ಹಲಸಿನ ಬೀಜದ ಪಾಯಸ
ಸ್ವಲ್ಪ different ಆದ ಪಾಯಸ
ಬೇಕಾಗುವ ಸಾಮಗ್ರಿ
4 ಹಲಸಿನ ಬೀಜ
ನಾಲ್ಕು ಗೇರು ಬೀಜ
ನಾಲ್ಕು ಖರ್ಜೂರ
ಏಲಕ್ಕಿ, ತುಪ್ಪ, ಹಾಲು
ಮೊದಲಿಗೆ ತಾಜಾ ಹಲಸಿನ ಬೀಜಗಳನ್ನು ಕುಕ್ಕರ್ ನಲ್ಲಿ ಸ್ವಲ್ಪ ನೀರಿನ ಜೊತೆ ಬೇಯಿಸಿ. ತಣಿದ ಮೇಲೆ ಹೊರಗಿನ ಸಿಪ್ಪೆ, ಒಳಗಿನ ಸಿಪ್ಪೆ ತೆಗೆದು ಬಿಡಿ. ಗೇರು ಬೀಜ, ಖರ್ಜೂರ ಬಿಸಿ ನೀರಿನಲ್ಲಿ 1/2 ಗಂಟೆ ನೆನೆಸಿಡಿ. ಖರ್ಜೂರ ಮೆತ್ತಗಾದ ಮೇಲೆ, ಹ.ಬೀಜದ ಜತೆ ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ, ಪೇಸ್ಟ್ ತರ ರುಬ್ಬಿ.
ಸ್ವಲ್ಪ ತುಪ್ಪದಲ್ಲಿ ಮೇಲಿನ ಪೇಸ್ಟ್ ಹುರಿಯಿರಿ. ತಣ್ಣಗಾದ ಮೇಲೆ ಕಾಯಿಸಿ ತಣಿಸಿದ ಹಾಲು, ಏಲಕ್ಕಿ ಪುಡಿ ಬೆರೆಸಿ.
*ತುಂಬಾ ಸಿಹಿ ಬೇಕಿದ್ದಲ್ಲಿ ಒಂದೆರಡು ಖರ್ಜೂರ ಹೆಚ್ಚು ಹಾಕಿ,, ಅಥವಾ ಸಕ್ಕರೆ, ಅಥವಾ ಬೆಲ್ಲ ಬೆರೆಸಿ
*ಹಾಲಿನ ಬದಲಿಗೆ ಕಾಯಿ ಹಾಲು ಬೆರೆಸಬಹುದು *ಕೇಸರಿ ಬಳಸಬಹುದು..
* ಬಾದಾಮಿ ಬೆರೆಸಿ ಕೇಸರ್ ಬಾದಾಮಿ ಪಾಯಸ ಅಂತ ಹೆಸರಿಡಬಹುದು..
ಈ ಸಿಹಿ ಅಡುಗೆಗೆ ಪ್ರೇರಣೆ ಸ್ನೇಹಿತೆ ಉಮಾ ವಿಜಯಕುಮಾರ್. ಕೊಪ್ಪದಲ್ಲಿ ವಿಜಯ ನರ್ಸರಿ ಮತ್ತು ವಿನು ಹೋಮ್ ಸ್ಟೇ (no booze, no non veg) ಯ proprietress
*options unlimited
ಹಲಸಿನ ಬೀಜ ಬಳಸಿ ಪರಾಠಾ 👇👇
https://malathisanchiyinda.blogspot.com/2018/05/blog-post.html?m=1


2 comments:
Congratulations ;) ಬರೀತಿರಿ..
thank you Vikas. 🙏🙏
Post a Comment