January 28, 2019

ಪತ್ತೇದಾರಿಣಿ ಮೇದಿನಿ - a short story


ವಂದನಾ ಮುಂಜಾನೆ ಎದ್ದು ನೆಲಕ್ಕೆ  ಕಾಲಾನಿಸಿದವಳೇ 'ಹಾಂ" ಅಂತ ಕಿರುಚಿದಳು. ಅಷ್ಟು ನೋವು. ನಿಧಾನಕ್ಕೆ ಕಾಲು ಎತ್ತಿ ಕಾಲ್ಬುಡ ನೋಡಿದಾಗ ಪಾದದ ತುಂಬಾ ಗೀರಿದ ಗಾಯ. ರಕ್ತ ಅಲ್ಲಲ್ಲೇ ಒಣಗಿತ್ತು. ನಿಧಾನಕ್ಕೆ ಬಾತರೂಮಿಗೆ ಹೋಗಿ ಕಾಲು ನೀರಿನಿಂದ ತೊಳೆದಳು. ತೊಳೆದ ಮೆಲಂತೂ ಕಾಲಲ್ಲಿ ಅಸಾಧ್ಯ ನೋವು, ಉರಿ.  ಚಳಿಗೆ ಕೈ ಬೆರಳು ಕಾಲಿನ ಹಿಮ್ಮಡಿ ಒಡೆಯೋದು ಅವಳಿಗೆ ಗೊತ್ತು. ಆದರೆ ಗೀರಿದ ಗಾಯ ಇದೆ ಮೊದಲು. ಯಾರೋ ಚೂಪಾದ ಕತ್ತಿಯಿಂದ ಕಾಲ ಮೇಲೆಲ್ಲಾ ಗೀಚಿದ ಹಾಗಿತ್ತು. ಹಾಗೆ ನಡೆದಾಡಿದ್ದರಿಂದ ಗಾಯಗಳಿಂದ ರಕ್ತ ಒಸರಲಾರಂಭಿಸಿತು . ಅಡಿಗೆ ಮನೆಗೆ ಹೋಗುವ ಆಲೋಚನೆ ಬಿಟ್ಟು ಹಾಳ್ ನಲ್ಲಿರೋ ಸೋಫಾದ ಮೇಲೆ ಕೂತು, ಅಲ್ಲೇ ಇದ್ದ ಚಿಕ್ಕ ಸ್ಟೂಲ್ ಎಳೆದು ಅದರ ಮೇಲೆ ಕಾಲಿಟ್ಟು ಕೂತುಬಿಟ್ಟಳು. ಅವಳ ಮ್ಮ ಎದ್ದು ಇವಳನ್ನು ಹೀಗೆ ನೋಡಿ 'ಏನಾಯ್ತೆ ನಿನಗೆ '? ಅಂತ ಕೇಳಿದಾಗ ಕಾಲುಬುಡದ ಕಡೆ ಸನ್ನೆ ಮಾಡಿದಳು. ಅವಳ ಕೂಡ ವೆಲ್ಪ ಹೊತ್ತು ಅವಳ ಕಾಲು ಗಮನಿಸಿದಳು ಏನೂ ಹೊಳೆಯಲಿಲ್ಲ. ಬೆಳಗಿನ ತಿಂಡಿ ಅಮ್ಮನೇ ತಯಾರು ಮಾಡಿದರು. 
ಹತ್ತು ಗಂಟೆಯಷ್ಟಕ್ಕೆ ಗಂಡನ ಜತೆ ಕಾರಲ್ಲಿ ಹೋಗಿ ಡಾಕ್ಟರ ಹತ್ತಿರ ಹೋಗಿ ಬಂದಳು. ಅವರು ಆಂಟಿಬಯೋಟಿಕ್ ಮತ್ತು ಮುಲಾಮು ಕೊಟ್ಟರು ಹಚ್ಚಲು , ಹಾಗೆ ಎರಡು ದಿನ ಆದಷ್ಟು ಕಡಿಮೆ ನಡೆದಾಡಲು ಸೂಚಿಸಿದರು. ಎರಡು ದಿನದ ನಂತರ ಕಾಲಿನ ಗಾಯ ಗುಣವಾಯ್ತು. ಆದರೆ ಅದರ ಮಾರನೇ ದಿನ ಪುನ: ಯಥಾಪ್ರಕಾರ ಅವಳ ಕಾಲಿಗೆ ಗಾಯಗಳಾಯಿತಲ್ಲದೆ  ಮನೆಯ ಇತರರ ಪಾದಗಳಿಗೂ ಚಿಕ್ಕ ಪುಟ್ಟ ಗೀರಿದ ಗಾಯಗಳು ಕಾಣಿಸಲಾರಂಭಿಸಿದವು. 
ಅವಳ ಅಮ್ಮ 'ಇದು ಭೂತದ ಕಾಟವೇ ಇರಬೇಕು . ಮೊನ್ನೆ ನೀನು ಡಾಕ್ಟರ್ ಬಳಿ ಹೋದ ಮೇಲೆ ಕುಲ ಪುರೋಹಿತರಿಗೆ ಫೋನ್ ಮಾಡಿದ್ದೆ. ಗ್ರಾಚಾರ ಸರಿಯಿಲ್ಲ ,ಭೂತ ಪ್ರೇತಗಳ ಬಾಧೆಯಿದೆ ,  ಯಾವುದೋ ಹೋಮ ಮಾಡಬೇಕೆಂದು ಹೇಳಿದ್ದಾರೆ. ನೀನು ಆಮೇಲೆ ಸ್ವಲ್ಪ ಫೋನ್ ಮಾಡಿ ವಿಚಾರಿಸು ಅಂದಳು. 
ಅಷ್ಟ್ರಲ್ಲಿ ವಂದನಾಳ ಫೋನ್ ರಿಂಗಣಿಸಿತು. ಅವಳ ಸ್ನೇಹಿತೆ ಮೇದಿನಿ . ಮರುದಿನ ಇವಳಲ್ಲಿ ಬರುವವಳಿದ್ದಳು. ವಂದನಾಳ ಅಮ್ಮ ಗೊಣಗಿದರು ;ಅವಳಿಗೆ ಈವಾಗಲೇ ಬರಬೇಕಿತ್ತೇ ?
ಏನಮ್ಮ ನಿನಗೆ ಅವಳನ್ನು ಕಂಡರೆ ಅಷ್ಟಕ್ಕಷ್ಟೇ. ಅವಳು ನಮ್ಮನ್ನೆಲ್ಲ ಎಷ್ಟು ಪ್ರೀತಿ ಮಾಡ್ತಾಳೆ. 
ವಂದನಾಳ ಅಮ್ಮನಿಗೆ, ಲಕ್ಷಗಟ್ಟಲೆ ಸಂಬಳ ಬರುತ್ತಿದ್ದ, ದೇಶ ವಿದೇಶಗಳಿಗೆ ಹೋಗುವ ಅವಕಾಶವಿದ್ದ ಕೆಲಸವನ್ನು  ಬಿಟ್ಟು, ಮೇದಿನಿ ಹಳ್ಳಿಯಲ್ಲಿದ್ದುಕೊಂಡು ತೋಟ ಮಾಡುತ್ತಾಳೆ ಎಂಬ  ಕಾರಣಕ್ಕೆ ಅವಳ ಮೇಲೆ  ಉದಾಸೀನ. ಆದರೆ ಅವಳು ಬರುವಾಗ ತರುವ ಬೀನ್ಸ್, ಎಲೆಕೋಸು, ಬೆಂಡೆಕಾಯಿ , ಹೂಕೋಸು ನೋಡಿದಾಗ ಆ ಹೂಕೋಸಿಗಿಂತ ದೊಡ್ಡದಾದ ನಗು ಅವರ ಮುಖದಲ್ಲಿ ಅರಳುತ್ತಿತ್ತು.  
ವಂದನಾ ತನ್ನ ಕಾಲಿನ ಗಾಯದ ಬಗ್ಗೆ ಮೇದಿನಿಗೆ ಹೇಳುತ್ತಾ ಇದ್ದಳು. ಇರಲಿ ಹೇಗೂ ನಾಳೆ ಬರ್ತೀನಿ ಅಲ್ಲವಾ ನೋಡುತ್ತೇನೆ ಅಂತ ಹೇಳಿ ಫೋನ್ ಆ ಕಡೆಯಿಂದ ಇಟ್ಟಳು. 
ಮೇದಿನಿ ಇರೋದು ಬೆಂಗಳೂರು - ತಮಿಳನಾಡು ಗಡಿ ಪ್ರದೇಶದಲ್ಲಿ. ಅವಳೇ ಕಾರು ಬಿಟ್ಟುಕೊಂಡು ಬರುತ್ತಿದ್ದಳು. ಬೆಂಗಳೂರಿನಲ್ಲಿ ಏನಾದರೂ horticulture ಎಕ್ಸಿಬಿಷನ್  ಅಥವಾ ವರ್ಕ್ಷ ಶಾಪ್ , ಬೀಜ ಮೇಳ ಮುಂತಾದವುಗಳು ಇದ್ದರೆ ಮಾತ್ರ ಬೆಂಗಳೂರಿಗೆ ಬರುತ್ತಿದ್ದಳು. 
ಮರುದಿನ ಬಂದ ಕೂಡಲೇ ಅವಳು ತಂಡ ಶೀತಗಾರದಿಂದ ಅವಳ ತೋಟದಲ್ಲಿ ಸಾಕಿರುವ ಎಮ್ಮೆಯಹಾಲನ್ನು  ಬಾಟಲಿನಿಂದ ತೆಗೆದು ಬಿಸಿ ಮಾಡಲು ಇಟ್ಟಳು. ಬೆಳಗಿನೆ ಕ್ರಿಯೆಗಳನ್ನೆಲ್ಲ ಮುಗಿಸಿ ಅವಲೇ ಫಿಲ್ಟರ್  ನಲ್ಲಿ ಹಾಕಿದ  ಡಿಕಾಕ್ಷನ್ ನಿಎಂದ  ಎಲ್ಲರಿಗೂ ಕಾಫಿ ಮಾಡಿದಳು. ಅಷ್ಟಲ್ಲದೇ ಪಡ್ಡು ಮಾಡಲು ಹಿಟ್ಟು ಸಹ ಮಾಡಿಕೊಂಡು ಬಂದಿದ್ದಳು. ಅವಳು ಊರಿನಿಂದ ಬೆಳಗಿನ ಜಾವ ಮೂರು ಗಂಟೆಗೆ ಮನೆ ಬಿಟ್ಟು  ಎಂಟುಗಂಟೆಗೆ ಬೆಂಗಳೂರಿನಲ್ಲಿದ್ದಳು. ಅವರ ಕಾಲಿನ ಗಾಯದ ಬಗ್ಗೆ ಕೇಳುತ್ತ ಕಾಫಿ ಕುಡಿತಿದ್ದಳು. ಅವಳ ಗಮನ ಬಾಲ್ಕನಿ ಬಾಗಿಲ ಬಳಿ ಒಡೆದ ಗಾಜಿನ ಗ್ಲಾಸ್ ಕಡೆ  ಹೋಯಿತು. 
"ಆ ಗ್ಲಾಸ್ ಒಡೆದು ಎಷ್ಟು ದಿನ ಆಯಿತ್ತು ?
ನಾಲ್ಕೈದು ದಿನ ಆಯ್ತು."
ಅದಾದ ಮೇಲೆ ಕಾಲಿನ ಗೀರು ಕಾಣಿಸಿಕೊಂಡಿದ್ದಾ? 
ಇರಬಹುದು ಗೊತ್ತಿಲ್ಲ 
ಬಾಲ್ಕನಿ ಯಿಂದ ಅಡುಗೆ ಕೋಣೆಗೆ  ಬರುವ ಮುಂಚೆ ಕಾಲೊರೆಸುವ ಮ್ಯಾಟ್ ಒಂದು ಇತ್ತು. ಕಾಫಿ ಕುಡಿದಾದ  ಮೇಲೆ ಆ ಮ್ಯಾಟನ್ನು ಮೇದಿನಿ ಸರಿ ಜಾಡಿಸಿದಳು. ಅದರಿಂದ ಚಿಕ್ಕ ಪುಟ್ಟ ಗಾಜಿನ ಚೂರು ಈಚೆಗೆ ಬಿದ್ದವು. 
"ನೋಡಿ ಇದೆ ನಿಮ್ಮ ಕಾಲಿನ ಗಾಯಕ್ಕೆ ಕಾರಣ. ಗಾಜು ಬಿದ್ದು ಒಡೆದಾಗ ಅದರ ಕೆಲವು  ಚೂರು ಈ ಮ್ಯಾಟ್ ಒಳಗೆ ಸಿಕ್ಕಿಹಾಕಿಕೊಂಡಿತ್ತು .  ಮೆತ್ತನೆಯ ಕಾಲು ಮ್ಯಾಟ್ ನಲ್ಲಿ ಬಿದ್ದ ಗಾಜಿನ ಚೂರು ನಿಮಗೆ ಕಾಣಿಸಿಲ್ಲ. ಕಾಲು ಒರೆಸುವಾಗ ಅದು ಕಾಲಿಗೆ ತಾಗಿ ಗಾಯ ಆಗಿದೆ ಅಷ್ಟೇ ಅಂದಳು ಮೇದಿನಿ. 
ಆದ ಳಲ್ಲವೇ ಆಕೆ ಡಿಟೆಕ್ಟಿವ್ ಮೇದಿನಿ :-) 

September 30, 2018

ಆಶಾ ಜಾವೋರ್ ಮಾಝೆ - ಬಂಗಾಳಿ ಸಿನಿಮಾ

ಆಶಾ ಜಾವೋರ್  ಮಾಝೆ ( -labour of love) ) ನಾನು ಇತ್ತೀಚಿಗೆ ನೋಡಿದ ಚೆಂದದ ಸಿನಿಮಾ . ಒಂದು ಸುಂದರ ಪದ್ಯದ ಹಾಗಿದೆ. ಇಬ್ಬರ synchronised ನೃತ್ಯದ ಹಾಗೆ. ಕಷ್ಟಪಟ್ಟು ದುಡಿದು ಜೀವಿಸುವ ಗಂಡ ಹೆಂಡತಿ. ಹೆಂಡತಿಗೆ ಬೆಳಿಗ್ಗೆ ಹೋದರೆ ಸಂಜೆ ಮರಳುವ ಕೆಲಸ , ಆತನಿಗೆ ರಾತ್ರಿ ಶಿಫ್ಟ್ . ಅವಳು ಒಂದು ಹೆಂಗಸರ ಕೈಚೀಲ ತಯಾರಿಸುವ ಘಟಕದಲ್ಲಿ ಸೂಪ್ರವೈಸರ್ ಕೆಲಸ ಆದರೆ  ಅವನಿಗೆ ಪ್ರಿಂಟಿಂಗ್ ಪ್ರೆಸ್ ನಲ್ಲಿ.  ಅವಳು ಬೆಳಿಗ್ಗೆ ಎದ್ದು ಅಡಿಗೆ- ಡಬ್ಬಿಗೆ  ತಿಂಡಿ ತಯಾರಿಸಿ ಫ್ರಿಜ್ ನಲ್ಲಿ ಇತ್ತು ಹೋಗುತ್ತಾಳೆ. ಹಾಗೆ ಬಟ್ಟೆ ಒಗೆದು ಬಕೆಟ್ ನಲ್ಲಿ ಇಟ್ಟಿರುತ್ತಾಳೆ. ಅವನು ಬೆಳಿಗ್ಗೆ ಮನೆಗೆ ಬಂಡಿ ಟಿ ಕುಡಿದು ಸ್ನಾನ ಮಾಡಿ ಅವಳು ಒಗೆದ ಬಟ್ಟೆ ಒಣಗಿಸಲು ಹಾಕುತ್ತಾನೆ.( ಬಹುಶ: ಇಬ್ಬರಿಗೂ ದಿನದ ಕೂಲಿ ಕೊಡುತ್ತಾರೆ. ಯಾಕೆಂದರೆ ಯಾಕೆಂದರೆ ಇಬ್ಬರೂ ಮನೆಯ ಕಪಾಟಿನ ಡಬ್ಬಿಯಲ್ಲಿ ದುಡ್ಡು ಹಾಕುತ್ತಾರೆ. ) ನಂತರ ಬ್ಯಾಂಕ್ ಗೆ ಹೋಗಿ ದುಡ್ಡು ಡೆಪಾಸಿಟ್ ಮಾಡುತ್ತಾನೆ. ಹಾಗೆ ಬರುತ್ತಾ ಮೀನು ತಂದು ಫ್ರಿಜ್ ನಲ್ಲಿ ಹಾಕುತ್ತಾನೆ. ಅವಳು ಮಾಡಿಟ್ಟ ಊಟ ಮಾಡಿ ಮಲಗುತ್ತಾನೆ. ಸಂಜೆ ಅವಳು ಮನೆಗೆ ತಲುಪುವಷ್ಟರಲ್ಲಿ ಅವನು ಕೆಲಸಕ್ಕೆ ಹೋಗಿರುತ್ತಾನೆ. ಹೋಗ್ತಾ ಫ್ರಿಜ್ ನಲ್ಲಿಟ್ಟ  ಊಟದ ಡಬ್ಬಿ ತೆಗೆದುಕೊಂಡು ಹೋಗುತ್ತಾನೆ. ಅವಳು ಮನೆಗೆ ಬಂದು ಟಿ ಕುಡಿದು,  ಒಣಗಿದ ಬಟ್ಟೆ ತಂದು ಫೋಲ್ಡ್ ಮಾಡುತ್ತಾಳೆ . ಬಟ್ಟೆಗೆ ಇಸ್ತ್ರಿ ಹಾಕಿ ಊಟ ಮಾಡಿ ಮಲಗುತ್ತಾಳೆ. ಬೆಳಿಗ್ಗೆ ಅವಳು ಬೇಗ ಎದ್ದು ಫ್ರಿಜ್ ನಲ್ಲಿದ್ದ ಮಿನುಗಳನ್ನು ತೆಗೆದು ಹೊರಗಿಡುತ್ತಾಳೆ. ಅಡಿಗೆ -ಚಪ್ಪಾತಿ ಪಲ್ಯ , ಮೀನಿನ ಖಾದ್ಯಮಾಡಿಡುತ್ತಾಳೆ. ಬೆಳಿಗ್ಗೆ ಒಂದು ಗಳಿಗೆ ಇಬ್ಬರ   ಭೇಟಿ. ಅವಳು ಇಬ್ಬರಿಗೂ ಚಹಾ ಮಾಡಿಡುತ್ತಾಳೆ . ಅವಳು ಚಹಾ ಕುಡಿದಾದ ನಂತರ ಅವನು ಬಂದು ಟಿ ಕುಡಿತಾ ಇರುವಾಗಲೇ ಅವಳು ಚಪ್ಪಲಿ ಮೆಟ್ಟಿ ಕೆಳಸಕ್ಕೆ ಹೊರಡುತ್ತಾಳೆ. ಅವಳು ಮನೆಯ ಓಣಿ ದಾಟಿ ಅದ್ರಶ್ಯ  ಆಗುವ ತನಕ ಅವು ಕಿಟಕಿಯಿಂದ ನೋಡುತ್ತಾನೆ. 
ಈ ಸಿನಿಮಾದಲ್ಲಿ ಸಂಭಾಷಣೆ ಇಲ್ಲ. ಇದು ಯಾವುದೇ ಬಾಷೆಯ  ಸಿನಿಮಾ ಆಗಿರ ಬಹುದು ಬೆಂಗಾಲಿ ಶಾಸ್ತ್ರೀಯ ಸಂಗೀತ ಮತ್ತು ಬೆಂಗಾಲಿಯಲ್ಲಿ ಶ್ಲೋಗನ್  ಕೂಗುತ್ತ ಹೋಗುವ ಒಂದು ದೃಶ್ಯ  ಇದ್ದುದ್ದರಿಂದ ಇದು ಬೆಂಗಾಲಿ ಸಿನಿಮಾ  ಅಂತ ಗೊತ್ತಾಗುತ್ತದೆ.  :-)
ನಾನು ಯೂ ಟ್ಯೂಬ್  ನಲ್ಲಿ ನೋಡಿದ್ದು.  ಕಪ್ಪು ಬಿಳಿಪು ಸಿನಿಮಾ ಆಗಿತ್ತು. amazon  ಪ್ರೈಮ್  ನಲ್ಲಿ ಕಲರ್ ಸಿನಿಮಾ  ಸಿಗುತ್ತದೆ. ಯಾರೋ ಅಪ್ಲೋಡ್ ಮಾಡುವಾಗ ಸಿನಿಮಾ ಕಪ್ಪು ಬಿಳುಪಾಯಿತಾ ಗೊತ್ತಿಲ್ಲ, ಆದರೆ ನನಗಂತೂ ತುಂಬಾ ಇಷ್ಟ ಆಯ್ತು. :-)  ಯು ಟ್ಯೂಬ್ ಲಿಂಕ್ ಇಲ್ಲಿ ಹಾಕುತ್ತೇನೆ. ಇಷ್ಟ ಇದ್ದವರು ನೋಡ ಬಹುದು.  ನಾನಂತು ಈ ಸಿನಿಮಾದಲ್ಲಿ ಕಳೆದು ಹೋದೆ. ನೀವೇನಾದರೂ ನೋಡಿದ್ರೆ ನಿಮಗೇನನ್ನಿಸಿತು ಹೇಳಿ. ಸಿನಿಮಾ ಸ್ವಲ್ಪ ಸ್ಲೋ , ಬಟ್ i like such movies. 

ನನಗನ್ನಿಸಿದ್ದು : ಜಗಳ ಮಾಡಕ್ಕೆ ಪುರುಸೋತ್ತಿರಲ್ಲ. ಮತ್ತು ಭಾನುವಾರ ಏನು ಮಾಡುತ್ತಾರೆ ಅಂತ ಕುತೂಹಲ .  ಅಥವಾ ಇಬ್ಬರಿಗೂ ಒಟ್ಟಿಗೆ ರಾಜಾ ಇಲ್ಲವೇನೋ   

ಸಿನಿಮಾದ blurb  ಹೀಗಿದೆ. 
Set in the crumbling environs of Calcutta, LABOUR OF LOVE is a lyrical unfolding of two ordinary lives suspended in the duress of a spiraling recession. They are married to a cycle of work and domestic routine, and long stretches of waiting in the silence of an empty house. They share each other's solitude in pursuit of a distant dream that visits them briefly every morning. Incorporating poignant political undertones, director Aditya Vikram Sengupta creates a stylistically beautiful film that depicts the challenges of sustaining love in a fast transitioning world via a simultaneous sensation of breathlessness and space.
ಎಷ್ಟೊಂದು ಬೆಂಗಾಲಿ ಸಿನಿಮಾ ನೋಡಿದೆ ಅಂದ್ರೆ, ಹಿಂದಿನ ತಿಂಗಳು ಕೊಲ್ಕಾತಾ ಗೆ ಹೋದಾಗ ಸಲೀಸಾಗಿ ಓದಿದ್ದು ಮಾತ್ರವಲ್ಲ  ಅವರ ಭಾಷೆ ಕೂಡ  ಅರ್ಥ ಆಗ್ತಿತ್ತು. ಶ್ರೀಕಾಂತಗಂತೂ ಅಚ್ಚರಿ. :-) 

September 24, 2018

ಮಡಿವಾಳ ಕೆರೆ ಬಳಿ ಒಂದು ಸಂಜೆ

ಮಳೆ ಬಂದು ಬೆಂಗಳೂರು ಒಂದು ತರಹ ಚಂದ ಆಗಿದೆ.
ನಿಹಾರಿಕಾ ಇಲ್ಲಿ ಬಂದು ಚಿತ್ರ ಬರೀತಾ ಇದ್ರೆ ನಾನು ಕೆಲವು ಫೋಟೋ ತೆಗೆದೆ. ಕೆರೆಯ ಹೂಳೆತ್ತಿದ್ದರಿಂದ ಕೆರೆ ತುಂಬಿದೆ. ಕೆರೆಯ ಮಧ್ಯ ಇರುವ mangroves ನಲ್ಲಿ ಹಲವಾರು ವಲಸಿಗ ಹಕ್ಕಿಗಳು ಬಿಡುಬಿಟ್ಟಿವೆ. ರಿಪೇರಿ ಕೆಲಸ ನಡೆದಿದೆ. 












ಒಂದು ಬಸವನ ಹೂಳ 




ಅಸ್ತಮಿಸುವ ಸೂರ್ಯನ ಬೆಳಕಿನಿಂದ ಮನೆಯ ಕಿಟಕಿಗಾಜುಗಳಿಗೆ ಬೆಂಕಿ ಹತ್ತಿದಂತಹ feel. 















September 18, 2018

ಕಲೆಬರಹ

ನಿಹಾರಿಕಾ ಹೊಸದೊಂದು ಬ್ಲಾಗ್ ಶುರು ಮಾಡಿದ್ದಾಳೆ. ಅವಳು ಬಿಡಿಸಿದ ಚಿತ್ರ ದ ಜೊತೆ ಪುಟ್ಟ ಬರಹ. ಆಸಕ್ತಿ ಉಳ್ಳವರು ಕೆಳಗಿನ ಕೊಂಡಿಯಲ್ಲಿ ಓದ ಬಹುದು
https://niharikashenoy.blogspot.com/
ಧನ್ಯವಾದಗಳು
😊😊

September 12, 2018

ಒಂದು ಆನೆಯ ಸುತ್ತ

ಸದ್ದು ಆಡಗಿ  ಸುಮಾರು ಹೊತ್ತಾದರೂ ಅದು ಇನ್ನೂ  ಗಾಳಿಯ್ಲಲಿ ತೇಲುತ್ತಿರುವ ಭಾಸ. ಎರಡು ಕಾಲಿನ ನರ  ಪ್ರಾಣಿಯ ದನಿ ಕಡಿಮೆಯಾಗುತ್ತಾ ಹೋಯಿತು ಹಾಗೆಯೇ ಅಡವಿಯ  ರಾತ್ರಿಯ ಸಮಾಧಾನಕರ  ಸದ್ದುಗಳು  ಶುರುವಾದವು. ಸ್ವಲ್ಪ ಹೊತ್ತು  ನಿಂತೆ. ಘಿಳಿಡುವ ಡುವ ಆಸೆಯನ್ನು ಅದುಮಿಕೊಂಡೆ. ಹಿರಿಯರು ಹೇಳಿದ ಮಾತು ನೆನಪಾಯಿತು. ಎರಡು ಕಾಲಿನ ಪ್ರಾಣಿ ಬಳಿಯಿದ್ದಾಗ ಸದ್ದು  ಮಾಡದೆ ಅಡಗಿಕೊಂಡಿರು . ನಿಧಾನವಾಗಿ ಭಯ ಕರಗಲು  ಆರಂಭವಾಯಿತು. ತಲೆಯಲ್ಲಿ ರಿಂಗಣಿಸುತ್ತಿರುವ  ಸದ್ದುಗಳನ್ನು ಕೊಡವಿಕೊಳ್ಳಲು ಕಿವಿಯನ್ನು ಅಲ್ಲಾಡಿಸಿದೆ. ದೀರ್ಘವಾಗಿ ಉಸಿರೆಳೆದುಕೊಂಡೆ. ಮನೆಗೆ ಹೋಗಬೇಕೆನಿಸಿತು. ತನ್ನ ಹೊಲದ ಸುತ್ತ ಮುಳ್ಳು ತಂತಿಯ ಬೇಲಿ ಹಾಕಿ ನಮ್ಮ ಚರ್ಮ ಸುಡುವಂತೆ ಮಾಡುವ ನರಪ್ರಾಣಿಯ ಸಹವಾಸವೇ ಬೇಡವೆನಿಸಿತು. ಆದರೆ ಅಡವಿಯೆಲ್ಲ ನಾಶವಾಗಿ  ನಮಗೆ ತಿನ್ನಲು ಏನೂ ಇಲ್ಲವಾಗಿದೆ.
ಕಣ್ಣು ಮುಚ್ಚಿ ಮುಳ್ಳು ತಂತಿಯನ್ನು ಎಳೆದು ಬಿಸಾಕಿದೆ. ನಿಧಾನವಾಗಿ ಬಿದ್ದ ತಂತಿ ದಾಟಿದೆ. ಒಳಗಡೆ ಅಡಗಿಕೊಳ್ಳಲು  ಪ್ರಶಸ್ತ ಜಾಗ ಸಿಕ್ಕಿತು ಮಾತ್ರವಲ್ಲದೆ ರುಚಿಕರವಾದ ಹಲಸಿನ ಗೆಲ್ಲು ಸಿಕ್ಕಿದೆ. ರಾತ್ರಿಯಾದುದರಿಂದ ನರಪ್ರಾಣಿಯೆಲ್ಲ ಮಲಗಿ ನನಗೆ ಅಷ್ಟು ಭಯ ಅನ್ನಿಸಲಿಲ್ಲ. ನನಗೆ ಬೇಕಾದಷ್ಟು ಹೊಟ್ಟೆ ತುಂಬಾ ತಿಂದೆ.
ಅದೇ ಹಳ್ಳಿಯಲ್ಲಿ ಕಾಂತನೆಂಬ ರೈತ ರಾತ್ರಿ ಇಡೀ ಎಚ್ಚರ ವಾಗಿದ್ದ. ಮುದಿ ತಂದೆಯ ಹದೆಗೆಡುತ್ತಿರುವ ಆರೋಗ್ಯ ಹಾಗು ಮಗಳ ಮದುವೆಗೆ  ದುಡ್ಡು ಒಟ್ಟುಗೊಳಿಸುವ  ಚಿಂತೆ  ಅವನನ್ನು ಬಾಧಿಸಿದೆ . ಮತ್ತು ಈ ಆನೆಗಳ ಕಾಟ. ಆನೆಗಳನ್ನು ನೆನ್ನೆಸಿ ಅವನಿಗೆ ಸಿಟ್ಟೇರಿತು. ಅವನ ಅಕ್ಕಪಕ್ಕದ ರೈತರ ಹೊಲಗಳನ್ನೆಲ್ಲ ಆನೆಗಳು ತಿಂದು ದ್ವ೦ವ್ಸ ಮಾಡಿದ್ದವು. ಇಷ್ಟು ದಿನ ಅವನು ರಾತ್ರಿ ಹೊಲ ಕಾಯುತ್ತಿದ್ದ. ಆನೆಗಳನ್ನು ಹೆದರಿಸಲು  ಆವಾಗಾವಾಗ ಸುಡುಮದ್ದುಗಳನ್ನು ಉರಿಸುತ್ತಿದ್ದ. ಅದಲ್ಲದೆ ಕರೆಂಟು ತಾಗುವ ಮುಳ್ಳು ತಂತಿ ಹಾಕಿದ ಹೊಲಗಳಲ್ಲಿ ಇವನದ್ದು ಒಂದಾಗಿತ್ತು. ಇಷ್ಟು ದಿನ ಅವನು ತನ್ನ ಹೊಲವನ್ನು ಆನೆಗಳಿಂದ ಉಳಿಸಲು ಸಾಧ್ಯವಾಗಿತ್ತು. ಚಿಂತೆ ಮತ್ತು ನಿದ್ದೆಗೆಟ್ಟಿದ್ದರಿಂದ ಅವನ ಮುಖವೆಲ್ಲ ಸುಕ್ಕುಗಟ್ಟಿದೆ.
ಇವತ್ತು ಕಾಂತ ಬೇಗನೆಎದ್ದಿದ್ದಾನೆ. ಹಾಲು ಕರೆಯುವ ಹುಡುಗ  ತನ್ನ ಕೆಲಸ ಮಾಡುವುದನ್ನು ನೋಡಲು ಉಪೇಕ್ಷಿಸುತ್ತಾನೆ. ಆದರೆ ಆ ಹುಡುಗ ಇನ್ನು ಬಂದಿಲ್ಲ. ಅವನು ಬರುವ ತನಕ ಕಾಯಲು ಕುಳಿತ.
ಹೊರಗಡೆ ಇನ್ನು ಕತ್ತಲಿತ್ತು .ಆದರೂ ಕಾಂತ ಯಾವುದೇ ತೊಡಕಿಲ್ಲದೆ ನಡೆದ. ಅವನ ಹೊಲದ ಏರಿಳಿತದ ಹಾದಿ ಅವನಿಗೆ ತನ್ನ ಕೈರೇಖೆಯಷ್ಟು ಪರಿಚಿತ. ಸ್ವಲ್ಪ ದೂರ ಹಾದಿ ಕ್ರಮಿಸಿದೊಡನೆ ಯಾಕೋ ಏನೋ ಸರಿಯಿಲ್ಲ ಎಂಬ ಭಾವನೆ ಶುರುವಾಯಿತು. .  ಹಾದಿಯಳ್ಳಿ ತುಂಡಾಗಿ ಬಿದ್ದ ಮುಳ್ಳು ತಂತಿ.  ಮತ್ತು ಹೊಲದ ಮದ್ಯೆ ಏನೋ ಕಪ್ಪನೆಯ ಆಕಾರ. ಕಾಂತ ನಿಧಾನಕ್ಕೆ ಹಿಮ್ಮಡಿಯಿಟ್ಟ, ಕಾಲ ಬುಡದಲ್ಲಿ ಒಣಗಿದ  ಮರದ ತುಂಡೊಂದು ಕಟಕ್ ಅಂತ ಸದ್ದು ಮಾಡಿತು. ಆನೆಗೆ ಕೇಳಿಸಿತೋ ಎಂಬಂತೆ ಕಾಂತ ಹೆದರಿದ , ಆದರೆ ಆನೆ ಸುಮ್ಮನೆ ನಿಂತಿತ್ತು. ನಿಧಾನಕ್ಕೆ ಕಾಂತ ಅಲ್ಲಿಂದ ಜಾಗ ಖಾಲಿ ಮಾಡಿದೆ. ದನದ ಹಟ್ಟಿಯ  ಬಳಿ ಹಾಲು ಕರೆಯುವವ ನಿದ್ದೆ ಗಣ್ಣಲ್ಲಿ  ಹಾಲಿನ ಬಕೀಟನ್ನು ನೀಟಾಗಿ ಜೋಡಿಸುತ್ತಿದ.
"ಬೇಗ ಹೊರಡು, ನೆರೆಹೊರೆಯ ರೈತರಿಗೆ ಹೊಲದಲ್ಲಿ ಆನೆ ಬಂದಿದೆಎಂದು ಹೇಳು" ಓಡು !!
ಕಾಂತ ಹೇಳಿದಂತೆ ಮಾಡಲು ಹಾಲುಕರೆಯುವವ ಓಡಿದ . ಸಿಟ್ಟಿಗೆದ್ದ ರೈತರು ಆನೆಯನ್ನು ಓಡಿಸಲು ಬೆಳಕಿನ ದೊಂದಿ ಹಾಗು ಸುಡುಮದ್ದುಗಳೊಂದಿಗೆ ಸಜ್ಜಾಗಿ ಬಂದರು.  ಹೆಣ್ಣು ಮಕ್ಕಳು  ಮತ್ತು ಮಕ್ಕಳು ತಮ್ಮ ತಂದೆ , ಗಂಡ ಎಲ್ಲ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥನೆ ಮಾಡಿದರು.
ರೈತರೆಲ್ಲ ಮರಳುವಷ್ಟರಲ್ಲಿ  ಹೊತ್ತು ಕಂದಿತು.  ಎಷ್ಟು ನಷ್ಟವಾಗಿದೆ ಎಂದು ತಿಳಿದು ಕಾಂತ ಹಳಹಳಿಸಿದ. ಹಣದ  ಋಣ ತೀರಿಸುವ ಬಗ್ಗೆ ಚಿಂತಾಕ್ರಾಂತನಾದ. ಹೊಲದಲ್ಲಿ ಆನೆಯ ಸುಳಿವಿರಲಿಲ್ಲ. ಆದರೆ ತಂತಿಯಲ್ ಬಳಿ ಬಿದ್ದ ರಕ್ತದ ಕಲೆಯಿಂದಾಗಿ ಆನೆಗೆ   ಏಟಾಗಿದೆ ಎಂದು ತಿಳಿಯಿತು.
ಕಾ೦ತಾನ  ಮನೆಯಲ್ಲಿ ಕೆಲವು ದಿನ ತುಂಬಾ ದುಃಖ ಮಡುಗಟ್ಟಿತ್ತು. ಕಾಂತ ತುಂಬಾ ಸೋತುಹೋಗಿದಂತೆ ಕಾಣುತ್ತಿದ್ದ. ಇದೆಲ್ಲವನ್ನು ಕೆಲವು ದಿನಗಳಿಂದ ಕಾಂತನ ಅಜ್ಜ   ಗಮನಿಸುತ್ತಿದ್ದ. ಒಂದು ದಿನ ಅವನನ್ನು ಬಳಿಗೆ  ಕರೆದು 'ನೋಡು ' ಅಂತ ಅಲ್ಲೇ ಬಿದ್ದ ಆನೆಯ ಒಣಗಿದ  ಲದ್ದಿಯ ಬಳಿ ಕೂತು ಬೆರಳು ತೋರಿಸಿದ. 'ಕಾಣಿಸುತ್ತಿದೆಯಾ?
ಕಾಂತ ಹತ್ತಿರಕ್ಕೆ ಹೋಗಿ ಗಮನಿಸಿದ. ಆನೆಯ ಲದ್ದಿಯಲ್ಲಿ ಅಂಜೂರದ ಬೀಜ ಮೊಳಕೆಯೊಡೆದಿತ್ತು. ಅವನ ಅಜ್ಜ ಅಲ್ಲಿಂದ ತೋಟದ ಕಡೆ  ಹೋರಡಲು ಅನುವಾದ.  'ಇಲ್ಲಿ ಬಾ ಅಂತ ಕ್ಷೀಣವಾದ ದನಿ ಹೊರಡಿಸಿದ. ಕಾಂತನಿಗೆ ತನ್ನ ತಾತನ ಆರೋಗ್ಯದ ಬಗ್ಗೆ ಕಾಳಜಿಯಾಯಿತು.  ಹೀಗೆ ಎಲ್ಲೆಂದರಲ್ಲೂ ನಡೆಯುವುದನ್ನು ಬಿಟ್ಟು ಮಲಗಿದೆಡೆಯಿರಬೇಕಿತ್ತು ಅಂದುಕೊಂಡ. ಅಜ್ಜನ ಕಡೆಗೆ ಸಾಗಿದ.  ಅಜ್ಜ ಈಗ ದಾಸವಾಳದ ಗಿಡ ಬಳಿಯಲ್ಲಿ ಬಗ್ಗಿ ಕುಳಿತಿಟ್ಟದ್ದ,  ಅಲ್ಲಿ ಆನೆಯ ಲದ್ದಿಯಿಂದ ಒಂದು ಹುಣಸೆಹುಳಿಯ ಗಿಡ ಬೆಳೆಯುತ್ತಿತ್ತು. ಅಜ್ಜ ಯಾಕಾಗಿ ಇದನ್ನೆಲ್ಲಾ ತೋರಿಸುತ್ತಿದ್ದಾನೆ ಅಂತ ಕಾಂತನಿಗೆ ಸಿಟ್ಟು ಬಂತು.
'ಈಗ ಅಲ್ಲಿ ನೋಡು " ಅಂತ ದೊಡ್ಡ ಮತ್ತುಊರಲೆಲ್ಲಾ  ಖ್ಯಾತ  ಹಲಸಿನ ಮರದ ಕಡೆ ಬೊಟ್ಟು ಮಾಡಿ ತೋರಿಸಿದ.  ಹತ್ತಿರ ಹಳ್ಳಿ ಮತ್ತು ಪಟ್ಟಣದಲ್ಲೆಲ್ಲ ಈ ಹಲಸಿನ ಮರದ ಹಣ್ಣು ತನ್ನ ಸಿಹಿಗಾಗಿ ಖ್ಯಾತ ವೆನಿಸಿತ್ತು.
"ನೆನಪಿದೆಯಾ ನಿನಗೆ, ಊರಲಿ ಕ್ಷಾಮವಾದಾಗ ಈ ಮರ ನಮ್ಮೆಲ್ಲರ ಹಸಿವೆ ನೀಗಿಸಿತ್ತು.  ಎಲ್ಲ ಬೆಳೆಗಳು ಒಣಗೆ, ಹಸುಗಳು ಹೊಟ್ಟೆಗಿಲ್ಲಕ್ಕಿದೆ ಇದ್ದಾಗ ಈ ಹಲಸಿನ ಮರ ಮಾತ್ರ ನಳನಳಿಸಿತ್ತಾ ಇತ್ತು. ನೀನು ಆಗ ಚಿಕ್ಕ ಹುಡುಗ.
ಕಾಂತನಿಗೆ ನೆನಪಾಯಿತು. ಊರಿನ ಉಗ್ರಾಣದಲ್ಲಿ ಒಂದು ಹಿಡಿ ಸಿರಿಧಾನ್ಯ , ಅದೂ ಕೆಲವು ದಿನಗಳಲ್ಲಿ ಖಾಲಿಯಾದಾಗ ಈ ಹಲಸಿನ ಮರದಲ್ಲೆಲ್ಲ ತುಂಬಾ ಹಣ್ಣುಗಳು ಕಾಣಸಿಕ್ಕಿದವು. ಕೆಂಪು ಜಾತಿಯ ಅಪರೂಪದ  ತಳಿಯ  ರುಚಿಕರವಾದ ಹಲಸಿನ ಹಣ್ಣು. 'ಈ ಹಲಸಿನ ಮರವನ್ನು ಆನೆ ನೆಟ್ಟಿದ್ದು ' ಪ್ರೀತಿಯಿಂದ ಹೇಳಿದರು ಅಜ್ಜ.
ಎಲ್ಲ ಮರಗಿಡಗಳು ಕ್ಷಾಮದಲ್ಲಿ ಒಣಗಿದಾಗ ಈ ಮರ ಮಾತ್ರ ಗಟ್ಟಿಮುಟ್ಟಾಗಿತ್ತು. ಈಗ ಅದನ್ನು ನೋಡು , ನನ್ನಷ್ಟೇ ವಯಸ್ಸು ಆದರೂ ಈಗಲೂ ಹೇಗೆ ನಳಿನಳಿಸುತ್ತಾ ಇದೆ   ಎಂದು ನಕ್ಕರು.
ಕಾಂತನ ಹೆಗಲ ಮೇಲೆ ಕೈಯಿಟ್ಟು " ಆನೆ ನಮ್ಮಿಂದ ಪಡೆಯುವುದು ಮಾತ್ರವಲ್ಲ , ನಮಗೇನಾದ್ರು ಕೊಟ್ಟೆ ಹೋಗುತ್ತೆ.  ನಾವು ಅದಕ್ಕೆ ಬೇಕಾದ ಅರಣ್ಯವನ್ನೆಲ್ಲಾ ಹೊಲಗಳನ್ನು ಮಾಡಿ ಜೀವನ ನಡೆಸುತ್ತೇವೆ , ಒಂದಷ್ಟು ಕಬ್ಬು ತಿಂದು ಹೋದರೆ ನಾವು ಅದಕ್ಕೆ ಆಕ್ಷೇಪ ಎತ್ತಬಾರದು.
ಕಾಂತ  ತನ್ನ ಅಜ್ಜನ ಕಡೆ ನೋಡಿ ಹೌದೆಂಬಂತೆ ತಲೆಯಲ್ಲಾಡಿಸಿದ. ತಿಳಿವಳಿಕೆ ಮತ್ತು ಭರವಸೆಯಿಂದ ಅವನ ಮುಖ ಅರಳಿತು.
ಡೌನ್ ಟು ಅರ್ಥ್ ನ ಗೋಬರ್ ಟೈಮ್ಸ ಪುರವಣಿಯಲ್ಲಿ   ಪ್ರಕಟವಾದ ನಿಹಾರಿಕಾ ಬರೆದ ಸಣ್ಣ ಕತೆಯ ತರ್ಜುಮೆ. 

August 7, 2018

ಕೂಷ್ಮಾಂಡ ಪುರಾಣ

ಕೂಷ್ಮಾಂಡ ಅಂದ್ರೆ ಬೂದುಗುಂಬಳ . Ashgourd . 
ಮನೆಗೆ ಬೂದುಗುಂಬಳಕಾಯಿ ಬಂದಾಗಲೆಲ್ಲ ಒಮ್ಮತದ ದನಿ ಮಜ್ಜಿಗೆ ಹುಳಿಗೆ . ಹೊಟ್ಟೆಗೆ ತಂಪು. ಆರೋಗ್ಯಕ್ಕೆ ಒಳ್ಳೆಯದು. ಕಡು  ಬೇಸಗೆಯಲ್ಲಂತೂ ಇದರ ಸೇವನೆ ಅತ್ಯುತ್ತಮ. ಈ ಸಲ ಸಂತೆಯಿಂದ  ತುಂಬಾ ದೊಡ್ಡ ಹೋಳು ತಂದಿದ್ದರು ಶ್ರೀಕಾಂತ.. ಹಾಗಾಗಿ ಅಕ್ಕ, 'ಅಮ್ಮಾ ತುಂಬಾ ದಿನ ಆಯ್ತು ಕಾಶಿ ಹಲ್ವಾ ಮಾಢದೆ ' ಅಂತ ಹೇಳಿದಳು . ಬೂದುಗುಂಬಳಕಾಯಿಯ ಹಲ್ವಾ ಗೆ ಕಾಶಿ ಹಲ್ವಾ ಯಾಕಂತಾರೆ? ಗೊತ್ತಿಲ್ಲ. ಬಹುಷ್ಯ ಹಿಂದೆ ಕಾಶಿ ರಾಮೇಶ್ವರ ಮುಂತಾದ ಕಡೆ ತೀರ್ಥಯಾತ್ರೆಗೆ  ಹೋಗುವಾಗ ಇದನ್ನು ಕಟ್ಟಿಕೊಂಡು ಹೋಗುತ್ತಿದ್ದರೋ ಏನೋ? (ತೀರ್ಥಯಾತ್ರೆ ಎಂದಾಗ ರೈಲು ತಂಬಿಗೆ ನೆನಪಾಗುತ್ತದೆ. ನನ್ನ ನಾನಿ (ಅಜ್ಜಿ) ಯ ಬಳಿ ಬೆಳ್ಳಿಯ ತಂಬಿಗೆ ಇತ್ತು. ಅಷ್ಟರಲ್ಲೇ ಯಾತ್ರೆ ಮುಗಿಸುತ್ತಿದ್ದರು. ರೈಲು ಕೆಲವು ನಿಲ್ದಾಣದಲ್ಲಿ ಹೆಚ್ಚಿಗೆ ನಿಲ್ಲುತ್ತಿದ್ದ ಕಡೆ ಅದರಲ್ಲಿ ನೀರು ತುಂಬಿಸುತ್ತಿದ್ದರು. ಆಗ ಬೇರೆ ಕಡೆ ನೀರು ಕುಡಿಯುವುದರಲ್ಲಿ ಹೆದರಿಕೆ ಇರಲಿಲ್ಲ, ಹಾಗೆಯೇ ಪ್ಲಾಸ್ಟಿಕ್ ಬಾಟಲಿಗಳಿರಲಿಲ್ಲ. ಪ್ಲ್ಯಾಸ್ಟಿಕ್ ಬಾಟಲಿಗಳು ಯಾವಾಗ ಚಾಲನೆಯಲ್ಲಿ ಬಂತು ಗೊತ್ತಾಗಲೇ ಇಲ್ಲ. ಸ್ವಲ್ಪ track change ಆಯ್ತು 😀 )
ಹಾಗಾಗಿ ನಿನ್ನೆ ನಮ್ಮಲ್ಲಿ ಬೂದುಗುಂಬಳದ ಹಲ್ವಾ. ಸುಮಾರು ಸಮಯ ಬೇಕು ಇದರ ಹಲ್ವಾ ತಯಾರಾಗಲು. ಮೊದಲಿಗೆ ಬೂದುಗುಂಬಳವನ್ನು ತುರಿಬೇಕು. ಬೆಲ್ಲಕ್ಕೆ ಒಂದೆಳೆ ಪಾಕ ಆದಾಗ ತುರಿದಿಟ್ಟ ಬೂದುಗುಂಬಳದಿಂದ ನೀರೆಲ್ಲ ಒತ್ತಿ ತೆಗೆದು ಬೆಲ್ಲದ ಪಾಕಕ್ಕೆ ಹಾಕಬೇಕು. ಬೂದುಗುಂಬಳದ ನೀರಿನ ಅಂಶ ಎಲ್ಲ ಹೋಗಿ ಪಾತ್ರೆಯ  ತಳ  ಬಿಡುತ್ತಿದ್ದ ಹಾಗೆ ಹಲ್ವಾ ತಯಾರಾಗಿದೆ ಅಂತ ಲೆಕ್ಕ. ಸುಮಾರು ಎರಡು ಗಂಟೆಯ ಮೇಲೆ ತಗಲುತ್ತದೆ ಈ ಹಲ್ವಾ ತಯಾರಿಸಲು. ಹಾಗಾಗಿ ತುಂಬಾ ದಿನ ಕೆಡದೆ ಉಳಿಯುತ್ತದೆ. ಕೊನೆಗೆ ಏಲಕ್ಕಿ, ತುಪ್ಪ , ಹುರಿದ ಗೋಡಂಬಿ ಬೆರೆಸಿದರೆ ಆಯ್ತು. ನಿಮ್ಮ ಹಲ್ವಾ ತಯಾರು. :-)
ಈ ಸಲ ಸ್ವಲ್ಪ ಚೀಟಿಂಗ್ ಮಾಡಿದೆ.  ತುರಿದು ನೀರು ಬಸಿದ  ಕುಂಬಳವನ್ನು ನೀರಾರುವ ತನಕ ಮೈಕ್ರೋವೇವಿಸಿದೆ 🙂 ಹಾಗಾಗಿ ಹಲ್ವಾ ಬೇಗ ತಯಾರಾಯಿತು

ashgourd halwa with organic jaggery

ಬೂದುಗುಂಬಳ ತುರಿಯುವ ಕೆಲಸ ಅಕ್ಕ ಹಚ್ಚಿಕೊಂಡಳು. ಕೆಲಸ ಮಾಡ್ತಾ ಅಮ್ಮ ನೀನು ಯಾವತ್ತಾದ್ರೂ  ಪೇಠಾ  ಮಾಡಿದೆಯಾ? ಅಂತ ಕೇಳಿದಳು . ಪೇಠಾ ಆಗ್ರಾದ ಸ್ಪೆಷಲ್ ಸ್ವೀಟು. 
ಹೌದೆಂದ್ದು ನಾವು ಪೇಠಾ ತಯಾರಿಸಿದ ಕತೆ ಶುರು ಮಾಡಿದೆ. 
ಆಗ ಅಕ್ಕ (ಮಾಲವಿಕಾ) ನ  ಮೊದಲ ಹುಟ್ಟು ಹಬ್ಬ ಆಚರಿಸಲು ಅಮ್ಮ ಮತ್ತು ತಮ್ಮ ಮುಂಬೈ ನಿಂದ ಕೊಪ್ಪಕ್ಕೆ ಬಂದಿದ್ದರು.  ಕರೆಂಟ್ ಇದ್ದರೆ ಮಧ್ಯಾಹ್ನ ನಾವು ದೂರದರ್ಶನ ನೋಡುತ್ತಿದ್ದೆವು. ಒಂದು ಮಧ್ಯಾಹ್ನ ಆಗ್ರಾದ ಪೇಠಾ  ತಯಾರಿಸಿವುದನ್ನು  ತೋರಿಸುತ್ತಿದ್ದರು. ನಮ್ಮ ಬಾಡಿಗೆ  ಮನೆಯ ಹಿತ್ತಲಲ್ಲಿ ನಾವು ಪುಟ್ಟ ಕೈತೋಟ ನಿರ್ಮಿಸಿದ್ದೆವು. ಆವಾಗಲೇ (30 ವರ್ಷದ ಹಿಂದೆ) ಮನೆಯ ಹಸಿ ತ್ಯಾಜ್ಯ ವಸ್ತುಗಳನ್ನು ಬಳಸಿ ಕಾಂಪೋಸ್ಟ್ ಕೂಡ ಮಾಡುತ್ತಿದೆವು. ನಮ್ಮ ತೋಟ ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ. ಅಲ್ಲದೆ ಕೊಪ್ಪದ ವಾತಾವರಣ  ಕೂಡ ಹೂ  ತರಕಾರಿ ಬೆಳೆಸುವಲ್ಲಿ ತುಂಬಾ  ಸಹಕಾರಿ. ನಾವು ಬೆಳೆಸಿದ ಮೂಲಂಗಿ ಅಂತೂ ಈಗಲೂ ಹಲವಾರು ಜನ ನೆನೆಸಿಕೊಳ್ಳುತ್ತಾರೆ. ನನ್ನ ತಮ್ಮ ಬಂದಾಗಲೆಲ್ಲ ತಾಜಾ ಮೂಲಂಗಿ ಸೊಪ್ಪು ಬಳಸಿ ಬ್ರೆಡ್ ಸ್ಯಾಂಡ್ವಿಚ್ ತಯಾರಿಸುತ್ತಿದ್ದೆ. ಈಗಲೂ ತಮ್ಮ ಅದನ್ನೆಲ್ಲ ನೆನೆಸಿಕೊಳ್ಳುತ್ತಾನೆ. ಕುಂಬಳಕಾಯಿಯಂತೂ ಹೇರಳವಾಗಿ ಬೆಳೆಯುತ್ತಿತ್ತು. 
ಈ ಪೇಠಾ ಮಾಡುವ ಕಾರ್ಯಕ್ರಮ ಪ್ರಸಾರವಾಗುವಾಗ ನಮ್ಮ ಹಿತ್ತಲಲ್ಲಿ ಮೂರು ಬೂದುಗುಂಬಳಕಾಯಿಗಳಿದ್ದವು. ಅದರಲ್ಲಿ ಚೆನ್ನಾಗಿ ಬಲಿತ ಕಾಯಿ ಅಮ್ಮ ಸೆಲೆಕ್ಟ್ ಮಾಡಿದರು. ಶ್ರೀಕಾಂತ ಮಧ್ಯಾಹ್ನ ಊಟ ಮುಗಿಸಿ  ಆಫಿಸ್ ಗೆ ಹೋಗುವ ಮುನ್ನ  ಅಮ್ಮ ಅವರ ಬಳಿ ಸುಣ್ಣ ತರಿಸಿಕೊಂಡರು.  ಆಮೇಲೆ ನೀಟಾಗಿ ಕುಂಬಳ ಕಾಯಿಯ ಒಂದೇ ಅಳತೆಯ  ಚೌಕ ಹೋಳುಗಳನ್ನು ಮಾಡಿದರೆ ನಾನು ಮುಳ್ಳು ಚಮಚ ದಿಂದ ಹೋಳುಗಳನ್ನು ಚುಚ್ಚುತ್ತಿದ್ದೆ . ಹೋಳುಗಳನ್ನು ಸುಣ್ಣದ ನೀರಿನಲ್ಲಿ ಎರಡು ದಿನ ನೆನೆ ಹಾಕಿದೆವು. ಮೂರನೇ ದಿನ ಹೋಳುಗಳನ್ನೆಲ್ಲ ಸುಣ್ಣದ ನೀರಿನಿಂದ ತೆಗೆದು ಒಳ್ಳೆಯ ನಿರಿನಿನಲ್ಲಿ ಹಾಕಿ ತೆಗೆದು  ಒಂದು ಬಿಳಿಯ ಮುಂಡಿ (ಮನೆ ಯೊಳಗೆ ಒಣಗಿಸಬೇಕು ಬಿಸಿಲಲ್ಲಲಾ} ನ ಮೇಲೆ ಒಣಗಿಸಲು ಇಟ್ಟೆವು. ನೀರಿನ ಅಂಶವೆಲ್ಲ ಹೋಗಬೇಕು. 
ಸಕ್ಕರೆಗೆ ನೀರು ಬೆರೆಸಿ ಅದು ಎರಡೆಳೆ ಪಾಕ ಆದ ನಂತರ ಅದಕ್ಕೆ ಸ್ವಲ್ಪ ನಿಂಬೆ ರಸ ಹಿಂಡ  ಬೇಕು .ಬೇಕಿದ್ದಲ್ಲಿ ಏಲಕ್ಕಿ ಪುಡಿ ಬೆರೆಸ ಬಹುದು.  ಒಣಗಿದ ಹೋಳುಗಳನ್ನು ಸಕ್ಕರೆ ಪಾಕದಲ್ಲಿ ಒಂದು ದಿನ  ನೆನೆಯಲು ಇಟ್ಟು , ನಂತರ ಒಂದೊಂದೇ sugarcoated ಹೋಳನ್ನು ಇನ್ನೊಂದು  ಪಾತ್ರಗೆ ವರ್ಗಾಯಿಸಬೇಕು. ಪೇಠಾ ತಯ್ಯಾರ್ ಅಂತ ಹೇಳಿದೆ. ಅಷ್ಟರಲ್ಲಿ ಅವಳ ತುರಿಯುವ ಕೆಲಸ ಮುಗಿದಿತ್ತು. 
ಹೀಗೆ ಮಾಡಿದ ಪೇಠಾ ಮಾಲವಿಕಳ  ಹುಟ್ಟುಹಬ್ಬದಿನದಂದು ಎಲ್ಲರಿಗು ಇತರ ತಿಂಡಿ ಖಾದ್ಯದೊಂದಿಗೆ ಬಡಿಸಲಾಯಿತು. ಸಕ್ಕರೆ ಸ್ವ ಲ್ಪ ಜಾಸ್ತಿಯಾದುದು ಬಿಟ್ಟರೆ, ಪೇಠ ಸೂಪರ್ ಆಗಿತ್ತು. 
ಬೂದುಗುಂಬಳದ ಜ್ಯೂಸು : ತುರಿದ ಬೂದುಗುಂಬಳದಿಂದ  ಹಿಂಡಿದ ರಸಕ್ಕೆ ನಿಂಬೆ ರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯಬಹುದು.  ಹೌದು ಕೊಂಕಣಿಯವರು ಏನನ್ನು ವೆಸ್ಟ್ ಮಾಡುವುದಿಲ್ಲ :-)
ಶ್ರೀಕಾಂತ ಆಫಿಸ್ ಕೆಲಸದ ಮೇಲೆ ದೆಹಲಿಗೆ ಹೊಆಗಲೆಲ್ಲ ನನಗೋಸ್ಕರ ಪೇಠಾ ತೆಗೆದುಕೊಂಡು ಬರುತ್ತಾಳೆ. ಈಗ ಅದು ಕೇಸರ್, ಕೇದಗೆ , ಮಿಕ್ಸಡ್ ಫ್ರೂಟ್ ಅಂತ ಬೇರೆ ಬೇರೆ ಆಕಾರ ಫ್ಲೇವರ್ಸ್ ನಲ್ಲಿ ಲಭ್ಯ. 
ಹಾಗೆ ಒಂದು ಕೊಂಕಣಿ ಗಾದೆ ಇದೆ. ಅದರ ಕನ್ನಡ ವರ್ಷನ್ ಹೀಗೆ : ತನ್ನ ಮನೆಯ ಹಿತ್ತಲಲ್ಲಿ ಕುಂಬಳಕಾಯಿ ಕೊಳೆಯುತ್ತಿದ್ದರು ಇವನಿಗೆ ಬೇರೆಯವರ ಮನೆಯಲ್ಲಿನ  ಕುಂಬಳಕಾಯಿಯ ಹುಳುಕು ಹುಡುಕುವುದರಲ್ಲಿ ಎತ್ತಿದ ಕೈ ' ಅಂತ 
ಹೀಗೆ ಒಂದು ಲಹರಿ :-)

August 4, 2018

ಸಾರ - ಸಂಸಾರ

ಸಿನಿಮಾ ಮುಗಿಸಿ ಸುಚೇತಾ ಮತ್ತು ಮಗಳು ಶಾಂಭವಿ  ಹಾಗೆ ಟಿವಿ ಮುಂದೆ ಹಾಸಿಗೆ ಹಾಸಿಕೊಂಡು ಮಲಗಿದರು. ಇದು ಯಾವತ್ತೂ ಶುಕ್ರವಾರದ ವಾಡಿಕೆ. ಶಾಂಭವಿಗೆ ಶನಿವಾರ ಭಾನುವಾರ ಕೆಲಸಕ್ಕೆ ರಜೆ.ಶುಕ್ರವಾರ ಸಂಜೆ ಯಾವುದಾದರೂ ಸಿನಿಮಾ ನೋಡಿ ಮಲಗುವುದು.  ಅವಳು ಫುಡ್ ಮ್ಯಾಗಝಿನ್  ಒಂದಕ್ಕೆ ಎಡಿಟರ್ ಆಗಿ ಕೆಲಸ ಮಾಡುತ್ತಾಳೆ. ನಿದ್ದೆ ಬರದೇ ಇದ್ದಲ್ಲಿ ತನ್ನ ಆಫಿಸಿನ ಬಗ್ಗೆ ಏನಾದರೂ ಹೇಳುತ್ತಾಳೆ. 
ಅಯ್ಯೋ ಅಮ್ಮ ಮರೆತೇ ಹೋಯ್ತು. ತಡಿ ನನ್ನ ಬ್ಯಾಗ್ನಲ್ಲಿ ತಿರುಪತಿ ಲಾಡು ಇದೆ, ನಿನಗೆ ಇಷ್ಟ ಅಂತ ತಂದಿದ್ದೇನೆ. ಇರುವೆ ಬರದೇ ಇದ್ದಾರೆ ಸಾಕು  ಅಂತ ತನ್ನ ಕೊಠಡಿಗೆ ಓಡಿದಳು.  
ಮ್ಮ್ಮ್ಮ್ಮ್ ತುಂಬಾ ರುಚಿಯಾಗಿದೆ ಕಣೆ, ಆದ್ಸರಿ ಯಾರು ತಿರುಪತಿಗೆ ಹೋಗಿದ್ದು?
'ನಮ್ಮ ಆಫಿಸ್ ನಲ್ಲಿ ತುಂಬಾ ವಯಸಾದವರೆಂದರೆ ಚಂದ್ರನ್ ನಾಯರ್ . ಅವರು ಫ್ಯಾಮಿಲಿಯೊಂದಿಗೆ ಹೊರನಾಡಿಗೆ ಹೋಗಿದ್ದರು. ಅಲ್ಲಿಂದ ಸುಬ್ರಮಣ್ಯ, ಧರ್ಮಸ್ಥಳ ಎಲ್ಲ ಹೋಗಿ ಬಂದರು. ಈಗ ತಿರುಪತಿ ಮಾತ್ರ ಅಲ್ಲ ಎಲ್ಲ ಕಡೆ ಈ ಲಾಡು ಸಿಗುತ್ತೆ ಅಂತ ನಕ್ಕಳು. 
ಚಂದ್ರನ್ ನಾಯರ್ ಆ?  ನನ್ನ ಕ್ಲಾಸ್ ನಲ್ಲಿ ಕೂಡ ಒಬ್ಬ ಚಂದ್ರನ್ ನಾಯರ್ ಇದ್ದ. ಕಲಿಯಲು ಮಹಾ ಜಾಣ. ಆದರೂ ಫಿಸಿಕ್ಸ್ ನಲ್ಲಿ ನನಗೇನಾದರೂ ಹೆಚ್ಚು ಮಾರ್ಕ್ ಬಂದರೆ ನನ್ನ ಬಳಿ ಪೇಪರ್ ಇಸ್ಕೊಂಡು ಇಡೀ ಉತ್ತರ ಪತ್ರಿಕೆಯನ್ನು ತಪ್ಪು ಉತ್ತರವೇನಾದರೂ ಇದೆಯಾ ಅಂತ ಜಾಲಾಡುತ್ತಿದ್ದ ಬಗ್ಗೆ ಹೇಳಿ ನಗಿಸಿದಳು. 
ಸುಚೇತಾ ತನ್ನ ಕಾಲೇಜಿನ ಬಗ್ಗೆ ಮೆಲುಕುಹಾಕುತ್ತಿದ್ದರೆ ಶಾಂಭವಿ ಆಗಲೇ ನಿದ್ದೆಗೆ ಜಾರಿದ್ದಳು. 
ಚಂದ್ರನ್  ನಾಯರ ತನ್ನ ಜತೆ ೧೧ ಮತ್ತು ಹನ್ನೆರಡನೇ ಕ್ಲಾಸ್ ಓಡುತ್ತಿದ್ದಾಗ ಜತೆಯಾಗಿದ್ದ. . ಅವನ ತಂದೆ ಸ್ವೀಡನ್ ದೇಶಕ್ಕೆ ರಾಯಭಾರಿಯಾಗಿದ. ಆ ವರ್ಷ ಅವರು ಮುಂಬಯಿಗೆ ಬಂದಿದ್ದರು. ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗಲು ಚಂದ್ರನ್ ನನ್ನ ಮುಂಬಯಿಯ ಕಾಲೇಜಿಗೆ ಸೇರಿಸಿದ್ದರು. ಓದಲು ಅದರಲ್ಲೂ ಲೆಕ್ಕದಲ್ಲಂತೂ ಅವನು ತುಂಬಾ ಜಾಣನಾಗಿದ್ದ. ಬಾಹ್ಯಾಕಾಶ ವಿಜ್ಯ್ನಾನಿಯಾಗಿ  ಅಮೆರಿಕಕ್ಕೆ ಹೋಗುವ ಕನಸು ಅವನದ್ದಾಗಿತ್ತು ಸುಚೇತಾ ಗೆ ಫಿಸಿಕ್ಸ್ ನಲ್ಲಿ ಯಾವತ್ತೂ ಹೆಚ್ಚಿನ ಅಂಕ. ಫಿಸಿಕ್ಸ್ ಪೇಪರ್ ಅನ್ನು ಅವರ ಕೈಗೆ ಕೊಟ್ಟಾಗ ಮೊದಲು ಚಂದ್ರನ್ ಅವಳ ಕೈನಿಂದ ಉತ್ತರ ಪತ್ರಿಕೆ ಕಸಿಕೊಂಡು ಏನಾದರೂ ತಪ್ಪು ಇದೆಯಾ ಅಂತ ಹುಡುಕುತ್ತಿದ್ದ. ಒಂದು ಸಲ ಒಂದು ತಪ್ಪು ಉತ್ತರಕ್ಕೆ ಮಾರ್ಕ್ಸ್ ನೀಡಿದ್ದು ಅವನು  ಅವಳ ಉತ್ತರಪತ್ರಿಕೆಯನ್ನು ಸರ್ ಬಳಿ ಒಯ್ದು , ಬೈಸಿಕೊಂಡಿದ್ದ. ಅದೊಂದು ಬಿಟ್ಟರೆ ಅವನಿಗೆ ಸುಚೇತಾ ಎಂಬ ಪ್ರಾಣಿ ತನ್ನ ಕ್ಲಾಸ್ಮೆಟ್ ಅಂತ ಹೊಳೆಯುತ್ತಲೂ ಇರಲಿಲ್ಲ. ಬೇರೆ ಹುಡುಗಿಯರನ್ನು ಪಟಾಯಿಸುವುದರಲ್ಲಿ ಇರುತ್ತಿದ್ದ. ಸಣಕಲು ಮೈಯ, ತಲೆಗೆ ಎಣ್ಣೆ ಹಚ್ಚಿ ಜಡೇ  ಹೆಣೆದು   ಕಾಡಿಗೆ ಕಂಗಳ ಶಾಂಭವಿ ಅವನ ಅಸ್ತಿತ್ವದ ಅರಿವಲ್ಲಿ ಇರಲಿಲ್ಲ. ಆ ಎರಡು ವರ್ಷ ಒಟ್ಟೆಗೆ ಕಲಿತದ್ದೇ ಬಂತು. ಆಮೇಲೆ ಕ್ಲಾಸಿನವರು ಏನಾದರೇನೆಂದೇ ಗೊತ್ತಿರಲಿಲ್ಲ. ಹನ್ನೆರಡನೇ ಕ್ಲಾಸ್ ಮುಗಿಸಿದ ಹಾಗೆ , ಮುಂದೆ ಓದುತ್ತೇನೆಂದು ಆಸೆ ಪ್ಪಟ್ಟರೂ ಹಿರಿಯರು ಸೇರಿ ಗೌರೀಶನೊಂದಿಗೆ ಮಾಡುವೆ ಮಾಡಿಸಿದರು. ಗೌರೀಶನಂದು ದೊಡ್ಡ ಕುಟುಂಬ. ಚಿಕ್ಕ ಪ್ರಾಯಕ್ಕೆ ಶಾರ್ಜಾ ಗೆ  ಹೋಗಿ ಅಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದ. ವರ್ಷಕ್ಕೊಂದು ಬಾರಿ ಭಾರತಕ್ಕೆ ಬಂದರೆ ಒಂದು ತಿಂಗಳು ಇದ್ದು ಹೋಗುತ್ತಿದ್ದ. ಶಾಂಭವಿ ಒಬ್ಬಳೇ ಮಗಳು. ಈಗ ಗಂಡನಿಗೆ ಅಷ್ಟೊಂದು ಜವಾಬ್ದಾರಿಗಳಿರಲಿಲ್ಲ. ಆದ್ರೂ ಶಾರ್ಜಾ ದ  ಜೀವನಕ್ಕೆ ಹೊಂದಿಕೊಂಡಿದ್ದಾನೆ. ಎಷ್ಟು ಆಗುತ್ತೆ ಅಷ್ಟು ಅಲ್ಲಿ ದುಡಿಯುತ್ತೇನೆ ಆಮೇಲೆ ಹೇಗೂ ಇಲ್ಲೇ ಬರಬೇಕಲ್ಲ ?? ಸುಚೇತಾಳಿಗೆ ಅದೇ ಅಭ್ಯಾಸ ಆಗಿದೆ. ಅವಳು ಕೆಲಸಕ್ಕೆ ಹೋಗುವುದಿಲ್ಲ. ಮನೆ ಸಂಭಾಳಿಸುವುದೇ ಕೆಲಸ. ಒಂದು ರೂಮ್ ಹಾಲ್ ನ ಪುಟ್ಟ ಮನೆ. ಬೆಳಿಗ್ಗೆ ಬೇಗನೆ ತಿಂಡಿ ಊಟ ಅಡುಗೆ ಗಳ ಕೆಲಸ ಮುಗಿಸುತ್ತಿದ್ದಳು. ಶಾಂಭವಿ ಮಧ್ಯಾಹ್ನಕ್ಕೆ ಡಬ್ಬಿ ಕಟ್ಟಿಕೊಂಡು ಹೋಗುತ್ತಾಳೆ. ಉಳಿದಂತೆ ಇಡೀ ದಿನ ಪುಸ್ತಕ ಓದಿಕೊಂಡು ಟಿವಿ ನೋಡಿಕೊಂಡು, ಸಂಜೆ ಅಕ್ಕ ಪಕ್ಕದ ಪರಿಚಯಸ್ಥ ಹೆಣ್ಣು ಮಕ್ಕಳ ಜತೆ ವಾಕ್. ವಾಕ್ ಗಿಂತ ಟಾಕ್ ಗೆ ಎಚ್ಚ್ಚು ಪ್ರಾಶಸ್ತ್ಯ. ರಜೆಯಿದ್ದಾಗ ಮಗಳ ಜತೆ ಎಲ್ಲಾದರೂ ಶಾಪಿಂಗ್ ಅದು ಇದು ಅಂತ ಹೋಗುತ್ತಾಳೆ. ಹೊರಗಡೆ ಊಟ ಮಾಡಿಕೊಂಡು ಬರುತ್ತ....... . ಒಟ್ಟಿಗೆ ಆರಾಮಾಗಿದ್ದಾಳೆ. 
ಹೀಗೆ ಒಂದು ಸಲ ಶ್ಯಾ೦ಭವಿಯ  ಆಫಿಸಿನಲ್ಲಿ ಫ್ಯಾಮಿಲಿ ಡಿನ್ನರ್ ಇಟ್ಟುಕೊಂಡಿದ್ದರು. ಅಮ್ಮ ನೋಡು ಅವರೇ ಚಂದ್ರನ್ ನಾಯರ್ ಅಂತ ಮಗಳು ಬೆರಳು ಮಾಡಿ ತೋರಿಸಿದಳು. ಅವರನ್ನು ನೋಡುತ್ತಿದ್ದಂತೆ ಒಂದು ಕ್ಷಣ ಮೈಯೆಲ್ಲಾ ಬಿಸಿ ತಣ್ಣಗೆ ಭಾಸವಾಯಿತು. ಮೂವತ್ತು ವರುಷದ ನಂತರವೂ ಅವ್ಳ ಕ್ಲಾಸಿನ ಚಂದ್ರನ್ ನಾಯರ್ ಅನ್ನು ಅವಳು ಗುರುತಿಸಿದಳು. ಸಖೇದಾಶ್ಚರ್ಯ !!! ಅರೆ ವಾಟ್ ಆರ್ ಯು ಡುಯಿಂಗ್ ಹಿಯರ್ ?? ಅಂತ ಕೇಳಿದಳು ಅವನಿಗೆ ಕಸಿವಿಸಿ . ಯಾರಪ್ಪ ಇದು ಅಂತ . ತಕ್ಷಣ ತನ್ನ ನಾಲಿಗೆ ಕಚ್ಚಿಕೊಂಡಳು ಸಚೇತಾ . ಅವಳು ಹಳೆ ಸಚೇತಾ ಆಗಿರಲಿಲ್ಲ. ಮ ಕೈ ತುಂಬಿಕೊಂಡು ಒಳ್ಳೆ ಡುಮ್ಮಿ ತರಹ ಆಗಿದ್ದಳು. 
ಅವಳೋ ಈ ಚಂದ್ರನ್ ನಾಯರ್ ಒಳ್ಳೆ ಖ್ಯಾತ ವಿಜ್ನ್ಯಾನಿ ಆಗಿರಬಹುದೆಂದು ತಿಳಿದಿದ್ದಳು. ಅಲ್ಲದಿದ್ದರೂ ಒಳ್ಳೆ ದೊಡ್ಡ ಕೆಲಸದಲ್ಲಿರಬಹುದು ಎಂದು ಕೊಂಡಿದ್ದಳು. ಈ ಸಣ್ಣ ಪತ್ರಿಕೆಯ ಅಕೌಂಟೆಂಟ್ ಎಂದು ಊಹಿಸಲು ಅವಳಿಗೆ ಅಸಾಧ್ಯ. 
ತನ್ನ ಪರಿಚಯ ಹೇಳಿಕೊಂಡಳು. ಅವನಿಗೆ ನೆನಪಿಗೆ ಬರಲಿಲ್ಲ. ಕಡೆಗೆ ಫಿಸಿಕ್ಸ್ ಬಗ್ಗೆ ಮಾತು ಶುರುಮಾಡಿದಾಗ, ಯಸ್ ಯಸ್ ಐ ರಿಮೆಂಬರ್  ಆ ಗರ್ಲ್ ಬಟ್ ನಾಟ್ ಕ್ಲಿಯರ್ಲಿ    ಅಂತ ಹೇಳಿದಾಗ ಸುಚೇತಾ ಗಟ್ಟಿಯಾಗಿ ನಕ್ಕಿದ್ದಳು. 
ಡಿಗ್ರಿ ಓದುವಾಗ ತನ್ನ ತಂದೆ ತಾಯಿ  ಪ್ಲೇನ್ ಕ್ರಾಶ್ ನಲ್ಲಿ  ತೀರದ್ದು , ಅವನ ದೊಡ್ಡಪ್ಪ ಎಲ್ಲಾ ಆಸ್ತಿ  ಕಬಳಿಸಿದ್ದು , ಮುಂಬಯಿಯ ಕಾಲೇಜಿನಿಂದ ಬಿಡಿಸಿ, ಊರಿನ ಕಾಲೇಜು ಹಾಸ್ಟೆಲ್ ಓದು, ವಾಸ , ಒಂದು ವರ್ಷ ಸಯನ್ಸ್ ಕಲಿತು ನಂತರ ಕಾಮರ್ಸ್ ಗೆ ಸೇರಿದ್ದು. ಕಷ್ಟ ಪಟ್ಟು ಓದಿ ಕೆಲಸ ಸಂಪಾದಿಸಿದ್ದು ಎಲ್ಲ ಹೇಳಿಕೊಂಡ. ಹೆಂಡತಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನರ್ಸ್ ಕೆಲಸ. ಹಾಗಾಗಿ ಅವನು ಬೆಂಗಳೂರಿಗೆ ಬಂದು ಹಲವು ವರ್ಷಗಳೇ ಕಳೆದಿದ್ದವು. ಇಬ್ಬರು ಗಂಡು ಮಕ್ಕಳು . ಒಬ್ಬ ಕೆಲಸಕ್ಕೆ ಸೇರಿದ್ದನೆಂದು ಇನ್ನೊಬ್ಬ ತೀರಾ ಸಣ್ಣವ , ಈಗ ಹೈಸ್ಕೂಲ್ ಎಂದು ತಿಳಿಸಿದ.  ನೀನೂ ಫಿಸಿಷಿಸ್ಟ್ ಆಗುತ್ತಿ ಅಂದುಕೊಂಡಿದ್ದೆ ಎಂದ . ಅವಳು ನಕ್ಕಳು. ಮನೆಗೆ ಬರುವಂತೆ ವಿಳಾಸ, ಫೋನ್ ನಂಬರ್ ವಿನಿಮಿಯಾ ಮಾಡಿಕೊಂಡರು   
:-)