’ಸು’ ಪರಿಚಯ ನನಗೆ social site ನಲ್ಲಿ ಆಗಿದ್ದು. ಆಗಿನ್ನು privacy settings ಬಗ್ಗೆ ನನಗೆ ತಿಳಿದಿರಲಿಲ್ಲ. ನಾನು ಅಪ್ ಲೋಡ್ ಮಾಡಿದ ತೀರ್ಥಹಳ್ಳಿ ಚಿತ್ರಗಳನ್ನು ನೋಡಿ ಅವರ ಸಂಬಂಧಿಕರು ತೀರ್ಥಹಳ್ಳಿಯವರು ಅಂತ ಹೇಳಿ friendship request ಕಳಿಸಿದ್ದರು. ನನಗೆ ತೀರ್ಥಹಳ್ಳಿ / ಕೊಂಕಣಿಯವರು ಅಂದರೆ ವಿಶೇಷ ಆಸ್ಥೆ. ಇವರು ಕೊಂಕಣಿ. ಹುಟ್ಟಿ ಬೆಳೆದದ್ದೆಲ್ಲ ಕೇರಳದಲ್ಲಿ. ಪರಿಚಯ ಆದಮೇಲೆ ನಾವು ಮೈಲ್ ಐಡಿ ವಿನಿಮಯ ಮಾಡಿಕೊಂಡ್ವಿ. ಇಬ್ಬರೂ ನಮ್ಮ ನಮ್ಮ ಕುಟುಂಬದ ಚಿತ್ರಗಳನ್ನು ಕಳುಹಿಸಿ ನೋಡಿ ಆಯ್ತು. ಶ್ರೀಕಾಂತ್ ಗೂ ತೋರಿಸಿದಾಗ ’ಇಲ್ಲ ನನಗೆ ಇವರ ಪರಿಚಯ ಇಲ್ಲ ಅಂದ್ರು. ಅದೂ ಹೌದು ಯಾಕಂದ್ರೆ ಶ್ರೀಕಾಂತ ಅವರ ಪಿ ಯು ಮುಗಿದ ಕೂಡಲೆ ಊರು ಬಿಟ್ಟು ಧಾರವಾಡದಲ್ಲಿ ಹೋಸ್ಟಲ್ ನಲ್ಲಿದ್ದು ಅವರ ಕಲಿಕೆಯನ್ನು ಮುಂದುವರೆಸಿದ್ದರಿಂದ ಊರಿನ ಹೆಚ್ಚಿನ ಜನರ ಪರಿಚಯ ಅವರಿಗಿರಲಿಲ್ಲ. ನನ್ನ ಫ್ರೆಂಡ್ ಹೆಸರು ಇಲ್ಲಿ ’ಸು’ ಅಂತಷ್ಟೆ ಹಾಕುತ್ತೇನೆ. ಕ್ರಮೇಣ ಅವರ ಪತ್ನಿ ’ಪ್ರ’, ಅವರ ಮಕ್ಕಳು ಹೀಗೆ ಪರಿಚಯಬೆಳೆಯುತ್ತ ಹೋಯಿತು. ಅವರ ಪತ್ನೀ ಅವರ ಬಿಸಿನೆಸ್ ಮ್ಯಾನೇಜ್ ಮಾಡ್ತಾ ತುಂಬ ಟೂರ್ ಎಲ್ಲ ಮಾದುತ್ತಿದ್ದರು. ಇತ್ತೀಚಿಗೆ ಬೆಂಗಳೂರಿಗೆ ಬಂದಿದ್ದು ಎಲ್ಲ ಹೇಳಿದರು. ಮುಂದಿನ ಸಲ ಬಂದಾಗ ಖಂಡಿತ ನಮ್ಮಲ್ಲಿಗೆ ಬರಬೇಕೆಂದು ಹೇಳಿದೆ.
ನನ್ನ ತಮ್ಮ ತಂಗಿಯವರಿಗೋಸ್ಕರ ನನ್ನ chat ಆನ್ ಇರುತ್ತೆ. ಅದರಲ್ಲಿ ಕೆಲ ಆಪ್ತರನ್ನಷ್ಟೆ ನಾನು ಸೇರಿಸಿಕೊಂಡಿದ್ದೇನೆ. ’ಸು’ ಜತೆ ಹಲವಾರು ಮೈಲ್ ವಿನಿಮಯ ಮಾಡಿದ್ದರಿಂದ ಅವರ ಹೆಸರು automatic ಆಗಿ ನನ್ನ chat ನಲ್ಲಿ ತೋರಿಸುತ್ತಿತ್ತು. ಅವರ ಹೆಸರು chat list ನಲ್ಲಿಂದ ತೆಗೆಯಲು ನನಗೂ ಸೋಮಾರಿತನ. ನನಗೆ ಸುಮ್ಮನೆ ತಲೆ ಹರಟೆ chatter ಗಳು ಇಷ್ಟ ಆಗಲ್ಲ. ಮತ್ತು ನನ್ನ ಕೆಲಸದ ವೇಳೆ ಕಿರಿ ಕಿರಿ ಆದ್ರೂ ನಾನು ಸಹಿಸಲ್ಲ. ಇವರು ಮಧ್ಯ ಮಧ್ಯ chat ನಲ್ಲಿ ಬರೋರು. ಎರಡು ನಿಮಿಷ ಅವರ ಜತೆ chat ಮಾಡಿ, excuse ಕೇಳುತ್ತಿದ್ದೆ. ಅಪರೂಪ ಅವರ ಹೆಂಡತಿನೂ chat ನಲ್ಲಿ ಬಂದಾಗ ನಮ್ಮ ನಮ್ಮ ಸೆಲ್ ಫೋನ್ ನಂಬರ್ ಕೂಡ exchange ಮಾಡ್ಕೊಂಡಿದ್ವಿ. ಮಾತಾಡಿರಲಿಲ್ಲ. ಹೀಗೆ ಒಂದು ದಿನ ’ಸು’ chat ನಲ್ಲಿ ಬಂದಾಗ ನಾನು accounts ಮಾಡ್ತಾ ಇದ್ದೆ. ಆಮೇಲೆ chat ಮಾಡುವ ಈಗ ಬಿಸಿ, ಅಂದಿದ್ದಕ್ಕೆ ’ಏನಿಲ್ಲ ನಾಳೆ ನಮ್ಮದು 25 ನೇ wedding anniversary ಅಂದ್ರು. ಅದಕ್ಕೆ ನಾನು - ನಿಮಗಿಬ್ಬರಿಗೂ ಈಗಲೇ ವಿಶೆಸ್. ಇನ್ನೊಮ್ಮೆ chat ಮಾಡುವಾಗ ಹೇಗಾಯ್ತು function ಅಂತ ತಿಳಿಸಿ ಅಂದು ಬಿಟ್ಟು ಬೈ ಅಂದೆ. ಸೋಮಾವಾರ ಸ್ವಲ್ಪ ಹೊತ್ತು chaat ಮಾಡುವ ಅಂದ್ರು ಅವರು. ನಾನೂ ಹೂಂ ಅಂದೆ. ಅಷ್ಟರಲ್ಲಿ ಶ್ರೀಕಾಂತ ನಮ್ಮ system ನಲ್ಲಿ ಸ್ಕೈಪ್ ಅಳವಡಿಸಿದರಿಂದ ನಾನು ಮೈಲ್ ಚ್ಯಾಟ್ ನಲ್ಲಿರೋದು ನಿಲ್ಲಿಸಿಬಿಟ್ಟೆ. ಸ್ಕೈಪ್ ಹೆಚ್ಚು convenient ಅನ್ನಿಸ್ತು ಹೀಗೆ ಒಂದು ತಿಂಗಳ ನಂತರ ಸೋಶಲ್ ವೆಬ್ ಸೈಟ್ ನ private message ನಲ್ಲಿ common friend ಒಬ್ಬರು ಮೆಸೇಜ್ ಬಿಟ್ಟಿದ್ದರು ’ನಿನ್ನೆ ಸಂಜೆ ’ಸು’ ತೀರಿಕೊಂಡರು ಅಂತ. ನನಗಂತು ಕೆಟ್ಟ ಶಾಕ್. ಕೂಡಲೇ ಅವರು ನನಗೆ ’ಸೋಮವಾರ chat ನಲ್ಲಿ ಸಿಗುವ’ ಅಂದ ಮಾತು ನೆನಪಿಗೆ ಬಂದು ತುಂಬ ಕೆಟ್ಟದೆನಿಸಿತು. ಸುಮಾರು ಒಂದು ತಿಂಗಳೆ ಆಗಿತ್ತು ಅವರ ಜತೆ ಸಂಪರ್ಕ ತಪ್ಪಿ.
ಮೈಲ್ ಗೆ ಹೋಗಿ - ನಾನು ಇನ್ನೊಮ್ಮೆ ನೋಡುವ ಅಂತ ಹಾಗೆ ಇಟ್ಟಿದ್ದ.- ಅವರ 25 ನೇ ಮದುವೆ ವಾರ್ಷೀಕೋತ್ಸವದ ಎರಡು ಚಿತ್ರಗಳನ್ನು ತೆರೆದು ನೋಡಿದೆ. ನಮ್ಮ system ಕೂಡ ಸ್ಲೋ ಆಗಿ ಫೋಟೊ ಎಲ್ಲ ತೆರೆಕೊಳ್ಳಲ್ಲಿಕ್ಕೆ ತುಂಬ ಸಮಯ ಹಿಡಿಸುತ್ತಿತ್ತು, ಅದಕ್ಕೆ ಈ ಉದಾಸೀನ. ಫೊಟೊ ಜತೆಗೆ ಮೆಸೆಜ್ ಕೂಡ ಇತ್ತು ’ಅಂತೂ ನೀವು chat ಗೆ ಬರಲೇ ಇಲ್ಲ ಅಂತ’ಎಲ್ಲರೂ ಖುಶಿಯಾಗಿರುವ- ನಗುವ ಚಿತ್ರಗಳನ್ನುನೋಡಿ ಖುಶಿ ದು:ಖ ಎರಡು ಆಯಿತು. ’ಪ್ರ’ ನಂಬರ್ ಇರೋದರಿಂದ ಫೋನ್ ಮಾಡುವ ಅಂದುಕೊಂಡೆ.ಧೈರ್ಯ ಬರಲಿಲ್ಲ ಏನಂತ ಮಾತಾಡಲಿ?? ಆ ಮೇಲೆ ಛೆ ಇದು ಸರಿಯಲ್ಲ. ಇಬ್ಬರೂ ಒಳ್ಳೆಯವರು. ಮತ್ತು ಆರು ತಿಂಗಳ ಪರಿಚಯ ಬೇರೆ. ಅವರ ಕುಟುಂಬದ ವಿಷಯಗಳನ್ನೆಲ್ಲ ಅಂದರೆ ಮಕ್ಕಳ ಓದು ಅವರ ಬಿಸಿನೆಸ್ ಬಗ್ಗೆ ಎಲ್ಲ ಶೇರ್ ಮಾಡಿಕೊಂಡಿದ್ದರು.
ಮರು ದಿನ ಅವರಿಗೆ ನನ್ನ ಡವಗುಟ್ಟುವ ಹೃದಯದಿಂದ ಫೋನ್ ಮಾಡಿದೆ. ಎರಡನೆ ರಿಂಗ್ ಗೆ ಸೆಲ್ ಫೋನ್ ಎತ್ತಿಕೊಂಡ್ರು. ತುಂಬ ಸಾರಿ ’ಪ್ರ’ ಏನು ಹೇಳಬೇಕು ತೊಚ್ತಾ ಇಲ್ಲ ಅಂದೆ. ಅದಕ್ಕೆ ಅವರು ’see what happened malathi' ನನಗ್ಯಾಕೋ ಅಳು ಒತ್ತರಿಸಿ ಬಂತು . ಅಳುತ್ತ ಹೇಳ್ದೆ ಈಗಷ್ಟೆ ನಿಮ್ಮ 25 ನೆ ಮದುವೆ ವಾರ್ಷಿಕೋತ್ಸವದ ಫೊಟೊ ನೋಡ್ದೆ. ಹೊಟ್ಟೆಯಲ್ಲೆಲ್ಲ ಕಿವಿಚಿದಂತಾಯ್ತು ಅಂದೆ. ಅದಕ್ಕೆ ಅವರು ’dont cry malathi. yes we did celebrate our 25th wedding, but relationship between us was not good. we were not even on talking terms. we had a celebration just to please my father -in-law.
ಮುಂದೆ ಅವರು ಹೇಳಿದ್ದನ್ನು ಕನ್ನಡದಲ್ಲೇ ಬರೀತೇನೆ.
’ನಾನು ಬ್ಯಾಂಕ್ ನಲ್ಲಿ ಒಳ್ಳೆ ಕೆಲಸದಲ್ಲಿದ್ದೆ. ನಮ್ಮದು ಪೈಂಟ್ ಬಿಸಿನಸ್. ನನ್ನ ಬಿಸಿನೆಸ್ ಗೆ ಸಹಾಯ ಮಾಡು ಅಂತ ಕಿರಿ ಕಿರಿ ಮಾಡಿ ನನ್ನ ಕೆಲಸ ಬಿಡಿಸಿದರು. ನಾನು ಬಿಸಿನೆಸ್ ನಲ್ಲಿ involve ಆದ ಹಾಗೆ ಅವರು ಮನೆಯಲ್ಲಿ ಟಿ.ವಿ ಎದುರಿಗೆ ಕೂತುಕೊಂಡು ಇರುತ್ತ್ತಿದ್ದರು. ಸಂಜೆ ಆಗ್ತಾ ಕುಡಿತ ಶುರು. ಈಗಂತು ಇಂಟರ್ ನೆಟ್ ಬಂದ ಮೇಲೆ ಯಾರ್ಯದೋ ಜತೆ chat ಅಂತ ಕೂತುಕೊಳ್ಳುವವರು. ನಿನ್ನೆ ನಾನು ಅಫಿಸ್ ಕೆಲ್ಸದ ಮೇಲೆ ಬೇರೆ ಹಳ್ಳಿಗೆ ಹೋಗಿದ್ದೆ. ಬೆಳಿಗ್ಗಿನಿಂದ ಹುಷಾರು ಇರಲಿಲ್ಲ ’ಸು’ ಗೆ. ನನ್ನ ಬಳಿ ಸ್ಕೂಟರ್ ಇದೆ. ನನ್ನದು ಅದರಲ್ಲೆ ತಿರುಗಾಟ. ನನ್ನ ಮಾವನವರಿಗೆ blood cancer. ಆದರೂ ದೇಶದ ಬಗ್ಗೆ ಅಭಿಮಾನ. ಒಂದು ಸಂಘ ಕಟ್ಟಿಕೊಂಡಿದ್ದಾರೆ. ಬೇರೆ ಬೇರೆ ಕಡೆ ಹೋಗಿ ಭಾಷಣ ಎಲ್ಲ ಮಾಡಿ ಬರುತ್ತಾರೆ. ಅಷ್ಟು ಹುಷಾರಿಲ್ಲದಿದ್ದರು ಮೊನ್ನೆ ಶ್ರೀಲಂಕಾ ಗೆ ಹೋಗಿ ಬಂದರು. ನನಗೆ ಅವರನ್ನು ಕಂಡರೆ ತುಂಬ ಅಭಿಮಾನ. ಅವರಿಗೂ ನಾನಂದರೆ ಅಷ್ಟೆ ಪ್ರೀತಿ. ಮತ್ತೆ ನನಗೂ ’ಸು’ ಗೂ ಚಿಕ್ಕಂದಿನಿಂದಲೇ ಪರಿಚಯ. ಆಮೇಲೆ ಎರಡು ಕುಟುಂಬದ ಆಶಯದ ಮೇರೆಗೆ ಮದುವೆ. ಇಬ್ಬರು ಮಕ್ಕಳಲ್ಲಿ ಒಬ್ಬ ಮಗ ಮುಂಬೈ ನಲ್ಲಿ ಕೆಲಸಕ್ಕೆ ಸೇರಿದಾನೆ. ಇನ್ನೊಬ್ಬ ಈಗ ಎಂಟನೆ ತರಗತಿ. ’ಸು’ ಒಂದು ಕಡ್ಡಿ ಅತ್ತಿಂದ ಇತ್ತ ಇಡುತ್ತಿರಲ್ಲಿಲ್ಲ. ಗೊತ್ತು ಸತ್ತವರ ಬಗ್ಗೆ ಕೆಟ್ಟದ್ದು ಮಾತನಾಡಬಾರದು. ಆದರೆ ನಿನಗ್ಯಾಕೆ ಇದನ್ನೆಲ್ಲ ಹೇಳಿತೀನಿ ಅಂದ್ರೆ ಯಾಕೋ ’ಸು’ ಗೆ ನಿಮ್ಮ ಸಂಸ್ಥೆ, ನಿಮ್ಮ ಕೆಲಸದ ಬಗ್ಗೆ ಎಲ್ಲ ತುಂಬ ಅಭಿಮಾನ, ನಿಮ್ಮ ಬಗ್ಗೆ ಮಾತಾಡ್ತಾ ಇದ್ದರು. ನಿಮ್ಮಿಬ್ಬರ chat ಮೆಸೆಜ್ ಕೂಡ ತೋರಿಸ್ತಿದ್ರು. ನೀವು ’ಸು’ ಗೆ ಸೊಪ್ಪು ಹಾಕುತ್ತಿರಲಿಲ್ಲ ಅದೇ ಸಮಾಧಾನ. ಉಳಿದವರ ಹತ್ತಿರ ನನ್ನ ಬಗ್ಗೆ ಎಲ್ಲ ಸುಳ್ಳು ಸುಳ್ಳು ಆರೋಪ. ತಲೆ ಕೆಟ್ಟು ಹೋಗುತ್ತಿತ್ತು. ನಿಮ್ಮ ಒಂದು ಮೆಸೇಜ್ ನನಗೆ ಯಾವತ್ತೂ ಖುಶಿ ಕೊಡುತ್ತಿತ್ತು..ಯವ್ದು ಗೊತ್ತಾ?? ’
'su' how come u r always online? i think u should help your wife a bit. ಹೌದು ಇಡಿ ದಿನ ನಾನು ಕೆಲಸ ಮಾಡಿ ಬಂದಾಗ ಅವರು ಕಂಪ್ಯೂಟರ್ ಅಥವಾ ಟಿವಿ ಮುಂದೆ ಕೂತುಕೊಂಡು ಮನೆಯ ಎದುರಿನ ದೀಪ ಕೂಡ ಹಚ್ಚದೆ ಇರುತ್ತಿದ್ದರಿಂದ ನನಗೂ ಸಿಟ್ಟು ಬರುತ್ತಿತ್ತು . ಆಮೇಲೆ ಅಡುಗೆ ಮಾಡಬೇಕು. ಮಾವನವರಿಗೆ ಪಥ್ಯದ ಅಡುಗೆ. ಮತ್ತೆ ನನ್ನ ಅಡುಗೆಯ ಬಗ್ಗೆ ಕೊಂಕು. ಇದರ ಮಧ್ಯೆ ನಮ್ಮ ಕಂಪನಿ ಬೇರೆ ಲಾಸ್ ನಲ್ಲಿ ನಡ್ದೀತಿದೆ. ನಿನ್ನೆ ಬೆಳಿಗ್ಗೆ ನಾನು ಮನೆಯಿಂದ ಸಾಲದ ಮೊತ್ತ ಹೆಚ್ಚು ಮಾಡಿಸಲು ಬ್ಯಾಂಕ್ ಮ್ಯಾನೆಜರ್ ಭೇಟಿ ಮಾಡಲು ಹೊರಟಾಗ ’ಸು’ ಗೆ ಮೈ ಯಲ್ಲಿ ಹುಷಾರು ಇರಲಿಲ್ಲ. ನನ್ನ ತಮ್ಮನಿಗೆ ಹೇಳಿದ್ದೆ ಅವರನ್ನು ಡಾಕ್ಟರ್ ಬಳಿ ಒಯ್ಯಲು. ಸಂಜೆ ಏನಾದರೂ ಔಷಧ ಬೇಕಾ ಅಂತ ಅವರ ಸೆಲ್ ಹಾಗೂ ಲ್ಯಾಂಡ್ ಲೈನ್ ಎರಡಕ್ಕೂ ಫೋನ್ ಮಾಡಿದಾಗ no response. ನಮ್ಮ ಮನೆ ಪೇಟೆಯಿಂದ ತುಂಬ ದೂರ. (ತುಂಬ grand ಆಗಿದೆ ಅವರ ಮನೆ ಮನೆ ಸುತ್ತಲೂ ಸುಂದರ ಹೂ ದೋಟ). ಮತ್ತೆ ’ಸು’ ಗೇ ಕಿವಿಗೆ earphone ಹಾಕ್ಕೊಂಡು ಹಾಡು ಕೇಳುವ ಅಭ್ಯಾಸ ಇದೆ. ಮನಸ್ಸಲ್ಲೆ ಬೈ ಕೊಳ್ತಾ ಮನೆಗೆ ಹೋದೆ. ಮನೆಯಲ್ಲಿ ಬೆಳಕೇ ಇರಲಿಲ್ಲ. ಯಾಕೋ ಹೆದರಿಕೆ ಆಯ್ತು. ಮನೆ ಸೆಲ್ಫ್ ಲಾಕ್ system ಆದರಿಂದ ಚಿಲ್ಕ ಹಾಕುವ ಅಭ್ಯಾಸ ಇಲ್ಲ. ನನ್ನ ಬೀಗದ ಕೈನಿಂದ ಬಾಗಿಲು ತೆಗೆದು ಲೈಟ್ ಹಾಕ್ದೆ. ’ಸು’ ಅಂದಾಗ ಯಾವುದೇ ಪ್ರತಿಕ್ರಿಯೆ ಯಿಲ್ಲ. ಕಂಪ್ಯೂಟರ್ ಆನ್ ಇತ್ತು ಹಾಗೂ ಅವರು ಕುಡಿತದ ಕುರುಹು ಬಾಟಲಿ ಗ್ಲಾಸ್ ಅಲ್ಲೇ ಟೇಬಲ್ ಮೇಲಿತ್ತು. ಬಹುಶ: ಬೆಳಿಗ್ಗೆ ನಾನು ಮನೆಯಿಂದ ಹೊರ ಹೊರಟ ಕೂಡಲೇ ಕುಡಿಯಲು ಶುರು ಮಾಡಿರಬೇಕು. ಬಾತ್ ರೂಮ್ ಚಿಲಕ ಹಾಕಿತ್ತು. ಬಾಗಿಲು ತುಂಬ ಹೊತ್ತು ಬಡಿದೆ. ಏನು ಪ್ರತಿಕ್ರಿಯೆ ಯಿಲ್ಲ. ಬೇಗ ಹಿಂಭಾಗಕ್ಕೆ ಹೋಗಿ factory ಕೆಲಸದವರಿಗೆ ಹೇಳಿ ಬಂದೆ. ಬಾತ್ ರೂಮ್ ಹೇಗಿತ್ತೆಂದರೆ ಅದಕ್ಕೆ ಕಿಟಕಿ ಇರಲಿಲ್ಲ. ತುಂಬ ಮೇಲಕ್ಕೆ ಒಂದು ventilator ಅಷ್ಟೆ. ಬಾಗಿಲು ಒಡೆದು ಒಳಗೆ ಹೋಗ ಬೇಕಾಯಿತು. ಅವರು ಬಾತ್ ರುಂ ನಲ್ಲೆ massive heart attack ಆಗಿ ಹೋಗಿ ಬಿಟ್ಟಿದ್ದರು. ಡಾಕ್ಟರ್ ಪ್ರಕಾರ ಮಧ್ಯಾಹ್ನ ವೆ ಇದು ಸಂಭವಿಸಿರಬಹುದು ಅಂತ......"I did not feel anything malathi, i did not even cry ಅಂದಾಗ ನನಗೆ ಮೈ ನಡುಕ. 25 ವರ್ಷ ಒಟ್ಟಿಗೆ ಇದ್ದು ಹೀಗೆ ಅಂದಾಗ ಅವರ ಮಧ್ಯ ಸಂಬಂಧ ಎಷ್ಟು ಹಾಳಾಗಿರಬಹುದು??

ನನಗಂತೂ ಎಷ್ಟು ಶಾಕ್ ಆಯಿತು ಎಂದರೆ ಯಾವು ಮಾತೂ ಹೊರಡಲಿಲ್ಲ. ’ಸು’ ಅವರ ತೋಟಗಾರಿಕೆ, ಹಳೆ ಹಿಂದಿ ಹಾಡುಗಳ ಪ್ರೀತಿ, ಅವರು ನನ್ನನ್ನು ಕೆಲವೊಮ್ಮೆ ನಗಿಸುತ್ತಿದ್ದುದ್ದು ಅಷ್ಟು ಮಾತ್ರ ಒಂದು ಸಲ flash ಆಗಿ ಹೋಯಿತು. ಇಬ್ಬರನ್ನೂ judge ಮಾಡಕ್ಕೆ ಹೋಗಲ್ಲ. ಆದರೆ ಸಂಬಂಧಗಳು ಸರಿಪಡಿಸಲಾಗದಷ್ಟು ಕೊಳೆತು ಹೋಗದ ಹಾಗೆ ಇಡಲು ನಾವು ಏನು ಮಾಡಬಹುದು??
ಎರಡು ವರ್ಷಗಳ ನಂತರ ನಿನ್ನೆ ’ಪ್ರ’ ಮೈಲ್ ಬಂದಿತ್ತು. ಅವರ ಕಂಪ್ಯುಟರ್ crash ಆಗಿದ್ದು, ಮೊಬೈಲ್ ಕಳಕೊಂಡಿದ್ದು, ಒಂದು ಹಳೆ ಡೈರಿಯಲ್ಲಿ ನಮೂದಿಸಿದ ನನ್ನ ಇ-ಮೈಲ್ ಸಿಕ್ಕಿದ್ದು ಬರೆದಿದ್ದರು. ಹಿರಿ ಮಗನಿಗೆ ಮಲಯಾಳಿ ಹುಡುಗಿ ಜತೆ ಮದುವೆ, ತೀರ ಇತ್ತೀಚಿಗೆ ಮಾವ ತೀರಿಕೊಂಡಿದ್ದು, ಬಿಸಿನಿಸ್ ಒಂದು steady ರೂಪಕ್ಕೆ ಬಂದಿರುವುದು ಎಲ್ಲ ಬರೆದಿದ್ದರು.ಹಳೇದು ಎಲ್ಲ ಜ್ಝಾಪಕಕ್ಕೆ ಬಂತು, ಹಾಗೆ ಇಲ್ಲಿ ಬ್ಲಾಗಿಸಿದೆ.
(ಅವರಿಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ ವಾದರೂ ಅವರನ್ನು ಕೇಳಿಯೇ ಇಲ್ಲಿ ಬರೆದಿದ್ದೇನೆ)
:-(
(ಅವರಿಗೆ ಕನ್ನಡ ಓದಲು ಬರೆಯಲು ಬರುವುದಿಲ್ಲ ವಾದರೂ ಅವರನ್ನು ಕೇಳಿಯೇ ಇಲ್ಲಿ ಬರೆದಿದ್ದೇನೆ)
:-(
19 comments:
touching. :(
Inthadde anubhava.. aadre svalpa bhinna.. nannondigU aagide Madam. Lekhana onthara anubhava kottitu...!
ಮಾಲ್ತಕ್ಕಾ,
ನಿಮ್ಮದೇನೋ ಮೋಡಿ ಇದೆ. ಎಂತೆಂಥಾ ಅನುಭವಗಳನ್ನ ದಾಖಲಿಸುತ್ತಿದ್ದೀರಿ!! ಈಗ ಬರೆದಿದ್ದಂತೂ ಓದಿ ಮನಸ್ಸು "ಚುಳ್" ಅನ್ನುತ್ತೆ.
"ಆದರೆ ಸಂಬಂಧಗಳು ಸರಿಪಡಿಸಲಾಗದಷ್ಟು ಕೊಳೆತು ಹೋಗದ ಹಾಗೆ ಇಡಲು ನಾವು ಏನು ಮಾಡಬಹುದು??" ಪ್ರತಿದಿನವೂ ಕೇಳಿಕೊಳ್ಳಲೇಬೇಕಾದ ಪ್ರಶ್ನೆ.
ಪ್ರೀತಿಯಿಂದ, ಸಿಂಧು
che!! hegella irutte jeevana alva akka :(
ellarigoo thanks..
@Tejaswini : Sorry!!
@ Suma : houdu. it is scary...
:-(
ms
ಮನಸು ವಿಹಲ್ವವಾಯಿತು. ಸಂಬಂಧಗಳು ಹೆಪ್ಪುಗಟ್ಟಲು ವರ್ಷಗಳೇ ಹಿಡಿದರೂ, ಹದಗೆಡಲು ಕ್ಷಣಗಳೇ ಸಾಕು ಮಾಲತಿಯವರೇ. ನಿಮ್ಮ ನಿರೂಪಣಾ ಪದ್ಧತಿಯು ಸರಳವಾಗಿ ಮನನ ಮಾಡುತ್ತದೆ.
@ ಬದರಿ!!
ಇಲ್ಲ ಸಂಬಂಧ ಹೆಣೆಯಲು ಹದಗೆಡಲು..ಎರಡಕ್ಕೂ ಸಮಯ ಬೇಕು.ಗಂಡ ಹೆಂಡತಿ ಇಬ್ಬರೂ ಅಥವ ಹಿರಿಯರನ್ನು ಎದುರಿಗಿಟ್ಟುಕೊಂಡು (ತಮ್ಮ ತಮ್ಮ ego ಕಳಚಿಟ್ಟು) ಮನಬಿಚ್ಚಿ ಮಾತುಕತೆಯಾಡಿದರೆ ಇದಕ್ಕೆ ಉಪಾಯ ಕಂಡುಕೊಳ್ಳಬೇಕೆಂದು ನನ್ನ ಅನಿಸಿಕೆ. Instead of indulging in the blame game, talking to each other about the problems really helps Badari Bhaiyya!!!!
ನೀವು ಹೇಳಿದ್ದು ನಿಜ
ಮಾಲತಿ ಮೇಡಂ,
ಕೆಲವು ಸಂಬಂಧಗಳೇ ಹಾಗೆ.............
ಎಲ್ಲೆಲ್ಲೋ ಸುತ್ತಿಕೊಂಡು, ಎಲ್ಲೆಲ್ಲೋ ಬಿಡಿಸಿಕೊಂಡು ಕೊನೆಗೊಂದುದಿನ ಇಲ್ಲವಾದಾಗ ಎಲ್ಲಿಂದ ಎಂಬುವುದೇ ಅರಿವಾಗುವುದಿಲ್ಲ
Dear Praveen!!
neevu heLodu sariyaagide!!
still makes me think...25 years ..there would have been a few good memories for her to recall alwaa?? hopefully she might be missing him eega alwaa?? judge maaDallaa androo yaakO idellaa manassige barutte...
ಮಾಲತಿ ಅಕ್ಕ
ಎಂತಾ ಅನುಭವಾಗಿದೆ ನಿಮಗೆ... ಹೀಗೆಲ್ಲಾ ಇರುತ್ತ ಜೀವನ ಎನಿಸಿತು. ೨೫ ವರ್ಷಗಳ ನೆಡಿಗೆ ಸಂಬಂಧಗಳನ್ನ ಬೆಸೆಯಲೇ ಇಲ್ಲವೇ ಎನ್ನಿಸುತ್ತೆ... ನಡುಕ ಖಂಡಿತವಾಗಿಯೂ ಆಗುತ್ತೆ...
Nice article
touching
abba....entha anubhava....
There must always be something about the partner which he/she likes and respects. Years spent together is no indication of a good relationship.
Suguna,Dr. Gurumurthy, Mahesh and Radhika
thanks for the comment
ms
Malthi odhi manassu baravythu.Bareyalu bahaliddaru bareyalaguvudilla.
V
Dear V:
was sincerely hoping u would not read this post. love u. sorry!!:-(
"ಇದಕ್ಕಿಂತ ಮುಂಚಿನ ಪೋಸ್ಟ್ : ’ಸಂಬಂಧಗಳು’ ಓದಿ ಮೂಡ್ ಹಾಳಾಗಿದವರಿಗೆ ಇದು ಸುಮ್ನೆ ಒಂದು ಲೈಟ್ ಪೋಸ್ಟ." ಅಂತ "ತ್ಯಾಂಪಣ್ಣ ಭಂಡಾರಿ ನೋವಿನ ಎಣ್ಣೆ" ಪೋಸ್ಟ್ ನಲ್ಲಿ ಹಾಕಿದ್ರಿ ಆದ್ರೆ ನಾನು ಈ ಪೋಸ್ಟ್ ನಂತರ ನೋಡಿದೆ. ಈಗ ಏನ್ ಮಾಡೋದು :(
ಸಂದೀಪ!!
how about applying tyaaMpaNNa mama's oil? it might make u forget sad/sorry things
;-)
ms
Post a Comment