ನೆನಪಿನ ಅಂಗಳದಿಂದ...6 ತಿಂಗಳು ಕಳೆದು ಹೋದವು. ತುಂಬಾ ತುಂಬಾ regretful ಫೀಲಿಂಗ್...Hoping you are in peace Srikanth 😭😭❤️
recall ಮಾಡಲು ಕೆಲವು ಚಿತ್ರಗಳು..
ನಮ್ಮ ಕೊನೆಯ ಪಯಣ sharavati backwatersಮದುವೆಯ anniversary
ಈ ತರಹ ಒಂದು ಗುಡಲು ಕಟ್ಟುವ ಕನಸು ನನಸಾಗದೆ ಉಳಿದುಬಿಟ್ಟಿತು 😏😏
ನೆನಪಿನ ಅಂಗಳದಿಂದ...6 ತಿಂಗಳು ಕಳೆದು ಹೋದವು. ತುಂಬಾ ತುಂಬಾ regretful ಫೀಲಿಂಗ್...Hoping you are in peace Srikanth 😭😭❤️
recall ಮಾಡಲು ಕೆಲವು ಚಿತ್ರಗಳು..
ನಮ್ಮ ಕೊನೆಯ ಪಯಣ sharavati backwatersso, ನಿಹಾ 'ಅಮ್ಮ, investment ಅಂತ ಬಂಗಾರ ತೆಗೋಳ್ತೇನೆ ಅಂದ್ಲು. ನಾನೂ excite ಆಗಿ ಹೂಂ ಕಣೆ, ಅಂದೆ. ಆದರೆ ನನಗೂ ಮಕ್ಕಳಿಗೂ ಬಂಗಾರದ ಖರೀದಿಯ ಬಗ್ಗೆ ಏನೂ ಅಂದ್ರೆ ಏನೂ ಗೊತ್ತಿಲ್ಲ. ಮದುವೆಯ ನಂತರ ಅಂದ್ರೆ ಈ 38 ವರ್ಷಗಳಲ್ಲಿ ಎರಡೇ ಸಲ ಬಂಗಾರ ಖರೀದಿ ಮಾಡಿದ್ದು. ಎರಡೂ ಸಲ ಅಮ್ಮ ಇದ್ರು...ನಾನು ತಲೆ ಕೆಡಿಸಿಕೊಂಡಿರಲಿಲ್ಲ. ನನ್ನ ತಮ್ಮನಿಗೆ ಮೆಸೇಜ್ ಮಾಡಿದೆ. ಅವನು ಇದರಲ್ಲಿ ನಿಸ್ಸೀಮ. ಅವನು ಏನು ಕೇಳ ಬೇಕು, ಎಲ್ಲಿ ಚೌಕಾಸಿ ಮಾಡಬೇಕು ಅಂತೆಲ್ಲ ಮೆಸೇಜ್ ಕಳಿಸಿದ... ನಾವು ಬೆಪ್ಪು ತಕ್ಕಡಿಗಳು ಹೋಗಿ ಬಂಗಾರ ಖರೀದಿ ಮಾಡಿದೆವು...ಅವರು ಬಿಲ್ ಮಾಡುವಾಗ ಕೌಂಟರ್ ನಲ್ಲಿ ನಮಗೆ ಸಹಾಯ ಮಾಡುತ್ತಿರುವ ಹುಡುಗಿ ಮಾಲವಿಕಾಳಿಗೆ ಕೆಲವಾರು scheme ಬಗ್ಗೆ ಹೇಳುತ್ತಿದ್ದಳು.
ನಾನು ಆರನೇ ಕ್ಲಾಸ್ ಓದುತ್ತಿದ್ದಾಗ ಅಮ್ಮ , ಬಂಗಾರದ ಅಂಗಡಿಯಲ್ಲಿ ಇಂತಹದೊಂದು scheme ಗೆ ದುಡ್ಡು ಹಾಕಿದ್ದು...ಮಕ್ಕಳಿಗೆ guess what amma purchased with this scheme, ಅಂದ್ರೆ obviously gold ಅಂದ್ರು...ಅಲ್ಲ ಸ್ಟೀಲ್ ಪ್ಲೇಟ್ s ಅಂದೇ. 😁. ನಾನು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿರಲ್ಲಿ. ಅಜ್ಜನ ಮನೆಯಲ್ಲಿ ಕಂಚು, ಮಣ್ಣಿನ ಪಾತ್ರೆಗಳು... ಅಮ್ಮನ ಮನೆಯಲ್ಲಿ ಸ್ಟೀಲ್ ಲೋಟಗಳಿದ್ರೂ ತಿಂಡಿಗೆ ಮಾತ್ರ ಹಿಂಡಾಲಿಯಂ ತಟ್ಟೆ. ನೆಂಟರು ಬಂದಾಗ ಅದರಲ್ಲಿ ತಿಂಡಿ ಬಡಿಸುವುದು ಮಾತ್ರ ನನಗೆ ಮುಜುಗರದ ವಿಷಯ. ಅಮ್ಮನಿಗೆ ಹೇಳಿದಾಗ ಅಮ್ಮನಿಗೆ ಸಿಟ್ಟು ಆಶ್ಚರ್ಯ ಒಟ್ಟಿಗೆ ಆದವು. ಬಂಗಾರದ ಅಂಗಡಿಯಲ್ಲಿ ಪ್ರತಿ ತಿಂಗಳು 10 ರೂ ಕಟ್ಟಬೇಕು. 10 ತಿಂಗಳ ನಂತರ ಬಂಗಾರ ಅಥವಾ ಅಲ್ಲಿ display ನಲ್ಲಿರುವ ಯಾವುದೇ ಐಟಂ ತೆಗೋ ಬಹುದಿತ್ತು. ಹಾಲು ಕಾಯಿಸುವ ಮಿಲ್ಕ್ ಕುಕ್ಕರ್ , ಗಾಜಿನ ಟೀ ಸೆಟ್, ಸ್ಟೀಲ್ ಲೋಟ, ತಟ್ಟೆ ಮುಂತಾದವು. ಅದರಲ್ಲಿ ನವಿಲಿನ ಉಬ್ಬು ಕೆತ್ತನೆ ಇರುವ ಒಂದು ಡಜನ್ ಸ್ಟೀಲ್ ಪ್ಲೇಟ್ ಕೂಡ ಇದ್ದವು. ಒಂದು ಹತ್ತು ರೂ extra ಕೊಟ್ಟರೆ ಅದು ಖರೀದಿಸ ಬಹುದಿತ್ತು. ನನ್ನ ಮುಖ ನೋಡುತ್ತಾ ಅಮ್ಮ ಅದನ್ನೇ ಕೊಂಡರು..
ಇಷ್ಟೆಲ್ಲ ವಿಷಯ ಯಾಕಂದ್ರೆ ವಸುಧೇಂದ್ರರ 'ಸ್ಟೀಲ್ ಪಾತ್ರೆಗಳು' ಪ್ರಬಂಧದ ಬಗ್ಗೆ ಮಾತುಕತೆ.........👇👇
ಮೊನ್ನೆ ಭಾನುವಾರ ಹಲವು ದಿನಗಳ ನಂತರ ಒಂದು ಕಾರ್ಯಕ್ರಮ attend ಮಾಡಿದೆ. ವಸುಧೇಂದ್ರ ರ ಪುಸ್ತಕ 'ನಮ್ಮಮ್ಮಅಂದ್ರೆ ನಮಗಿಷ್ಟ' ಪುಸ್ತಕದ ಆಂಗ್ಲ ಅನುವಾದದ book talk . ಮಾಲವಿಕ register ಮಾಡಿದ್ದಳು.ಅದರ venue 'ಬೇಕು' ಬಗ್ಗೆ ಕೂಡ ಕುತೂಹಲವಿತ್ತು.
. cozy, ಚೆನ್ನಾಗಿತ್ತು ಕಾರ್ಯಕ್ರಮ. ಮನಸ್ಸಿಗೆ ಹಿತವಾಯ್ತು. ನಗು ಮಾತು, ಗಮ್ಮತ್ತು, ಹಾಡು etc...🙂 ಸಮಯ ಸರಿದಿದ್ದೇ ತಿಳಿಯಲಿಲ್ಲ.
ಮಳೆ ಇದ್ದ ಕಾರಣ ನಾವು ಬೆರಳೆಣಿಕೆಯಷ್ಟು ಜನ ಮಾತ್ರ ಇದ್ದೆವು. ಸಭಿಕರಲ್ಲಿ ಒಬ್ಬರು ಕಾರ್ಯಕ್ರಮದ recording ಮಾಡಿದ್ದಾರೆ. ವಸುಧೇಂದ್ರ ಅವರು ಅದನ್ನು ಶೇರ್ ಮಾಡಬಹುದು. ನಾನು ಕೆಲವು ಚಿತ್ರ ತೆಗೆದೆ...🙂
ಅವರ ಜತೆ ಒಂದು ಚಿತ್ರ ನಿಹಾ ಕ್ಲಿಕ್ಸ್. ಅಭಿಮಾನಿ ಗಳ ಮಧ್ಯದಲ್ಲಿ ಹೋಗಿ ನಾನೇ ಕೇಳಿ ಚಿತ್ರ ತೆಗಿದಿದ್ದು 🙂🙏'ಬೇಕು' ನಡೆಸುತ್ತಿರುವುದು ಒಬ್ಬಳು ಯುವ ಉದ್ಯಮಿ. ಗ್ರಾಹಕರಿಂದ ತು0ಬಿ ತುಳುಕುತ್ತಿತ್ತು. ಒಂದು TOUCHWOOD ಹಾರೈಸಿದೆ. ಈ ತರಹ enterprise ನೋಡಿದ್ರೆ ಮನಸ್ಸಿಗೆ ಹಿತವಾಗುತ್ತೆ. ❤️❤️
ನಮ್ಮ ಮನೆಯ ಬಳಿಯ ನಾನು ವಾಕ್ ಹೋಗುವ ಪಾರ್ಕ್ ನಲ್ಲಿ ಮೂರು ನೇರಳೆ ಹಣ್ಣಿನ ಮರಗಳಿವೆ. ದೊಡ್ಡ, ಸಣ್ಣ ಗಾತ್ರದ ನೇರಳೆ ಹಣ್ಣು. ಹಣ್ಣಾಗಿ ನೆಲದ ಮೇಲೆ ಬಿದ್ದಿರ್ತವೆ. ನಮ್ಮ flat ಎದುರುಗಡೆ ದೊಡ್ಡ ನೇರಳೆ ಹಣ್ಣಿನ ಮರ, ಅದು ಜೂನ್-ಜುಲೈ ನಲ್ಲಿ ಹಣ್ಣು ಆಗ್ತವೆ. ಈಗೀಗ diabetes ಗೆ ಒಳ್ಳೇದು ಅಂತ ಸಿಕ್ಕಾ ಪತ್ತೆ ದುಬಾರಿ. ಇವತ್ತು ದೋಸೆ.ಹುಯ್ತಾ ಮಧ್ಯದಲ್ಲಿ ಇದರದ್ದೊಂದು ಫೋಟೋ ಶೂಟ್ ಮಾಡಿದೆ. ನಿಹಾಗೆ breakfast ಜತೆ ಇವತ್ತು ಜಾಮೂನು ಜ್ಯುಸ್ shot. ಗಾಜಿನ ಗ್ಲಾಸ್ ನ rim ಗೆ ಸ್ವಲ್ಪ ಉಪ್ಪು ಮತ್ತು ಖಾರದ ಪುಡಿ..ಜ್ಯುಸ್ ನಲ್ಲಿ ಸ್ವಲ್ಪ ಕಾಲಾ ನಮಕ್, ಮನೆಯಲ್ಲಿ ಬೆಳೆಸಿದ ಪುದಿನಾ....🙂👍🙏
ಸ್ವಲ್ಪ ಹೆಚ್ಛೆ ಕೆಲಸ ಆಗುತ್ತೆ ಜ್ಯುಸ್ ಮಾಡಲು ಆದರೆ ನನಗೆ ನೇರಳೆ, ದಾಳಿಂಬೆ ಹಣ್ಣಿನ ಜ್ಯುಸ್ ಮಾಡಲು ತುಂಬಾ ಖುಷಿ..🤔
ಹೊರ ದೇಶದಲ್ಲಿರುವ ತಂಗಿಯ ಜತೆ ಮಾತು ಕತೆ ಮುಗಿಸಿ, ರಾಕಿಂಗ್ ಚೆಯರ್ ಮೇಲೆ ತೂಗುತ್ತ, ಆಫಿಸ್ ಗೆ ಹೋಗಲು ತಯಾರಾಗುತ್ತ ಅಲ್ಲೇ ಕನ್ನಡಿ ಎದುರು ನಿಂತು,ತಲೆ ಎತ್ತಿ, ಮೂಗು ಅರಳಿಸಿ, ಮೂಗಿನ ಹೊಳ್ಳೆಯಲ್ಲಿನ ಕೂದಲನ್ನು ಕಟ್ ಮಾಡುತ್ತಿದ ಗಂಡನ ಕಡೆ ನೋಡುತ್ತಾ 'ಹೇ ಕುಮಾರ್, ಯು ಆರ್ 62, ಇಟ್ ಇಸ್ ಹೈ ಟೈಮ್ ಯು ರಿಟಯರ್ಡ್ ಅಂದ್ಲು ಹೇಮಾ.
ತಕ್ಷಣ ಅವಳ ಕಡೆ ಜಿಗುಪ್ಸೆಯಿಂದ ನೋಡಿ....ನಿವೃತ್ತಿ ಆದರೆ ನಿನ್ನನ್ನು ಸಾಕೋದು ಹೇಗೆ ಅಂದಾಗ ಹೇಮಾಗೆ ಶಾಕ್. ಒಂದು ಕ್ಷಣ ಮೈ ಎಲ್ಲ ತಣ್ಣಗಾಗಿ, ಬಿಸಿಯಾಯ್ತು. ಪುನಃ ಅವಳ ಕಡೆ ನೋಡುತ್ತಾ.. ರಿಟೈರ್ ಆಗಿ ಏನು ಮಾಡಲಿ ಅಂದ್ರು ತುಸು ಮೆತ್ತಗಿನ ದನಿಯಲ್ಲಿ.
ಸ್ವಲ್ಪ ಸಮಯ ಅಲೋಪತಿ ಔಷಧಿ ಜತೆ ಆಯುರ್ವೇದ ಔಷಧಿ ಕೂಡ ತೆಗೋತಾ ಇದ್ರು ಶ್ರೀಕಾಂತ್. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಇತ್ತೆಂದು ನನ್ನ ಅನಿಸಿಕೆ.
ಒಮ್ಮೆ ಒಂದು ದೊಡ್ಡ ಆಸ್ಪತ್ರೆಗೆ ಹೋದ್ವಿ, ಲೀವರ್ transplant ಬಗ್ಗೆ ಸೆಕೆಂಫ್ opinion ತೆಗೊಳ್ಳಲು....ನನಗೆ ಹೋಮಿಯೋಪತಿ ಔಷಧಿ ಮೇಲೆ ಯಾಕೋ ಅಪಾರವಾದ ನಂಬಿಕೆ...ಶ್ರೀಕಾಂತ್ ಗೆ ಇರಲಿಲ್ಲ. ಡಾ. ಬಳಿ ನಾನು ಸಣ್ಣ ದನಿಯಲ್ಲಿ ಹೋಮಿಯೋಪತಿ ಔಷಧಿ ಅಂದದ್ದೇ ಅವರು ಟೇಬಲ್ ಮೇಲೆ ಬಲವಾಗಿ ಗುದ್ದಿ, ಗಟ್ಟಿ ದನಿಯಲ್ಲಿ...ಲೀವರ್ cirrhosis ಗೆ ಅಲೋಪತಿ ಔಷದಿ ಬಿಟ್ರೆ ಯಾವುದನ್ನೂ ತೆಗೋ ಬಾರದು ಅಂದಿದ್ದ ರಭಸಕ್ಕೆ ಶ್ರೀಕಾಂತ್ ಬಿಡಿ ನನಗೆ ಎಷ್ಟು ಭಯ ಆಯಿತೆಂದು ಹೇಳಲಿಕ್ಕೆ ಆಗದು. 😏😏 ಶ್ರೀಕಾಂತ್ ಮರು ದಿನದಿಂದ ಆಯುರ್ವೇದ ಔಷಧಿ ಬಿಟ್ಟೆ ಬಿಟ್ರು. ಆಮೇಲೆ ಪದೇ ಪದೇ ಆರೋಗ್ಯ ಬಿಗಡಾಯಿಸಲು ಆರಂಭ ವಾದಾಗ ನಾನೂ, ಅಕ್ಕ ಕೂಡ ಪುನಃ ಅದನ್ನು ಶುರು ಮಾಡಲು ಕೇಳಿಕೊಂಡೆವು. ಅವರು ಒಪ್ಪಲೇ ಇಲ್ಲ.
ಕಾಕಿ ಸೊಪ್ಪು, ತಂಬಳಿ, ಮಜ್ಜಿಗೆ ಎಲ್ಲ ಒಳ್ಳೇದು ಅಂತ ಅದೆಲ್ಲ ಮಾಡ್ತಿದ್ದೆ.
ಯಾರೋ ಹೇಳ್ತಿದ್ರು 'ನೀನು ಶ್ರೀಕಾಂತ್ ನನ್ನು ತುಂಬಾ ಚೆನ್ನಾಗಿ ನೋಡಿ ಕೊಂಡೆ ಅಂತ
ಇಲ್ಲ ಹಲವಾರು ಬಾರಿ ನನ್ನ patience ಕೈಕೊಟ್ಟಿದೆ.
ಒಂದು ಸಂದರ್ಭ ಶೇರ್ ಮಾಡ್ತೇನೆ...
ಆ ದಿನ ಏಳುವಾಗ ಲೇಟ್. 11 ಗಂಟೆಗೆ ಡಾಕ್ಟರ್ ಅಪ್ಪೋಯಿಂಟ್ಮೆಮೆಂಟ್ಟ್ನ. ಮಜ್ಜಿಗೆ ಕಡಿತಿದ್ದೆ...ಹಾಲು ಉಕ್ಕಿ ಬಿತ್ತು. ಅದನ್ನು ಕ್ಲೀನ್ ಮಾಡಿದೆ. ಆಮೇಲೆ ಎಣ್ಣೆ ಬಾಟಲಿಯಲ್ಲಿ ತುಂಬಿಸುತ್ತಿದ್ದ ಹಾಗೆ, ಕೈ ಅಲ್ಲಾಡಿ ಅದೂ ಸ್ವಲ್ಪ ನೆಲದ ಮೇಲೆ ಬಿತ್ತು...ಅದನ್ನೂ ಕ್ಲೀನ್ ಮಾಡಿದೆ..ಸುಮಾರು ಹೊತ್ತು ತಗುಲಿತು. ದೋಸೆ ಬೇರೆ. ಕಾಯಿ ತುರಿದು ಚಟ್ನಿ ಮಾಡಲಿಕ್ಕಿತ್ತು. ನಿಹಾ ಗೆ ಒಂದು workshop conduct ಮಾಡಲಿಕ್ಕಿತ್ತು, ಅವಳೂ ಬೇಗ ಹೊರಡಿಲಿಕ್ಕಿತ್ತು. ಕೇಕ್ ತಯಾರಿಸಿ, ದೊಡ್ಡ ಕೇಕ್ ಆದ್ದರಿಂದ ಅಕ್ಕನಿಗೆ ಅದರ ಡೆಲಿವರಿ ಮಾಡಲಿಕ್ಕಿತ್ತು. ನನಗೆ ತಿಂಡಿ ಪ್ಲಸ್ ಆಸ್ಪತ್ರೆಗೆ ಒಯ್ಯಲು ಉಪ್ಪು ರಹಿತ ಊಟದ ತಯಾರಿ ಇತ್ತು. ಅದರ ಮಧ್ಯೆ ಶ್ರೀಕಾಂತ್ ಮಜ್ಜ8ಗೆ ಕುಡಿಯಲು ಬಂದ್ರು...ಅದರಲ್ಲಿನ ಬೆಣ್ಣೆ ತೆಗೆಯಲು ಪುರುಸೊತ್ತು ಆಗಿರಲಿಲ್ಲ. 'ಸಾರಿ, ನಿಧಾನಕ್ಕೆ ಮಜ್ಜಿಗೆ ಬೆಸೆಯಿರಿ... ಬೆಣ್ಣೆ ತೆಗಿಲಿಲ್ಲ ಅಂದೆ...ಅದಕ್ಕೆ ಅವರು 'ಕೂಡಲೇ ಕೂಡಲೇ ಆ ಕೆಲಸ ಮಾಡಿದ್ರೆ ತಾಪತ್ರಯ ಇರಲ್ಲ ಅಂದ್ರು' ಎಲ್ಲಿತ್ತೋ ಸಿಟ್ಟು...ನಾನು ಕಿರುಚಿ'dont you dare lecture me..ನೀವು ನಾನು ಹೇಳಿದ ಕೂಡಲೇ ಡಾಕ್ಟರ್ ಬಳಿ ಹೋಗಿದಿದ್ರೆ ಈ ತಾಪತ್ರಯ ಇರುತ್ತಿರಲಿಲ್ಲ' ಅಂದೆ...he was so taken aback at my outburst..🤔🤔
ಇನ್ನೊಂದು ದಿನ ಹೀಗೆ...ಒಣಗಿದ ಬಟ್ಟೆಯ ರಾಶಿ ಮಂಚದ ಮೇಲೆ ಬಿದ್ದಿತ್ತು. ಹುಷಾರು ತಪ್ಪಿದ ಮೇಲೆ ಆಫಿಸ್ ಮೀಟಿಂಗ್ ಎಲ್ಲ ನಮ್ಮ ಮನೆಯಲ್ಲಿ. ಅವರಿಗೆ ಟಿ ಎಲ್ಲ ಮಾಡಲಿಕ್ಕೆ ಇರುತ್ತಿತ್ತು. ಯಾಕೋ ಆ ದಿನ ಕೂಡಬ್ತುಂಬಾ ಕೆಲಸ.. ಮಕ್ಕಳಿಬ್ಬರೂ ಮನೆಯಲ್ಲಿ ಇರಲಿಲ್ಲ. ನಾನು ಅಡಿಗೆ ಮನೆ ಚೊಕ್ಕಗೊಳಿಸಿ, ಬಟ್ಟೆ ಮಡೆಚಲು ಹೋದಾಗ....ಬಟ್ಟೆ ಎಲ್ಲ ಶ್ರೀಕಾಂತ್ ನೀಟಾಗಿ ಮಡಚಿ ಇಟ್ಟಿದ್ದರು. ನಾನು ತುಂಬಾ emotional ಆಗಿ thank you srikanth... ಅಂದಿದ್ದಕ್ಕೆ..ಅಯ್ಯೋ ನಿನಗೆ ಹೆಲ್ಪ್ ಆಗೋದಾದರೆ ದಿನಾ ಬಟ್ಟೆ ಮಡಚಿ ಇಡ್ತೇನೆ ...ಅಂದ್ರು..ಬೇಜಾರಾಯಿತು ಕೇಳಿ....ಬೇಡ ಅಂದೆ...
ಹೀಗೆ i was/am not perfect...ಐದು ತಿಂಗಳಾಯ್ತು ಹೋಗಿ
ನಾಡಿದು ಬಾನುವಾರ ನಮ್ಮ ಮದುವೆಯಾಗಿ 39 ವರ್ಷ. ನಾನು 50 ವರ್ಷ ಜಗಳ ಆಡ್ತಾ, ತಮಾಷೆ ಮಾಡ್ತಾ ಇರಬಹುದೆಂದು ಕೊಂಡಿದ್ದೆ..😭😭. ,ಈ ಫೋಟೋ ಅವರ ಮೊಬೈಲ್ ನಲ್ಲಿತ್ತು