ಆ ದಿನ ಒಂದು ಪ್ರಾಜೆಕ್ಟ್ ಸಬ್ಮಿಟ್ ಮಾಡಲು ಕೊನೆಯ ದಿನ. ಡೆಡ್ ಲೈನ್ ಹತ್ತಿರ ಬರ್ತಿದ್ದ ಹಾಗೆ ಶ್ರೀಕಾಂತ ಗೆ ಟೆನ್ಶನ್.ಯಾಕೆ ಅಂದರೆ ಅದು ಆನ್ ಲೈನ್ ಸಬ್ಮಿಶನ್. ಎರಡು ಮೂರು ಸಲ ಸಿಸ್ಟಮ್ ಹ್ಯಾಂಗ್ ಆಗಿ, ಮಾಡಿರೋದನ್ನ ಪುನಃ ಪುನಃ feed ಮಾಡಬೇಕಾಯಿತು. ಆವಾಗಲೆ ನಮ್ಮ ಹಳೆಯ ಮೌಸ್ ಪ್ಯಾಡ್ ಕೈ ಕೊಟ್ಟಿತು. ಶ್ರೀಕಾಂತ ’get me a book ,fast!!' ಅಂದರು. ಅಲ್ಲೆ ಸಿಕ್ಕ ನಿಹಾನ ನೋಟ್ ಪುಸ್ತಕ ಕೊಟ್ಟೆ. ಆದರೆ ಅದರಲ್ಲಿ ಮೌಸ್ ಸರಿ ಮೂವ್ ಆಗ್ತಾ ಇರಲಿಲ್ಲ. Get me something with a rough texture.ಶ್ರೀಕಾಂತ ಗೆ ಟೆನ್ಶನ್ ಆದಾಗ english ಮಾತಾಡೊದು :-)
ನಾನು ಟೂರ್ ನಿಂದ ಬಂದಿದ್ದಷ್ಟೆ. ಓದಲು ದೇಶಕಾಲ ಪುಸ್ತಕ (issue no 25) ತೆಗೆದುಕೊಂಡು ಹೋಗಿದ್ದೆ. ಆ ಪುಸ್ತಕದ rough texture ನೆನಪಾಗಿ ಅದನ್ನೆ ತಂದು ಕೊಟ್ಟೆ. ಒಹ್ excellent ಅಂದುಬಿಟ್ಟು , ಬೇಗ ಬೇಗ ಪ್ರಾಜೆಕ್ಟ್ ತಾಯಾರು ಮಾಡಿ ಸಬ್ಮಿಟ್ ಮಾಡಿದರು. ಈ ವಿಷಯಕ್ಕೆ ಆಗಲೆ 6 ತಿಂಗಳು ಆಗಿದೆ. ಮತ್ತಿದನ್ನು in a 'spur of the moment' of camaraderie, ವಿವೇಕ ಶಾನಭಾಗ ಅವರ ಜತೆ ಶೇರ್ ಕೂಡ ಮಾಡಿದ್ದೇನೆ. :-)
ಆ ಪುಸ್ತಕದ ಬೈಂಡ್ ಈಗ ಸವೆದು ಹೋಗಿದೆ. ನಿನ್ನೆ ಇದ್ದಕ್ಕಿದ್ದ ಹಾಗೆ ಶ್ರೀಕಾಂತ ’ಈ ಪುಸ್ತಕ ಹೋಯ್ತು, ಇನ್ನೊಂದು ದೇಶಕಾಲ ಪುಸ್ತಕ ತೆಗೆದುಕೊಂಡು ಬಾ ಅಂದಾಗ, ಒಂದು ಕ್ಷಣ ಶಾಕ್ ಆಗಿ ಜೋರಾಗಿ ನಕ್ಕು ಬಿಟ್ಟೆ. ನನ್ನ ಇಷ್ಟದ ದೇಶಕಾಲ ಮರಾಠಿ ಪುಸ್ತಕ ತಂದುಕೊಟ್ಟೆ.
ಇವತ್ತು ಶ್ರೀಕಾಂತ ಸಪ್ನಾ ಬುಕ್ ಹೌಸ್ ಗೆ ಹೊರಟಿದ್ದಾರೆ.(ಅಲ್ಲಿ ಮೌಸ್ ಪ್ಯಾಡ ವಗೈರಾ ಸಿಗುತ್ತಾ ಗೊತ್ತಿಲ್ಲ)( ಮೌಸ್ ಜತೆ ನನಗೆ ಜೋಗಿಯವರ ಹೊಸ ಪುಸ್ತಕ ತರಲು ಹೇಳಿದ್ದೇನೆ.)
ಅಂದ ಹಾಗೆ ಆ Europian Union ನ ಪ್ರಾಜೆಕ್ಟ್ ನಮಗೆ ಸಿಕ್ಕಿದೆ ಅಂತ ಬೇರೆ ಹೇಳಬೇಕಾಗಿಲ್ಲವಲ್ಲ??
ಸುಮ್ಮನೆ ಒಂದು ಲೈಟ್ ಪೋಸ್ಟ್ ವಿಥ್ ಲಾಟ್ಸ್ ಆಫ್ ಇಂಗ್ಲೀಷ್.:
ಮತ್ತೆ ಈ ಪೋಸ್ಟ special ಆಗಿ ರಾಜು ಶಿರಗುಪ್ಪಿಯವರಿಗೆ!!
ಖಂಡಿತ /promise ಸದ್ಯಕ್ಕಿದ್ದು ಲಾಸ್ಟ್ ಪೋಸ್ಟ್
ಹಾಂ ಅಂದ ಹಾಗೆ ಮೌಸ್ ಪ್ಯಾಡ್ ಗೆ ಕನ್ನಡದಲ್ಲಿ ಇಲಿಮಣೆ ಅನ್ನಬಹುದಾ??
:-)
ಹಾಂ ಅಂದ ಹಾಗೆ ಮೌಸ್ ಪ್ಯಾಡ್ ಗೆ ಕನ್ನಡದಲ್ಲಿ ಇಲಿಮಣೆ ಅನ್ನಬಹುದಾ??
3 comments:
:)
ಜೋಗಿಯವರ ಹೊಸ ಪುಸ್ತಕ ಚೆನ್ನಾಗಿದೆ ಮೇಡಂ
ಸ್ವರ್ಣ
@ಸ್ವರ್ಣ:
ಒಹ್!! ಆಗಲೇ ಹೊಸ ಪುಸ್ತಕ ಓದಿ ಆಯ್ತಾ? till date i have read Jogi's one book, that is a short story collection..
take care
:-)
ಮಾಲತಿ ಎಸ್.
ilimane olle pada :-)
-A. Ram
Post a Comment