದ್ವಿ..

ನಾಟಕದ ಸ್ಥಳ ತಲುಪಿದಾಗ ಲೇಟ್ ಆಗಿತ್ತು, ಆಗಲೇ ನಿಹಾ ಳ ಮೂರು ಮಿಸ್ಸಡ್ ಕಾಲ್ ಗಳಿದ್ದವು. ಆದರೂ ರಂಗಕರ್ಮಿಗಳಿಗೆ ಸಮ್ಮಾನ-ಗೌರವ ಅಂತ ನಾಟಕ ಶುರು ಆಗಿದ್ದು 7.30 ಗೆ...ಅ ಸೆಕೆಗೆ, uncomfortable ಸೀಟ್ ನಲ್ಲಿ ಕೂತುಕೊಂಡು, ತಂದಿದ್ದ ಬಿಸ್ಕಿಟ್ ಎಲ್ಲ ಖಾಲಿ ಮಾಡಿ, compering ಮಾಡುತ್ತಿದ್ದ ಹುಡುಗನನ್ನು ಗೇಲಿ ಮಾಡಿ ನಕ್ಕು, ನನಗೆ cramps ಬಂದು ಸ್ವಲ್ಪ ಹಿಂಸೆಯಾಯಿತು. ಅಬ್ಬಾ ಕೆಲವರಿಗೆ ಭಾಷಣ ಮಾಡ್ತಾ ಅವರ ದನಿ ಕೇಳ್ತಾ ಇರೋದು ಎಷ್ಟು ಇಷ್ಟ ಆಗುತ್ತಲ್ಲವಾ?? ನಿಹಾ ನನಗೆ ಕೇಳಿದ್ದು..ಅಮ್ಮ ನೀನು ’verbal Diarrhea ಎನ್ನುವ ಪದ use  ಮಾಡುತ್ತಿಯಲ್ಲವಾ?? ಇದೇನಾ ಅಂತ..

ನಾಟಕ ಸುಮಾರಾಗಿ ಚೆನ್ನಾಗಿತ್ತು. ದೃಶ್ಯ ತಂಡದವರ ’ಸ್ವಪ್ನವಾಸವದತ್ತ’. ಮನೆ ತಲುಪುವಾಗ 9.30...ಉಜಿರೆಯಿಂದ ಮಂಗಳೂರಿಗೆ ಎರಡು ಸಲ ಹೋಗಿ ಬರಬಹುದಿತ್ತು ಅನ್ನಿಸ್ತು ಯಾಕೋ..LOL

ಈಗೀಗ ಶ್ರೀಕಾಂತ, ಮಕ್ಕಳಿಗೆ..’ಇವತ್ತು ಒಂದು ಗಮ್ಮತ್ತಾಯಿತು ಅಂದಾಗ ಏನದು ಏನದು ಅಂತ ಕೇಳ್ತಾರೆ....ಆಗ ನಾನು  ಅರ್ಧಂಬರ್ಧ ಹೇಳಿ ಮುಂದಿನದ್ದು  ಬ್ಲಾಗ್ ನಲ್ಲಿ ಓದಿ ಅಂತೇನೆ...ಹೆ ಹೆ ಹೆ  ಹೆಂಗೆ ನನ್ನ ಹೊಸ (sadistic) ಐಡಿಯಾ??
:-)

11 comments:

Anitha Naresh Manchi said...

lol,, idea chennaagide... chennagittu harate :)

ಸುಮ said...

ಹರಟೆ ಚೆನ್ನಾಗಿತ್ತು :) ಹಾಗೇ ಬ್ಲಾಗ್ ಓದುವಂತೆ ಮಾಡುವ ನಿಮ್ಮ ಪ್ಲಾನ್ ಕೂಡ ಮಜವಾಗಿದೆ :)

Anomalyka said...

ಚೆನ್ನಾಗಿದೆ ಬರಹ, ಸುಲಲಿತವಾಗಿ ಕುತೂಹಲದಿಂದ ಓದಿಸಿಕೊಂಡು ಹೋಯಿತು.
ಉಗುಳುಬಾಕನನ್ನು ಪತ್ತೆ ಹಚ್ಚಿ ಶಿಕ್ಷಿಸಿದ್ದು ತಮಾಷೆಯಾಗಿತ್ತು.
ಬೆಂಗಳೂರಿಗರು ರಸ್ತೆ ಬದಿ ನಿಂತು ಮೂತ್ರಹೊಯ್ಯುವದನ್ನು ನಿಲ್ಲಿಸಬೇಕೆಂದು ನಮ್ಮ ನೆಚ್ಚಿನ ಕನ್ನಡತಿ ಸುಧಾ ಮೂರ್ತಿಯವರು ತಮ್ಮ ಪರ್ಸಿನಿಂದ ಏಳು ಕೋಟಿ ರೂಪಾಯಿ BBMP ಗೆ ಕೊಟ್ಟರೂ ಹೆಚ್ಚಿನ ಪರಿಣಾಮವಾಗಲಿಲ್ಲ.
ಕನ್ನಡದ ನೆನಪಿಗೆ ಬಾರದ ಕವಿವರೇಣ್ಯರೊಬ್ಬರು ಬಟಾಬಯಲಲ್ಲಿ relieve ಮಾಡಿಕೊಳ್ಳುವ ಸುಖದ ಬಗ್ಗೆ ಬರೆದದ್ದು ನೆನಪಾಗಿ हम कभी नहीं सुधरेंगे ಎನಿಸಿತು.

Anomalyka said...

>>> ಹೆ ಹೆ ಹೆ ಹೆಂಗೆ ನನ್ನ ಹೊಸ (sadistic) ಐಡಿಯಾ??

sadistic idea ಎನ್ನುವುದಕ್ಕಿಂತ ಬ್ಲಾಗ್ನಲ್ಲಿನ footfalls ಹೆಚ್ಚಿಸುವ strategy ಅನ್ನೋಣವೇ?

neelesh said...

hey for me rasthe badiyalli nithu muthra maduvudendare parama santhosha natures call attended in nature,,,other then ur writing was nice

ದಿವ್ಯಾ ಮಲ್ಯ ಕಾಮತ್ said...

You always encounter typical ppl n incidents! I m jealous, why only you everytime :P nice writeup :-)

nenapina sanchy inda said...

@ Divya Mallya Kamath
i am surprised as much as u r...whenever i want to be immersed into my silence/ musings such things happen..anyways nice naa to fill my blog with such incidents....
love u..
:-)
many thanks to Anitha,Suma Neelesh, Shree kar
ms

Anomalyka said...

@ D M K ( Divya Mallya-Kamath )

>>>> "You always encounter typical ppl n incidents! I m jealous, why only you everytime..."

It is not that nobody else encounters such things. It is just that we simply overlook these things, whereas MS has a talent to spot and write about highlighting them.

:-)

Anonymous said...

Hi Malthi harate majavagi odiskondu hoythu. Howdu nammalli tumapki veeraru bahala. Nanu appi tappi 2 wheelernalli bus pakka hogbekagi bandre kitaki kadene nodtirtini hege nanna idea? nimma idea sadistic alla adu pakka tarle idea.V

nenapina sanchy inda said...

Dearest V
:-)hmm tarle noo houdu!!
love u
ms

Anuradha said...

ಹರಟೆ ಚೆನ್ನಾಗಿತ್ತುರೀ ...ನಾಟಕ ಇರಲಿ ಜೀವನ್ನಾಟಕ ಚೆನ್ನಾಗೆ ನೋಡಿ ಬಂದು ವಿವರಿಸಿದ್ದೀರಿ .....ಸಾಮಾಜಿಕ ಕಳಕಳಿಯಿರುವ ಪ್ರತಿಯೊಬ್ಬರಿಗೂ ಈತರಹದ ಒಂದೊಂದು ಅನುಭವ ಆಗಿರುತ್ತದೆ .ಅಭಿನಂದನೆ ಮಾಲತಿ .