April 30, 2025

Porgai

 ಇದು ನನ್ನ 700 ನೆ ಪೋಸ್ಟ್. ನನ್ನ ಮೊದಲ ಬರಹ ಪ್ರಕಟಿಸಿದವವರು ಶ್ಯಾಮಣ್ಣ aka ಶಾಮ್ ಸುಂದರ್ S K ಅವರ thatskannada. com ಜಾಲತಾಣದಲ್ಲಿ. ಅವರು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಸವಿನೆನಪುಗಳೊಂದಿಗೆ ವಿದಾಯ ಹೇಳುತ್ತಾ...ಅವರು ಎಲ್ಲಿದ್ದಾರೋ ಅಲ್ಲಿರುವವರನ್ನೆಲ್ಲ ನಗೆಗಡಲಲ್ಲಿ ಮಿಯಿಸಲಿ ಎನ್ನುತ್ತಾ 🙏🙏

ಮೊನ್ನೆ ಶನಿವಾರ 'ಸಭಾ' ಎಂಬ ಚೆಂದದ ತಾಣದಲ್ಲಿ, ಸಿತ್ತಲಿಂಗಿ ಲಂಬಾಣಿ ಕಸೂತಿ ಬಗ್ಗೆ ಒಂದು exhibition ಇತ್ತು. ಅವರ ಜಾಲತಾಣಕ್ಕೆ ಭೇಟಿ ನೀಡಿ ಅಂದದ ಕಲಾಕೃತಿಯನ್ನು ನೋಡಿ ಕಣ್ತುಂಬಿಸಿ. ಸಾಧ್ಯವಿದ್ದಲ್ಲಿ ಖರೀದಿಸಿ ಅವರನ್ನು ಪ್ರೋತ್ಸಾಹಿಸಿ. 

ನಾನು ತೆಗೆದ ಕೆಲ ಚಿತ್ರಗಳು. ಅಲ್ಲಿ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ.




ಸಭಾ ಕಲಾ ಮಂದಿರ, commercial street.  




ಸಿರಿಧಾನ್ಯದ ಕಸೂತಿ ನೋಡಿ!! ನನಗಂತೂ ತುಂಬಾ ಇಷ್ಟವಾಯಿತು. 

www.porgai. org ಅವರ ಜಾಲತಾಣದ ಕೊಂಡಿ. ಖಂಡಿತ ಆ ಪ್ರದೇಶಕ್ಕೆ ಒಂದು ಭೇಟಿ ನೀಡಲೇ ಬೇಕು !!

www.porgai.org


April 23, 2025

Old books


"My favorite pastime when visiting my mom's house is browsing through my late father's vast collection of old books. It's a treasure trove of Hindi classics, including works by poets like Maithili Sharan Gupt (author of Saket and Priyapravas), Tulsidas, and Harivansh Rai Bachchan. The Sanskrit texts like Mrichchhakatika and Meghadoot are equally fascinating. The book in the picture is 'Bangal Ka Kaal' by Harivansh Rai Bachchan, written in response to the Bengal famine. It's remarkable that this poignant collection has seen numerous reprints."

Harivansha Rai Bachchan is #amitabhbachchan's father and my father has had rapport with Ajitabh Bachchan,.Amitabh'ss brother,during his banking days 👍❤️




will get these books treated and bound at the book binding and restoration shop at bengaluru.

#worldbookday

April 21, 2025

ಚಟ್ನಿ/chutney


 ಅಮ್ಮನ ರೆಸಿಪಿ

ಹೀರೆ ಕಾಯಿ ಸಿಪ್ಪೆ ಚಟ್ನಿ
ತುಂಬಾ ಅಂದ್ರೆ ತುಂಬಾ ರುಚಿಯಾಗಿತ್ತು. ಇವತ್ತು ಬೆಳಿಗ್ಗೆ 'ಈ ಹೊಸ ರಿಸಿಪಿ ನಿನ್ನ ಬ್ಲಾಗ್ ಅಲ್ಲಿ ಹಾಕು' ಅಂದ್ರು. ಅದಕ್ಕೆ 🙂🙂
tender ಹೀರೆಕಾಯಿ ಸಿಪ್ಪೆ, ಬೆಳ್ಳುಳ್ಳಿ, ಜೀರಿಗೆ, ಉಪ್ಪು, ಬೆಲ್ಲ
ಸ್ವಲ್ಪ ಎಣ್ಣೆ ಬಿಸಿ ಮಾಡಿ. ಜೀರಿಗೆ ಸಿಡಿಸಿ, ಸಿಪ್ಪೆ ಹಾಕಿ ಬಿಸಿ ಮಾಡಿ, ಹಸಿ ಮೆಣಸಿನ ಕಾಯಿ ಹಾಕಿ ಎರಡು ನಿಮಿಷ ಕೈಯಾಡಿಸಿ. ಗ್ಯಾಸ್ ಆಫ್ ಮಾಡಿ. ಇದಕ್ಕೆ ಬೆಳ್ಳುಳ್ಳಿ ಬೆರೆಸಿ. ತಣ್ಣಗಾದ ಮೇಲೆ ಉಪ್ಪು, ಬೆಲ್ಲ ಸೇರಿಸಿ ಮಿಕ್ಸಿಯಲ್ಲಿ ಹಾಕಿ. ತುಂಬಾ ರುಚಿ ಎನಿಸಿ, ಬೆರಳು ತಿಂದು ಬಿಟ್ಟರೆ ನನ್ನನ್ನು blameಇಸ ಬೇಡಿ 😀😀

April 19, 2025

पॉट से पतीले तक

  


a simple no frills #home grown r#ed amaranth palya. heat oil. we use coconut oil. add crushed garlic and  red chilli flakes. add chopped greens(red ), salt (gokarna). simple  and tasty  and nutritious. hot rice, palya and dappa mosaru..a terrific combi 👍👌


ಹರಿವೆ ಸೊಪ್ಪಿನ simple ಪಲ್ಯ






April 18, 2025

ಇಬ್ಬರ ಹೆಂಡಿರ ಮುದ್ದಿನ ಗಂಡ






ಇದರ ಬಗ್ಗೆ ಬರಯಲೇ ಬೇಕೆನಿಸಿತು. ಅಮ್ಮನ ಮನೆಯ ಮುಂದೆ ಇವರ ಮನೆ. ಆಕೆ ಹೆಸರಾಂತ ಆಸ್ಪತ್ರೆಯಲ್ಲಿ ಸಹಾಯಕಿ. ಬೆಳಿಗ್ಗೆ 8 ಕ್ಕೆ ಮನೆ ಬಿಟ್ಟರೆ ಸಂಜೆ 6.30 ಗೆ ಮನೆಗೆ ವಾಪಸ್.
ಆಕೆಯ ಗಂಡನಿಗೆ ಇನ್ನೊಂದು ಸಂಸಾರ ಇದೆ. 3 ತಿಂಗಳು ಅಲ್ಲಿ ಮೂರು ತಿಂಗಳು ಇಲ್ಲಿ. ಆಕೆಗಿಂತ ವಯಸ್ಸಿನಲ್ಲಿ ತುಂಬಾ ಹಿರಿಯರು. ಆಗಲೇ ದೊಡ್ಡ ಮಕ್ಕಳಿದ್ದಾರೆ. ಈ ಮನೆಗೆ ಅವರನ್ನು ಬಿಡಲು ಎಲ್ಲರೂ ಬರುತ್ತಾರೆ. ಊಟ ತಿಂಡಿ ಟಿ.ವಿ ಅಂತ ಗೌಜು ಗಮ್ಮತ್ತು. ಎಲ್ಲರೂ ಖುಷಿಯಿಂದ ಇರುತ್ತಾರೆ ಆತನಿಗೆ ನಡೆಯಲು walker ಬೇಕು. ಆಕೆ ಕೆಲಸಕ್ಕೆ ಹೊರಟ ಮೇಲೆ, ಇವ walker ಮೇಲೆ ಸಣ್ಣ ವಾಕ್ ಹೋಗುತ್ತ ಅಲ್ಲಲ್ಲೇ rest stop. ಒಂದು ಸಣ್ಣ ಮನೆ. ಮೊದಲೆಲ್ಲ ನಾನು ಇಲ್ಲಿ ಬಂದು ಇದ್ದಾಗ, ಮಳೆಗಾಲದಲ್ಲಿ ಅವರ ಮನೆ ಒಳಗೆ ನೀರು ತುಂಬುತ್ತಿತ್ತು. ಒಂದು ಸಣ್ಣ ತಂಬಿಗೆಯಿಂದ ನೀರು ಬಸಿದು ಹಾಕಿ ಹೈರಾಣಾಗುತ್ತಿದ್ದರು ಆಕೆ. ಈಗ BBMP ವತಿಯಿಂದ ಚರಂಡಿ ರಿಪೇರಿ, ಕುಡಿಯುವ ನೀರಿನ ಸೌಲಭ್ಯ ದಿಂದ ಆಕೆಯ ಕೆಲ ಕಷ್ಟಗಳು ದೂರವಾಗಿವೆ.
ಒಂದೇ ಕುಟುಂಬ ನಿರ್ವಹಿಸುವ ಈ ಸಮಯದಲ್ಲಿ, ಎರಡು ಕುಟುಂಬಗಳನ್ನು ಸಂತೋಷದಿಂದ ನಿಭಾಯಿಸುವ ಆತ ನೆ great. ಏನಂತೀರಾ??? 🙂👍
ಮಕ್ಕಳ ಪ್ರಶ್ನೆ : ಅಮ್ಮ ಯಾರನ್ನೂ ಮಾತನಾಡಿಸದೆ ಅವರ ಬಗ್ಗೆ ಹೇಗೆ ತಿಳಿದುಕೊಳ್ಳುತ್ತೀಯಾ?  ಬೇರೆಯವರು ಮಾತನಾಡಿಕೊಳ್ಳುವುದು, ಆ ಮನೆಯವರ ಕೆಲ ಸಂಭಾಷಣೆ, ಅಲ್ಲಿಯ ಆಗು ಹೋಗು ಗಳನ್ನು ನೋಡುತ್ತಲೇ ಇವೆಲ್ಲ grasp ಮಾಡುತ್ತೇನೆ. 👍🙏
ಪಾರ್ಕ್ ನಲ್ಲಿ ವಾಕ್ ಮುಗಿಸಿ ಕೂತಾಗ ಇದನ್ನು ಬರೆದೆ.

April 13, 2025

ಮೊಳಕೆ ತಂದ ಹೆಸರು ಕಾಳು ಉಸ್ಲಿ

 


ಮೊಳಕೆ ಬಂದ ಹೆಸರು ಕಾಳನ್ನು ಉಪ್ಪು ಹಾಕಿ ಬೇಯಿಸಿ. ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಕರಿಬೇವು, ಜೀರಿಗೆ, ಹಸಿ ಮೆಣಸಿನಕಾಯಿ, ಹಿಂಗು ಹಾಕಿ. ಸ್ವಲ್ಪ ಕೈಯಾಡಿಸಿ. ಇದಕ್ಕೆ ಬೇಯಿಸಿದ ಕಾಳು ಬೆರೆಸಿ. ಕಾಯಿ, ಕೊತ್ತಂಬರಿ ಸೊಪ್ಪು ಉದುರಿಸಿ. ಸುಲಭ  ಹಾಗೂ ರುಚಿಕರ. 

ನಾನು ನನ್ನಷ್ಟಕ್ಕೆ ಮೊಬೈಲ್ ಆನ್ ಮಾಡಿಟ್ಟಿದ್ದೆ. ಅಡಿಗೆ ಮನೆಗೆ ಬಂದ ತಮ್ಮನ ಮಗಳು ಸ್ಯಾಮಿ 'ಮಾಲತಿ ಅಕ್ಕ ನಾನು ರೆಕಾರ್ಡ್ ಮಾಡ್ತೇನೆ ಅಂದಾಗ ಖುಷಿ ಆಯ್ತು.

https://youtube.com/shorts/cwmCTpaQq_I?si=XofM7LCRHcDi63uf

sprouted moong usli
lightly steam sprouts with salt. heat oil. add mustard, jeera, chopped green chillies, fresh curry leaves and asafoetida.
add the sprouts. chk for salt. saute for a bit. finsh off with a topping  of fresh grated coconut and chopped coriander leaves. yummy usli ready. 

April 11, 2025

ಬೆಳಗಾವಿ ದಿನಗಳು

 


ಅಮ್ಮನ ಜತೆ ಇರಲು ಬಂದಿದ್ದೇನೆ. ಇಬ್ಬರೂ ನಾಲ್ಕು ಗಂಟೆಗೆ ಏಳುತ್ತೇವೆ. ಅಮ್ಮ ಟೀ ಕುಡಿದು ಸ್ನಾನ ಮಾಡಿ ದೇವರ ಪೂಜೆಗೆ ತೊಡಗಿದರೆ ನಾನು ದೊಡ್ಡ ವಾಕ್ ಹೋಗಿ ಬರುತ್ತಾ ಹಾಲು ತರುತ್ತೇನೆ.. ಬೆಳಿಗ್ಗೆ ಇಲ್ಲಿ ವಾತಾವರಣ ತಂಪಾಗಿದೆ. ಕೆಲ ಚಿತ್ರಗಳು. ಬೆಳಿಗ್ಗೆ ನಾನೊಬ್ಬಳೇ ವಾಕ್ ಹೋದರೆ, ಸಂಜೆ ಅಮ್ಮ ಮತ್ತು ತಮ್ಮನ ಮಗಳು ಸ್ಯಾಮಿ ನಮ್ಮ ಜತೆಗೂಡುತ್ತಾಳೆ. ಅವಳು ಹತ್ತನೇ ತರಗತಿ ಪರೀಕ್ಷೆ ಮುಗಿಸಿದ್ದಾಳೆ.