July 9, 2010

ತೀರ್ಥಹಳ್ಳಿ unlimited


ತೀರ್ಥಹಳ್ಳಿ ಪೇಟೆಯಿಂದ 5 ಕಿ.ಮಿ ದೂರದ ಹೆನ್ನಂಗಿಯಲ್ಲಿದೆ ನಮ್ಮ್ ತೋಟ. ಮೊನ್ನೆ ಹೋದಾಗ ಮಳೆಯೋ ಮಳೆ. ಹಲಸಿನ ಕಾಯಿ ಚಿಪ್ಸ್, ಕರಿದ ಹಲಸಿನ ಹಪ್ಪಳ, ಉಪ್ಪಿಗೆ ಹಾಕಿದ ಮಾವಿನಕಾಯಿ ಗೊಜ್ಜು,ಕೆಂಪಕ್ಕಿ ಗಂಜಿ, ಚಳಿಗೆ ರಗ್ಗು ಹೊದ್ದು ಕೂತಿದ್ದು.....ಬೆಂಗಳೂರಿನಲ್ಲಿ ನೋಡಿದ್ರೆ, ಹಪ್ಪಳ ಸಂಡಿಗೆ ಒಣಗಿಸುವಷ್ಟು ಬಿಸಿಲು. ಆದ್ರೆ complain ಮಾಡಬಾರ್ದು,,ಯಾಕಂ
ತಂದ್ರೆ ತೀರ್ಥಹಳ್ಳಿಯ ಮಳೆಗೆ ಒದ್ದೆಯಾದ ಬಟ್ಟೆಗಳನ್ನು ಇಲ್ಲಿ ಬಂದು ಒಣಗಿಸಿದೆ. ಕೆಲವು ಚಿತ್ರಗಳಿವೆ ನೋಡಿ...
Sun looking at its reflection mirrored in the tunga river. shot from the bridge

ತೋಟದ ಇನ್ನೊಂದು entrance. ಮಾಲವಿಕ,ಅನ್ನಕ್ಕ (ಶ್ರೀಕಾಂತ್ ಅಕ್ಕ) ಎಂಡ್ ಮಾಲತಿ!!


ಮಿಯಾಂವ್

ಹೊಲವೇ ವಿಸ್ಮಯssssss!!!!!!!!!!!!!!!(with due apologies to Jayanth Kaikiniಯವರಿಗೆ)

ಪೆಟ್ಲು ಕಾಯಿ/ಅರ್ ಲಮರ್ಲ್ ಕಾಯಿ ಗಿಡ ಹೂ ಬಿಟ್ಟದ್ದು. ಲಿಂಬೆಹಣ್ಣಿನ ಜತೆ ಈ ಕಾಯಿ ಹಾಕಿ ಉಪ್ಪಿನಕಾಯಿ ಮಾಡ್ತಾರೆ. ಚೆನ್ನಾಗಿರುತ್ತೆ.ಒಳ್ಳೆ ಔಷಧೀಯ ಗುಣವುಳ್ಳದ್ದು


ಮೂರು ದಿನದ ಮಳೆಗೆ ಕೆರೆ ತುಂಬಿದ್ದು



ಹಾದಿಗುಂಟ

ಮಳೆಯು ನಿಂತ ಮೇಲೆ ಹನಿಯೊಂದು ಮೂಡಿದೆ..ಹೂವಿನ ಮೇಲೆ

ಮಾಲು checkingout ಶ್ರೀಗಂಧದ (sandalwood)ಮರ. ಬಿದಿರಿನ ಎಡೆಯಲ್ಲಿದೆ ಈ ಮರ

ಪೇಟೆಯಲ್ಲಿ pot ನಲ್ಲಿ ಬೆಳೆದು, ಟೈಮ್ ಟೈಮಿಗೆ ನೀರು ಹಾಕಿ ನಾವು ಮುಚ್ಚಟೆಯಿಂದ ಬೆಳೆಸುವ fern , ಇಲ್ಲಿ ತನ್ನಷ್ಟಕ್ಕೆ ಚಿಗುರಿದೆ. ಬಿಂದಾಸ್....

ಮುಂದೆ ಈ ಬಂಡೆಕಲ್ಲು ಇರುವ ಪ್ರದೇಶದಲ್ಲಿ ನಮ್ಮ cultural function/ family Annual get-together ಗಳು.

Bamboo

ಬಂಡೆ ಕೊರೆದ (blast ಮಾಡಿ ಇದನ್ನು ತೆಗೆಯಲಾಗುತ್ತದೆfor construction purpose)  ಜಾಗದಲ್ಲಿ ತುಂಬಿದ ಮಳೆ ನೀರು. ಒಳ್ಳೆ ಹಿಮಾಲಯದ ವಾತಾವರಣ ತರಹ ಕಾಣುತ್ತಿದೆ
ಇರುವೆಯ ಸಾಲು. ಸರಿ ಕಚ್ಚಿಸಿಕೊಂಡ್ವಿ ಎಲ್ಲರೂ ಆ ಮೇಲೆ michael jackson ಡ್ಯಾನ್ಸು!!

ಕವಲು?? ದಾರಿ!! ಎಸ್.ಎಲ್.ಭೈರಪ್ಪ ನವರ ನವೀನ ಕಾದಂಬರಿ ಅಲ್ಲ :-)


ಚಕ್ಕಲಿ ಹುಳು, ಮುಟ್ಟಿದರೆ ಚಕ್ಕುಲಿ ತರ ಮುರುಟಿಕೊಳ್ಳುತ್ತೆ

ಔಷಧೀಯ ಸಸ್ಯಗಳು


double ದಾಸವಾಳ. ಬಣ್ಣ ನೋಡಿ ಅಬ್ಬಲಿಗೆ ಹೂ ತರಹ!!


ಹೂವು-ಹಣ್ಣು. seedless ನಿಂಬೆ. 



ಪುನರ್ ನಿರ್ಮಾಣಗೊಂಡ ನಾಗದೇವನ ಗುಡಿ, ಹಳೇ ನಾಗಬನಾನೇ ನನಗೆ ಇಷ್ಟವಾಗಿತ್ತಪ್ಪ. (ಹಳೆ post ನಲ್ಲಿದೆ ಆವಾಗಿನ ಚಿತ್ರ) :-(

ಕೀಟ unknown..ಕಾಣಿಸುತ್ತ???

Lemongrass- ಮಜ್ಜಿಗೆಹುಲ್ಲು??? is that right? ಮಳೆಗಾಲದಲ್ಲಿ ಇದರ ಕಷಾಯ-the best!!


ದೂರದ ಬೆಟ್ಟ ನುಣ್ಣಗೆ.......ಸಣ್ಣಗೆ, ಆನಂದಗಿರಿ ಬೆಟ್ಟ

ಇನ್ನೊಂದು ಕೆರೆ

ನಮ್ಮ ತೋಟದ ರಕ್ಷಕ ದೈವದ ಗುಡಿ

ತಾವರೆ ಕೆರೆ


ತಾವರೆ.lotus pond


ಯಾಕೋ ನನ್ನ ನೋಡಿ ಹೆದರಿದ ಹಸು
ಆಮೇಲೆ ನಾಗಾಲೋಟ(?)ದಿಂದ ಓಡಿ, ಆ ಮೊಪೆಡ್ ನ ಬೀಳಿಸ್ತು! 
:-)

15 comments:

ಸಾಗರದಾಚೆಯ ಇಂಚರ said...

ತುಂಬಾ ಸುಂದರ ಚಿತ್ರಗಳು
ಅಲ್ಲಿಗೆ ಹೋಗಿ ಬಂದಂತೆ ಆಯಿತು

Raghu said...

ಮೇಡಂ..ಫೋಟೋಸ್ ಎಲ್ಲಾ ಚೆನ್ನಾಗಿದೆ. ವಿಶೇಷವಾಗಿ ಬೆಕ್ಕಿನ ಮರಿಗಳ ಫೋಟೋ.
ನಿಮ್ಮವ,
ರಾಘು.

Sushrutha Dodderi said...

ಸುಳ್ಳೇ.. ಮೊಪೆಡ್ ಬೀಳಿಸ್ಲಿಲ್ಲ ಏನಿಲ್ಲ.. ಪಾಪದ್ ದನ ಅದು.. ಬೀಳ್ಸಿದ್ರೆ ಅದ್ರ ಫೋಟೋ ತಿಗೀದೆ ಬಿಡ್ತಿದ್ರಾ ನೀವು?

Badarinath Palavalli said...

Malathi avare,

Good photos kanri. Thota chennagidhe...

ಸವಿಗನಸು said...

ಸುಂದರ ಚಿತ್ರಗಳು...
ಒಳ್ಳೆ ಪರಿಸರ...
ತೋರಿಸಿದ್ದಕ್ಕೆ ಧನ್ಯವಾದಗಳು....

ಮನಸು said...

ವಾಹೇ..!! ಎಷ್ಟು ಚೆನ್ನಾಗಿದೆ ಊರು...ಕುಶಿಯಾಯಿತು ನೋಡಿ...ಹಾಗೆ ತಿಳಿಯಿತು ಅದು ಕವಲುದಾರಿ ಎಂದು ಎಸ್.ಎಲ್.ಭೈರಪ್ಪರ ಕವಲು ಪುಸ್ತಕವಲ್ಲವೆಂದು ಹಹಹ..... ನಾವೇ ಊರಿಗೆ ಹೋಗಿಬಂದ ಹಾಗಾಯಿತು

ದೀಪಸ್ಮಿತಾ said...

ಚಿತ್ರಗಳು ತುಂಬ ಚೆನ್ನಾಗಿವೆ

ಸುಮ said...

nice akka...nangu urige hogi bandante aytu

M@he$h said...

olle lekhana .... first 5 lines odta idre,, bayalli neer barutte ...

*********************************
http://bhuminavilu.blogspot.com/
*********************************

ಸೀತಾರಾಮ. ಕೆ. / SITARAM.K said...

ವ್ಯವಸ್ಥಿತವಾಗಿ ಜೋಡಿಸಿದ ಸು೦ದರ ಚಿತ್ರಗಳನ್ನು ನೋಡಿ ಹಾಗೂ ಅದರಡಿಯ ವಿಶಿಷ್ಟ ಲವಲವಿಕೆಯ ಮಾಹಿತಿ ಶೀರ್ಷಿಕೆಯನ್ನೋದಿ ನಿಮ್ಮೂರನ್ನು ತಿರುಗಾಡಿ ನೋಡಿದಷ್ಟು ಸಂತೋಷವಾಯಿತು. ಚೆಂದದ ಚಿತ್ರ ಲೇಖನ.

ಮನದಾಳದಿಂದ............ said...

ಮಾಲತಿ ಮೇಡಂ,
ಕಳೆದವರ್ಷ ಮಳೆಗಾಲದ ಮೂರು ತಿಂಗಳು ಊರಿನಲ್ಲಿದ್ದೆ. ಬೇಸಾಯದ ಪೂರ್ಣ ಕೆಲಸ ನಂದೇ! ನಾಟಿ, ತೋಟದ ಔಷದಿ, ಕೊಟ್ಟಿಗೆಗೆ ಸೊಪ್ಪು ಇತ್ಯಾದಿ ಇತ್ಯಾದಿ......
ಈಗ ಮನೆಯ ತುಂಬಾ ನೆನಪಾಗ್ತಾ ಇದ್ದು ನಿಮ್ಮ ಲೇಖನ, ಚಿತ್ರಗಳನ್ನು ನೋಡಿದ ನಂತರವಂತೂ ಈಗಲೇ ಓಡಿಹೋಗೋಣ ಅನ್ನಿಸ್ತಿದೆ!

ನನ್ನ ಬ್ಲಾಗಿಗೊಮ್ಮೆ ಬನ್ನಿ, ನಮ್ಮೊರ ಮಳೆಯ ಬಗ್ಗೆ ಬರೆದಿದ್ದೇನೆ!

ವನಿತಾ / Vanitha said...

nice photo and captions:)) thumbaa late aagi bande..

Ittigecement said...

ತುಂಬಾ ಸುಂದರವಾಗಿದೆ ನಿಮ್ಮೂರು...

ಜಲನಯನ said...

ಮಾಲತಿಯವರು ಬಹಳ ಅಪರೂಪವಾಗಿ (ನಮ್ಮಲ್ಲಿ ಬರುವುದೂ ಸಹಾ) ನೈಜ ಚಿತ್ರಣದ ಪ್ರವಾಸ ಕಥನ ..ಚನ್ನಾಗಿದೆ.. ಆದ್ರೆ....ಫೋಟೋದಲ್ಲಿ ಕಡೆಯಲ್ಲಿ...ಮಿಯಾವ್...ಮತ್ತೆ ಕೆಳಗಡೆ ಮಾಲ-T ಇರ್ಬೇಕಿತ್ತು....ಹಹಹ

ಅನಂತ್ ರಾಜ್ said...

ಪ್ರವಾಸ ಕಥನ(ಚಿತ್ರಣ) ಮನ ಮುಟ್ಟುವ೦ತಿದೆ.

ಶುಭಾಶಯಗಳು
ಅನ೦ತ್