December 10, 2011
ಗ್ರಹಣಕ್ಕೆ ಒಂದು special
Special ಅಂದ ಕೂಡಲೆ ತಿಂಡಿ ಅಂತ ತಿಳಿದುಕೊಳ್ಳಬೇಡಿ ಮತ್ತೆ. of course i live to eat..ಯಾರು ಏನು ಬೇಕಾದ್ರು ಹೇಳಲಿ. ಮತ್ತು ನನ್ನ ತಿಂಡಿಫೋತ ಫ್ರೆಂಡ್ಸ್ ಮೇಲೆ ನನಗೆ ವಿಶೇಷ ಆಸ್ಥೆ. foodies ಅಂತಾರಲ್ಲವಾ??
ಅಮ್ಮನಿಗೆ ಬೋರ್ ಆಗುತ್ತೆ ಅಂತ ಫೋನ್ ಮಾಡಿದ್ರು ಈಗ. ನಮ್ಮ ಸಂಭಾಷಣೆ ಹೀಗಿತ್ತು
ಅಮ್ಮ: ಏನು ಮಾಡ್ತಾ ಇದ್ದೆ?
ನಾನು : ನಾಳೆ ತಿಂಡಿಗೆ ರೆಡಿ ಮಾಡ್ತಾ ಇದ್ದೆ
ಅಮ್ಮ: ಇವತ್ತು ಗ್ರಹಣ ಗೊತ್ತಾ?? ಯಾರಾದರೂ ತಿಂಡಿ ಮಾಡ್ತಾರಾ? ಮಧ್ಯಾಹ್ನ್ 1.30 ನಂತರ ಬಾಯಿಗೆ ನೀರು ಕೂಡ ಹನಿಸಬಾರದು.
ನಾನು: ನನಗೆ ಗೊತ್ತಿರಲಿಲ್ಲ ಅಮ್ಮ.
(ಬೆಳಗ್ಗಿನ newspapers ಗಳನ್ನು ಶ್ರೀಕಾಂತ ರಾಯರು ಕುಣಿಗಲ್ ಗೆ ಹೋಗ್ತಾ ದಾರಿಯಲ್ಲಿ ಓದಲು ತೆಗೆದುಕೊಂಡು ಹೋಗಿದ್ದರು. ನಾನು ಇಂಟರನೆಟ್ ಕೂಡ ಹಾಕಿರಲಿಲ್ಲ ಮುಂಜಾನೆ. ಕ್ಲೀನಿಂಗ್ ಮಾಡ್ತಾ ಗೀತಾ ದತ್ತ್ ಹಾಡು ಗಟ್ಟಿಯಾಗಿ ಹಾಕಿಕೊಂಡು ಕೇಳ್ತಾ ಇದ್ದೆ.)
ಅಮ್ಮ: ನಿನ್ನ ತಲೆ ಎಲ್ಲಿರುತ್ತೆ ಅದು?
ನಾನು: as usual ಆಕಾಶದಲ್ಲೇ...
ಅಮ್ಮ: ಆಕಾಶದಲ್ಲಿದ್ದು ನಿನಗೆ ಗ್ರಹಣ ಕಾಣಿಸಲಿಲ್ಲವಾ ಅಂದ್ರು...
well that was a good one from my mom :-)
(ಅಮ್ಮ ಮತ್ತು ಶ್ರೀಕಾಂತ ಯಾವಗಲೂ ನನಗೆ ನಿನ್ನ ತಲೆ ಯಾವತ್ತೂ ಆಕಾಶದಲ್ಲೇ ಇರುತ್ತೆ. ಸ್ವಲ್ಪ ಕೆಳಗಡೆ ನೋಡೋದನ್ನ ಕಲಿ.....ಅಂತ. ನನಗೆ ದೇವರ ಮೇಲೆ ನಂಬಿಕೆಯಿಲ್ಲ, ಆದರೂ ದೇವರಾಣೆಗೂ ಹೇಳ್ತೇನೆ ಆಕಾಶದಲ್ಲಿರೋದು ಅಂದ್ರೆ ಏನು ಅಂತ ಗೊತ್ತಿಲ್ಲ, ಈವರೆಗೂ ನಾನು ಅದನ್ನು ಕೇಳಲು ಇಲ್ಲ..)
ಸುಮ್ನೆ ಒಂದು ಸಣ್ಣ ಪೋಸ್ಟ
:-)
Subscribe to:
Post Comments (Atom)
2 comments:
Hey nan thale kannu manassu ella grahanada dina akashdalle ittu, it was nice wathing Khagrasa Grahana (namassige grahana hididaga!! I was thinking nanna manassu/Jeevna ella yavaga grahana bitta chandrana thara pala pala holyotte antha)
:-(V)
Hello "V"
Soon...believe me!! soon...dearest V.
ms
Post a Comment