ಎಲ್ಲರೂ ಯುಗಾದಿ ಹೇಗೆ ಆಚರಿಸಿದಿರಿ?
ಯುಗಾದಿ ಮುನ್ನಾ ದಿನ ಸರೀ ರಾತ್ರಿ ತನಕ ಸಿನಿಮಾ ನೋಡಿ ಆ ಮೇಲೆ ಮಲಗಲಾಗ್ಲೇ ಇಲ್ಲ. ಒಂದು ಸೊಳ್ಳೆ, ಇನ್ನೊಂದು ಸೆಕೆ. ಅದಕ್ಕೆ ಮೂರು ಗಂಟೆಗೆ ಎದ್ದು ಸ್ನಾನ ಮಾಡಿ ದೇವರ ಮನೆ ಕ್ಲೀನ್ ಮಾಡಿ, ನಾಲ್ಕು ಗಂಟೆಗೆ ನಮ್ಮ ದೇವರ ಮನೆ ಲುಕ್ ಹೀಗಿತ್ತು, ವರ್ಷದಲ್ಲಿ ಎರಡು ಬಾರಿ ಮಾತ್ರ ನಾನು ದೇವರ ದೀಪ ಹಚ್ಚುವುದು. ಒಂದು ಯುಗಾದಿಗೆ ಒಂದು ದೀಪಾವಳಿಗೆ.
looks so serene ಅಲ್ವಾ? ನನ್ನ ಕ್ಲಿಕ್
ಪ್ರತೀ ವರ್ಷ ಯುಗಾದಿಗೆ ಮನೆಗೆ ಮಿತ್ರರನ್ನು ಊಟಕ್ಕೆ ಆಹ್ವಾನಿಸುವ ಪರಿಪಾಠ. ಈ ಸಲದ ಆಹ್ವಾನಿತರು ಕಾರಣಾಂತರದಿಂದ ಕೊನೆ ಕ್ಷಣ ಬರಲಾಗುವುದಿಲ್ಲವೆಂದರಿಂದ ಬೇರೆ ಯಾರನ್ನೂ ಕರೆಯುವ ಅಂದ್ರೆ ತೀರಾ ಲೇಟ್ ಆಗಿ ಸರಿ ಕಾಣಲ್ಲ ಅಂತ ಸುಮ್ಮನಾದೆ. ಸೋ ಈ ಸಲ ನಾವು ನಾಲ್ಕೇ ಜನ ಹಬ್ಬ ಮಾಡಿದೆವು. ಕೆಳಗಡೆ ನಮ್ಮ ಯುಗಾದಿಯ ಊಟದ funda. ಮಿತ್ರರು ಬರುವುದಿಲ್ಲ ಅಂದಿದಕ್ಕೆ ಇದರಲ್ಲಿ ಮೂರು ಐಟಮ್ ಕಡಿಮೆ ಮಾಡಿದೆ.
ಮೇಲೆ ವಾಟಿಯಲ್ಲಿರೋದು ಪಂಚಾಮೃತ..the best in the world. no one can make it like me :-)
(ಎಲೆಯಲ್ಲಿ ಬಡಿಸಿದ್ದು : ಉಪ್ಪು,ಅಪ್ಪೆಮಿಡಿ ಉಪ್ಪಿನಕಾಯಿ, ಬೆವು+ಬೆಲ್ಲದ ಮಿಕ್ಸರ್, ಬಾಳೆಕಾಯಿ ಫೋಡಿ, ಮೊಳಕೆ ಬರಿಸಿದ ಹೆಸರುಕಾಳು + ಹಲಸಿನಕಾಯಿ ಘಶಿ, ಎಳೆ ಗೇರು ಬೀಜ + ತೊಂಡೆಕಾಯಿ ಪಲ್ಯ, ಪಾಪಡ್, ಬಾಳೆ ಎಲೆ ಕಡುಬು+ ಹಿಂಗು- ಮೆಣಸಿನ ನೀರು + ಶುಂಠಿ ಚಟ್ನಿ, ಸೌತೆಕಾಯಿ ಪಚ್ಚಡಿ, ಅನ್ನ, ತೊವ್ವೆ, ದೂದ್ ಪಾಕ್ (ಪರಿಮಳದ ಅಕ್ಕಿ+ ಸೀಮೆ ಅಕ್ಕಿ (in milk)ಯಿಂದ ಮಾಡಿದ್ದು ಮತ್ತು ಮಜ್ಜಿಗೆ (items which did not make it to the list = ಬೂದುಗುಂಬಳ ಕೊದ್ದೆಲ್, ದಪ್ಪ ಮೆಣಸಿನ ಬೋಂಡಾ, ಮಾವಿನಕಾಯಿ ಚಿತ್ರಾನ್ನ and ಕೋಕಮ್ ಕಡಿ)
(ಎಲೆಯಲ್ಲಿ ಬಡಿಸಿದ್ದು : ಉಪ್ಪು,ಅಪ್ಪೆಮಿಡಿ ಉಪ್ಪಿನಕಾಯಿ, ಬೆವು+ಬೆಲ್ಲದ ಮಿಕ್ಸರ್, ಬಾಳೆಕಾಯಿ ಫೋಡಿ, ಮೊಳಕೆ ಬರಿಸಿದ ಹೆಸರುಕಾಳು + ಹಲಸಿನಕಾಯಿ ಘಶಿ, ಎಳೆ ಗೇರು ಬೀಜ + ತೊಂಡೆಕಾಯಿ ಪಲ್ಯ, ಪಾಪಡ್, ಬಾಳೆ ಎಲೆ ಕಡುಬು+ ಹಿಂಗು- ಮೆಣಸಿನ ನೀರು + ಶುಂಠಿ ಚಟ್ನಿ, ಸೌತೆಕಾಯಿ ಪಚ್ಚಡಿ, ಅನ್ನ, ತೊವ್ವೆ, ದೂದ್ ಪಾಕ್ (ಪರಿಮಳದ ಅಕ್ಕಿ+ ಸೀಮೆ ಅಕ್ಕಿ (in milk)ಯಿಂದ ಮಾಡಿದ್ದು ಮತ್ತು ಮಜ್ಜಿಗೆ (items which did not make it to the list = ಬೂದುಗುಂಬಳ ಕೊದ್ದೆಲ್, ದಪ್ಪ ಮೆಣಸಿನ ಬೋಂಡಾ, ಮಾವಿನಕಾಯಿ ಚಿತ್ರಾನ್ನ and ಕೋಕಮ್ ಕಡಿ)
ನಮ್ಮ ಬೇವು ಬೆಲ್ಲದ ಚೂರ್ಣದಲ್ಲಿ ಬೇವು ಕಡಿಮೆ ಹೆಚ್ಚು ಬೆಲ್ಲ.ಅದಕ್ಕೆ ಬಹುಶ: ನಾವು ಖುಶಿ ಖುಶಿಯಾಗಿರುವುದು...(ಮಿತ್ರರೊಬ್ಬರು ಫೋನ್ ಮಾಡಿದಾಗಲೆಲ್ಲ ನನಗೆ 'ಅಧ್ಹೇಗೆ ಯಾವಾಗ್ಲೂ ಖುಶಿಯಾಗಿರ್ತೀರಾ, ನಮ್ಗೂ ಒಂಚೂರು ಹೇಳಿ ಕೊಡಿ ಮ್ಯಾಡಂ ಅಂತ ಕೇಳ್ತೀರ್ತಾರೆ...ಉತ್ತರ ನನಗೂ ಈಗಷ್ಟೆ ಹೋಳೀತು) :-)
ಡಾಕ್ಟರ್ ನನಗೆ ಆದಷ್ಟು ಕೆಲಸಗಳನ್ನು ನಿದಾನಕ್ಕೆ ಮಾಡುವ ಸಲಹೆ ನೀಡಿದ್ದಾರೆ c/o ನನ್ನ ಬೆನ್ನು ನೋವು ( c/o breakfast at Koshy's a few days ago -c/o auto which jumped into a pothole- c/o Bangalore roads ). ಆದರೂ 11.00 ಗಂಟೆಗೆ ನನ್ನ ಎಲ್ಲ ಕೆಲಸಗಳು ಮುಗಿದು, ಮಕ್ಕಳನ್ನು ಸಿಕ್ಕಾಪಟ್ಟೆ ಗೋಳು ಹೊಯ್ದೆ. ಯಾಕೆಂದರೆ ನನ್ನ new year resolution ನಲ್ಲಿ ಮಾತು ಕಡಿಮೆ, ನಗು ಕಡಿಮೆ ಹಾಗೂ ಫೇಸ್ ಬುಕ್ ಕಡಿಮೆ ಮಾಡುತ್ತೇನೆಂದು ಹೇಳಿದ್ದೇನೆ. ಅದಕ್ಕೆ ಪೂರ್ತಿ ವರ್ಷದ quota ನಿನ್ನೆ ಮುಗಿಸಿದೆ. :-)
ಇವತ್ತು ಅಡಿಗೆಗೆ ಮತ್ತು intestine ಗೆ ರಜೆ. ಹಾಗಾಗಿ ಇವತ್ತು ’ಸಿಂಪಲ್ಲಾಗ್ ಒಂದು ಮೊಸರನ್ನ’ ಇನ್ನೊಂದು ರೀಸನ್ for ಮೊಸರನ್ನ ಏನಪ್ಪಾ ಅಂದ್ರೆ ಮಾವಿನ ಕಾಯಿ ಚಿತ್ರಾನ್ನಕ್ಕೆ ಅಂತ ಮಾಡಿಟ್ಟಿದ್ದ ಅನ್ನ ಮುದ್ದೆ ಆಯ್ತು. ಅದು ತಣಿದ ಮೇಲೆ ಫ್ರಿಜ್ ನಲ್ಲಿಟ್ಟೆ. ಇವತ್ತು ಅದು ಮೊಸರನ್ನ ಆಗುವುದು with ಮೊಳೆತ ಹಸುರುಕಾಳಿನ ಉಸ್ಲಿ....
’ವಿಜಯ’ ನಾಮ ಸಂವತ್ಸರ ದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ. ನವನವೋನ್ಮೇಷಶಾಲಿನಿ’ (ನವನವೋನ್ಮೇಷಶಾಲಿನಿ = ನವ +ನವ+ ಉನ್ಮೇಷ + ಶಾಲಿನಿ = ಹೊಸತು + ಹೊಸತಾಗಿ + ಅರಳುವ + ಕಾಲಮಾನ) ಯಾಗಿರಲಿ. ಈ ಪದ ವನ್ನು ಫೇಸ್ ಬುಕ್ ನ ಪದಾರ್ಥಚಿಂತಾಮಣಿಯಲ್ಲಿ ಓದಿ ತುಂಬ ಖುಶಿಯಾಗಿ ಇದನ್ನು ಬಳಸಿಕೊಂಡಿದ್ದೇನೆ.
ಈ ವರ್ಷ ನನ್ನ best wishes go to both the Ravindra's (Ravindra M and Ravindra V) and the young couple whom we missed lunching with
love you all guys. My blog now has 50000+ visitors and quite a few repeat visitors. Was sharing with Malavika 'what do people find in this silly blog of mine' and she said 'whatever! i want a treat' so off we went to MTR and had strawberry double dhamaka, falooda and honey and nut icecream. like i said 'treat ke liye koyi bhi bahana chalega',
Special thanks to kannadabloglist and Digital eyes for i find many people directed to this blog from their site, and to also a few others who have listed my blog in theirs.
thanks and have a great year once again
:-)