April 11, 2014

ಚಿತ್ತದಲ್ಲಿರಲು ಚಿತ್ತಾಲರು

ಮೊನ್ನೆ ತಂಗಿ ಯು ಎಸ್ ನಿಂದ ಫೋನ್ ಮಾಡಿದ್ದಳು. ಅವಳ ಕಿರಿ ಮಗಳು ನಮ್ಮ ನಿಹಾಳ ಹಾಗೆ ಕೀಟಲೆ ಹುಡುಗಿ ಏನಾದರು ಅಂದು ನಗಿಸುತ್ತಿರುತ್ತಾಳೆ. ಕೊಂಕಣಿ ಇಂಗ್ಲಿಷ್ ನಲ್ಲಿ ತುಂಬಾ ಪನ್ ಮಾಡ್ತಾಳೆ. ಏನಾದರೂ ಸ್ಪೆಷಲ್ ವಿಷಯ ಇದ್ದರೆ ದೊಡ್ಡಮ್ಮನೊಡನೆ ಶೇರ್ ಮಾಡು ಅಂತ ಹೇಳಿರುತ್ತಾಳೆ. ಅದಕ್ಕೆ ಅವಳು ಶಾಲೆ ಹೋದ ಮೇಲೆ ತಂಗಿ ನನಗೆ ಅವಳ ಕಿತಾಪತಿಗಳನ್ನೆಲ್ಲ ವರ್ಣಿಸುತ್ತಾಳೆ.
ಹೀಗೆ ಮಾತನಾಡುವಾಗ ನನ್ನ ತಂಗಿ ’ನೀನು ಕನ್ನಡ ಪುಸ್ತಕ ಓದುತ್ತಿಯಲ್ಲವಾ?? ಇತ್ತೀಚಿಗೆ ಚಿತ್ತಾಲ ಎನ್ನುವವರು ತೀರಿಕೊಂಡರಂತಲ್ಲ ಅಂದಾಗ ಕಾಕಾತಾಳೀಯ ಎಂಬಂತೆ the Outlook ಮ್ಯಾಗಜೀನ್ ನಲ್ಲಿ ಅವರ ಸಂತಾಪ ಸೂಚಕ ಸಣ್ಣದೊಂದು ಕಾಲಂ ಓದ್ತಾ ಇದ್ದೆ, 

ಅದರ ಬಗ್ಗೆ ಹೇಳಿ, ನಾನು ಅವರ ಬರಹದ ಫ್ಯಾನ್, ನಿಹಾ ’ಶಿಕಾರಿ ” ಓದಿ ಕವರ್ ಪೇಜ್ ಮಾಡಿ ಎರಡನೇ ಬಹುಮಾನ ಪಡೆದದ್ದು, ಬರಹಗಾರರಾದ ಎಮ್ ಎಸ್ ಶ್ರೀರಾಮ ಅವರನ್ನು ಕೊನೆಯ ಬಾರಿ ನೋಡಿದ್ದು, ಅವರ ಲ್ಯಾಪ್ ಟಾಪ್ ನಲ್ಲಿ ಕವರ್ ಪೇಜ್ ಗಳನ್ನು ತೋರಿಸಿದ ಬಗ್ಗೆ, ನನಗೆ ಕೆಲವರಿಂದ ಅವರ ದೇಹಾಂತದ ಬಗ್ಗೆ ಎಸ್ ಎಮ್ ಎಸ್ ಬಂದಿದ್ದು, ಮೊನ್ನೆ ಪುಸ್ತಕದ ಕಪಾಟನ್ನು ಸೆಟ್ ಮಾಡುತ್ತಿದ್ದಾಗ ಅವರ ಪುಸ್ತಕಗಳನ್ನು ಒಂದೇ ಕಡೆ ಜೋಡಿಸಿ ಎಲ್ಲದರ ಮೊದಲ ಪುಟ ಓದಿದ್ದು.... ಎಲ್ಲ ಅವಳಿಗೆ ಕೊರೆದೆ. ಅವಳು ಯಶವಂತ ಚಿತ್ತಾಲರು ದೈವಾಧೀನರಾದ ದಿನ ಅವಳ ಫ್ರೆಂಡ್ ಶುಭಾ ವಾಘ್ ಗೆ ಫೋನ್ ಮಾಡಿದ್ದಳಂತೆ, ಅವಳ ಹುಟ್ಟಿದ ಹಬ್ಬಕ್ಕೆ ವಿಶ್ ಮಾಡಲು, ಆಗ ಶುಭಾ ಅವರು ’ ಮುಂಬೈನಲ್ಲಿರುವ ನನ್ನ ಯಶವಂತ ಕಾಕಾ ಇವತ್ತು ತೀರಕೊಂಡರು ಅಂತ ತುಂಬಾ ಬೇಜಾರು ಪಟ್ಟುಕೊಂಡರಂತೆ.ಅಷ್ಟೊಂದು upset ಆಗಿದ್ದನ್ನು ಇದೇ ಮೊದಲ ಸಲ. ಅವರಿಬ್ಬರೂ ತುಂಬಾ ಕ್ಲೋಸ್ ಆಗಿದ್ದರ್ಂತೆ. ಅವರು ಕನ್ದಡ ದಲ್ಲಿ ಬರೀತಿದ್ರು’ ಅಂತೆಲ್ಲ ಶೇರ್ ಮಾಡಿದರಂತೆ.
ಎಲ್ಲರೂ ಇಲ್ಲಿ especially ಕರ್ನಾಟಕದ literary circle ನಲ್ಲಿ ಅವರನ್ನು ತುಂಬಾ ಮಿಸ್ ಮಾಡ್ತಿದ್ದಾರೆ ಅವರ ಬಗ್ಗೆ ಹಿರಿಯ ಕಿರಿಯ ಲೇಖಕರೆಲ್ಲ ಬರಹಗಳನ್ನು ನ್ಯುಸ್ ಪೇಪರ್ ನಲ್ಲಿ ಹಾಕಿದ್ದಾರೆ ಅಂತೆಲ್ಲ ಹೇಳಿ , ನನ್ನ ಬ್ಲಾಗ್ ನಲ್ಲಿ ಎಮ್ ಎಸ್ ಶ್ರೀರಾಮ್ ಅವರ ಬ್ಲಾಗ್ ಕೊಂಡಿ ಕೊಟ್ಟಿದ್ದನ್ನು ಹೇಳಿದೆ. ಅದಕ್ಕೆ ಅವಳು ’ಇಲ್ಲ ನನ್ನ ಫ್ರೆಂಡ್ ಇಲ್ಲಿ ಯು ಎಸ್ ನಲ್ಲಿ ಹಲವಾರು ವರ್ಷಗಳಿಂದ ಇರುವುದರಿಂದ ಕನ್ನಡ ಓದಲು ಬರುವುದಿಲ್ಲ, ಮಾತನಾಡಿದರೆ ಸ್ವಲ್ಪ ಅರ್ಥ ಆಗುತ್ತೆ, ಮನೆಯಲ್ಲಿ ಅವರು ಕೊಂಕಣಿ ಮಾತನಾಡುವುದು ಅಂದಳು. ನನಗೆ ದೀಪಾ ಗಣೇಶ ’ದ ಹಿಂದು’ ದಲ್ಲಿ ಅಮೂರ ರ ಬರಹ ಟ್ರಾನ್ಸ್ಲೇಟ್ ಮಾಡಿ ಹಾಕಿದ್ದು ನೆನಪಾಗಿ ನನ್ನ ತಂಗಿಗೆ ಹೇಳಿದೆ. ’ಪ್ಲೀಸ್ ಅದರ ಲಿಂಕ್ ಕಳಿಸ್ತೀಯಾ ಅವರಿಗೆ ಖುಶಿ ಆಗುತ್ತೆ ಅಂದಳು’ ಅದರಲ್ಲಿ ಚೆಂದ್ದ ಕೆಲವು ಬ್ಲ್ಯಾಕ್ & ವೈಟ್ ಫೋಟೊಗಳಿದ್ದಾವೆ ಅಂದೆ. ಲಿಂಕ್ ಹುಡುಕಿ ತಂಗಿಗೆ ಮೈಲ್ ನಲ್ಲಿ ಕಳುಹಿಸಿದೆ. ಅವಳ ಫ್ರೆಂಡ್ ಗೆ ಕಳುಹಿಸಲು. ಹಾಗೆ ನಿಮ್ಮ ಜತೆ ಶೇರ್ ಮಾಡ್ತಾ ಇದ್ದೇನೆ.



ಕೆಲವರು ಬರಹದ ಮೂಲಕ ಎಷ್ಟು ಆಪ್ತರಾಗುತ್ತಾರಲ್ಲವೇ?

April 8, 2014

ಈ ಯುಗಾದಿಯ ಕತೆ

ಇದೇನಪ್ಪ ರಾಮನವಮಿಯಂದು ಯುಗಾದಿ ಪೋಸ್ಟ್ ಅಂದುಕೊಂಡ್ರಾ ಮತ್ತೆ? ಯುಗಾದಿಗೆ ವಿಶ್ ಮಾಡುತ್ತಾ ಎರಡು ಮೈಲ್ ’ಈ ಯುಗಾದಿಗೆ ಏನು ಸ್ಪೇಶಲ್, ಯಾರನ್ನು ಊಟಕ್ಕೆ ಕರೀತಾ ಇದ್ದೀರ” ಅಂತ ಕೇಳಿದ್ದವು.
ಯುಗಾದಿಗೆ ಒಂದೆರಡು ದಿನ ಮುಂಚೆ ತೀರ್ಥಹಳ್ಳಿಯ ನಮ್ಮ ತೋಟದಲ್ಲಿ ಬೆಂಕಿ ಬಿದ್ದು ಸುಮಾರಷ್ಟು ಹಾನಿಯಾಯಿತು. ರಾಯರು ತೀರ್ಥಹಳ್ಳಿಗೆ ಹೋಗುವವರಿದ್ದರು. ಆದ್ದರಿಂದ ನಾವೇ ಮೂರು ಜನ ಒಂದು ಅನ್ನ ಸಾರು ಒಂದು ಸ್ವೀಟ್ ಮಾಡಿ ಹಬ್ಬ ನಿಪಟಾಯಿಸುವಾ ಅಂತ ಇದ್ವಿ. ಆದರೆ ಮನೆ ಗೃಹಪ್ರವೇಶಕ್ಕೆ ಕರೆದ ಮಿತ್ರರೊಬ್ಬರು, ಆಗ ಹುಷಾರಿಲ್ಲದೆ ಊರಿಗೆ ಹೋಗಿ ಅಲ್ಲಿಂದಲೇ ಫೋನ್ ಮಾಡಿದಾಗ, ಇರಲಿ ಬಿಡಿ ಡಾಕ್ಟರ್ ಹತ್ತಿರ ಎಲ್ಲ ಚೆಕ್ ಅಪ್ ಮಾಡಿಸಿ, ಆರಾಮಾಗಿ ಬೆಂಗಳೂರಿಗೆ ಬಂದ ಮೇಲೆ ಬನ್ನಿ. ಯುಗಾದಿಗೆ ಬನ್ನಿ ಅಂತ ಹೇಳಿದ್ದೆ. ನಿರಂತರ ಸಂಪರ್ಕದಲ್ಲಿರುವ ಅವರು, ಅವರ ಗಾಯಕ ಮಿತ್ರರನ್ನು ನಮ್ಮನ್ನು ಪರಿಚಯಿಸಬೇಕೆಂದಿದ್ದರು. ಅಷರಲ್ಲೇ ಮಿತ್ರರ ಮಿತ್ರರು ಅವರ ಗುರುಗಳನ್ನು ವಂದಿಸುವ ಒಂದು ಸುಂದರ ಸಂಗೀತದ ಸಂಜೆಯನ್ನು ನಾವು ಅಸ್ವಾದಿಸುವಮ್ತೆ ಮಾಡಿದರು. ಅಲ್ಲಿ ಪರಿಚಯ ಆದ ಅವರು ಅವರ ಮದುವೆಯ ಆಮಂತ್ರಣ ಕೊಡಲು ಮನೆಗೇ ಬರುವರೆಂದು ಹೇಳಿದರು. ಅವರಿಗೂ ಯುಗಾದಿಗೆ ಆಹ್ವಾನವೀಯುತ್ತ , ಏನಿದ್ದರೂ ಪುನ: ಫೋನ್ ಮಾಡಿ ತಿಳಿಸುತ್ತೇನೆಂದು ಹೇಳಿದ್ದೆ. ಯುಗಾದಿಯ ಮುಂಚಿನ ದಿನ ನನ್ನ ಸ್ನೆಹಿತರು ಫೋನ್ ಮಾಡಿದಾಗ ಹೀಗ್ ಹೀಗೆ, ಶ್ರೀಕಾಂತ ತುಮಕೂರುನಿಂದ ತೀರ್ಥಹಳ್ಳಿಗೆ ಹೋಗಬಹುದು, ನಾವು ಹಬ್ಬ ಗ್ರಾಂಡ್ ಆಗಿ ಮಾಡಲ್ಲ’ ಅಂದು ’ಏನು ಮಾಡುತ್ತೀರಿ, ಯಾರ ಮನೆಗೆ ಊಟಕ್ಕೆ ಹೋಗುತ್ತೀರಿ ಅಂತ ಬೇರೆ ಕೇಳಿದೆ. ಅದಕ್ಕೆ ಅವರು ’ಯಾರೂ ಊಟಕ್ಕೆ ಕರೆದಿಲ್ಲ ಯಾರದಾದ್ರೂ ಮನೆಗೆ ಹೋಗೋದಪ್ಪ’ ಅಂದಾಗ ಛೆ ಬ್ಯಾಚಲರ್ ಹುಡುಗ್ರು, ನನಗೆ ಅಕ್ಕ ಅಂತೆಲ್ಲ ಕರೀತಾರೆ ಅಂತ ಕೆಟ್ಟದನಿಸಿ, ಅಯ್ಯೋ ಹಾಗಾದ್ರೆ ಇಲ್ಲಿಗೇ ಬನ್ನಿ, ಸಿಂಪಲ್ಲಾಗ್ ಒಂದು ಊಟ ಮಾಡೋಣ, ಒಂದೆ ಪ್ರಾಬ್ಲಮ್ ಅಂದ್ರೆ ನಾವು ಮೂರು ಜನ ಮಾತೇ ಆಡಲ್ಲ. ಸ್ವಲ್ಪ ಸುಧಾರಿಸಕೊಳ್ಳಬೇಕು’ ಅಂತ. ರಾಯರು ಇದ್ದರೆ ಅವರೆ ಮಾತಾಡ್ತಾರೆ......( ಅಂತ ಹೇಳಿ ಅಡಿಗೆ ಮನೆಗೆ ಹೋದಾಗ ಅಲ್ಲಿ ನಾಲ್ಕೇ ನಾಲ್ಕು ಬ್ರೆಡ್ ಸ್ಲೈಸ್ ಕಾಣಿಸಿತ್ತು. ರಾಯರು ಊರಲ್ಲಿಲ್ಲದಿದ್ದಾಗ ನಾವು ಬ್ರೆಡ್ ಬಿಸ್ಕತ್ ಮೇಲೆ ಜೀವನ ಸಾಗಿಸೋದು. ಹಿ ಹಿ ಹಿ.).....ಈ ವಿಷಯದ ಬಗ್ಗೆ ಮುಂದೆ ಬರೀತೇನೆ. ಸ್ವಲ್ಪ ಟ್ರ್ಯಾಕ್ ಚೆಂಜ್!
ಅಲ್ಲಿ ತೋಟದಲ್ಲಿ ಬೆಂಕಿ ಬಿದ್ದಾಗ ಪಕ್ಕದ ತೋಟದವರು ಫೋನ್ ಮಾಡಿ ಹೇಳಿದರು. ನಮ್ಮ ತೋಟದ ಉಸ್ತುವಾರಿ ನೋಡಿಕೊಳ್ಳುವ ಪುಟ್ಟರಾಜು ಕುಟುಂಬ ಹಬ್ಬಕ್ಕೆಂದು ಅವರ ಉರಾದ ಹಿರಿಯೂರಿಗೆ ಹೋಗಿದ್ದರು. ಶ್ರೀಕಾಂತ ಇಲ್ಲಿಂದಲೇ ತೀರ್ಥಹಳ್ಳಿಯ ಫೈರ್ ಇಂಜೀನ್ ಗೆ ಫೋನ್ ಮಾಡಿದರು. ಆದರೆ ಅಲ್ಲಿರುವ ಒಂದೇ ಫೈರ್ ಇಂಜಿನ್ ಕೋಣಂದೂರಿಗೆ ಹೋಗಿತ್ತು. ಆ ದಿನ ಸುಮಾರು ತೋಟಗಳಲ್ಲಿ ಬೆಂಕಿ ಬಿದ್ದಿದ್ದವಂತೆ. ಅಷ್ಟು ಸೆಕೆ/ಬಿಸಿಲು. ಕೊಪ್ಪ, ಶ್ರೀಂಗೇರಿಯ ಫೈರ್ ಎಂಜಿನ್ ಕೂಡ ದೂರ ದೂರದ ಹಳ್ಳಿಗೆ ಹೋಗಿದ್ದರಿಂದ ಶಿವಮೊಗ್ಗಕ್ಕೆ ಫೋನ್ ಮಾಡಿ ಅಲ್ಲಿಂದ ತೀರ್ಥಹಳ್ಳಿಗೆ ನಮ್ಮ ತೋಟಕ್ಕೆ ಬರಲು ಎರಡು ಮುಕ್ಕಾಲು ಗಂಟೆ. ಬಿಸಿಲಿಗೆ ಚೆನ್ನಾಗಿ ಒಣಗಿನ ಬಿದಿರಿನ ಮೆಳೆ ಬೆಂಕಿಗೆ ಆಹುತಿಯಾಯಿತು. ಅಂತೂ ಬೆಂಕಿ ನಂದಿಸಲು ಸುಮಾರು ಹರಸಹಾಸ ಪಡಬೇಕಾಯ್ತು. ನೆಂಟರು ಮಿತ್ರರೆಲ್ಲ ತುಂಬ ಸಹಕರಿಸಿದರು. ಅಷ್ಟೆ ಅಲ್ಲ whatsapp ನಲ್ಲಿ ಬೆಂಕಿಯ, ಅದನ್ನು ಆರಿಸುವ ಚಿತ್ರಗಳನ್ನು ಕಳುಹಿಸಿ ನಮ್ಮ ಹೃದಯಕ್ಕೆ ಬೆಂಕಿ ತಾಗುವಂತೆ ಮಾಡಿದರು :-(
ಊಟಕ್ಕೆ ಕರೆದಿದ್ದಾಯ್ತು. ಅಡಿಗೆ ಮನೆಗೆ ಹೋಗಿ ಮೊದಲಿಗೆ ಉದ್ದಿನ ಬೇಳೆ ನೆನೆಸಿದೆ. ಬಾಳೆ ಎಲೆ ಕಡಬು ಮಾಡಲಿಕ್ಕೆ. ಮಕ್ಕಳಿಗೆ ಜಯನಗರ್ ಫೋರ್ಥ್ ಬ್ಲಾಕ್ ಕೆ ಓಡಿಸಿದೆ ಶೆಣೈ ಸ್ಟೋರ್ಸ್ ನಿಂದ ಎಳೆ ಗೇರು ಬೀಜ ತರಲು. ತೊಂಡೆಕಾಯಿ+ ಎಳೆಗೇರುಬೀಜದ ಪಲ್ಯ  ಯುಗಾದಿಗೆ ನಮ್ಮಲ್ಲಿ ಮಸ್ಟ್.  ಮಕ್ಕಳು ಸಂತೆಗೆ ಹೋಗಿ ಹೂ, ಹಣ್ಣು, ತರಕಾರಿ ತಂದರು. ಹಬ್ಬದ ದಿನ ನಾನು ಬೆಳಿಗ್ಗೆ ಬೇಗ ಎದ್ದು ಮನೆಯೆಲ್ಲ ಶುಚಿ ಮಾಡಿ, ರಂಗೋಲಿ ಬರೆದು, ಮಾವಿನ ತೋರಣ ಕಟ್ಟಿದೆ. ದೇವರಿಗೆ ದೀಪ ಕೂಡ ನಾನೇ ಹಚ್ಚಿದೆ. ಹೊಸ ಪಂಚಾಂಗ್ ಮೊದಲೆ ತಂದಿದ್ದಿತ್ತು. ಅದನ್ನು ದೇವರ ಮುಂದಿಟ್ಟೆ. ಅಡಿಗೆ ಎಲ್ಲ ಮುಗಿಸುವಷ್ಟರಲ್ಲಿ ರಾಯರು ಹಳ್ಳಿಯಿಂದ ಫೋನ್ ಮಾಡಿದರು. ತೀರ್ಥಹಳ್ಳಿಯಲ್ಲಿ ಅವರ ಕಸಿನ್ ಎಲ್ಲ ಮ್ಯಾನೇಜ್ ಮಾಡಿದ್ದಾರೆ ನಾನೇನೂ ಅರ್ಜೆಂಟ್ ಹೋಗುವ ಪ್ರಮೇಯ ಇಲ್ಲ’ ಅಂತ. ಹಾಗಾದರೆ ಬೇಗ ಬನ್ನಿ , ಸ್ನೇಹಿತರಾದ ’ರ’ ಮತ್ತು ”ನ’ ಬರುತ್ತಿದ್ದಾರೆಅಂತ ಖುಶಿಯಿಂದ ಕುಣಿಯೋದೊಂದೆ ಬಾಕಿ. ಅದಕ್ಕೆ ರಾಯರು, ’ಇಲ್ಲ ನಾವು ಬರುವುದು ನಾಲ್ಕು ಗಂತೆಯಾಗುತ್ತೆ, ಪಾಪ ಅವರನ್ನು ಕಾಯಿಸುವುದು ಬೇಡ’ ಅಂದರು.
ಹೇಳಿದ ಟೈಮ್ ಗೆ ಸರಿಯಾಗಿ ಬಂದರು ’ರ’ ಮತ್ತು ’ನ’. ಗಡಿಬಿಡಿಯಲ್ಲಿ ಅವರಿಗೆ ವಿಶ್ ಮಾಡಲು ಮರೆತು ಹೋಯ್ತು. ಊಟ ಬಡಿಸುವಾಗ ಇಬ್ಬರಿಗೂ ಯುಗಾದಿಯ ಶುಭಾಶಯಗಳನ್ನು ಹೇಳಿದೆ.
ಆ ದಿನದ ಮೆನ್ಯೂ:
ಬೇವು ಬೆಲ್ಲ with lots of ಬೆಲ್ಲ, ತೊಂಡೆಕಾಯಿ+ ಎಳೆಗೇರುಬೀಜದ ಪಲ್ಯ, ಬೀನ್ಸ್ ಪಲ್ಯ, ಸೌತೆಕಾಯಿ ಪಚ್ಚಡಿ, ದಪ್ಪಮೆಣಸಿನ ಬೋಂಡಾ, ಬಾಳೆಲೆ ಕಡುಬು, ಚಟ್ನಿ, ಅನ್ನ, ತೊವ್ವೆ, ಸಾರು, ಸಾಬಕ್ಕಿ ಖೀರು, ಬೇಳೆ ಹೋಳಿಗೆ with home made ತುಪ್ಪ, ಮಸಾಲಾ ಮಜ್ಜಿಗೆ :-) ಅಷ್ಟೆ. ನಾಲ್ಕು ಐಟಮ್ ಕಡಿಮೆ.
ಸರಿ ಈಗ ಆ ಬ್ರೆಡ್ ಸ್ಲೈಸ್ ಕಡೆ ಹೊರಡುವ?? ಅದರಿಂದ ಏನಾದರೂ ಹೊಸ ಡಿಶ್ ಮಾಡುವ ಅಂದುಕೊಂಡು ಅದರ ಜಾಮೂನು ಮಾಡಿದೆ. ಇಲ್ಲ ಅದನ್ನು ಬಂದ ಮಿತ್ರರಿಗೆ ನೀಡಲು ಮುಜುಗರ ಆಯ್ತು.
ಮೊದಲಿಗೆ ಬ್ರೆಡ್ ಸ್ಲೈಸ್ ಮುಳುಗುವಷ್ಟು ಹಾಲು ಹಾಕಿದೆ. ಮನೆಯ ಕಸ ಗುಡಿಸಿ ಬರುವಷ್ಟರಲ್ಲಿ ಅದು ಮೆತ್ತಗಾಯ್ತು. ಅದಕ್ಕೆ ಒಂದು ಟೀ ಸ್ಪೂನ್ ರವೆ, ಸ್ವ್ಲಲ್ಪ ಸೋಡಾ ಪುಡಿ, ಒಂದೆ ಟೇಬಲ್ ಸ್ಪೂನ್ ಮೈದಾ, ಒಂದು ಟೇಬಲ್ ಚಮಚ ಮೊಸರು ಬರೆಸಿ. soft dough ಮಾಡಿ ಒದ್ದೆ ಬಟ್ಟೆಯಿಂದ ಮುಚ್ಚಿಟ್ಟು ಮನೆಯೆಲ್ಲ ಒರೆಸಿ ಬಂದೆ. ಆ ಮೇಲೆ ಆ ಹಿಟ್ಟಿನ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಟ್ಟು ಸಕ್ಕರೆ ಸಿರಪ್ ಮಾಡಿ ಅದಕ್ಕೆ ಏಲಕ್ಕಿ ಪುಡಿ ಬೆರೆಸಿದೆ. ಮಾಡಿಟ್ಟ ಉಂಡೆಗಳನ್ನು ಎಣ್ಣೆಯಲ್ಲಿ ಕರಿದು ಸಕ್ಕರೆ ಪಾಕಕ್ಕೆ ಹಾಕಿದೆ. ಮಕ್ಕಳಿಗೆ ಫೋನಾಯಿಸಿ ವ್ಯಾನಿಲ್ಲ ಐಸ್ ಕ್ರೀಮ್ ತರಿಸಿದೆ. ಮಧ್ಯಾಹ್ನ ಊಟ ಆದಮೇಲೆ ಈ ಜಾಮೂನಿನ ಮೇಲೆ ಐಸ್ ಕ್ರೀಮ್ ಹಾಕಿ ತಿಂದೆವು. ನಿಹಾರಿಕಾಗೆ ತುಂಬ ಇಷ್ಟ ಆಗಿ, ನಾಳೆ ನಿನ್ನ ಫ್ರೆಂಡ್ಸ್ ಗೂ ಸರ್ವ್ ಮಾಡು. ಎಮ್ ಟಿ ಆರ್ ಗಿಂತ ಈ ಜಾಮೂನೇ ಚೆನ್ನಾಗಿದೆ ಅಂದ್ಲು. :-)






ಹಬ್ಬದ ದಿನ ರಾಯರು  ಮತ್ತು ಅವರ ಮಿತ್ರರು ಮನೆಗೆ ತಲುಪಿದಾಗ ನಾಲ್ಕು ಕಾlu ಆಗಿತ್ತು . ಆಮೇಲೆ ಸ್ನಾನ ಒಂದು ಮಿನಿ ಪೂಜೆ ಆದಮೇಲೆ ಊಟ. ನಾನು ಮಜ್ಜಿಗೆ ಮಾತ್ರ ಕುಡಿದು ಸೀದಾ ರಾತ್ರಿ ನೇ ಊಟ ಮಾಡಿದ್ದು. ಮಿತ್ರರು ಮನೆಗೆ ಹೋಗಿ ನಿದ್ದೆ ಹೊಡೆದು, ಸಂಜೆ ಫೋನ್ ಮಾಡಿ ’ಚೆನ್ನಾಗಿತ್ತು ಅಡಿಗೆ’ ಅಂದಾಗ ಖುಶಿಯೇನೋ ಆಯ್ತು. ಆದರೆ ರಾತ್ರಿ ಕಡಬು ಚಟ್ನಿ ತಿನ್ನುವಾಗ ಸಖತ್ ಉಪ್ಪುಪ್ಪು ಆಗಿದ್ದು ಗೊತ್ತಾಗಿ ಛೆ! ಪಾಪ ಏನೂ ಅನ್ನದೇ ತಿಂದುಬಿಟ್ರು ಪಾಪ ಅನ್ನಿಸಿತು:-(
ಅವರು ತುಂಬಾssss ಚೆನ್ನಾಗಿದೆ ನಿಮ್ಮ ಮನೆ ಅಂದಿದ್ದು ತುಂಬಾ ಅಂದ್ರೆ ತುಂಬಾ ಖುಶಿ ಆಯ್ತು.
ಅಷ್ಟೆ ಕತೆ. ಸಾಕಾ??!! :-)
(ಅಮ್ಮ, ಯುಗಾದಿ ಮುಗಿದು ಅದೆಷ್ಟೊ ದಿನ ಆದ ಮೇಲೆ ಬರಿತಿದ್ದಿಯಾ ಅಂತ ಮಾಲವಿಕಾ ಉವಾಚ’ ಹೌದು ಒಂದು ಸೋಂಬೇರಿತನ, ಇನ್ನೊಂದು ಹದಿನಾಲ್ಕನೇ ತಾರೀಕಿಗೆ ಸೌರಮಾನ ಯುಗಾದಿ......ಹಾಗಾಗಿ ಇನ್ನೂ ಕೆಲವೇ ದಿನಕ್ಕೆ ಯುಗಾದಿಯೇ ತಾನೇ??ಅದಕ್ಕಿಂತ ಮೊದಲೇ ಬರೆದೆ ಅಲ್ವಾ  ಮತ್ತು ನನ್ನ ಬ್ಲಾಗ್ ಹೆಸರೆ ನೆನಪಿನ ಸಂಚಿಯಲ್ಲವಾ’ಅಂತ ಹೇಳಿದೆ ಅವಳಿಗೆ. ಅವಳು whew, whatever, sorry i asked ಅಂದ್ಲು....)
:-) :-)

March 29, 2014

ನಾನ್ ಕತಾಯ್ ಅಥವಾ ನಾರಯಣ ಕಟಾರ್

ಕೊಂಕಣಿಯಲ್ಲಿ ಅದು ನಾರಾರಣ ಕಟಾರ್ ಹೇಗಾಯಿತು ಗೊತ್ತಿಲ್ಲ. ನನ್ನ 300 ನೇ ಪೋಸ್ಟ್, 72,000+ ಓದುಗರ ವಿಸಿಟ್ಸ್, ಹಾಗೂ ಯುಗಾದಿಯ ಪ್ರಯುಕ್ತ ಒಂದು ಸ್ವೀಟ್ ಟ್ರೀಟ್. ಟ್ರೀಟ್ ಕೆ ಲಿಯೆ ಕೋಯಿ ಭಿ ಬಹಾನಾ ಚಲೇಗಾ!!:-)

ತುಂಬಾ ಸುಲಭದ ಬೇಕರಿ ತಿನಿಸು. ಮುಂಬೈನಲ್ಲಿ ನಮ್ಮಲ್ಲಿ ಓವನ್ ಇಲ್ಲದ ದಿನಗಳಲ್ಲೂ ಇದನ್ನು ಮಾಡುತ್ತಿದ್ದೆವು. ಕಣಕ ತಯಾರಿಸಿ ಮಧ್ಯಾಹ್ನದ ಹೊತ್ತು ಅದನ್ನು ಬೇಕರಿಗೆ ಒಯ್ದು ಕೊಡುತ್ತಿದ್ದೆವು. ಬೇಕರಿಯವನು ಅದನ್ನು ಬೇಕ್ ಮಾಡಿ ಇಡುತ್ತಿದ್ದ. ಸಂಜೆ ನಾವು ಮಕ್ಕಳು ಯಾರಾದರೂ ಹೋಗಿ ಅದನ್ನು ತೆಗೆದುಕೊಂಡು ಬರುತ್ತಿದ್ದೆವು. ಅಮ್ಮನ ಬಳಿ ಕೇಳಿ ಮಾಡಿದವರು ಎಷ್ಟೋ ಜನ. ಆದರೆ ಅಮ್ಮ ಮಾಡಿದ ರುಚಿ ಅವರು ಮಾಡಿದ್ದಕ್ಕೆ ಬರುತ್ತಿರಲಿಲ್ಲ. ಎಷ್ಟರ ಮಟ್ಟಿಗೆ ಎಂದರೆ ಅದು ಬೇಯುತ್ತಿದ್ದಾಗಿನ ಪರಿಮಳ ನೋಡಿ ಬೇಕರಿಯವನು ,ಬೆಹೆನ್ ನಮಗೂ ಮಾಡಿ ಕೊಡಿ ಎನ್ನುತ್ತಿದ್ದ. 

ಸೊ ನಿನ್ನೆ ನಾನು ಇದನ್ನು ಟ್ರೈ ಮಾಡಿದೆ. of course ಅದನ್ನು ಮಾಡುವ ಬಗ್ಗೆ ಹೇಗೆ ಅಂತ ಮೊದಲಿಗೆ ಅಮ್ಮನಿಗೆ ಫೋನ್ ಮಾಡಿದೆ. ಸಂಜೆ ಅಮ್ಮ ಫೋನ್ ಮಾಡಿ ’ಮಾಡಿದ್ಯೇನೆ? ಅಂತ ಕೇಳಿದಾಗ ಮಾಡಿ ನಿಹಾ ಕಾಲೇಜಿಗೆ ತೆಗೆದುಕೊಂಡು ಹೋಗಿ ಅವಳ ಫ್ರೆಂಡ್ಸ್ ಮಧ್ಯ ಹಿಟ್ ಹಿಟ್ ಆಯ್ತು ಅಂದೆ. ಸ್ವಲ್ಪ ಪನ್ ಕಣ್ರೀ. ಅಮ್ಮನಿಗೆ ಅರ್ಥ ಆಗಲಿಲ್ಲ ಬಿಡಿ. :-) ಹೌದು ಎಷ್ಟು ಸಾಫ್ಟ್ ಅಂದ್ರೆ ಬಾಯಿಗೆ ಹಾಕಿದ ತಕ್ಷಣ ಅದು ಪುಡಿ (ಹಿಟ್ಟು)ಯಾಗಿ ನಿಧಾನಕ್ಕೆ ಮೆಲ್ಟ್ ಆಗುತ್ತೆ. ಅಮ್ಮ ಮಾಡಿದರೆ ರುಚಿಯಾಗುವುದರ ಗುಟ್ಟು ಏನೂ ಗೊತ್ತಾ?? ಮನೆಯಲ್ಲೇ ಬೆಣ್ಣೆ ಕಾಯಿಸಿ ತುಪ್ಪ ಮಾಡುತ್ತಿದ್ದದ್ದು. like mother like daughter ತಾನೇ ನಾನು?? :-)

1 ಕಪ್ ಮೈದಾ
1 ಕಪ್ ತುಪ್ಪ
1/4 ಚಮಚ ಸೋಡಾ ಪುಡಿ
ಸ್ವಲ್ಪ ಏಲಕ್ಕಿ
1 1/2 ಕಪ್ ಸಕ್ಕರೆ ಪುಡಿ

ಸಕ್ಕರೆ ಒಂದಿಗೆ ಏಲಕ್ಕಿ ಬೆರೆಸಿ ಪುಡಿ ಮಾಡಿಟ್ಟುಕೊಳ್ಳಿ. ಮೈದಾ, ಸೋಡಾ ಪುಡಿ, ಸಕ್ಕರೆ+ಏಲಕ್ಕಿ ಪುಡಿ ಮಿಕ್ಸ್ ಮಾಡಿಡಿ. ತುಪ್ಪವನ್ನು ಉಗುರು ಬೆಚ್ಚಗೆ ಮಾಡಿ ಇದಕ್ಕೆ ಬೆರೆಸಿ. ಕೈನಿಂದ ಚೆನ್ನಾಗಿ ನಾದಿ. ಒದ್ದೆಬಟ್ಟೆಯಿಂದ ಎರಡರಿಂದ ಮೂರು ಗಂಟೆಗಳ ಕಾಲ ಮುಚ್ಚಿಡಿ.
ಆ ಮೇಲೆ ಪುನ: ಸ್ವಲ್ಪ ನಾದಿ ಕೈನಿಂದ ಉಂಡೆ ಮಾಡಿ ಚಪ್ಪಟೆ ಮಾಡಿಡಿ. ಮೈಕ್ರ‍ೊವೇವ್ ಅನ್ನು ಕನ್ ವೆನ್ ಷನ್ ಮೋಡ್ ನಲ್ಲಿ 30 ಸೆಕೆಂಡ್ ಬಿಸಿ ಮಾಡಿ. 

ಈಗ ನಾನ್ ಕತಾಯ್ ಇರುವ ಮೈಕ್ರೋವೇವ್ ಸೇಫ್ ಪಾತ್ರೆ/ಟ್ರೇ ಅನ್ನು ಒಳಗಿಟ್ಟು ಕನ್ವೆನ್ಶನ್ ಮೋಡ್ ನಲ್ಲಿ 180 degree ಬಿಸಿಯಲ್ಲಿ 15 ನಿಮಿಷ ಬೇಕ್ ಮಾಡಿ.

p.s: ಕೆಲವರು ಕೇಸರಿ ಬಣ್ಣ ಬೆರೆಸುತ್ತಾರೆ. ನಾನು ಹಾಕಲ್ಲ.

:-)
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು in advance. ಎಂಜಾಯ್

March 25, 2014

ಶ್ರೀ ಯಶವಂತ ಚಿತ್ತಾಲರು- (wah wah kya baat hai....ನನ್ನ 300 th ಪೋಸ್ಟ್

ಸ್ವಂತ ಮನೆಗೆ ಶಿಫ್ಟ್ ಆಗಿ ಸರಿಯಾಗಿ ಒಂದು ತಿಂಗಳು. ಪುಸ್ತಕಗಳನ್ನು ಅರ್ಧಕ್ಕಿಂತ ಹೆಚ್ಚು ಕೊಡಬೇಕಾದಾಗ ಆದ ನೋವು ಅಷ್ಟಿಷ್ಟಲ್ಲ. ಮೊದಲೆಲ್ಲ ನಾನು ಪುಸ್ತಕಗಳನ್ನು ಮೂರು ನಾಲ್ಕು ಬಾರಿ ಓದಿಯಾದ ನಂತರ ಆಫಿಸ್ ಲೈಬ್ರರಿಗೆ ವರ್ಗಾಯಿಸಿ ಬಿಡುತ್ತಿದ್ದೆ. ಆದರೆ ಈ ಸಲ ಆಫಿಸ್ ನಲ್ಲೂ ಜಾಗ ಇಲ್ಲ ಅಂದಾಗ ಬೇಜಾರಾಯಿತು. ಹಲವಾರು ಪುಸ್ತಕಗಳನ್ನು ನಿಹಾ ಫ್ರೆಂಡ್ಸ್ ಗೆ, ಕೆಅವು ಆಕೃತಿಗೆ, ಕೆಲವು ಕರ್ನಾಟಕ ತಮಿಳನಾಡು ಬಾರ್ಡರ್ ನಲ್ಲಿರುವ ಒಂದು ಎನ್ ಜಿ ಒ ದ ಲೈಬ್ರರಿಗೆ, ಕೆಲವು ನಿಹಾರಿಕಾಳ ಕಾಲೇಜ್ ಗೆ ಕೊಟ್ತ್ತು ಈಗ ನಾನು ತುಂಬ ಬಡವಿ ಎನ್ನುವ ಫೀಲಿಂಗ್ ಬರುತ್ತಾ ಇದೆ. ಹಾಂ ಪುಸ್ತಕ ಗಳನ್ನು ಇತರರಿಗೆ ಕೊಡುತ್ತಿದ್ದಾಗ ನನ್ನ ಕಣ್ಣು ಯಶವಂತ ಚಿತ್ತಾಲರ ಪುಸ್ತಕ ’ಪುರುಷೋತ್ತಮ’ ದ ಮೇಲೆ ಬಿತ್ತು. ಅದನ್ನು ನಿಹಾ ಅವಳ ಫ್ರೆಂಡ್ ಗೆ ಕೊಡಲು ಎತ್ತಿಟ್ಟಿದ್ದಳು. ನಾನು ಒಂದು ಸಮನೆ ಕಿರುಚಿದೆ, ಹೋಯ್ ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ, ಕೆ.ಟಿ. ಗಟ್ಟಿ ಮಾಮ, ವಸುಧೇಂದ್ರ, ಶ್ರೀನಿವಾಸ ವೈದ್ಯ, ನಾಗೇಶ ಹೆಗಡೆ,ಎಸ್.ಎಲ್. ಭೈರಪ್ಪ, ರಾಘವೇಂದ್ರ ಪಾಟೀ ಲ್,ವಿವೇಕ ಶಾನಭಾಗ, ಯು.ಆರ್ ಅನಂತಮೂರ್ತಿ, ನೆಮಿಚಂದ್ರ, ಇವರ ಪುಸ್ತಕ ಮಾತ್ರ ಕೊಡುವ ಹಾಗಿಲ್ಲ. ಅಪ್ಪ ಜಾಗ ಇಲ್ಲ ಅಂದ್ರೆ ನನ್ನ ಸೀರೆಗಳನೆಲ್ಲ ಕೊಟ್ಟು ಬಿಟ್ಟು ಜಾಗ ಖಾಲಿ ಮಾಡಿಕೊಂಡು ಇಡ್ತೇನೆ, ಗೊತ್ತಾಯ್ತಾ ಅಂತ ಆವಾಜ್ ಹಾಕಿದೆ. ಆಗ ನನ್ನ ತಮ್ಮ ಫೋನ್ ನಲ್ಲಿ ಮಾಲವಿಕಳ ಜತೆ ಮಾತನಾಡುತ್ತಿದ್ದ. ನನಗೆ ಫೋನ್ ಮಾಡಿ ’ಏನೇ ಜೀವ ಹೋದ ಹಾಗೆ ಕಿರುಚಿತಿದ್ದೆ, ಏನಾಯ್ತು? ಅಂತ ’ಹೋಗೊ ನಿನಗದೆಲ್ಲ ಅರ್ಥ್ ಆಗಲ್ಲ ಅಂದಿದ್ದೆ. 
ಆ ಮೇಲೆ ನಿಹಾ ’ಶಿಕಾರಿ’ ಓದಿ ಅದರ ಕವರ್ ಪೇಜ್ contest ನಲ್ಲಿ ಸೆಕೆಂಡ್ ಪ್ರೈಜ್ ಬಂದಾಗ, ಈ ಸಲ ತಮ್ಮನ ಮನೆಗೆ ಮುಂಬೈಗೆ ಹೋದಾಗ ಅವರನ್ನು, ಹಾಗೂ ಮಿತ್ರಾ ವೆಂಕಟರಾಜ್, ಅನು ಪಾವಂಜೆ (ನನ್ನ FB ಫ್ರೆಂಡ್ಸ್) ಭೇಟಿ ಮಾಡಿ ಬರುವಾ ಅಂತ ಪ್ರಾಮಿಸ್ ಮಾಡಿದ್ದೆ. ನಮಗೆ ಅಂಧೇರಿಯಿಂದ ಅದೇನೂ ಅಷ್ಟು ದೂರ ಇಲ್ಲ.ಹಾಗೂ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ನನ್ನ ಇಷ್ಟದ actor ರೇಖಾ ಕೂಡಾ ಇದ್ದಾರೆ ಅಂದಿದ್ದೆ. ಹಿಂದಿನ ಸಲ ಮಕ್ಕಳಿಗೆ ಅಮಿತಾಭ್ ಬಚ್ಚನ್, ಲತಾ ಮಂಗೇಶ್ಕರ್, ನನ್ನ ಇಷ್ಟದ ಇನ್ನೊಂದು ಜಾಗ ಹಾಜಿ ಅಲಿ ತೋರಿಸಿದ್ದೆ .)ತಮ್ಮನ ಗಾಡಿ ಹೇಗೂ ಇದೆ. ಅಂತ. ಆದರೆ ಚಿತ್ತಾಲರು ಈಗಿಲ್ಲ. :-( ನಿಜಕ್ಕೂ  ಬೇಜಾರಿನ ವಿಷಯ
ಮಿತ್ರ ರು ನನಗೆ ಫೋನ್ ನಲ್ಲಿ  ಯಶವಂತ್ ಚಿತ್ತಾಲರು ದೈವಾಧೀನರಾದ ವಿಷಯ ಹೇಳಿದಾಗ (ಅವರ ಜತೆ ಸಂಗೀತ/ಪುಸ್ತಕದ ಬಗ್ಗೆ ಕೋರಿತಿರ್ತೇನೆ)ಪುಸ್ತಕ ಓದಿ ನೇ ಕೆಲವರ ಬಗ್ಗೆ ಆತ್ಮೀಯತೆ ತಂದುಕೊಳ್ಳುತ್ತೇವಲ್ಲವಾ?? (ಅವರ ದೇಹಾಂತದ ಬಗ್ಗೆ ರಾತ್ರಿನೇ ಮೂರು ಎಸ್ ಎಮ್ ಎಸ್ ಬಂದಿತ್ತು. ನಾನೇನೂ ಸಾಹಿತಿಯಲ್ಲ, ಕನ್ನಡದ ಸಾಹಿತ್ಯದ ಬಗ್ಗೆ ಅಷ್ಟೇನೂ ತಿಳುವಳಿಕೆ ಕೂಡ ಇಲ್ಲ, ಆದರೂ ನನಗೆ ಎಸ್ ಎಮ್ ಎಸ್ ಬಂದಿದ್ದು ನೋಡಿ ನನಗೆ ಆಶ್ಚರ್ಯ.ಬಹುಶ: ನನ್ನ ಕವರ್ ಪೇಜ್ ಶಿಕಾರಿ ಪೋಸ್ಟ್ ನೋಡಿ ಕಳುಹಿಸಿರಬೇಕು) ಅಂತ ಕೇಳಿದಾಗ ಅವರೂ ಹೂಂ ಅಂದಿದ್ದರು. ಚಿತ್ತಾಲರ ಕಾದಂಬರಿ ’ಛೇದ’ ಓದಿ(ನನಗೆ ’ಶಿಕಾರಿ’ ಗಿಂತ ಇದೇ ಹೆಚ್ಚು ಇಷ್ಟ ಆಯ್ತು) ಎರಡು ಮೂರು ದಿನ ಹಿಡಿಯಿತು ಅದರ ಗುಂಗಿನಿಂದ ಹೊರ ಬರಲಿಕ್ಕೆ.ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಇನ್ನೋರ್ವ ಮಿತ್ರರು, ಎಮ್ ಎಸ್ ಶ್ರೀರಾಮ ಅವರ ಬ್ಲಾಗಿನಲ್ಲಿದ್ದ ಚಿತ್ತಾಲರ ಭೇಟಿಯ ಕತೆ ಯ ಕೊಂಡಿ ಕಳುಹಿಸಿದ್ದರು ಮೊನ್ನೆ. ಇವತ್ತು ಲ್ಯಾಪ್ ಟಾಪ್ ಕೈಗೆ ಸಿಕ್ಕಿದ್ದರಿಂದ ಓದಿ ಸಿಕ್ಕಾಪಟ್ಟೆ ಹೊಟ್ಟೆಕಿಚ್ಚಾಯಿತು. ನೀವು ಇದನ್ನು ಖಂಡಿತ ಓದಿ ಅಂತ:



ನನ್ನ ಈ ಮನೆಯಲ್ಲಿ ಮುಂಬೈನಂತೆಯೇ ಸದ್ದು ಗದ್ದಲ. ಅಷ್ಟೆ ಅಲ್ಲ ಚೆಂದದ ಸೂರ್ಯಾಸ್ತ ಕೂಡ. ಸಮುದ್ರ ಒಂದೇ ಮಿಸ್ಸಿಂಗ್ :-) ನನ್ನ ಸೆಲ್ ನಲ್ಲಿ ಹಿಡಿದಿದ್ದ ಒಂದು ಚಿತ್ರ
ಈ ತಿಂಗಳು ನಾನು ಮೂರು ಇಂಗ್ಲಿಷ ಪುಸ್ತಕ, ಎರಡು ಕನ್ನಡ ಪುಸ್ತಕ ಓದಿದೆ. ಇಂಗ್ಲಿಷ ಪುಸ್ತಕಗಳು ನನ್ನ shelfari ನಲ್ಲಿ ನಮೂದಿಸಿದ್ದೇನೆ. ಕನ್ನಡ ಪುಸ್ತಕಗಳು : ದೇವರ ರಜೆ -ಗುರುಪ್ರಸಾದ ಕಾಗಿನೆಲೆ- ವಸುಧೇಂದ್ರ ಗೃಹಪ್ರವೇಶಕ್ಕೆ ಬಂದಾಗ ಗಿಫ್ಟಿ* ಸಿದ್ದು, 
ಶ್ರೀಕಾಂತ ಖರೀದಿಸಿದ್ದ (ಕಾಕತಾಳಿಯವೇನೋ ಗೊತ್ತಿಲ್ಲ) ಎಮ್ ಎಸ್ ಶ್ರೀರಾಮ ರ ’ತೇಲ್ ಮಾಲಿಶ” ಮತ್ತು ’ಸಲ್ಮಾನ್ ಖಾನ್ ನ ಡಿಫಿಕಲ್ಟೀಸು(ಅರ್ಧ ಓದಿ ಇಟ್ಟಿದ್ದೇನೆ)”-(ಇದರ್ರಿಂದಲೇ ಶ್ರೀರಾಮರ ಮೈಲ್ ಐಡಿ ನೋಡಿಕೊಂಡು ಅವರ ಬರಹದ ಕೊಂಡಿ ಇಲ್ಲಿ ಸೇರಿಸಲು ಅನುಮತಿ ಪಡೆದುಕೊಂಡಿದ್ದೇನೆ.)
ಇಷ್ಟೆ...
ನನ್ನ ಅಡುಗೆ ಬ್ಲಾಗ್ ನಲ್ಲಿ ಇವತ್ತು ಅಗಸೆ (Flax seed) ಚಟ್ನಿ ಪುಡಿ ಬಗ್ಗೆ ಹಾಕಿದ್ದೇನೆ. ಇಂಟರೆಸ್ಟ್ ಇದ್ದವರು ಅಲ್ಲಿಗೂ ಒಂದು ಕಣ್ಣು ಹಾಯಿಸಬಹುದು. ;-)
:-)
* = No presents please, ಉಡುಗರೆ ಬೇಡ ಸಡಗರ ಇರಲಿ ಅಂತ ಶ್ರೀಕಾಂತ ಗೃಹಪವೇಶದ ಆಮಂತ್ರಣ ಪತ್ರಿಕೆ ಮೇಲೆ ಹಾಕಿದ್ದನ್ನು ಮಿತ್ರರು ಆಪ್ತೇಷ್ಟರು ಪರಿಪಾಲಿಸಿದ್ದು ನನಗೆ ಅತ್ಯಂತ ಖುಶಿಯ ವಿಷಯ. ವಸುಧೇಂದ್ರರಿಗೆ ಯಾಕ್ರಿ ಗಿಫ್ಟ್ ತಂದಿದ್ದೀರಾ ಅಂದ್ರೆ ’ಪುಸ್ತಕ’ ಗಿಫ್ಟ್ ಕೊಡಬಹುದು ಅಂದ್ರು. ಇನ್ನೊಂದು ರಾಧಿಕಾ ಫುಲ್ ಕಾನ್ಫಿಡೆನ್ಸ್ ನಿಂದ ಗಿಫ್ಟ್ ಕೊಟ್ಟು ’ ಯು ವಿಲ್ ಲೈಕ್ ಇಟ್ ಮಾಲತಿ’ ಅಂದಿದ್ದು ಶೇರ್ ಮಾಡುವ ಅಂತ: ಥ್ಯಾಂಕ್ಯೂ ರಾಧಿಕ. :-)

ಈ ಗಿಫ್ಟ್ ಬಗ್ಗೆ ಎಗ್ಸೈಟಡ್ ಆಗಿ ಮಿತ್ರ ರಘು ಜತೆ ಶೇರ್ ಮಾಡಿದಾಗ ಅವರು ಕೂಡಲೆ ಒಂದು ಪನ್ ಮಾಡಿದರು. 
ಹೊರಗಡೆ ಬರೀ ನಾಯ್ಸ್ (Noise)
ಒಳಗಡೆ ಶೆನಾಯ್ಸ್
ಅಂತ....:-)
(ಸ್ವಲ್ಪ track change ಆಗದಿದ್ದರೆ ನನ್ನ ಬ್ಲಾಗ್ ಬ್ಲಾಗ್ ಏ ಅಲ್ಲ)
’ (ಆಗಲೇ ಇದು ನನ್ನ 300 ನೆ ಪೋಸ್ಟ್. ನಿಹಾ ಗೆ ನನ್ನ ಬ್ಲಾಗ್ ಗೆ ಹೊಸ ಮಾಸ್ಟ್ ಹೆಡ್ ಮಾಡಿ ಕೊಡಬೇಕೆಂದು ಹೇಳಿದ್ದೆ. ಆದರೆ ಅವಳೀಗ ಪರೀಕ್ಷೆಗೆ ಓದುತ್ತಿದ್ದಾಳೆ. anyways.....)
ಥ್ಯಾಂಕ್ಯೂ ಎಲ್ಲರಿಗೂ. ನನ್ನ ಬ್ಲಾಗ್ ಒಂದುತರಹ empty vessel making more noise . :-)

March 18, 2014

A glimpse of my balcony

just some pictures. Love my balcony. I am getting back into my natural aloof  solitary world. i am totally disconnected from everything and everybody. mai or meri tanhayee. i am starting a balcony garden slowly but steadily. Will post pictures as my garden will multiply. In FB there is a group Organic terrace gardening. i always envied those people who would post their harvest pictures- robust looking vegetables and fruits and flowers. Now i can have my own and my blog will be my showcase. anyways i am running out of ideas to write anything. My cookery blog will be more active since i am experimenting a lot with the microwave.
Tulsi has the pride of place in my balcony. exactly a month old sapling.  that means one month into grihapravesh, :-)


Today there was this odd white flower peeping at me from the flowerpot. felt so happy to see it i clicked a pic and sent it to my best friend. :-)
Actually there is a lot of things happening under my balcony that can be written but i just cannot pluck myself away from my seat and write about it.
so bye bye till the next post
:-)

March 12, 2014

ಪನೀರ್ ಕುಲ್ಚಾ

ನನ್ನದೊಂದು ಅಡುಗೆ ಬ್ಲಾಗ್ ಇದೆ ಗೊತ್ತಾ?? ತಂಡೂರಿ ಪನೀರ್ ಕುಲ್ಚಾ ಗೆ ಕೆಳಗಿನ ಲಿಂಕ್ ನ್ನು ಕ್ಲಿಕ್ಕಿಸಿ

ತಂಡೂರಿ ಪನೀರ್ ಕುಲ್ಚಾ

:-)

March 8, 2014

ಅಂತರ್ ರಾಷ್ಟೀಯ ಮಹಿಳಾ ದಿನಾಚರಣೆ-2014

ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು. ಅಲ್ಲಾ! ನಮಗಾಗಿ ಅಂತ ಒಂದು ದಿನ ಮೀಸಲಿಡಿಯುವುದು ನಿಜಕ್ಕೂ ಬೇಕಾ? ಎಲ್ಲ ದಿನಗಳೂ ನಮ್ಮವಲ್ಲವೇ? ನನಗೆ ಬುದ್ದಿ ತಿಳಿದಾಗಿನಿಂದ i have been celebrating my existence.
ಆದರೂ ಒಂದು advantage ಅಂತೂ ಇದೆ. :-) ಕ್ಯಾಲೆಂಡರ್ ನಲ್ಲಿ ಎಸ್ ಎಮ್ ಎಸ್ ಗಳಲ್ಲಿ ಇವತ್ತು ಮಹಿಳಾ ದಿನಚರಣೆ ಅಂತ ಬರಲಿಕ್ಕೆ ಶುರು ಆದ ಮೇಲೆ ಶ್ರೀಕಾಂತ ’ladies enjoy yourself. ಹೊರಗೆ ಹೋಗಿ ಊಟ ಮಾಡಿ, ಸಿನಿಮಾ ನೋಡಿ, ಅಥವಾ ಆ ದಿನ ಅವರಿಗೆ ರಜೆಯಿದ್ದರೆ. Ladies i will cook for you today ಅನ್ನುತ್ತಾರೆ, ನನಗಿಷ್ಟ ಅಂತ ದೊಡ್ಡ ದೊಡ್ಡ cadburys ಚಾಕೋಲೇಟ್ ತಂದು ಕೊಡುತ್ತಾರೆ.
ಈ ವರ್ಷ ಮಹಿಳೆಯರ ಮೇಲೆ ದೌರ್ಜನ್ಯ ಆಗದಿರಲಿ ಎಂದು ಹಾರೈಸುತ್ತ, ನಿಹಾರಿಕಾ, ನಾನು ತಮ್ಮನ ಮಗಳು ವಿದಿಶಾಳನ್ನು ಮುದ್ದಿಸುತ್ತಿದ್ದಾಗ ಬರೆದ ಚಿತ್ರವನ್ನು ಹಾಕುತ್ತೇನೆ
ಅವಳು ಬರೆದ ಚಿತ್ರ ಚೆನ್ನಾಗಿದೆ. ನನ್ನ ಸೆಲ್ ಫೋನ್ ನಿಂದ ತೆಗೆದ ಚಿತ್ರ ಸರಿಬಂದಿಲ್ಲ. ಮುಂದೊಂದು ದಿನ ಸ್ಕ್ಯಾನ್ ಮಾಡಿ ಹಾಕುತ್ತೇನೆ. :-)
ಎಂಜಾಯ್ ಮಾಡಿ ಈ ದಿನ ಎಲ್ಲರೂ