August 9, 2010

penny wise pound foolish

ಇವತ್ತು ಪರಿಚಯದೊಬ್ಬರು ಫೋನ್ ಮಾಡಿ ಅವರ ಪರ್ಸ್ ಕಳುವಾಗಿದ್ದನ್ನು ಹೇಳಿದರು.

ಬೆಂಗಳೂರಿಗೆ ಬಂದ ಹೊಸತರಲ್ಲಿ ನನ್ನ ಪರ್ಸ್ ಕೂಡ ಕಳುವಾಗಿತ್ತು. ಅದನ್ನೇ ಹೇಳ ಹೊರಟಿದ್ದೇನೆ.

ಶ್ರೀಕಾಂತ್ and friends ಬ್ಯಾಂಕ್ ಬಿಟ್ಟ ಮೇಲೆ ನಮ್ಮ ಮೊದಲ ಪ್ರಾಜೆಕ್ಟ್ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜತೆ, ಮಹಿಳಾ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರ ನಿರ್ವಹಿಸುವುದಾಗಿತ್ತು.ಅವರದ್ದೆ ಆಫಿಸ್ space ಕೊಟ್ಟಿದ್ದರಿಂದ, ನಾವು ಅದನ್ನು ಉಪಯೋಗಿಸುತ್ತ ಇದ್ವಿ. ತುಂಬಾ ಒಳ್ಳೆ response ಬಂದಿತ್ತು, ಈಗಲೂ ಬರುತ್ತಾ ಇದೆ ಆ cell ನಲ್ಲಿ. ಜಯನಗರದ shopping complex ನಲ್ಲಿ ನಮ್ಮ ಆಫೀಸ್, ಅದ್ದರಿಂದ ಅಲ್ಲೇ ಹತ್ತಿರವಿದ್ದ, ನಮ್ಮ ಸೀನಿಯರ್ ಕಲೀಗ್ ದೇಶಪಾಂಡೆಯವರ ಹೆಂಡತಿ ಕೆಲಸ ಮಾಡ್ತಾ ಇದ್ದ ಸಿಂಡೀಕೇಟ್ ಬ್ಯಾಂಕ್ ನಲ್ಲಿ ನಮ್ಮ ಆಫೀಸ್ ಹಾಗೂ personal ಖಾತೆಗಳನ್ನು ಇಟ್ಟುಕೊಂಡಿದ್ವಿ. ನಮ್ಮ ಇನ್ನೊಂದು ಆಫಿಸ್(cum) ಮನೆ ಇದ್ದದ್ದು ಮಹಾಲಕ್ಷ್ಮಿಪುರಂ ನಲ್ಲಿ. ಹೆಚ್ಚಿನಂಶ ದುಡ್ಡಿನ ವ್ಯವಹಾರ  ಚೆಕ್ ಮೂಲಕ ಮಾಡ್ತಾ ಇದ್ದದ್ದು. ಒಂದು ಸಲ ನಮಗೆ ಇನ್ನೊಂದು ಪ್ರಾಜೆಕ್ಟ್ ಗೆ ತುರ್ತು cash ನ ಅಗತ್ಯ ಕಂಡು ಬಂತು. ಹಾಗಾಗಿ ಜಯನಗರ ಆಫೀಸ್ ನಿಂದ 40000 ಸಾವಿರ ಕ್ಯಾಶ್, ದೇಶಪಾಂಡೆಯವರು, ನನ್ನ ಕೈಲಿ ಕೊಟ್ಟರು. ಅದನ್ನು brown envelope ನಲ್ಲಿ ಪ್ಯಾಕ್ ಮಾಡಿ, staple ಹಚ್ಚಿ ಕೊಟ್ಟರು. ನನ್ನ ಪರ್ಸ್ ನಲ್ಲಿ ಮೊದಲು ಅದನ್ನು ಇಟ್ಟುಕೊಂಡೆ. ನನ್ನ ವ್ಯಾನಿಟಿ ಬ್ಯಾಗ್ ದೊಡ್ಡದಿತ್ತು,ಮತ್ತದರಲ್ಲಿ ಎರಡು ದಪ್ಪನೆಯ ಇಂಗ್ಲೀಷ ಪುಸ್ತಕಗಳಿದ್ದವು. ಯಾಕೋ ಕ್ಯಾಶನ್ನು ಪರ್ಸ್ ನಲ್ಲಿಡುವುದು ಬೇಡ ಅನ್ನಿಸಿ, ಆ envelope ಅನ್ನು ಇಂಗ್ಲೀಶ್ ಪುಸ್ತಕದ ಮಧ್ಯ ಇಟ್ಟುಕೊಂಡೆ. ದೇಶಪಾಂಡೆಯವರು ನನಗೆ, ’ಮಾಲ್ತೀ, ಬಸ್ ನಲ್ಲಿ ಹೋಗೋದು ಬೇಡ, ರಿಕ್ಷಾದಲ್ಲೇ ಹೋಗಿ ಅಂತ ಸೂಚಿಸಿದ್ದರು. ಬಸ್ ಸ್ಟಾಪ್ ನಲ್ಲಿ majestic ಕಡೆ ಹೋಗುವ ಖಾಲಿ ಬಸ್ ಸಿಕ್ತು, ಆದ್ದರಿಂದ ಬಸ್ಸ್ ನಲ್ಲೆ ಹತ್ತಿದೆ. ಆದರೆ majestic ನಿಂದ ಮಹಾಲಕ್ಷ್ಮಿಪುರಂ ಗೆ ಹೋಗುವ ಬಸ್ ನಲ್ಲಿ ತುಂಬಾ ರಶ್. ನಾನು ಹತ್ತಿಕೊಂಡ ಸ್ವಲ್ಪ ಹೊತ್ತಿಗೆ, ಇನ್ನಷ್ಟು ಜನರಿಂದ ಬಸ್ ತುಂಬಿ ಕತ್ತು ಅಲುಗಾಡಿಸಲು ಜಾಗ ಕೂಡ ಇರಲಿಲ್ಲ. ಒಂದು ಹತ್ತು ನಿಮಿಷ ಬಸ್ ಚಲಿಸಿರಬಹುದು, ಆಗಲೇ ನನ್ನ ಬಳಿ ನಿಂತ ಒಂದು ಪುಟ್ಟ ಹುಡುಗಿ ಕಿಟಾರನೆ ಕಿರುಚಿಕೊಂಡಿತು. ನಾನಂತು ಎರಡಿಂಚು ಹಾರಿದೆ ಹೆದರಿ!  ಎಲ್ಲರ ಲಕ್ಷ್ಯ ಅತ್ತ ಹೋದಾಗ, ಯಾರೋ ನನ್ನ ವ್ಯಾನಿಟಿ ಬಾಗ್ ತಡಕಾಡಿದ ಹಾಗಾಯ್ತು. ನಾನಂತು ಕಂಬಿಗೆ ನೇತು ಬಿದ್ದಿದ್ದೆ, jampacked ಆಗಿದ್ದೆ. ತಟ್ಟನೆ ಕ್ಯಾಶ್ ಇರುವ ನೆನಪು ಬಂದು ತುಂಬ ಹೆದರಿಕೆಯಾಯ್ತು. ನಾನು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಪುಸ್ತಕ ಇರುವ ಭಾಗ ನನ್ನ ಪಕ್ಕೆಗೆ ತಾಗುವಂತೆ ಇಟ್ಟ ನೆನಪು. ಸುಜಾತಾ ಥಿಯೇಟರ್ ಸ್ಟಾಪ್ ಬಂದಾಗ ಬಸ್ ಸುಮಾರಿಗೆ ಖಾಲಿಯಾಯ್ತು. ಪರ್ಸ್ ಕಡೆ ನೋಡಿದಾಗ ಒಂದು ಬದಿಯ ಜಿಪ್ ಪೂರ್ತಿ ಓಪನ್ ಆಗಿತ್ತು. ಒಳಗಡೆ ಕೈ ಹಾಕಿ ನೋಡಿದ್ರೆ ಪರ್ಸ್ ಇರಲಿಲ್ಲ. ಕೂಡಲೆ ಈ ಬದಿಯ ಜಿಪ್ ಎಳೆದು ನೋಡಿದೆ, ಕ್ಯಾಶ್ ಇದ್ದ envelope ಸೇಫ್ ಆಗಿತ್ತು. ಕಳವಾಗಿದ ಪರ್ಸ್ ನಲ್ಲಿ ಸ್ವಲ್ಪ ಚಿಲ್ಲರೆ ಹಣ, ಕೆಲವು ಸೇಫ್ಟಿ ಪಿನ್ ಮತ್ತು ಸ್ನೇಹಿತರ ಫೋನ್ ನಂ ಇದ್ದ ಚಿಕ್ಕ ಪುಸ್ತಕ ಮಾತ್ರ ಇತ್ತು. ಬಸ್ ಪಾಸ್ ವ್ಯಾನಿಟಿ ಪರ್ಸ್ ನ ಎದುರುಗಡೆಯ ಚಿಕ್ಕ ಪಾಕೆಟ್ನಲ್ಲಿ ಇದ್ದುದರಿಂದ ಬಚಾವಾದೆ.

2001 ಇಸವಿಯಲ್ಲಿ 40000 ಅಂದರೆ ಏನೂ ಕಡಿಮೆ ಮೊತ್ತ ಆಗಿರಲಿಲ್ಲ.

ಮನೆಗೆ ಬಂದ ಮೇಲೆ ಎಲ್ಲರಿಂದ ಬೈ ಸಿ ಕೊಂಡೆ. ರಾತ್ರಿ ತಮ್ಮ ಫೋನ್ ಮಾಡಿದಾಗ ನನ್ನ ಸಾಹಸ ಹೇಳಿದೆ. ಅವನೂ ಸರಿ ಉಗಿದು, at least now get out of your middle class mentality ಅಂತ ಸೇರಿಸಿದ.

ನನ್ನ ತಂದೆ  ಬ್ಯಾಂಕ್ ನ ಉನ್ನತ ಹುದ್ದೆಯಲ್ಲಿದ್ದರು, ಅವರಿಗೆ ಬೇಗ ಬೇಗ promotions ಎಲ್ಲ ಸಿಕ್ಕಿತ್ತು. ಆದರೆ ತಂದೆಯವರಿಗೆ shares ನಲ್ಲಿ invest ಮಾಡುವ ಗೀಳು ಇತ್ತು. Indian Express ನ ಶೇರ್ಸ್ ನಲ್ಲಿ ತುಂಬ invest ಮಾಡಿದ್ದರು, ಆಗ Indian Express Building ಗೆ ಬೆಂಕಿಹತ್ತಿ, share value ಕುಸಿದು ಅಪ್ಪ ತುಂಬ ಆರ್ಥಿಕ ಪೆಟ್ಟು ಅನುಭವಿಸದ್ದರು (1970). ಆಮೇಲೆ ಹೃದಯದ operation ಆಗಿ, ಅದರ ಔಷಧ ಕೂಡ ದುಬಾರಿಯಾಗಿದ್ದು, ಖರ್ಚು ಜಾಸ್ತಿ ಇತ್ತು. ನಾವು ಮನೆಯಲ್ಲಿ ಒಟ್ಟು 6 ಜನ, ಅಷ್ಟಲ್ಲದೆ, ಯಾವಾಗಲೂ ಊರಿನಿಂದ sight seeing, ಕೆಲಸ ಹುಡುಕಿಕೊಳ್ಳಲು, ಡಾಕ್ಟರಿಗೆ ತೋರಿಸಿಕೊಳ್ಳಲು ಅಂತ ಮನೆಯಲ್ಲಿ ಯಾವಾಗಲೂ ನೆಂಟರು. ತಂದೆ ಅಮ್ಮನಿಗೆ ತಿಂಗಳಿಗೆ ಇಂತಿಷ್ಟು ಅಂತ ಮನೆ ಖರ್ಚಿಗೆ ದುಡ್ಡು ಕೊಡುತ್ತಿದ್ದರು. ತಿಂಗಳ ಕೊನೆಯಲ್ಲಿ ಅಮ್ಮ ತುಂಬ ಹೆಣಗಾಡುತಿದ್ದರು.
ನನ್ನ ಚಿಕ್ಕಪ್ಪನವರ ಮಗಳ ಮದುವೆ ಮುಂಬೈನಲ್ಲೇ ಮಾಡಿದ್ದರು. ಆಗ ಅವರು ಧಾರವಾಡದಲ್ಲಿ ಇದ್ದರು. ಮದುವೆಗೆ 15 ದಿನ ಮುಂಚೆ ಅವರೆಲ್ಲ ನಮ್ಮ ಮನೆಗೆ, ಆಗ ನನ್ನ ಅಮ್ಮ ಅವರ ತವರುಮನೆಯಿಂದ ಬಳುವಳಿಯಾಗಿ ಬಂದಿದ್ದ, ತವರುಮನೆಯ ಏಕೈಕ ನೆನಪಿನ ಕಾಣಿಕೆ, ಕೆಂಪುಕಲ್ಲಿನ necklace ಒಂದನ್ನು ಮಾರಿದ್ದಾಗ ನಾನು ರಾತ್ರಿ ಇಡಿ ದಿಂಬಿನಲ್ಲಿ ಸದ್ದಾಗದೇ ಅತ್ತಿದ್ದು ಇನ್ನೂ ನೆನಪಿದೆ.

ಮುಂಬೈ ನಲ್ಲಿ cost of living ವಿಪರೀತ. ಖರ್ಚನ್ನು ಸರಿದೂಗಿಸಲು ನಾನು ಅಮ್ಮ ಅಂಧೇರಿಯಿಂದ ಮಸ್ಜಿದ್ ಬಂದರಿಗೆ ಹೋಗಿ ಹೋಲ್ ಸೇಲ್ ದರದಲ್ಲಿ ಸಿಗುತ್ತಿದ್ದ ಅಕ್ಕಿ, ಬೇಳೆ ಕಾಳು, ಮೆಣಸು ಇತ್ಯಾದಿ ಹೊತ್ತು ತರುತ್ತಿದ್ದೆವು. ಅಕ್ಕಿ ಹಾಗೂ ತೊಗರಿ ಬೇಳೆ ಸ್ವಲ್ಪ ಜಾಸ್ತಿ, ಅಂದರೆ 25 ಕೆಜಿ order ಮಾಡ್ತಿದ್ವಿ. ನಾವು ಅಡಿಗೆಯಲ್ಲಿ ತೊಗರಿ ಬೇಳೆ ಉಪಯೋಗಿಸುವುದು ಸ್ವಲ್ಪ ಹೆಚ್ಚು. ಅದನ್ನು ಅಂಗಡಿಯ ಮಾರ್ವಾಡಿ ನಮ್ಮ ಮನೆಗೆ ತಲುಪಿಸುತ್ತಿದ್ದ. ಉಳಿದ ಎಲ್ಲ ಸಾಮಾನು ನಾನು ಅಮ್ಮ ಹೊತ್ತು ಕೊಂಡು ತರ್ತಿದ್ದುದು. ಆಗ 11.00 ಗಂಟೆ ಬೆಳಿಗ್ಗೆ (rush hour ಬಿಟ್ಟು) ನಮಗೆ direct ಮಸ್ಜಿದ್ ಗೆ ಹೋಗುವ local fast train ಸಿಗತಿತ್ತು. ಲೇಡಿಸ್ compartment ನಲ್ಲಿ ಕುಳಿತುಕೊಳ್ಳಲು ಜಾಗ ಸಹ ಸಿಗುತ್ತಿತ್ತು. ನಾವು ಚಪಾತಿ ಕಟ್ಟಿಕೊಂಡು ಹೋಗ್ತಿದ್ವಿ. 3.00 ಗಂಟೆಯ ಅಂಧೇರಿ last stop train ಗೇ ವಾಪಸ್ ಆಗುವಾಗ ಚಪಾತಿ ತಿನ್ನುತ್ತಿದ್ದೆವು. ಅಂಧೇರಿ ರೈಲ್ವೆ station ನಿಂದ ಪುನ: ಬಸ್ ನಲ್ಲಿ ಮನೆತನಕ ಬರುತ್ತಿದ್ವಿ. (ತಮ್ಮ ಹೇಳುವ ಪ್ರಕಾರ ಈಗ ಯಾವಾಗಲೂ rush hour ಅಂತೆ, ಮೂರು ಹೊಸ ಟ್ರೈನ್ ಸುರುಮಾಡಿದ್ದರೂ ಸಹ!!)ತುಂಬಾ ಸುಸ್ತಾಗಿರುತಿತ್ತು. ಶನಿವಾರ ಈ ಕೆಲಸ ಇಟ್ಟುಕೊಳ್ಳುತ್ತಿದ್ದೆವು ಯಾಕೆಂದರೆ ಆ ದಿನ ನನಗೆ ಶಾಲೆ 10.00 ಗಂಟೆಗೆ ಮುಗಿಯುತ್ತಿತ್ತು. ಬಿಲ್ಡಿಂಗ್ ಎದುರುಗಡೆ ನೆ ಸ್ಕೂಲ್.
ಸಂಜೆ ಮನೆಗೆ ಬಂದ ನಂತರ ನನಗೆ ಅಮ್ಮನಿಗೆ ಚಹಾ ಮಾಡುವ ಕೆಲಸ ನನ್ನದಾಗಿತ್ತು. ಆ ಮೇಲೆ ತಂದ ಸಾಮಾನನ್ನೆಲ್ಲ ಅದರ ಜಾಗದಲ್ಲಿ ಓರಣವಾಗಿಡುವ ಕೆಲಸ. ನಾನು ನೋಡಲು ಆಗ ಕಡ್ಡಿ ತರಹ ಇದ್ದೆ, ಆದರೂ ತುಂಬ wieghty ಸಾಮಾನುಗಳನ್ನು ಶಕ್ತಿಗಿಂತ ಹೆಚ್ಚು ಯುಕ್ತಿ ಉಪಯೋಗಿಸಿ ಎತ್ತುಕೊಂಡು ತರುತ್ತಿದ್ದೆ.:-) ಕೆಲವು ತುಂಬ ಕಷ್ಟದ ಸಮಯವನ್ನು ಎದುರುಹಾಕಿಕೊಂಡಿದ್ದೇವೆ. 11 ಹಾಗೂ 12 ನೇ ಕ್ಲಾಸ್ (ಇಲ್ಲಿಯ ಪಿ.ಯು.ಸಿ)ನಲ್ಲಿ ನಾನು science ವಿಷಯಗಳನ್ನು ಆಯ್ದು ಕೊಂಡಿದ್ದೆ. ಸ್ಕೂಲಿನ extension ಆಗಿದ್ದರಿಂದ ನಮಗೆ ಆವಗಲೂ uniform ಹಾಕಲಿಕಿತ್ತು. sulphuric acid ಮುಂತಾದವು ಬಿದ್ದು ಕಾಲುಚೀಲಕ್ಕೆಲ್ಲ ತೂತು. ಅದನ್ನು ನಾನು ಅಮ್ಮನಿಗೆ ಗೊತ್ತಾಗದ ಹಾಗೆ ಕಪ್ಪು ದಾರದಿಂದ ಹೋಲಿತಿದ್ದೆ. ಹೊಸ ಕಾಲು ಚೀಲ ಕೇಳಿದ್ದರೆ ಅಮ್ಮ ಇಲ್ಲ ಅಂತಿರಲಿಲ್ಲ, but ಅದಕ್ಕೆ ಏನಾದರೂ sacrifice ಮಾಡಬೇಕಾಗುತಿತ್ತು. ಯಾರಿಗೂ ನಮ್ಮ ತೊಂದರೆ/ಅಡಚಣೆಗಳನ್ನು ತೋರಿಸದೆ ನಗು ಮುಖದಿಂದ ಇರುತಿದ್ದರು ಅಮ್ಮ.

ಊರಿನ ಆಸ್ತಿ ಮಾರಿ ಈಗ ಅಮ್ಮ ಅಪ್ಪ ಆರ್ಥಿಕವಾಗಿ ತುಂಬ ಒಳ್ಳೆಯ ರೀತಿಯಲ್ಲಿದ್ದಾರೆ, ಹಾಗೆ ತಮ್ಮ ತಂಗಿಯರೂ ಕೂಡ. ಈಗಲೂ ಅಪ್ಪ ಶೇರ್ಸ್ ನಲ್ಲಿ invest ಮಾಡ್ತಾರೆ. ನನ್ನ ಚಿಕ್ಕ ತಮ್ಮ, ತನ್ನ ಬಿಸಿನೆಸ್ ಜತೆ, ಅಪ್ಪನ portfolio manage ಮಾಡ್ತಾನೆ.ಆದರೂ growing up stage ನ ಆ ಭಾಗ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ನನ್ನದು ದುಂದು ವೆಚ್ಚ ತೀರ ಕಡಿಮೆ. ಒಬ್ಬಳೆ ಎಲ್ಲಾದರೂ ಹೋಗುವಾಗ ಆದಷ್ಟು ನಾನು ಬಸ್ ನಲ್ಲೆ ಪ್ರಯಾಣಿಸುತ್ತೇನೆ. ಶ್ರೀಕಾಂತ ಹಾಗೂ ಮಕ್ಕಳೊಂದಿಗೆ, ಅಥವಾ ನೆಂಟರು ಬಂದಾಗ ರಿಕ್ಷಾ/taxi ಗೊತ್ತು ಮಾಡಿಕೊಳ್ಳುತ್ತೇನೆ. ಬಟ್ಟೆ ಬರೆ mall ಗಳಿಂದೆಲ್ಲ ಖರೀದಿಸುವುದು ನನಗೆ ಯಾಕೋ waste ಅಂತಲೇ ಅನ್ನಿಸುತ್ತೆ. ನನ್ನ ಮಕ್ಕಳಿಗೆ ನನ್ನ ಸ್ವಭಾವದಿಂದ ಕೆಲವೊಮ್ಮೆ ಇರುಸುಮುರುಸಾಗುತ್ತದೆ. ಆದರೆ ನಾನವರಿಗೆ ’ನೀವೇನು ಬೇಕಾದ್ರು ತೆಗೆದುಕೊಳ್ಳಿ, ನನ್ನ ಜೀವ/ತಲೆ ತಿನ್ನಬೇಡಿ , ನನ್ನನ್ನು ನನ್ನ ಪಾಡಿಗೆ ಬಿಡಿ ಅಂತಲೆ ಹೇಳೋದು.ತಮ್ಮಂದಿರಿಬ್ಬರೂ ನನಗೆ ಕಂಜೂಸ್ ಅಂತಲೇ ಕರೆಯೋದು.
ರಿಕ್ಷಾದ ದುಡ್ಡು ಉಳಿಸಿದ ಹಾಗೆ ಕಂಡರು, ಅದನ್ನು ನಾನು consciously ಹಾಗೆ ಮಾಡಿದ್ದಲ್ಲ, ಅಭ್ಯಾಸಬಲದಿಂದ ಹಾಗೆ ಆಗಿದ್ದು. ಆಫೀಸ್ ದುಡ್ದು ಕಳುವಾಗಿದ್ದರೆ ಅದನ್ನು ನಾನೇ ಕೈನಿಂದ ಹಾಕಬೇಕಿತ್ತು!! ಈ ನನ್ನ ಸ್ವಭಾವವನ್ನು,ನನ್ನ ತಮ್ಮ middle class mentality ಅನ್ನುತ್ತಾನೇನೋ. ಬಹುಶ: ನಾನು spend ಮಾಡೋದು ಪುಸ್ತಕದ ಮೇಲೆ ಅಷ್ಟೆ.

ಇರ್ಲಿ ಬಿಡಿ. ಪರ್ಸ್ ಕಳ್ಳತನದ ಬಗ್ಗೆ ಹೇಳ್ತ ಸ್ವಲ್ಪ track change ಆಯ್ತು. :-)
ಇನ್ನೂ ಎರಡು ಮೂರು ಸಲ  ಆ ದಿನ ಬಸ್ ನಲ್ಲಿದ ಗುಂಪನ್ನು ನೋಡ್ದೆ, ಎಲ್ಲ ಅವರೆ. ಈ ಸಲ ಸ್ವಲ್ಪ different ಕತೆ. ಮಗು ಗಟ್ಟಿಯಾಗಿ ಅರಚಿಕೊಳ್ತು, ಒಂದು ಮುದಿ ಹೆಂಗಸು ಇನ್ನೊಬ್ಬ ಪ್ಯಾಸೆಂಜರ್ ಗೆ ’ಏನಮ್ಮ ಇಷ್ಟು ಹೈ ಹೀಲ್ ಚಪ್ಪಲಿ ನಾ ಹಾಕ್ಕೊಂಡು ಬರೋದು, ಮಗು ಕಾಲು ನೋಡಿ, ಜಜ್ಜಿ ಹೋಗಿದೆ....ಜನರ attention ಆ ಕಡೆ ಹೋದಾಗ ಪರ್ಸ್ ಗಳನ್ನು ಕದಿಯೋದು. ನೋಡಿದ್ರೆ, ಹೈ ಹೀಲ ಹಾಕ್ಕೊಂಡಿದ್ದ ಹೆಂಗಸೂ ಅವರ ಗುಂಪಿನದೇ.....
ಗುಂಪುಗಳ್ಳರು???!!!!!




:-)

malathi S

10 comments:

ಸವಿಗನಸು said...

hitech ಕಳ್ಳತನ ಚೆನ್ನಾಗಿ ಹೇಳಿದ್ದೀರ....
"ತಮ್ಮಂದಿರಿಬ್ಬರೂ ನನಗೆ ಕಂಜೂಸ್ ಅಂತಲೇ ಕರೆಯೋದು" ಆದರೆ ನಾವು ಹಾಗೆ ಹೇಳೊಲ್ಲ.....
ಚೆಂದದ ಬರಹ...

ಮನದಾಳದಿಂದ............ said...

ಮಾಲತಿ ಮೇಡಂ,
ಬೆಂಗಳೂರು, ಮುಂಬೈ ದೆಹಲಿಯಂತಹ ನಗರಗಳಲ್ಲಿ ಹಾಯ್ ಕ್ಲಾಸ್ ಕಳ್ಳರ ದೊಡ್ಡ ಗುಂಪೇ ಇದೆ, ದೆಹಲಿಯಲ್ಲಂತೂ ಮೆಟ್ರೋ ರೈಲಿನಲ್ಲಿ ಇಂತಹ ಹಲವು ಘಟನೆಗಳು ನಡೆತ್ತಲೇ ಇರುತ್ತವೆ.
ಪರ್ಸ್ ಕಳುವಾದ ಕತೆ ಚನ್ನಾಗಿದೆ. ಸಧ್ಯ ಹಣ ಉಳಿದಿತ್ತಲ್ಲ ನಿಮ್ಮ ಬುದ್ಧಿವಂತಿಕೆಯಿಂದ!

ಸೀತಾರಾಮ. ಕೆ. / SITARAM.K said...

Nice experience sharing!
ಕಷ್ಟದಲ್ಲಿ ಬೆಳೆದವರಿಗೆ ಎರ್ರಾಬಿರ್ರಿ ದುಂಡು ಖರ್ಚು ಮಾಡಲು ಆಗುವದಿಲ್ಲ ಅದನ್ನು ಯಾರೇ ಏನೇ ಅಂದರು ಕಾಪಾಡಿಕೊಂಡು ಬನ್ನಿ. :-))))

ಸಾಗರದಾಚೆಯ ಇಂಚರ said...

antoo kallatana ellarigoo ondillondu sala aaguttade allave?

sundaravaagi barediddiraa

ಅನಂತ್ ರಾಜ್ said...

ಹೈಟೆಕ್, ಪ್ರ್ರೊಫೆಷನಲ್ಸ್ ಇವೆಲ್ಲ ಪದಗಳನ್ನು ಕಳ್ಳರಿಗೂ ಉಪಯೋಗಿಸಬೇಕಾದ ನಮ್ಮ ಇ೦ದಿನ ಪರಿಸ್ಥಿತಿಗೆ ವಿಷಾದವೆನಿಸುತ್ತದೆ. ಉತ್ತಮ ನಿರೂಪಣೆ ಮಾಲತಿಯವರೆ.

ಶುಭಾಶಯಗಳು

prabhamani nagaraja said...

ಪರ್ಸ್ ಕಳುವಾದಬಗ್ಗೆ ಬರೆದಿರುವ ನಿಮ್ಮ ಅನುಭವ ತು೦ಬಾ ಚೆನ್ನಾಗಿವೆ. ನನಗೂ ಇ೦ಥಾ ಅನುಭವ ಆಗಿದೆ. ಹಣ ಖರ್ಚು ಮಾಡುವ ಬಗ್ಗೆ ನನ್ನದೂ ಸ್ವಲ್ಪ ಅಲೆದೂ ಸುರಿದೂ ಮಾಡುವ ಜಾಯಮಾನವೇ ಆಗಿತ್ತು. ಈಗ ಬದಲಾಗುತ್ತಿದೆ! ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.

Badarinath Palavalli said...

ಮಾಲತಿ ಅವರೇ,

ಬಸ್ಸುಗಳಲ್ಲಿ ಕಳ್ಳತನವಾದರೇ ಹೇಗಿರುತ್ತದೆ ಎಂಬ ಅನುಭವ ನನಗೂ ಇದೆ. ಕಾಸಿಗೆ ಕಾಸು ಸೇರಿಸಿ ಕೊಂಡಿದ್ದ ಮೊಬೈಲ್ ಯಾವನೋ ಎಗರಿಸಿದ್ದ. ಅದೆಷ್ಟು ಸಿಗರೇಟನ್ನು ಆ ನೋವಿನಲ್ಲಿ ಸುಟ್ಟೆನೋ ಗೊತ್ತಿಲ್ಲ.

ಇನ್ನು ನಿಮ್ಮ ಮುಂಬೈ ಕಥನ ಓದಿದ ಮೇಲೆ, ಹಳೆ ನೆನಪುಗಳನ್ನು ಮೆಲಕು ಹಾಕುವುದರಲ್ಲಿ ಬಲು ಸುಖವಿದೆ ಅಲ್ಲವೇ?

ಥ್ಯಾಂಕ್ಸ್ ಫರ್ ಸೂಪರ್ ಕಾಮೆಂಟ್!

Haldodderi said...

simply superb!

ಜಲನಯನ said...

ಮಾಲತಿ ನಿಮ್ಮ ಕಥೆ ಕೇಳಿ..ನನಗೆ ನನ್ನ ARS ಇಂಟರ್ವ್ಯೂ ಗೆ ಹೋಗುವಾಗ ಟ್ರೈನ್ ನಲ್ಲಿ ಹೀಗೆ ಪರ್ಸ್ ಕಳಕೊಂಡವರಿಗೆ (ನನಗೆ ವಾಶ್ ಬೇಸಿನ್ ಬಳಿ ಸಿಕ್ಕಿದ್ದರಿಂದ) ಕೊಡಲು ಹೋಗಿ..ಪೇಚಾಟಕ್ಕೆ ಸಿಕ್ಕಿಕೊಂಡೆ..ಸದ್ಯ ಕೃಷಿ ವಿ.ವಿ. ನನ್ನ ಸ್ನೇಹಿತರೂ ಜೊತೆಗೆ ಇದ್ದದ್ದರಿಂದ ಬಚಾವಾದೆ ಇಲ್ಲವಾಗಿದ್ರೆ ಧರ್ಮದ ಏಟು...ಅಬ್ಬಬ್ಬಾ...
ಚನ್ನಾಗಿದೆ ನಿಮ್ಮ ಕಥೆ...

Suresh Nayak said...

ನಿಮ್ಮ ಪಾಕಿಟನ್ನು ನಾನೇ ಕದ್ದದ್ದು :-)