77 ನೇ ಕನ್ನಡ ಸಮ್ಮೇಳನ ಆಯಿತು. ವಿಶ್ವ ಸಂಸ್ಕೃತ ಸಮ್ಮೇಳನ ಕೂಡ. ಈಗ ನೋಡಿ ವಿಶ್ವ ಕನ್ನಡ ಸಮ್ಮೇಳನದ ಸರದಿ.ಕೆಲವು ಚಿತ್ರಗಳು. ಇತ್ತೀಚಿಗೆ ನನ್ನ ಅಮ್ಮ - ಅಪ್ಪ,ಮತ್ತು ಒಬ್ಬ ತಮ್ಮ ಮತ್ತು ಅವನ ಕುಟುಂಬ ಬೆಳಗಾವಿಯಲ್ಲಿ ನೆಲೆಸಿದ್ದಾರೆ. ನಾನು ಅವರಲ್ಲಿ ಹೋಗಲು ಟಿಕೇಟ್ ಬುಕ್ ಮಾಡಿದಾಗ, ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ನನಗೆ ತಲೆಯಲ್ಲಿರಲಿಲ್ಲ. ಯಾಕೋ ಬೆಂಗಳೂರಿನಿಂದ ಬ್ರೇಕ್ ಬೇಕೆನ್ನಿಸಿತ್ತು. ನಾನು ಹೊರಡುವ ಎರಡು ದಿನ ಮುಂಚೆ ಶ್ರೀಕಾಂತ್ ನೆನಪಿಸಿದ್ದರು, ’ಅರೇ ವಿಶ್ವ ಕನ್ನಡ ಸಮ್ಮೇಳನದ ಹೊತ್ತಿಗೆ ಬೆಳಗಾವಿಯಲ್ಲಿರುತ್ತೀಯಾ’ ಅಂತ. ಮಕ್ಕಳಿಗೂ ಹೊರಡುವಂತೆ ಸೂಚಿಸಿದರು. ಆಶ್ಚರ್ಯವೆಂಬಂತೆ ಮಕ್ಕಳು ಹೂಂ ಅಂದ್ರು. ಟಿಕೇಟು ಸಿಗುವ ಬಗ್ಗೆ ನನಗೆ ಅನುಮಾನವಿತ್ತು. ಟಿಕೇಟು ಇದೆ ಅಂದಾಗ ಈಗ ಆಶ್ಚರ್ಯ ಪಡುವ ಸರದಿ ನನ್ನದಾಯಿತು.
ಇನ್ನೂ ಕತ್ತಲೆಯಿರುವಾಗಲೇ ಬೆಳಗಾವಿ ತಲುಪಿದಾಗ ಬೆಳಗಾವಿ ಒಳ್ಳೆ ಮದುಮಗಳ ತರಹ ಸಿಂಗರಿಸಿಕೊಂಡಿದ್ದು ಕಾಣಿಸಿತು. ಎಲ್ಲ ವೃತ್ತಗಳಲ್ಲಿರುವ ಮೂರ್ತಿಗಳು ಲೈಟಿಂಗ್ ನ ಬೆಳಕಲ್ಲಿ ಲಕಲಕನೆ ಹೊಳೆಯುತ್ತಿತ್ತು. ಕೋಟೆಯಂತೂ ವಿದ್ಯುತ್ ನಿಂದ ಕಂಗೊಳಿಸಿ ಮೊದಲ ಬಾರಿಗೆ ತನ್ನ ಇರುವನ್ನು ಸಾರಿತು.
ಈ ಚಿತ್ರವನ್ನು ಗೂಗಲ್ ಇಮೇಜಸ್ ನಿಂದ ಲಪಟಾಯಿಸಿದ್ದು
ಹಲವಾರು ವರುಷಗಳ ಹಿಂದೆ ಕಛೇರಿಯ ಕೆಲಸದ ನಿಮಿತ್ತ ಬೆಳಗಾವಿಯ ಆಸುಪಾಸಿನ ಹಳ್ಳಿಗಳ ಭೇಟಿಯ ಪ್ರಯುಕ್ತ, ನಮ್ಮ ಕಾರಿನ ಚಾಲಕ ನಮಗೆ ಕೋಟೆಯಲ್ಲಿರುವ ದುರ್ಗಾದೇವಿಯ ಹಾಗೂ ಗಣೇಶನ ದೇವಸ್ಥಾನದ ಪರಿಚಯ ಮಾಡಿಸಿದ್ದರು..ಆಮೇಲೂ ಹಲವು ಸಲ ಹೋಗಿದ್ದರೂ ಬೆಳಗಾವಿ ಬಗ್ಗೆ ನನಗೆ ಅಷ್ಟೇನೂ ಕುತೂಹಲ ಬೆಳೆದಿರಲಿಲ್ಲ. ಅಮ್ಮನ ಮನೆಗೆ ಹೋಗಿ ಎರಡು ದಿನ ಇದ್ದು ಬರೋದು ಅಷ್ಟೆ ಇತ್ತು. ಹಳೆಯ ಕಾರಂಜಿಗಳನ್ನೆಲ್ಲ ರೀಪೆರಿ ಮಾಡಿ, ಹೊಳದ ಹೂಳೆತ್ತಿ , ರಸ್ತೆಗಳನ್ನು ಅಗಲ ಮಾಡಿಟ್ಟಿದ್ದರು. ಊರ ಹೊರವಲಯದಲ್ಲಿರುವ ಕೆರೆಯೊಂದಕ್ಕೆ (ಹೆಸರು ತಿಳಿದಿಲ್ಲ) ಸುತ್ತಲೂ ವಿದ್ಯುತ್ ಅಳವಡಿಸಿದರಿಂದ ಯಾಕೋ ಮುಂಬಯಿ ನ ಮರೀನ್ ಡ್ರೈವ್ ನೆನಪಿಸಿತು.it was totally a novel experience!!!ಮತ್ತೂ ಸಂತಸದ ಸಂಗತಿಯೆಂದರೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಮನೆಯ ಹತ್ತಿರದಲ್ಲಿರುವ ಲೇಲೆ ಗ್ರಾಂಡ್ಸ್ ನಲ್ಲಿ ನಡೆದಿದ್ದು. ಅಲ್ಲಿ ನೆರೆದಿರುವ ಜನಸ್ತೋಮ ಕಂಡು ಮೇರೆ ತೋ ಹೋಶ್ ಉಡ್ ಗಯೇ :-)
ಯಾಕೆಂದ್ರೆ ಬೆಳಗಾವಿಯ ಕೆಲವು ಭಾಗಗಳ ಬಗ್ಗೆ ನಮ್ಮ ಮನೆಯಲ್ಲಿ ಇನ್ನೂ ಗೊತ್ತಿಲ್ಲ. ಎರಡೂ ದಿನ ಫ್ರೆಂಡ್ಲೀ ರಿಕ್ಷಾದವರು(ಒಬ್ಬ ಮರಾಠೀ, ಇನ್ನೊಬ್ಬ ಕನ್ನಡಿಗ) ನನಗೆ ನಿಹಾ ಗೆ ಬೆಳಗಾವಿಯ ಮುಖ್ಯ ಸ್ಥಳಗಳನ್ನು ಪರಿಚಯಿಸಿದ್ದು.
ಲಿಂಗರಾಜ ಕಾಲೇಜು ಮೈದಾನದಲ್ಲಿ ಪುಸ್ತಕ ಪ್ರದರ್ಶನ-ಮಾರಾಟ
ನನಗೆ ತುಂಬ ಇಷ್ಟವಾದ ಮಳಿಗೆ
ಗಾಂಧೀಜಿಯವರ ಬದುಕಿನ ಕೆಲವು ಚಿತ್ರಗಳು
ವಸ್ತು ಪ್ರದರ್ಶನ etc.. RPD ಮೈದಾನ
ಇದು ಆಕೃತಿ ಬುಕ್ಸ್ (ಬೆಂಗಳೂರು)ಮಳಿಗೆಯಲ್ಲಿನ ರಶ್
ಖುಶಿಯ ವಿಷಯ ಅಂದ್ರೆ ನನಗೆ ಮಿತ್ರ ವಸುಧೇಂದ್ರರ ಗೋಷ್ಠಿ ಯಲ್ಲಿ ಭಾಗವಹಿಸುವ ಅವಕಾಶ ದೊರೆತಿದ್ದು. ಗೋಷ್ಠಿಯ ಹಿಂದಿನ ದಿನ ನಾನು ಲಿಂಗರಾಜ್ ಕಾಲೇಜಿನ ಮೈದಾನದಲ್ಲಿರುವ ಪುಸ್ತಕ ಪ್ರದರ್ಶನಕ್ಕೆ ಗೆ ಹೋದಾಗ,ಬೆಂಗಳೂರಿನವರಾದ ಗುರುಪ್ರಸಾದ ಅವರ ಆಕೃತಿ ಬುಕ್ಸ್ ಗೆ ಭೇಟಿ ನೀಡಿದ್ದೆ. ವಸುಧೇಂದ್ರ ಅಲ್ಲಿಯೇ ಸಿಕ್ಕಿ, ಆಮಂತ್ರಣ ಕೊಟ್ಟಿದ್ದರು. ಕೆಲವು ಚಿತ್ರಗಳು ನನ್ನ ನಿಹಾರಿಕಾ ನ ಕ್ಯಾಮೆರಾ ಕಣ್ಣಿನಲ್ಲಿ.
ಕುಮಾರ ಗಂಧರ್ವ ಹಾಲ್-ಮಹಿಳಾ ಗೋಷ್ಠಿಗೆ ಸಜ್ಜಾದ ವೇದಿಕೆ
ವಸುಧೇಂದ್ರ ತಮ್ಮ ವಿಚಾರಗಳನ್ನು ಮಂಡಿಸುತ್ತಿರುವುದು -ವಿಷಯ- ಔದ್ಯೋಗಿಕ ಜಗತ್ತು ಮತ್ತು ಮಹಿಳೆ
ವಸುಧೇಂದ್ರ, ಡಾ.ಧರಣಿದೇವಿ ಮಾಲಗತ್ತಿ, ಮಾಜಿ ಸಚಿವೆ ರಾಣಿ ಸತೀಶ, ಸಚಿವೆ ಶೋಭ ಕರಂದ್ಲಾಜೆಯವರು, ಕಮಲಾ ಹಂಪನಾ, ಡಾ. ವಿಜಯ, MLC ಭಾರತಿ ಶೆಟ್ಟಿ, ಡಾ. ಎಂ.ವಿ.ವಸು ಮುಂತಾದವರು, (ಗೋಷ್ಠಿ-ಸಮಕಾಲೀನ ಜಗತ್ತು ಮತ್ತು ಮಹಿಳೆ)
ಹಾಲ್ ನ ಪ್ರವೇಶದ್ವಾರದ ಬಳಿ ರಂಗೋಲಿ
ಶ್ಯಾವಿಗೆಯಲ್ಲಿ ಅರಳಿದ ಗೊಂಬೆಗಳು
ಭಾರತದ, ವಿಶೇಷವಾಗಿ ಕರ್ನಾಟಕದ ,ಮಹಾನ್ ಗಾಯಕರು ರಂಗೋಲಿಯಲ್ಲಿ- ಕಲಾವಿದರ ಹೆಸರಿನ ಫೋಟೊ ಕೂಡ ಇದೆ ಯಾರಿಗಾದರು ಆಸಕ್ತಿ ಇದ್ದಲ್ಲಿ :-)
ಬೆಳಗಾವಿಯಿಂದ ಬಂದಿದ್ದೆ ಲೇಟ್ , ಅದಕ್ಕೆ ಲೇಟ್ ಆಗಿ ವಿಶ್ವ ಕನ್ನಡ ಸಮ್ಮೇಳನದ ಚಿತ್ರಗಳು.
ಪರಿಸರ ಸ್ನೇಹಿ ವಿದ್ಯುತ್ ಬ್ಯಾಟರಿ ಚಾಲಿತ ಸೈಕಲ್ ಪೋಸ್ಟ್ ನಲ್ಲಿ ಅಗತ್ಯಕ್ಕಿಂತ ಹೆಚ್ಚೆ ಆಂಗ್ಲ ಪದಗಳನ್ನು ಬಳಸಿದ್ದಕ್ಕೆ ಶ್ರೀಕಾಂತ್ ಸ್ವಲ್ಪ ಬೈದಿದ್ದರು. ಅದಕ್ಕೆ ಈ ಸಲ ಆದಷ್ಟು ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ. ಏನಂತೀರಾ?
:-)
9 comments:
ಈಗ ವಿಶ್ವ ಕನ್ನಡ ಸಮ್ಮೇಳನದ ಸರದಿ' ಅನ್ನುವ ವರದಿ ಚೆನ್ನಾಗಿದೆ .ವರದಿಯಲ್ಲಿನ ಚಿತ್ರಗಳೂ ಚೆನ್ನಾಗಿದೆ.
ವಿಶ್ವ ಕನ್ನಡ ಸಮ್ಮೇಳನದ ಸರದಿಯ ವರದಿ ಚೆನ್ನಾಗಿ ಮಾಡಿದ್ದೀರ....
ಇನ್ನಷ್ಟು ಅನುಭವ ಬರೆದಿದ್ದರೆ ಚೆನ್ನಾಗಿರುತ್ತಿತ್ತು....
ಬಿಡುವು ಇದ್ದಾಗ ಎರಡನೇ ಭಾಗ ಹಾಕಿ.....
Good one.. You have tried to cover the most of the things. good photography.
Thank you Nitesh!!!
@ Mahesh!!! Actually i did not want to put this post. But i found people visiting my older post on 77th Kannada sammelan and i did not want them confused..adakke. thanks for visiting my blog
@ Nivedita
Did you come to Bgm?? photos by my daughter Niharika
:-)
interest = ಆಸಕ್ತಿ :)
thank you Shreekanth!!!
ಎಷ್ಟು ತಲೆ ಕೆರೆದುಕೊಂಡ್ರೂ interest ಗೆ ಕನ್ನಡ ಪದ ಸಿಕ್ಕಿರಲಿಲ್ಲ. ಈಗ ಬದಲಾಯಿಸಿದೆ. ಧನ್ಯವಾದಗಳು
btw r u my friend Uma Vijayakumar's (koppa) brother??!!
:-)
ms
ಅವಧಿ ಕಳುಹಿಸಿದ್ದ ಪೋಸ್ಟ್ ಗಳಲ್ಲಿ ವಿಶ್ವಕನ್ನಡ ಸಮ್ಮೇಳನದಲ್ಲಿ ವಸುಧೇಂದ್ರ ಅಣ್ಣನವರ ಗೋಷ್ಟಿಯ ಭಾವಚಿತ್ರಗಳು ಇರಿಲಿಲ್ಲ ಅಥವಾ ನಾನೇ ಸರಿಯಾಗಿ ಹುಡುಕಿರಲಿಲ್ಲವೇನೋ ಮೇಡಮ್. ಇವತ್ತು ತಮ್ಮ ನೆನಪಿನ ಸಂಚಿಯಲ್ಲಿ ಮತ್ತಷ್ಟು ಮಹತ್ವದ ಭಾವಚಿತ್ರಗಳನ್ನು ನೋಡಿ ಖುಷಿಯಾಯಿತು. ಬಹಳ ಧನ್ಯವಾದಗಳು ಮೇಡಮ್.
Jai kannada mathe!!Sammelanda varadhi chennagidhe. Rajakaranigala hagu nata natiyara (V)chitragalinda mukthavagiruvudu nimma lekhanada visheha Malathi.
Veda
nice narration
Post a Comment