September 2, 2010

a nano sequel to Sushrutha's poem

ಆಗಸ್ಟ್ ತಿಂಗಳೆಂದರೆ , ಕವಿ ಸುಶ್ರುತ ದೊಡ್ಡೇರಿಯವರಿಗೆ ಹೀಗನ್ನಿಸುತ್ತೆ .
ಮೊದಲು ಓದಿ.

http://hisushrutha.blogspot.com/2010/08/blog-post_30.html

ಆಗಸ್ಟ್ ತಿಂಗಳು ಒಂದು ತರಹ ಗಡಿಬಿಡಿಯಲ್ಲೇ ಮುಗಿಯುತ್ತೆ. ನಮ್ಮ ಕುಟುಂಬದಲ್ಲಿ ಈ ತಿಂಗಳು maximum ಹುಟ್ಟಿದಹಬ್ಬ, ಮತ್ತು ಎರಡು wedding anniversay. ಈ ತಿಂಗಳು ಶ್ರಾವಣ ಮಾಸದ ಚೂಡಿ ಪೂಜೆ, ನಾಗರ ಪಂಚಮಿ, ನೂಲು ಹುಣ್ಣಿಮೆ etc..etc...


ನಮ್ಮ ಆಫೀಸ್ ನಲ್ಲಿ ಕೂಡ ತುಂಬ ಜನರ ಹುಟ್ಟು ಹಬ್ಬಈ ತಿಂಗಳಲ್ಲೆ ಬರುತ್ತದೆ. ಮೊದಲೆಲ್ಲ ಆಫೀಸ್ ನಲ್ಲಿ, ನಾನು ಕೇಕ್ ತಂದು, ಅದನ್ನು cut ಮಾಡುವ ಪರಿಪಾಠ ಪ್ರತಿ ಜನರ ಹುಟ್ಟಿದ ಹಬ್ಬದ ದಿನ ದಂದು ಮಾಡುತ್ತಿದ್ದೆ. ashoka bakery (ರಾಜಾಜಿನಗರ, ನವರಂಗ talkies ಬಳಿ)ಯವನಿಗೆ ರಿಯಾಯತಿ ಕೂಡ ಕೇಳಿದ್ದೆ. ಅವನು ನಕ್ಕು ಬಿಟ್ಟ ವಿನಃ discount ಏನೂ ಕೊಡಲಿಲ್ಲ. ಇತ್ತೀಚಿಗೆ ಕೆಲಸದ ಒತ್ತಡ ಜಾಸ್ತಿ, ಹಾಗೂ ದಿನ ಬಿಟ್ಟು ದಿನ ಕೇಕ್/ಪಫ್ ತಿನ್ನಲು ವಾಕರಿಕೆ. ಆದ್ದರಿಂದ ನನ್ನ ಹೊಸ ಐಡಿಯ ರೂಪು ಗೊಂಡಿತು. ತಿಂಗಳ ಕೊನೆಯಲ್ಲಿ ದೊಡ್ಡ ಕೇಕ್ ತಂದು ಆ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸುವ ಎಲ್ಲರಿಂದ ಕೇಕ್ ಕತ್ತರಿಸುವುದು. ಹಣ ಹಾಗೂ ಸಮಯದ ಉಳಿತಾಯ. ಹೇಗಿದೆ ನನ್ನ ಉಪಾಯ??

************************************

ಈ ಆಗಸ್ಟ್ ನಲ್ಲಿ ಬೇಜಾರಿನ ಸಂಗತಿ, ನಮ್ಮ ಸಂಸ್ಥೆಯ honorary ಬೋರ್ಡ್ member ಶ್ರೀ ಸೋಮಶೇಖರ, (ಫ್ರೊಫೆಸರ್, University of Agricultural Sciences, GKVK,Bangalore)ಐದು ವರ್ಷಗಳ ತರುವಾಯ pancreatic cancer ನ ವಿರುದ್ಧ ಧೈರ್ಯವಾಗಿ ಹೋರಾಡಿ, 19.08.2010 ರಂದು ದೈವಾಧೀನರಾದರು. ಹತ್ತು ವರ್ಷದ ಹಿಂದೆ ನಾವು ಬೆಂಗಳೂರಿಗೆ ಬಂದು ನಮ್ಮ ಸಂಸ್ಥೆಗಳನ್ನು ಸ್ಥಾಪಿಸುವಾಗ ಅವರು ನಮಲ್ಲಿ ಅಪಾರವಾದ ಧೈರ್ಯ/ಸ್ಥೈರ್ಯ ತುಂಬಿದ್ದರು. ಅವರ ಅಗಲಿಕೆ ನಮಗೆ ಖಂಡಿತ ತುಂಬಲಾರದ ನಷ್ಟ.

ಹುಟ್ಟು ಸಾವು two sides of the same coin ಅಲ್ಲವಾ? ಅವರ ಆತ್ಮಕ್ಕೆ ಶಾಂತಿ ಕೋರುತ್ತ...........................

3 comments:

Badarinath Palavalli said...

malathi avare

i will comment on this after reading on a pc

umesh desai said...

good one read sushrutas also
nice to see august has inspired 2 genious minds in different way

i also scribble few lines here and there
plz visit usdesai.blogspot.com
whenever u r free

ಸೀತಾರಾಮ. ಕೆ. / SITARAM.K said...

:-)