June 10, 2019

ಕೈ ಬರಹ


ಬಾಲ್ಕನಿ ಬಾಗಿಲು ತೆರೆದಿತ್ತು. ಕೆಲವು ಕಂದು ಬಣ್ಣದ ಹಾಳೆಗಳು ಗಾಳಿಗೆ ಪಟಪಟನೆ ಹಾರಾಡುತ್ತಿದ್ದವು . ಹಾಳೆಗಳನ್ನು ಎತ್ತಿಡಲು ಹೋದಾಗ ಅದರಲ್ಲಿ ನೀಟಾಗಿ ಬರೆದ ಅಕ್ಷರಗಳು ಕಂಡವು . ಅರೆ ನನ್ನ ತಂದೆಯ ಕೈ ಬರಹದ ಹಾಳೆಗಳು. ಇಲ್ಲಿಗೆ ಹೇಗೆ ಬಂತು ಅಂತ ನನ್ನಷ್ಟಕ್ಕೆ ಬಡಬಡಿಸ್ತಾ ಇದ್ದೆ. ನಿಹಾ ' ಚಿತ್ರ ಬರೆಯಲು ನಾನು ಬೆಳಗಾವಿಯಿಂದ ತಂದಿದ್ದು ಎಂದಳು. ತಂದೆ ಬ್ಯಾಂಕ್ ನಲ್ಲಿದ್ದಾಗ ಬೆಳಗಾವಿಗೆ ವರ್ಗವಾಗಿತ್ತು ಹಲವಾರು ವರ್ಷಗಳ ಹಿಂದೆ. ಆ ಮೇಲೆ ನಾನು ಏಳನೆಯ ತರಗತಿಯಲ್ಲಿದ್ದಾಗ  ಬೆಳಗಾವಿಗೆ ಇನ್ನೊಮ್ಮೆ ವರ್ಗವಾಗಿತ್ತು. ತಂದೆಗೆ ಬೆಳಗಾವಿ ಎಷ್ಟು ಇಷ್ಟ ಅಗ್ಗಿತ್ತೆಂದರೆ ರಿಟಾಯರ್ ಆದಮೇಲೆ ಬೆಳಗಾವಿಯಲ್ಲೇ ಸೆಟ್ಲ್ ಆಗಿ ಐದು ವರ್ಷದ ಹಿಂದೆ ದೈವಾದೀನವಾದರು. ಬೇಡವಾದ ಬ್ಯಾಂಕ್ ಡೈರಿ , ಪುಸ್ತಕಗಳನ್ನೆಲ್ಲಾ ರದ್ದಿಗೆ ಹಾಕುವಾಗ ನಿಹಾಗೆ ಈ ಹಾಳೆಗಳು ಸಿಕ್ಕಿದವು. ಅದನ್ನು ಅಮ್ಮನ ಬಳಿ ಕೇಳಿ ತೆಕೊಂಡಿದ್ದು. ಹಾಳೆಗಳ ಎಡೆಯಲ್ಲಿ ಅಪ್ಪನ ಕೈ ಬರಹದಲ್ಲಿದ್ದ ಅಕ್ಷರ ನೋಡ ಸಿಕ್ಕವು. ಅಪ್ಪನ ಅಕ್ಷರ ತುಂಬಾ ನೀಟ್.
ನಾನು ಅಜ್ಜ ನಾನಿ ಜತೆಗೆ ಬೆಳೆದೆ. ಬೆಳಗ್ಗೆ ಬೇಗ ಎದ್ದು ಓದುವುದು ಕಡ್ಡಾಯ ವಾಗಿತ್ತು. ಮಾತ್ರವಲ್ಲ ಕಾಪಿ ರೈಟಿಂಗ್ ಕೂಡ ಮಾಡಬೇಕಿತ್ತು. ಕಾಪಿ ಬುಕ್ ನಲ್ಲೇನೋ ನೀಟಾಗಿ ಬರಿತಿದ್ದೆ ಆದರೆ ದೊಡ್ಡ ಕ್ಲಾಸಿನ ನೋಟ್ ಪುಸ್ತಕದಲ್ಲೆಲ್ಲ ಕಾಗೆ ಕೋಳಿ ಕಾಲ್ ಅಕ್ಷರಗಳು.
ಒಂದೊಮ್ಮೆ , ಆಗ ನಾನು ಏಳನೇ ತರಗತಿ, ಅಪ್ಪನ ಶಾಖೆ ಜಾಯಿನ್ ಆದ ಹೊಸ ಕಲೀಗ್ ಮನೆಗೆ ಹೋಗಿದ್ವಿ. ಅಲ್ಲಿ ನನ್ನ ವಯಸ್ಸಿನಷ್ಟೇ ಹುಡುಗಿ. ಅವಳ ಅಕ್ಷರವನ್ನು ಅಮ್ಮ ಎಷ್ಟು ಹೊಗಳಿದರೆಂದರೆ ನನಗೆ ಹೊಟ್ಟೆಯಲ್ಲಿ ಹಸಿಮೆಣಸಿನ ಕಾಯಿ ಹಿಚುಕಿದ ಹಾಗೆ ಆಯಿತು. ನಾನೂ ಚೆಂದ ಬರೆಯುವೆ ಪ್ರತಿಜ್ಞೆ ಮಾಡಿದೆ ಮಾತ್ರವಲ್ಲ ಅದಕ್ಕೆ ಬದ್ದಳಾಗಿದ್ದೆ ಕೂಡ. ಆಮೇಲೆ ನನ್ನ ಕೈಬರಹ ನನ್ನ ಫ್ಯಾಮಿಲಿಯಲ್ಲಿ ಮಾತ್ರವಲ್ಲ ಶಾಲೆಯಲ್ಲೂ ರೋಲ್ ಮಾಡೆಲ್/ ಮಾದರಿ ಆಯಿತು.
ಒಮ್ಮೆ ಶಾಲೆಗೇ ಕೈ ಬರಹ ನೋಡಿ ಭವಿಷ್ಯ ಹೇಳುವ ತಜ್ಞರು ಬಂದಿದ್ದರು. ಚೆಂದದ ಕೈ ಬರಹದ  ಕೆಲವು ವಿದ್ಯಾರ್ಥಿನಿಯರಲ್ಲಿ ನಾನೂ ಒಬ್ಬಳಾಗಿ ಸೆಲೆಕ್ಟ್ ಆಗಿದ್ದೆ. ನನ್ನ ಕೈ ಬರಹ ವಿಶ್ಲೇಷಿಸಿ ನಾನು air ಹೋಸ್ಟೆಸ್ ಆಗಿ ದೇಶ ವಿದೇಶ ತಿರುಗುತ್ತೇನೆ ಅಂತ ಅವರು ಭವಿಷ್ಯ ಹೇಳಿದಾಗ ನಮ್ಮ ಹೆಡ್ ಮಿಸ್ಟ್ರೆಸ್ಸ್ ಗೆ  ಎಲ್ಲಿಲ್ಲದ ಸಂಭ್ರಮ.. ನನಗೆ ಗಾಬರಿ...
ನಾನು ಅಜ್ಜನಲ್ಲಿ ಬೆಳೆದೆ ಅಂದನಲ್ಲಾ? ನನಗೆ ಅಮ್ಮನ ನೆನಪು ಆದಾಗಲೆಲ್ಲ ನನಗೆ ಅಜ್ಜ flight ಅಲ್ಲೇ ಅಮ್ಮನ ಬಳಿ  ಕರೆದುಕೊಂಡು ಹೋಗುತ್ತಿದ್ದರು. ನಾನು ವಾಂತಿ ಮಾಡ್ತಾ ಹೋಗ್ತಿದ್ದೆ . ನನಗೆ ಹಲವಾರು ವರ್ಷ ಏರ್ ಸಿಕ್ಕ್ನೆಸ್ಸ್/ ಮೋಶನ್ ಸಿಕ್ಕ್ನೆಸ್ಸ್ ಕಾಡಿದೆ....
ಈಗ ಬರಹ ಸಾಮಾನಿನ ಪಟ್ಟಿ ಬರೆಯುವುದ್ದಕ್ಕಷ್ಟೇ ಸೀಮಿತ.. ಅದರಲ್ಲೂ ಅಕ್ಕ ' ಮೊಬೈಲ್ ನಲ್ಲಿ ನೋಟ್ಸ್ ಅಂತ ಇದೆ ಅದರಲ್ಲಿ ಕುಟ್ಟು' ಅಂತಾಳೆ 😊😊

Sent from my iPad

May 8, 2019

ಅಕ್ಷಯ ತೃತೀಯ

ಒಂದು ಹಳೆ ನೆನಪು
ಅಮ್ಮನ ಫೋನ್ ಬಂದಿತ್ತು. ನಾಡಿದ್ದು ಅಕ್ಷಯ ತೃತೀಯ ಏನಾದ್ರೂ ಸಣ್ಣ ಬಂಗಾರದ ಐಟಂ ತೆಗೊ.ಆ ದಿನದಂದು ಬಂಗಾರ ತೆಗೊಂಡ್ರೆ ಯಾವತ್ತೂ ನಮಗೆ ಆರ್ಥಿಕ ಸಂಕಷ್ಟ  ಇರಲ್ಲ '  ನಾನು ಖುಷಿಯಿಂದ ' ಖಂಡಿತ ಅಮ್ಮ , ಈ ಸಲ ಬೋನಸ್ ಬೇರೆ ಸಿಕ್ಕಿದೆ .
ಸರಿ ಆದ್ರೆ ಆ ದಿನ ತುಂಬಾ ಕೆಲಸ. ಸ್ವಾ ಉದ್ಯೋಗ ತರಬೇತಿ ಕಾರ್ಯಕ್ರಮದ ಬಗ್ಗೆ ನಾವು ದಿನಪತ್ರಿಕೆಯಲ್ಲಿ ಹಾಕಿದ್ದರಿಂದ , ಹೆಚ್ಚಿನ ಮಾಹಿತಿ ಪಡೆದು ಕೊಳ್ಳಲು ಹಲವಾರು ದೂರವಾಣಿ ಕರೆಗಳು. ಸಂಜೆ ಉಸ್ಸಪ್ಪ ಅಂತ ಕೂತುಕೊಂಡಾಗ ನಮ್ಮಆಫಿಸ್ ಸ್ಟಾಫ್ ಒಬ್ಬರಿಗೆ ಕರೆ ಬಂದಿತು. ಅವರ ಅಣ್ಣ ನದಿಯಲ್ಲಿ ಈಜುವಾಗ ತಲೆಗೆ ಪೆಟ್ಟಾಗಿ ಆಸ್ಪತ್ರೆಗೆ ಸೇರಿಸಿದ್ದರು. ತುಂಬಾ ಆತಂಕ ಹಾಗು ಹಣಕಾಸಿನ ತೊಂದರೆಯಿದ್ದ ಅವರಿಗೆ ನನ್ನ ಬಳಿಯಿದ್ದ ಬೋನಸ್ ದುಡ್ಡು , ಕ್ಯಾಶ್ ಕೊಟ್ಟಿದ್ದರು envelope ನಲ್ಲಿ ಹಾಕಿ. ಅದನ್ನು ಹಾಗೆ ಅವರ ಕೈಗೆ ವರ್ಗಾಯಿಬಿಟ್ಟೆ . ಎಲ್ಲರೂ ಆದಷ್ಟು ಹಣಕಾಸಿನ ನೆರವನ್ನು ನೀಡಿದರು. ಹಲವಾರು ದಿನದ ಆಸ್ಪತ್ರೆ ವಾಸ , ಚಿಕಿತ್ಸೆ ಫಲಕಾರಿಯಾಗದೆ ಅವರು ಅಸು ನೀಗಿದರು.
ಕೆಲ ಸಮಯದ ನಂತರ ಅವರು ದುಡ್ಡು ವಾಪಸ್ ಮಾಡಿದರು. ನನಗೆ ಆ ದುಡ್ಡನ್ನು ಏನು ಮಾಡುವುದೆಂದು ತಿಳಿಯಲಿಲ್ಲ. ಶ್ರೀಕಾಂತ್ ಸಲಹೆಯ ಮೇರೆಗೆ ಅದನ್ನು revolving ಫಂಡ್ ತರಹ ಉಪಯೋಗಿಸುವ ಯೋಜನೆ ಹಾಕಲಾಯಿತು. ಅದರ ಹಾಗೆ ಪ್ರತೀ ತಿಂಗಳು ಜೂನಿಯರ್ಸ್ ೨೫೦/- ರು ಮತ್ತು ಸೀನಿಯರ್ಸ್ ೫೦೦/- ಹಾಕೋದು . ಯಾರಿಗಾದ್ರೂ ದುಡ್ಡಿನ ತುರ್ತು ಇದ್ದಲ್ಲಿ ಅದರಿಂದ ದುಡ್ಡು ಪಡೆಯುವುದು, ಆರು ತಿಂಗಳ ನಂತ ೧೦೦ ರು ,  ಬಡ್ಡಿ ಇಲ್ಲದೆ ,ಹಾಗೆ ಆ ದುಡ್ಡನ್ನು ಪಾವತಿಸುವುದು . ಹೀಗೊಂದು ಯೋಜನೆ ಹಾಕಿದ್ದು.... ಹಲವಾರು ಜನರು ಇದರಿಂದ ಲಾಭ ಪಡೆದೊಕೊಂಡಿದ್ದಾರೆ.
ಅಕ್ಷಯ ತೃತೀಯ ಅಂದ್ರೆ ಇದೆ ನೆನಪಾಗುವುದು.
ಇಲ್ಲಿದೆ ಬಂಗಾರದಂತಹ ಸಿಹಿಗುಂಬಳದ ಹೋಳಿಗೆ


April 15, 2019

ಮನೆ ಬಾಗಿಲಿಗೆ ಬರುತಿದೆ ನಾಟಕ


ಚಿಕ್ಕವರಿದ್ದಾಗ ರಜೆಯಲ್ಲಿ ಅಜ್ಜನ ಮನೆಗೆ ಹೋದಾಗ ಒಂದು ಮಧ್ಯಾನ್ಹ ನಾವೆಲ್ಲ ಮಕ್ಕಳು ನಾಟಕಕ್ಕೆ ಮಿಸಲಿಡುತ್ತಿದ್ದೆವು. ಆ ದಿನ ಬೇಗ ಊಟ ಮಾಡಿ, ನಮ್ಮ ವೇಷ ಭೂಷಣ, ನಾಟಕಕ್ಕೆ ಪರದೆ ಎಲ್ಲ ರೆಡಿ ಮಾಡಿಕೊಳ್ಳುತ್ತಿದ್ದೆವು. ಸಂಜೆ ಕುಟುಂಬದ ಎಲ್ಲರೂ ಅಂದ್ರೆ ಅಜ್ಜ, ಅಜ್ಜಿ, ಅಪ್ಪ ಅಮ್ಮ, ದೊಡ್ಡಮ್ಮ, ದೊಡ್ಡಪ್ಪ , ಚಿಕ್ಕಮ್ಮ ಎಲ್ಲ ಸೇರಿ ಒಂದು 30 40 ಜನ ಒಟ್ಟಾಗ್ತಿದ್ರು. ನಾವು ಮಕ್ಕಳು ಸೀರಿಯಸ್ ಆಗಿ ನಾಟಕ ಆಡ್ತಿದ್ವಿ.

ಚಿಕ್ಕಂದಿನ ಆ ಲೋಕ ನೆನಪಾಗಲು ಕಾರಣ ಮಿತ್ರ ವಸುಧೇಂದ್ರರ ಮನೆಯಲ್ಲಿ ಹಮ್ಮಿ ಕೊಂಡ 'ಮನೆಮನೆಗೆ ನಾಟಕ' when the theater comes home...we were an intimate group about 20 of us..

ಮೊದಲೆಲ್ಲ ನಾವು ರಾಜಾಜಿನಗರdinda ಏನೆಲ್ಲಾ ಪ್ರಯಾಸ ಪಟ್ಟು ಜೆ ಪಿ ನಗರದಲ್ಲಿರುವ ರಂಗಶಂಕರಕ್ಕೆ ಬರ್ತಿದ್ವಿ. ಹಲವಾರು ಬಾರಿ ನಾಟಕದ ಟಿಕೆಟ್ ದರಕ್ಕಿಂತ ಜಾಸ್ತಿ ನಮ್ಮ ಪ್ರಯಾಣದ ಖರ್ಚು. ಆಗ ಊಬರ್ ಓಲಾ ಕೂಡ ಇರಲಿಲ್ಲ. ಆದರೂ ಏನೋ ಹುಮ್ಮಸ್ಸು. ಈಗ ನಮ್ಮ ಮನೆ ರಂಗಶಂಕರಕ್ಕೆ ಹತ್ತಿರ. ಆದರೆ ಮೆಟ್ರೋ ಕಾಮಗಾರಿ ಅಂತ ಅಲ್ಲಲ್ಲಿ ರೋಡ್ ದೈವರ್ಷನ್, ರಸ್ತೆ ಅಗೆತ ,ಧೂಳು ಅಂತ ಎಲ್ಲೂ ಹೋಗೋದೇ ಬೇಡ ಅನ್ನಿಸುವಂತದ್ದರಲ್ಲಿ ನಾಟಕವೇ ನಮ್ಮನೆಗೆ ಬಂದರೆ?? Lovely concept.

ಇವತ್ತಿನ ನಾಟಕ '-ಮೊದಲ ಪ್ರಯೋಗ- ನಮ್ಮಮ್ಮ ಅಂದ್ರೆ ನನಗಿಷ್ಟ' ಏಕಪಾತ್ರಾಭಿನಯ ಮಾಡಿದವರು ಪುನೀತ್. Simple prop ಗಳ ಉಪಯೋಗ. ಇನ್ನೂ ಸ್ವಲ್ಪ fine tuning ಮಾಡಿದ್ರೆ this play is ready to take off...
ಕೊನೆಗೊಂದು ಚೆಂದದ ಊಟ ಮತ್ತು ಐಸ್ಕ್ರೀಮ್ 😊😊
ರಜೆಯಲ್ಲಿ ನಿಮ್ಮ ಮನೆಯಲ್ಲೂ ನೆಂಟರು ಇಷ್ಟರು ಸೇರಿದಾಗ ನೀವು ಒಂದು ನಾಟಕ ಆಡಿಸಿ. ಮಾಹಿತಿಗಾಗಿ ವಸುಧೇಂದ್ರರನ್ನು ಅಥವಾ ಪುನೀತ್ ಅವರನ್ನು ಸಂಪರ್ಕಿಸಿ.
An evening well spent thanks to vasudhendra




ನಿಮ್ಮ ಅಪಾರ್ಟ್ಮೆಂಟ್, ಅಥವಾ ಮನೆಯಲ್ಲಿ ಒಂದು 20 -25 ಜನರನ್ನು ಸೇರಿಸಿ ಈ ನಾಟಕ ಮಾಡಿಸಿ. ಪುನೀತ್ ಅವರ ಸಂಪರ್ಕ ಮೇಲಿನಂತಿದೆ...

April 6, 2019

ಎರವಲು ತಂದ ಪುಸ್ತಕಗಳನ್ನು ಓದಿ ಆಯ್ತು. Netflix ನೋಡುವಾ ಅಂದ್ರೆ ಆವಾಗವಾಗ ಕೈ ಕೊಡ್ತಿದ್ದ ಕರೆಂಟ್. ಬಾಲ್ಕನಿಯಿಂದ (ಆವಾಗವಾಗ ಮಳೆ ಮೋಡ ಇದೆಯಾ ಅಂತ ನೋಡುವ ಗೀಳು)ಕೆಳಗೆ ನೋಡುವಾಗ ಈ ಹಸಿರು ಬಾರ್ಬೆಟ್ ಹಕ್ಕಿ ಕಾಣಿಸಿತು.. ಮೊಬೈಲ್ನಿಂದ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದೇನೆ...ಕಾಣಿಸ್ತಾ ಹೇಳಿ.

ಹಕ್ಕಿ ಇರುವ ಮರಕ್ಕೆ ಸಣ್ಣ ಸಣ್ಣ ತಿಳಿ ಹಳದಿಯ ಹಣ್ಣುಗಳು. ಶ್ರೀಕಾಂತ್ ಗೆ ಯಾವ ಮರ ಅಂತ ಗೊತ್ತಿಲ್ಲ. ಆ ಮರಕ್ಕೆ ತಾಗಿದ ಹಾಗೆ ಇರುವುದು ನೇರಳೆ ಹಣ್ಣಿನ ಮರ,ಎದುರಿಗಿರುವುದು ಹೊಂಗೆ ಮರ...ಇಲ್ಲೆಲ್ಲ ತುಂಬಾ ಜೇನು ಹುಳುಗಳು. ಜೇನು ಗೂಡು ನಮ್ಮ ಬಿಲ್ಡಿಂಗ್ ನ ಹಲವಾರು ಕಡೆ ಕಟ್ಟಿದೆ. ಎಷ್ಟು ರುಚಿಕರವಾಗಿರಬಹುದು ಜೇನು!!! ಬಿಲ್ಡಿಂಗ್ ವಾಸಿಗಳ ಗಲಾಟೆಗೆ ಅದ್ಯಾವುದೋ ಔಷಧಿ ಹಾಕ್ತಾರಪ್ಪ...ಔಷಧಿ ಸಿಂಪಡಿಸಿದ ನಿಮಿಷಕ್ಕೆ ಪಾಪ ಹಲವು ಜೇನುನೊಣಗಳು ಸತ್ತು ಉದುರಿ ಬೀಳುತ್ತವೆ. Safety measures (ಹಲವಾರು ಹೈ ರೈಸ್ ಅಪಾರ್ಟ್ಮೆಂಟ್ ಗಳಿವೆ)ಅಳವಡಿಸಿಕೊಂಡಿರುವ Professional bee hive removal agency ಗಳಿದ್ರೆ ಒಳ್ಳೇದಲ್ಲವಾ?
#ಸುಮ್ನೆ

February 8, 2019

ಜ್ಯೋತಿ- Vegetable vendor

ಬೆಳಿಗ್ಗೆ ನಾನು ವಾಕ್ ಮುಗಿಸುವಷ್ಟರಲ್ಲಿ ಪಾರ್ಕ್  ತರಕಾರಿಯವಳು ಬಂದಿರುತ್ತಾಳೆ. ಹೆಚ್ಚಾಗಿ  ನನ್ನದೇ ಬೋಣಿ (first buy ) rituals  ಇರುತ್ತೆ, ನನಗೇನು ಬೇಕು ಅಂತ ಕೇಳಿ   ಆ ಚೀಲ ಮೊದಲು ಹೊರಗೆ ತೆಗೆದು, ಇನ್ನು  ನಾಲ್ಕೈದು ಚೀಲಗಳನ್ನು ತೆರೆದಿಟ್ಟು ,  ದುಡ್ಡನ್ನು ನಾನು ಯಾವುದೇ ಚೀಲಕ್ಕೆ  ಹಚ್ಚಿ , ಅದನ್ನು ಅವಳ   ಕೈಗಿಡಬೇಕು. :-)   ಎರಡು ಕೈನಲ್ಲಿ  ದುಡ್ಡನ್ನು ಪಡೆದು, ಹಣೆಗೆ ಹಚ್ಚಿ ಅದನ್ನು ಅವಳ  ದುಡ್ಡಿನ ಸಂಚಿ ಯಲ್ಲಿ ಹಾಕುತ್ತಾಳೆ. ನಾನು ಅವಳ ಹತ್ತಿರ ತೆಗೊಳ್ಳೋದು ಬರಿ  ಸಾಮಾನುಗಳು ಅಂದರೆ ಶುಂಠಿ , ಕೊತ್ತಂಬರಿ ಸೊಪ್ಪು , ಕರಿಬೇವು ,  ನಿಂಬೆ ಹಣ್ಣು ಇತ್ಯಾದಿ . ಅವಳ ಕಂಪ್ಲೇಂಟ್ ಇರುತ್ತೆ ಯಾವಾಗ್ಲೂ. ಹತ್ತಿರ   ಅಕ್ಕ/ ಅಂತ, ನಾನು ಅವಳಿಗೆ 'ಮನೆಯವರು ಮಡಿವಾಳ ಮಾರ್ಕೆಟ್  ವಾಕ್ ಹೋಗಿ ಅಲ್ಲಿಂದ ತರಕಾರಿ ತರ್ತಾರೆ, ನಾನೇನ್ಮಾಡಲಿ ಅಂತ ಹೇಳಿ ನಗುತ್ತೇನೆ, ಅವರು ಆಫಿಸ್ ಟೂರ್ ಅಂತ ತುಂಬಾ  ನಾನು ಅವಳ ಹತ್ತಿರಾನೆ ತರಕಾರಿ ತೆಗೊಳ್ತೇನೆ.
ಇವತ್ತು ನಾನು ಸ್ವಲ್ಪ ಬೇಗ ವಾಕ್ ಮುಗಿಸಿದೆ. ಶ್ರೀಕಾಂತ್ ಗೆ ಹಳ್ಳಿಗೆ ಹೋಗಲಿಕ್ಕಿತ್ತು. ಹಾಗಾಗಿ ಬೇಗ ಬ್ರೇಕ್ಫಾಸ್ಟ್ ಮಾಡಿಕೊಡಬೇಕಿತ್ತು. ಅದಕ್ಕೆ ಅವರಿಗೆ ತಿಂಡಿ ಮಾಡಿಕೊಟ್ಟು  ತರಕಾರಿವಳ ಹತ್ತಿರ ಹೋದೆ. ನನಗೆ ಅರ್ಜೆಂಟ್ ಶುಂಠಿ ಬೇಕಿತ್ತು , ಪಾಲಕ್ ಪೊಂಗಲ್ ಮಾಡಲಿಕ್ಕೆ. 
'ಅಕ್ಕ ನಿಮ್ಮ ಬಿಲ್ಡಿಂಗ್ ನಲ್ಲಿ ಈಗ ಸೂಪರ್ ಮಾರ್ಕೆಟ್ ವ್ಯಾನ್ ನಲ್ಲೆ ತರಕಾರಿ ಬರುತ್ತಂತೆ.?"
:ಹೌದು"
"costly ಇರುತ್ತಾ , ನಮಗಿಂತ ಕಡಿಮೆ  ರೇಟ್  ಗೆ  ಮಾರ್ತಾರ?
" ಕೆಲವಕ್ಕೆ ಹೆಚ್ಚು ಕೆಲವಕ್ಕೆ ಕಡಿಮೆ  ಇರುತ್ತೆ" 
" ನಮ್ಮನ್ನು ಮರೀಬೇಡಿ ಅಕ್ಕ"
i was amazed at her information gathering ability. One of the important trait for an entrepreneur. ತನ್ನ ಅಕ್ಕ ಪಕ್ಕದಲ್ಲಿ ಏನು ನಡೀತಿದೆ   ಅಂತ... 
ನಾನು 'ಇಲ್ಲ,  ಅಲ್ಲಿ ಜಿನಸಿ  ತೇಗೋತೇನೆ,ತರಕಾರಿ ಹೂ ಎಲ್ಲ   ನಿಮ್ಮ ಹತ್ರಾನೇ ತೆಗೊಳ್ಳೋದು ಅಂದೆ. 
ತಮಿಳು  ಅವಳ ಮಾತೃಭಾಷೆ . ಆದರೆ ಸಲೀಸಾಗಿ  ಕನ್ನಡ,ಹಿಂದಿ ಇಂಗ್ಲೀಷ ಎಲ್ಲಾ ಮಾತಾಡ್ತಾಳೆ. 
yes yes, no no, 25 rupees only.......sab kuch lE jaao, paise kal dEnaa... ವಗೈರೆ ವಗೈರೆ... 
ನಮ್ಮ ಏರಿಯಾ ದಲ್ಲಿ ಹೆಚ್ಚ್ಚು ಪಿ ಜಿ ಗಳು.  ಈ ಮನೆಗೆ ಶಿಫ್ಟ್ ಆಗಿ  ೫ ವರ್ಷ. ಇಷ್ಟರಲ್ಲೇ ಹಲವಾರು ಇಂಡಿಪೆಂಡೆಂಟ್ ಮನೆಗಳನ್ನು ನೆಲಸಮ   ಮಾಡಿ, ಬಹುಮಹಡಿ  ಪಿ ಜಿ ಯನ್ನಾಗಿ ಮಾಡಿದ್ದಾರೆ. ಗಂಡು ಮಕ್ಕಳ  ಪಿ ಜಿ ಯಲ್ಲಿ ಹೆಚ್ಚಾಗಿ ನಾರ್ಥ್ ನ ಅಡಿಗೆಯವರು.  ಅವರಿಗೆ ಹಿಂದಿ ಬಿಟ್ಟರೆ ಬೇರೆ ಭಾಷೆ  ಬರುವುದಿಲ್ಲ.  ನಮ್ಮತರಕಾರಿಯವಳ   ಜತೆ ಕುಶಲೋಪರಿ  , ಕೆಲವೊಮ್ಮೆ ಜಗಳ ಕೂಡ (ಸೀರಿಯಸ್  ಅಲ್ಲ,ತಮಾಷೆಗೆ ) ಆಡುತ್ತಾರೆ. 
ನನ್ನ ಹತ್ತಿರ ವಾಕ್ ಹೋಗುವಾಗ  ಮೊಬೈಲ್ ಇರಲ್ಲ. ಇವತ್ತು ಶುಂಠಿ ತರುವಾಗ ಅವಳಿಗೆ ಕೇಳಿ ಅವಳದ್ದೊಂದು ಫೋಟೋ ತೆಗೆದೇ. 
"ಇವತ್ತು ಅಷ್ಟೊಂದು ಚೆನ್ನಾಗಿರೋ ತರಕಾರಿ ಇಲ್ಲ. ಇನ್ನೊಂದ್ಸಲ ಫೋಟೋ ತೇಗಿ ಅಕ್ಕ ಅಂದಳು :-)


January 28, 2019

ಪತ್ತೇದಾರಿಣಿ ಮೇದಿನಿ - a short story


ವಂದನಾ ಮುಂಜಾನೆ ಎದ್ದು ನೆಲಕ್ಕೆ  ಕಾಲಾನಿಸಿದವಳೇ 'ಹಾಂ" ಅಂತ ಕಿರುಚಿದಳು. ಅಷ್ಟು ನೋವು. ನಿಧಾನಕ್ಕೆ ಕಾಲು ಎತ್ತಿ ಕಾಲ್ಬುಡ ನೋಡಿದಾಗ ಪಾದದ ತುಂಬಾ ಗೀರಿದ ಗಾಯ. ರಕ್ತ ಅಲ್ಲಲ್ಲೇ ಒಣಗಿತ್ತು. ನಿಧಾನಕ್ಕೆ ಬಾತರೂಮಿಗೆ ಹೋಗಿ ಕಾಲು ನೀರಿನಿಂದ ತೊಳೆದಳು. ತೊಳೆದ ಮೆಲಂತೂ ಕಾಲಲ್ಲಿ ಅಸಾಧ್ಯ ನೋವು, ಉರಿ.  ಚಳಿಗೆ ಕೈ ಬೆರಳು ಕಾಲಿನ ಹಿಮ್ಮಡಿ ಒಡೆಯೋದು ಅವಳಿಗೆ ಗೊತ್ತು. ಆದರೆ ಗೀರಿದ ಗಾಯ ಇದೆ ಮೊದಲು. ಯಾರೋ ಚೂಪಾದ ಕತ್ತಿಯಿಂದ ಕಾಲ ಮೇಲೆಲ್ಲಾ ಗೀಚಿದ ಹಾಗಿತ್ತು. ಹಾಗೆ ನಡೆದಾಡಿದ್ದರಿಂದ ಗಾಯಗಳಿಂದ ರಕ್ತ ಒಸರಲಾರಂಭಿಸಿತು . ಅಡಿಗೆ ಮನೆಗೆ ಹೋಗುವ ಆಲೋಚನೆ ಬಿಟ್ಟು ಹಾಳ್ ನಲ್ಲಿರೋ ಸೋಫಾದ ಮೇಲೆ ಕೂತು, ಅಲ್ಲೇ ಇದ್ದ ಚಿಕ್ಕ ಸ್ಟೂಲ್ ಎಳೆದು ಅದರ ಮೇಲೆ ಕಾಲಿಟ್ಟು ಕೂತುಬಿಟ್ಟಳು. ಅವಳ ಮ್ಮ ಎದ್ದು ಇವಳನ್ನು ಹೀಗೆ ನೋಡಿ 'ಏನಾಯ್ತೆ ನಿನಗೆ '? ಅಂತ ಕೇಳಿದಾಗ ಕಾಲುಬುಡದ ಕಡೆ ಸನ್ನೆ ಮಾಡಿದಳು. ಅವಳ ಕೂಡ ವೆಲ್ಪ ಹೊತ್ತು ಅವಳ ಕಾಲು ಗಮನಿಸಿದಳು ಏನೂ ಹೊಳೆಯಲಿಲ್ಲ. ಬೆಳಗಿನ ತಿಂಡಿ ಅಮ್ಮನೇ ತಯಾರು ಮಾಡಿದರು. 
ಹತ್ತು ಗಂಟೆಯಷ್ಟಕ್ಕೆ ಗಂಡನ ಜತೆ ಕಾರಲ್ಲಿ ಹೋಗಿ ಡಾಕ್ಟರ ಹತ್ತಿರ ಹೋಗಿ ಬಂದಳು. ಅವರು ಆಂಟಿಬಯೋಟಿಕ್ ಮತ್ತು ಮುಲಾಮು ಕೊಟ್ಟರು ಹಚ್ಚಲು , ಹಾಗೆ ಎರಡು ದಿನ ಆದಷ್ಟು ಕಡಿಮೆ ನಡೆದಾಡಲು ಸೂಚಿಸಿದರು. ಎರಡು ದಿನದ ನಂತರ ಕಾಲಿನ ಗಾಯ ಗುಣವಾಯ್ತು. ಆದರೆ ಅದರ ಮಾರನೇ ದಿನ ಪುನ: ಯಥಾಪ್ರಕಾರ ಅವಳ ಕಾಲಿಗೆ ಗಾಯಗಳಾಯಿತಲ್ಲದೆ  ಮನೆಯ ಇತರರ ಪಾದಗಳಿಗೂ ಚಿಕ್ಕ ಪುಟ್ಟ ಗೀರಿದ ಗಾಯಗಳು ಕಾಣಿಸಲಾರಂಭಿಸಿದವು. 
ಅವಳ ಅಮ್ಮ 'ಇದು ಭೂತದ ಕಾಟವೇ ಇರಬೇಕು . ಮೊನ್ನೆ ನೀನು ಡಾಕ್ಟರ್ ಬಳಿ ಹೋದ ಮೇಲೆ ಕುಲ ಪುರೋಹಿತರಿಗೆ ಫೋನ್ ಮಾಡಿದ್ದೆ. ಗ್ರಾಚಾರ ಸರಿಯಿಲ್ಲ ,ಭೂತ ಪ್ರೇತಗಳ ಬಾಧೆಯಿದೆ ,  ಯಾವುದೋ ಹೋಮ ಮಾಡಬೇಕೆಂದು ಹೇಳಿದ್ದಾರೆ. ನೀನು ಆಮೇಲೆ ಸ್ವಲ್ಪ ಫೋನ್ ಮಾಡಿ ವಿಚಾರಿಸು ಅಂದಳು. 
ಅಷ್ಟ್ರಲ್ಲಿ ವಂದನಾಳ ಫೋನ್ ರಿಂಗಣಿಸಿತು. ಅವಳ ಸ್ನೇಹಿತೆ ಮೇದಿನಿ . ಮರುದಿನ ಇವಳಲ್ಲಿ ಬರುವವಳಿದ್ದಳು. ವಂದನಾಳ ಅಮ್ಮ ಗೊಣಗಿದರು ;ಅವಳಿಗೆ ಈವಾಗಲೇ ಬರಬೇಕಿತ್ತೇ ?
ಏನಮ್ಮ ನಿನಗೆ ಅವಳನ್ನು ಕಂಡರೆ ಅಷ್ಟಕ್ಕಷ್ಟೇ. ಅವಳು ನಮ್ಮನ್ನೆಲ್ಲ ಎಷ್ಟು ಪ್ರೀತಿ ಮಾಡ್ತಾಳೆ. 
ವಂದನಾಳ ಅಮ್ಮನಿಗೆ, ಲಕ್ಷಗಟ್ಟಲೆ ಸಂಬಳ ಬರುತ್ತಿದ್ದ, ದೇಶ ವಿದೇಶಗಳಿಗೆ ಹೋಗುವ ಅವಕಾಶವಿದ್ದ ಕೆಲಸವನ್ನು  ಬಿಟ್ಟು, ಮೇದಿನಿ ಹಳ್ಳಿಯಲ್ಲಿದ್ದುಕೊಂಡು ತೋಟ ಮಾಡುತ್ತಾಳೆ ಎಂಬ  ಕಾರಣಕ್ಕೆ ಅವಳ ಮೇಲೆ  ಉದಾಸೀನ. ಆದರೆ ಅವಳು ಬರುವಾಗ ತರುವ ಬೀನ್ಸ್, ಎಲೆಕೋಸು, ಬೆಂಡೆಕಾಯಿ , ಹೂಕೋಸು ನೋಡಿದಾಗ ಆ ಹೂಕೋಸಿಗಿಂತ ದೊಡ್ಡದಾದ ನಗು ಅವರ ಮುಖದಲ್ಲಿ ಅರಳುತ್ತಿತ್ತು.  
ವಂದನಾ ತನ್ನ ಕಾಲಿನ ಗಾಯದ ಬಗ್ಗೆ ಮೇದಿನಿಗೆ ಹೇಳುತ್ತಾ ಇದ್ದಳು. ಇರಲಿ ಹೇಗೂ ನಾಳೆ ಬರ್ತೀನಿ ಅಲ್ಲವಾ ನೋಡುತ್ತೇನೆ ಅಂತ ಹೇಳಿ ಫೋನ್ ಆ ಕಡೆಯಿಂದ ಇಟ್ಟಳು. 
ಮೇದಿನಿ ಇರೋದು ಬೆಂಗಳೂರು - ತಮಿಳನಾಡು ಗಡಿ ಪ್ರದೇಶದಲ್ಲಿ. ಅವಳೇ ಕಾರು ಬಿಟ್ಟುಕೊಂಡು ಬರುತ್ತಿದ್ದಳು. ಬೆಂಗಳೂರಿನಲ್ಲಿ ಏನಾದರೂ horticulture ಎಕ್ಸಿಬಿಷನ್  ಅಥವಾ ವರ್ಕ್ಷ ಶಾಪ್ , ಬೀಜ ಮೇಳ ಮುಂತಾದವುಗಳು ಇದ್ದರೆ ಮಾತ್ರ ಬೆಂಗಳೂರಿಗೆ ಬರುತ್ತಿದ್ದಳು. 
ಮರುದಿನ ಬಂದ ಕೂಡಲೇ ಅವಳು ತಂಡ ಶೀತಗಾರದಿಂದ ಅವಳ ತೋಟದಲ್ಲಿ ಸಾಕಿರುವ ಎಮ್ಮೆಯಹಾಲನ್ನು  ಬಾಟಲಿನಿಂದ ತೆಗೆದು ಬಿಸಿ ಮಾಡಲು ಇಟ್ಟಳು. ಬೆಳಗಿನೆ ಕ್ರಿಯೆಗಳನ್ನೆಲ್ಲ ಮುಗಿಸಿ ಅವಲೇ ಫಿಲ್ಟರ್  ನಲ್ಲಿ ಹಾಕಿದ  ಡಿಕಾಕ್ಷನ್ ನಿಎಂದ  ಎಲ್ಲರಿಗೂ ಕಾಫಿ ಮಾಡಿದಳು. ಅಷ್ಟಲ್ಲದೇ ಪಡ್ಡು ಮಾಡಲು ಹಿಟ್ಟು ಸಹ ಮಾಡಿಕೊಂಡು ಬಂದಿದ್ದಳು. ಅವಳು ಊರಿನಿಂದ ಬೆಳಗಿನ ಜಾವ ಮೂರು ಗಂಟೆಗೆ ಮನೆ ಬಿಟ್ಟು  ಎಂಟುಗಂಟೆಗೆ ಬೆಂಗಳೂರಿನಲ್ಲಿದ್ದಳು. ಅವರ ಕಾಲಿನ ಗಾಯದ ಬಗ್ಗೆ ಕೇಳುತ್ತ ಕಾಫಿ ಕುಡಿತಿದ್ದಳು. ಅವಳ ಗಮನ ಬಾಲ್ಕನಿ ಬಾಗಿಲ ಬಳಿ ಒಡೆದ ಗಾಜಿನ ಗ್ಲಾಸ್ ಕಡೆ  ಹೋಯಿತು. 
"ಆ ಗ್ಲಾಸ್ ಒಡೆದು ಎಷ್ಟು ದಿನ ಆಯಿತ್ತು ?
ನಾಲ್ಕೈದು ದಿನ ಆಯ್ತು."
ಅದಾದ ಮೇಲೆ ಕಾಲಿನ ಗೀರು ಕಾಣಿಸಿಕೊಂಡಿದ್ದಾ? 
ಇರಬಹುದು ಗೊತ್ತಿಲ್ಲ 
ಬಾಲ್ಕನಿ ಯಿಂದ ಅಡುಗೆ ಕೋಣೆಗೆ  ಬರುವ ಮುಂಚೆ ಕಾಲೊರೆಸುವ ಮ್ಯಾಟ್ ಒಂದು ಇತ್ತು. ಕಾಫಿ ಕುಡಿದಾದ  ಮೇಲೆ ಆ ಮ್ಯಾಟನ್ನು ಮೇದಿನಿ ಸರಿ ಜಾಡಿಸಿದಳು. ಅದರಿಂದ ಚಿಕ್ಕ ಪುಟ್ಟ ಗಾಜಿನ ಚೂರು ಈಚೆಗೆ ಬಿದ್ದವು. 
"ನೋಡಿ ಇದೆ ನಿಮ್ಮ ಕಾಲಿನ ಗಾಯಕ್ಕೆ ಕಾರಣ. ಗಾಜು ಬಿದ್ದು ಒಡೆದಾಗ ಅದರ ಕೆಲವು  ಚೂರು ಈ ಮ್ಯಾಟ್ ಒಳಗೆ ಸಿಕ್ಕಿಹಾಕಿಕೊಂಡಿತ್ತು .  ಮೆತ್ತನೆಯ ಕಾಲು ಮ್ಯಾಟ್ ನಲ್ಲಿ ಬಿದ್ದ ಗಾಜಿನ ಚೂರು ನಿಮಗೆ ಕಾಣಿಸಿಲ್ಲ. ಕಾಲು ಒರೆಸುವಾಗ ಅದು ಕಾಲಿಗೆ ತಾಗಿ ಗಾಯ ಆಗಿದೆ ಅಷ್ಟೇ ಅಂದಳು ಮೇದಿನಿ. 
ಆದ ಳಲ್ಲವೇ ಆಕೆ ಡಿಟೆಕ್ಟಿವ್ ಮೇದಿನಿ :-) 

September 30, 2018

ಆಶಾ ಜಾವೋರ್ ಮಾಝೆ - ಬಂಗಾಳಿ ಸಿನಿಮಾ

ಆಶಾ ಜಾವೋರ್  ಮಾಝೆ ( -labour of love) ) ನಾನು ಇತ್ತೀಚಿಗೆ ನೋಡಿದ ಚೆಂದದ ಸಿನಿಮಾ . ಒಂದು ಸುಂದರ ಪದ್ಯದ ಹಾಗಿದೆ. ಇಬ್ಬರ synchronised ನೃತ್ಯದ ಹಾಗೆ. ಕಷ್ಟಪಟ್ಟು ದುಡಿದು ಜೀವಿಸುವ ಗಂಡ ಹೆಂಡತಿ. ಹೆಂಡತಿಗೆ ಬೆಳಿಗ್ಗೆ ಹೋದರೆ ಸಂಜೆ ಮರಳುವ ಕೆಲಸ , ಆತನಿಗೆ ರಾತ್ರಿ ಶಿಫ್ಟ್ . ಅವಳು ಒಂದು ಹೆಂಗಸರ ಕೈಚೀಲ ತಯಾರಿಸುವ ಘಟಕದಲ್ಲಿ ಸೂಪ್ರವೈಸರ್ ಕೆಲಸ ಆದರೆ  ಅವನಿಗೆ ಪ್ರಿಂಟಿಂಗ್ ಪ್ರೆಸ್ ನಲ್ಲಿ.  ಅವಳು ಬೆಳಿಗ್ಗೆ ಎದ್ದು ಅಡಿಗೆ- ಡಬ್ಬಿಗೆ  ತಿಂಡಿ ತಯಾರಿಸಿ ಫ್ರಿಜ್ ನಲ್ಲಿ ಇತ್ತು ಹೋಗುತ್ತಾಳೆ. ಹಾಗೆ ಬಟ್ಟೆ ಒಗೆದು ಬಕೆಟ್ ನಲ್ಲಿ ಇಟ್ಟಿರುತ್ತಾಳೆ. ಅವನು ಬೆಳಿಗ್ಗೆ ಮನೆಗೆ ಬಂಡಿ ಟಿ ಕುಡಿದು ಸ್ನಾನ ಮಾಡಿ ಅವಳು ಒಗೆದ ಬಟ್ಟೆ ಒಣಗಿಸಲು ಹಾಕುತ್ತಾನೆ.( ಬಹುಶ: ಇಬ್ಬರಿಗೂ ದಿನದ ಕೂಲಿ ಕೊಡುತ್ತಾರೆ. ಯಾಕೆಂದರೆ ಯಾಕೆಂದರೆ ಇಬ್ಬರೂ ಮನೆಯ ಕಪಾಟಿನ ಡಬ್ಬಿಯಲ್ಲಿ ದುಡ್ಡು ಹಾಕುತ್ತಾರೆ. ) ನಂತರ ಬ್ಯಾಂಕ್ ಗೆ ಹೋಗಿ ದುಡ್ಡು ಡೆಪಾಸಿಟ್ ಮಾಡುತ್ತಾನೆ. ಹಾಗೆ ಬರುತ್ತಾ ಮೀನು ತಂದು ಫ್ರಿಜ್ ನಲ್ಲಿ ಹಾಕುತ್ತಾನೆ. ಅವಳು ಮಾಡಿಟ್ಟ ಊಟ ಮಾಡಿ ಮಲಗುತ್ತಾನೆ. ಸಂಜೆ ಅವಳು ಮನೆಗೆ ತಲುಪುವಷ್ಟರಲ್ಲಿ ಅವನು ಕೆಲಸಕ್ಕೆ ಹೋಗಿರುತ್ತಾನೆ. ಹೋಗ್ತಾ ಫ್ರಿಜ್ ನಲ್ಲಿಟ್ಟ  ಊಟದ ಡಬ್ಬಿ ತೆಗೆದುಕೊಂಡು ಹೋಗುತ್ತಾನೆ. ಅವಳು ಮನೆಗೆ ಬಂದು ಟಿ ಕುಡಿದು,  ಒಣಗಿದ ಬಟ್ಟೆ ತಂದು ಫೋಲ್ಡ್ ಮಾಡುತ್ತಾಳೆ . ಬಟ್ಟೆಗೆ ಇಸ್ತ್ರಿ ಹಾಕಿ ಊಟ ಮಾಡಿ ಮಲಗುತ್ತಾಳೆ. ಬೆಳಿಗ್ಗೆ ಅವಳು ಬೇಗ ಎದ್ದು ಫ್ರಿಜ್ ನಲ್ಲಿದ್ದ ಮಿನುಗಳನ್ನು ತೆಗೆದು ಹೊರಗಿಡುತ್ತಾಳೆ. ಅಡಿಗೆ -ಚಪ್ಪಾತಿ ಪಲ್ಯ , ಮೀನಿನ ಖಾದ್ಯಮಾಡಿಡುತ್ತಾಳೆ. ಬೆಳಿಗ್ಗೆ ಒಂದು ಗಳಿಗೆ ಇಬ್ಬರ   ಭೇಟಿ. ಅವಳು ಇಬ್ಬರಿಗೂ ಚಹಾ ಮಾಡಿಡುತ್ತಾಳೆ . ಅವಳು ಚಹಾ ಕುಡಿದಾದ ನಂತರ ಅವನು ಬಂದು ಟಿ ಕುಡಿತಾ ಇರುವಾಗಲೇ ಅವಳು ಚಪ್ಪಲಿ ಮೆಟ್ಟಿ ಕೆಳಸಕ್ಕೆ ಹೊರಡುತ್ತಾಳೆ. ಅವಳು ಮನೆಯ ಓಣಿ ದಾಟಿ ಅದ್ರಶ್ಯ  ಆಗುವ ತನಕ ಅವು ಕಿಟಕಿಯಿಂದ ನೋಡುತ್ತಾನೆ. 
ಈ ಸಿನಿಮಾದಲ್ಲಿ ಸಂಭಾಷಣೆ ಇಲ್ಲ. ಇದು ಯಾವುದೇ ಬಾಷೆಯ  ಸಿನಿಮಾ ಆಗಿರ ಬಹುದು ಬೆಂಗಾಲಿ ಶಾಸ್ತ್ರೀಯ ಸಂಗೀತ ಮತ್ತು ಬೆಂಗಾಲಿಯಲ್ಲಿ ಶ್ಲೋಗನ್  ಕೂಗುತ್ತ ಹೋಗುವ ಒಂದು ದೃಶ್ಯ  ಇದ್ದುದ್ದರಿಂದ ಇದು ಬೆಂಗಾಲಿ ಸಿನಿಮಾ  ಅಂತ ಗೊತ್ತಾಗುತ್ತದೆ.  :-)
ನಾನು ಯೂ ಟ್ಯೂಬ್  ನಲ್ಲಿ ನೋಡಿದ್ದು.  ಕಪ್ಪು ಬಿಳಿಪು ಸಿನಿಮಾ ಆಗಿತ್ತು. amazon  ಪ್ರೈಮ್  ನಲ್ಲಿ ಕಲರ್ ಸಿನಿಮಾ  ಸಿಗುತ್ತದೆ. ಯಾರೋ ಅಪ್ಲೋಡ್ ಮಾಡುವಾಗ ಸಿನಿಮಾ ಕಪ್ಪು ಬಿಳುಪಾಯಿತಾ ಗೊತ್ತಿಲ್ಲ, ಆದರೆ ನನಗಂತೂ ತುಂಬಾ ಇಷ್ಟ ಆಯ್ತು. :-)  ಯು ಟ್ಯೂಬ್ ಲಿಂಕ್ ಇಲ್ಲಿ ಹಾಕುತ್ತೇನೆ. ಇಷ್ಟ ಇದ್ದವರು ನೋಡ ಬಹುದು.  ನಾನಂತು ಈ ಸಿನಿಮಾದಲ್ಲಿ ಕಳೆದು ಹೋದೆ. ನೀವೇನಾದರೂ ನೋಡಿದ್ರೆ ನಿಮಗೇನನ್ನಿಸಿತು ಹೇಳಿ. ಸಿನಿಮಾ ಸ್ವಲ್ಪ ಸ್ಲೋ , ಬಟ್ i like such movies. 

ನನಗನ್ನಿಸಿದ್ದು : ಜಗಳ ಮಾಡಕ್ಕೆ ಪುರುಸೋತ್ತಿರಲ್ಲ. ಮತ್ತು ಭಾನುವಾರ ಏನು ಮಾಡುತ್ತಾರೆ ಅಂತ ಕುತೂಹಲ .  ಅಥವಾ ಇಬ್ಬರಿಗೂ ಒಟ್ಟಿಗೆ ರಾಜಾ ಇಲ್ಲವೇನೋ   

ಸಿನಿಮಾದ blurb  ಹೀಗಿದೆ. 
Set in the crumbling environs of Calcutta, LABOUR OF LOVE is a lyrical unfolding of two ordinary lives suspended in the duress of a spiraling recession. They are married to a cycle of work and domestic routine, and long stretches of waiting in the silence of an empty house. They share each other's solitude in pursuit of a distant dream that visits them briefly every morning. Incorporating poignant political undertones, director Aditya Vikram Sengupta creates a stylistically beautiful film that depicts the challenges of sustaining love in a fast transitioning world via a simultaneous sensation of breathlessness and space.
ಎಷ್ಟೊಂದು ಬೆಂಗಾಲಿ ಸಿನಿಮಾ ನೋಡಿದೆ ಅಂದ್ರೆ, ಹಿಂದಿನ ತಿಂಗಳು ಕೊಲ್ಕಾತಾ ಗೆ ಹೋದಾಗ ಸಲೀಸಾಗಿ ಓದಿದ್ದು ಮಾತ್ರವಲ್ಲ  ಅವರ ಭಾಷೆ ಕೂಡ  ಅರ್ಥ ಆಗ್ತಿತ್ತು. ಶ್ರೀಕಾಂತಗಂತೂ ಅಚ್ಚರಿ. :-)