August 30, 2011

ಉಪವಾಸ ಮೌನ ಹಬ್ಬ

ನಿನ್ನೆ ಇಡೀ ದಿವಸ ಉಪವಾಸ ಮತ್ತು ಮೌನವನ್ನು ಆಚರಿಸಿದೆ. ಯಾಕೋ ಇತ್ತೀಚಿಗೆ ತಿನ್ನುವುದು ಮಾತನಾಡುವುದು ಜಾಸ್ತಿಯಾಗಿದೆ,ಅಂತ  ಇದ್ದಕ್ಕಿದ್ದ ಹಾಗೆ ಅನ್ನಿಸಿ ಬಿಡ್ತು.
ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದ ಕೂಡಲೆ ಯಾವತ್ತಿನ ಹಾಗೆ ಅಭ್ಯಾಸದ ಪ್ರಕಾರ ಟೀ ಮಾಡಿ ಕುಡಿದೆ. ಆ ಮೇಲೆ ಯಾಕೋ ಉಪವಾಸ ಮಾಡುವ  ಅನ್ನಿಸ್ತು ಅದರ ಜತೆ ಮೌನ ಕೂಡ. ಅಗರಬತ್ತಿ ಜತೆ ಬೆಂಕಿಪೊಟ್ಟಣ ಫ್ರೀ ಇದ್ದ ಹಾಗೆ :-)
ಬೆಳಿಗ್ಗೆ ಗೋದಿ ಶ್ಯಾವಿಗೆಯ ಉಪ್ಪಿಟ್ಟು ಮಾಡಿದ್ದೆ. ಘಂ ಅನ್ನುವ ಪರಿಮಳ ನೋಡಿ, ಉಪವಾಸ ನಾಳೆಗೆ postpone ಮಾಡಿದ್ರೆ ಹೇಗೆ ಅನ್ನುಕೊಂಡೆ. ಶ್ರೀಕಾಂತ್ ಅಂತೂ ಬೇಕಂತಲೇ ಮ್ಮ್ಮ್ಮ್ಮ್ಮ್ ಶ್ಯಾವಿಗೆ ಸೂಪರ್. ಸ್ವಲ್ಪ ಟೇಸ್ಟ್ ನೋಡೆ ಅಂತ ಪುಸಲಾಯಿಸ್ತಾ ಇದ್ದರು. ಮಾಲವಿಕ ’ಎಲ್ಲೋ ಶ್ಯಾವಿಗೆ ಸರಿಯಾಗಿಲ್ಲ ಅನ್ನಿಸುತ್ತೆ ಅದಕ್ಕೆ ನಿಂದು ಉಪವಾಸದ ಪ್ಲಾನ್’ ಅಂದುಬಿಟ್ಟಳು.
ನಿಹಾ ’ಅಮ್ಮ ಉಪವಾಸ ಬೇಕಾದ್ರೆ ಮಾಡೆ. ಮೌನವಾಗಿ ಮಾತ್ರ ಇರಬೇಡ’ ಅಂತ ಅತ್ಯಂತ ನಾಟಕೀಯವಾಗಿ ಹೇಳಿದ್ಲು. ಮಾಲು ನಿಹಾ ಬೆಳಿಗ್ಗೆ 6.15 ಕಾಲಿಗೆ ಮನೆ ಬಿಟ್ರೆ ಮನೆಗೆ ಬರೋದೆ ಸಂಜೆ ತೀರ ತಡವಾಗಿ..ಅದರಲ್ಲೆ ಅವಳದ್ದು dialogue ಬಾಜಿ ಬೇರೆ.
ಮಧ್ಯಾಹ್ನ ಅಡಿಗೆ ಮನೆಗೆ ಒಂದು ರೌಂಡ್ ಹೋಗಿ ಏನಾದರು ತಿನ್ನುವ ಮನಸ್ಸಾಯಿತು, ಆದರೆ ಪಾಪ ನಮಗೋಸ್ಕರ 12 ದಿನ ಉಪವಾಸವಿದ್ದ ಅಣ್ಣಾ ಹಜಾರೆಯನ್ನು ನೆನೆಸಿಕೊಂಡು ಸಾಕಷ್ಟು ನಾಚಿಕೆ ಪಟ್ಟೆ. ಒಂದು ತೊಟ್ಟು ನೀರು ಸಹ ಕುಡಿಲಿಲ್ಲ
ಆಫಿಸ್ ನ ಸ್ವಲ್ಪ translation ಕೆಲಸ, ಸ್ವಲ್ಪ chat, ಸುಮಾರು ಎಸ್ ಎಮ್ ಎಸ್, email exchange, ಸ್ವಲ್ಪ ಹೊತ್ತು facebook ನಲ್ಲೆಲ್ಲ ಇಡೀ ದಿನ ಕಳೆದೆ. ಆಹಾ ಹಸಿವೆಯನ್ನು ಹತೋಟಿಯಲ್ಲಿಟ್ಟೆ ಅಂದುಕೊಳ್ಳುವಗಲೇ  ಸಂಜೆ facebook ನಲ್ಲಿರುವ thatskannada page ನಲ್ಲಿ ಬಂದಿರುವಂತಹ ಕಟ್ಟಂಬಲಿ ಪಳಿದ್ಯ ಓದಿ ಅಳು ಒಂದು ಬರುವುದು ಬಾಕಿ.
Kattambali recipe
ಯಾವತ್ತಿನ ಹಾಗೆ ಸಂಜೆ ತಮ್ಮ ಫೋನ್ ಮಾಡ್ದಾಗ ಕಟ್ ಮಾಡಿ ಅವನಿಗೆ ನನ್ನ ಉಪವಾಸ ಮೌನದ ಬಗ್ಗೆ ಎಸ್ ಎಮ್ ಎಸ್ ಮಾಡಿದೆ. ಅದಕ್ಕೆ ಅವನು atleast chat ನಲ್ಲಾದರೂ ಬಾ ಅಂದ. ಆಗ ನಾನು ಕಟ್ಟಂಬಳಿ ಪಳಿದ್ಯ facebook ನಲ್ಲಿ ಓದಿ ’like’ ಮಾಡಿದ್ದು ಹೇಳ್ದೆ. ಅದಕ್ಕೆ ಅವನು ಹೇ...ಉಪವಾಸ ಮಾಡುವವರು ತಿಂಡಿ ಬಗ್ಗೆ ಯೋಚಿಸುವುದು, ಅದನ್ನು 'like' ಮಾಡಿದ್ರೆ, ಅದು ನೀನು ತಿಂದ ಹಾಗೆ ನೆ, ನಿನ್ನ ಉಪವಾಸ flop ಅಂದು ಬಿಟ್ಟ. ಅವನಿಗೊಂದು ಅಣಕಿಸುವ icon ಬಿಟ್ಟು chat ನಿಂದ ಹೊರಗೆ ಬಂದೆ
ರಾತ್ರಿ ವಿವೇಕ ಶಾನಭಾಗ ಅವರ ಸಣ್ಣ ಕಥೆಗಳು- ಹುಲಿ ಸವಾರಿ- ಓದಿ ಹಸಿವೆಯನ್ನು ಮರೆಮಾಚಿದೆ. ಮಾತಾಡದೆ ಇದ್ದದ್ದು ಏನೂ ಹೆಚ್ಚು ಕಷ್ಟ ಅನ್ನಿಸಲಿಲ್ಲ
ಇವತ್ತು ಬೆಳಿಗ್ಗೆ 8.30 ಗಂಟೆಗೆ ನಾನು ಬ್ರೇಕ್ ಫಾಸ್ಟ್ ಮಾಡಿ ಫಾಸ್ಟ್ ನ್ನ ಬ್ರೇಕ್ ಮಾಡ್ತೇನೆ. ಹಸಿವೆ ಆಗಿಲ್ಲ yet.. ನಿಜಕ್ಕೂ ಐ ಯಾಮ್ ಫೀಲಿಂಗ್ ಗುಡ್. ಇನ್ನು ಮುಂದೆ ಇದನ್ನು regular ಆಗಿ ಪಾಲಿಸ್ತೀನಿ. ಮೊದಲು ತಿಂಗಳಿಗೊಮ್ಮೆ, ಆಮೇಲೆ ವಾರಕ್ಕೊಮ್ಮೆ ನಂತರ ಒಂದು ಇಡೀ ವಾರ...will try..
but ಮುಂದಿನ ಸಲ sms, FB, ಮೈಲ್, ಮುಂತಾದ distractions ನಿಂದ ದೂರ ಇರಬೇಕು ಅಥವ ಯಾವುದಾದರೂ ಪ್ರಶಾಂತ ಸ್ಥಳಕ್ಕೆ ಹೋಗಬೇಕು..ನೋಡುವಾ..
ಸುಮ್ನೆ ಹಬ್ಬಕ್ಕಿಂತ ಮೊದಲು ಒಂದು ಸಣ್ಣ ಪೋಸ್ಟ್.  ಹಾಂ ಆದರೆ ಉಪವಾಸ-ಮೌನ ಎಲ್ಲ ನಿಜ. ಈಗ ಟೀ ಕುಡೀತಾ ಇದನ್ನ ಬರೀತಾ ಇದ್ದೇನಿ.
ಇವತ್ತಿನಿಂದ  ಹಬ್ಬದ ಗಡಿಬಿಡಿ ಶುರು. ತೀರ್ಥಹಳ್ಳಿಯ ಮನೆ, ರಸ್ತೆ ಅಗಲೀಕರಣಗೋಸ್ಕರ ಖಾಲಿ ಮಾಡಿದ್ದೇವೆ ಆದ್ದರಿಂದ ಈ ವರ್ಷದಿಂದ ನಮ್ಮಲ್ಲೆ- ಇಲ್ಲಿ ಬೆಂಗಳೂರಿನಲ್ಲಿ ಗಣಪನನ್ನು ಇಡುವುದು ಠರಾವಾಗಿದೆ. ಅಕ್ಕ ಭಯ್ಯನವರಿಗೆ ಇಲ್ಲಿಗೆ ಬರಲು ಆಗುವುದಿಲ್ಲ. 25 ವರ್ಷದಲ್ಲಿ ನಾನೊಬ್ಬಳೆ ಹಬ್ಬ ಮಾಡುವುದು ಸ್ವಲ್ಪ ಬೇಜಾರು. of course ಮಕ್ಕಳು ,ಶ್ರೀಕಾಂತ ಎಲ್ಲ ಸಹಾಯ ಮಾಡುತ್ತಾರೆ. ಆದರೆ ಹಿರಿಯೊಬ್ಬರಿದ್ದರೆ ಧೈರ್ಯ ಅಲ್ಲವಾ? ಹಬ್ಬ ಹೇಗಾಯ್ತು ಮತ್ತು ನಮ್ಮ ಗಣಪ ಹೇಗಿದ್ದ ಅಂತ ಬ್ಲಾಗ್ ನಲ್ಲಿ ಹಾಕ್ತೇನೆ.
ಎಲ್ಲರಿಗೂ ಗೌರಿ-  ಗಣೇಶ ಹಬ್ಬದ ಶುಭಾಶಯಗಳು
:-)

6 comments:

Radhika said...

Your day starts at 4am? I think that speaks of your bubbling energy and interest in everything you do :-). You are strong minded to really put your thought into action. Weren't you feeling tired after this fasting?

nenapina sanchy inda said...

thanks Radhika!!
No. totally charged up. of course felt hungry a little bit. but thought of Anna Hazare and his 12 day fast
:-)
ms

Anonymous said...

Ayyo entha chance mis madkonde. Nange modle gottagidre, innashtu thindigala mail kalsi , phone madi kadsbhahudittalla, che. Malthi inmelinda mouna vratha madokke munche announce madbidippa, namge nim jothe savkasha mathadokke ondhu olle chance sigutte???

Veda

Badarinath Palavalli said...

ಉಪವಾಸದ ಪ್ರಹಸನ ಚೆನ್ನಾಗಿತ್ತು. ನಾನು ಸಣ್ಣಗಾಗಲು ಬಹುಶಃ ಒಂದು ಆರು ತಿಂಗಳಾದರೂ ಬರೀ ನೀರು ಕುಡಿದೇ ಬದುಕಬೇಕೇನೋ? ಆದರೆ, ಮೌನವ್ರತ ಸಾಧ್ಯವೇ ಇಲ್ಲ.

ನಿಮ್ಮ ಕುಟುಂಬದ ಪ್ರವಾಸೀ ಮನಸ್ಸು ನಮ್ಮನ್ನು ಹುರಿದುಂಬಿಸುತ್ತದೆ. ದೂರದ ಊರುಗಳನ್ನು ನೋಡುವ, ಅವುಗಳ ವಿಶೇಷತೆಗನ್ನೂ ಅಲ್ಲಿನ ತಿನಿಸನ್ನೂ ಸವಿಯುವ ಮನಸ್ಸಾಗುತ್ತದೆ. ಅಂದಹಾಗೆ ಮಾಲತಿ ಅವರೇ, ಹೀಗೆ ನಿರಂತರ ಯಾತ್ರಾರ್ಥಿಗಳಾಗಿರಲು ಪ್ರಾಪ್ತಿ ಬೇಕು. ದೇವರು ನಿಮ್ಮನ್ನು ಹೀಗೆಯೇ ಖುಷಿಯಾಗಿ ಇಟ್ಟಿರಲಿ.

ಕಟ್ಟಂಬಳಿ ಪಳಿದ್ಯದ ಬಗ್ಗೆ ನಾನೂ ಓದುತ್ತೇನೆ.

ನಿಮಗೂ, ಶ್ರೀಕಾಂತ್ ಸಾರಿಗೂ ನಿಮ್ಮ ಮಕ್ಕಳಿಗೂ ಹಬ್ಬದ ಶುಭಾಶಯಗಳು.

neelesh said...

TUMBA RASAVATHAGI nimma upavasa mathu adarondige 1+1 aagi bandiruva mouna da bagge baredidira.namma yoga shibirakke banda guruji obbaru omme namage heliddaru daily 1hour one room nalli summane kulithukolli idu nimminda sadhyave akasmath sadyavadalli nimmalli taalme hechuthade antha nimma mouna didna nenapayithu but NEXT ONE WEEK FUL UPAVASA MADABEKU ANISIRUVUDU SWALPA JAASTHI AAYITHENO any way good luck

nenapina sanchy inda said...

@ Veda :-) :-)
@ Badari: thank you
@ Neelesh: but mouna poorthi successful annakkaagollaa. i spent time sms ing and chatting. Silence should let us know our inner workings!!!thanks for reading and commenting!!
:-)
ms