May 25, 2011

Marriages are made in Heaven????

While i have acquired a host of tangis and tammas (brothers and sisters) courtesy my blog, Divya Mallya considers me as her mother. My two best blog friends Divya mallya and Sandeep Kamath are entering the nuptials on the 5th June 2011 at udupi.

Malavika and Niharika have made a special photoframe for them. touched it up a wee bit on artrage!!

Wishing both of them the Very best through out their life...for ever and for always!!!
The stand alone photoframe





:-)

May 7, 2011

ಮಾಲ್ತ್ಯಕ್ಕನ 100 and a tribute to Gurudev Rabindranath Tagore

ಇದು ನನ್ನ 100 ನೇ ಪೋಸ್ಟ್. ಇಷ್ಟು ಬರೀತಿನಿ ಅಂತ ನಾನು ಅಂದುಕೊಳ್ಳಲೆ ಇರಲಿಲ್ಲ. ನಾನಂತೂ ಓದುವುದರಲ್ಲೇ ತೃಪ್ತಳಾಗಿದ್ದೆ. ಶ್ರೀಕಾಂತ ಅವರದು  ಒಂದೆ ವರಾತ ಅದು ಎಷ್ಟಂತ ಓದುತ್ತೀಯೇ?? ಏನಾದ್ರು ಬರೀ ಬರೀ ಅಂತ. ಆಗ ರಂಗಶಂಕರಕ್ಕೆ ಹೋದಾಗಲೆಲ್ಲ ಅವರ ಪೋಸ್ಟರ್ ’ಬರೀರಿ’ ನೋಡಿ ನನಗೆ ನಗು ಬರುತ್ತಿತ್ತು.
ಮೊದಲ ಬರಹದ ಶ್ರೇಯ ನನ್ನ ಆಪ್ತ ಮಿತ್ರ ಅಪಾರರಿಗೆ ಸೇರುತ್ತೆ. ನಾನು ತೀರ್ಥಹಳ್ಳಿಗೆ ಚೌತಿಗೆ ಹೋಗಿ ಬಂದ ಮೇಲೆ ನನಗೆ ಅಟ್ಟದಲ್ಲಿ ಸಿಕ್ಕಕಬ್ಬಿಣದ ಟ್ರಂಕ್ ತುಂಬ ಪುಸ್ತಕ ಗಳ ಬಗ್ಗೆ animatedly -ವಿವರಿಸುತ್ತಿದ್ದಾಗ. ಎಷ್ಟು ಸೊಗಸಾಗಿ ಹೇಳಿದ್ರಿ. ಈಗ ನನ್ನ ಜತೆ ಮಾತಾಡಿದ ಹಾಗೇ ಬರೆದು ಕಳಿಸಿದ್ರೆ ನಮ್ಮ ವಿಜಯಕರ್ನಾಟಕದ ಭಾನುವಾರದ ಸಾಪ್ತಾಹಿಕ ಪುರವಣಿ’ಮನಸಿಗೆ ಬಂದಿದ್ದು’ ಸೆಕ್ಷನ್ ನಲ್ಲಿ ಹಾಕ್ತೀನಿ ಅಂದಿದ್ದರು. ಅವರು ಹಾಗೆ ಅಂದರು ಬರೆಯುವುದು ಯಾಕೋ ಬೇಜಾರು ಅನ್ನಿಸ್ತು. ಅಂತೂ ಅವರು ಎರಡು ಮೂರು ಸಲ ನೆನಪಿಸಿದ ಮೇಲೆ ಅದನ್ನು ಬರೆದು ಕಳುಹಿಸಿ ಮರೆತೂ ಬಿಟ್ಟೆ. ಪೇಪರ್ ನಲ್ಲಿ ಸುಧನ್ವಾ ದೇರಾಜೆಯವರು ಕೊಟ್ಟ ’ಅಟ್ಟದಲ್ಲಿ ಕೆಂಪು ಇಲಿ’ ಅನ್ನುವ ಮುದ್ದಾದ title ನಲ್ಲಿ ಬಂದ ಮೇಲೆ ಶ್ರೀಕಾಂತ ಅದನ್ನು ಓದಿ ’ನನಗೆ ಹೇಳೆ ಇಲ್ಲ, ಎಷ್ಟು ಚೆನ್ನಾಗಿ ಬರೆದಿದ್ದೀಯ’ ಅಂದಾಗ ಅದೇ ನನಗೆ ಸಿಕ್ಕಿದ ಬಹು ದೊಡ್ಡ ಶಹಭಾಸಗಿರಿ.ನಮ್ಮ ಅಫಿಸ್ ನವರು, ಆತ್ಮೀಯ ಮಿತ್ರರೆಲ್ಲ ಫೋನ್ ಮಾಡಿ ಅಭಿನಂದಿಸಿದರು. ನನ್ನ ಮುದ್ದು ಸೊಸೆಯಂದಿರು ತೀರ್ಥಹಳ್ಳಿ, ಹಾಸನ ದಿಂದ ಫೋನ್ ಮಾಡಿದಾಗ ಇನ್ನಷ್ಟು ಗಾಳಿಯಲ್ಲಿ ತೇಲಾಡಿದ್ದು ನಿಜ. ಈ ಪ್ರಸಂಗದ ನಂತರ ಅಪಾರ ರಘು ನನಗೆ ಬ್ಲಾಗ್ ಆರಂಭಿಸಲು ಹೇಳಿದರು. ಮೊದಲು ಬ್ಲಾಗ್ ಗೆ ಹೆಸರು ಸೂಚಿಸಿ ಅಂದೆ!!
ನಾನು ಮಕ್ಕಳು ಕೆಲವೊಮ್ಮೆ ಪಗಡೆಯಾಡ್ತೀವಿ. ಆ ಪಗಡೆ ಕಾಯಿಗಳು ಒಂದು ಪ್ಲಾಸ್ಟಿಕ್ ಚೀಲದಲ್ಲಿತ್ತು. ಅದು ಹರಿದು ಹೋಯ್ತು. ಕಾಯಿಗಳು ಚಿಲ್ಲಾಪಿಲ್ಲಿಯಾಗಿ ಎಲ್ಲ್ಲೆಂದರಲ್ಲಿ ಹರಡುತ್ತದೆಂದು ಮಾಲವಿಕ ಒಂದು ಪುಟ್ಟದಾದ ಸಂಚಿ ಚೀಲವನ್ನು ಹೊಲೆದಳು. ಅದನ್ನು ನೋಡಿದ ತಕ್ಷಣ, ನನಗೆ ನಮ್ಮ ಮನೆಗೆ ’ನಾನಿ’ ಗೆ ಸಹಾಯಕಳಾದ ರಾಜೀವಿಯ ಎಲೆ ಅಡಿಕೆ ಸಂಚಿ ನೆನಪು ಬಂದು, ನನ್ನ ಬಾಲ್ಯದ ದಿನಗಳೆಲ್ಲ ನೆನಪು ಬರಲು ಶುರು ಆಯಿತು. ಅರೇ ಸಿಕ್ಕೆ ಬಿಡ್ತಲ್ಲ ನನ್ನ ಬ್ಲಾಗ್ ಗೆ ಒಂದು ಹೆಸರು ಅಂತ ಕೂಡಲೆ ಒಂದು ಬ್ಲಾಗ್ ಶುರು ಮಾಡಿದ್ದು ಅಲ್ಲದೇ ಇವತ್ತು ಅದರ 100 ನೇ ಪೋಸ್ಟ್.
ಹಿಂದಿನ ವರ್ಷ ಜುಲೈನಲ್ಲಿ ಶ್ರೀಕಾಂತ ಗೆ dengue ಆಗಿ ಅವರು ಪುನಃ ಚೇತರಿಸಿಕೊಳ್ಳುವಾಗ ನನ್ನ ಬ್ಲಾಗ್ ಬರವಣಿಗೆ almost ನಿಂತೇ ಬಿಡ್ತಿತ್ತು. ಇ-ಮೈಲ್ ನಲ್ಲಿ ಬಹಳಷ್ಟು ಓದುಗರು ಯಾಕೆ ಬರೀತಿಲ್ಲ ಅಂತೆಲ್ಲ ಕೇಳ್ತಿದ್ದರು. ಅದರಲ್ಲಿ ಮಂಗಳೂರಿನ ಬಳಿಯ ಬಂಟ್ವಾಳದ ಓದುಗರು. ಅಪಘಾತದಲ್ಲಿ ಹೆಂಡತಿ ಮಕ್ಕಳನ್ನು ಕಳೆದುಕೊಂಡದ್ದಲ್ಲದೆ, ಅವರಿಗೆ ಸೊಂಟದಿಂದ ಕೆಳಗಿನ ಭಾಗ ಪೂರ್ತಿ immobile ಆಗಿದ್ದು ತಿಳಿಸಿದ್ದರು. ಅವರಿಗೆ ನನ್ನ ಬ್ಲಾಗ್ ತುಂಬಾ ಇಷ್ಟವಾಗುತ್ತಿತಂತೆ. ದಯವಿಟ್ಟು ಬರೆಯಿರಿ, ನನ್ನ ನೋವನ್ನು ಸ್ವಲ್ಪ ಮಟ್ಟಿಗೆ ಮರೆಯಲು ಸಹಾಯವಾಗುತ್ತೆ ಅಂದಾಗ ನಾನು ಪುನ: ಬರೆಯಲು ಶುರು ಮಾಡಿದ್ದು. ಇಲ್ಲದಿದ್ದರೆ ಸುಮ್ಮನಿದ್ದು ಬಿಡುತ್ತಿದ್ದೆ. ಯಾಕೋ ಸ್ವಲ್ಪ ಸಮಯ ತುಂಬ distressed/depressed  ಆಗಿದ್ದೆ, silent ಆಗಿದ್ದೆ. ಅಲ್ಲಿವರೆಗೆ ನಾನು ಜೀವನವನ್ನು ಸೀರಿಯಸ್ ಆಗಿ ತೆಗೆದುಕೊಂಡಿರಲೇ ಇಲ್ಲ ಅನ್ನಿಸುತ್ತೆ. ಈಗ of course i am the same old ಮಲ್ಲಿ, ಮಲ್ಲು, ಮಾಲ್ತಿ ಅಕ್ಕ  etc.. :-)
 ಇವತ್ತು ರಾಷ್ಟ್ರಕವಿ ರಬೀಂದ್ರನಾಥ ಠಾಕೂರರ 150 ಜಯಂತಿ ಕೂಡ. ಅವರ ಕಥೆ(ಗೀತಾಂಜಲಿ,ಕಾಬುಲಿವಾಲ, ಗೋರಾ, ಚಾರುಲತ, ಕವನಗಳ (where the mind is without fear and the head is held high ಈಗಲೂ ನನಗೆ ಬಾಯಿಪಾಠ ಇದೆ), ನಾಟಕಗಳ ಮತ್ತು ನಮ್ಮ ರಾಷ್ಟ್ರಗೀತೆ ’ಜನ ಗಣ ಮನ’ ಬಗ್ಗೆ ಎಲ್ಲರಿಗೂ ಗೊತ್ತು. ಅವರು ಚಿತ್ರಕಾರರೂ ಹೌದು ಎಂದು ಸುಮಾರು ಜನರಿಗೆ ತಿಳಿದಿರಲಿಕ್ಕಿಲ್ಲ. ಅವರು ಸುಮಾರು 3000 ದಷ್ಟು ಚಿತ್ರಗಳನ್ನು ಬರೆದಿದ್ದಾರಂತೆ. ನಮ್ಮ ಸಂಸ್ಥೆ synergy to solutions (S2S, Bangalore) ಒಡಿಶಾ (Orissa) ದಲ್ಲಿರುವ ಟಾಟಾ ರಿಫ್ರಾಕ್ಟರಿಸ್ ಗೆ consultants. ಈ ವರ್ಷದ ಅವರ ಡೆಸ್ಕ್ ಟಾಪ್ ಕಾಲೆಂಡರ್ ಪೂರ್ತಿ ಟಾಗೋರರು ರಚಿಸಿದ ಚಿತ್ರ ಹಾಗೂ ಕೆಲವು ಹಳೆಯ ಫೋಟೊಗಳಿವೆ.ನನಗಿಷ್ಟವಾದ ಕೆಲವನ್ನು ನಾನು ಸ್ಕ್ಯಾನ್ ಮಾಡಿ ಹಾಕಿದ್ದೇನೆ. enjoy
@ ಸುಶ್ರುತ ದೊಡ್ಡೇರಿ: ಅವಧಿಯಲ್ಲಿ ಮಾಲ್ತ್ಯಕ್ಕ ಪದೇ ಪದೇ setting ಬದಲಾಯಿಸಿ ತೊಂದರೆ ಕೊಡುತ್ತಾರೆ ಎಂದು ಬರೆದಿದ್ದೀರಿ. ಈ ಸಲ ಸುಮಾರು ದಿನಗಳಾದ ಮೇಲೆ ಹೊಸ mast head ಹಾಕ್ತಾ ಇದ್ದೀನಿ.:-)

 A veiled Woman Ink & Brush

 Dancing Girl pen & Ink
 The Flying Dove - Ink and Brush
 Five Friends - Pen & Ink
 Landscape - pen& Ink
 Mother & Child -Pen  Ink
self potrait -Ink & Brush 

 The couple -Pen & Ink


Photos scanned from Desk top calender of TATA Refractories Limited, Belpar, Jharsguda Distirct, Orissa
:-)

May 1, 2011

ಸಂಚಿಯಿಂದ ತೆಗೆದ ನೆನಪು - 6 Diamonds are forever

ಈ ಬರಹಕ್ಕೆ ಸ್ಪೂರ್ತಿ: ಕೆಳಗಿನ ಲಿಂಕ್ ನಲ್ಲಿದೆ


ನನ್ನ ಅತ್ತೆ -ಮಾವ ಶಾಂತಾ ಶೆಣೈ -ಟಿ.ವಿ. ಬಾಲಕೃಷ್ಣ ಶೆಣೈ

ಮದುವೆಗೆ ಮುಂಚೆ ನನ್ನದಿದ್ದಿದ್ದು ಎರಡೇ ಶರತ್ತು. ಗಂಡನಾಗುವವ ಸಿಗರೇಟ್ ಸೇದಬಾರದು ಮತ್ತು ನಾನು ಮೂಗುತಿ ಹಾಕಿಕೊಳ್ಳುವುದಿಲ್ಲವೆಂದು. ಶ್ರೀಕಾಂತ ಅವರಿಗೂ ಸಿಗರೇಟ್ ಅಂದ್ರೆ ನನ್ನಷ್ಟೆ ಅಸಹ್ಯ ಹಾಗು ನಾನು ಮೂಗುತಿ ಹಾಕಿಕೊಳ್ಳುವುದು ಅವರಿಗೂ ಇಷ್ಟವಿರಲಿಲ್ಲವೆಂದು ನನಗಂತೂ ನಿರಾಳ.

ಮದುವೆ ಆಗಿ, ಕೆಲವು ದಿನಗಳಾದ ಮೇಲೆ, ಒಂದು ದಿನ ಮಧ್ಯಾಹ್ನ ಮನೆಕೆಲಸಗಳನ್ನೆಲ್ಲ ಮುಗಿಸಿ ನನ್ನ ಮೊದಲನೇ ವರ್ಷದ ಪದವಿ ಪರೀಕ್ಷೆಗೆ ಓದಲು ಕುಳಿತಾಗ, ಅತ್ತೆ ಮೇಲಿನ ತಮ್ಮ ಕೋಣೆಗೆ ನನ್ನನ್ನು ಕರೆದರು. ಅವರ ಟ್ರಂಕನ್ನು ಬಿಡಿಸಿ, ತಡಕಾಡಿ (ಅವರಿಗೆ ಕಣ್ಣಲ್ಲಿ ದೃಷ್ಟಿಯಿರಲಿಲ್ಲ, ಹಾಗೂ ಕಿವಿ ಕೂಡ ಮಂದವಾಗಿ ಕೇಳಿಸುತ್ತಿತ್ತು, ತುಂಬ ಗಟ್ಟಿಯಾಗಿ, ಅವರ ಕಿವಿಗೆ ಹತ್ತಿರವಾಗಿ ಮಾತಾಡಬೇಕಿತ್ತು) ಒಂದು ಸ್ಟೀಲ್ ಡಬ್ಬಿ ಹೊರಗೆ ತೆಗೆದರು. ಅದರ ಮುಚ್ಚಳ ನಿಧಾನವಾಗಿ ತೆರೆದು ಅದರಲ್ಲಿಂದ ಒಂದು necklace ತೆಗೆದುಕೊಟ್ಟರು. ಹಳೆ ಕಾಲದ ನೆಕ್ ಲೇಸ್ ಗೆ ಮಧ್ಯದಲ್ಲಿ ದೊಡ್ಡ ಕೆಂಪು ಹರಳು.ನನ್ನ ಅತ್ತೆ ತುಂಬ ಶ್ರೀಮಂತ ಮನೆತನದವರು. ಅವರ ಬಳಿಯಿದ್ದ ರಾಶಿ ಬಂಗಾರವನ್ನು ಅವರು ತಮ್ಮ ಮಕ್ಕಳು ಸೊಸೆಯಂದಿರಿಗೆ ಕೊಟ್ಟು ಈ ಕೊನೆಯಲ್ಲಿ ಅವರ ಬಳಿ ಉಳಿದಿದ್ದ ಬಂಗಾರವನ್ನು ನನಗಾಗಿ ತೆಗೆದಿಟ್ಟಿದ್ದರು. ನೀನು ಮೂಗುತಿ ಹಾಕಿಕೊಂಡಿದ್ದೀಯಾ ಅಂತ ಕೇಳಿದರು?? ನಾನು ತಗ್ಗಿದ ದನಿಯಲ್ಲಿ ಇಲ್ಲ ಅಂದೆ. ಅದು ಅವರಿಗೆ ಕೇಳಿಸದೆ ಅವರು ಪ್ರಶ್ನೆಯನ್ನು ಪುನರುಚ್ಛಿಸಿದರು. ನನಗೋ ಮಾತು ಮೊದಲೆ ಕಡಿಮೆ, ಅದರಲ್ಲಿ ಕಿರುಚಿ ಉತ್ತರಹೇಳಬೇಕಾದ ಪ್ರಸಂಗಕ್ಕೆ ನನ್ನ ಕಿವಿ ಮುಖ ಎಲ್ಲ ಕೆಂಪು. (ಆಮೇಲೆ ನಾವು ಅವರ ಕೈ ಮುಟ್ಟಿ ಬೆರಳಿನ ಸಹಾಯದಿಂದ ಸಂಭಾಷಿಸಲು ಶುರುಮಾಡಿದ್ದ್ವು.) ಪೆಟ್ಟಿಗೆಯಲ್ಲಿ ಇನ್ನಷ್ಟು ತಡಕಾಡಿ ಒಂದು ಪುಟ್ಟ ಡಬ್ಬಿಯೊಂದನ್ನು ತೆಗೆದು ’ತೆರೆದು ನೋಡು’ ಅಂದರು. ಆ ಚಿಕ್ಕ ಪೆಟ್ಟಿಗೆಯಲ್ಲಿ ನೀಲಿ ಮಕಮಲ್ಲ ಮೇಲೆ ಇಟ್ಟಿದ್ದ ಮೂಗುಬಟ್ಟು ನೋಡಿ, ನನಗಂತು ಶಾಕ್. ಅಷ್ಟು ಹೊಳಪಿನ ಅಷ್ಟು ದೊಡ್ಡ ವಜ್ರ ನಾನು ನೋಡಿದ್ದು ಅದೇ ಮೊದಲು. (nestled on the blue velvet emitting a lovely aura was the most exquisite solitary diamond i had ever seen!!!ನೀಲಿ ಮಿಶ್ರಿತ (blue tinged) ವಜ್ರದ ಹೊಳಪೆ ಬೇರೆ. ಅತ್ತೆಯ ಕೋಣೆಯಲ್ಲಿನ ಮಂದ ಬೆಳಕಿಗೆ ಅದು ಲಕಲಕನೆ ಹೊಳೆಯುತ್ತಿತ್ತು. ಅದು ಅತ್ತೆಯ ಮನೆಯವರು ಹಲವಾರು ವರ್ಷಗಳ ಹಿಂದೆ ತಮಿಳುನಾಡಿನಿಂದ ತರಿಸಿದ್ದರಂತೆ. ಅದನ್ನೂ ನನಗೆ ಕೊಟ್ಟರು ಮೂಗುತಿ ಮಾಡಿಸಿಕೋ ಅಂತ. ಅಷ್ಟು ದೊಡ್ಡ ವಜ್ರದ ಹರಳಿನ ಮೂಗುತಿ ನಾನು ಹಾಕಿಕೊಂಡರೆ, ನನ್ನ ಮುಖನೆ ಕಾಣುತ್ತಿರಲಿಲ್ಲ ಬಿಡಿ. :-)ಇನ್ನೊಂದು ಪುಟ್ಟ ಹವಳದ ಮಕ್ಕಳಿಗೆ ಹಾಕುವ ಸರ ಬಿಟ್ಟರೆ ಅತ್ತೆಯ ಡಬ್ಬಿ ಖಾಲಿಯಾಗುತ್ತಿತ್ತು. ಆ ಸರ ಅವರ ಕೈ ಗೆ ತಾಗಿದೊಡನೆ, ಈ ಸರ ನಾನು ನಾಗಣ್ಣನ(ಶ್ರೀಕಾಂತ ಅಣ್ಣ) ಮಗುವಿಗೋಸ್ಕರ ಇಟ್ಟಿದ್ದೇನೆ. ನಿನ್ನ ಮಗುವಿಗೋಸ್ಕರ ಏನು ಇಲ್ಲವಲ್ಲ ಅನ್ನುತ್ತ ಬೇಜಾರು ಪಟ್ಟುಕೊಂಡರು. ನನಗೆ ಕೆಟ್ಟದನಿಸಿ, ನಾನು ಛೆ ಅದಕ್ಕೆಲ್ಲ ತಲೆಕೆಡಿಸ್ಕೋ ಬೇಡಿ.ನನಗೋಸ್ಕರ ಇಟ್ಟಿದ್ದ ಬಂಗಾರ ಬೇಕಾದ್ರು ನಿಮಗೆ ಇಷ್ಟ ಬಂದವರಿಗೆ ಕೊಡಬಹುದು ಎಂದೆ. ’ಇಲ್ಲ್ಲಅದು ನಾನು ಕಾಂತು (her name for Srikanth) ಹೆಂಡತಿಗೋಸ್ಕರ ಇಟಿದ್ದು. ಈದೀಗ ನಿನ್ನದೇ’. "ಹೇಗೂ ನಾನು ಇಲ್ಲೆ ಇರುತ್ತೇನೆ. ಬಂಗಾರ ಬಟ್ಟು ಎಲ್ಲ ನಿಮ್ಮ ಬಳಿ ಇರಲಿ" ಅಂತ ಹೇಳಿ, ಡಬ್ಬಿಗಳನ್ನು ಅದರ ಯಥಾ ಸ್ಥಾನಕ್ಕೆ ಇಡಲು ಸಹಕರಿಸಿ ನಾನು ಕೆಳಗೆ ಬಂದೆ.

ಐದು ವರ್ಷಗಳ ನಂತರ ಅವರು ತೀರಿಕೊಂಡಮೇಲೆ ನನ್ನ ಹಿರಿಯ ಅಕ್ಕ (ಒರಗಿತ್ತಿ) ಇನ್ನು ನಿನ್ನ ಬಂಗಾರದ ಜವಾಬ್ದಾರಿ ನಿನ್ನದೆ, ಹಾಗೂ ಅತ್ತೆಯ ಪೆಟ್ಟಿಗೆಯಲ್ಲಿದ್ದ ಸಾಮಾನು, ಸೀರೆಗಳೆಲ್ಲ ನೀನೆ ತೆಗೆದುಕೋ ಅಂದರು. ನಾನು ಸೀರೆಗಳನ್ನೆಲ್ಲ ಶ್ರೀಕಾಂತ ಅಕ್ಕಂದಿರು-ತಂಗಿಯರೊಂದಿಗೆ ಹಂಚಿಕೊಂಡೆ.ಅವರ ಪೆಟ್ಟಿಗೆಯಲ್ಲಿ ಶ್ರೀಕಾಂತ ಚಿಕ್ಕಂದಿನಲ್ಲಿ ಆಡುತ್ತಿದ್ದ ಹಲವಾರು ಗೊಂಬೆಗಳು, ಒಂದು porcelain ನ ಮೊಲ, ರಕ್ತಚಂದನದಲ್ಲಿ ಕೆತ್ತಿದ ಕುದುರೆ, ಕಪ್ಪು ಮಣ್ಣಿನ ಶಿವನ ಚಿಕ್ಕದಾದ ಮೂರ್ತಿ, ಕೋಳಿ, ಒಂದು ಬೆಳ್ಳಿಯ ಒಳಲೆ ಇತ್ಯಾದಿಗಳು ಇದ್ದುವು. ನಾನದನ್ನೆಲ್ಲ ನನ್ನ showcase ನಲ್ಲಿ ಇಟ್ಟುಕೊಂಡಿದ್ದೇನೆ.ಬಂಗಾರ ತಂದು ಬ್ಯಾಂಕ್ ಲಾಕರ್ ನಲ್ಲಿಟ್ಟೆ. ವಜ್ರದ ಉಂಗುರ ಮಾಡಿಸಿಕೊಂಡೆ. ಅದರ ಡಿಸೈನ್ ಕೂಡ ತುಂಬ ಹುಡುಕಿದ ನಂತರ, ಡಿಸೈನ್ ನಲ್ಲಿ ನನ್ನದೇ ಕೆಲವು modification ಮಾಡಿಸಿಕೊಂಡು, now i have the most beautiful diamond ring.ಆದರೆ ಅದು ನನ್ನ ಒರಟು ಬೆರಳಿಗೆ ಚಂದ ಕಾಣುವುದೆ ಇಲ್ಲ . :-(ಈಗ ಅದರ ಸ್ಥಾನ ಲಾಕರ್ ನಲ್ಲಿ. ಮೂಡ್ ಬಂದಾಗ ಅಥವಾ ತುಂಬ ಹತ್ತಿರದ ನೆಂಟರ ಮದುವೆಗೆ ಹಾಕಿಕೊಳ್ಳಲು ಬಂಗಾರ ತೆಗೆದುಕೊಂಡು ಬರಲು , ನಾವು ಮೂವರು (ನಾನು-ಅಕ್ಕ-ನೀಹು)ಬ್ಯಾಂಕ್ ಗೆ ಹೋದಾಗ, ಲಾಕರ್ ನ ಪ್ರೈವಸಿಯಲ್ಲಿ (ಒಂದು ಸಲಕ್ಕೆ ಒಬ್ಬರಿಗೆ ಮಾತ್ರ ಒಳಗಡೆ ಬಿಡುತ್ತಾರೆ)ನಾನು ತುಂಬ ಭಕ್ತಿಯಿಂದ ಆ ಉಂಗುರ ಹೊರಗೆ ತೆಗೆದು ಅದನ್ನು ನೇವರಿಸಿ, ಗಲ್ಲಕ್ಕೆ ಹಚ್ಚಿ ನೀಹಾ ಗೆ ಕೊಡ್ತೇನೆ. ಅವಳು ತನ್ನ ಬೆರಳಿಗೆ ಹಾಕಿ ಕೊಂಡು ’che my fingers are not beautiful at all. ಆ ಮೇಲೆ ಮಾಲವಿಕಾಳ ಸರದಿ. ಬ್ಯಾಂಕ್ ನ ಲಾಕರ್ ನಲ್ಲಿ ಒಂದು ಕನ್ನಡಿಯಿದೆ. ಯಾಕೆ ಅಲ್ಲಿ ಕನ್ನಡಿ ಇಟ್ಟಿರುತ್ತಾರೋ ನನಗೆ ಗೊತ್ತಿಲ್ಲ. ಮಾಲವಿಕ ತನ್ನ ಚಂದದ ಬೆರಳಿಗೆ ಉಂಗುರ ಹಾಕಿ ಕೊಂಡು, ಅವಳ ಭರತನಾಟ್ಯದ ಮುದ್ರೆಗಳನ್ನು ಮಾಡುತ್ತಾಳೆ. (ಅಲ್ಲಿ CCTV ಕ್ಯಾಮೆರಾ ಇದ್ದರೆ ಅವರಿಗೆ ಒಳ್ಳೆಯ entertainment.) it looks good only on my finger ಅಂತ ವಜ್ರದುಂಗುರವನ್ನು ಅವಳಿಗೋಸ್ಕರ ಬುಕ್ ಮಾಡ್ಕೊಂಡಿದ್ದಾಳೆ. ಅದನ್ನು ಪುನಃ ಲಾಕರ್ ನೊಳಗಿಟ್ಟು ಬರುವುದು ಹೆಚ್ಚು ಕಡಿಮೆ ಇದೇ dialogue ನಮ್ಮದು.
H.S. ವೆಂಕಟೇಶಮೂರ್ತಿಯವರ (ಲಿಂಕ್ ನಲ್ಲಿ ಕೊಟ್ಟಿದ್ದನ್ನು ಖಂಡಿತ ಓದಬೇಕು)ಅನಾತ್ಮಕಥನದ ಈ ಭಾಗ ಓದಿ ನನಗೆ ಇದು ಬರೆಯಬೇಕೆನಿಸಿತು. ಅವರ ಬರಹದ ಶೈಲಿ ಹೇಗಿದೆಯೆಂದರೆ ಓಡಿಸಾ (Orissa) ದಲ್ಲಿ ಬೆಳ್ಳಿಮೇಲೆ ನವಿರಾದ ,ಅತ್ಯಂತ ಸೂಕ್ಷ್ಮವಾದ ಕುಸುರಿಕೆಲಸ (silver filigree work)ಮಾಡ್ತಾರೆ- ಅದನ್ನು ನೆನಪಿಸುತ್ತೆ. ನನಗೆ ಅವರ ಬರಹ ತುಂಬ ಇಷ್ಟವಾಯ್ತು. ನಿಮಗೆ?
 
ಅತ್ತೆಯ ತವರು ಮನೆ -ಹರಳಿಮಠ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ ದಾರಿಯಲ್ಲಿ 10 ಕಿ.ಮೀ ದೂರ

ಮನೆಯ entrance.ಫೋಟೊದಲ್ಲಿರುವವರು ಕೃಷ್ಣ ,ಶ್ರೀಕಾಂತ cousin.  ರೆಡ್ ಆಕ್ಸೈಡ್ ನೆಲ ನೋಡಿ!! ಎಷ್ಟು ಚಂದ 
:-)

April 23, 2011

ಮಾವಿನಕಾಯಿ ಚಿತ್ರಾನ್ನ -raw mango rice

Oh wow ಒಂದು ತಿಂಗಳಲ್ಲಿ 6 ಪೋಸ್ಟ್ ಗಳು. ನಾಟ್ ಬ್ಯಾಡ್ ಎಟ್ ಆಲ್ ಮಾಲತಿ!!! ಯಾರೂ ವರಿ ಮಾಡ್ಕೋಬೇಡಿ. ಇನ್ನೊಂದೆರಡು ಪೋಸ್ಟ್, ಆಮೇಲೆ ನನ್ನ ತಂಗಿ ಅವಳ ಮಕ್ಕಳೊಂದಿಗೆ ಬೆಂಗಳೂರಿಗೆ ಬರುತ್ತಿದ್ದಾಳೆ. ಆ ಮೇಲೆ ಸಿರ್ಫ್ travelling/eating/enjoyment....ಬ್ಲಾಗ್ ಹಾಲಿಡೇ..

ಈಗಿನ್ನು ಬೇಸಿಗೆ ರಜೆ. ಟ್ರಿಪ್ ಟೂರ್ ಅಂತೂ ಇದ್ದೆ ಇರುತ್ತೆ. ಈ ಸಲ ಎಲ್ಲಾದರೂ ಟ್ರಿಪ್ ಹೋದರೆ ಮಾವಿನಕಾಯಿ ಚಿತ್ರಾನ್ನ ಮಾಡಿಕೊಂಡು ಹೋಗಬಹುದು. ಬಿಸಿ ಅಥವ ತಣ್ಣಗೆ ಹೇಗೆ ತಿಂದರೂ ಟೇಸ್ಟೀ.

ಇತ್ತೀಚೆಗೆ ನಾನು ಫೀಡ್ ಜಿಟ್ ಟ್ರ್ಯಾಕರ್ ಹಾಕ್ಕೊಂಡಿದ್ದೇನೆ ಬ್ಲಾಗ್ ಗೆ. ಎರಡು ಮೂರು ದಿನ ಒಟ್ಟೊಟ್ಟಿಗೆ ರಜೆ ಬಂದಾಗಲೆಲ್ಲಾ ಜಾಲಿಗರು search ನಲ್ಲಿ 'ನಂದಿ ಬೆಟ್ಟ' 'ಹಿಮವದ್ ಗೋಪಾಲಸ್ವಾಮಿ' 'ಮೈಸೂರು’ ಎಲ್ಲ ಹಾಕ್ಕೊಂಡು,ನನ್ನ ಬ್ಲಾಗ್ ಗೆ ಬಂದು ಹೋಗ್ತಾರೆ. ಆದ್ದರಿಂದ ಇದು especially ಅವರಿಗಾಗಿ. ಬ್ಯಾಚುಲರ್ಸ್,ಫೋರ್ಸ್ಡ್ / married ಬ್ಯಾಚುಲರ್ಸ್ ಗಳು ಕೂಡ ಅತ್ಯಂತ ಸುಲಭವಾಗಿ ಈ ಮಾವಿನಕಾಯಿ ಚಿತ್ರಾನ್ನ ತಯಾರಿಸಬಹುದು.

ಬೆಳಿಗ್ಗೆ ಬೆಳಿಗ್ಗೆ ಹೊರಡ ಬೇಕಾದ್ರೆ. ಮತ್ತು ಅನ್ನ ಬಿಸಿಯಾಗಿದ್ರೆ ನಾನು ಅನ್ನವನ್ನು ಫ್ರೀಜ಼ರ್ ನಲ್ಲಿ ಹಾಕಿಡುತ್ತೇನೆ. ಬೇಗ ತಣ್ಣಗಾಗುತ್ತೆ. ಆಮೇಲೆ ಯಾವುದಾದರೂ ರೈಸ್ ಐಟಮ್ (ಚಿತ್ರಾನ್ನ, ಪುಳಿಯೋಗರೆ, ಕೊಕೋನಟ್ ರೈಸ್. ಮಾವಿನಕಾಯಿ ಸಿಗೋದಾದ್ರೆ mango rice etc)ಮಾಡಲು ಉಪಯೋಗಿಸುತ್ತೇನೆ. ನನ್ನ ಫ್ರಿಜ್ ಗೂ ನನ್ನ ಮದುವೆ ಆದಷ್ಟೆ ವಯಸ್ಸು. ಇನ್ನೂ ನನ್ನ ಕಾಟ ತಾಳಿಕೊಂಡಿದೆ ಪಾಪ. ಒಂದು ದಿನ ರಿಪೇರಿಗೂ ಹೋಗಿಲ್ಲ. proud of you dear refrigerator :-)


ಬೇಕಾಗುವ ಸಾಮಗ್ರಿ

1 ದೊಡ್ಡ ಮಾವಿನಕಾಯಿ like ತೋತಾಪುರಿ, ತೊಳೆದು ವರಸಿ, ತುರಿದು ,ಇದಕ್ಕೆ ಸ್ವಲ್ಪ ಉಪ್ಪು ಸಕ್ಕರೆ ಬೆರೆಸಿಡಿ.

ಬಾಣಲೆಯಲ್ಲಿ ಅರ್ಧ ಸ್ಪೂನ್ ಮೆಂತೆ, ಅರ್ಧ ಸ್ಪೂನ್ ಜೀರಿಗೆ, ಸಣ್ಣ ತುಂಡು ಹಿಂಗು ಎಣ್ಣೆ ಹಾಕದೆ ಹುರಿದು, ತಣ್ಣಗಾದ ನಂತರ ಪುಡಿ ಮಾಡಿದಿ

ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಉದ್ದಿನ ಬೇಳೆ, ಕಡಲೆ ಬೇಳೆ,ಸಾಸಿವೆ, ಕರಿಬೇವು, ಹಸಿಮೆಣಸಿನಕಾಯಿ ಒಗ್ಗರಣೆ ಹಾಕಿ. ಇದಕ್ಕೆ ಸ್ವಲ್ಪ ಶೆಂಗಾ ಹಾಕಿ ಇನ್ನೂ ಸ್ವಲ್ಪ ಹೊತ್ತು ಹುರಿಯಿರಿ. ಅರಸಿನ ಪುಡಿ ಮತ್ತು ಪುಡಿಮಾಡಿಟ್ಟ ಪದಾರ್ಥ ಬೆರೆಸಿ. ಇದಕ್ಕೆ ಮಾವಿನಕಾಯಿ ತುರಿ ಹಾಕಿ ಸ್ವಲ್ಪ ಹೊತ್ತು ಕೈಯಾಡಿಸಿ, ಅನ್ನ ಬೆರೆಸಿ. ಉಪ್ಪು ಹಾಕಿ.ಚೆನ್ನಾಗಿ ಕಲೆಸಿ.ಬೇಕಿದ್ದಲ್ಲಿ ಕೊತ್ತಂಬರಿ ಸೊಪ್ಪು , fresh ಕಾಯಿ ತುರಿ ಹಾಕಬಹುದು

ರುಚಿ ರುಚಿಯಾದ ಮಾವಿನಕಾಯಿ ಚಿತ್ರಾನ್ನ ರೆಡಿ.

:-)

April 19, 2011

ಇಲಿ ಕತೆ ಅಥವ all's well that ends well!!!

ನಾಲ್ಕು ವರ್ಷಗಳ ಹಿಂದಿನ ಕತೆ . ಆಗ ನಾವು ಬಸವೇಶ್ವರನಗರದಲ್ಲಿದ್ದದ್ದು. ನಗರ ಸ್ತ್ರೀ ಶಕ್ತಿ (NSS) ಎನ್ನುವ ಸರಕಾರಿ ಪ್ರೋಜೆಕ್ಟ್ (concurrent monitoring and Evaluation of the NSS scheme)* ಸಿಕ್ಕಿತ್ತು. ಅದರಲ್ಲಿ ಮೊದಲಿಗೆ ಡೇಟಾ ಫೀಡಿಂಗ್ ತುಂಬ ಇತ್ತು. ಆಫಿಸ್ ನ ಐದು ಜನ ಅದನ್ನೇ ಎಟೆಂಡ್ ಮಾಡ್ತಿದ್ದರೂ ಯಾಕೋ ಅದು  ಆಮೆ ಗತಿಯಲ್ಲಿ ಸಾಗ್ತಿದೆ ಅನ್ನಿಸಿ, ಹೇಗೂ ನನಗೆ ನಿದ್ದೆ ಕಡಿಮೆ, ಪುಸ್ತಕ ಓದುವುದನ್ನು ಬಿಟ್ಟು ನಾನೂ ಡೇಟಾ ಫೀಡ್ ಮಾಡುವಾ ಅಂತ ಆಫಿಸ್ ನಿಂದ ಬರುತ್ತ (Survey Questionnaire)ಪ್ರಶ್ನಾವಳಿ-ಉತ್ತರ ಗಳನ್ನು ಹೊತ್ತು ತರುತ್ತಿದ್ದೆ. ರಾತ್ರಿ ಮನೆಯ ಇತರ ಎಲ್ಲ ಕೆಲಸ ಮುಗಿದ ನಂತರ ಈ ಕೆಲಸ ಮಾಡ್ತಿದ್ದೆ. ಹೆಚ್ಚಿನಂಶ ಶ್ರೀವತ್ಸ ಜೋಶಿ chat ನಲ್ಲಿ ಸಿಗುತ್ತಿದ್ದರು. ಅವರ ಜತೆ ಹರಟೆ ಹೊಡೆಯುತ್ತ (ಅವರ ತಲೆ ತಿನ್ನುತ್ತ)ನನ್ನ ಕೆಲಸಗಳನ್ನು ಮಾಡುತ್ತಿದ್ದೆ.(ಸಾಕಷ್ಟು ಕನ್ನಡ especially pun ಗಳನ್ನು ನಾನು ಅವರ ಬಳಿ ತಿಳಿದುಕೊಂಡಿದ್ದೇನೆ) ಅಷ್ಟೆ ಅಲ್ಲ ಹಲವಾರು ಕುರುಕುಲು ತಿಂಡಿಗಳನ್ನು ಪಕ್ಕಕ್ಕಿಟ್ಟು ತಿನ್ನುತ್ತಿದ್ದೆ. (ನಮ್ಮ ಮನೆಯಲ್ಲಿ ಯಾವತ್ತೂ ಕುರುಕುಲು ತಿಂಡಿಯ ಸ್ಟಾಕ್ ಇರುತ್ತೆ. ಕೆಲವು ನಾನು ಮಾಡಿದ್ದು, ಕೆಲವು ಅಮ್ಮ ತಯಾರಿಸಿ, ತಮ್ಮನ ಕೈಯಲ್ಲಿ ಕಳುಹಿಸಿಕೊಟ್ಟಿರೋದು ಅಥವಾ ಮಲ್ಲೇಶ್ವರಂ ನಲ್ಲಿರುವ ಮಂಗಳೂರು ಸ್ಟೋರ್ಸ್ ನದು.) ನಮ್ಮ ಮನೆಯ ಕಂಪ್ಯೂಟರ್ ರೂಮ್ ಗೆ ಎರಡು ಕಡೆಯಲ್ಲಿ ದೊಡ್ಡ ದೊಡ್ಡ ಕಿಟಕಿಗಳು. ನನಗೆ ಕಿಟಕಿಗಳಿಗೆ ಪರದೆ ಅಥವಾ ಕಿಟಕಿ ಬಾಗಿಲು ಹಾಕುವುದು ಅಂದರೆ ಆಗಲ್ಲ. ಎದುರುಗಡೆಯ ಗಾರ್ಡನ್ ನೋಡ್ತಾ, ಗಾಳಿ, ಮಳೆ, ಧೂಳು ಅಥವಾ ಹುಣ್ಣಿಮೆ ದಿನ ಎದುರಿಗೇ ಇರುವ ಬೃಹತ್ ಗಾತ್ರದ ಆಲದ ಮರದ ಮೇಲೆ ಕಣ್ಣು ಮುಚ್ಚಾಲೆ ಆಡುವ ಚಂದ್ರ ಕಿರಣಗಳನ್ನು ನೋಡುತ್ತ enjoy ಮಾಡ್ತಾ ನನ್ನ ಕೆಲಸ ಮಾಡುವುದಂದ್ರೆ ಖುಶಿ. ಕೆಲಸ ಇಲ್ಲದಿದ್ದರೆ, ಫಿಲ್ಮ್ ಅಂತೂ ತುಂಬ ನೋಡ್ತೀನಿ.ನನ್ನ ತಮ್ಮ ಮುಂಬೈನಿಂದ ಬರುವಾಗಲೆಲ್ಲ ಒಂದು ರಾಶಿ ಸಿಡಿ, ಡಿವಿಡಿ ಗಳನ್ನು ನನಗೋಸ್ಕರ ತಂದಿರುತ್ತಾನೆ. ಅದನ್ನೆಲ್ಲ ನಾನು ಕಂಪ್ಯೂಟರ್ ನಲ್ಲೇ ನೋಡುವುದು.
ಹೀಗೆ ಒಂದು ದಿನ ಒಂದು ಪುಟ್ಟ ಇಲಿ ಮರಿ ಕಿಟಕಿ ಮೂಲಕ ಒಳಗೆ ಬಂತು. ಬಹುಶ: ಅದಕ್ಕೆ ನಾನಲ್ಲಿಟ್ಟ ಕುರುಕುಲು ತಿಂಡಿಯ ಪರಿಮಳ ಮೂಗಿಗೆ ಬಡಿದಿದ್ದರಬೇಕು. ಹೆದರಿ ಹೆದರಿ ಮುಂದೆ ಬಂದಾಗ ನಾನು ಅದಕ್ಕೆ ಒಂದೆರಡು ಬಾಳೆಕಾಯಿ ಚಿಪ್ಸ್ ಕೊಟ್ಟೆ.ಆಮೇಲೆ ಅದಕ್ಕೆ ಅದೇ ಅಭ್ಯಾಸ ಆಯಿತು. ರಾತ್ರಿ ಹನ್ನೆರಡಾದ ಮೇಲೆ ದಿನ ನನ್ನ ಜತೆ ತಿಂಡಿ ತಿಂದು ಹೋಗುತ್ತಿದ್ದ ಇಲಿಗೆ ಎಷ್ಟು ಸಲಿಗೆಯಾಯಿತೆಂದರೆ ಕಂಪ್ಯೂಟರ್ ಮೇಲಿಟ್ಟ ಪ್ರಿಂಟರ್ ಮೇಲೆಲ್ಲ ಕೂತು ಅದರ ಆಟಗಳನ್ನು ಶುರು ಮಾಡಿತು. ನಾನು ಅದರ ಜತೆ ಮಾತುಕತೆ ಆಡ್ತಿದ್ದೆ. ಕೇಳಿದವರು ಯಾರಾದ್ರೂ ’ಈಯಮ್ಮಂಗೆ ಹುಚ್ಚು ಹಿಡಿದುಬಿಟ್ಟೈತೆ’ ಅನ್ನುವಷ್ಟು :-)ಮನೆಯಲ್ಲಿ ನಾನು ಯಾರಿಗೂ ಇದನ್ನು ಹೇಳಿರಲಿಲ್ಲ.
ಒಂದು ದಿನ ಏನಾಯ್ತು ಅಂದರೆ ಶ್ರೀಕಾಂತ್ ಗೆ ನನ್ನ ತಂಗಿ ಗಂಡ ,US ನಲ್ಲಿರುವ ಸಂದೀಪ್ ಜತೆ ಸ್ಕೈಪ್ (skype) ನಲ್ಲಿ ಮಾತಾಡಲಿಕ್ಕಿತ್ತು. ಅವನು ತುಂಬ ಲೇಟ್ ಆಗಿ ಆನ್ ಲೈನ್ ಬಂದ. ಶ್ರೀಕಾಂತ್ ಅವನೂ ಚ್ಯಾಟ್ ಮಾಡಬೇಕಾದ್ರೆ  ರಾತ್ರಿ 12 ದಾಟಿದ್ದು, ಇಲಿ ಬಂದೇ ಬಿಟ್ಟಿರಬೇಕು ಶ್ರೀಕಾಂತ್ ಕಿರುಚಿದಕ್ಕೆ ಅದು ಹೆದರಿ ಪ್ರಿಂಟರ್ ಒಳಗೆ ಹೋಯ್ತು. ಗಲಾಟೆ ಕೇಳಿ ನಾನು ಓದುತ್ತಿದ ಪುಸ್ತಕ  ಬಿಟ್ಟು ಅಲ್ಲಿಗೆ ಓಡಿ ಹೋದೆ, ಶ್ರೀಕಾಂತ್ ಗೆ electric shock ಏನಾದ್ರೂ ತಗುಲಿತಾ ಅಂತ. ಮನೆಯ ಕೆಲವು ಕಡೆ earthing ಸರೀ ಇಲ್ಲದೇ, ಶಾಕ್ ತಗಲುತ್ತಿತ್ತು,  ಬಂದು ನೋಡಿದ್ರೆ ಶ್ರೀಕಾಂತ್ ಗೂ ಇಲಿಗೂ ಕಾಳಗ.ಶ್ರೀಕಾಂತ್, ಪ್ರಿಂಟರ್ ನ್ನು ಅಲ್ಲೇ ಹತ್ತಿರ ಇದ್ದ ಮ್ಯಾಗಜಿನ್ ನಿಂದ ಜೋರಾಗಿ ಬಡಿದರು. ಇಲಿ ಹೆದರಿ, ಅಲ್ಲಿಂದ ಹಾರಿ ಮನೆಯೆಲ್ಲ ಓಡಾಡಲು ಶುರು ಮಾಡಿತು. ಇಲಿ ಮುಂದೆ, ಶ್ರೀಕಾಂತ್ ಅದರ ಹಿಂದೆ. ನಾನು ಅವರ ಹಿಂದೆ.ಮೂಲೆಯಲ್ಲಿರುವ ಮಕ್ಕಳ ರೂಮ್ ಗೆ ಹೊಕ್ಕಿತು. ಮಕ್ಕಳು ಮಲಗಿದ್ದರು. ಶ್ರೀಕಾಂತ್ ಕೋಣೆಯಲ್ಲಿ ಲೈಟ್ ಹಾಕಿದಾಗ ಇಲಿ ಮಕ್ಕಳ ರೂಮ್ ನ ಕಿಟಕಿಗೆ ಹಾರಿತು. ಕಿಟಕಿ ಬಾಗಿಲು ಹಾಕಿದ್ದರಿಂದ ಅದು ಪುನ: ಮಂಚದ ಕಡೆಗೆ ಹಾರಿತು. ಅದು ಹಾರಲಿಕ್ಕೂ ಮಾಲವಿಕ ಮಂಚದ ಮೇಲಿಂದ ಏಳಲಿಕ್ಕೂ, ಇಲಿ ಮಾಲವಿಕ ಗಲ್ಲದ ಮೇಲೆ ಹಾರಿ, grip ಗೋಸ್ಕರ ಅವಳ ಗಲ್ಲಕ್ಕೆ ಹಿಡ್ಕೊಂಡಿದ್ದು ಜಾರುತ್ತ ಇತ್ತು. ಅಷ್ಟರಲ್ಲಿ ನಾನು ಕಿಟಕಿ ಬಾಗಿಲು ತೆಗೆದಿದ್ದರಿಂದ ಅದು ಕೂಡಲೆ ಅಲ್ಲಿಂದ ಹೊರಗೆ ಹೋಯ್ತು. ಒಂದು ಕ್ಷಣದಲ್ಲಿ ಇಷ್ಟೆಲ್ಲ ನಡೆಯಿತು.ಮಾಲವಿಕ ಳ ಗಲ್ಲಕ್ಕೆ ಗೀರು ಗಾಯ ಆಗಿ ರಕ್ತ ಒಸರುತ್ತಿತ್ತು. ಮೊದಲು ಸಾವ್ ಲೋನ್ ನಿಂದ ಗಾಯ ಕ್ಲೀನ್ ಮಾಡ್ದೆ. ಮತ್ತೆ ಮನೆಯ ಹಿಂಬದಿಯಿದ್ದ ಬಾಗಿಲು ತೆಗೆದು ನಮ್ಮ ಒವ್ನರ್ ರಾಮಮೂರ್ತಿ ಮನೆ ಕಡೆ ನೋಡಿದೆ. ಅಲ್ಲಿ ಲೈಟ್ ಹಾಕಿತ್ತು. ರಾಮಮೂರ್ತಿ ಹೆಂಡತಿ ಪಾರ್ವತಿ ಡಾಕ್ಟರ್. (ನಮ್ಮಿಬ್ಬರ ಮಾತೆಲ್ಲ  eಮೈಲ್/ಚ್ಯಾಟ್ ಮೂಲಕ.) ಅವರ ಹೆಸರು ಹಿಡಿದು ಕೂಗಿದೆ. ಅವರು ಹೊರಗೆ ಬಂದು ಏನಾಯಿತು ಅಂತ ಕೇಳಿದರು. ಮಾಲವಿಕ ಗೆ ಗಾಯ ಆಗಿದ್ದ ವಿಷಯ ಕೇಳಿ, ಕೂಡಲೆ tetanus ಇಂಜೆಕ್ಷನ್ ಹಾಕಬೇಕು. ನನ್ನ ಹತ್ತಿರ ಅದು ಮುಗಿದಿದೆ. ಸಿರಿಂಜ್ -ಸೂಜಿ ಮುಂತಾದವು ಇದೆ ಅಂದರು. ಶ್ರೀಕಾಂತ್ ಹೊರಡಬೇಕಾದ್ರೆ, ರಾಮ್ ,ಬೇಡ, ನಾನೇ ಹೋಗಿ ತರ್ತೇನೆ. ಇಲ್ಲೇ ಒಂದು apollo 24 hours ಮೆಡಿಕಲ್ ಸ್ಟೋರ್ಸ್ ನಿಂದ ತರ್ತೇನೆ ಅಂತ ಹೋದರು. ಐದೇ ನಿಮಿಷದಲ್ಲಿ ಬಂದು, ಡಾ. ಪಾರ್ವತಿ ಮಾಲವಿಕಳಿಗೆ ಇಂಜೆಕ್ಷನ್ ಕೊಟ್ಟು ಅವರ ಬಳಿಯಿದ್ದ ಮುಲಾಮು ಹಚ್ಚಲಿಕ್ಕೆ ಕೊಟ್ಟರು.
ಇಷ್ಟೆಲ್ಲ ಆದ ಮೇಲೆ ಶ್ರೀಕಾಂತ್ ಗೆ ನನ್ನ ಮತ್ತು ಇಲಿಯ ದೋಸ್ತಿ ಬಗ್ಗೆ ಹೇಳಿ, ರಾತ್ರಿ ಬಹಳ ಹೊತ್ತು ಬೈಯಿಸಿಕೊಂಡೆ- ನಿಂದೆಲ್ಲ ಸ್ವಲ್ಪ ವಿಪರೀತ ಆಯ್ತು, ಅವಳ ಗಲ್ಲದ ಮೇಲೆ ಕಲೆ ಉಳಿದು ಬಿಟ್ಟರೆ ಏನು ಮಾಡ್ತೀಯಾ ಅಂದಾಗ ನನಗೂ ಛೆ!! ಹೌದಲ್ಲ ಅಂತ ತುಂಬ ಕೆಟ್ಟದನಿಸಿತು....
ಬೆಳಿಗ್ಗೆ ಬೆಳಿಗ್ಗೆ ರಾಮಮೂರ್ತಿ ನನ್ನ ಅಡಿಗೆ ಮನೆಯ ಕಿಟಕಿ ಬಳಿ ಬಂದು
malathi, come out fast ಅಂದ
(ರಾಮಮೂರ್ತಿ ತಮಿಳಿನವರು. ಬೆಂಗಳೂರಿನಲ್ಲೇ ಹುಟ್ಟಿದ್ದರೂ ಕನ್ನಡ ಮಾತಾಡ್ತಿರಲಿಲ್ಲ. ಅವರನ್ನು ನಾನು ಒಂದು ಸಲ ತಮಾಷೆ ಮಾಡಿದ್ದೆ
’what da!! you are from Bangalore, how come you do not know kannada? you studied here, so you must have the state language in your syllabi' -ಅಂತ
'Oh no!! i studied all the while in army school' so i do not know kannada ' ಅಂತ ಅಂದುಬಿಟ್ಟ.
ಮತ್ತೆ ಡಾ. ಪಾರ್ವತಿ ಕೂಡ ತಮಿಳ್ ನವರಾದರೂ ಅವರು ಹುಟ್ಟಿ ಬೆಳೆದದ್ದು ಎಲ್ಲ ಗುಜರಾತ್ ನಲ್ಲಿ. ಅವರಿಗೂ ಕನ್ನಡ ಬರಲ್ಲ. ಆದರೆ ಡಾಕ್ಟರ್ ಆದ್ದರಿಂದ ಅಲ್ಪ ಸ್ವಲ್ಪ ಕನ್ನಡ ಮಾತನಾಡುವ ಪ್ರಯತ್ನ ಮಾಡ್ತಿದ್ದರು)
ಸೊ malathi come out fast ಅಂದಾಗ, ನಾನು ವ್ಹೈ?? ವ್ಹಾಟ್ ಹ್ಯಾಪನ್ಡ್? ಅಂತ ಹೊರಗೆ ಹೋದೆ. ಅವರ ಮನೆ ಮುಂದೆ ಒಂದು ಇಲಿ ಸತ್ತು ಬಿದ್ದಿತ್ತು.
See that dead rat there?? thats the same one that scratched malavika ಅಂದು ಬಿಟ್ಟು, because it bit malavika it is now dead ಅಂದ. ನನಗಂತು ನಗು ಬಂದು Oliver Goldsmith ಬರೆದ an elegy on the death of a mad dog ಪದ್ಯ ನೆನಪಿಗೆ ಬಂತು. ಆ ಪದ್ಯದಲ್ಲಿ ಐಲಿಂಗ್ ಟನ್ ನಲ್ಲಿರುವ ಒಬ್ಬನಿಗೆ ನಾಯಿ ಗೆಳೆತನ ಆಗುತ್ತೆ ಆದರೆ ಒಂದು ದಿನ ನಾಯಿಗೆ ಹುಚ್ಚು ಹಿಡಿದು ಅವನನ್ನ್ನು ಕಚ್ಚುತ್ತೆ. ಜನರೆಲ್ಲ ಅವನ ಸಾವಿನ ದಾರಿಕಾಯುತ್ತಿರುವಾಗ ಅಶ್ಚರ್ಯಕರವಾಗಿ ಅವನು ಬದುಕುಳಿದು, ನಾಯಿ ಸತ್ತು ಹೋಗುತ್ತದೆ. ಅದರ ಕೊನೆ ಎರಡು ಸಾಲು ಹೀಗಿವೆ...
the man recovered of the bite
the dog it was that died........
ಮರುದಿನ ಅಮ್ಮ ಫೋನ್ ಮಾಡಿದಾಗ, ಅಮ್ಮ, ಹೀಗೀಗೆ ಅಂತ ಹೇಳಿ ಅವರಿಂದಲೂ ನನಗೆ ಸಹಸ್ರನಾಮಾರ್ಚನೆ ಆಯ್ತು. ಮುಖಕ್ಕೆ ಕಲೆ ಗಿಲೆ ಉಳಿದುಬಿಟ್ರೆ ಯಾರು ಆಕೇನ್ನ ಮದುವೆಯಾಗ್ತಾರೆ ಅಂತ..’ಈ ಅಮ್ಮಂಗೆ ಅದೊಂದೆ tension ಅಂದುಕೊಂಡು ಸುಮ್ಮನಾದೆ. ಸದ್ಯ all’s well that ends well... ಮಾಲವಿಕನ ಗಲ್ಲದ ಮೇಲೆ ಗೀರು ಗಾಯದ ಕಲೆ ಉಳಿದಿಲ್ಲ ಮತ್ತು ಸತ್ತದ್ದು ನನ್ನ ಇಲಿಯಲ್ಲ. ಯಾಕೆ ಅಂದ್ರೆ ಮರುದಿನ ನಾನು ಮಾಮೂಲಿನಂತೆ ರಾತ್ರಿ ಕಂಪ್ಯೂಟರ್ ಬಳಿ ಕೆಲಸಕ್ಕೆ ಕೂತಾಗ ಅದು ಪುನ: ಬಂದು ನಮ್ಮ ತಿಂಡಿ ತಿನ್ನುವ ಆಟ ಪುನ: ಶುರು........(ಯಾರಿಗೂ ಹೇಳ್ಬೇಡಿ ಮತ್ತೆ)

 (NSS project ಬಗ್ಗೆ ಸ್ವಲ್ಪ blurb. ಸ್ವಲ್ಪ ಬೋರಿಂಗ್ ಆಗಿದೆ. ನಮ್ಮ ಅವರ ಒಪ್ಪಂದದ copy paste. just to give a rough idea what the project involved.) ಶ್ರೀಕಾಂತ್ ಈಗ (22.04.2011 3.42 pm)  ಓದಿ ಕೆಳಗಿನ para ಚೆನ್ನಾಗಿಲ್ಲ ಅಂದ್ರು.......
*ರಾಜ್ಯ ಸರ್ಕಾರದ ನಗರ ಸ್ತ್ರೀಶಕ್ತಿ ಯೋಜನೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ರಾಜ್ಯದ ಎಲ್ಲಾ ೧೭೫ ತಾಲ್ಲೂಕುಗಳ ಹಾಗೂ ಪಟ್ಟಣಗಳಲ್ಲಿ ಅನುಷ್ಠಾನ ಮಾಡುತ್ತಲಿದೆ.
ಸರ್ಕಾರದ ಈ ಯೋಜನೆಯು ಉತ್ತಮ ಉದ್ದೇಶಗಳನ್ನು ಹೊಂದಿದ್ದು ಯೋಜನೆಯ ಪ್ರಗತಿಯನ್ನು, ನಿರ್ಧಾರಿತ ಉದ್ದೇಶಗಳೊಂದಿಗೆ ಅನುಷ್ಠಾನದ ವಿವಿಧ ಹಂತಗಳಲ್ಲಿ ಪುನಃ ಪುನಃ ಪರೀಶಿಲಿಸಿ, ಅಗತ್ಯವಿದ್ದಲ್ಲಿ ಮಾರ್ಪಾಡುಗಳನ್ನು ಯೋಜನೆಯ ಅವಧಿಯಲ್ಲಿಯೇ ಮಾಡಿಕೊಂಡು, ಯೋಜನೆಯ ಲಾಭ ಗುಂಪಿನ ಸದಸ್ಯರುಗಳಿಗೆ ಯಾವ ರೀತಿಯಲ್ಲಿ, ಎಷ್ಟರಮಟ್ಟಿಗೆ ದೊರೆತಿದೆ ಎಂಬುದನ್ನು ಅರಿಯುವ ಸಾಧನವೇ” "" ನಿರಂತರ ಉಸ್ತುವಾರಿ ಮತ್ತು ಮೌಲ್ಯಮಾಪನ". ನಗರ ಸ್ತ್ರೀಶಕ್ತಿ ಯೋಜನೆಯು ರಾಜ್ಯದ ಒಂದು ಮಹತ್ವಾಕಾಂಕ್ಷ್ಷೆ ಯೋಜನೆಯಾಗಿದ್ದು, ಈ ಯೋಜನೆಯ ಅನುಷ್ಠಾನವನ್ನು ಉತ್ತಮ ತಳಹದಿಯ ಮೇಲೆ ಅನುಷ್ಠಾನ ಮಾಡಲಾಗುತ್ತ್ತಿದೆ. ಆದುದರಿಂದ ನಗರ ಸ್ತ್ರೀಶಕ್ತಿ ಯೋಜನೆಯನ್ನು ನಿರಂತರ ಉಸ್ತುವಾರಿ ಹಾಗೂ ಮೌಲ್ಯಮಾಪನಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ.
ಉಸ್ತುವಾರಿಯನ್ನು ಸ್ವಸಹಾಯ ಗುಂಪಿನ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ನಿರ್ವಹಿಸಲಾಗುವುದು. ನಗರ ಸ್ತ್ರೀಶಕ್ತಿ ಯೋಜನೆಯಡಿಯಲ್ಲಿ ರಚಿಸಲಾಗಿರುವ ಎಲ್ಲಾ 5000 ಗುಂಪುಗಳು ಉಸ್ತುವಾರಿಯ ವ್ಯಾಪ್ತಿಯಲ್ಲಿ ಬರಲಿವೆ. ಉಸ್ತುವಾರಿಯನ್ನು ಸ್ವಸಹಾಯ ಗುಂಪುಗಳು ಮತ್ತು ನಿಗಮವು ನೀಡಲಿರುವ ಮಾಸಿಕ / ತ್ರೈಮಾಸಿಕ / ಅರ್ಧವಾರ್ಷಿಕ / ವಾರ್ಷಿಕ ಮಾಹಿತಿಯ ಆಧಾರದ ಮೆಲೆ ನಿರ್ವಹಿಸಲಾಗುವುದು
ಈ ನಿಗಮವು ಉಸ್ತುವಾರಿ ಮತ್ತು ಮೌಲ್ಯಮಾಪನದ ಕ್ರಿಯೆ ನಿಷ್ಪಕ್ಷಪಾತವಾಗಿ ನಡೆಯಲು ಈ ಕರ್ತವ್ಯವನ್ನು ಒಂದು ನುರಿತ ಸ್ವತಂತ್ರ ಸಂಸ್ಥೆಯಿಂದ ಮಾಡಿಸುವ ನಿರ್ಧಾರವನ್ನು ಕೈಗೊಂಡಿದೆ.
ಈ ಸ್ವತಂತ್ರ ನುರಿತ ಸಂಸ್ಥೆ ನಮ್ಮ ಐಡಿಎಫ್
:-)


April 15, 2011

ನಮ್ಮ ಸಂಸ್ಥೆ ’ಗ್ರಾಮ್ಯಾ’ ವಿಜಯ ಕರ್ನಾಟಕದಲ್ಲಿ

ವಿಜಯ ಕರ್ನಾಟಕ ಲವಲವಿಕೆ ತಾ  6 ನೇ ಏಪ್ರಿಲ್ 2011



ಇಮೇಜ್ ಮೇಲೆ ಕ್ಲಿಕ್ ಮಾಡಿದ್ರೆ ದೊಡ್ಡ ಅಕ್ಷರದಲ್ಲಿ ಓದಬಹುದು
ಗ್ರಾಮ್ಯಾ ದ ಜಾಲತಾಣದ ವಿಳಾಸದ ಮಾಹಿತಿ ತಪ್ಪಾಗಿ ಅಚ್ಚಾಗಿದೆ. ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಲಿಂಕ್ ನ್ನು ಕ್ಲಿಕ್ಕಿಸಿ.
ಗ್ರಾಮ್ಯದ ಪರಿಸರ ಸ್ನೇಹಿ ಉತ್ಪನ್ನಗಳಿಗೆ ದೇಶ ವಿದೇಶದಲ್ಲಿ ಒಳ್ಳೆಯ ಪ್ರೋತ್ಸಾಹ ಹಾಗು ಬೇಡಿಕೆ ಇದೆ.

GRAMYA is a professional organisation dedicated to revive, rejuvenate and provide marketing visibility and a  platform for rural artisanal ,eco friendly and ethnic products, based on fair trade practices.
for further details on 'gramya' click on the link below
Thank you Sandeep Kamath for (this) neater version of the report.
:-)


April 12, 2011

ಬಕುಳಾ ಭಾತ್ ಎಂಬ thriller

ಸುಮಾರು ಜನರು ಈ ಪ್ರಶ್ನೆ ಕೇಳಿದ್ದಾರೆ. ನೀವು ಮುಂಬೈಯವರು, ತೀರ್ಥಹಳ್ಳಿಗೆ ಹೇಗೆ ಬಂದ್ರಿ?ಎತ್ತಣಿಂದೆತ್ತಣ ಸಂಬಂಧವೈಯ್ಯ ಅಂತ

ಹೇಳ್ತೇನೆ ತಾಳಿ
ತಾಳ್ಮೆಯಿಂದ ಕೇಳಿ

ಮುಂಬೈನಲ್ಲಿ ನಾವು ಮೂರನೆ ಮಹಡಿಯಲ್ಲಿದ್ರೆ, ಶ್ರೀಕಾಂತ್ ಅಕ್ಕ ಶೈಲಜ ಮತ್ತು ಭಾವ ಕೆ.ಪಿ.ಪೈ ಎರಡನೇ ಮಹಡಿಯಲ್ಲಿ ಸೀದಾ ನಮ್ಮ ಫ್ಲಾಟ್ ಕೆಳಗಡೆ ಬಂದಿದ್ರು. ಕೊಂಕಣಿಯವರು ಅಂದ ಮೇಲೆ ಕೊಂಕಣಿಯವರ ಪರಿಚಯ ಮಾಡದೇ ಇರುತ್ತೀವಾ?? ಹೇಗೂ ನನಗೂ 12th (ಪಿ.ಯು.ಸಿ) ಪರೀಕ್ಷೆ ಮುಗಿದಿತ್ತು. ಶೈಲಜಾ ಆಂಟಿಗೆ  ನಮ್ಮ ಬಿಲ್ಡಿಂಗ ಬಳಿ ಸುತ್ತ ಮುತ್ತಲಿನ ಪರಿಸರ-ಎಲ್ಲೆಲ್ಲಿ ಏನು ಸಿಗುತ್ತೆ -ಇದೆಲ್ಲದರ ಪರಿಚಯ ಮಾಡುವ ಕೆಲಸ ನನ್ನ ಪಾಲಿಗೇ ಬಂತು. ಅವರ ಪುಟ್ಟ ಮಗ ಒಂದು ವರ್ಷದ ಪ್ರದೀಪ, ನನ್ನನ್ನು ತುಂಬ ಹಚ್ಚಿಕೊಂಡಿದ್ದ.ಮಾಲತಿ ಅನ್ನಲಿಕ್ಕೆ ಬರದೇ, ಮಾಂಚೂ ಮಾಂಚೂ ಅಂತ ಕರೀತಿದ್ದ. ಹೆಚ್ಚಿನ ಹೊತ್ತು ನಮ್ಮ ಮನೇಯಲ್ಲೇ ಕಳೆಯುತ್ತಿದ್ದ.’ಕ’ ಅಕ್ಷರ ಒಂದು ’ತ’ ಅಂತ ಹೇಳುವುದು ಬಿಟ್ರೆ ಉಳಿದದೆಲ್ಲ ಸ್ಪಷ್ಟವಾಗಿ ಮಾತನಾಡುತ್ತಿದ್ದ,  ಎಲ್ಲಿ ಹೋಗಬೇಕಾದ್ರೂ ನಾನೆ ಅವನನ್ನು ಎತ್ತ್ಕೋಬೇಕಿತ್ತು. ನಾನು ಸಣ್ಣಕ್ಕೆ ಕಡ್ಡಿ ಇದ್ದ ಹಾಗೆ, ಅವನೋ ಸ್ವಲ್ಪ overweight, ಒಳ್ಳೆ ಜೋಡಿ ನಮ್ಮದು.
ಹೀಗೆ ಬರುತ್ತ ಹೋಗುತ್ತ, ಪರಿಚಯ ತುಂಬ ಬೆಳೆಯಿತು.  ಒಂದು ದಿನ ಅವರು ಅಮ್ಮನಿಗೆ ,’ ನನ್ನ ತಮ್ಮ ಒಬ್ಬ ಇದ್ದಾನೆ ಬ್ಯಾಂಕ್ ನಲ್ಲಿ. ಅವನಿಗೆ ಮದುವೆ ಮಾಡಲು ಹುಡುಗಿ ಹುಡುಕ್ತಾ ಇದ್ದೇವೆ’, ಆದರೆ ಅವನಿಗೆ ತೋರಿಸಿದ್ದ ಹುಡುಗಿಯರಲ್ಲೆಲ್ಲ ಏನಾದ್ರು ಕೊಂಕು ತೆಗೆದು ಬೇಡ ಅಂತಾನೆ.’ ಮಾಲತಿ ಜಾತಕ ಕೊಡುತ್ತೀರಾ?’ ಅಂತ. ಅದಕ್ಕೆ ಅಮ್ಮ ’ಅವಳು ಇನ್ನೂ ಚಿಕ್ಕವಳು. ಗ್ರಾಜುವೇಶನ್ ಮುಗಿಸಲಿ, ಆಮೇಲೆ ನೋಡುವಾ ಅಂದರೆ. ಅದಕ್ಕೆ ಶೈಲಾ ಆಂಟಿ, ’ಅಲ್ಲ ಮಾಮಿ, ಮೊದಲು ಜಾತಕ ಕೂಡಿ ಬರಬೇಕು, ಆಮೇಲೆ ತಮ್ಮ ಒಪ್ಪಬೇಕು, ಮನೆಯವರೆಲ್ಲ ಒಪ್ಪಬೇಕು, ಆಮೇಲೆ ಉಳಿದ ವಿಷಯ. ಈಗಲೇ ಜಾತಕ ಹೊರ ಹಾಕುವುದು ಒಳ್ಳೆಯದಲ್ಲವಾ ಅಂತ. ಕಾಕತಾಳೀಯವೆಂಬಂತೆ ಎರಡೇ ದಿನದಲ್ಲಿ ಅಜ್ಜನ ಪತ್ರ ಬಂದು ಬಿಟ್ಟಿತ್ತು,’ಮೊನ್ನೆ ಮಾಲತಿಯ ಜಾತಕ ನೋಡ್ದೆ. (ನಮ್ಮ ಅಜ್ಜ ಇಂಜಿನಿಯರಿಂಗ ಜತೆ astrology ಕೂಡ practice ಮಾಡ್ತಿದ್ದರು)ಈಗ ಅವಳಿಗೆ ಮದುವೆಯ ಯೋಗ ಇದೆ. ಅದು ತಪ್ಪಿದರೆ ಇನ್ನು ಅವಳಿಗೆ 26 ನೇ ವಯಸ್ಸಿಗೆ ಮದುವೆ’ ಅಂತ. ಸೈ, ಅಮ್ಮ ಅಂತೂ ಫುಲ್ tense. 26 ಅಂದರೆ ಮುದುಕಿ ಅಂತಲೇ ಲೆಕ್ಕ!!! ಕೂಡಲೇ ಜಾತಕ ಕಳಿಸಿ, ಅದು ಕೂಡಿ ಬಂದು, ಮರು ವಾರನೇ ವಧು ಪರೀಕ್ಷೆಗೆ (?grrrrrrr) ಬೆಂಗಳೂರಿಗೆ ಕರೆದುಕೊಂಡು ಬರಲು ಹೇಳಿದರು. ನಮ್ಮ ತಂದೆ ಆಗ ರಾಜಸ್ಥಾನದಲ್ಲಿದ್ದರು deputation ಮೇಲೆ. ಅವರಿಗೆ telegram ಕೊಟ್ಟು,ತಂದೆ ಕೂಡಲೇ ಬಂದಿಳಿದರು. ಅವರ ಪರಿಚಯದವರಿಗೆ ಫೋನಾಯಿಸಿ ನಾವು ಬೆಂಗಳೂರಿಗೆ ಬರುವುದನ್ನು ತಿಳಿಸಿದರು. ಇಷ್ಟರವರೆಗೆ ನನಗೆ ಯಾರೂ ಏನೂ ಕೇಳಲೇ ಇಲ್ಲ?? :-( ಆದರೆ ಒಂದಂತು ಖಾತ್ರಿಯಿತ್ತು, ನನ್ನನ್ನು ನೋಡಿಯಂತು ಶ್ರೀಕಾಂತ್ ಖಂಡಿತ ಒಪ್ಪಲ್ಲ ಅಂತ. ನಾನು 12 ಕ್ಲಾಸ್ ಪಾಸ್ ಆದ್ರೂ ನೋಡಲಿಕ್ಕೆಆರನೆ ಕ್ಲಾಸ್ ಹುಡುಗಿ ತರಹ ಇದ್ದೆ. ಸಣ್ಣಕ್ಕೆ, ಕಡ್ಡಿ ತರಹ. ಅಂತೂ ಹೆಂಗೆಂಗೊ ಸೀರೆ ಉಟ್ಟುಕೊಂಡು, ಒಳ್ಳೆ fancy dress ತರಹ ಕಾಣುತ್ತಿದ್ದೆ. ಶ್ರೀಕಾಂತ್ ಚಸ್ಮ ಹಾಕಿದ್ರೋ ಇಲ್ವೋ, ಶ್ರೀಕಾಂತ್ ಒಪ್ಪಿ ಬಿಟ್ರು. ಆದರೆ ತೀರ್ಥಹಳ್ಳಿಯಲ್ಲಿ ಅವರ ಮನೆಯಲ್ಲಿ ಸ್ವಲ್ಪ ಹೆದರಿಕೆಯಾಯಿತಂತೆ, ’ಮುಂಬೈಯವಳು, ಇಲ್ಲಿ ನಮ್ಮದು ಕೂಡು ಕುಟುಂಬ, ಹೇಗೂ ಏನೋ ಅಂತ’....ಶೈಲ ಅವರಿಗೆಲ್ಲ ಸಮಝಾಯಿಸಿ ಸಮಾಧಾನ ಹೇಳಿದ್ದರಂತೆ, ಇಲ್ಲ ನಮ್ಮ ಮಾಲತಿ ಒಳ್ಳೆಯವಳು, ಅಷ್ಟೇ ಅಲ್ಲ ಶ್ರೀಕಾಂತ್ ಕೂಡ ಒಪ್ಪಿದ್ದಾನೆ, ಸುಮ್ಮನೆ ಹೂಂ ಅಂದು ಬಿಡಿ ಅಂತ. ಸರೀ ತೀರ್ಥಹಳ್ಳಿಯಲ್ಲೇ ಸಣ್ಣ engagement ಶಾಸ್ತ್ರ ನಡೆಯಿತು, ಉಂಗುರಗಳ ವಿನಿಮಯ ಆಯ್ತು. ಮತ್ತು ಮದುವೆ ಎಲ್ಲಿ ಮಾಡುವುದು ಎಂಬ ಪ್ರಶ್ನೆ. ಹೆಚ್ಚಾಗಿ ಮದುವೆಯನ್ನು ವಧು ಇದ್ದೆಡೆ ಮಾಡುವುದು ನಮ್ಮ ಕಡೆ ರೂಢಿ. ಆದರೆ ಶ್ರೀಕಾಂತ ಕುಟುಂಬ ದೊಡ್ಡದು, ಅಷ್ಟಲ್ಲದೇ ಎಲ್ಲರೂ ತೀರ್ಥಹಳ್ಳಿ ಆಸು ಪಾಸು ಶಿವಮೊಗ್ಗ, ಕಾರ್ಕಾಳ, ಉಡುಪಿಯಲ್ಲೆಲ್ಲ ಇರುವವರು, ಮತ್ತೊಂದು ಮುಖ್ಯ ಕಾರಣ ಶ್ರೀಕಾಂತ್ ತಂದೆ ತಾಯಿಗೆ ತುಂಬ ವಯಸ್ಸಾಗಿತ್ತು., ಅದೂ ಅಲ್ಲದೇ ಶ್ರೀಕಾಂತ ಮನೆಯಲ್ಲಿ ಕೊನೆಯವರು, ಶ್ರೀಕಾಂತ ನಂತರ ಮದುವೆಗೆ ಯಾರೂ ಇರಲಿಲ್ಲ,ಹಾಗಾಗಿ ಎಲ್ಲರಿಗೂ ಮದುವೆಯಲ್ಲಿ ಪಾಲ್ಗೊಳ್ಳುವ ಹುಮ್ಮಸ್ಸು, ಇನ್ನೂ ಒಂದು ಕಾರಣ ಬೇಸಿಗೆಯ ರಜೆ ಮಕ್ಕಳಿಗೆಲ್ಲ, ತುಂಬ ಜನ ಬಂಧುಗಳು ಒಟ್ಟಗುತ್ತಾರೆಂದು,ಹಾಗಾಗಿ ದೂರದ ಮುಂಬೈ ಪ್ರಯಾಣ ಬೇಡ ಎಂದು ಉಡುಪಿಯ ವೆಂಕಟರಮಣ ದೇವಸ್ಥಾನದಲ್ಲಿ ನಡೆಸಿಕೊಡಬೇಕೆಂದು ಅವರು ಅಭಿಪ್ರಾಯಪಟ್ಟರು. ಮಾರ್ಚ್ ನಲ್ಲಿ ಎಂಗೇಜ್ ಮೆಂಟ್ ಮೇ ನಲ್ಲಿ ಮದುವೆ. ಇನ್ನು ಬಂಗಾರ, ಸೀರೆ, ಇನ್ವಿಟೇಷನ್ ಕಾರ್ಡ್ ಇದರ ತಯಾರಿಯ ಗಡಿಬಿಡಿ. ಹಾಗೂ ಉಡುಪಿಯಲ್ಲಿ ಯಾರ ಪರಿಚವೂ ಇರಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಅಮ್ಮನ ಫ್ರೆಂಡ್, ನಾಲ್ಕನೆ ಮಹಡಿಯಲ್ಲಿರುವ, ಉಡುಪಿಯವರಾದ ಮೀನಾ ಆಂಟಿಗೆ ಪುನ: ಮುಂಬೈ ನಿಂದ ಅವರ ಊರಿಗೆ ಟ್ರಾನ್ಸ್ಫರ್ ಆಯಿತು. ಏನೂ ಚಿಂತೆ ಮಾಡ ಬೇಡಿ, ನಮ್ಮ ಮನೆ ಸಾಕಷ್ಟು ದೊಡ್ಡದಿದೆ, ಹಾಗೂ ಊರು ತುಂಬ ಪರಿಚಯದವರಿದ್ದಾರೆ ಎನ್ನುವ ಅಶ್ವಾಸನೆ ಸಿಕ್ಕಿತು. ಪಾಪ ಅವರೇ ಎಲ್ಲ ಎರೆಂಜ್ಮೆಂಟ್ ಮಾಡಿದರು. ಮದುವೆ ಯಂತೂ ಅಮ್ಮನ ಮತ್ತು ಕೆಲ ಹಿರಿಯರ ಪ್ರಕಾರ ’ಹೂ ಎತ್ತಿದಂತೆ’ ಸಲೀಸಾಗಿ ಯಾವುದೇ ಅಡೆತಡೆಗಳಿಲ್ಲದೇ ನೆರವೇರಿತು.

ಸರಿ ಈಗ ಬಕುಳಾಭಾತ್ ಕತೆಯತ್ತ ಬಂದೇ ಬಿಟ್ವಿ.

ಮದುವೆಯಾದ ಮೂರನೇ ದಿನ ತೀರ್ಥಹಳ್ಳಿಯ ಶ್ರೀ ರಾಮಮಂದಿರದಲ್ಲಿ ಸತ್ಯನಾರಾಯಣ ವ್ರತ ಇಟ್ಟುಕೊಂಡಿದ್ದರು. ಮದುವೆಗೆ ಬರಲಾಗದಿದ್ದವರಿಗೆಲ್ಲ ಹಾಗೂ ಶ್ರೀಕಾಂತ್ ನ ಹೆಂಡತಿ ಹೇಗಿದ್ದಾಳೆ ಅಂತ ನೋಡುವ ಕುತೂಹಲಿಗಳಿಗೆಲ್ಲ ಒಂದು ಔತಣ ಕೂಟ. ಅಪ್ಪ, ಅಮ್ಮ, ತಮ್ಮ, ತಂಗಿ ಎಲ್ಲ ವ್ರತ ಮುಗಿಸಿ, ಊಟ ಮಾಡಿ, ಉಡುಪಿಗೆ ಹೋಗಿ ಅಲ್ಲಿಂದ ಮುಂಬೈ ಗೆ ಹೋಗುವುದು ನಿರ್ಧರಿಸಲಾಗಿತ್ತು. so ವ್ರತ ಎಲ್ಲ ಮುಗಿದು, ಸುಮಾರೆಲ್ಲ ಅಡಿಗೆ ಮಿಕ್ಕಿತ್ತು.  ಶ್ರೀಕಾಂತ್ ಅಕ್ಕ- ಅನ್ನಕ್ಕ, ಛೆ ಮಲ್ಲಿಗೆಯಂತ ಅನ್ನ, ಸುಮ್ಮನೆ waste ಮಾಡೋದು ಬೇಡ ಅಂತ, ಅಡಿಗೆ ಭಟ್ಟರಿಗೆ ’ರಾತ್ರಿಗೆಯಾಗುವಾಷ್ಟು ಸಾರು ಮತ್ತು ಅನ್ನ ಸ್ವಲ್ಪ ಹೆಚ್ಚೆ ಮನೆಗೆ ಕಳುಹಿಸಿ ಉಳಿದ ಅಡಿಗೆ ಹೇಗೆ ಬೇಕೋ ಹಾಗೆ ವಿಲೇವಾರಿ ಮಾಡಿ ಅಂತ ಬೇರೆಯವರಿಂದ ಹೇಳಿಸಿದರು. ಮನೆಯಲ್ಲಿ ತುಂಬ ಜನ ಉಳಿದುಕೊಳ್ಳುವವರಿದ್ದರು, ಯಾಕೆಂದ್ರೆ ಹೇಗೂ ಎಲ್ಲ ಮಕ್ಕಳಿಗೂ ಬೇಸಗೆ ರಜೆ, ಮನೆ ಕೂಡ ದೊಡ್ಡದು. ಹೆಚ್ಚಿನ ಸಂಬಂಧಿಕರೆಲ್ಲ ನಮ್ಮ ಮನೆಯಲ್ಲೇ ಉಳಿದುಕೊಳ್ಳುವವರಿದ್ದರು. ರಾತ್ರಿ ಅನ್ನ ಹೆಚ್ಚೆ ಉಳಿದದ್ದು ನೋಡಿ, ನನ್ನ ಅಕ್ಕ (ಓರಗಿತ್ತಿ) ಅನ್ನಕ್ಕನಿಗೆ ಏನು ಮಾಡುವಾ? ಇಷ್ಟು ಅನ್ನ ಉಳಿದಿದೆ ಅಲ್ಲವಾ?? ಮೊದಲಾದ್ರೆ ದನಗಳಿದ್ವು ಅವುಗಳಿಗೆ ಹಾಕಬಹುದಿತ್ತು, ಈಗ ಏನು ಮಾಡುವುದು?? ಕೆಲಸದ ಗಿರಿಜಂಗೆ ಸ್ವಲ್ಪ ಕೊಡ ಬಹುದು, ಉಳಿದದ್ದು ಹೊರಗೆ ಹಾಕಲು ಮನಸ್ಸು ಬರುವುದಿಲ್ಲ . ಅದಕ್ಕೆ ಅನ್ನಕ್ಕ, ’ಏನೂ ಚಿಂತೆ ಮಾಡಬೇಡ, ನಾನು ನಾಳೆ ’ಬಕುಳಾಭಾತ್’ ಮಾಡ್ತೇನೆ. ಈಗ ಕುಕ್ಕರ್ ನಲ್ಲಿ ಸ್ವಲ್ಪ ಸ್ವಲ್ಪ ಬಿಸಿ ಮಾಡಿಡುವ. ಸಾಧಾರಣ 50 ಜನರಿದ್ದರು ಮನೆಯಲ್ಲಿ. ಬಕುಳಾಭಾತ್ ಹೆಸರು ಕೇಳಿದ್ದೆ ತಡ ಎಲ್ಲರೂ alert. ಏನದು? ಹೇಗೆ ಮಾಡುವುದು ಅಂತ. forest fire ಗಿಂತ ಬೇಗ ಈ ಸುದ್ದಿ ಹರಡಿತು. ಮಹಡಿ ಮೇಲೆ ಹರಟೆ ಹೊಡೆಯುತ್ತಿದ್ದವರು, ಕಾರ್ಡ್ಸ್ ಆಡುತ್ತಿರುವ ಗುಂಪಿನವರು,ಹೊರಗೆ ಪಡಸಾಲೆಯಲ್ಲಿ ಡಬಲ್ ಮೀನಿಂಗ್ ಜೋಕ್ ಹೇಳುವವರು,ಬೇರೆಯವರ ಪಂಚಾಯ್ತಿಕೆಯಲ್ಲಿ ಒಳಹೊಕ್ಕಿದ ಹೆಣ್ಣುಮಕ್ಕಳು, ಎಲ್ಲರದ್ದೂ ಒಂದೇ ಪ್ರಶ್ನೆ’ಏನದು ಬಕುಳಾಭಾತ್’ ಅಂತ’ ಅನ್ನಕ್ಕ ಅಂತೂ ಇಲ್ಲದ ಮೀಸೆ ತಿರುವು ಶರಲೇಖ ಹುಲಿಮೀಸೆ ಉಫ್ ಕ್ಷಮಿಸಿ sherlock holmes ಸ್ಟೈಲ್ ನಲ್ಲಿ ’ಹೆ ಹೆ ನಾಳೆಗೆ ಕಾಯ್ಕೊಂಡಿರಿ ಅಂತ’ ಅದು ಇದು ಮಾತು, ಹಾಡು ಹೇಳುವವರಿಂದ ಹಾಡು ಹೇಳಿಸಿ, ಜೋಕ್ಸ್ ಗೆಲ್ಲ ನಕ್ಕು ನಾವೆಲ್ಲ ಆ ದಿನ ಮಲಗುವಾಗ ರಾತ್ರಿ ಎರಡು ಗಂಟೆ ದಾಟಿತ್ತು. ನನಗೋ ಮೊದಲೇ ನಿದ್ದೆ ಕಡಿಮೆ. ಮತ್ತು ಮುಂಬೈನಲ್ಲಿ ರಾತ್ರಿನೂ ಸದ್ದು ಗದ್ದಲ,ರಾತ್ರಿಯಿಡಿ ಓಡಾಡುವ ವಾಹನಗಳು, ಸಮುದ್ರದ ತುಂಬ ಹತ್ತಿರದಲ್ಲಿ ನಮ್ಮ ಬಿಲ್ಡಿಂಗ್, ರಾತ್ರಿ ಅದರ ತೆರೆಗಳ ಅಬ್ಬರ, ನಮ್ಮ ಬಿಲ್ಡಿಂಗ್ ಕೆಳಗಡೆನೆ ಇದ್ದ ಬಾರ್ ನಲ್ಲಿನ ಗಲಾಟೆ, ಮತ್ತು ಮನೆಯ ಸುತ್ತ ಮುತ್ತ ಇತರ ಬಿಲ್ಡಿಂಗ್ ಹಾಗೂ street light ನಿಂದ ಯಾವತ್ತೂ ಬೆಳಕು,ರಾತ್ರಿಯಿಡಿ ಸದ್ದು. ತೀರ್ಥಹಳ್ಳಿಯಲ್ಲಿ ಅಬ್ಬ ಗೌ ಎನ್ನುವ ಕತ್ತಲೆ, ಯಾವುದೋ ಕ್ರಿಮಿ ಕೀಟಗಳ, ಇಲಿ, ಹೆಗ್ಗಣಗಳ ಕಾರುಬಾರು, ಮಾತ್ರವಲ್ಲದೇ ಮಲಗಿದ ಜನರ ತರಹಾವರಿ, ಕೆಮ್ಮು, ಗೊರಕೆಗಳ ಸದ್ದು. ರಾತ್ರಿಯಿಡಿ ಬಕುಳಾಭಾತ್ ನಿಂದ hype create ಆಗಿ, ನಿದ್ದೆಯಲ್ಲೂ ಕೆಲವರು ’ಬಕುಳಾಭಾತ್ ಬಕುಳಾಭಾತ್’ ಅಂದಿದ್ರೂ ಹೆಚ್ಚೇನಿರಲಿಲ್ಲ ಬಿಡಿ. :-)ಅಂತೂ ನಾಲ್ಕು ಗಂಟೆಗೆ ಅಕ್ಕ ಎದ್ದು ಅಡಿಗೆ ಮನೆ ಲೈಟ್ ಹಾಕಿದಾಗ ನಾನು ಬಚಾವಾಗಿ ಎದ್ದು ಅಡಿಗೆ ಕೋಣೆಗೆ ಹೋದೆ,

ಅಕ್ಕ, ’ಯಾಕೇ ಹುಡುಗಿ ಇಷ್ಟು ಬೇಗ ಎದ್ದೆ’

’ನನಗೆ ನಿದ್ದೆ ಬರಲಿಲ್ಲ ಅಕ್ಕ’

’ಒಹೋ ಶ್ರೀಕಾಂತ್ ತುಂಬ ಕಾಟ ಕೊಟ್ಟನಾ’

’ಇಲ್ಲ್ವಲ್ಲ’ (!~@#$%^&(*> = ನಾಚಿಕೆ)

ಮತ್ತೆ ಅಕ್ಕ ಬಚ್ಚಲುಮನೆಯ ಒಲೆ ಹಚ್ಚಿದರು. ಬೇಗ ಎದ್ದವರೆಲ್ಲ ಸ್ನಾನ ಮಾಡಬಹುದು ಅಂತ. ನಾನು ಅಕ್ಕನ ಹಿಂದೆ ಮುಂದೆ ತಿರುಗುವುದೇ ಆಯಿತು. ಸ್ವಲ್ಪ ದಿನಾ ಯಾವುದೇ ಮನೆಗೆಲಸ ಮಾಡಬಾರದು ನೀನು’ ಅಂತ ಕಟ್ಟಪ್ಪಣೆ ಅವರದ್ದು. ಮಾಡಲೂ ನನಗೇನೂ ತಿಳಿಯುತ್ತಿರಲಿಲ್ಲ ಬಿಡಿ. ಅಂತು ಅಕ್ಕನನ್ನು observe ಮಾಡೋದು ಬಿಟ್ಟರೆ ಬೇರೆ ಏನು ಕೆಲಸ ಇರುತ್ತಿರಲಿಲ್ಲ. ಅದೆಲ್ಲ ಇನ್ನೊಮ್ಮೆ ಹೇಳ್ತೇನೆ. :-)

ಇಲ್ಲದಿದ್ದರೆ ಬಕುಳಾಭಾತ್ ನಿಂದ track ತಪ್ಪೀತು!!

ಆ ದಿನ ಎಲ್ಲರೂ ಎಂದಿಗಿಂತ ಬೇಗನೇ ಎದ್ದವರು, ’ಬಕುಳಾ ಭಾತ್ ಬಕುಳಾ ಭಾತ್’ ವರಾತ ಶುರು ಮಾಡಿದರು. ಅನ್ನಕ್ಕ cool ಆಗಿ, ಇತರ ಹೆಂಗಸರಿಗೆ ಹೇಳಿಸಿ ಹಸಿಮೆಣಸಿನಕಾಯಿ ಕೊಯ್ಸಿದರು, ಒಗ್ಗರಣೆಗೆ ಎಲ್ಲ ಸಾಮಾನು ತಯಾರು ಮಾಡಿಕೊಂಡರು. ಘಮ ಘಮ ಪರಿಮಳ, ಸ್ವಲ್ಪ ಹೊತ್ತಿಗೆ ಎಲ್ಲರೂ ಬನ್ನಿ, ಬಾಳೆ ಎಲೆ ಎದುರಿಗೆ ಕುಳಿತುಕೊಳ್ಳಿ, ಬಿಸಿ ಬಿಸಿ ಬಕುಳಾಭಾತ್ ರೆಡಿ..ಅಂತ ಕೂಗಿದ್ದೆ ತಡ, ಎಲ್ಲರೂ ತಂಡೋಪತಂಡವಾಗಿ ಹಾಜರ್. ಎಲೆಯಲ್ಲಿ ಬಡಿಸಿದ್ದೇನೂ?? ಹಾ ಹಾ ಹಾ ನಮ್ಮ ಸೀದಾ ಸಾದ ಚಿತ್ರಾನ್ನ, ಸ್ವಲ್ಪ ಅರಿಸಿನ ಪುಡಿ ಜಾಸ್ತಿಹಾಕಿತ್ತು. ಎಲ್ಲರ ಮುಖ ನೋಡಿ ಅನ್ನಕ್ಕ ನಗಲು ಆರಂಭಿಸಿದರು. ನಿಧಾನವಾಗಿ ಮನೆಯೆಲ್ಲ ನಗೆಗಡಲಲ್ಲಿ ತೇಲಿತು. ನಾನಂತೂ ತುಂಬ enjoy ಮಾಡ್ದೆ. ನೀವು???
ಹೇ ಅಂದ ಹಾಗೆ ಮುಂದಿನ ತಿಂಗಳು ನಮ್ಮ ಮದುವೆಯಾಗಿ 25 ವರ್ಷ.ಇನ್ನೂ ಮೊನ್ನೆ ಮೊನ್ನೆ ಹಾಗೇ ನೆನಪು :-) :-) :-)

:-)